UDUPI Global News

UDUPI Global News UDUPI GLOBAL NEWS is build in 2016 may . We brings to you the latest news headlines, breaking news, top stories from India and around the world.

23/04/2024

*🔥ಉಚ್ಛಾಟನೆಗೆ ಹೆದರಲ್ಲ, ಗೆದ್ದು ಮರಳಿ ಬಿಜೆಪಿಗೆ ಹೋಗುವೆ: ಕೆ.ಎಸ್. ಈಶ್ವರಪ್ಪ* ‌ https://udupitimes.com/udupi-times-17334/

23/04/2024

*💥ಬ್ರಹ್ಮಾವರ ಹೆಸರನ್ನು ರಾಜ್ಯದಲ್ಲಿ ಅಚ್ಚಳಿಯದೆಯಾಗಿ ಉಳಿಸಿದ ಕೀರ್ತಿ ಜಯಪ್ರಕಾಶ್ ಹೆಗ್ಡೆಯವರದ್ದು*

*💥ಮೀನುಗಾರ ಸಮಾಜಕ್ಕೆ ರಕ್ಷಣಾ ಕವಚವಾಗಿ ಸರಕಾರದ ಜೊತೆ ಕೆಲಸ ಮಾಡಿದ್ದು ಜಯಪ್ರಕಾಶ್ ಹೆಗ್ಡೆ*

*▶️ಬ್ರಹ್ಮಾವರದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅಬ್ಬರಿಸಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ*
https://youtu.be/3AYgLT-ag5w?si=U-OLHKQU3MjMmq7O

22/04/2024
*ಬಹ್ರೇನ್: ವಿಸಿಟ್ ವೀಸಾಗಳನ್ನು ವರ್ಕಿಂಗ್ ವೀಸಾ ಆಗಿ ಪರಿವರ್ತಿಸಲು 250 ದೀನಾ‌ರ್*_▪️ಪ್ರಾಯೋಜಕರಿಲ್ಲದೆ ಭೇಟಿ ವೀಸಾಗಳನ್ನು ಕೆಲಸದ ವೀಸಾಗಳಿಗೆ...
13/02/2024

*ಬಹ್ರೇನ್: ವಿಸಿಟ್ ವೀಸಾಗಳನ್ನು ವರ್ಕಿಂಗ್ ವೀಸಾ ಆಗಿ ಪರಿವರ್ತಿಸಲು 250 ದೀನಾ‌ರ್*

_▪️ಪ್ರಾಯೋಜಕರಿಲ್ಲದೆ ಭೇಟಿ ವೀಸಾಗಳನ್ನು ಕೆಲಸದ ವೀಸಾಗಳಿಗೆ ಪರಿವರ್ತಿಸಲಾಗುವುದಿಲ್ಲ_

ಪ್ರಾಯೋಜಕರಿಲ್ಲದ ಭೇಟಿ ವೀಸಾಗಳನ್ನು ಸಹ ಕೆಲಸದ ವೀಸಾ ಅಥವಾ ಅವಲಂಬಿತ ವೀಸಾಗಳಾಗಿ ಪರಿವರ್ತಿಸುವುದನ್ನು ನಿಲ್ಲಿಸಲಾಗಿದೆ ಎಂದು NPRA ಘ....

*►  ರೈತರ ಮೇಲಿನ ದಾಳಿ ಮೋದಿ ಸರ್ಕಾರಕ್ಕೆ ನಾಚಿಕೆಗೇಡು: ರೈತ ಸಂಘಟನೆಗಳ ಆಕ್ರೋಶ*https://www.mahanayaka.in/attack-on-farmers-is-a-sha...
13/02/2024

*► ರೈತರ ಮೇಲಿನ ದಾಳಿ ಮೋದಿ ಸರ್ಕಾರಕ್ಕೆ ನಾಚಿಕೆಗೇಡು: ರೈತ ಸಂಘಟನೆಗಳ ಆಕ್ರೋಶ*
https://www.mahanayaka.in/attack-on-farmers-is-a-shame-for-modi-govt-farmers-organizations-are-outraged/

*ಎಲ್ಲ ಸುದ್ದಿ ಓದಿ: www.mahanayaka.in*
------------------------------------
*ವಾಟ್ಸಾಪ್ ಗ್ರೂಪ್ ಗೆ ಸೇರಿ:* https://chat.whatsapp.com/JuQTBF5KG6PG6v5YZnySxb
------------------------------------

ನವದೆಹಲಿ: ಈ ಹಿಂದೆ ಸರ್ಕಾರ ಈಡೇರಿಸುವ ಭರವಸೆ ನೀಡಿ ಅದನ್ನು ಮಾಡಿಲ್ಲದಿರುವುದರಿಂದಲೇ ರೈತರ ಮತ್ತೆ ಬೀದಿಗಿಳಿದಿದ್ದು. ರೈತರ ಮೇಲಿನ .....

*🟥 ಎಲ್ಲಿದೆ ಮಹಿಳಾ ಆಯೋಗ? ಎಲ್ಲಿದೆ ಮಕ್ಕಳ ಆಯೋಗ? : ಸರಕಾರ ಏನ್ಮಾಡ್ತಿದೆ?*_♦️ಜೆರೋಸಾ ಶಾಲೆಯ ಶಿಕ್ಷಕಿ ತಪ್ಪು ಮಾಡಿಲ್ಲ ಅಂತಿದೆ ಪ್ರಾಥಮಿಕ ಹಂ...
13/02/2024

*🟥 ಎಲ್ಲಿದೆ ಮಹಿಳಾ ಆಯೋಗ? ಎಲ್ಲಿದೆ ಮಕ್ಕಳ ಆಯೋಗ? : ಸರಕಾರ ಏನ್ಮಾಡ್ತಿದೆ?*

_♦️ಜೆರೋಸಾ ಶಾಲೆಯ ಶಿಕ್ಷಕಿ ತಪ್ಪು ಮಾಡಿಲ್ಲ ಅಂತಿದೆ ಪ್ರಾಥಮಿಕ ಹಂತದ ತನಿಖೆ_

_♦️ತಪ್ಪು ಮಾಡದ ಶಿಕ್ಷಕಿಗೆ ಶಿಕ್ಷೆ ನೀಡಿದ್ಯಾಕೆ? ಈ ಮಹಾ ದ್ರೋಹಕ್ಕೆ ಹೊಣೆ ಯಾರು?_

*Click👉* https://youtu.be/plm9tUaESMc

*To Subscribe Prasthutha👉 http://youtube.com/prasthuthanewschannel*

_♦️ಜೆರೋಸಾ ಶಾಲೆಯ ಶಿಕ್ಷಕಿ ತಪ್ಪು ಮಾಡಿಲ್ಲ ಅಂತಿದೆ ಪ್ರಾಥಮಿಕ ಹಂತದ ತನಿಖೆ_ _♦️ತಪ್ಪು ಮಾಡದ ಶಿಕ್ಷಕಿಗೆ ಶಿಕ್ಷೆ ನೀಡಿದ್ಯಾಕೆ? ಈ ಮ.....

18/11/2023

*🚨ನೇಜಾರು ತಾಯಿ, ಮಕ್ಕಳ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಮನೆಯಿಂದ ಕೃತ್ಯಕ್ಕೆ ಬಳಸಿದ ಚೂರಿ ವಶ* ‌ https://udupitimes.com/udupi-times-15344/

17/11/2023

*ನನ್ನ ಕುಟುಂಬವನ್ನು ಸರ್ವನಾಶ ಮಾಡಿದ ಕ್ರೂರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು: ನೂರ್ ಮುಹಮ್ಮದ್ ಒತ್ತಾಯ*

ವಾರ್ತಾಭಾರತಿ

ನೂರ್ ಮುಹಮ್ಮದ್

*ಉಡುಪಿ:* ‘‘ನನ್ನ ಕುಟುಂಬವನ್ನು ಸರ್ವನಾಶ ಮಾಡಿದ ಕ್ರೂರಿಗೆ ಈ ಭೂಮಿ ಮೇಲೆ ಬದುಕುವ ಯಾವುದೇ ಅರ್ಹತೆ ಇಲ್ಲ. ಆತ ಮನುಷ್ಯನೇ ಅಲ್ಲ, ಮೃಗ. ನನ್ನ ಮಗಳಿಗೆ ಮಾಡಿದ ರೀತಿ ಮುಂದೆ ಆತ ಬೇರೆ ಯಾವ ಹೆಣ್ಣು ಮಕ್ಕಳಿಗೂ ಮಾಡಬಾರದು. ಆದುದರಿಂದ ತ್ವರಿತ ನ್ಯಾಯಾಲಯ ಸ್ಥಾಪಿಸಿ ಕೂಡಲೇ ಆತನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು’’ ಎಂದು ನೂರ್ ಮುಹಮ್ಮದ್ ಒತ್ತಾಯಿಸಿದ್ದಾರೆ.

ಪತ್ನಿ, ಮೂವರು ಮಕ್ಕಳನ್ನು ಕಳೆದುಕೊಂಡಿರುವ ಅವರು ನೇಜಾರಿನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ‘ವಾರ್ತಾಭಾರತಿ’ ಜೊತೆ ಮಾತನಾಡಿದರು.

ಕೊಲೆ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸರು ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅವರ ಕಾರ್ಯದಲ್ಲಿ ನನಗೆ ತುಂಬಾ ತೃಪ್ತಿ ಇದೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

*ಸಹಪಾಠಿ ನೆಲೆಯಲ್ಲಿ ಪರಿಚಯ*

‘ನನ್ನ ಮಗಳು ಐನಾಝ್ ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಹಲವು ಬಾರಿ ಹೊರ ದೇಶಕ್ಕೆ ಹೋಗಿ ಬಂದಿದ್ದಾಳೆ. ಅವಳ ಜೊತೆ ಹಿರಿಯ ಸಿಬ್ಬಂದಿ ಕೂಡ ಇರುತ್ತಾರೆ. ಹಾಗೆ ಆಕೆ ಸೀನಿಯರ್ ಕ್ರ್ಯೂ ಆಗಿದ್ದ ಪ್ರವೀಣ್ ಜೊತೆ ಎರಡು ಮೂರು ಬಾರಿ ಪ್ರಯಾಣ ಮಾಡಿದ್ದಾಳೆ. ಅದು ಬಿಟ್ಟು ಅವರಿಗೆ ಬೇರೆ ಯಾವುದೇ ಸಂಪರ್ಕ ಇರಲಿಲ್ಲ’ ಎಂದು ಅವರು ತಿಳಿಸಿದರು.

‘ನನ್ನ ಮಗಳು ಕೆಲಸ ಮಾಡುವ ಏರ್ ಇಂಡಿಯಾ ಏಕ್ಸ್‌ಪ್ರೆಸ್ ಸಂಸ್ಥೆಯು ಈ ದುರಂತ ಸಂಭವಿಸಿದರೂ ಅವರ ಸಿಬ್ಬಂದಿಯ ತಂದೆ ನೆಲೆಯಲ್ಲಿ ಕರೆ ಮಾಡಿಲ್ಲ. ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

*ಕ್ರಿಮಿನಲ್ ಮನಸ್ಥಿತಿಯವನು*

‘ಈ ರೀತಿಯ ಮೃಗೀಯ ಮನಸ್ಥಿತಿಯವರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನವರು ಹೇಗೆ ಕೆಲಸ ಕೊಡುತ್ತಾರೆ. ಇವ ಪಕ್ಕ ಕ್ರಿಮಿನಲ್ ಮನಸ್ಥಿತಿಯವನು. ಆತನ ಯಾವುದೇ ಪೂರ್ವಪರ ವಿಚಾರಿಸದೆ ಅವನಿಗೆ ಹೇಗೆ ಕೆಲಸ ಕೊಟ್ಟಿದ್ದಾರೆ ಎಂದು ನೂರ್ ಮುಹಮ್ಮದ್ ಪ್ರಶ್ನಿಸಿದರು.

*MANGALORE🌍XPRESS*

ನಮ್ಮ ಸಮುದಾಯದಲ್ಲಿ ಗಗನಸಖಿಯಾಗಿ ಕೆಲಸ ಮಾಡುವುದು ಕಡಿಮೆ. ಆದರೆ ನಾನು ಮನೆಯಲ್ಲಿ ವಿರೋಧ ಇದ್ದರೂ ಧೈರ್ಯ ತೆಗೆದುಕೊಂಡು ನನ್ನ ಮಗಳ ಆಸೆಗಾಗಿ ಗಗನಸಖಿ ಕೆಲಸಕ್ಕೆ ಸೇರುವಂತೆ ಪ್ರೋತ್ಸಾಹ ನೀಡಿದೆ ಎಂದು ನೂರ್ ಮುಹಮ್ಮದ್ ತಿಳಿಸಿದರು.

ಸೌದಿಯಲ್ಲಿ ನನ್ನ ಜೊತೆ ಇರುವಾಗ ವಿಮಾನದಲ್ಲಿ ಊರಿಗೆ ಬಂದು ಹೋಗುತ್ತಿದ್ದಾಗ ಐನಾಝ್, ನಾನು ಕೂಡ ಇದೇ ಕೆಲಸ ಮಾಡುತ್ತೇನೆ, ನನಗೆ ನೀವು ಅವಕಾಶ ನೀಡಬೇಕು ಎಂದು ಹೇಳಿದ್ದಳು. ಅದನ್ನು ಸವಾಲು ಆಗಿ ತೆಗೆದುಕೊಂಡು ಉಡುಪಿ ಎಂಜಿಎಂನಲ್ಲಿ ದ್ವಿತೀಯ ಬಿಕಾಂ ಕಲಿಯುತ್ತಿದ್ದಾಗ ಆ ಕೆಲಸ ಗಿಟ್ಟಿಸಿಕೊಂಡಿದ್ದಳು. ವಿದ್ಯಾಭ್ಯಾಸ ಅರ್ಧಕ್ಕೆ ಮುಗಿಸಿ ಕೆಲಸಕ್ಕೆ ಸೇರಿದಳು. ಕಳೆದ ಒಂದು ವರ್ಷದಿಂದ ಅವಳು ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಳು ಎಂದು ಅವರು ಹೇಳಿದರು.

2024ರ ಫ್ರೆಬವರಿಯಲ್ಲಿ ನನ್ನ ದೊಡ್ಡ ಮಗ ಅಸಾದ್ ಮತ್ತು ದೊಡ್ಡ ಮಗಳು ಅಫ್ನಾನ್‌ಗೆ ಮದುವೆ ಮಾಡುವ ಬಗ್ಗೆ ಪತ್ನಿ ಜೊತೆ ಮಾತುಕತೆ ಮಾಡಿದ್ದೆ. ಆ ಬಗ್ಗೆ ಇವರಿಗೆ ನೀನೆ ಹುಡುಗ ಮತ್ತು ಹುಡುಗಿಯನ್ನು ನೋಡಬೇಕು ಎಂದು ಹೇಳಿದ್ದೆ. ಹಾಗೆ ನನ್ನ ಪತ್ನಿ ನೋಡಿ ಇಟ್ಟಿದ್ದಳು. ಅದನ್ನು ನಮ್ಮ ಸಂಬಂಧಿಕರ ಬಳಿ ಕೇಳಿ ಅಂತಿಮ ಮಾಡಬೇಕು ಎಂದು ನಾವು ಇದ್ದೆವು ಎಂದು ಅವರು ಹೇಳಿದರು.

ಮದುವೆ ಹಿನ್ನೆಲೆಯಲ್ಲಿ ಮನೆಗೆ ಪೈಂಟ್ ಮಾಡಲು ನಾನು 50 ಸಾವಿರ ರೂ. ಕೂಡ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಈ ಎಲ್ಲ ವಿಚಾರವನ್ನು ಶನಿವಾರ ರಾತ್ರಿ ಪತ್ನಿ ಜೊತೆ ಮಾತನಾಡಿದ್ದೆ. ಬೆಳಗ್ಗೆ ಈ ದುರ್ಘಟನೆ ನಡೆದು ಹೋಗಿದೆ ಎಂದು ನೋವಿನಿಂದ ಹೇಳಿದರು.

ರವಿವಾರ ಬೆಳಗ್ಗೆ ನಾನು ಮನೆಗೆ ಕರೆ ಮಾಡಿದ್ದೆ. ಆದರೆ ಅವರು ಯಾರು ಕೂಡ ಕರೆ ಸ್ವೀಕರಿಸಲಿಲ್ಲ. ಯಾಕೆಂದರೆ ಇಲ್ಲಿ ಆಗ ಅವರೆಲ್ಲ ಕೊಲೆಯಾಗಿದ್ದಿರ ಬೇಕು. ಮತ್ತೆ ನಾನು ಕೆಲಸ ಮುಗಿಸಿ ಬಂದು ನೋಡಿದಾಗ ನನ್ನ ಮೊಬೈಲ್‌ನಲ್ಲಿ ಊರಿನಿಂದ 28 ಮಿಸ್‌ಕಾಲ್ ಇತ್ತು. ಕರೆ ಮಾಡಿ ಕೇಳಿದಾಗ ಈ ಶಾಕಿಂಗ್ ಸುದ್ದಿ ಕಿವಿಗೆ ಬಿತ್ತು. ಮೊದಲು ನಾನು ನಂಬಿಲ್ಲ. ಇದನ್ನು ಕನಸಲ್ಲೂ ಎನಿಸಲು ಸಾಧ್ಯವಿಲ್ಲ. ನಾನು ಅಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದೆ ಎಂದು ಅವರು ತಿಳಿಸಿದರು.

*ಆರೋಪಿ ಹಿನ್ನೆಲೆ ಬಗ್ಗೆ ತನಿಖೆಯಾಗಲಿ*

ಆರೋಪಿ ಪ್ರವೀಣ್ ಹಿನ್ನೆಲೆ ಬಗ್ಗೆ ಪೊಲೀಸರು ಸರಿಯಾಗಿ ಸಮಗ್ರವಾಗಿ ತನಿಖೆ ನಡೆಸಬೇಕು. ಬೇರೆ ಹೆಣ್ಣು ಮಕ್ಕಳಿಗೆ ಏನೆಲ್ಲ ಮಾಡಿದ್ದಾನೆ ಎಂಬುದನ್ನು ವಿಚಾರಣೆ ಮಾಡಬೇಕು. ಅವನು ಮನುಷನಲ್ಲ ಕ್ರೂರಿ. ಈ ಹಿಂದೆ ಕೂಡ ಕೊಲೆ ಮಾಡಿರಬಹುದು. ಇಂತವರಿಗೆ ಕೆಲಸ ಕೊಟ್ಟ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಇದು ದೊಡ್ಡ ಶೇಮ್ ಎಂದು ನೂರ್ ಮುಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.

*ತಮ್ಮನಿಗೆ ಶೂ ತಂದಿದ್ದಳು*

ಕೊನೆಯಾಗುವ ಮುನ್ನಾ ದಿನ ಶನಿವಾರ ಐನಾಝ್ ಅಬುಧಾಬಿಯಿಂದ ಬರುವಾಗ ತಮ್ಮನಿಗಾಗಿ ಶೂ, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮಗನ ಹುಟ್ಟುಹಬ್ಬಕ್ಕಾಗಿ ಸಿಹಿ ತಿಂಡಿ ಮತ್ತು ಬ್ಯಾಗ್ ತೆಗೆದುಕೊಂಡು ಬಂದಿದ್ದಳು. ಅದನ್ನು ಕೊಡುವುದಕ್ಕಾಗಿಯೇ ಆಕೆ ಶನಿವಾರ ರಾತ್ರಿ ನೇಜಾರು ಮನೆಗೆ ಬಂದಿದ್ದಾಳೆ. ರವಿವಾರ ರಾತ್ರಿ 8ಕ್ಕೆ ದುಬೈ ಹೋಗಲಿಕ್ಕೆ ಇದ್ದುದರಿಂದ ಮನೆಯಿಂದ ಬೆಳಗ್ಗೆ 11ಗಂಟೆಗೆ ಹೋಗಬೇಕು ಎಂದು ಹೇಳಿದ್ದಳು. ಇದುವೇ ಆಕೆ ನನಗೆ ನೀಡಿದ ಕೊನೆಯ ಮಾತು ಎಂದು ನೂರ್ ಮುಹಮ್ಮದ್ ಗದ್ಗರಿತರಾಗಿ ನುಡಿದರು.

*'ಎಲ್ಲಾ ಕಡೆ ಓಡಾಡುವ ನಮ್ಮ ಸ್ಥಳೀಯ ಸಂಸದರು ನಮಗೆ ಒಂದು ಸಾಂತ್ವನದ ಮಾತು ಕೊಡ ಹೇಳಿಲ್ಲ ನಾವು ನಮ್ಮವರನ್ನು ಕಳೆದಕೊಂಡು ಐದು ದಿನಗಳಾದರೂ ಒಂದು ಹೇಳಿಕೆ ಕೊಡ ನೀಡಿಲ್ಲ. ಮನೆಯಲ್ಲಿ ಏನಾಗಿದೆ, ನನ್ನಿಂದ ಏನಾದರೂ ಆಗಬೇಕೇ ಎಂದು ಒಂದು ಮಾತು ಹೇಳಿಲ್ಲ ಕನಿಷ್ಟ ಸಾಂತ್ವನ ಆದರೂ ಹೇಳುತ್ತಿದ್ದರೆ ಅವರು ನಮ್ಮ ಪ್ರೀತಿಗೆ ಪಾತ್ರರಾಗಿದ್ದರು'*

*-ನೂರ್ ಮುಹಮ್ಮದ

17/11/2023

ಬಾಲಕಿಯರ ಮೋಜಿನಾಟಕ್ಕೆ ಟಾಯ್ಲೇಟ್ನಲ್ಲಿ ಕ್ಯಾಮರ ಇಟ್ಟಿದ್ದಾರೆಂದು ಗದ್ದಲ ಎಬ್ಬಿಸಿ, ಕೊನೆಗೆ ಮಹಿಳಾ ಆಯೋಗದ ಸದಸ್ಯೆ ಖುಷ್ಟು ಉಡುಪಿಗೆ ಭೇಟಿ ಕೊಟ್ಟಿದ್ದರು.

ನಾಲ್ಕು ಕೊಲೆಯಾದರೂ…

ಮಹಿಳಾ ಆಯೋಗ ಬೇಟಿ ಇಲ್ಲ ?

ಶಾಸಕರ ಭೇಟಿ ಇಲ್ಲ ?

ಸಂಸದರ ಭೇಟಿ ಇಲ್ಲ ?

ಉಸ್ತುವಾರಿ ಸಚಿವರ ಭೇಟಿ ಇಲ್ಲ ?

ಏರ್ ಇಂಡಿಯಾ ಸಂಸ್ಥೆಯ ಭೇಟಿ ಇಲ್ಲ ?

ಪೊಸ್ಟರುಗಳು ಇಲ್ಲ ?

ಮಾದ್ಯಮದಲ್ಲಿ ಡಿಫರೆಂಟ್ ಹೆಡೆಲೈನ್ ಇಲ್ಲ ?

ಬಾಡಿಗೆ ಭಾಷಣಕಾರರು ಇಲ್ಲ ?

ಬಂದ್ ಇಲ್ಲ ?

ಮುಖ್ಯಮಂತ್ರಿ ಸಚಿವರುಗಳ ಸಾಂತ್ವನ ಇಲ್ಲ ?

ಪರಿಹಾರ ಇಲ್ಲ ?

ಖಂಡನೆ ಇಲ್ಲ ?

ಪ್ರತಿಕಾರದ ಮಾತು ಇಲ್ಲ ?

ಒಂದುವೇಳೆ ಕೊಲೆಗಾರನ ಮತ್ತು ಕೊಲ್ಲಲ್ಪಟ್ಟವರ ಧರ್ಮ ಬದಲಾಗಿದ್ದರೆ ಬಿಜೆಪಿ ಗೆ ಲೋಕಸಭೆ ಚುನಾವಣೆಗೆ ಸುಲಭದ ತುತ್ತಾಗಿರುತ್ತಿತ್ತು …

16/11/2023

ಮೊನ್ನೆ 12ನೇ ತಾರೀಕು ಆದಿತ್ಯವಾರ ಉಡುಪಿಯ ನೇಜಾರಿನಲ್ಲೊಂದು ದೊಡ್ಡ ಹತ್ಯಾಕಾಂಡ ನಡೆಯಿತು. ರಾಕ್ಷಸೀ ಪ್ರವೃತ್ತಿಯು ಅನಾವರಣಗೊಂಡಿತು. ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಒಬ್ಬನೇ ವ್ಯಕ್ತಿ ಕ್ಷಣಮಾತ್ರದಲ್ಲಿ ಬರ್ಬರವಾಗಿ ಕೊಲೆಗೈದು ಪರಾರಿಯಾದ.

ಕೊಲೆಯಾದ ಆ ನಾಲ್ಕೂ ಮಂದಿ ದುರ್ದೈವಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಉಲ್ಲೇಖನೀಯ! ಆದರೆ ಆ ಕಾರಣಕ್ಕೆ ನಾನು ಈಗ ಪೆನ್ನು ಹಿಡಿದದ್ದಂತು ಅಲ್ಲವೇ ಅಲ್ಲ.

ಜನ ಧರ್ಮಭೇದ ಮರೆತು ಅಮಾನವೀಯ ಅಸುರೀ ಕೃತ್ಯವನ್ನು ಖಂಡಿಸಿ ಅರೋಪಿಯನ್ನು ಪತ್ತೆ ಹಚ್ಚಿ ಗಲ್ಲಿಗೇರಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದ್ದಲ್ಲದೆ ಕೊಲೆ ನಡೆದ ದಿನದಿಂದ ಮೃತರ ಪಾರ್ಥಿವ ಶರೀರಗಳನ್ನು ಕೋಡಿ ಬೆಂಗ್ರೆಯ ಜುಮ್ಮಾ ಮಸೀದಿಯ ಜಾಗದಲ್ಲಿ ದಫನ ಮಾಡುವವರೆಗೆ ಊರ ಜನ ನಡೆದುಕೊಂಡ ರೀತಿ, ಮೃತರಿಗೆ ಅಂತಿಮ ನಮನಗಳನ್ನು ಸಲ್ಲಿಸಿ ಕಣ್ಣೀರಿಟ್ಟ ಪರಿಯನ್ನು ದೂರದಿಂದ ಗಮನಿಸಿದ ಹಾಗೂ ಹಲವರಿಂದ ಕೇಳಿ ತಿಳಿದ ನಾನು ಪೆನ್ನು ಹಿಡಿಯುವಂತೆ ಮಾಡಿತು.

ಈ ದುರ್ಘಟನೆಯ ನಂತರದ ಬೆಳವಣಿಗೆಯು ಉಡುಪಿಯ ಜನತೆಯ ಘನತೆಯನ್ನು, ಧರ್ಮ ಸಾಮರಸ್ಯವನ್ನು, ಅನ್ಯ ಧರ್ಮೀಯರ ಮೇಲೆ ಅಂತರ್ಯದಲ್ಲಿ ಹಾಸುಹೊಕ್ಕಾಗಿ ಹುದುಗಿರುವ ಅಮಿತ ಬಾಂಧವ್ಯವನ್ನು ಅನಾವರಣಗೊಳಿಸಿದ್ದಂತೂ ಸತ್ಯ.

ಇಂದು ನನ್ನ ಕಚೇರಿಗೆ ಬಂದಿದ್ದ ಓರ್ವ ಮುಸ್ಲಿಂ ಕಕ್ಷಿಗಾರರು ಈ ಎಲ್ಲಾ ಸಂಗತಿಗಳ ಪ್ರತ್ಯಕ್ಷ ಸಾಕ್ಷಿಯಾಗಿ ಹೇಳಿದ್ದು, ಹೊಗಳಿದ್ದು ಉಡುಪಿಯ ಜನತೆಯ ಸುಪ್ತ ಸಾತ್ವಿಕ ಮನಸ್ತಿತಿಯನ್ನು ತೆರೆದಿಡುವಂತಾದ್ದು. ಅವರ ಪ್ರಕಾರ ಕಳೆದ ಶನಿವಾರದಿಂದ ನಿನ್ನೆ ಮಂಗಳವಾರದವರೆಗೆ ಹಿಂದೂ ಧರ್ಮೀಯರಿಗೆ ದೀಪಾವಳಿ ಹಬ್ಬವಿದ್ದಿದ್ದರೂ ಕೂಡಾ ಹಬ್ಬದ ಸಂಭ್ರಮವನ್ನು ಬದಿಗಿರಿಸಿ, ತಮ್ಮ‌ಮನೆಗೂ‌ ಸೂತಕದ ಛಾಯೆ ಮುತ್ತಿರುವಂತೆ ಸ್ವಭಾವಿಕವೆಂಬಂತೆ ನಡೆದುಕೊಂಡರು. ಕುಟುಂಬ ಸದಸ್ಯರುಗಳನ್ನೇ, ಹಾಲುಗಲ್ಲದ ಹಸುಳೆಗಳನ್ನೇ ಕಳೆದುಕೊಂಡ ನತದೃಷ್ಟರ ಬೆನ್ನಿಗೆ ನಿಂತು ಸಾಂತ್ವನದ ಸಹಾಯ ಹಸ್ತ ಚಾಚಿ ಅವರ ದುಃಖದಲ್ಲಿ‌ ತಾವೂ ಭಾಗಿಗಳಾಗಿ ಅವರ ಕಣ್ಣೀರನ್ನು ಒರೆಸುವುದರ ಜೊತೆಗೆ ತಾವೂ ದುಃಖದ‌ ಕಟ್ಟೆಯೊಡೆದು ಕಣ್ನೀರಿಟ್ಟ ದೃಶ್ಯ ಮನ ಕಲಕುವಂತಾದ್ದು. ಹೂಡೆ – ಬೆಂಗ್ರೆ – ನೇಜಾರು – ಕೋಡಿಬೆಂಗ್ರೆಯ ಹಿಂದೂ ಸಮುದಾಯದ ಪ್ರತಿಯೊಬ್ಬ ನಾಗರಿಕರೂ ದೀಪಾವಳಿ ಹಬ್ಬಕ್ಕೆ ತಂದಿರಿಸಿದ್ದ ಪಟಾಕಿ ಸುಡುಮದ್ದುಗಳ ಚೀಲವನ್ನು ಕಡೆಗಣ್ಣಿನಿಂದಲೂ ನೋಡದೆ, ಅದನ್ನು ಮುಟ್ಟುವುದಕ್ಕೂ ಹೋಗದೆ ದೀಪಾವಳಿಗೆ ಇಡೀ ಊರು ಅಕ್ಷರಶಃ ಮೌನವಾಗುವಂತೆ ಮಾಡಿದ್ದು ನಿಜವಾಗಿಯೂ ಶ್ಲಾಘನೀಯ.

ಕಷ್ಟದಲ್ಲಿ ಒಂದಾಗುವವರು ನಿಜವಾದ ಬಂಧುಗಳು. ಆ ಸುಂದರ ಬಂಧುತ್ವವವನ್ನು ಹೂಡೆ-ನೇಜಾರು- ಕೋಡಿಬೆಂಗ್ರೆಯ ಸಜ್ಜನ ಸಮುದಾಯ ಜಗಮೆಚ್ಚುವ ರೀತಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಇಂತಹ ಮಾನವೀಯ ಸ್ಪಂದನ, ಪ್ರೀತಿಯ ಸ್ಪುರಣ, ಕನಿಕರದ ಪ್ರತಿಸ್ಪಂದನ ಪ್ರತಿಯೊಬ್ಬ ನಾಗರಿಕನ ಮನದಲ್ಲೂ, ಪ್ರತಿಯೊಬ್ಬ ನಾಗರಿಕನ ಹೃದಯದಲ್ಲೂ ಸದಾ ಹಚ್ಚ ಹಸಿರಾಗಿರಲಿ. ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆ ಸದಾ ಉಸಿರಾಡುತ್ತಿರಲಿ ಎಂಬುದೇ ನನ್ನ ಅಂತರಂಗದ ಆಶಯ.

-ಮೌನಮುಖಿ
ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ – ಉಡುಪಿ
ದೂರವಾಣಿ: 9845230926
ದಿನಾಂಕ: 15-11-2023.

https://youtu.be/cwppyj5vVC8?si=JhXFjErWKW0FIK--
16/11/2023

https://youtu.be/cwppyj5vVC8?si=JhXFjErWKW0FIK--

ಪೊಲೀಸರ ಮಿಂಚಿನ ಕಾರ್ಯಾಚರಣೆ; ಮುಸ್ಲಿಂ ಕುಟುಂಬದ ನಾಲ್ವರನ್ನು ಕೊಂದ Praveen Chougule Arrest | Udupi Death Case Suvarna News | Latest Kannada N...

16/11/2023
15/11/2023

*ನೇರಳಕಟ್ಟೆ : ವಾಹನ ತಪಾಸಣೆ ವೇಳೆ ಓಮ್ನಿ ಕಾರು ಡಿಕ್ಕಿ ಹೊಡೆದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಆಸ್ಪತ್ರೆಗೆ*

*ಕರಾವಳಿ ಟೈಮ್ಸ್*

*https://www.karavalitimes.in/2023/11/Neralakatte-Omni-Car-Accident-Reserve-Force-Constable-Injured.html*

*ಕರಾವಳಿ ಟೈಮ್ಸ್ ವಾಟ್ಸಪ್ ಗ್ರೂಪ್ ಸೇರಲು ಕ್ಲಿಕ್ ಮಾಡಿ*

*https://chat.whatsapp.com/H3E3psif9O73RFDdLgxILc*

*ನೇಜಾರು ಹತ್ಯೆ ಪ್ರಕರಣ: ಪೋಲೀಸರ ಕ್ಷಿಪ್ರ ಕಾರ್ಯಾಚರಣೆ ಅಭಿನಂದನಾರ್ಹ, ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ*
15/11/2023

*ನೇಜಾರು ಹತ್ಯೆ ಪ್ರಕರಣ: ಪೋಲೀಸರ ಕ್ಷಿಪ್ರ ಕಾರ್ಯಾಚರಣೆ ಅಭಿನಂದನಾರ್ಹ, ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ*

ಪ್ರಕರಣದಲ್ಲಿ ಈವರೆಗಿನ ಪೊಲೀಸರ ಕಾರ್ಯವೈಖರಿ ಅಭಿನಂದನಾರ್ಹವಾಗಿದ್ದು, ಪೊಲೀಸರ ಮೇಲೆ ಜನರಿಗಿರುವ ವಿಶ್ವಾಸವನ್ನು ಇಮ್ಮಡಿಗೊಳಿಸಿ.....

ನೇಜಾರು ನಾಲ್ವರ ಹತ್ಯೆ ಪ್ರಕರಣ: ಇರಿತಕ್ಕೊಳಗಾದರೂ ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡ ವೃದ್ಧೆ
12/11/2023

ನೇಜಾರು ನಾಲ್ವರ ಹತ್ಯೆ ಪ್ರಕರಣ: ಇರಿತಕ್ಕೊಳಗಾದರೂ ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡ ವೃದ್ಧೆ

ಉಡುಪಿ: ನೇಜಾರಿನಲ್ಲಿ ಇಂದು ಬೆಳಗ್ಗೆ ನಡೆದ ನಾಲ್ವರ ಬರ್ಬರ ಹತ್ಯೆ ವೇಳೆ 70 ವರ್ಷದ ವೃದ್ಧೆ ದುಷ್ಕರ್ಮಿ ಆಕ್ರಮಣದಿಂದ ತಪ್ಪಿಸಿಕೊಂಡು ಶ...

Address

Manipal
Udupi
576101

Alerts

Be the first to know and let us send you an email when UDUPI Global News posts news and promotions. Your email address will not be used for any other purpose, and you can unsubscribe at any time.

Contact The Business

Send a message to UDUPI Global News:

Videos

Share


Other News & Media Websites in Udupi

Show All