10/01/2023
ವಿದ್ಯುತ್ ಬಿಲ್ (ಕರ್ನಾಟಕಕ್ಕೆ ಸಂಬಂಧಪಟ್ಟ) ಹೇಗೆ calculation ಮಾಡುವುದು ಎಂಬ ಚಿಕ್ಕ ಮಾಹಿತಿ.
ಪ್ರತಿ ಒಂದು ವಿದ್ಯುತ್ ಉಪಯೋಗಕ್ಕೆ ಅದಕ್ಕೆ ಸಂಬಂಧ ಪಟ್ಟ tariff ಅಥವಾ ಜಕಾತಿ ಇರುತ್ತದೆ. Tariff ನ್ನು LT ಬಳಕೆದಾರರಿಗೆ LT 1, LT 2 (a), LT 2 (b), LT 3, LT 4, LT 5, LT 6 (a), LT 6 (b), LT 7 ಮತ್ತು HT ಬಳಕೆದಾರರಿಗೆ HT 1, HT 2 (a), HT 2 (b), HT 2 (c), HT 3 (a), HT 3 (b), HT 4, HT 5 ಎಂದು ವಿಂಗಡಿಸಲಾಗಿದೆ.
ಗೃಹೋಪಯೋಗ, ಧಾರ್ಮಿಕ ಕೇಂದ್ರಗಳು, ಸರಕಾರಿ ಶಾಲೆಗಳು LT 2 (a) Tariff ಅಡಿಯಲ್ಲಿ ಬರುತ್ತದೆ.
ಅಂಗಡಿ ಮತ್ತು ಇತರ ವಾಣಿಜ್ಯ ಉದ್ದೇಶದ ಕಟ್ಟಡಗಳು, ಕಛೇರಿಗಳು, ಗೋದಾಮುಗಳು ಇತ್ಯಾದಿ LT 3 Tariff ಅಡಿಯಲ್ಲಿ ಬರುತ್ತದೆ. ಉದ್ದಿಮೆ, ಕೈಗಾರಿಕೆಗಳಿಗೆ ಸಂಬಂಧ ಪಟ್ಟ ವಿದ್ಯುತ್ ಉಪಯೋಗ LT 5 tariff ಗೆ ಒಳಪಡುತ್ತದೆ
ಮೊದಲನೆಯದಾಗಿ ವಿದ್ಯುತ್ ದರಗಳನ್ನು ತಿಳಿದುಕೊಳ್ಳೋಣ.
ಈಗ ನಗರ ಪ್ರದೇಶಕ್ಕೆ LT 2(a) (ಗೃಹೋಪಯೋಗಿ) tariff ನ ದರಗಳು ಈ ಕೆಳಗಿನಂತಿದೆ
*ಮೊದಲ 50 ಯೂನಿಟ್ ಗಳಿಗೆ (0 ರಿಂದ 50units) Rs4.10
* 51 ರಿಂದ 100 ಯೂನಿಟ್ ವರೆಗೆ Rs5.60
*101 ರಿಂದ 200 ಯೂನಿಟ್ ವರೆಗೆ Rs7.15
*200 ಯೂನಿಟ್ ರ ಮೇಲ್ಪಟ್ಟ ಎಲ್ಲ ಯೂನಿಟ್ ಗಳಿಗೆ Rs8.20
ಗ್ರಾಮಾಂತರ ಪ್ರದೇಶಕ್ಕೆ
*ಮೊದಲ 50 ಯೂನಿಟ್ ಗಳಿಗೆ (0 ರಿಂದ 50units) Rs4
* 51 ರಿಂದ 100 ಯೂನಿಟ್ ವರೆಗೆ Rs5.30
*101 ರಿಂದ 200 ಯೂನಿಟ್ ವರೆಗೆ Rs6.85
*200 ಯೂನಿಟ್ ರ ಮೇಲ್ಪಟ್ಟ ಎಲ್ಲ ಯೂನಿಟ್ ಗಳಿಗೆ Rs7.70
ಹೀಗೆ ಇದಕ್ಕೆ slab rates ಎಂದು ಹೇಳುತ್ತಾರೆ. 0-50 ಯೂನಿಟ್ ಗೆ ಕಡಿಮೆ ಬೆಲೆ. ಮತ್ತು ಬೆಲೆ ಏರುತ್ತಾ ಹೋಗುತ್ತದೆ. 200 ಯೂನಿಟ್ ಕ್ಕಿಂತ ಮೇಲ್ಪಟ್ಟ ಎಲ್ಲ ವಿದ್ಯುತ್ ಉಪಯೋಗಕ್ಕೆ ಜಾಸ್ತಿ ಬೆಲೆ.
LT 2 tariff ಗೆ (ಗೃಹೋಪಯೋಗಿ ವಿದ್ಯುತ್ ಉಪಯೋಗಕ್ಕೆ) fixed charges ಅಥವಾ ನಿಗದಿತ ಶುಲ್ಕ ಈ ಕೆಳಗಿನಂತಿದೆ.
ನಗರ ಪ್ರದೇಶಗಳಲ್ಲಿ
ಮೊದಲ kW ಗೆ Rs100
1kW ಮೇಲೆ ಪ್ರತಿ kW ಗಳಿಗೆ Rs110.
ಉದಾಹರಣೆಗೆ
ನಿಮ್ಮ sanctioned load 1kW ಇದ್ದರೆ ನಿಗದಿತ ಶುಲ್ಕ Rs100
2kW ಇದ್ದಲ್ಲಿ Rs100 + Rs 110 = Rs 210
3kW ಇದ್ದಲ್ಲಿ Rs100 + Rs 110 + Rs 110 = Rs320
ಗ್ರಾಮಾಂತರ ಪ್ರದೇಶಗಳಲ್ಲಿ
ಮೊದಲ kW ಗೆ Rs85
1kW ಮೇಲೆ ಪ್ರತಿ kW ಗಳಿಗೆ Rs100
ಈಗ ನಿಮ್ಮ ಮನೆಯ ವಿದ್ಯುತ್ ಬಿಲ್ ಹೇಗೆ calculation ಮಾಡುವುದು ಎಂಬುವುದನ್ನು ತಿಳಿದುಕೊಳ್ಳೋಣ.
ವಿದ್ಯುತ್ ಬಿಲ್ calculation ಮಾಡಲು 4 steps
1) Fixed charge ಅಥವಾ ನಿಗದಿತ ಶುಲ್ಕ
2) Energy charges ಅಥವಾ ನೀವು ಉಪಯೋಗಿಸಿದ ವಿದ್ಯುತ್ ನ ಶುಲ್ಕ
3) Energy charges ನ ಮೇಲೆ 9% tax
4) Fuel Adjustment Charges ಅಥವಾ ಇಂಧನ ಹೊಂದಾಣಿಕೆ ಶುಲ್ಕ
ವಿದ್ಯುತ್ ಬಿಲ್ calculation ಮಾಡಲು ನೀವು ಬಳಸಿದ ಯೂನಿಟ್ ಬೇಕು. ಈ ತಿಂಗಳ ರೀಡಿಂಗ್ ಮತ್ತು ಕಳೆದ ತಿಂಗಳ ರೀಡಿಂಗನ್ನು ಕಳೆದರೆ ನಿಮ್ಮ ವಿದ್ಯುತ್ ಬಳಕೆಯ ಯೂನಿಟ್ ಸಿಗುತ್ತದೆ. ನಿಮ್ಮ ಖರ್ಚಾದ ಯೂನಿಟ್ ಗಳು ಎಷ್ಟು ಎಂಬುವುದು ನಿಮ್ಮ ಬಿಲ್ ನಲ್ಲಿ ನಮೂದಿಸಲಾಗಿರುತ್ತದೆ.
ಉದಾಹರಣೆಗೆ ನಿಮ್ಮ ಮನೆಯ sanctioned load 2kW ಮತ್ತು ವಿದ್ಯುತ್ ಬಳಕೆ 210 ಯೂನಿಟ್ ಗಳು ಎಂದು ತೆಗೆದುಕೊಳ್ಳೋಣ.
Calculation:
1) Fixed charges for 2kW = Rs 100 + Rs 110 = Rs 210
2) Energy charges for 210 units = (50units x Rs4.10) + (50 units x Rs5.60) + (100units x Rs7.15) + (10units x Rs8.20) = Rs1282
3) 9% tax on energy charges =1282 x 0.09 = Rs115.38
4) ಈ FAC ಪ್ರತಿ ಮೂರು ತಿಂಗಳಿಗೊಮ್ಮೆ KERC ಯವರು ನಿಗದಿಪಡಿಸುತ್ತಾರೆ. FAC ಪ್ರತಿ ಯೂನಿಟ್ ಗೆ ಇಂತಿಷ್ಟು ಎಂಬ ದರ ನಿಗದಿಪಡಿಸುತ್ತಾರೆ. ಪ್ರಸ್ತುತ ಈ ಬಿಲ್ ನ್ನು simple ಆಗಿ ಇಡಲು FAC 0Rs ಎಂದು ತೆಗೆದುಕೊಳ್ಳುತ್ತೇನೆ.
ಒಟ್ಟು ಮೊತ್ತ 1) + 2) + 3) + 4) = Rs210 + Rs1282 + Rs115.38 +Rs0 = Rs1607
ವಿದ್ಯುತ್ ಬಿಲ್ ನ ಬಗ್ಗೆ ಗ್ರಾಹಕರಿಗೆ ಸ್ವಲ್ಪ ಮಾಹಿತಿ ಇರಲಿ 🙏🏼