Crevice Cleaning Brush

Crevice Cleaning Brush ಅಗ್ರಣಿ...
ಇದು ರಾಷ್ಟ್ರೀಯತೆಯ ಅಗ್ರವಾಣಿ.
(2)

ಲಂಡನ್ ಮ್ಯೂಸಿಯಂನಲ್ಲಿದ್ದ  ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರ ನಖ ಭಾರತಕ್ಕೆ ಮರಳುತ್ತಿದೆ ಏನಿದು ವ್ಯಾಘ್ರ ನಖ? ತಪ್ಪದೇ ಓದಿ
11/09/2023

ಲಂಡನ್ ಮ್ಯೂಸಿಯಂನಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜರ ವ್ಯಾಘ್ರ ನಖ ಭಾರತಕ್ಕೆ ಮರಳುತ್ತಿದೆ

ಏನಿದು ವ್ಯಾಘ್ರ ನಖ?

ತಪ್ಪದೇ ಓದಿ

ಬೆನ್ನಿಗೆ ಇರಿಯುವ ಇರಾದೆಯಿಂದ ಬಂದ ಅಫ್ಜಲ ಖಾನನ ಕರುಳು ಬಗೆದು ಇತಿಹಾಸದ ಪುಟಗಳಲ್ಲಿ ಹಿಂದೂ ಸಂಘರ್ಷಕ್ಕೆ ಒಂದು ರೋಮ ಹರ್ಷಕ ತಿರುವು .....

ಶ್ರೀ ಶಂಕರ ಭಗವತ್ಪಾದರ  ಕುರಿತಾದ ಅಪೂರ್ವ ಮಾಹಿತಿಗಳು ಇಲ್ಲಿವೆ ದಯವಿಟ್ಟು ಓದಿ
10/09/2023

ಶ್ರೀ ಶಂಕರ ಭಗವತ್ಪಾದರ ಕುರಿತಾದ ಅಪೂರ್ವ ಮಾಹಿತಿಗಳು ಇಲ್ಲಿವೆ ದಯವಿಟ್ಟು ಓದಿ

ಲೇಖಕರು : ಶ್ರೀ ಸಚಿನ್ ಭಟ್ ಆಚಾರ್ಯ ಶಂಕರರ ಚರಿತ್ರವಿಮರ್ಶೆಗೆ ಶಂಕರ ವಿಜಯಗಳಿಗಿಂತ ಅವರದೇ ಗ್ರಂಥಗಳ ಅಂತರಂಗಪರೀಕ್ಷೆ ಮುಖ್ಯ. ಆದರೆ ದ....

veera bhogya vasundhara..
26/08/2023

veera bhogya vasundhara..

31/07/2023

ಬ್ರಾಹ್ಮಣರು ಎಂದರೆ ಯಾರು?
ಚಾಣಕ್ಯ ನೀಡಿದ ಉತ್ತರ ಅದ್ಭುತವಿದೆ ಕೇಳಿ.

27/07/2023
26/07/2023

ಕೇರಳದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ಉನ್ಮಾದ ಚರಮ ಸೀಮೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಕೇರಳದ ಹಿಂದುಗಳ ಮೇಲೆ ಮಾರಣಾಂತಿಕ ದಾಳಿಗಳು ಆರಂಭವಾಗಬಹುದು. ಎರಡು ದಿನಗಳ ಹಿಂದೆ ಕೇರಳದ ಬೀದಿಯೊಂದರಲ್ಲಿ ಪುಂಡ ಮುಸಲ್ಮಾನರ ಗುಂಪೊಂದು ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮನೆಯೊಂದಕ್ಕೆ ಕಲ್ಲು ತೂರಾಟ ಮಾಡುವ ದೃಶ್ಯ ವೈರಲ್ ಆಗಿತ್ತು. ಈಗ ಅದಕ್ಕಿಂತಲೂ ಬೆಚ್ಚಿಬೀಳಿಸುವ ಮತ್ತೊಂದು ಸಂಗತಿ ಬಳಕೆಗೆ ಬಂದಿದೆ. ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುವ ನೆಪದಲ್ಲಿ ಜೋಂಬಿಗಳ ಗುಂಪು ರಸ್ತೆಗೆ ಇಳಿದಿದ್ದು, ಇವುಗಳು ಹಿಂದುಗಳನ್ನು ಸುಟ್ಟು ದೇವಸ್ಥಾನದಲ್ಲಿ ತೂಗು ಹಾಕುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಕೂಗುತ್ತಾ ಹಿಂದುಗಳಿಗೆ ಬೆದರಿಕೆ ಒಡ್ಡಿದ್ದಾರೆ. ಇದೇ ಕೇರಳದ ವಯನಾಡಿನಿಂದ ರಾಹುಲ ಗಾಂಧಿ ಸಂಸದನಾಗಿದ್ದು, ಈತನ ಪಕ್ಷದ ಜೊತೆ ಸಂಬಂಧವಿರುವ ಮುಸ್ಲಿಂ ಲೀಗಿನ ಕಾರ್ಯಕರ್ತರಿಂದ ಈ ಘೋಷಣೆ ಬಂದಿದೆ. ಜೈ ಶ್ರೀರಾಮ್ ಘೋಷಣೆಯಿಂದಲೇ ಭಯ ಬೀಳುವ ಕಾಂಗ್ರೆಸ್ಸಿಗರ ಕಿವಿಗೆ ಈ ರಾಕ್ಷಸರ ಆರ್ಭಟ ಹಿತವಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ!

ನಿಜಕ್ಕೂ ಕೇರಳಕ್ಕೆ ಭವಿಷ್ಯ ಇದೆ ಎಂದು ನಿಮಗೆ ಎನಿಸುತ್ತಿದೆಯೇ.. 1921 ರಲ್ಲಿ ಮಲಬಾರ್ ದಂಗೆಯಲ್ಲಿ ಸಾವಿರಾರು ಹಿಂದುಗಳ ನರ ಹತ್ಯೆ ನಡೆದಿತ್ತು. ಆವತ್ತು ಹಿಂದುವಿನ ಮನದಲ್ಲಿ ಮಡುಗಟ್ಟಿ ಕುಳಿತ ಭಯ ಇಂದಿಗೂ ತಗ್ಗಿಲ್ಲ. ಮುಸಲ್ಮಾನರಿಂದ ಸ್ವಲ್ಪ ತೊಂದರೆಯಾದರೂ ಹಿಂದೂ ಆ ಪ್ರದೇಶ ಬಿಟ್ಟು ಪಲಾಯನ ಮಾಡುತ್ತಾನೆ. ಇದು ಕೇರಳದಲ್ಲಿ ಸರ್ವೇಸಾಮಾನ್ಯವಾಗಿ ನಡೆಯುತ್ತಿದೆ. ಇಸ್ಲಾಮಿಕರಣ ಕ್ಯಾನ್ಸರ್ ನಂತೆ ಇಡೀ ಕೇರಳದ ನಕ್ಷೆಯನ್ನು ಆವರಿಸುತ್ತಿರುವುದು ಸುಳ್ಳಲ್ಲ. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬೇಕಾಗಿ ಈ ಮತಾಂಧರನ್ನು ಒಲೈಸುತ್ತಿದ್ದು, ತಮ್ಮ ಮಕ್ಕಳ ಭವಿಷ್ಯಕ್ಕೆ ತಮ್ಮ ಕೈಯಾರೆ ಚಪ್ಪಡಿ ಎಳೆಯುತ್ತಿದ್ದಾರೆ. ಇವರ ಮನೆ ಹೆಣ್ಣು ಮಕ್ಕಳು ಮುಸಲ್ಮಾನರ ಲೈಂಗಿಕ ಗುಲಾಮರಾಗುವ ದಿನ ದೂರವಿಲ್ಲ.

ಜಗತ್ತಿನ ಇತಿಹಾಸದಿಂದ ಎಂದೂ ಅಳಿಸಲಾಗದ ಹಿಂದೂ ನರಸಂಹಾರದ ಕಥೆ ಇದು.ಮಂಜುನಾಥ ಅಜ್ಜಂಪುರರಕ್ತಸಿಕ್ತ ‘ನೇರ ಕಾರ್ಯಾಚರಣೆ’ 21ನೆಯ ಶತಮಾನದ ಭಾರತದ ಪ್...
25/07/2023

ಜಗತ್ತಿನ ಇತಿಹಾಸದಿಂದ ಎಂದೂ ಅಳಿಸಲಾಗದ ಹಿಂದೂ ನರಸಂಹಾರದ ಕಥೆ ಇದು.

ಮಂಜುನಾಥ ಅಜ್ಜಂಪುರ

ರಕ್ತಸಿಕ್ತ ‘ನೇರ ಕಾರ್ಯಾಚರಣೆ’ 21ನೆಯ ಶತಮಾನದ ಭಾರತದ ಪ್ರಚಲಿತ ಸಂಘರ್ಷದ ಬೇರುಗಳನ್ನು ವಿಭಜನೆಯ ಕರಾಳ ಪರ್ವದಲ್ಲಿಯೂ ಕಾಣಬಹುದು. ನಮ್ಮ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳ ಮತ್ತು ಆಯಾಮಗಳ ಅಧ್ಯಯನ ಅಚ್ಚರಿಯನ್ನುಂಟುಮಾಡುತ್ತವೆ. ಇತಿಹಾಸದ ಅಧ್ಯಯನ ಹಿಂದೆಂದಿಗಿಂತಲೂ ಈಗ ಪ್ರಸ್ತುತವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ. ಮಹಾತ್ಮಾ ಗಾಂಧೀಜಿಯವರ ಇತಿಹಾಸವು ಪರೋಕ್ಷ ವಾಗಿ, 20ನೆಯ ಶತಮಾನದ ಸ್ವಾತಂತ್ರ್ಯ ಹಾಗೂ ದೇಶವಿಭಜನೆಗಳ ಇತಿಹಾಸವೂ ಆಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಗಾಂಧೀ ಭವನವು ‘ಮಹಾತ್ಮಾ ಗಾಂಧಿ: ಅಂತಿಮ ಹಂತ’ ಗ್ರಂಥವನ್ನು 1978ರಲ್ಲಿ ಪ್ರಕಟಿಸಿತು. ವಿದ್ಯಾಮಂತ್ರಿಯೂ ಆಗಿದ್ದ ಕೆ.ವಿ. ಶಂಕರ ಗೌಡರು ಶ್ರಮವಹಿಸಿ ಅನು ವಾದ ಮಾಡಿದ್ದರು. ಪ್ಯಾರೇಲಾಲರು ದೊಡ್ಡ ಗಾಂಧಿವಾದಿ. ಅವರಂತೆ ವಸ್ತುನಿಷ್ಠ ವಾಗಿ, ಸತ್ಯನಿಷ್ಠವಾಗಿ ಇತಿಹಾಸ ದಾಖಲಿಸುವುದು ತುಂಬ ಕಠಿಣ ಕೆಲಸ. ಅವರು ಗಾಂಧೀಜಿ ಆಪ್ತ ಕಾರ್ಯದರ್ಶಿಯಾಗಿ, ಕೊನೆಯ ಕ್ಷಣದವರೆಗೆ ಜೊತೆಯಲ್ಲಿ ಇದ್ದರು.

ಹಾಗೆಂದೇ ಪ್ಯಾರೇಲಾಲರ ‘Mahatma Gandhi : The Last Phase' ಬೃಹತ್‌ ಗ್ರಂಥಕ್ಕೆ ಅಧಿಕೃತತೆಯ ಮೊಹರು ಬಿದ್ದಿದೆ. ಸ್ವಾತಂತ್ರ್ಯ ಹೋರಾಟ, ಗಾಂಧೀಜಿ, ಜಿನ್ನಾ, ನೆಹರೂ, ವಿಭಜನೆ, ಕಾಂಗ್ರೆಸ್‌- ಮುಸ್ಲಿಂ ಲೀಗುಗಳ ರಕ್ತಸಿಕ್ತ ಇತಿಹಾಸದ ಹೆಜ್ಜೆ ಗುರುತು ಇಲ್ಲಿವೆ. ಕೃತಿ 1956ರಲ್ಲಿ ಪ್ರಕಟವಾದಾಗ, ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದರೇ ಪೀಠಿಕೆ ಬರೆದಿದ್ದರು. ಜಿಹಾದಿ ಭಯೋತ್ಪಾದಕರ ಓಲೈಕೆಯ ಅಸಹ್ಯ ಇತಿಹಾಸಕ್ಕೀಗ ನೂರಾರು ವರ್ಷಗಳು.

ಕಾಂಗ್ರೆಸ್‌ ಇತಿಹಾಸವೆಂದರೆ, ಅವಿವೇಕದ, ಮುಸ್ಲಿಂ ಓಲೈಕೆಯ ನಾಚಿಕೆಗೇಡಿನ ವಿವರಗಳೇ ತುಂಬಿರುತ್ತವೆ. ಸ್ವಾತಂತ್ರ್ಯಾನಂತರ ಪಾಕಿಸ್ತಾನ ಮೂರು ಮೂರು ಬಾರಿ ಯುದ್ಧವನ್ನೇ ಮಾಡಿದೆ. ಸೈನಿಕರು, ಸೇನಾಧಿಕಾರಿಗಳು ‘ಈ ಪಾಕಿಸ್ತಾನ ಯುದ್ಧವನ್ನು ಎಂದಾದರೂ ನಿಲ್ಲಿಸಿದೆಯೇ’ ಎಂದು ಕೇಳುತ್ತಾರೆ. ನಿತ್ಯ ಕಿರುಕುಳ, ದಾಳಿ, ಗಡಿ ಉಲ್ಲಂಘನೆ, ಅತಿಕ್ರಮ ಪ್ರವೇಶ. ಪ್ಯಾರೇಲಾಲರ ಕೃತಿಯ ಮೊದಲ ಸಂಪುಟದ 9ನೇ ಅಧ್ಯಾಯದ ಪುಟಪುಟಗಳಲ್ಲಿ ಜಿನ್ನಾ ಹರಿಸಿದ, ಚೆಲ್ಲಿದ ರಕ್ತದ ಗುರುತುಗಳಿವೆ. ಪಾಕಿಸ್ತಾನದ ಸ್ಥಾಪನೆಗೆ ಒಪ್ಪದಿದ್ದಲ್ಲಿ ರಸ್ತೆರಸ್ತೆಯಲ್ಲಿ ಹಿಂದೂಗಳ ರಕ್ತ ಹರಿಸಲು, ಜಿನ್ನಾ ದಿನಾಂಕವನ್ನೇ ನಿಗದಿ ಮಾಡಿಬಿಟ್ಟಿದ್ದ. ಅದು 1946ರ ಆಗಸ್ಟ್‌ 16.

ಜಿನ್ನಾಗೆ ಬಲಗೈಯಾಗಿದ್ದ ಲಿಯಾಖತ್‌ ಅಲಿ ಖಾನ್‌, ಅಮೆರಿಕದ ಅಸೋಸಿಯೇಟೆಡ್‌ ಪ್ರೆಸ್‌ಗೆ ‘direct action’ ಎಂದರೆ ಏನು ಹೇಳಿಯೇ ಬಿಟ್ಟಿದ್ದ; ‘‘ನಾವು ಯಾವ ಮಾರ್ಗವನ್ನೂ ತೆಗೆದುಹಾಕುವುದಿಲ್ಲ. ನೇರ ಕಾರ್ಯಾಚರಣೆ ಎಂದರೆ ಕಾನೂನಿಗೆ ವಿರುದ್ಧವಾದ ಕ್ರಿಯೆ ಎಂದರ್ಥ,’’ ಎಂದು ಸ್ಪಷ್ಟವಾಗಿ ಸಾರಿದ್ದ (ಪುಟ 264). ಅವಿಭಜಿತ ಬಂಗಾಳದ ಮುಸ್ಲಿಂ ಲೀಗ್‌ ನಾಯಕ ಖ್ವಾಜಾ ನಜೀಮುದ್ದೀನ್‌, ಪತ್ರಕರ್ತರಿಗೆ ವಿವರಿಸುತ್ತ, ‘‘ಮುಖ್ಯವಾಗಿ ನಾವು ಅಹಿಂಸೆಯ ವಿಚಾರಕ್ಕೇ ಒಳಪಡದಿರುವಾಗ ಹಿಂದೂಗಳಿಗೆ ತೊಂದರೆಗಳನ್ನುಂಟು ಮಾಡಲು ನೂರಾರು ಮಾರ್ಗ ಗಳಿವೆ. ನೇರ ಕಾರ್ಯಾಚರಣೆ ಎಂದರೆ ಏನು ಎಂಬುದು ಬಂಗಾಳದ ಮುಸ್ಲಿಂ ಪ್ರಜಾವರ್ಗಕ್ಕೆ ಚೆನ್ನಾಗಿ ಗೊತ್ತು. ನಾವು ಅವರಿಗೆ ಮಾರ್ಗ ದರ್ಶನ ಮಾಡುವ ತೊಂದರೆಯನ್ನೂ ತೆಗೆದುಕೊಳ್ಳಬೇಕಾಗಿಲ್ಲ,’’ ಎಂದ.

ವಾಯವ್ಯ ಗಡಿನಾಡಿನ ಮುಸ್ಲಿಂ ಲೀಗ್‌ ನಾಯಕ ಅಬ್ದುಲ್‌ ರಬ್‌ನಿಷ್ಟಾರ್‌, ‘‘ಪಾಕಿಸ್ತಾನ ರಕ್ತಪಾತದಿಂದಲೇ ಸ್ಥಾಪನೆಯಾಗಬೇಕು. ಮುಸ್ಲಿಮೇತರರ ರಕ್ತವನ್ನು ಹರಿಸಬೇಕು. ಏಕೆಂದರೆ ಮುಸಲ್ಮಾನರಿಗೆ ಅಹಿಂಸೆಯಲ್ಲಿ ನಂಬಿಕೆಯಿಲ್ಲ,’’ ಎಂದಿದ್ದ (ಪುಟ 264).

ಮುಸ್ಲಿಂ ಲೀಗ್‌ ನಾಯಕರಿಗೆ ತಮ್ಮ ಗುರಿ ಕುರಿತು ಯಾವುದೇ ಗೊಂದಲ ಇರಲಿಲ್ಲ. ಆಗ ಬಂಗಾಳದಲ್ಲಿ ಷಹೀದ್‌ ಸುಹ್ರವರ್ದಿ ಎಂಬ ನರರಾಕ್ಷ ಸನು ಮುಸ್ಲಿಂ ಲೀಗ್‌ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ. ‘‘ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಂಗಾಳವು ದಂಗೆಯೇಳುತ್ತದೆ, ಬಂಗಾಳದ ಆದಾಯದ ಯಾವ ಭಾಗವನ್ನೂ ಕೇಂದ್ರಕ್ಕೆ ಕೊಡುವುದಿಲ್ಲ, ಸ್ವತಂತ್ರ ದೇಶವನ್ನು ಸ್ಥಾಪಿಸುತ್ತೇವೆ,’’ ಎಂದು ಘೋಷಿಸಿದ್ದ. ನೇರ ಕಾರ್ಯಾಚರಣೆಗಾಗಿ ಕೊಲ್ಕೊತ್ತಾದಲ್ಲಿ ಅಪಾರ ಸಿದ್ಧತೆ ಮಾಡಲಾಗಿತ್ತು. ಪ್ರಮುಖ ಸ್ಥಾನಗಳಿಂದ ಹಿಂದೂ ಪೊಲೀಸ್‌ ಅಧಿಕಾರಿಗಳನ್ನು ವರ್ಗಾಯಿಸಲಾಯಿತು.

ಆಗಸ್ಟ್‌ 16ರಂದು ಕೊಲ್ಕೊತ್ತಾದಲ್ಲಿದ್ದ 24 ಪೊಲೀಸ್‌ ಸ್ಟೇಷನ್ನುಗಳಲ್ಲಿ ಇಪ್ಪತ್ತೆರಡರಲ್ಲಿ ಮುಸ್ಲಿಂ ಅಧಿಕಾರಿಗಳೂ, ಉಳಿದೆರಡರಲ್ಲಿ ಆಂಗ್ಲೋ- ಇಂಡಿಯನ್ನರೂ ಮೇಲ್ವಿಚಾರಕರಾಗಿದ್ದರು. ಆ ದಿನವನ್ನು ಸರಕಾರ ಸಾರ್ವತ್ರಿಕ ರಜಾದಿನವಾಗಿ ಘೋಷಿಸಿತು. ಲಾಠಿ, ಭರ್ಜಿ, ಕೊಡಲಿ, ಬಾಕು, ಬಂದೂಕುಗಳನ್ನು ಮುಂಚಿತವಾಗಿಯೇ ಹಂಚಲಾಗಿತ್ತು. ಪುಂಡರಿಗೆ ವಾಹನ ಸೌಕರ್ಯ ಏರ್ಪಡಿಸಲಾಗಿತ್ತು. ನೇರ ಕಾರ್ಯಾಚರಣೆಯ ಹಿಂದಿನ ದಿನ ಮುಖ್ಯಮಂತ್ರಿ ಸುಹ್ರವರ್ದಿಯು, ಉಳಿದ ಮಂತ್ರಿಗಳಿಗೆ ನೂರಾರು ಗ್ಯಾಲನ್‌ ವಿಶೇಷ ಪೆಟ್ರೋಲ್‌ ಕಾರ್ಡುಗಳನ್ನು ಕೊಡುವುದರ ಮೂಲಕ, ಪೆಟ್ರೋಲ್‌ ಕೊರತೆಯಾಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದ. ಕೋಲ್ಕೊತ್ತಾದ ಮೇಯರ್‌ ಹಾಗೂ ಮುಸ್ಲಿಂ ಲೀಗ್‌ ಕಾರ್ಯದರ್ಶಿ ಮೊಹಮ್ಮದ್‌ ಉಸ್ಮಾನನು, ಸುಹ್ರವರ್ದಿಯ ಹಿಂಬಾಲಕ ಷರೀಫ್‌ ಖಾನನ ಜೊತೆ ಖುದ್ದಾಗಿ ಹೌಡಾ ಪ್ರದೇಶಕ್ಕೆ ಭೇಟಿಕೊಟ್ಟು, ಪುಂಡರು ಹಿಂಸಾಕಾರ್ಯಗಳಲ್ಲಿ ತೊಡಗುವಂತೆ ಪ್ರೇರೇಪಿಸಿದ(ಪುಟ 266).

ಆಗಸ್ಟ್‌ 16, 17, 18ರಂದು ಕೋಲ್ಕೊತ್ತಾ ದಲ್ಲಿ ನಡೆದ ಘೋರ ಕೊಲೆಗಳಲ್ಲಿ, ಈ ಕಾರ್ಯಾಚರಣೆಯು ಉತ್ತುಂಗ ಮುಟ್ಟಿತು. ಹಿಂದೂಗಳ ಅಂಗಡಿ ಲೂಟಿ; ಕಾರು, ಟ್ರಾಮ್‌ಗಳನ್ನು ಸುಡಲಾಯಿತು. ದಾರಿಹೋಕರನ್ನು ಇರಿಯಲಾಯಿತು. ವಾಹನ ಸಂಚಾರ, ಆವಶ್ಯಕ ಸೇವೆಗಳು ಸ್ತದ್ಧವಾದವು. ರಸ್ತೆಗಳಲ್ಲಿ ಕಂಡುಬಂದ ವಾಹನಗಳೆಂದರೆ, ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದ ಪುಂಡರಿಂದ ತುಂಬಿದ ಮುಸ್ಲಿಂ ಲೀಗಿನ ಲಾರಿಗಳು.

ಕೋಲ್ಕೊತ್ತಾ ಮಹಾನಗರ ದೊಡ್ಡ ಕಟುಕರಂಗಡಿಯಾಗಿ ಹೋಯಿತು (ಪುಟ 266). ಬೀದಿಗಳು ಹೆಣಗಳಿಂದ ತುಂಬಿಹೋದವು. ಹೆಣಗಳನ್ನು ಚರಂಡಿಗಳಲ್ಲಿ ತುರುಕಲಾಯಿತು. ಹೆಣಗಳು ನದಿಯಲ್ಲಿ ತೇಲಿಹೋಗುತ್ತಿದ್ದವು. ಮಕ್ಕಳನ್ನು ಮನೆಗಳ ಮೇಲ್ಚಾವಣಿಯಿಂದ ಕೆಳಗೆಸೆಯಲಾಯಿತು ಅಥವಾ ಸಜೀವವಾಗಿ ಸುಡಲಾಯಿತು. ಹೆಂಗಸರ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿತ್ತು (ಪುಟ 267). ಹತ್ಯಾಕಾಂಡದ ಸುದ್ದಿ ಬಂದಾಗ, ಗಾಂಧೀಜಿ ಸೇವಾಗ್ರಾಮದ ಆಶ್ರಮದಲ್ಲಿದ್ದರು. ಒಬ್ಬ ಪತ್ರಿಕಾ ವರದಿಗಾರರು, ಗಾಂಧೀಜಿಗೆ ಬರೆದರು: ‘‘ದೂರದಿಂದ ಮಾಡುವ ಅಹಿಂಸೆಯ ಧರ್ಮೋಪದೇಶಗಳು ಪ್ರಯೋಜನಕ್ಕೆ ಬಾರವು. ಅಹಿಂಸಾತ್ಮಕ ಸತ್ಯಾಗ್ರಹ ಹೂಡುವುದರ ಅರ್ಥ, ಎಲ್ಲಾ ಆಸ್ತಿಯನ್ನು ನಾಶ ಮಾಡುವುದಕ್ಕೆ ಮತ್ತು ಹಿಂದೂಗಳನ್ನು ಕೊಲ್ಲುವುದಕ್ಕೆ ಮುಸಲ್ಮಾನರಿಗೆ ಅವಕಾಶ ಕೊಡುವುದು ಎಂದರ್ಥ. ಅಂತಹ ಪರಿಸ್ಥಿತಿಗಳಲ್ಲಿ ನಮ್ಮ ಕರ್ತವ್ಯವೇನು?’’.
ಒಡನೆಯೇ ಗಾಂಧೀಜಿಯವರ ಉತ್ತರ ಬಂತು: ‘‘ಕಾಂಗ್ರೆಸ್‌ ಕಾರ್ಯನಿರ್ವಾಹಕ ಸಮಿತಿಯು ಸುಸ್ಪಷ್ಟವಾದ ನಿರ್ದೇಶನ ಮಾಡಿದೆ. ಭಯೋತ್ಪಾದನೆಯಿಂದ, ಹಿಂಸೆಯಿಂದ ಭ್ರಾತೃಹತ್ಯೆ ನಿಲ್ಲುವುದಿಲ್ಲ. ಉದ್ದೇಶಪೂರ್ವಕ ಧೈರ್ಯದಿಂದ ಕೊನೆಯ ಮನುಷ್ಯನವರೆಗೆ ಹಿಂದೂಗಳು ಸತ್ತಿದ್ದರೆ, ಅದು ಹಿಂದು ಧರ್ಮದ ಮತ್ತು ಭಾರತದ ಮೋಕ್ಷವೂ, ಈ ನಾಡಿನಲ್ಲಿ ಇಸ್ಲಾಮಿನ ಶುದ್ಧೀಕರಣವೂ ಆಗುತ್ತಿತ್ತು.’’ (ಪುಟ 270). ಗಾಂಧೀಜಿಯವರ ಅಹಿಂಸೆಯ ಪಾಠಗಳು ಅರ್ಥವೇ ಆಗುವುದಿಲ್ಲ. ‘ಕೊನೆಯ ಹಿಂದೂವಿನವರೆಗೆ ಸಾಯಬೇಕು, ಅದು ಇಸ್ಲಾಮಿನ ಶುದ್ಧೀಕರಣ,’ ಎಂಬುದು ತುಂಬ ಅಪಾಯಕಾರಿಯಾಗಿದೆ. ಪ್ಯಾರೇಲಾಲರ ಈ ಗ್ರಂಥಗಳಲ್ಲಿ ಇನ್ನಷ್ಟು ಭಯಾನಕ ವಿವರಗಳಿವೆ.

ಜಿಹಾದಿ ಆಕ್ರಮಣಕಾರಿಗಳು- ಸುಲ್ತಾನರು- ಬಾದಷಹರು ಹತ್ಯೆಗೈದ ಕೋಟಿ ಕೋಟಿ ಹಿಂದೂಗಳ ವಿಷಯವನ್ನು ಇತಿಹಾಸದಲ್ಲಿ ಗಾಂಧೀಜಿ ಓದಲೇ ಇಲ್ಲವೆ? ಇಂತಹ ಅಹಿಂಸೆಯಿಂದ, ಹಿಂದೂನಾಶದಿಂದ ಅವರು ಸಾಧಿಸಿದ್ದಾದರೂ ಏನು? ಅದೇ ಪರಂಪರೆಯ ಇಂದಿನ ಕಾಂಗ್ರೆಸ್‌ ನಾಯಕರು ಇದೇ ಅಹಿಂಸೆಯ ಹಾಡನ್ನೇ ಇಂದಿಗೂ ಹಾಡುತ್ತಾರೆ. ಗಾಂಧಿಯವರ ಜೀವನ ಚರಿತ್ರೆ, ದಾಖಲೆಗಳನ್ನು ಓದಲು ಕುಳಿತಾಗ ಕಣ್ಣುಗಳಲ್ಲಿ ಸ್ಫೂರ್ತಿಯ ಬದಲು ದುಃಖಾಶ್ರುಗಳೇ ತುಂಬಿಕೊಳ್ಳುತ್ತವೆ

ಮಣಿಪುರದಲ್ಲಿ  ಕುಕಿ ಬುಡಕಟ್ಟಿನ ಮಹಿಳೆಯರನ್ನು ಮೈಥಿ ಬುಡಕಟ್ಟಿಗೆ ಸೇರಿದ  ಗುಂಪು ಬೆತ್ತಲೆ ಗೊಳಿಸಿರುವ ಘಟನೆ ದೇಶ ವ್ಯಾಪಿಯಾಗಿ ಭಾರಿ ಚರ್ಚೆಗೆ ...
23/07/2023

ಮಣಿಪುರದಲ್ಲಿ ಕುಕಿ ಬುಡಕಟ್ಟಿನ ಮಹಿಳೆಯರನ್ನು ಮೈಥಿ ಬುಡಕಟ್ಟಿಗೆ ಸೇರಿದ ಗುಂಪು ಬೆತ್ತಲೆ ಗೊಳಿಸಿರುವ ಘಟನೆ ದೇಶ ವ್ಯಾಪಿಯಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. ನಿಸ್ಸಂದೇಹವಾಗಿ ಆ ಗುಂಪಿನಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಈ ಹೇಯ ಕೃತ್ಯವನ್ನು ಸಮರ್ಥಿಸುವ ಮೂರ್ಖತನವನ್ನು ಯಾರೂ ಮಾಡಕೂಡದು. ಮಹಿಳೆಯರನ್ನು ಬತ್ತಲೆ ಮಾಡಿ ಹರಾಜು ಕೂಗುವ , ಆಕೆಯನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ, ತುಂಡು ತುಂಡಾಗಿ ಕತ್ತರಿಸಿ ಫ್ರಿಜ್ಜಿನಲ್ಲಿ ತುರುಕುವ, ಹೆಣ್ಣು ಎಂದರೆ ಹೊಲ ನಿಮಗೆ ಬೇಕಾದಾಗ ಉಳುಮೆ ಮಾಡಿ ಎನ್ನುವ ಮಾನಸಿಕತೆ ನಮ್ಮದಲ್ಲ.

ನಮ್ಮ ಚರಿತ್ರೆಯಲ್ಲಿ ಈ ರೀತಿಯ ಮಾನಾಪಹರಣಗಳು ಕಾಲದ ಓಘಕ್ಕೆ ಹೊಸ ತಿರುವು ನೀಡಿವೆ. ರಾವಣ ಕೀಚಕ ದುಶ್ಯಾಸನ ನರಕಾಸುರರ ಹೆಸರೆತ್ತಲೂ ಹೇಸಿಗೆ ಪಡುವ ಭಾರತೀಯರು ನಾವು. ಆದರೂ ಅನೇಕ ವರ್ಷಗಳ ವಿದೇಶಿ ಆಳ್ವಿಕೆಯಿಂದಾಗಿ ನಮ್ಮ ಆದರ್ಶಗಳು ಒಂದು ಕಡೆ ಆಚರಣೆಗಳು ಒಂದು ಕಡೆ ಆಗಿದೆ. ಎಲ್ಲಾ ಕಾಲದಲ್ಲಿ ಇದ್ದ ಹಾಗೆ ಈ ಕಾಲದಲ್ಲೂ ಒಂದಷ್ಟು ಸಮಾಜಘಾತಕ ಶಕ್ತಿಗಳು ಇದ್ದೇ ಇವೆ. ಅವುಗಳನ್ನು ಹೊಸಕಿ ಹಾಕಲೇ ಬೇಕು. ಅವರು ಯಾರೇ ಆಗಿರಲಿ ಅದರಲ್ಲಿ ಮುಲಾಜು ಇರಕೂಡದು.

ಆದರೆ ಕಳೆದ ಎರಡು ದಿನಗಳಿಂದ ಕೆಲವು ಅನುಮಾನಾಸ್ಪದ ಗುಂಪುಗಳು ಸೇರಿಕೊಂಡು ಮಣಿಪುರದ ಘಟನೆಯನ್ನು ಹಿಂದೆಂದೂ ನಡೆದಿರದ ರಾಷ್ಟ್ರೀಯ ದುರಂತವೆಂಬಂತೆ ಬಿಂಬಿಸುತ್ತಾ ಭಾರತದ ಮಾನವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಹರಾಜು ಕೂಗುತ್ತಿರುವುದನ್ನು ತಾವು ಗಮನಿಸಿರಬಹುದು. ಈ ಘಟನೆಯ ಬಗ್ಗೆ ಯುರೋಪಿಯನ್ ಒಕ್ಕೂಟ ಮಾತನಾಡುತ್ತಿದೆ! ಭಾರತದ ವಿರುದ್ಧ ಕ್ರೈಸ್ತ ಸಂಘಟನೆಗಳು 670 ಪತ್ರಿಕಾಗೋಷ್ಠಿಯನ್ನು ನಡೆಸಿವೆ. ವಿಶ್ವ ಮಾನವ ಹಕ್ಕು ಆಯೋಗ ಮಣಿಪುರಕ್ಕೆ ಬರಲು ಅನುಮತಿ ಕೇಳಿದೆ. ಮಣಿಪುರದ ಪ್ರತ್ಯೇಕವಾದಿಗಳು ಇದೇ ಸುಸಂದರ್ಭವೆಂದು ಭಾವಿಸಿ ಪ್ರತ್ಯೇಕ ನಾಡಿಗಾಗಿ ಬೇಡಿಕೆ ಇಟ್ಟಿದ್ದಾರೆ. ಭಾರತ ವಿರೋಧಿಗಳು ಕುಣಿದು ಕುಪ್ಪಳಿಸುತ್ತಿರುವುದನ್ನು ಕಂಡರೆ ಈ ಘಟನೆ ನಡೆಯಬೇಕು ಎಂದು ಅವರು ಬಹುಕಾಲದಿಂದ ಬಯಸಿ ಕುಳಿತಿದ್ದರು ಎಂದು ಕಾಣುತ್ತದೆ. ಅಷ್ಟಕ್ಕೂ ಈ ರೀತಿಯ ಘಟನೆಗಳು ಜಗತ್ತಿನಲ್ಲಿ ಹಿಂದೆ ಯಾವತ್ತೂ ನಡೆದೇ ಇಲ್ಲವೇ?

ಘಟನೆ 1

ಪಶ್ಚಿಮ ಬಂಗಾಳದ ಮಾಲ್ಡ ಜಿಲ್ಲೆಯ ಪಕ್ವಾಹತ್ ಎಂಬಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಕಳ್ಳತನ ನಡೆಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕವಾಗಿ ಸೀರೆ ಎಳೆದು ಬತ್ತಲೆ ಮಾಡಲಾಯಿತು. ಆ ಮಹಿಳೆಯರು ತಮ್ಮ ಮಾನ ಮುಚ್ಚಿಕೊಳ್ಳಲು ಎಷ್ಟೇ ಹರಸಾಹಸ ಪಟ್ಟರೂ ಅವರಿಗೆ ಚಪ್ಪಲಿಯಿಂದ ಥಳಿಸಿ ಸಂಪೂರ್ಣವಾಗಿ ನಗ್ನಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅವರ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿದೆ. ಆದರೆ ಈ ಘಟನೆ ರಾಷ್ಟ್ರೀಯ ಸುದ್ದಿ ಆಗಲೇ ಇಲ್ಲ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮತ್ತು ಸಚಿವೆ ಶಶಿ ಪಂಜಾ ಅವರು ಅದೊಂದು ಕ್ಷುಲ್ಲಕ ಘಟನೆ ಎಂದಿದ್ದಾರೆ!

“ಬೇಚಾರ ಸಭಿ ಗರೀಬ್ ಹೈ…ಆಬ್ ಕಪ್ಡೆ ನಿಕಲ್ ಗಯೇ…ಜಿತ್ನಾ ಭಿ ನಿಕ್ಲಾ ಹೈ… ಉಸ್ಕೊ ರಾಜನೀತಿ ಕೆ ಚಶ್ಮೇಂ ಸೆ ಕ್ಯೂ ದೇಖ್ ರಹಾ ಹೈ (ಎಲ್ಲರೂ ಬಡವರು...ಹೌದು ಹೆಂಗಸರು ಹೇಗೋ ಬಟ್ಟೆ ತೊಟ್ಟಿದ್ದರು..ಏನೇ ಆಗಲಿ...ಯಾವುದಾದರೂ ಕ್ಷುಲ್ಲಕ ಘಟನೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬತ್ತಲೆಗೊಂಡ ಮಹಿಳೆಯರನ್ನು ಕಳ್ಳರು ಎಂದು ಒತ್ತಿ ಒತ್ತಿ ಹೇಳುತ್ತಾ ಬತ್ತಲೆ ಗೊಳಿಸಿದ ಗುಂಪಿನಲ್ಲಿ ಮಹಿಳೆಯರು ಇದ್ದರು ಎನ್ನುವುದನ್ನು ಉಲ್ಲೇಖಿಸಿ ಇದೊಂದು ಗಂಭೀರ ಅಪರಾಧವಲ್ಲ ನಮ್ಮಲ್ಲಿ ಇದು ಮಾಮೂಲು ಎನ್ನುವ ಹಾಗೆ ಮಾತನಾಡಿದ್ದಾರೆ. ಹೇಳಿ ಕೇಳಿ ಇವರು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ!

ಮಣಿಪುರದ ಘಟನೆ ಮೇ ತಿಂಗಳಲ್ಲಿ ನಡೆದರೆ ಮಾಲ್ಡಾದ ಘಟನೆ ನಡೆದಿದ್ದು ಮೊನ್ನೆ 19 ನೇ ತಾರೀಕಿಗೆ. ಇದರ ಬಗ್ಗೆ ನಮ್ಮ ಪ್ಲೇ ಕಾರ್ಡ್ ಹೋರಾಟಗಾರರು ಮಹಿಳಾವಾದಿಗಳು ಕೊಂಚ ಗಮನಹರಿಸಬೇಕಿದೆ. ಇಲ್ಲದೆ ಹೋದರೆ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರ ಮಹಿಳಾ ಹಕ್ಕು ಮತ್ತು ಮಾನವ ಹಕ್ಕುಗಳು ಪ್ರಶ್ನಿಸಲ್ಪಡುತ್ತವೆ ಎಂದು ತಾವೇ ಒಪ್ಪಿಕೊಂಡಾಗುತ್ತದೆ.

ಘಟನೆ 2

8 ಜುಲೈ 2023 ಹೌರಾದ ಪಾಂಚ್ಲಾದಲ್ಲಿ ತ್ರುಣಮೂಲ ಕಾಂಗ್ರೆಸ್ಸಿನ ಗ್ರಾಮ ಪಂಚಾಯತ ಸದಸ್ಯ ಹೇಮಂತ ರಾಯ್ ಎಂಬಾತ ತನ್ನ ಎದುರು ಚುನಾವಣೆಗೆ ನಿಂತ ಮಹಿಳೆಯನ್ನು ಪೋಲಿಂಗ್ ಬೂತಿನಿಂದ ಹೊಡೆದು ಹೊರದಬ್ಬಿದ್ದಲ್ಲದೆ ಹೊರಗಡೆ ನಿಂತಿದ್ದ 40 50 ತೃಣಮೂಲ ಕಾರ್ಯಕರ್ತರಿಗೆ ಆಕೆಯನ್ನು ಬತ್ತಲೆ ಮಾಡಲು ಸೂಚಿಸಿದ. ಆಸೀಫ್ ಶೇಕ್ ನೂರ್ ಆಲಂ ಸಂಜು ದಾಸ್ ಮೊದಲಾದವರು ಸೇರಿ ಆಕೆಯ ಒಳ ಉಡುಪನ್ನೂ ಬಿಡದೆ ವಿವಸ್ತ್ರಗೊಳಿಸಿ ಸಾರ್ವಜನಿಕರ ಮುಂದೆ ಅಪಮಾನಿಸಿದ್ದಲ್ಲದೆ ದೈಹಿಕ ಹಲ್ಲೆಯನ್ನು ನಡೆಸಿದರು. ಆದರೆ ಬಂಗಾಳದ ದೀದಿಅಮೀನ್ ಸರ್ವಾಧಿಕಾರದಲ್ಲಿ ಇದೆಲ್ಲ ಮಾಮೂಲ್. ತನಿಖೆ ಶಿಕ್ಷೆ ಬಿಡಿ ಇವತ್ತಿನವರೆಗೆ ಕನಿಷ್ಠ ಎಫ್ಐಆರ್ ಕೂಡ ದಾಖಲಾಗಿಲ್ಲ.

ಘಟನೆ 3

2010ರ ಘಟನೆ ಬಂಗಾಳದ ಕಲ್ಕತ್ತಾಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರುವ ಗ್ರಾಮ ಒಂದರಲ್ಲಿ ಬುಡಕಟ್ಟು ಯುವತಿಯನ್ನು ನೂರಾರು ಜನರ ತಂಡ ನಗ್ನಗೊಳಿಸಿ ಸುಮಾರು ಎಂಟು ಕಿಲೋಮೀಟರ್ ನಷ್ಟು ಕಾಲ್ನಡಿಗೆಯಲ್ಲಿ ನಡೆಸುತ್ತಾ ಇವತ್ತಿಗೆ ಬಹಿರಂಗವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಇದರ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಯಿತು. ಆದರೆ ಈ ಘಟನೆ ಮಣಿಪುರದ ರೀತಿ ಪ್ರಚಾರ ಪಡೆಯಲಿಲ್ಲ ಏಕೆಂದರೆ ಅಲ್ಲಿ ಪ್ರಗತಿಪರರ ಪಾಲಿನ ಮಹಾಮತೆ ಮಮತಾ ಬ್ಯಾನರ್ಜಿ ಸರಕಾರವಿದೆ.

ಘಟನೆ 4

ನಾಲ್ಕು ವರ್ಷದ ಹಿಂದೆ ಬಿಹಾರದ ಆರಾದಲ್ಲಿ ಯುವಕನೊಬ್ಬನ ಹತ್ಯೆ ಮಾಡಿದ್ದಾಳೆ ಎಂಬ ಸಂಶಯದ ಮೇರೆಗೆ ಮಹಿಳೆಯನ್ನು ಬತ್ತಲೆಗೊಳಿಸಿ ಮೆರವಣಿಗೆ ಮಾಡಲಾಯಿತು ಆಕೆಗೆ ಮಾರಣಾಂತಿಕವಾಗಿ ಥಳಿಸಲಾಯಿತು. ಅವಳ ಮನೆಯನ್ನೇ ಸುಟ್ಟು ಹಾಕಿದರು. ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆ ಡಿ ಪಕ್ಷದ ಕಮಲ್ ಕಿಶೋರ್ ಮತ್ತಿತರರನ್ನು ಈ ಪ್ರಕರಣದಲ್ಲಿ ಬಂಧಿಸಲಾಯಿತು. ಆದರೆ ಆಡಳಿತರೂಢ ನಿತೀಶ್ ಕುಮಾರ್ ಅವರಿಗೆ ಈ ಪ್ರಕರಣದ ಬಿಸಿ ತಟ್ಟಲಿಲ್ಲ. ಏಕೆಂದರೆ ಅವರು ಲಿಬರಲ್ಸ್ ಗಳು ಮತ್ತು ತುಕುಡಿ ಗ್ಯಾಂಗ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

ಈ ಪ್ರಕರಣ ಇಲ್ಲಿಗೆ ಮುಗಿಯುವುದಿಲ್ಲ RSS Paraded Christian Woman Naked in Bihar ಎಂಬ ತಲೆ ಬರಹ ಕೊಟ್ಟು ಇದನ್ನು ಓರ್ವ ವ್ಯಕ್ತಿ ಟ್ವೀಟ್ ಮಾಡುತ್ತಾನೆ. ಇದು ಒಂದೇ ದಿನದಲ್ಲಿ ಆರು ಸಾವಿರ ರೀಟ್ವೀಟ್ ಆಗುತ್ತದೆ. 5,000 ಜನರು ಇದನ್ನು ಲೈಕ್ ಮಾಡುತ್ತಾರೆ. ಟ್ವಿಟರ್ ನಲ್ಲಿ ಇದು ಟ್ರೆಂಡಿಂಗ್ ಸಂಗತಿಯಾಗಿ ಇಡೀ ಜಗತ್ತಿನ ಜನರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಒಂದು ಅಭಿಪ್ರಾಯ ರೂಪಿಸುತ್ತದೆ. ಭಾರತದಲ್ಲಿ ನಡೆಯುವ ಘಟನೆಗಳನ್ನು ವಿದೇಶಿಯರ ಮುಂದೆ ನಮ್ಮ ಮಧ್ಯದಲ್ಲಿರುವ ವೈರಿಗಳು ಹೇಗೆ ಬಿಂಬಿಸುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಮಣಿಪುರದ ಬೆತ್ತಲೆ ಮೆರವಣಿಗೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆ ಬಿಜೆಪಿ, ನರೇಂದ್ರ ಮೋದಿ,ಬಿರೇನ್ ಸಿಂಗ್ ವಿರುದ್ಧ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ಅವರ ಸಂಚು ಇರುವುದು ಭಾರತದ ಅಖಂಡತೆಯ ವಿರುದ್ಧ. ಮೈತೆ ಮತ್ತು ಕುಕಿಗಳ ಜನಾಂಗೀಯ ಗಲಾಟೆಯನ್ನೇ ಗರಗಸ ಮಾಡಿಕೊಂಡು ಮಣಿಪುರವನ್ನು ಅಡ್ಡಡ್ಡ ಸೀಳಲು ಭಾರಿ ಯೋಜನೆ ಸಿದ್ಧವಾಗಿದೆ.
ಈ ಒಂದು ಘಟನೆಯನ್ನೇ ಮುಂದಿಟ್ಟುಕೊಂಡು ಮಣಿಪುರದ ಮೂಲ ಸಮಸ್ಯೆಯನ್ನು ಜನರ ಕಣ್ಣಿನಿಂದ ಮರೆಮಾಡಿ ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಶಕ್ತಿಗಳನ್ನು ಬಲಪಡಿಸುವ ಕಾರ್ಯಭರದಿಂದ ನಡೆಯುತ್ತಿದೆ. ಮಣಿಪುರದ ಗುಡ್ಡ ಭಾಗವನ್ನು ಯೂನಿಯನ್ ಟೆರಿಟರಿ ಮಾಡಬೇಕು ಎಂದು ಹೊಸ ಹೋರಾಟ ಆರಂಭವಾಗಿದೆ. ಇದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ನಡೆಯುತ್ತಿದೆ. ಕುಕಿ ಬುಡಕಟ್ಟುಗಳು ಇವತ್ತು ಬುಡಕಟ್ಟುಗಳಾಗಿ ಉಳಿದಿಲ್ಲ ಅವರಿಗೆ ಅವರ ಸಂಸ್ಕೃತಿ ಸಂಪೂರ್ಣ ಮರೆತು ಹೋಗಿ ಅವರು ಪ್ಯಾಂಟು ಟಿ-ಶರ್ಟ್ ಸಿಕ್ಕಿಸಿಕೊಂಡು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ದೇಶದ ಒಳಗಡೆ ಅನುಕಂಪ ಗಳಿಸಲು, ಸಾಂವಿಧಾನಿಕ ಸಂರಕ್ಷಣೆ ಪಡೆಯಲು ಅವರನ್ನು ಬುಡಕಟ್ಟುಗಳೆಂದು ಬಿಂಬಿಸಿದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಗಲಭೆಪೀಡಿತ ಕ್ರೈಸ್ತರು ಎಂದು ದುಡ್ಡು ಎತ್ತಲಾಗುತ್ತದೆ.
ಸಾವಿರಾರು ಎಕರೆಯಲ್ಲಿ ಅಗಾಧ ಪ್ರಮಾಣದಲ್ಲಿ ನಡೆಯುತ್ತಿರುವ ಅಪೀಮು ಕೃಷಿ, ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕಟ್ಟಲಾಗಿರುವ ನೂರಾರು ಚರ್ಚೆಗಳು, ಚೀನಾದಿಂದ ಅವ್ಯಾಹತವಾಗಿ ಹರಿದು ಬರುತ್ತಿರುವ ಮದ್ದು ಗುಂಡು ಶಸ್ತ್ರಾಸ್ತ್ರಗಳು.. ತಲೆಹಿಡುಕ ಎನ್‌ಜಿಒಗಳು.. 36ಕ್ಕೂ ಅಧಿಕ ಪ್ರತ್ಯೇಕತಾವಾದಿ ಉಗ್ರ ಸಂಘಟನೆಗಳು.. ಮಣಿಪುರದ ಕಥೆ ಎಣಿಸಿದಷ್ಟು ಸರಳವಿಲ್ಲ .
ಇನ್ನೊಂದು ಲೇಖನ ವಿವರವಾಗಿ ಬರೆಯುತ್ತಾನೆ.


ಜೈ ಮಹಾಕಾಲ್.

19/07/2023

ವೈಯಕ್ತಿಕ ಟೀಕೆಯನ್ನು ನಿಲ್ಲಿಸಬೇಕು. ನಮ್ಮ ಅಭಿಮಾನಿಗಳು ರೆಡಿ ಇದ್ದಾರೆ,ಏನಾದರೂ ಮಾಡಲಿಕ್ಕೆ. ಆದರೆ ನಾನು ಅವರಿಗೆ ಏನೂ ಮಾಡಬೇಡಿ, ನೈತಿಕ ಶಕ್ತಿಯೇ ದೊಡ್ಡದು ಎಂದಿದ್ದೇನೆ. ಧರ್ಮಸ್ಥಳದ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡಿರುವ ಡಾ ವೀರೇಂದ್ರ ಹೆಗ್ಗಡೆ.

2021 ಡಿಸೆಂಬರ್   ರಾಜಸ್ಥಾನದ ಅಜ್ಮೀರ್ ನ್ಯಾಯಾಲಯದ  ಪೋಸ್ಕೋ  ಕೋರ್ಟ್. ನಡು ವಯಸ್ಸಿನ ಮಹಿಳೆಯೊಬ್ಬರನ್ನು  31 ವರ್ಷ ಹಳೆಯ ಪ್ರಕರಣ ಒಂದರ ಬಗ್ಗೆ...
16/07/2023

2021 ಡಿಸೆಂಬರ್ ರಾಜಸ್ಥಾನದ ಅಜ್ಮೀರ್ ನ್ಯಾಯಾಲಯದ ಪೋಸ್ಕೋ ಕೋರ್ಟ್.

ನಡು ವಯಸ್ಸಿನ ಮಹಿಳೆಯೊಬ್ಬರನ್ನು 31 ವರ್ಷ ಹಳೆಯ ಪ್ರಕರಣ ಒಂದರ ಬಗ್ಗೆ ವಿಚಾರಣೆ ಮಾಡಲಾಗುತ್ತಿತ್ತು. 30 ವರ್ಷದಿಂದ ಕೋರ್ಟಿಗೆ ಅಲೆದು ಅಲೆದು ಬಳಲಿ ಬೆಂಡಾಗಿದ್ದ ಆ ಮಹಿಳೆಯ ಸಹನೆಯ ಕಟ್ಟೆ ಸಿಡಿಯಿತು.
ಮೈ ಲಾರ್ಡ್ ದಯವಿಟ್ಟು ನನ್ನನ್ನು ಬಿಟ್ಟುಬಿಡಿ. 30 ವರ್ಷದಿಂದ ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಆರೋಪಿಗಳು ಸಮಾಜದಲ್ಲಿ ಬಹಳ ಗೌರವ್ಯಯುತವಾಗಿ ಬದುಕುತ್ತಿದ್ದಾರೆ. ಅದರ ನಾವು ಮಾತ್ರ ಇನ್ನೂ ಶಿಕ್ಷೆ ಅನುಭವಿಸುತ್ತಲೇ ಇದ್ದೇವೆ. ಮತ್ತೆ ಮತ್ತೆ ನಮ್ಮ ಮೇಲೆ ಆದ ಗಾಯವನ್ನು ನೀವು ಕೆರೆದು ಹಸಿ ಮಾಡುತ್ತಿದ್ದೀರಿ. ನನಗೆ ಮದುವೆಯಾಗಿ ಮಕ್ಕಳಾಗಿ ಈಗ ಮೊಮ್ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಪ್ಲೀಸ್ ನನ್ನನ್ನು ಬಿಟ್ಟುಬಿಡಿ.. ನಿಮಗೆ ದಮ್ಮಯ್ಯ ಅಂತೀನಿ ನನ್ನನ್ನು ದಯವಿಟ್ಟು ಬಿಟ್ಟು ಬಿಟ್ಟು ಬಿಡಿ.. ಆ ಮಹಿಳೆ ಗೋಳೋ ಎಂದು ಬಿಕ್ಕಿ ಬಿಕ್ಕಿ ಅತ್ತಳು. ಮೌನವೇ ಮಡುಗಟ್ಟಿದ್ದ ಆ ಕೋರ್ಟ್ ಕೋಣೆಯ ಒಳಗೆ ಹೆಣ್ಣೊಬ್ಬಳ ಅಸಹಾಯಕ ಅಳು ಕಾನೂನಿನ ಮುಂದೆ ಅರಣ್ಯ ರೋಧನವಾಗಿ ಪ್ರತಿಧ್ವನಿಸಿತು.
ನಿಮಗೆ ದಮ್ಮಯ್ಯ ಅಂತೀನಿ ಪ್ಲೀಸ್ ನನ್ನನ್ನು ಬಿಟ್ಟುಬಿಡಿ.. ಎನ್ನುವ ಚೀತ್ಕಾರ ಇದೇ ಮಹಿಳೆಯ ಬಾಯಿಯಿಂದ ಆ ಅಜ್ಮೀರ್ ಚಿಸ್ತಿಯ ದರ್ಗಾದ ಒಳಗೆ ಸಣ್ಣಗೆ ಮೊಳಗಿತ್ತು. ಸುಮಾರು 30 ವರ್ಷದ ಹಿಂದೆ. ಆಕೆಯ ಕೂಗು ಕೋಣೆ ಬಿಟ್ಟು ಹೊರಗೆ ಹೋಗದಂತೆ ಒಬ್ಬ ದಡಿಯ ಅವಳ ಬಾಯಿಯನ್ನು ಮುಚ್ಚಿ ಹಿಡಿದಿದ್ದ. ಹೊರಗೆ ಖವ್ವಾಲಿ ಹಾಡಿನ ಭರಾಟೆ ಜೋರಾಗಿ ಕೇಳುತ್ತಿತ್ತು. ಚಿಸ್ತಿಯ ದರ್ಗಾದ ಪಕ್ಕದಲ್ಲಿರುವ ಗೆಸ್ಟ್ ರೂಮಿನ 26ನೇ ನಂಬರಿನ ಕೋಣೆಯಲ್ಲಿ ಅನಾಮತ್ತು ಏಳು ಜನರು ಆ ಕಾಲಕ್ಕೆ ಹತ್ತನೇ ತರಗತಿ ಓದುತ್ತಿದ್ದ ಈ ಯುವತಿಯ ಹಸಿ ದೇಹವನ್ನು ಹುರಿದು ಮುಕ್ಕಿದರು. ಅತ್ಯಾಧುನಿಕ ಕ್ಯಾಮರಗಳು ಇವರ ರಾಕ್ಷಸಿ ಕೃತ್ಯದ ಫೋಟೋ ಕ್ಲಿಕ್ಕಿಸುತ್ತಿದ್ದವು. ಇದು ಅಜ್ಮೇರಿನ ಚಿಸ್ತಿಯ ದರ್ಗಾದಲ್ಲಿ ನಡೆಯುತ್ತಿದ್ದ ನಿರಂತರವಾಗಿ ನಡೆಯುತ್ತಾ ಬಂದಿದ್ದ ಸಾಮೂಹಿಕ ಅತ್ಯಾಚಾರದ ಒಂದು ಕಥೆ. ಸಿಐಡಿ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಈ ರೀತಿಯ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದವರು 250ಕ್ಕೂ ಅಧಿಕ ಹಿಂದು ಯುವತಿಯರು.
ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದ ಹೇಯಕೃತ್ಯ ಧರ್ಮದ ಹೆಸರಿನಲ್ಲಿ ದುಖಾನು ತೆರೆದಿಟ್ಟ ದರ್ಗಾ ಕಮಿಟಿಯ ಮುತುವರ್ಜಿಯಲ್ಲಿ 1980 ರಿಂದ 1992ರವರೆಗೆ ನಡೆದಿತ್ತು.

ಅಜ್ಮೀರ್ ಬ್ರಿಟಿಷರ ಕಾಲದಲ್ಲೇ ಅತ್ಯಂತ ಶ್ರೀಮಂತನಗರ. ಕಾರಣವಿದೆ. ರಾಜಸ್ಥಾನದ ಬಹುತೇಕ ಬಹು ಪ್ರದೇಶಗಳು ಆವತ್ತು ರಾಜ ಮಹಾರಾಜರ ಹಿಡಿತದಲ್ಲಿದ್ದರೆ ಈ ಒಂದು ನಗರ ಮಾತ್ರ ಬ್ರಿಟಿಷರ ನೇರ ಆಳ್ವಿಕೆಯಲ್ಲಿತ್ತು. ಹಾಗಾಗಿ ಬ್ರಿಟಿಷರು ಇಲ್ಲಿ ಹೆಚ್ಚಿನ ಆಡಳಿತಾತ್ಮಕ ಕಚೇರಿಗಳನ್ನು ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳನ್ನು ತೆರೆದಿದ್ದರು. ಸಾವಿರಾರು ಸಂಖ್ಯೆಯ ಅಧಿಕಾರಿಗಳು ಉದ್ಯಮಿಗಳು ಇಲ್ಲಿದ್ದ ಕಾರಣ ಸಹಜವಾಗಿ ಅಜ್ಮೀರ್ ಮೈತುಂಬಿ ಶ್ರೀಮಂತವಾಗಿ ಕಲಾತ್ಮಕವಾಗಿ ಬೆಳೆಯಿತು.

ಸ್ವಾತಂತ್ರ್ಯ ನಂತರ ಕೂಡ ಅನೇಕ ಕಚೇರಿಗಳು ಅಜ್ಮೀರ್ ನಲ್ಲೆ ಉಳಿದವು. ಈ ಅಧಿಕಾರಿಗಳ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುತ್ತಿದ್ದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಸೋಫಿಯಾ ಮಹಿಳಾ ಕಾಲೇಜು. ಈ ಕಾಲೇಜಿನಲ್ಲಿ ಮಕ್ಕಳನ್ನು ಓದಿಸುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿತ್ತು. 90ರ ದಶಕದಲ್ಲಿ ಬಸ್ಸುಗಳಿಗಿಂತ ಹೆಚ್ಚಾಗಿ ಅಜ್ಮೀರ್ ನಲ್ಲಿ ಟಾಂಗಾ ಗಾಡಿಗಳು ಓಡಾಡುತ್ತಿದ್ದವು. ಅದನ್ನು ನಡೆಸುತ್ತಿದ್ದವರು 90 ಪ್ರತಿಶತ ಮುಸಲ್ಮಾನರು. ಶಾಲಾ ಬಾಲಕಿಯರನ್ನು ಟಾಂಗ ಹತ್ತಿಸಿ ಟಾಟಾ ಮಾಡಿ ಕಳುಹಿಸುತ್ತಿದ್ದ ತಂದೆ ತಾಯಿಯಂದಿರಿಗೆ ತಮ್ಮ ಮಕ್ಕಳ ಜೊತೆ ಏನಾಗಬಹುದು ಎಂಬ ಕನಿಷ್ಠ ಕಲ್ಪನೆಯು ಇರಲಿಲ್ಲ. ಡೇ ಟಾಂಗಾವಾಲಗಳು ಶಾಲೆ ಬಿಟ್ಟು ನಂತರ ಹೆಣ್ಣು ಮಕ್ಕಳನ್ನು ನೇರವಾಗಿ ಮನೆಗೆ ಕರೆದುಕೊಂಡು ಬಾರದೆ ಅಜ್ಮೀರ್ ದರ್ಗಾ ಪರಿಸರವನ್ನು ತೋರಿಸುತ್ತೇನೆ ಎಂದು ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದರು. ಹೆಣ್ಣು ಮಕ್ಕಳು ಇವರನ್ನು ಮುಗ್ಧವಾಗಿ ನಂಬಿ ಆಜ್ಮೀರ್ ದರ್ಗಾ ಮತ್ತು ಅಲ್ಲಿರುವ ಐಷಾರಾಮಿ ಪುರಾತನ ಕಟ್ಟಡಗಳನ್ನು ನೋಡಲು ತೆರಳುತ್ತಿದ್ದರು.

ಹೀಗೆ ಹೋದ ಮಕ್ಕಳು ಚಿಸ್ತಿ ಗ್ಯಾಂಗಿನ ಅತ್ಯಾಚಾರಿಗಳ ಬಲೆಗೆ ಬೀಳುತ್ತಿದ್ದರು. ಈ ಅಪ್ರಾಪ್ತ ಯುವತಿಯರ ಮೇಲೆ ನಡೆಯುತ್ತಿತ್ತು ಅಮಾನುಷ ಅತ್ಯಾಚಾರ. ಕೋಣೆಯೊಳಗೆ ಕೂಡಿಹಾಕಿ ಅತ್ಯಾಚಾರ ನಡೆಸಿ ಅದರ ವಿಡಿಯೋ ಚಿತ್ರೀಕರಣ ಮತ್ತು ಫೋಟೋ ತೆಗೆಯಲಾಗುತ್ತಿತ್ತು. ನಿರಂತರ ಬ್ಲಾಕ್ ಮೇಲ್ ನಂತರ ದುಬೈಯಿಂದ ಬರುವ ಅತಿಥಿಗಳಿಗೆ ಈ ಹೆಣ್ಣು ಮಕ್ಕಳ ಪೂರೈಕೆ. ಈ ಇಡೀ ದಂಧೆಯನ್ನು ನಡೆಸುತ್ತಿದ್ದವನು ಫಾರೂಕ್ ಚಿಸ್ತಿ ಎಂಬ ದರ್ಗಾದ ಮುಖ್ಯಸ್ಥ ಮತ್ತು ಆ ಕಾಲದ ಕಾಂಗ್ರೆಸ್ಸಿನ ಯೂತ್ ಪ್ರೆಸಿಡೆಂಟ್!

ದುಬೈ ನಿಂದ ಶ್ರೀಮಂತ ಉದ್ಯಮಿಗಳು , ಐಎಸ್ಐ ಕುಳಗಳು , ದಾವುದ ಇಬ್ರಾಹಿಂನ ಜನರು, ರಾಜಕಾರಣಿಗಳು ಆಜ್ಮೀರ್ ದರ್ಗಾಕ್ಕೆ ಬಂದು ಅಲ್ಲಿ ಒಂದು ಚಾದರ ಹೊದಿಸಿ ಚಿಸ್ತಿಗಳ ಗೆಸ್ಟ್ ರೂಮಿಗೆ ತೆರಳುತ್ತಿದ್ದರು. ಇಲ್ಲಿ ಅವರು ಆಯ್ಕೆ ಮಾಡಿದ ಹೆಣ್ಣು ಮಕ್ಕಳನ್ನು ಪೂರೈಸಲಾಗುತ್ತಿತ್ತು.

ಅವರು ಯಾರೂ ವೇಶ್ಯೆಯರಲ್ಲ. ಅವರೆಲ್ಲ ಶ್ರೀಮಂತ ಮನೆಯ ಮರ್ಯಾದಸ್ತ ಮಕ್ಕಳು. ಆ ಮರ್ಯಾದೆ ಉಳಿಸುವ ದರ್ದ್ದಿಗೆ ಬಿದ್ದು ಗುರುತು ಪರಿಚಯವಿಲ್ಲದ ಕಾಮಕಿರಾತಕರ ತೆಕ್ಕೆಗೆ ಬಿದ್ದು ನರಳುತ್ತಿದ್ದರು. ಆ ಹೆಣ್ಣು ಮಕ್ಕಳ ಮೇಲೆ ನಡೆದ ಹಿಂಸೆಯನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಟಾಂಗಾವಾಲಗಳು ಪುಕ್ಕಟೆ ಕರೆದುಕೊಂಡು ಹೋದರು ಎಂದು ಅಜ್ಮೇರಿನ ದರ್ಗಾ ನೋಡಲು ಹೋಗಿ ತಳವಿಲ್ಲದ ಭಯಾನಕ ಬಾವಿಗೆ ಬಿದ್ದವರ ಸಂಖ್ಯೆ ಲೆಕ್ಕಕ್ಕೆ ಸಿಕ್ಕಿದ್ದು 250 ಮಾತ್ರ. ಇಷ್ಟು ಹುಡುಗಿಯರ ಅಶ್ಲೀಲ ಚಿತ್ರಗಳು ವಿಡಿಯೋಗಳನ್ನು ಫಾರೂಕ್ ಚಿಸ್ತಿ ಮತ್ತು ಆತನ ಗುಂಪು ಸಂಗ್ರಹ ಮಾಡಿಟ್ಟುಕೊಂಡಿತ್ತು. ಆ ನರಾಧಮರು ಕರೆದಾಗ ಬರಲೇಬೇಕು. ಅಬ್ಬಾ ಕಲ್ಪಿಸಿಕೊಳ್ಳುವಾಗಲೇ ಕರುಳು ಹಿಸುಕಿದ ಅನುಭವವಾಗುತ್ತದೆ.

1992 ಸೆಪ್ಟೆಂಬರ್ ತಿಂಗಳಿನ ಒಂದು ಮುಂಜಾನೆ ಅಜ್ಮೀರ್ ನಗರ ಗರಬಡಿದು ಕೂತಿತ್ತು. ಅಲ್ಲಿನ ಪ್ರಮುಖ ಪತ್ರಿಕೆಯಾದ ದೈನಿಕ್ ನವಜ್ಯೋತಿಯಲ್ಲಿ ಈ ಕರಾಳ ದಂಧೆಯ ರಹಸ್ಯ ಬಯಲು ಮಾಡಿ ಒಂದು ವರದಿ ಪ್ರಕಟವಾಗಿತ್ತು. ಕೇವಲ ವರದಿ ಮಾತ್ರವಲ್ಲ ಅದಕ್ಕೆ ಸಂಬಂಧಿಸಿದ ಹಲವಾರು ಹಸಿ ಬಿಸಿ ಚಿತ್ರಗಳನ್ನು ಕೂಡ ಪತ್ರಿಕೆಯ ಮುದ್ರಿಸಿತ್ತು. ಧಾರ್ಮಿಕತೆಯ ಮುಖವಾಡ ಧರಿಸಿ ಚಿಸ್ತಿಗಳು ಚಾದರದ ಒಳಗೆ ಏನೆಲ್ಲಾ ಮಸ್ತಿ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದು ನಗರದ ಜನ ಬೆಚ್ಚಿಬಿದ್ದರು.
ಪತ್ರಿಕೆ ಮಾರಾಟವಾಗಿ ಅದರ ಜೆರಾಕ್ಸ್ ಕಾಪಿಗಳು ಕೂಡ ಹತ್ತಾರು ರೂಪಾಯಿಗೆ ಬಿಕರಿಯಾದವು. ನರಸತ್ತ ಹಿಂದೂ ಸಮಾಜ ಮೂರು ದಿನ ತನ್ನ ಅಂಗಡಿಗಳನ್ನು ಮುಚ್ಚಿ ಇದಕ್ಕೆ ವಿರೋಧ ಪ್ರದರ್ಶಿಸಿ ಸುಮ್ಮನಾಯ್ತು! ಆವತ್ತಿನ ರಾಜಸ್ಥಾನದ ಬಿಜೆಪಿ ಸರಕಾರ ಪ್ರಕರಣವನ್ನು ಸಿಐಡಿ ಗೆ ವಹಿಸಿತು. ಸಿಐಡಿ ಅಧಿಕಾರಿಗಳು ಸಾವಿರಾರು ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿತು.
ಇದರಲ್ಲಿ 70 ಪ್ರತಿಶತ ಕುಟುಂಬಗಳು ತಮ್ಮ ಮನೆ ಮಕ್ಕಳ ಮೇಲೆ ನಡೆದ ಘೋರ ದೌರ್ಜನ್ಯದ ಬಗ್ಗೆ ಮಾತನಾಡಲು ಕೂಡ ಹೆದರಿದವು.
ಸುಮಾರು 250ಕ್ಕೂ ಅಧಿಕ ಕುಟುಂಬಗಳು ಮಾಹಿತಿ ನೀಡಲು ಮುಂದೆ ಬಂದವು. ಆದರೆ ಎಲ್ಲೂ ತಮ್ಮ ಗುರುತು ಪರಿಚಯವನ್ನು ಹೊರಗೆ ಹೇಳಬಾರದು ಎಂದು ವಿನಂತಿಸಿಕೊಂಡವು.
ಈ ಚಿಸ್ತಿ ಗ್ಯಾಂಗಿನ ಚಿತ್ರಹಿಂಸೆಗೆ ಗುರಿಯಾಗಿ ಆರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಸಂಗತಿ ಸಿಐಡಿ ಅಧಿಕಾರಿಗಳಿಗೆ ತಿಳಿಯಿತು. ಆದರೆ ಏನು ಮಾಡಲು ಸಾಧ್ಯವಿಲ್ಲ ಕಾಲ ಮಿಂಚಿಹೋಗಿತ್ತು. ಕೆಲವರ ಪ್ರಕಾರ ಇದರಲ್ಲಿ ಎಲ್ಲವೂ ಆತ್ಮಹತ್ಯೆಯಲ್ಲ. ಈ ಕರಾಳದಂಧೆಯ ರಹಸ್ಯ ಬಯಲಾಗುತ್ತದೆ ಎಂದು ಒಂದಷ್ಟು ಹುಡುಗಿಯರನ್ನು ಕತ್ತುಹಿಸುಕಿ ಕೊಲೆ ಮಾಡಲಾಗಿತ್ತು. ಆದರೆ ಏನು ಮಾಡೋಣ ಇಡೀ ಅಜ್ಮೀರನ್ನು ಆಳುತ್ತಿದ್ದ ಪ್ರಭಾವಿಗಳ ದೊಡ್ಡ ಪಟಾಲಮ್ಮೇ ಇದರ ಹಿಂದಿತ್ತು. ಪೊಲೀಸ್ ವ್ಯವಸ್ಥೆ ಇಲ್ಲಿ ಅಸಹಾಯಕವಾಗಿತ್ತು

ನೂರಾರು ಸವಾಲುಗಳ ಮಧ್ಯೆ ಡಿಜಿಪಿ ಒಮೆಂದ್ರ ಭಾರಧ್ವಜ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಿತು. ಮುಸ್ಲಿಂ ಸಮಾಜದ ಅತ್ಯಂತ ಪ್ರಭಾವಿಗಳು ಮತ್ತು ಕಾಂಗ್ರೆಸ್ಸಿನ ಕೃಪಾಕಟಾಕ್ಷ ಹೊಂದಿದ್ದ 18 ಜನರ ಮೇಲೆ ಕೇಸು ದಾಖಲಾಯಿತು.

ಆದರೆ ಈ ಭಯಾನಕ ಜಾಲವನ್ನು ಭೇದಿಸಲು ತನಿಖಾಧಿಕಾರಿಗಳಿಗೆ ಎರಡು ರೀತಿಯ ಸಮಸ್ಯೆಗಳು ಎದುರಾದವು. ಆ ಪ್ರಕರಣದಲ್ಲಿದ್ದ ಎಲ್ಲಾ ಆರೋಪಿಗಳು ಒಂದು ನಿರ್ದಿಷ್ಟ ಕೋಮಿಗೆ ಸೇರಿದವರಾಗಿದ್ದರು ಮತ್ತು ಕಾಂಗ್ರೆಸ್ಸಿನ ದೆಹಲಿ ಮಟ್ಟದ ಪ್ರಭಾವ, ಭೂಗತ ಜಗತ್ತಿನ ದುಬೈ ಸಂಪರ್ಕ ಸೇರಿದಂತೆ ಇಲಾಖೆಯ ಒಳಗಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಆರ್ಥಿಕ ಶಕ್ತಿ ಅವರಿಗಿತ್ತು.

ಎರಡನೇ ಸಮಸ್ಯೆಯೆಂದರೆ ದೂರು ನೀಡಲು ಮುಂದೆ ಬಂದಿದ್ದ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಕೇಸಿನಿಂದ ಹಿಂದೆ ಸರಿದರು. ಆಗ ರಾಷ್ಟ್ರೀಯ ಸುದ್ದಿಯಾಗಿದ್ದ ಈ ಪ್ರಕರಣದಲ್ಲಿ ತನ್ನ ಮನೆಮಗಳು ಸಂತ್ರಸ್ತೆ ಎಂದು ತಿಳಿದರೆ ನಾಳೆ ಅವಳನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ ಎ ಎನ್ನುವ ಪ್ರಶ್ನೆ ಹೆತ್ತವರನ್ನು ಕಾಡ ತೊಡಗಿತು. ಇನ್ನು ಈ ಕುಟುಂಬಗಳಿಗೆ ಬರುತ್ತಿದ್ದ ಬೆದರಿಕೆಗಳು ಮಾತ್ರ ಪೊಲೀಸರನ್ನು ಕೂಡ ಹೈರಾಣಾಗಿಸಿದವು.

ಕುಟುಂಬಗಳಿಗೆ ಪತ್ರಿಕೆಗಳ ಕಾಟವೂ ಅತಿಯಾಯಿತು. ನಿಮ್ಮ ಮಗಳ ನಗ್ನ ಫೋಟೋ ಸಿಕ್ಕಿದೆ. ಅಜಮೀರ್ ಗ್ಯಾಂಗ್ ರೇಪ್ ಸುದ್ದಿಯ ಮುಂದಿನ ಸಂಚಿಕೆಯಲ್ಲಿ ನಿಮ್ಮ ಮಗಳ ಚಿತ್ರ ಬರಬಹುದು. ಇಂತಿಷ್ಟು ಸಾವಿರ ಕೊಟ್ಟರೆ ಪ್ರಕಟಿಸುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡ ತೊಡಗಿದವು.

ಇತ್ತ ಸಿಐಡಿ ಅಧಿಕಾರಿಗಳ ಸತತ ಮನವೊಲಿಕೆಯಿಂದಾಗಿ 34 ಯುವತಿಯರು ದೂರು ನೀಡಲು ಮುಂದೆ ಬಂದರು.
ಇದರಲ್ಲಿ ಕೇವಲ 12 ಜನರು ಮಾತ್ರ ಎಫ್ ಐ ಆರ್ ಹಂತದವರೆಗೆ ಸಹಕರಿಸಿದರು. ಕೊನೆಗೆ ಅದರಲ್ಲೂ 10 ಯುವತಿಯರು ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಬಾರದೆ ಅತ್ಯಾಚಾರಿಗಳಿಗೆ ಅನುಕೂಲ ಮಾಡಿದರು. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಅಜ್ಮೀರ್ ಗ್ಯಾಂಗ್ ರೇಪ್ ಪ್ರಕರಣವನ್ನು ದಡ ಮುಟ್ಟಿಸಲು ಕೊನೆಯವರೆಗೆ ಒದ್ದಾಡಿದ್ದು ಕೇವಲ ಇಬ್ಬರೇ ಸಂತ್ರಸ್ತರು.

ಸಂತ್ರಸ್ತ ಇಂದು ಕುಟುಂಬಗಳ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಕೆಲವರು ಮರ್ಯಾದೆಗೆ ಹೆದರಿ ಸರ್ವಸ್ವವನ್ನೂ ಕಳೆದುಕೊಂಡರು.

ಆರೋಪಿಗಳ ಪರವಾಗಿ ಐ ಎಸ್ ಐ ಮತ್ತು ದಾವತ್ ಇ ಇಸ್ಲಾಂ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದವು ಈ ನಡುವೆ ಅಜ್ಮೀರ್ ಮಹಿಳಾ ಸಮೂಹ ಎಂಬ ತಂಡ ಸಂತ್ರಸ್ತ ಕುಟುಂಬಗಳ ಮನವೊಲಿಸಿ ಕೇಸಿಗೆ ಇನ್ನಷ್ಟು ಸಂತ್ರಸ್ತೆಯರನ್ನು ಸೇರಿಸುವ ಪ್ರಯತ್ನ ನಡೆಸಿತು. ಆದರೆ ಇವರಿಗೆ ದುಬೈ ಪಾಕಿಸ್ತಾನ ಮೊದಲಾದ ಕಡೆಗಳಿಂದ ಕೊಲೆ ಬೆದರಿಕೆಗಳು ಬಂದ ಕಾರಣ ಅವರು ಕೂಡ ತೆಪ್ಪಗಾದರು.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶಾರುಖ್ ಚಿಸ್ತಿ ಸಿಜೊಫ್ರೆನಿಯ ಎಂಬ ಕಾಯಿಲೆಯ ರೋಗಿ ಎಂದು ಆತನ ವಕೀಲ ವಾದಿಸಿದ. ಈ ಮಾನಸಿಕ ರೋಗಿ ವಿಶ್ವ ಪ್ರಸಿದ್ಧ ಅಜ್ಮೀರ್ ದರ್ಗಾ ಕಮಿಟಿಯ ಮುಖ್ಯಸ್ಥ ಆಗಿದ್ದು ಹೇಗೆ? ಈತ ಯುವ ಕಾಂಗ್ರೆಸ್ಸಿನ ಮುಖಂಡನಾಗಿದ್ದು ಹೇಗೆ ಎಂದು ಯಾರೂ ಆ ಕಾಲದಲ್ಲಿ ಪ್ರಶ್ನೆ ಮಾಡಲಿಲ್ಲ. ಇದೇ ಕಾರಣ ಮುಂದಿಟ್ಟುಕೊಂಡು ಆತನಿಗೆ ಕಾನೂನಿನಲ್ಲಿ ಕೊಂಚ ಸಡಿಲಿಕೆ ಮಾಡಲಾಯಿತು.

ಇನ್ನೊಬ್ಬ ಆರೋಪಿ ನಫೀಜ್ ಚಿಸ್ತಿ ಕಾಂಗ್ರೆಸಿನ ಉಪಾಧ್ಯಕ್ಷನಾಗಿದ್ದ. ಮತ್ತೊಬ್ಬ ಅನ್ವರ್ ಚಿಸ್ತಿ ಕಾಂಗ್ರೆಸ್ಸಿನ ಜಂಟಿ ಕಾರ್ಯದರ್ಶಿಯಾಗಿದ್ದ ಎಲ್ಲರೂ ಕಾಂಗ್ರೆಸ್ಸಿನ ಕಟ್ಟಾಳುಗಳು! ಉಳಿದ ಆರೋಪಿಗಳಾದ ಮೊಯಿಜುಲ್ಲಾ ಇಶ್ರತ್ ಅಲಿ, ಅನ್ವರ್ ಚಿಶ್ತಿ ಮತ್ತು ಶಂಶುದ್ದೀನ್ ಅವರಿಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಸುಹೇಲ್ ಚಿಶ್ತೀ 26 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದವನು ಕೊನೆಗೆ ಓಡಲಾಗದೆ ಸುಸ್ತಾಗಿ ಶರಣಾದ. ಈ ಕೇಸಿನಲ್ಲಿ 12 ವರ್ಷದ ಸಲೀಂ ಚಿಶ್ತೀ ಎಂಬ ಒಬ್ಬ ಹುಡುಗ ಆರೋಪಿಯಾಗಿದ್ದನು. ಆತ ಪ್ರಕರಣದ ಖುಲಾಸೆಯಾಗುತ್ತಿದ್ದಂತೆ ಓಡಿ ತಪ್ಪಿಸಿಕೊಂಡಿದ್ದ. 2012ರಲ್ಲಿ ಅಜ್ಮೇರಿನ ಖಾಲಿದ್ ಮೊಹಲ್ಲಾದಿಂದ ಆತನನ್ನು ಬಂಧಿಸಲಾಯಿತು. ಗ್ಯಾಂಗ್ ರೇಪ್ ನಡೆಯುವ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಮುಖ ಆರೋಪಿ ಅಲಾಮಸ್ ಇನ್ನೂ ಪರಾರಿಯಾಗಿದ್ದಾನೆ.

ಈಗ ವಿಷಯಕ್ಕೆ ಬರೋಣ. 2018ರ ಜನವರಿ ತಿಂಗಳಲ್ಲಿ ಜಮ್ಮು ಕಾಶ್ಮೀರದ ಕಟುವಾ ಜಿಲ್ಲೆಯ ದೇವಸ್ಥಾನದಲ್ಲಿ ಮುಸ್ಲಿಂ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾಗಿದೆ ಎಂಬ ಸುದ್ದಿ ಹರಡಿತು. ಕೂಡಲೇ ಲಿಬರಲ್ಲುಗಳೆಲ್ಲ ದಿಡಗ್ಗನೆ ಎದ್ದುಗೊಳಿತರು. ಬಾಲಿವುಡ್ ನಲ್ಲಿ ಚಲಾವಣೆಯಲ್ಲಿ ಇಲ್ಲದ ಗುಳಿ ಬಿದ್ದ ಕೆನ್ನೆಯ ಡೆಂಟೆಡ್ ಮತ್ತು ಪೇಂಟೆಡ್ ಗೋಸುಂಬೆಗಳ ದಂಡು ಪ್ಲೇ ಕಾರ್ಡ್ ಹಿಡಿದು ರಸ್ತೆಗೆಳಿಯಿತು. ಸಾಮಾಜಿಕ ಜಾಲತಾಣಗಳ ಪೂರ್ತಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹಿಂದೂ ಮಂದಿರಗಳೆಂದರೆ ಅತ್ಯಾಚಾರದ ಕೇಂದ್ರ ಎಂಬಂತೆ ಬಿಂಬಿಸಲಾಯಿತು.
ಆದರೆ ಈ ಎಲ್ಲಾ ನಾಲಾಯಕರು ಇಂದಿಗೂ ಕೂಡ ಅದೇ ಅತ್ಯಾಚಾರಿ ಚಿಸ್ತಿಯ ದರ್ಗಾಕ್ಕೆ ಚಾದರ ಹೊತ್ತುಕೊಂಡು ಹೋಗುತ್ತಾರೆ. ಈ ಸೀರಿಯಲ್ ಅತ್ಯಾಚಾರ ಪ್ರಕರಣದಲ್ಲಿ ನೇರಭಾಗಿಯಾಗಿದ್ದ ಆರೋಪಿಗಳ ರಕ್ಷಣೆಗೆ ಟೊಂಕಗಟ್ಟಿ ನಿಂತಿದ್ದ ಕಾಂಗ್ರೆಸಿನ ಆಷಾಡಭೂತಿಗಳು ರಾಜ್ಯದಲ್ಲಿ ಹಾಲಪ್ಪ ರೇಣುಕಾಚಾರ್ಯ ಮೊದಲಾದವರನ್ನು ನಿಂದಿಸುತ್ತಾ ಬಿಜೆಪಿ ಪಕ್ಷವನ್ನು ಬ್ಲೂ ಜೆಪಿ ಎಂದು ಗೇಲಿ ಮಾಡುವುದನ್ನು ನಾವು ನೋಡಿದ್ದೇವೆ.
ಹೆಣ್ಣಿನ ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆಯನ್ನಾದರೂ ಈ ಪಕ್ಷ ಉಳಿಸಿಕೊಂಡಿದೆಯೇ ಇಂದು ನಾವು ಪ್ರಶ್ನಿಸ ಬೇಕಿದೆ.

ಅಂದ ಹಾಗೆ ಇದೇ ತಿಂಗಳು ಅಜ್ಮೀರ್ 92 ಹಿಂದಿ ಚಿತ್ರ ತೆರೆ ಮೇಲೆ ಬರುತ್ತಿದೆ. ಮೇಲೆ ಬರೆದ ಸತ್ಯ ಘಟನೆ ಆಧಾರಿತವಾದ ಈ ಚಿತ್ರವನ್ನು ಗೆಲ್ಲಿಸಬೇಕಿರುವುದು ನಮ್ಮ ಜವಾಬ್ದಾರಿ.

ಜೈ ಮಹಾಕಾಲ್.

15/07/2023

ನಾವು ಆವತ್ತು ಕೇವಲ ಸಂಪರ್ಕ ಕಳೆದುಕೊಂಡಿದ್ದೆವು.

ಭರವಸೆ ಕಳೆದುಕೊಂಡಿರಲಿಲ್ಲ..

14/07/2023

ಶಿವಾಜಿ ಮಹಾರಾಜರ ಪ್ರಾಣ ಸಂರಕ್ಷಣೆಗಾಗಿ 10,000 ಮುಸಲ್ಮಾನ್ ಸೈನಿಕರನ್ನು ಕೇವಲ 300 ಸೈನಿಕರ ಜೊತೆ ಎದುರಿಸಿದ ಮಹಾ ಪರಾಕ್ರಮಿ ಬಾಜಿಪ್ರಭು ದೇಶಪಾಂಡೆಯ ಕಥೆ ಇಲ್ಲಿದೆ.

ಅರಬ್ಬರ ಉಪಟಳಕ್ಕೆ ಪೂರ್ಣವಿರಾಮ ಇಡಲು ಇಸ್ರೇಲಿಗೆ   ಹೆಚ್ಚು ಹೊತ್ತೇನು ಬೇಕಾಗಿಲ್ಲ. ಹಿಂದೊಮ್ಮೆ ಆರು ದೇಶಗಳನ್ನು ಏಕಕಾಲದಲ್ಲಿ  ಬೆನ್ನಟ್ಟಿ ಹೋಗ...
13/07/2023

ಅರಬ್ಬರ ಉಪಟಳಕ್ಕೆ ಪೂರ್ಣವಿರಾಮ ಇಡಲು ಇಸ್ರೇಲಿಗೆ ಹೆಚ್ಚು ಹೊತ್ತೇನು ಬೇಕಾಗಿಲ್ಲ. ಹಿಂದೊಮ್ಮೆ ಆರು ದೇಶಗಳನ್ನು ಏಕಕಾಲದಲ್ಲಿ ಬೆನ್ನಟ್ಟಿ ಹೋಗಿ ಬಡಿದು ಬಂದಿದ್ದರು ಇಸ್ರೇಲರು. ಸದ್ಯ ಒಂದು ದಶಕದಿಂದ ಹೊಡೆದಾಟ ಬಡಿದಾಟವೇ ಬದುಕಲ್ಲ ರಕ್ತಪಾತ ಬೇಡ ಎಂದು ಇಸ್ರೇಲಿಗರು ಗನ್ನು ಕೆಳಗಿಟ್ಟು ಮಾನವ ಕಲ್ಯಾಣ ಕಾರ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಹಲವಾರು ಶತ್ರುದೇಶಗಳ ಜೊತೆ ಸ್ನೇಹಸಂಧಿ ಕುದುರಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಇಸ್ರೇಲ್ ಪ್ರಯತ್ನ ಜಾರಿಯಲ್ಲಿದೆ. ಆದರೆ ಅದರ ಆಸುಪಾಸಿನ ದೇಶದಲ್ಲಿರುವ ಮುಸಲ್ಮಾನರೊಳಗೆ ಹೊಕ್ಕಿ ಕೊಂಡಿರುವ ಜಿಹಾದಿನ ಜಂತುಹುಳ ಮಾತ್ರ ಅವರನ್ನು ಸುಮ್ಮನೆ ಕೂರಲು ಬಿಡುತ್ತಿಲ್ಲ.
ಇಸ್ರೇಲನ್ನು ಮಣಿಸಲು ಜಿಹಾದ್ ಜಾರಿಯಲ್ಲಿಡಬೇಕು ಎಂದು ಇರಾನ್ ದೇಶ ಫೇಲಿಸ್ತೇನ್ ಉಗ್ರರಿಗೆ ಭಾರಿ ಪ್ರಮಾಣದಲ್ಲಿ ಫಂಡ್ ಮಾಡುತ್ತಿದೆ. ಬ್ಲಾಕ್ ಸಪ್ಟೆಂಬರ್ , ಹಮಾಸ್ ಬಳಿಕ ಇದೀಗ ಜೆನಿನ್ ಬ್ರಿಗೇಡ್ ಎಂಬ ಹೊಸ ಭಯೋತ್ಪಾದಕ ಸಂಘಟನೆ ತಲೆ ಎತ್ತಿದೆ.
ಇದು ಚಿಗುರಿದ್ದು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇರುವ ಜೆನಿನ್ ನಿರಾಶ್ರಿತರ ಕ್ಯಾಂಪಿನೊಳಗೆ. ಈ ಕ್ಯಾಂಪ್ನಲ್ಲಿ ಪ್ಯಾಲೆಸ್ತೀನಿ ನಿರಾಶ್ರಿತರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಇಸ್ರೇಲಿನೊಳಗೆ ನಿರಾಶ್ರಿತರನ್ನು ತುಂಬಿಸಿ, ಅಲ್ಲಿ ಒಂದಷ್ಟು ಅಶಾಂತಿ ಸೃಷ್ಟಿಸಿ ಆ ಮೂಲಕ ಅದರ ಭೂಪ್ರದೇಶದ ಮೇಲೆ ಮುಸಲ್ಮಾನರನ್ನು ಖಾಯಂಗೊಳಿಸುವುದು ಅರಬ್ಬರ ಸಂಚು.

ಹೊಟ್ಟೆಗೆ ಸರಿಯಾಗಿ ಅನ್ನವಿಲ್ಲದ,ಕೈಯಲ್ಲಿ ದುಡಿಮೆ ಇಲ್ಲದ, ಮುಂದೇನು ಎಂದು ಗೊತ್ತು ಗುರಿ ಇಲ್ಲದ ಅಬ್ಬೇಪಾರಿಗಳೇ ತುಂಬಿರುವ ಈ ಜನಿನ್ ಕ್ಯಾಂಪ್ ನಲ್ಲಿ ಬರೋಬ್ಬರಿ 30,000 ನಿರಾಶ್ರಿತರಿದ್ದಾರೆ! ತಗಡಿನ ಪೆಟ್ಟಿಗೆಗಳು ಮುರುಕಲು ಕಟ್ಟಡಗಳು ಕೋಳಿ ಗೂಡಿನಂತಹ ಕೋಣೆಗಳೊಳಗೆ ಡಜನ್ ಗಟ್ಟಲೆ ಮಕ್ಕಳನ್ನು ಹೆತ್ತುಹಾಕಿ, ನಿಯತ್ತಿನಿಂದ ಆ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನು ಹೊಂದಿಸಲಾಗದ ದಾರಿದ್ರ್ಯವನ್ನೇ ಹೊದ್ದುಕೊಂಡು ಅಲ್ಲಿಯ ಜನರು ಜೀವನ ನಡೆಸುತ್ತಿದ್ದಾರೆ. ಇಸ್ರೇಲ್ ಮೇಲೆ ಅರಬ್ ರಾಷ್ಟ್ರಗಳು ಸೇರಿ ಯುದ್ಧ ಘೋಷಣೆ ಮಾಡಿದಾಗ ಆ ಯುದ್ಧದ ಕಾವಿಗೆ ತತ್ತರಿಸಿ ಊರು ಬಿಟ್ಟ ಪ್ಯಾಲೇಸ್ತಿನಿಗಳೇ ಈ ಶಿಬಿರದಲ್ಲಿರುವ ಬಹು ಸಂಖ್ಯಾತರು. ಇವರಲ್ಲಿ ಧಾರಾಳವಾಗಿರುವುದೆಂದರೆ ಅದು ಯಹೂದಿಗಳ ಮೇಲಿನ ದ್ವೇಷ.

ಈ ಜೆನಿನ್ ನಲ್ಲಿರುವ ಸಾವಿರಾರು ಯುವಕರು ಅತ್ಯಾಧುನಿಕ ರೈಫಲ್ಲುಗಳನ್ನು ಬೆನ್ನಿಗೆರಿಸಿಕೊಂಡು ಇಸ್ರೇಲಿ ಪಡೆಗಳ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾರೆ. ಇಸ್ರೇಲಿನ ಅನೇಕ ಕಡೆಗಳಲ್ಲಿ ಈ ಜಮೀನ್ ಬ್ರಿಗೇಡ್ ವಿದ್ವಂಸಕ ಕೃತ್ಯಗಳನ್ನು ನಡೆಸಿದೆ. ಇಸ್ರೇಲಿನ ಆಂತರಿಕ ಭದ್ರತೆಗೆ ಈ ನಿರಾಶ್ರಿತರು ಸವಾಲಾಗಿ ಪರಿಣಮಿಸಿದ್ದಾರೆ. ತನ್ನ ಸೇನೆ ಮತ್ತು ನಾಗರೀಕರ ಸುದ್ದಿಗೆ ಯಾರೇ ಬಂದರೂ ಇಸ್ರೇಲ್ ಕೈಕಟ್ಟಿ ಕೂರುವುದಿಲ್ಲ. ಕೆಣಕಿದವರನ್ನು ಹೊಸಕಿ ಹಾಕುವುದೇ ಇಸ್ರೇಲಿಗಳ ಕಾರ್ಯ ಶೈಲಿ.

ಜನವರಿ ತಿಂಗಳಿನಿಂದ ಜನೀನ್ ಮೇಲೆ ನೂರಾರು ಬಾರಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ರೈಡ್ ಮಾಡಿದೆ. ಆತಂಕವಾದಿ ಕೃತ್ಯಗಳನ್ನು ನಡೆಸಿದವರನ್ನು ಮುಲಾಜಿಲ್ಲದೆ ಹೊಡೆದು ಹಾಕುತ್ತಿದೆ. ಈವರೆಗೆ 72 ಜನರನ್ನು ಇಸ್ರೇಲಿ ಪಡೆ ಬಲಿ ಹಾಕಿದೆ.

ಜನಿನ್ ಕ್ಯಾಂಪ್ ಪ್ಯಾಲಿಸ್ತೀನಿ ಪ್ರತ್ಯೇಕವಾದಿಗಳ ಭದ್ರಕೋಟೆ ಎಂದು ಕುಖ್ಯಾತಗೊಂಡಿತ್ತು. ಹೆಜ್ಜೇನಿನ ತಡಿಕೆ ಯಂತಿರುವ ಅದರ ಒಳಗೆ ಹೊಕ್ಕರೆ ಹೊರಬರುವುದು ಕಷ್ಟ ಸಾಧ್ಯ. ಇಸ್ರೇಲಿ ಪಡೆಗಳು ಪ್ರವೇಶ ಮಾಡಿದಾಗ ಅವರನ್ನು ನಾಲ್ಕು ಕಡೆಯಿಂದ ಮುತ್ತಿಕೊಳ್ಳುವುದು, ಗುಂಡು ಹಾರಿಸುವುದು, ಪೆಟ್ರೋಲ್ ಬಾಂಬುಗಳನ್ನು ಎಸೆಯುವುದು. ಕೊನೆಗೆ ಮಹಿಳೆಯರು ಮತ್ತು ಮಕ್ಕಳನ್ನು ಮುಂದೆ ಕಳುಹಿಸಿ ಮಾನವ ಹಕ್ಕುಗಳ ದಮನ ಎಂದು ಕಥೆ ಕಟ್ಟುವುದು ನಡೆದೇ ಇದೆ. ಆದರೆ ಈಗ ಆ ಕೋಟೆ ಬಿರುಕು ಬಿಡಲು ಆರಂಭಿಸಿದ್ದು, ಇಸ್ರೇಲಿನ ಹೊಡೆತ ತಾಳಲಾರದೆ ಇಲ್ಲಿರುವ ಪ್ಯಾಲೆಸ್ತೇನಿಗಳ ಆರ್ಭಟ ತಗ್ಗಿ ನಿಧಾನವಾಗಿ ಜಾಗ ಖಾಲಿ ಮಾಡುತ್ತಿದ್ದಾರೆ.

ಪ್ಯಾಲೆಸ್ತೀನ್ ದೇಶದಲ್ಲಿ ಮನೆ ಮಠ ಆಸ್ತಿಪಾಸ್ತಿಗಳಿದ್ದರೂ ಇಸ್ರೇಲಿನ ಮೇಲಿನ ಹಟಕ್ಕೆ ಇಲ್ಲಿ ಬಂದು ನೆಲೆಸಿದ್ದ ಪ್ಯಾಲೆಸ್ತೀನಿ ವಲಸಿಗರು ಈಗ ಗಂಟು ಮೂಟೆ ಕಟ್ಟಿ ಜಾಗ ಖಾಲಿ ಮಾಡುತ್ತಿದ್ದಾರೆ.

ಉಗ್ರಗಾಮಿ ವಿದ್ವಾಂಸಕ ಕೃತ್ಯ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ , ಮಾದಕ ದ್ರವ್ಯ ಸಾಗಾಟ, ಹೀಗೆ ಅನೇಕ ರೀತಿಯ ಸಮಾಜಘಾತಕ ಚಟುವಟಿಕೆಗಳು ಈ ನಿರಾಶ್ರಿತರ ಶಿಬಿರಗಳಿಂದ ನಡೆಯುತ್ತಿದೆ. ಜನವರಿ ತಿಂಗಳಲ್ಲಿ ಇಲ್ಲಿ ತಪಾಸಣೆಗೆ ಬಂದ ಇಸ್ರೇಲಿ ಸೇನೆಯ ವಿರುದ್ಧ ಪ್ಯಾಲೆಸ್ತೆನ್ ನಿರಾಶ್ರಿತರು ಪ್ರತಿಭಟನೆ ನಡೆಸಿದ್ದಲ್ಲದೆ ಸಂಘರ್ಷಕ್ಕೆ ನಿಂತು ಬಿಟ್ಟರು. ಇದು ತೀವ್ರ ಸ್ವರೂಪ ಪಡೆದುಕೊಂಡು 12 ನಿರಾಶ್ರಿತರು ಸೇನೆಯ ಗುಂಡಿಗೆ ಬಲಿಯಾಗಿದ್ದರು.

ಇಲ್ಲಿ ಸತ್ತವರಲ್ಲಿ ಹೆಚ್ಚಿನವರು ಜನಿನ್ ಬ್ರಿಗೇಡ್ ಎಂಬ ಉಗ್ರಗಾಮಿ ಸಂಘಟನೆಯ ಸದಸ್ಯರಾಗಿದ್ದಾರೆ. ಈ ಸಂಘಟನೆ ಹಮಾಸ್ ಸಂಘಟನೆಯ ಸೂಚನೆಯ ಮೇರೆಗೆ ಇಸ್ರೇಲ್ ನೊಳಗೆ ಉಗ್ರಗಾಮಿ ಕೃತ್ಯಗಳನ್ನು ನಡೆಸುತ್ತದೆ.

1953ರಲ್ಲಿ ಆರಂಭವಾದ ಈ ಕ್ಯಾಂಪಿನಲ್ಲಿ ಸುಮಾರು 26 ಸಾವಿರ ಜನರಿದ್ದರು. 2002ರಲ್ಲಿ ಇಲ್ಲಿರುವ ಮುಸಲ್ಮಾನ ಉಗ್ರರ ಕಾಟ ಮಿತಿಮೀರಿದಾಗ ಇಸ್ರೇಲ್ ಟ್ಯಾಂಕರ್ ಗಳನ್ನೇ ನುಗ್ಗಿಸಿ ಉಗ್ರಗಾಮಿಗಳ ದಮನಕ್ಕೆ ಮುಂದಾಗಿತ್ತು ಆಗ 400ಕ್ಕೂ ಅಧಿಕ ಮನೆಗಳು ಧ್ವಂಸಗೊಂಡಿದ್ದವು.

20 ವರ್ಷಗಳ ನಂತರ ವೆಸ್ಟ್ ಬ್ಯಾಂಕಿನಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. ಮಾಧ್ಯಮಗಳು ಹೇಳೋ ಪ್ರಕಾರ 72 ಜನ ಮೊನ್ನೆಯ ದಾಳಿಯಲ್ಲಿ ಸತ್ತಿದ್ದಾರಂತೆ.

ಇಲ್ಲಿ ಇಸ್ಲಾಮಿಕ್ ಜಿಹಾದ್ ಅನ್ನುವ ಮತ್ತೊಂದು ಉಗ್ರಗಾಮಿ ಸಂಘಟನೆ ಸಕ್ರಿಯವಾಗಿದೆ. ಇದರ ಸದಸ್ಯರು ಕೂಡ ಅನೇಕ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದ್ದಾರೆ. ಹತ್ತಾರು ಬಂದೂಕುಗಳನ್ನು ಸುತ್ತಲೂ ಇಟ್ಟುಕೊಂಡು ಕ್ಯಾಮೆರಾ ಕಣ್ಣಿಗೆ ಪೋಸು ಕೊಡುವ ಇದರ ನಾಯಕ ಫಾರೂಕ್ ಸಲಾಮೆಯನ್ನು ಕಳೆದ ವರ್ಷ ಇಸ್ರೇಲ್ ಯೋಧರು ಕೊಂದು ಹ್ಯೂರಿಗಳ ಮಡಿಲಿಗೆ ಹಾಕಿದ್ದರು. ಆದರೆ ಅದರ ಚಟುವಟಿಕೆಗಳು ಇನ್ನೂ ನಿಂತಿಲ್ಲ. ಸಾಮಾನ್ಯ ನಾಗರೀಕರಂತೆ ಮನೆಯಲ್ಲಿ ಅವಿತುಕೊಂಡಿರುವ ಈ ಉಗ್ರರನ್ನು ಹುಡುಕಿ ಹೊಂಚು ಹಾಕಿ ಹೊಡೆಯಲು ಇಸ್ರೇಲ್ ತನ್ನ ಅತ್ಯಧುನಿಕ ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತಿದೆ.

ಮನೆಯ ಕಿಟಕಿ ಬಾಗಿಲು ತೆರೆಯುವುದೇ ತಡ ಹೊರಗಡೆಯಿಂದ ಚಂಗನೇ ತೂರಿಬರುವ ಡ್ರೋನ್ ಗುರಿಯ ಮೇಲೆ ಆರೇಳು ಬುಲೆಟ್ ಹಾರಿಸಿ ಅದೃಶ್ಯವಾಗಿ ಬಿಡುತ್ತದೆ. ಟೆಲ್ ಅವಿವ್ ನಲ್ಲಿ ಕುಳಿತ ಆಪರೇಟರ್ ಗಳು ಎಸಿ ಕೋಣೆಯಲ್ಲಿ ಕುಳಿತುಕೊಂಡು ಉಗ್ರರನ್ನು ಡ್ರೋನ್ ಮೂಲಕ ಹೊಡೆದು ಹಾಕುತ್ತಿದ್ದಾರೆ.

ತಮ್ಮ ಮೊಹಲ್ಲಾಗಳಲ್ಲಿ ಡ್ರೋನ್ ಕಂಡು ಬರುತ್ತಿದ್ದಂತೆ ಜನಿನ್ ಜನರು ಚೆಲ್ಲಾಪಿಲ್ಲಿ ಆಗಿ ಓಡಿ ಮನೆಯೊಳಗೆ ಸೇರಿಕೊಂಡು ಬಾಗಿಲು ಭದ್ರ ಪಡಿಸಿಕೊಳ್ಳುತ್ತಾರೆ. ಇತ್ತೀಚೆಗೆ ಉಗ್ರರು ಗನ್ನುಗಳ ಮೂಲಕ ಆ ಡ್ರೋನ್ ಅನ್ನು ಹೊಡೆದು ಹಾಕುವ ದೃಶ್ಯಗಳು ಕೂಡ ವರದಿಯಾಗಿವೆ.

ಮನೆ ಮಠ ಇಲ್ಲದ ಬೀದಿ ಭಿಕಾರಿಗಳು ಎಂದು ಜಗತ್ತಿನ ಎದುರು ಪೋಸು ಕೊಡುವ ಈ ಪ್ಯಾಲೆಸ್ತೇನಿಗಳ ಕೈಯಲ್ಲಿ ಅತ್ಯಧುನಿಕ ಏಕೆ 47 ಬರುವುದಾದರೂ ಎಲ್ಲಿಂದ ಎನ್ನುವುದಕ್ಕೆ ಉತ್ತರ ಸ್ಪಷ್ಟವಿದೆ. ಇರಾನ್ ದೇಶ ಈ ಮೂರ್ಖ ಪ್ಯಾಲೆಸ್ತೇನಿಗಳನ್ನು ಇಸ್ಲಾಮಿನ ಹೆಸರಲ್ಲಿ ಇಸ್ರೇಲ್ ವಿರುದ್ಧ ಛೂ ಬಿಟ್ಟಿವೆ. ಆದರೆ ಬಹುತೇಕ ಅರಬ್ ದೇಶಗಳು ಇಸ್ರೇಲ್ ಜೊತೆಗೆ ಈಗ ರಾಜತಾಂತ್ರಿಕ ಸಂಬಂಧ ಬಯಸುತ್ತಿವೆ. ಮಿಡಲ್ ಏಷ್ಯಾದಲ್ಲಿ ಇಸ್ಲಾಮಿನ ಆಧಿನಾಯಕನಾಗಬೇಕು ಎಂಬ ಕನಸು ಕಾಣುತ್ತಿರುವ ಇರಾನಿಗೆ ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷ ಎನ್ನುವುದು ಅದರ ಶಕ್ತಿ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದೆ.
ಈ ಒಂದು ವರ್ಷದಲ್ಲಿ ಜನಿನ್ ಬ್ರಿಗೇಡ್ ನಡೆಸಿದ ಭಯೋತ್ಪಾದಕ ಕೃತ್ಯಕ್ಕೆ 24 ಇಸ್ರೇಲಿಗಳು ಬಲಿಯಾಗಿದ್ದಾರೆ
ಜನಿನ್ ಬ್ರಿಗೇಡ್ ಮತ್ತು ಇಸ್ಲಾಮಿಕ್ ಜಿಹಾದ್ ಮಾಡುತ್ತಿರುವ ಈ ಹಿಂಸಾತ್ಮಕ ಹೋರಾಟಗಳಿಗೆ ಇರಾನ್ ಫಂಡ್ ಮಾಡುತ್ತಿದೆ ಎಂದು ಇಸ್ರೇಲಿನ ವಿದೇಶಾಂಗ ಸಚಿವ ಎಲಿ ಕೊಹೇನ್ ಏನು ಹೇಳಿದ್ದಾರೆ. ಉಳಿದ ಅರಬ್ ದೇಶಗಳು ಬಹಿರಂಗವಾಗಿ ಈ ಉಗ್ರಗಾಮಿ ಕೃತ್ಯವನ್ನು ಸಮರ್ಥಿಸದೆ ಇದ್ದರೂ ಕೂಡ ಜನೀನ್ ಕ್ಯಾಂಪ್ ಮರು ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿವೆ. ಯು ಎ ಇ ದೇಶ ಒಂದೂವರೆ ಕೋಟಿ ಡಾಲರ್ ಹಣ ನೀಡಲಿದೆಯಂತೆ!

ಕೊನೆಯ ಮಾತು. ಇಸ್ರೇಲ್ ತನ್ನ ಅದ್ಭುತ ಸಾಹಸದಿಂದ 1967ರ ಯುದ್ಧದಲ್ಲಿ ವೆಸ್ಟ್ ಬ್ಯಾಂಕ್ , ಪೂರ್ವ ಜರುಸಲಂ ಮತ್ತು ಗಾಜಾ ಪಟ್ಟಿಯ ಭೂಮಿಯನ್ನು ವಶಪಡಿಸಿಕೊಂಡಿತು. ಅದನ್ನು ಅವರು ಯುದ್ಧದಲ್ಲಿ ಗೆದ್ದರು. ಕಾಲು ಕೆದರಿ ಯುದ್ಧಕ್ಕೆ ಆಹ್ವಾನಿಸಿ ಕೊನೆಗೆ ನಮ್ಮ ಭೂಮಿ ಹೋಯಿತು ಜನ ಶರಣಾರ್ಥಿಗಳಾದರು ಎಂದು ಕಣ್ಣೀರು ಸುರಿಸುವುದರಲ್ಲಿ ಏನು ಅರ್ಥವಿದೆ.?

ನಿರಾಶ್ರಿತರನ್ನು ವಲಸಿಗರನ್ನು ಒಳ ಬಿಟ್ಟುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಫ್ರಾನ್ಸ್ ಸ್ವೀಡನ್ ದೇಶಗಳು ನಮ್ಮ ಕಣ್ಣ ಮುಂದೆ ಸಾಕ್ಷಿ ನಡೆಯುತ್ತಿವೆ. ಭಾರತದಲ್ಲೂ ತುಂಬಿಕೊಂಡಿರುವ ಬಾಂಗ್ಲಾದೇಶಿಗರನ್ನು ರೋಹಿಂಗ್ಯಾ ಮುಸಲ್ಮಾನರನ್ನು ಗಂಡು ಮೂಟೆ ಸಮೇತ ಹೊರದಬ್ಬದಿದ್ದರೆ ಇಲ್ಲಿಯೂ ದೊಂಬಿ ಗಲಭೆ ರಕ್ತಪಾತ ನಡೆಯುವುದು ಶತಸಿದ್ಧ. ಬೆಂಗಳೂರಿನ ಅನೇಕ ಕೊಳಚೆ ಪ್ರದೇಶಗಳಲ್ಲಿ ಬಾಂಗ್ಲಾದೇಶಿಯರ ಜನಿನ್ ಮಾದರಿಯ ಶಿಬಿರಗಳು ತಲೆ ಎತ್ತುತ್ತಿವೆ.

ದುಡ್ಡಿಗಾಗಿ ಮತ್ತು ಓಟಿಗಾಗಿ ಹೆತ್ತ ತಾಯಿಯನ್ನೂ ತಲೆಹಿಡಿಯಲು ಹೇಸದ ನೀಚರು ಆ ಗಡಿ ನುಸುಳಿ ಬಂದ ಪರದೇಶಿಗಳಿಗೆ ಓಟು ಕಾರ್ಡು ಆಧಾರ್ ಕಾರ್ಡು ಸರಕಾರಿ ಮನೆ ಸಮೇತ ಮಾಡಿ ಕೊಡುತ್ತಿದ್ದಾರೆ. ದೆಹಲಿಯ ಕೇಜ್ರಿವಾಲ್ ಅವುಗಳಿಗೆ ಮನೆಮನೆಗೆ ಏರ್ ಕೂಲರ್ ಕೊಟ್ಟು ಬಂದಿದ್ದಾನಂತೆ!

ಇದು ಇಂಡಿಯಾ ಮತ್ತು ಇಸ್ರೇಲ್ ಮದ್ಯ ಇರುವ ವ್ಯತ್ಯಾಸ.

ಜೈ ಮಹಾಕಾಲ್.

12/07/2023

ಉಡುಪಿಯಲ್ಲಿ ಕುಡುಕರಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ.. ಬೆಳಿಗ್ಗೆ ಮತ್ತು ಸಂಜೆ ಉಚಿತವಾಗಿ 90,90 ಕೊಡುವಂತೆ ಸಿದ್ದರಾಮಯ್ಯರಿಗೆ ಆಗ್ರಹ.

07/07/2023

ಏಕೆ ಮಲಗಿದೆ ಹರಿ ಏನು ಆಯಾಸ?

ರಚನೆ : ಗೋಪಾಲದಾಸರು

ಗಾಯನ : ಗಾರ್ಗಿ ಶಬರಾಯ

ರಾಗ : ಜೋಗ್

06/07/2023

ಉಡುಪಿ ನಗರ ಭಾಗದಲ್ಲಿ ಉಕ್ಕಿಹರಿದ ಇಂದ್ರಾಣಿ ನದಿ ಜನ ಜೀವನ ಅಸ್ತವ್ಯಸ್ತ.

30/06/2023

ಇದು 48 ವರ್ಷಗಳ ಹಿಂದಿನ ಕಥೆ.

ಈತನ ಹೆಸರು ಪೈಸಲ್ ಅಲ್ ಸೌದ್.. ಸೌದಿ ಅರೇಬಿದ ಅತ್ಯಂತ ಪವರ್ ಫುಲ್ ದೊರೆಯಾಗಿದ್ದವನು. ಇಸ್ರೇಲಿನ ಪರಮ ದ್ವೇಷಿಯಾಗಿದ್ದ ಈತ ಇಸ್ರೇಲ್ ನ ಮಿತ್ರ ರಾಷ್ಟ್ರವಾಗಿದ್ದ ಅಮೆರಿಕದ ಮೇಲೂ ಕತ್ತಿ ಮಸೆಯುತ್ತಿದ್ದ.

1973ರಲ್ಲಿ ಈತ ಯಾರೂ ಕನಸು ಮನಸ್ಸಿನಲ್ಲೂ ಊಹಿಸಲಾಗದ ನಿರ್ಧಾರವನ್ನು ಕೈಗೆತ್ತಿಕೊಂಡ. ಇವತ್ತಿನಿಂದ ಅಮೇರಿಕ ದೇಶಕ್ಕೆ ಒಂದೇ ಒಂದು ಬ್ಯಾರೆಲ್ ತೈಲ ಕಳುಹಿಸಬಾರದು ಎಂದು ಕಟ್ಟಾಜ್ಞೆ ಹೊರಡಿಸಿದ. ಬ್ಯಾರಲ್ಲಿಗೆ ಮೂರು ಡಾಲರಿದ್ದ ಪೆಟ್ರೋಲ್ ಬೆಲೆ ಹನ್ನೆರಡು ಡಾಲರಿಗೆ ಜಿಗಿಯಿತು. ಪೆಟ್ರೋಲ್ ರೇಟ್ ಅಮೆರಿಕದಲ್ಲಿ 300 ಪಟ್ಟು ಏರಿಕೆಯಾಯಿತು. ಎಲ್ಲೆಲ್ಲೂ ಆಹಾಕಾರ... ಸೌದಿ ದೊರೆ ಅಮೇರಿಕದ ಪಾಲಿಗೆ ಮಹಾ ಕಂಟಕನಾಗಿ ಬಿಟ್ಟಿದ್ದ.

ಈ ನಡುವೆ ಒಂದು ದುರಂತ ನಡೆಯಿತು.25 ಮಾರ್ಚ್ 1975 ಸೌದಿ ದೊರೆ ಫೈಸಲನನ್ನು ಭೇಟಿಯಾಗಲು ಆತನ ಸಹೋದರನ ಮಗ ಮುಸಾಯಿದ್ ಬಂದಿದ್ದ. ಇನ್ನೇನು ಫೈಝಲ್ ಅಪರೂಪಕ್ಕೆ ಬಂದಿದ್ದ ತನ್ನ ಅಣ್ಣನ ಮಗನನ್ನು ತಬ್ಬಿ ಕೊಳ್ಳಬೇಕು ಎನ್ನುವಷ್ಟರಲ್ಲಿ ಮುಸಾಯಿದ್ ಇದು ಕಿಸೆಯಲ್ಲಿದ್ದ ಪಿಸ್ತೋಲಿನ ಕುದುರೆ ಎಳೆದೆ ಬಿಟ್ಟ. ಗುಂಡು ಸಿಡಿಯಿತು. ಸೌದಿ ದೊರೆ ಸತ್ತು ಬಿದ್ದ.

ಕೊಲೆಗಾರ ಮುಸ್ಸಾಯಿದ್ ಅಮೆರಿಕದಲ್ಲಿ ಓದುತ್ತಿದ್ದ. ಡ್ರಗ್ಗಿ ಆಗಿದ್ದ ಆತನನ್ನು ಸಿ ಐ ಎ ಪತ್ತೆ ಹಚ್ಚಿ ಅತ್ಯಂತ ವ್ಯವಸ್ಥಿತವಾಗಿ ಈ ಕೊಲೆಗೆ ಆತನನ್ನು ತಯಾರು ಮಾಡಿತ್ತು. ಈತನನ್ನು ನಿಯಂತ್ರಣ ಮಾಡುತ್ತಿದ್ದವಳು ಓರ್ವ ಹೆಣ್ಣು ಮಗಳು. ಆಕೆಯ ಹೆಸರು ಕ್ರಿಸ್ಟಿನ್ ಸುರ್ಮಾ. ಆಕೆ ಕೂಡ ಸಿಐಎ ಏಜೇಂಟ್ ಎನ್ನಲಾಗಿದೆ.

Address

Car Street
Udupi

Alerts

Be the first to know and let us send you an email when Crevice Cleaning Brush posts news and promotions. Your email address will not be used for any other purpose, and you can unsubscribe at any time.

Videos

Share


Other News & Media Websites in Udupi

Show All