ಜನ ಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾಜಾರಕಿಹೊಳಿ

  • Home
  • India
  • Gokak
  • ಜನ ಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾಜಾರಕಿಹೊಳಿ

ಜನ ಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾಜಾರಕಿಹೊಳಿ political

ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ...
31/03/2024

ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದು, ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾಥಮಿಕ ಹಂತವಾಗಿ ಮಠ-ಮಾನ್ಯಗಳು, ಜಿಲ್ಲೆಯ ಪ್ರಮುಖ ಮುಖಂಡರನ್ನು ಸಮಕ್ಷಮ ಭೇಟಿ ಮಾಡಿ ಬೆಂಬಲ ಕೋರುತ್ತಿರುವದಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ರವಿವಾರದಂದು ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ-7ರಂದು ನಡೆಯುವ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಲೋಕಸಭಾ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಉತ್ಸುಕತೆ ಜನರ ಮನಸ್ಸಿನಲ್ಲಿ ಬಂದಿದೆ. ಜನರು ಕಂಡ ಕನಸನ್ನು ನನಸು ಮಾಡಲು ಈಗಾಗಲೇ ಕಾರ್ಯಕರ್ತರ ಪಡೆ ಸಿದ್ದವಾಗಿದೆ. ದೇಶದಾದ್ಯಂತ ಮೋದಿಯವರ ಅಲೆ ಬೀಸಿದ್ದು, ಮತ್ತೊಂದು ಅವಧಿಗೆ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.
ರವಿವಾರದಂದು ಶಾಸಕ ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ಮತಕ್ಷೇತ್ರದ ಅಂಕಲಗಿ, ಖನಗಾಂವ, ಹೂಲಿಕಟ್ಟಿ, ಮಮದಾಪೂರ, ಉಪ್ಪಾರಹಟ್ಟಿ, ಮಲ್ಲಾಪೂರ ಪಿ.ಜಿ. ಸಾವಳಗಿ, ಕೊಣ್ಣೂರ ಮರಡಿಮಠ, ಗೋಕಾಕ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅರಭಾವಿ ಕ್ಷೇತ್ರದ ಅರಭಾವಿ, ಅರಭಾವಿಮಠ, ಕಲ್ಲೋಳ್ಳಿ, ನಾಗನೂರ ಮತ್ತು ಮೂಡಲಗಿ ಪಟ್ಟಣದಲ್ಲಿ ಸಂಚರಿಸಿದ್ದೇನೆ. ಎಲ್ಲ ಊರುಗಳಲ್ಲಿ ನನಗೆ ಭಾರಿ ಬೆಂಬಲ ಸಿಗುತ್ತಿದೆ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಾರಕಿಹೊಳಿ ಸಹೋದರರನ್ನು ರಾಜ್ಯಮಟ್ಟದ ನಾಯಕರೆಂದು ಶೆಟ್ಟರ ಉಚ್ಚರಿಸಿದರು.
ಬಿಜೆಪಿಯ ಶಾಸಕರು, ಮಾಜಿ ಶಾಸಕರು ಮತ್ತು ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ನನ್ನ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾನು ಹೊರಗಿನವನು ಎಂಬ ಬೇಧ-ಭಾವ ಎಲ್ಲಿಯೂ ಕಂಡು ಬಂದಿಲ್ಲ. ಇದನ್ನು ವಿರೋಧಿಗಳು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ನನಗೂ-ಬೆಳಗಾವಿಗೂ ಅವಿನಾಭಾವ ಸಂಬಂಧವಿದ್ದು, ಕಳೆದ ಮೂವತ್ತು ವರ್ಷಗಳಿಂದ ಈ ಜಿಲ್ಲೆಯ ಜನರೊಂದಿಗೆ ಒಡನಾಟವನ್ನು ಹೊಂದಿದ್ದೇನೆ. ಬೆಳಗಾವಿ ಸುವರ್ಣಸೌಧ ನಿರ್ಮಾಣದಲ್ಲೂ ನಾನು ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರು ಮಹತ್ತರ ಪಾತ್ರ ವಹಿಸಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷವು ಈಗಾಗಲೇ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಕಾಂಗ್ರೇಸ್ ಪಕ್ಷದಲ್ಲಿ ಯಾರು ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೇಸ್ 50 ಸ್ಥಾನಗಳನ್ನು ಗಳಿಸಲು ಹೆಣಗಾಡುತ್ತಿದೆ. ಫಲಿತಾಂಶದ ನಂತರ ಕಾಂಗ್ರೇಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಶೆಟ್ಟರ ವ್ಯಂಗ್ಯವಾಡಿದರು.
ಜಾರಕಿಹೊಳಿ ಸಹೋದರರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ ಶೆಟ್ಟರ್: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದಲ್ಲಿ ಭೋಜನ ಸ್ವೀಕರಿಸಿದ ಜಗದೀಶ ಶೆಟ್ಟರ್ ಅವರು ನಂತರ ಶಾಸಕದ್ವಯರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಜೊತೆ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಶೆಟ್ಟರ್ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ರೂಪಿಸಿದರೆಂದು ತಿಳಿದು ಬಂದಿದೆ.
ಅರಭಾವಿ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಅವರಿಗೆ ಹೆಚ್ಚಿನ ಮತಗಳ ಲೀಡ್ ನೀಡುತ್ತೇವೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶೆಟ್ಟರ್ ಅವರನ್ನು ಸಂಸತ್ತಿಗೆ ಕಳುಹಿಸುವುದು ತಮ್ಮ ಗುರಿಯಾಗಿದೆ ಜೊತೆಗೆ ಉಭಯ ಕ್ಷೇತ್ರಗಳ ಕಾರ್ಯಕರ್ತರ ಸಭೆಯನ್ನು ಎ-7ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ, ಎಮ್.ಎಲ್.ಮುತ್ತೇನ್ನವರ, ಯುವ ಮುಖಂಡರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಜಿಲ್ಲಾಧ್ಯಕ್ಷ ಸುಭಾಶ ಪಾಟೀಲ, ಮುರಘೇಂದ್ರ ಪಾಟೀಲ, ಕಿರಣ ಜಾಧವ, ಡಾ|| ರಾಜೇಶ ನೇರಲಿ, ಡಾ|| ಕೆ.ವಿ.ಪಾಟೀಲ, ಘೂಳಪ್ಪ ಹೊಸಮನಿ, ಗೋವಿಂದ ಕೊಪ್ಪದ, ಮಹಾದೇವ ಶೆಕ್ಕಿ, ಮುತ್ತಪ್ಪ ಮನ್ನಾಪೂರ, ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೋಳ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ನಿಮಿತ್ಯ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ಅವರು ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ, ಅರಬಾಂವಿ ಶ್ರೀ ಆಂಜನೇಯ ದೇವ...
30/03/2024

ಲೋಕಸಭಾ ಚುನಾವಣೆ ನಿಮಿತ್ಯ
ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ಅವರು ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ, ಅರಬಾಂವಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಹಾಗೂ ಕಲ್ಲೋಳಿ ಆಂಜನೇಯ ದೇವಸ್ಥಾನಕ್ಕೆ ಮೂಡಲಗಿ ಶ್ರೀ ಶ್ರೀ ಶ್ರೀ ಶಿವಬೋದರಂಗ ದರ್ಶನಕ್ಕೆ ಆಗಮಿಸುತ್ತಿದ್ದು. ಎಲ್ಲ ಭಾಜಪಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ದಿನಾಂಕ:31-03-2024 ರವಿವಾರ

*ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ**ಮೋದಿ ಮತ್ತೊಮ್ಮೆ ಪ್ರಧಾನಿ*-*ಕಲ್ಲೊಳ್ಳಿ...
21/03/2024

*ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ಮೋದಿ ಮತ್ತೊಮ್ಮೆ ಪ್ರಧಾನಿ*-

*ಕಲ್ಲೊಳ್ಳಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

https://ad9news.com/kallolinews/

*ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ 9900161212, 9008601212*

*ಬಿಜೆಪಿ ಟಿಕೆಟ್ ಯಾರಿಗೆ ನೀಡಿದ್ರೂ ಅವರ ಗೆಲುವಿಗೆ ಶ್ರಮಿಸುತ್ತೇವೆ.* ಮೂಡಲಗಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅರಭಾವಿ ಮತಕ್ಷೇತ್ರದ ಕಾರ್ಯಕರ್ತ ಸಭೆಯನ್ನು ನಾಳೆ ದಿನಾಂಕ 21.03.2024 ರಂದು ಕಲ್ಲೋಳಿಯ ಶ್ರ...
20/03/2024

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅರಭಾವಿ ಮತಕ್ಷೇತ್ರದ ಕಾರ್ಯಕರ್ತ ಸಭೆಯನ್ನು ನಾಳೆ ದಿನಾಂಕ 21.03.2024 ರಂದು ಕಲ್ಲೋಳಿಯ ಶ್ರೀ ನೀಲಕಂಠ ಕಪ್ಪಲಗುದ್ದಿ ಸೌಹಾರ್ದ ಬ್ಯಾಂಕ್ ನಲ್ಲಿ ಇಟ್ಟುಕೊಳ್ಳಲಾಗಿದ್ದು. ಈ ಸಭೆಗೆ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರಾದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಅವರು ಆಗಮಿಸಲಿದ್ದು ಆದ ಕಾರಣ ಅರಭಾವಿ ಮಂಡಲದ ಎಲ್ಲಾ ಪದಾಧಿಕಾರಿಗಳು ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಮುಖಂಡರು ತಪ್ಪದೆ ಮಧ್ಯಾಹ್ನ 3:00 ಗಂಟೆಗೆ ಆಗಮಿಸಬೇಕಾಗಿ ವಿನಂತಿ.....

 #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ನಿರ್ದೇಶಕರು ಇವರಿಂದ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅ...
17/03/2024

#ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ನಿರ್ದೇಶಕರು ಇವರಿಂದ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಹಾರ್ಧಿಕ ಅಭಿನಂದನೆಗಳು.

Hearty congratulations to the Royal Challengers Bangalore Women's team who have been crowned champions for the very first time.


*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್...
11/03/2024

*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ*

*ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ*

*ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ*

*ಬೆಳಗಾವಿ:* ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅರಭಾವಿ ಶಾಸಕ ಮತ್ತು ಕೆಎಂಎಫ್ ನಿಕಟಪೂರ್ವ ಅಧ್ಯಕ್ಷ, ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿವೇಕರಾವ್ ಪಾಟೀಲ (ರಾಯಬಾಗ), ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಗೋಕಾಕ್), ಮಲ್ಲಪ್ಪ ಬಾಳಪ್ಪ ಪಾಟೀಲ (ಮೂಡಲಗಿ), ಕಲ್ಲಪ್ಪ ನಿಂಗಪ್ಪ ಗಿರೆನ್ನವರ (ಬೆಳಗಾವಿ), ಡಾ. ಬಸವರಾಜ ಮ. ಪರವಣ್ಣನವರ (ಕಿತ್ತೂರು), ಬಾಬುರಾವ ಸತ್ತೆಪ್ಪ ವಾಘಮೋಡೆ (ಕಾಗವಾಡ), ವಿರೂಪಾಕ್ಷಿ ಬಾಳಪ್ಪ ಈಟಿ (ಚಿಕ್ಕೋಡಿ), ರಾಯಪ್ಪ ಬಾಳಪ್ಪ ಡೂಗ (ಹುಕ್ಕೇರಿ), ಪ್ರಕಾಶ ಯಲ್ಲಪ್ಪ ಅಂಬೋಜಿ (ಖಾನಾಪುರ), ಸಂಜಯ ಶ್ರೀಶೈಲಪ್ಪ ಶಿಂತ್ರೆ (ನಿಪ್ಪಾಣಿ), ಸದೆಪ್ಪ ಬಸಲಿಂಗಪ್ಪ ವಾರಿ (ಸವದತ್ತಿ), ಶಂಕರ ಕೆಂಚಪ್ಪ ಇಟ್ನಾಳ (ಯರಗಟ್ಟಿ), ಸವಿತಾ ಸುರೇಶ ಖಾನಪ್ಪಗೋಳ (ಮೂಡಲಗಿ-ಮಹಿಳಾ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ರಾಜಶ್ರೀ ಜೈನಾಪುರ ಪ್ರಕಟಿಸಿದರು. ಇನ್ನು ಅಥಣಿ, ಬೈಲಹೊಂಗಲ ಮತ್ತು ರಾಮದುರ್ಗ ಕ್ಷೇತ್ರಗಳಿಗೆ ತಲಾ ಒಂದೊಂದು ಸ್ಥಾನಗಳಿಗೆ ಬರುವ ಭಾನುವಾರ 17 ರಂದು ಚುನಾವಣೆ ನಡೆಯಲಿದೆ ಎಂದು ಜೈನಾಪುರ ತಿಳಿಸಿದರು.
ನಾಮಪತ್ರಗಳನ್ನು ವಾಪಸ್ಸು ಪಡೆಯಲು ಇಂದು ಸೋಮವಾರದಂದು ಕಡೆಯ ದಿನವಾಗಿತ್ತು. ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿಯವರನ್ನು ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದರು.
*ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಕ್ರಮ- ಶಾಸಕ ಬಾಲಚಂದ್ರ ಜಾರಕಿಹೊಳಿ*
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಭಿವೃದ್ಧಿಗೆ ಸಹಕಾರಿ ತತ್ವದಡಿ ಶ್ರಮಿಸುವುದಾಗಿ ಆಡಳಿತ ಮಂಡಳಿಯ ಚುನಾವಣೆಯ ನೇತೃತ್ವ ವಹಿಸಿರುವ ಶಾಸಕ ಮತ್ತು ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಇದೇ ದಿ. 17 ರಂದು ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಿಗದಿಯಾಗಿದ್ದು, ರೈತರು ಮತ್ತು ಸಹಕಾರಿಗಳ ಸಹಕಾರದಿಂದ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಕಳೆದ ಮೂರು ಅವಧಿಗಳಿಂದ ಈ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಈ ಬಾರಿಯೂ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆಯಾದರೂ ಕೆಲವರಲ್ಲಿ ಹೊಂದಾಣಿಕೆ ಕೊರತೆಯಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಮೂರೂ ಸ್ಥಾನಗಳು ಸಹ ತಮ್ಮ ನೇತೃತ್ವದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಸಹಕಾರ ತತ್ವಗಳನ್ನು ಪಾಲನೆ ಮಾಡಿಕೊಂಡು ಹಾಲು ಒಕ್ಕೂಟದ ಪ್ರಗತಿಗೆ ಶ್ರಮಿಸುತ್ತಿರುವ ರೈತರ ಸಂಸ್ಥೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಚುನಾವಣೆಯನ್ನು ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸಹ ಸಹಕಾರ ನೀಡಿದ್ದಾರೆ. ಅದರಲ್ಲಿಯೂ ರಾಜ್ಯ ಸರ್ಕಾರದ ಸಚಿವರುಗಳ ಸಹ ನಮಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಮೂಲಕ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ. ಅವರಿಗೂ, ವಿವಿಧ ಪಕ್ಷಗಳ ಮುಖಂಡರಿಗೂ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುವುದು. ರೈತರು, ಹಾಲು ಉತ್ಪಾದಕರು ಮತ್ತು ನೌಕರರ ಆಶಯದಂತೆ ಒಕ್ಕೂಟದ ಬಲವರ್ಧನೆಗೆ ಸಹಕಾರ ತತ್ವದಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಫೋಟೋ 11 ಬಿಜಿಎಮ್-1
ಬಾಲಚಂದ್ರ ಜಾರಕಿಹೊಳಿ ಶಾಸಕರು ಹಾಗೂ ಕೆಎಮ್‍ಎಫ್ ನಿರ್ದೇಶಕರು.
ವಿವೇಕರಾವ ಪಾಟೀಲ ಮಾಜಿ ಎಮ್‍ಎಲ್‍ಸಿ.

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆ ನಾಮಪತ್ರ ಸಲ್ಲಿಸಿದ  #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರು
09/03/2024

ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆ ನಾಮಪತ್ರ ಸಲ್ಲಿಸಿದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರು

*ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ* - h...
20/02/2024

*ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ* - https://udayanadu.com/news-deatils.php?id=42886&ln=Kn/Belagavi

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ...

ನವದೆಹಲಿ :ದಿನಾಂಕ : 17-02-2024 ರಂದು ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟೀಯ ಅಧಿವೇಶನದಲ್ಲಿ ಭಾಗವಹಿಸಿದ ಅರಭಾವಿ ವಿಧಾನ ಸಭಾ ಕ್ಷೇತ್ರ...
17/02/2024

ನವದೆಹಲಿ :
ದಿನಾಂಕ : 17-02-2024 ರಂದು ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟೀಯ ಅಧಿವೇಶನದಲ್ಲಿ ಭಾಗವಹಿಸಿದ ಅರಭಾವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರಾದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರು, ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ್ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಶ್ರೀ ಎನ್ ರವಿಕುಮಾರ್ ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್ ಅರವಿಂದ್ ಪಾಟೀಲ್ ಮುರಗೇಂದ್ರೇಗೌಡ ಪಾಟೀಲ್ ಉಪಸ್ಥಿತರಿದ್ದರು....

*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಾಮಗಾರಿಗೆ ಚಾಲನೆ ನೀಡಿದ   ಶಾಸಕ ಬಾಲಚಂದ್ರ ಜಾರಕಿಹೊಳಿ* - https://www.udayana...
11/02/2024

*ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ* - https://www.udayanadu.com/news-deatils.php?id=42633&ln=Kn/gokak

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂ. ವೆಚ್ಚದ ಶೈಕ್ಷಣಿಕ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

*ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಿಸ್ತಿನಿಂದ ಕೆಲಸ ಮಾಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ* - https://www.udayanadu.com/news-deat...
10/02/2024

*ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಿಸ್ತಿನಿಂದ ಕೆಲಸ ಮಾಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ* - https://www.udayanadu.com/news-deatils.php?id=42618&ln=Kn/Belagavi

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಿಸ್ತಿನಿಂದ ಕೆಲಸ ಮಾಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ

 #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರ ದಿನಚರಿ
09/02/2024

#ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರ ದಿನಚರಿ

*ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ* - https://www.udayanadu.com/news-deatils.php?id=42...
08/02/2024

*ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ* - https://www.udayanadu.com/news-deatils.php?id=42571&ln=Kn/Belagavi

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ

*ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಮೂಡಲಗಿ, ಗೋಕಾಕ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ*
06/02/2024

*ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಮೂಡಲಗಿ, ಗೋಕಾಕ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ*

  ಗೋಕಾಕ: ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಸ್ಥಳೀಯ ಪಿಡಿಓ, ವಿಎ ಮತ್ತು ಆರ್‍ಡಿಪಿಆರ್ ಇಂಜನಿಯರ್ರ್ ಗಳು ಸಮನ್ವತೆಯಿಂದ ಕಾರ್ಯನಿರ್...

05/02/2024

ಬೆಳಗಾವಿ :
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ #ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ನಿರ್ದೇಶಕರು

ಹಾರ್ಧಿಕ ಸುಸ್ವಾಗತ
02/02/2024

ಹಾರ್ಧಿಕ ಸುಸ್ವಾಗತ

*ದೇಶದ ಆರ್ಥಿಕತೆಗೆ ಬಲ ತುಂಬಿದ ಬಜೆಟ್- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ*
01/02/2024

*ದೇಶದ ಆರ್ಥಿಕತೆಗೆ ಬಲ ತುಂಬಿದ ಬಜೆಟ್- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ*

  ಗೋಕಾಕ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಆರ್ಥಿಕ ರಂಗಕ್ಕೆ ಆಧಾರಸ್ತಂಭವಾಗಿರುವ ಒಟ್ಟ....

ಗೋಕಾಕ ನಗರದ ಶಕ್ತಿ ದೇವತೆಗಳ  ಶ್ರೀ ಮಹಾಲಕ್ಷ್ಮಿ  ದೇವಿಯ ಮೂರು ರಥಗಳನ್ನು ಮಾಡುವ ಸಲುವಾಗಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಭೇಟಿ ನ...
28/01/2024

ಗೋಕಾಕ ನಗರದ ಶಕ್ತಿ ದೇವತೆಗಳ ಶ್ರೀ ಮಹಾಲಕ್ಷ್ಮಿ ದೇವಿಯ ಮೂರು ರಥಗಳನ್ನು ಮಾಡುವ ಸಲುವಾಗಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಭೇಟಿ ನೀಡಿದ ಅರಭಾವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಕೆ ಎಮ್ ಎಫ್ ನಿರ್ದೇಶಕರಾದ
#ಸನ್ಮಾನ್ಯ_ಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರು ....

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರದ ಉದಯ ಕುಮಾರ್ ಶೆಟ್ಟಿ ಹಾಗೂ ಜೈಶೀಲ್ ಶೆಟ್ಟಿ ಇವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ 'ಯುವ ಮನೀಶ್' ನೂ...
28/01/2024

ಕುಂದಾಪುರ:
ಉಡುಪಿ ಜಿಲ್ಲೆಯ ಕುಂದಾಪುರದ ಉದಯ ಕುಮಾರ್ ಶೆಟ್ಟಿ ಹಾಗೂ ಜೈಶೀಲ್ ಶೆಟ್ಟಿ ಇವರ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡಿರುವ 'ಯುವ ಮನೀಶ್' ನೂತನ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ, ಶುಭ ಕೋರಿದ ಲೋಕೋಪಯೋಗಿ ಸಚಿವರಾದ #ಸನ್ಮಾನ್ಯಶ್ರೀ_ಸತೀಶ_ಅಣ್ಣಾ_ಜಾರಕಿಹೊಳಿ ಹಾಗೂ ಅರಭಾವಿ ಮತಕ್ಷೇತ್ರದ ಜನಪ್ರಿಯ ಶಾಸಕರು, ಕೆ ಎಮ್ ಎಫ್ ನಿರ್ದೇಶಕರಾದ #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಯವರು.

ಈ ಸಂದರ್ಭದಲ್ಲಿ ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು,ಹಾಗೂ ಸಚಿವರು, ಶಾಸಕರು ಹಲವು ಗಣ್ಯರು ಉಪಸ್ಥಿತರಿದ್ದರು.

*ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಗಣ ರಾಜ್ಯೋತ್ಸವದ ಶುಭಾಶಯ* https://ad9news.com/gokak-84/*ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ ...
26/01/2024

*ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಗಣ ರಾಜ್ಯೋತ್ಸವದ ಶುಭಾಶಯ*

https://ad9news.com/gokak-84/

*ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ 9900161212, 9008601212*

ಗೋಕಾಕ್- ನಾಡಿನ ಜನತೆಗೆ ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿಯವರು ೭೫ ನೇ ಗಣರಾಜ್ಯೋತ್ಸವದ ಶುಭ ಕೋರಿದ

75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
25/01/2024

75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಬಬಲಾದಿ ಮಠ ಅರಭಾವಿ, ಭೇಟಿ ನೀಡಲಿರುವ  #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ನಿರ್ದೇಶಕರು
24/01/2024

ಬಬಲಾದಿ ಮಠ ಅರಭಾವಿ, ಭೇಟಿ ನೀಡಲಿರುವ #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆಎಂಎಫ್ ನಿರ್ದೇಶಕರು

ಮೂಡಲಗಿ- ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಟಾಪನೆಯಾಗಿದ್ದು,ಸತತ ಐನೂರು ವರ್ಷಗಳ ಹೋರಾಟದ ನಂತರ ಭವ್ಯವಾದ ರಾಮ ಮಂದಿರದಲ್ಲಿ ಶ್ರೀ ರಾಮ...
22/01/2024

ಮೂಡಲಗಿ- ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಟಾಪನೆಯಾಗಿದ್ದು,ಸತತ ಐನೂರು ವರ್ಷಗಳ ಹೋರಾಟದ ನಂತರ ಭವ್ಯವಾದ ರಾಮ ಮಂದಿರದಲ್ಲಿ ಶ್ರೀ ರಾಮನು ವಿರಾಜಮಾನನಾಗಿದ್ದಾನೆ ಎಂದು ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಸೋಮವಾರದಂದು ಮೂಡಲಗಿ ತಾಲ್ಲೂಕಿನ ಕಲ್ಲೋಳಿ ಪಟ್ಟಣದ ರಾಮ ಮಂದಿರ ಮತ್ತು ಮಾರುತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು, ಇಂದು ಭಾರತದ ಚರಿತ್ರೆಯಲ್ಲಿಯೇ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.
ನಮ್ಮ ದೇಶದ ಇತಿಹಾಸದಲ್ಲಿ ಅತೀ ಮಹತ್ವದ ಭಕ್ತಿ ಭಾವದ ದಿವಸ. ಹೊಸ ಇತಿಹಾಸ ಸೃಷ್ಟಿಯಾಗಿರುವ ಐತಿಹಾಸಿಕ ಕ್ಷಣವಾಗಿದೆ. ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಟಾಪನೆ ದಿನ ಎಂದು ಅವರು ತಿಳಿಸಿದರು.
ಶ್ರದ್ಧಾ ಭಕ್ತಿಯಿಂದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಮರ್ಥ್ಯದಿಂದ ಶ್ರೀ ರಾಮನ ಪ್ರಾಣ ಪ್ರತಿಷ್ಟೆಯಾಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹಲವು ಮಹನೀಯರು ತ್ಯಾಗ, ಹೋರಾಟಗಳನ್ನು ಮಾಡಿದ್ದಾರೆ. ಕೋಟ್ಯಾಂತರ ರಾಮಭಕ್ತರ ಕನಸು ಇಂದು
ಅಯೋಧ್ಯೆಯಲ್ಲಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನೆರವೇರುವ ಮೂಲಕ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಇಂದು ಜಗತ್ತಿನಾದ್ಯಂತ ಜನರು ಕಣ್ತುಂಬಿ ಸಂಭ್ರಮಿಸುತ್ತಿದ್ದಾರೆ. ಇಡೀ ಜಗತ್ತೇ ನಮ್ಮ ಭಾರತದತ್ತ ಮುಖ ಮಾಡಿದೆ. ಇಡೀ ದೇಶವೇ ಹೆಮ್ಮೆಪಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ದೀಪಾವಳಿ ಹಬ್ಬದಂತೆ ದೇಶದ ಜನರು ಶ್ರೀರಾಮನ ಉತ್ಸವವನ್ನು ಅತೀ ವಿಜೃಂಭಣೆಯಿಂದ ಮಾಡುತ್ತಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾ ದೇಗುಲದ ಲೋಕಾರ್ಪಣೆ ಆಗಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಟೆ ಆಗುವ ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲ್ಲೂಕಿನ ಸಂಗನಕೇರಿ ಪಟ್ಟಣದ ಬಲಭೀಮ ದೇವಸ್ಥಾನದಲ್ಲಿ ಪೂಜೆಗೆ ಅಣಿಯಾದರು.
ರಾಮ ಭಕ್ತರಿಂದ ಜಯ ಶ್ರೀ ರಾಮ ಘೋಷಣೆಗಳು ಮೊಳಗಿದವು.
ನಂತರ ಕಲ್ಲೋಳಿ ಪಟ್ಟಣದ ಮಾರುತಿ ದೇವಸ್ಥಾನಕ್ಕೆ ತೆರಳಿದ ಅವರು, ಬಸ್ ನಿಲ್ದಾಣದ ಹತ್ತಿರ ಅಯೋಧ್ಯೆ ಮಾದರಿಯಲ್ಲಿ ನಿರ್ಮಿಸಲಾಗಿರುವ
ರಾಮನ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ರಾಮ ಮಂದಿರಕ್ಕೆ ತೆರಳಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಿಂದ ಸತ್ಕಾರ ಸ್ವೀಕರಿಸಿದರು.
ಸಿಎ ಸೈದಪ್ಪ ಗದಾಡಿ, ಸುಭಾಸ ಕುರಬೇಟ, ಬಸವಂತ ದಾಸನವರ, ಮಲ್ಲಪ್ಪ ಹೆಬ್ಬಾಳ, ವಸಂತ ತಹಶೀಲ್ದಾರ, ಸದಾಶಿವ ಕಲಾಲ, ದತ್ತು ಕಲಾಲ, ಮನೋಹರ ಕಲಾಲ, ಮಹಾದೇವ ಮದಭಾವಿ, ರಾಮಣ್ಣ ಹಡಗಿನಾಳ, ಭೀಮಶಿ ಗೋರೋಶಿ, ರಮೇಶ ಕಲಾಲ, ಸಿದ್ದು ಉಳ್ಳಾಗಡ್ಡಿ, ಶ್ರೀಕಾಂತ ಸವಸುದ್ದಿ, ಆನಂದ ಕಲಾಲ, ಮೋಹನ ಗಾಡಿವಡ್ಡರ, ಅಶೋಕ ಮಕ್ಕಳಗೇರಿ, ಬಸವರಾಜ ಮಾಳೆದವರ, ಭೀಮಶಿ ಮಾಳೇದವರ, ರಮೇಶ ಸಂಪಗಾಂವಿ, ಹಣಮಂತ ಚಿಪ್ಪಲಕಟ್ಟಿ, ನಾರಾಯಣ ಉಪ್ಪಾರಟ್ಟಿ, ಲೋಹಿತ ಕಲಾಲ, ಸುರೇಶ ಕಬ್ಬೂರ, ಪಟ್ಟಣ ಪಂಚಾಯತಿ ಸದಸ್ಯರು, ಪ್ರಮುಖರು, ಸಂಘ ಪರಿವಾರದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#राम_का_भव्य_धाम #ಭವ್ಯರಾಮಮಂದಿರ Narendra Modi

*ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತಕ್ಕೆ ಐತಿಹಾಸಿಕ ಕ್ಷಣ: ಶಾಸಕ ಬಾಲಚಂದ್ರ ಜಾರಕಿಹೊಳಿ* - https://udayanadu.com/news-deatils.ph...
22/01/2024

*ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತಕ್ಕೆ ಐತಿಹಾಸಿಕ ಕ್ಷಣ: ಶಾಸಕ ಬಾಲಚಂದ್ರ ಜಾರಕಿಹೊಳಿ* - https://udayanadu.com/news-deatils.php?id=42155&ln=Kn/news

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭಾರತಕ್ಕೆ ಐತಿಹಾಸಿಕ ಕ್ಷಣ: ಶಾಸಕ ಬಾಲಚಂದ್ರ ಜಾರಕಿಹೊಳಿ

ಶತಮಾನಗಳ ಸಂಕಲ್ಪ ಈಡೇರುತ್ತಿದೆ. ಅಸಂಖ್ಯಾತ ಭಕ್ತರ ತಪಸ್ಸು, ತ್ಯಾಗ, ಬಲಿದಾನಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಅಯೋಧ್ಯೆಯಲ್ಲಿ ನೂತನವಾಗಿ ನಿರ್...
22/01/2024

ಶತಮಾನಗಳ ಸಂಕಲ್ಪ ಈಡೇರುತ್ತಿದೆ. ಅಸಂಖ್ಯಾತ ಭಕ್ತರ ತಪಸ್ಸು, ತ್ಯಾಗ, ಬಲಿದಾನಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ.

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ-ದಿವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲಾನ ಪ್ರತಿಷ್ಠಾಪನೆಯ ದಿನ ಬಂದಿದೆ.

ಬನ್ನಿ, ಎಲ್ಲರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ.

ಜೈ ಶ್ರೀರಾಮ್‌ 🙏🚩🛕


ಹಾರ್ದಿಕ ಶುಭಾಶಯಗಳು
21/01/2024

ಹಾರ್ದಿಕ ಶುಭಾಶಯಗಳು

12 ನೇ ಪುಣ್ಯಸ್ಮರಣೆ :ಪೂಜ್ಯರಾದ ಕೈ.ವಾ. #ಲಕ್ಷ್ಮಣರಾವ_ಜಾರಕಿಹೊಳಿ ಮತ್ತು ಕೈ.ವಾ  #ಭೀಮವ್ವ_ಲಕ್ಷ್ಮಣರಾವ ಜಾರಕಿಹೊಳಿ ಅವರ ಪುಣ್ಯ ಸ್ಮರಣೆ ಕಾರ್...
16/01/2024

12 ನೇ ಪುಣ್ಯಸ್ಮರಣೆ :
ಪೂಜ್ಯರಾದ ಕೈ.ವಾ. #ಲಕ್ಷ್ಮಣರಾವ_ಜಾರಕಿಹೊಳಿ ಮತ್ತು ಕೈ.ವಾ #ಭೀಮವ್ವ_ಲಕ್ಷ್ಮಣರಾವ ಜಾರಕಿಹೊಳಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ರವರು ಭಾಗಿಯಾಗುವರು
ನಂತರ ಸಾರ್ವಜನಿಕರನ್ನು ಭೇಟಿ ಮಾಡುವರು

ಬರಗಾಲ ನಿರ್ವಹಣೆ ಸಂಬಂಧ ಕರೆಯಲಾದ ಮೂಡಲಗಿ-ಗೋಕಾಕ ತಾಲೂಕು ಮಟ್ಟದ ಸಭೆಯಲ್ಲಿ  #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹ...
15/01/2024

ಬರಗಾಲ ನಿರ್ವಹಣೆ ಸಂಬಂಧ ಕರೆಯಲಾದ ಮೂಡಲಗಿ-ಗೋಕಾಕ ತಾಲೂಕು ಮಟ್ಟದ ಸಭೆಯಲ್ಲಿ #ಸನ್ಮಾನ್ಯಶ್ರೀ_ಬಾಲಚಂದ್ರ_ಅಣ್ಣಾ_ಜಾರಕಿಹೊಳಿ ಜನಪ್ರಿಯ ಶಾಸಕರು ಹಾಗೂ ಕೆ ಎಮ್ ಎಫ್ ನಿರ್ದೇಶಕರು ಪಾಲ್ಗೊಳ್ಳುವರು

*ಮಕರ ಸಂಕ್ರಮಣಕ್ಕೆ ಶುಭ ಹಾರೈಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* - https://udayanadu.com/news-deatils.php?id=42000&ln=Kn/news*_ಉದಯನ...
15/01/2024

*ಮಕರ ಸಂಕ್ರಮಣಕ್ಕೆ ಶುಭ ಹಾರೈಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* - https://udayanadu.com/news-deatils.php?id=42000&ln=Kn/news

*_ಉದಯನಾಡು ಆ್ಯಪ್ ಡೌನ್‌ಲೋಡ್ ಮಾಡಿ !! ಅತ್ಯಾಕರ್ಷಕ ಸುದ್ದಿ ಮತ್ತು ನವೀಕರಣಗಳಿಗಾಗಿ_* : https://play.google.com/store/apps/details?id=com.infysky.udayanadu

ಮಕರ ಸಂಕ್ರಮಣಕ್ಕೆ ಶುಭ ಹಾರೈಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Address

Gokak

Telephone

+919902897797

Website

Alerts

Be the first to know and let us send you an email when ಜನ ಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾಜಾರಕಿಹೊಳಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಜನ ಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾಜಾರಕಿಹೊಳಿ:

Videos

Share