Belagavi Suddi loka

Belagavi Suddi loka News and Entertainment

ಬಂದ್....... ಬಂದ್..... ಬಂದ್..... ಸಂಕೇಶ್ವರ ಬಂದ್ ದುರದುಂಡೀಶ್ವರ ತರಕಾರಿ ಮಾರುಕಟ್ಟೆಯನ್ನ ಸೀಜ್ ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ ನಾಳೆ ಮಂ...
14/10/2024

ಬಂದ್....... ಬಂದ್..... ಬಂದ್..... ಸಂಕೇಶ್ವರ ಬಂದ್

ದುರದುಂಡೀಶ್ವರ ತರಕಾರಿ ಮಾರುಕಟ್ಟೆಯನ್ನ ಸೀಜ್ ಮಾಡಿದ ಅಧಿಕಾರಿಗಳ ಕ್ರಮ ಖಂಡಿಸಿ
ನಾಳೆ ಮಂಗಳವಾರ 15 ಅಕ್ಟೋಬರ 2024 ರಂದು ಸಂಕೇಶ್ವರ ನಗರ ಸ್ವಯಂ ಪ್ರೇರಿತ ಬಂದ...

14/10/2024

ನಿನ್ನೆ ದಿನಾಂಕ 13.10.2024 ರಂದು ಮಧ್ಯರಾತ್ರಿ ಎರಡು ಬೈಕ್ ಗಳು, ಹಾಗೂ ಮನೆಯಲ್ಲಿರುವ ಚಿನ್ನಾಭರಣ ಕಳ್ಳತನವಾಗಿದೆ..
ಯಾರಿಗಾದರೂ ಬೈಕ್ ಕಂಡಲ್ಲಿ ಈ ಕೆಳಗೆ ನೀಡಿರುವ ನಂಬರಿಗೆ ಕರೆ ಮಾಡಿ👇
ಮಲ್ಲೇಶ್ ಗಣಾಚಾರಿ
ಊರು - ಅರಭಾಂವಿ
ತಾಲೂಕ - ಮೂಡಲಗಿ
Mobile no- 8151846653

14/10/2024

ಗೋಕಾಕ ಜಿಲ್ಲೆಯನ್ನಾಗಿ ಮಾಡಲು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಅಶೋಕ ಪೊಜೇರಿ ಸುದ್ದಿಗೋಷ್ಠಿ.....

06/10/2024

ಗೋಕಾಕ ಚಿಕ್ಕೊಳಿ ಸೇತುವೆ ಮೇಲೆ ರಸ್ತೆ ಅಪಘಾತ ಸಂಭವಿಸಿ ನರಳಾಡುತ್ತಿದ್ದ ವೃದ್ಧ ನನ್ನು ಗೋಕಾಕದ ಸಾಮಾಜಿಕ ಹೋರಾಟಗಾರ "*ಅಜರ ಮುಜಾವರ "* ಅವರು ಸರ್ಕಾರಿ ಆಸ್ಪತ್ರೆ ದಾಖಲಿಸಿ ಮಾನವೀಯತೆ ಮೆರೆದರು. ಅಜರ ಅವರ ಈ ಕಾರ್ಯಕ್ಕೆ ಎಲ್ಲಡೆ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ....

05/10/2024

ರಾಜ್ಯೋತ್ಸವದ ವೇಳೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ....

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಕಚೇರಿ ಉದ್ಘಾಟನೆ-------------------------------------------------ಪಂಚ ಗ್ಯ...
18/09/2024

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಕಚೇರಿ ಉದ್ಘಾಟನೆ
-------------------------------------------------
ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕು: ಎಚ್. ಎಂ ರೇವಣ್ಣ

ಬೆಳಗಾವಿ, ಸೆ.18(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ ರೇವಣ್ಣ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ (ಸೆ.18) ಜಿಲ್ಲಾ ಪಂಚಾಯತ್ ಆವರಣದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟಿಸಿ ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ದೇಶಗಳ ಕುರಿತು ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಸೌಲಭ್ಯಗಳನ್ನು ಸಾಕಷ್ಟು ಜನರು ಪಡೆದಿದ್ದಾರೆ. ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳ್ಳಬೇಕಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಸಮಿತಿಯ ಕಚೇರಿ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆಗಳು ಮುಟ್ಟಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ಇದೇ ಮಾದರಿಯಲ್ಲಿ ಕಳೆದ 20 ವರ್ಷಗಳಿಂದ ಸರ್ಕಾರ ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ವಸತಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಪಡಿತರ, ವಿದ್ಯಾರ್ಥಿ ವೇತನ, ನಿವೇಶನ, ಉಚಿತ ವಿದ್ಯುತ್ ಸೇರಿದಂತೆ ಈಗಾಗಲೇ ಸಾಕಷ್ಟು ಜನಪರ ಯೋಜನೆಗಳನ್ನು ರಾಜ್ಯದ ಜನತೆಗೆ ಸರ್ಕಾರ ಮೊದಲಿನಿಂದಲೂ ಕೊಡುಗೆಯಾಗಿ ನೀಡಿದೆ ಎಂದರು.

ಇದರ ಮುಂದಿನ ಆಯಾಮವಾಗಿ ರಾಜ್ಯದ ಎಲ್ಲ ಜನರಿಗೆ ಹೆಚ್ಚಿನ ಯೋಜನೆಗಳನ್ನು ತಲುಪಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು, ಸಮಿತಿ ಸದಸ್ಯರು ಶ್ರಮಿಸಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ ರೇವಣ್ಣ ತಿಳಿಸಿದರು.

ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕೈ ಜೋಡಿಸಿ:

ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನವರ ಸರಕಾರದಿಂದ ಪಂಚ ಗ್ಯಾರಂಟಿ ಗಳನ್ನು ಯೋಜನೆಗಳನ್ನು ನೀಡಲಾಗಿದ್ದು, ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕಿತ್ತೂರು ಕರ್ನಾಟಕ ಉಸ್ತುವಾರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್ ಪಾಟೀಲ ಅವರು ಹೇಳಿದರು.

ಇದಕ್ಕೂ ಮುಂಚೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ , ಈಗಾಗಲೇ ಯೋಜನೆಗಳನ್ನು ಜಾರಿಗೊಳಿಸಿ ಒಂದು ವರ್ಷಕ್ಕೂ ಅಧಿಕ ಅವಧಿ ಕಳೆದಿದೆ. ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ದೂರು, ಸಮಸ್ಯೆಗಳಿಗೆ ತಕ್ಷಣವೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಸ್ಪಂದಿಸಬೇಕು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ತಾಲ್ಲೂಕು ಮಟ್ಟದಲ್ಲಿ ಜನರೊಂದಿಗೆ ಸಂವಾದ ನಡೆಸಿ, ಯೋಜನೆಗಳ ಲಾಭ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು' ಎಂದು ಹೇಳಿದರು.

ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಲಿ:

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಜನಪರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

ಚುನಾವಣೆ ಪೂರ್ವದ ಘೋಷಣೆಯಂತೆ ಸರ್ಕಾರ ರಚನೆಯ ಬಳಿಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಐದು ಗ್ಯಾರಂಟಿಗಳನ್ನ ಅತ್ಯಂತ ಸಂಪೂರ್ಣವಾಗಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಯೋಜನಗಳನ್ನು ತಲುಪಿಸಲು ರಾಜ್ಯಮಟ್ಟದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರತಿ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ನಿರಂತರ ಶ್ರಮಿಸಲಾಗುವುದು ಎಂದು ವಿನಯ ನಾವಲಗಟ್ಟಿ ತಿಳಿಸಿದರು .

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಸಭೆ ನಿರ್ವಹಿಸಿದರು.

ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ಯಾರಂಟಿ ಸಮಿತಿ ಸದಸ್ಯ ತಾಲೂಕಾ ಮಟ್ಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
***

ಈದ್ ಮಿಲಾದುನ್ನಬಿ ಪ್ರಯುಕ್ತ ಹಮ್ಮಿಕೊಂಡ ಜೂಲುಸ್ (ಮೆರವಣಿಗೆ )ಯಲ್ಲಿ ಸಂವಿಧಾನ ಶಿಲ್ಪಿ ಡಾ //ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ನಮನ ...
18/09/2024

ಈದ್ ಮಿಲಾದುನ್ನಬಿ ಪ್ರಯುಕ್ತ ಹಮ್ಮಿಕೊಂಡ ಜೂಲುಸ್ (ಮೆರವಣಿಗೆ )ಯಲ್ಲಿ ಸಂವಿಧಾನ ಶಿಲ್ಪಿ ಡಾ //ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸುತ್ತಿರುವ ಶಿಂದಿಕುರಬೇಟ ಮುಸ್ಲಿಂ ಸಮಾಜದ ಮುಖಂಡರು.

*ಬೈಕ್ ಸ್ಕಿಡ್ ಆಗಿ ಅಪಘಾತ 108 ಆಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಾನ್ವಿಯತೆ ಮೆರೆದ ಇ ಎಂ ಟಿ ಕೌಸರಬಾನು ಅತ್ತಾರ.*ಘಟಪ್ರಭಾ : ಸಮೀಪದ...
13/09/2024

*ಬೈಕ್ ಸ್ಕಿಡ್ ಆಗಿ ಅಪಘಾತ 108 ಆಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಾನ್ವಿಯತೆ ಮೆರೆದ ಇ ಎಂ ಟಿ ಕೌಸರಬಾನು ಅತ್ತಾರ.*

ಘಟಪ್ರಭಾ : ಸಮೀಪದ ಸಂಗನಕೇರಿ -ಹುಣಶ್ಯಾಳ ಮಾರ್ಗದ ಮಧ್ಯ ನಾಯಿ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಾಯಿಸಿದ ಘಟಪ್ರಭಾ 108 ಆಂಬುಲೆನ್ಸ್ ಚಾಲಕ ವಿಠ್ಠಲ ಹಾಗೂ ಇ ಎಂ ಟಿ ಕೌಸರಬಾನು ಇವರುಗಳು ಅಪಘಾತ ವಾದ ಚಾಲಕನಿಗೆ ಪ್ರಥಮ ಚಿಕೆತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೇಸರಗೊಪ್ಪ ದಿಂದ ಘಟಪ್ರಭಾ ಕ್ಕೆ ಬರುತ್ತಿದ್ದ ಬೈಕ್ ಚಾಲಕನು ಮಾರ್ಗ ಮಧ್ಯ ನಾಯಿ ಅಡ್ಡ ಬಂದಿದ್ದು, ಬೈಕ್ ಸ್ಕಿಡ್ ಆಗಿ ಬಿದ್ದಿದ್ದು, ತಲೆಗೆ, ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಚಾಲಕನು ಮುಧೋಳ ತಾಲ್ಲೂಕಿನ ಕೇಸರಗೊಪ್ಪ ಗ್ರಾಮದ ರಾಮಪ್ಪ (45)ಎಂದು ತಿಳಿದು ಬಂದಿದ್ದು, ಗೋಕಾಕ ತಾಲೂಕಾ ಆಸ್ಪತ್ರೆ ಗೆ ದಾಖಲಿಸಲಾಗಿದೆ.

06/08/2024

ನಾವಗೆ ಗ್ರಾಮದ ಕಾರ್ಖಾನೆಯಲ್ಲಿ ಅಗ್ನಿ ಅವಘಡ (ಜಾಂಬೋಟಿ ರೋಡ್ ಬೆಳಗಾವಿ )

*ಅಂಕಲಗಿ:ಆಂಬುಲೆನ್ಸನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!!*ಬೆಳಗಾವಿ: 108 ಆಂಬುಲೆನ್ಸ ನಲ್ಲಿಯೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ...
04/08/2024

*ಅಂಕಲಗಿ:ಆಂಬುಲೆನ್ಸನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!!*

ಬೆಳಗಾವಿ: 108 ಆಂಬುಲೆನ್ಸ ನಲ್ಲಿಯೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಗೋಕಾಕ ತಾಲ್ಲೂಕಿನ ಅಂಕಲಗಿ ಯಲ್ಲಿ ನಡೆದಿದೆ.

ನೆಲಗಂಟಿ ಗ್ರಾಮದ ಲಕ್ಷ್ಮಿ ತಳವಾರ ಎಂಬ ಮಹಿಳೆ ಗೆ ಹೇರಿಗೆ ನೋವು ಹೆಚ್ಚಾಗಿದ್ದರಿಂದ ಸ್ಥಳೀಯ ಅಂಕಲಗಿ ಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯ ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದಾಳೆ.

ಸಾಮಾನ್ಯ ಹೇರಿಗೆ ಮಾಡಿಸಿದ ಅಂಕಲಗಿ 108 ಆಂಬುಲೆನ್ಸ ಇ ಎಂ ಟಿ ಮಲ್ಲಿಕಾರ್ಜುನ ಹಾಗೂ ಪೈಲೇಟ್ ಬಾಳೇಶ ಅವರಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.

28/07/2024

ನದಿ ಹೊರಹರಿವು ಕಡಿಮೆಯಾಗುವ ನಿರೀಕ್ಷೆ: ಗೋಕಾಕ ನಗರ ಸಭೆಯ ಆಯುಕ್ತ ರಮೇಶ್ ಜಾಧವ್

ಗೋಕಾಕ: ಗೋಕಾಕ ನಗರ ಸಭೆಯ ಆಯುಕ್ತ ರಮೇಶ್ ಜಾಧವ್ ಅವರು ನದಿ ಹೊರಹರಿವು ಕುರಿತಂತೆ ಮಾಹಿತಿ ನೀಡಿದ್ದಾರೆ. ಸಧ್ಯ, ಘಟಪ್ರಭಾ ನದಿಗೆ 80 ಸಾವಿರ ಕ್ಯುಸೆಕ್ಸ್ ನೀರು ಹರಿಯುತ್ತಿದೆ. ಇಂದು ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ, ನದಿಯ ನೀರಿನ ಪ್ರಮಾಣ ಕಡಿಮೆ ಆಗುವ ನಿರೀಕ್ಷೆಯಿದೆ. "ನಾಳೆಯೂ ಮಳೆಯಾಗದಿದ್ದರೆ, ನದಿಯ ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ," ಎಂದು ಅವರು ತಿಳಿಸಿದ್ದಾರೆ. ಜನರು ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡು ಸುರಕ್ಷಿತವಾಗಿರಬೇಕು. ನದಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ ನಂತರವೇ ಮನೆಗೆ ತೆರಳುವಂತೆ ಆಯುಕ್ತರು ಸೂಚಿಸಿದ್ದಾರೆ.

28/07/2024

ಗೋಕಾಕ ತಮ್ಮ ಗೃಹ ಕಚೇರಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಸುದ್ದಿಗೋಷ್ಠಿ

28/07/2024

ಗೋಕಾಕನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹೇಳಿದೆನು?

ಗೋಕಾಕ: ಗೋಕಾಕನ ಎಂ ಹೆಚ್ ಎಸ್ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಸಂತ್ರಸ್ಥರನ್ನುದ್ದೇಶಿಸಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಮಾತನಾಡಿದರು.

"ಕೊಲ್ಹಾಪುರ ಮತ್ತು ಸತಾರಾ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ನದಿಗೆ ನೀರು ಹೆಚ್ಚಾಗುತ್ತಿದೆ. ಅಲ್ಲಿನ ಅಧಿಕಾರಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ನೀರು ಕಡಿಮೆಯಾಗುವವರೆಗೆ ನೀವು ಕಾಳಜಿ ಕೇಂದ್ರದಲ್ಲಿಯೇ ಇರಬೇಕು," ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

"ಚೂರು ನೀರು ಕಡಿಮೆಯಾದರೂ ಕೂಡ ನೀವು ಮನೆಗೆ ಹೋಗಬೇಡಿ. ನೀರು ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಮಾತ್ರ ಮನೆಗೆ ತೆರಳಬೇಕು," ಎಂದು ಅವರು ಸೂಚಿಸಿದರು.

ಕಾಳಜಿ ಕೇಂದ್ರದಲ್ಲಿ ಇರುವವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. "ನಿಮ್ಮ ಸಂಬಂಧಿಕರಿಗೂ ಸಮೀಪದಲ್ಲಿರುವ ಕಾಳಜಿ ಕೇಂದ್ರಕ್ಕೆ ಹೋಗಲು ತಿಳಿಸಿ ಮತ್ತು ಸುರಕ್ಷಿತವಾಗಿರಿ," ಎಂದು ಮನವಿ ಮಾಡಿದರು.

27/07/2024

ಲೋಳಸೂರು ಸೇತುವೆಯ ಇವತ್ತಿನ ದೃಶ್ಯ

26/07/2024

ನಯಾಗರ್ ಫಾಲ್ಸ್ ಎಂದೆ ಖ್ಯಾತಿಪಡೆದ ಗೋಕಾಕ ಫಾಲ್ಸ್ ಜಲಪಾತ

24/07/2024

ಬೆಳಗಾವಿ: ಸ್ಟೇರಿಂಗ್ ಲಾಕ್ ಆಗಿ ಪಲ್ಟಿಯಾದ ಖಾಸಗಿ ಶಾಲಾ ಬಸ್ ವಿದ್ಯಾರ್ಥಿ ಗಳಿಗೆ ಗಾಯ

ಸ್ಟೇರಿಂಗ್ ಲಾಕ್ ಆಗಿ ಖಾಸಗಿ ಶಾಲೆ ಬಸ್ ಪಲ್ಟಿಯಾದ ಪರಿಣಾಮ ಐವರು ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 3೦ಕ್ಕೂ‌ಹೆಚ್ಚು ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮಟ್ಟಿ ಬಳಿ ಘಟನೆ ನಡೆದಿದೆ. ವಾಹನ ಮರಡಿಮಠದ ಜೈ ಹನುಮಾನ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದೆ.ಗಾಯಗೊಂಡ ವಿದ್ಯಾರ್ಥಿಗಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೋಕಾಕ‌ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

*ವರುಣಾರ್ಭಟಕ್ಕೆ ಬೆಳಗಾವಿಯಲ್ಲಿ ಮೊದಲ ಬಲಿ*ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮದ  ತಿರುಪತಿ ವಾಟಕರ ಸಾವು. ಮನೆಯ ಗೋಡೆ ಕುಸಿದ...
21/07/2024

*ವರುಣಾರ್ಭಟಕ್ಕೆ ಬೆಳಗಾವಿಯಲ್ಲಿ ಮೊದಲ ಬಲಿ*

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮದ ತಿರುಪತಿ ವಾಟಕರ ಸಾವು. ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಸಾವು.

21/07/2024
20/07/2024

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಮನೆಯೊಂದರಲ್ಲಿ ಆಕಸ್ಮಿಕ ಮದ್ದೂಸ್ಪೋಟ್ ಗೊಂಡು ಒಬ್ಬ ವ್ಯಕ್ತಿ ಸಜೀವ ದಹನ!!!

*ಘಟಪ್ರಭಾ:ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ*  ಘಟಪ್ರಭಾ: 108 ಅರೋಗ್ಯ ಕವಚದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸಮೀಪ...
05/04/2024

*ಘಟಪ್ರಭಾ:ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ*

ಘಟಪ್ರಭಾ: 108 ಅರೋಗ್ಯ ಕವಚದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸಮೀಪದ ದುರದುಂಡಿ ಗ್ರಾಮದಲ್ಲಿ ನಡೆದಿದೆ.

ಹೆರಿಗೆ ನೂವು ಹೆಚ್ಚಾಗಿದ್ದರಿಂದ ಕುಟುಂಬಸ್ಥರು 108 ಗೆ ಕರೆ ಮಾಡಿ ಆಂಬುಲೆನ್ಸ್ ನ್ನು ಕರೆಯಿಸಿಕೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲೇ ಪ್ರಿಯಾಂಕಾ ಬಂದ್ರೊಳ್ಳಿ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸುರಕ್ಷಿತ ಹೆರಿಗೆ ಮಾಡಿಸಿದ ಘಟಪ್ರಭಾ ಲೊಕೇಶನ 108 ಆಂಬುಲೆನ್ಸ್ ನ ಸಿಬ್ಬಂದಿ ಗಳಾದ ಇ ಎಂ ಟಿ ಕೌಸರ ಅತ್ತಾರ ಹಾಗೂ ಚಾಲಕ ವಿಠ್ಠಲ ಸಿಂಗಾರಿ ಅವರ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

24/09/2023

ಘಟಪ್ರಭಾ ಪಟ್ಟಣಕ್ಕೆ ಎಸ್ಪಿ ಭೀಮಾಶಂಕರ ಗುಳೇದ ಭೇಟಿ...

https://www.belagavisuddiloka.com/2022/12/blog-post_39.html
26/12/2022

https://www.belagavisuddiloka.com/2022/12/blog-post_39.html

Homeಕೊಲೆ ಬೆಳಗಾವಿ:ಕ್ಷುಲ್ಲಕ ಕಾರಣಕ್ಕೆ ಇಬ್ಬರ ಯುವಕರ ಮರ್ಡರ್!! byBelagavi suddi loka -December 25, 2022 0 Comments  ಬೆಳಗಾವಿ: ತಾಲ್ಲೂಕಿನ ಶಿಂಧೋಳಿ ಗ್ರಾಮದಲ್ಲಿ ...

https://www.belagavisuddiloka.com/2022/12/blog-post_68.html
25/12/2022

https://www.belagavisuddiloka.com/2022/12/blog-post_68.html

Homeಬೀದಿ ನಾಯಿಗಳ ಹಾವಳಿ ಹುಕ್ಕೇರಿ:ಪುರಸಭೆ ಸದಸ್ಯರ ಮೇಲೆಯೇ ದಾಳಿ ಮಾಡಿದ ಬಿದಿ ನಾಯಿಗಳು!! byBelagavi suddi loka -December 25, 2022 0 Comments  ಬೆಳಗಾವಿ: ಜಿಲ್ಲೆಯ ....

24/12/2022

ಬೆಳಗಾವಿಯ old pb ರಸ್ತೆಯ ಹತ್ತಿರ ಬೆಂಕಿ ಅವಘಡ

24/12/2022

ಹಿಂಡಲಗಾದಲ್ಲಿ ರಮೇಶ ಜಾರಕಿಹೊಳಿ

Address

Belgaum
590016

Alerts

Be the first to know and let us send you an email when Belagavi Suddi loka posts news and promotions. Your email address will not be used for any other purpose, and you can unsubscribe at any time.

Videos

Share

Nearby media companies


Other Media/News Companies in Belgaum

Show All