Gokak Sandesha

Gokak Sandesha Power of Information
(1)

15/01/2025

ಪಕ್ಷದ ಆಂತರಿಕ ಊಹಾಪೋಹಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಕ್ಲಾರಿಫಿಕೇಶನ.

15/01/2025

*ಬೆಳಗಾವಿ ಬ್ರೇಕಿಂಗ್*

ಬೆಳಗಾವಿ ಜಿಲ್ಲಾ ಕಾಂಗ್ರೆಸ ಕಚೇರಿ ವಿಚಾರವಾಗಿ ಡಿಸಿಎಂ ಡಿಕೆಶಿ - ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಫೈಟ್

*ತಮ್ಮ ಸತೀಶ್ ಜಾರಕಿಹೊಳಿ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ*

ಬೆಳಗಾವಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ಕಚೇರಿ ವಿಚಾರವಾಗಿ ಧ್ವನಿ ಎತ್ತಿದ್ದಕ್ಕೆ ಅಭಿ‌ಂದನೆ ಎಂದ ರಮೇಶ್ ಜಾರಕಿಹೊಳಿ

ಸೈಲೆಂಟ್ ಆಗಿದ್ರೆ ಸತೀಶ್ ಜಾರಕಿಹೊಳಿಗೆ ಉಳಿಗಾಲವಿಲ್ಲ ಎಂದ ರಮೇಶ್ ಜಾರಕಿಹೊಳಿ

ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ...
15/01/2025

ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೇಗ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಮರಳಿ ಬರಲಿ ಎಂದು ಪ್ರಾರ್ಥಿಸಿ *ಡಾ ಮಹಾಂತೇಶ ಕಡಾಡಿಯವರ* ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಗೋಕಾಕ ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಕಡಾಡಿಯವರು ಅಚಾತುರ್ಯದಿಂದ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಸಚಿವರಿಗೆ ಮತ್ತು ಶಾಸಕರಿಗೆ ಜಾಸ್ತಿ ಗಾಯಗಳಾಗಿಲ್ಲ. ಹೀಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಶಿಘ್ರ ಗುಣಮುಖರಾಗಿ ಮತ್ತೆ ಸಾರ್ವಜನಿಕ ಸೇವೆಗೆ ತೊಡಗಿದ್ದಾರೆ ಎಂದು ತಿಳಿಸಿದರು.

15/01/2025

ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಜಬರ್ದಸ್ತ್ ಬ್ಯಾಟಿಂಗ್ ಹಾಗೂ ಬೋಲಿಂಗ್.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಅವರ ಸೋದರ, ವಿಧಾನ ಪರಿಷತ್ ಸದಸ್ಯರು ಚನ್ನರಾಜ ಹಟ್ಟಿಹೊಳಿ ಅವರು ಪ್ರಯಾಣಿಸ...
14/01/2025

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಅವರ ಸೋದರ, ವಿಧಾನ ಪರಿಷತ್ ಸದಸ್ಯರು ಚನ್ನರಾಜ ಹಟ್ಟಿಹೊಳಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
14/01/2025

ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಗೋಕಾಕ ಹಾಗು ಮೂಡಲಗಿ ವಲಯದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಗರದ ಸತೀಶ ಶುಗರ್ಸ ಅಕ್ಯಾಡೆಮಿ ಪಿ.ಯು ಕಾಲೇಜನಲ್ಲಿ *ಸತೀಶ ಸ್ಪಂದನ*  ಹೆಸರಿನ ...
13/01/2025

ಗೋಕಾಕ ಹಾಗು ಮೂಡಲಗಿ ವಲಯದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಗರದ ಸತೀಶ ಶುಗರ್ಸ ಅಕ್ಯಾಡೆಮಿ ಪಿ.ಯು ಕಾಲೇಜನಲ್ಲಿ *ಸತೀಶ ಸ್ಪಂದನ* ಹೆಸರಿನ ಒಂದು ದಿನದ ಪರೀಕ್ಷಾ-ಕಾರ್ಯಾಗಾರ ಹಮ್ಮಿಕೊಂಡಿದ್ದರು.

ಕಾಲೇಜಿನ ಟ್ರಸ್ಟಿಗಳಾದ ವಿ.ಆರ್.ಪರಸನ್ನವರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಮಯದಲ್ಲಿ SSLC ವಿದ್ಯಾರ್ಥಿಗಳಿಗಾಗಿ ತಯಾರಿಸಿದ ವಿಶೇಷ ಕೈಪಿಡಿ ಬಿಡುಗಡೆ ಮಾಡಿ, ವಿದ್ಯಾರ್ಥಿಗಳಿಗೆ ವಿತರಿಸಿದರು. ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ ಬಳಿಗಾರ ಹಾಗು ಅಜಿತ ಮನ್ನಿಕೇರಿ ಯವರು ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ ಲಕ್ಷೆಟ್ಟಿ, ಉಪಪ್ರಾಚಾರ್ಯರಾದ ಎಸ್.ಎಸ್ ಮೆಣಸಗಿ ಮತ್ತು ಮಹೇಶ ಚಿಕ್ಕೊಡೆ,ಬಿ.ಹೆಚ್.ಸ್ವಾಮಿ ಯವರು ಉಪಸ್ಥಿತರಿದ್ದರು.

ಬೆಳಗಾವಿ - ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನದ ಜತೆಗೆ ಮಾನವೀಯತೆ ಮತ್ತು ಸಮಾಜದ ಉನ್ನತಿ - ಪ್ರಗತಿಗೆ ಸೇವೆ ಸಲ್ಲಿಸಿದ್ದರು ಎಂದು ಅರಭಾ...
12/01/2025

ಬೆಳಗಾವಿ - ಸ್ವಾಮಿ ವಿವೇಕಾನಂದರು ಸ್ಫೂರ್ತಿದಾಯಕ ಜೀವನದ ಜತೆಗೆ ಮಾನವೀಯತೆ ಮತ್ತು ಸಮಾಜದ ಉನ್ನತಿ - ಪ್ರಗತಿಗೆ ಸೇವೆ ಸಲ್ಲಿಸಿದ್ದರು ಎಂದು ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೋಧಿಸಿದ ತತ್ವ-
ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಧಾರೆ ಎರೆದಿರುವ ಅವರು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಗುರುಗಳ ಹೆಸರಿನಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿ ಆಧ್ಯಾತ್ಮಿಕ ಚಿಂತನೆಯನ್ನು ಧಾರೆ ಎರೆದಿದ್ದಾರೆ ಎಂದು ಹೇಳಿದ ಅವರು, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವಕರಿಗೆ ಅರ್ಪಿಸಿ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪೂಜೆ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಖಾನಾಪುರ ಶಾಸಕ ವಿಠ್ಠಲ್ ಹಲಗೇಕರ್, ಮಾಜಿ ಶಾಸಕರಾದ ಮಹಾಂತೇಶ್ ದೊಡಗೌಡರ, ಜಗದೀಶ್ ಮೇಟಗುಡ್ಡ, ಸಂಜಯ ಪಾಟೀಲ, ವಿಶ್ವನಾಥ್ ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ್ ಪಾಟೀಲ್, ರಾಣಿ ಸರಕಾರ ಧನಶ್ರೀ ಸರದೇಸಾಯಿ, ವಿವಿಧ ಮಂಡಲಗಳ ಅಧ್ಯಕ್ಷರುಗಳು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ನಾಗಾಲ್ಯಾಂಡನ ಅಸ್ಸಾಂ ರೈಫಲ್ಸ್ ನ 41 ಬಟಾಲಿಯ...
11/01/2025

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ನಾಗಾಲ್ಯಾಂಡನ ಅಸ್ಸಾಂ ರೈಫಲ್ಸ್ ನ 41 ಬಟಾಲಿಯನಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ತಾಲೂಕಿನ ನಿಂಗನಟ್ಟಿ ಗ್ರಾಮದ ವಾಹನ ಅಪಘಾತದಲ್ಲಿ ಹುತಾತ್ಮ ಯೋಧರಾದ ರವಿ ತಳವಾರ ಅವರ ಪಾರ್ಥಿವ ಶರೀರ ಬೆಳಗಾವಿಯ ಸೇನಾ ಮುಖ್ಯಸ್ಥರ ಜೊತೆ ಸೇರಿ ಅಂತಿಮ ಗೌರವ ಸಲ್ಲಿಸಿದರು.

ನಮ್ಮ ಯೋಧರ ಜೀವನ, ವೃತ್ತಿ ಶ್ರೇಷ್ಠವಾದದ್ದು, ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತೀವ ನೋವು ತಂದಿದೆ. ಈ ಸಂದರ್ಭದಲ್ಲಿ ರವಿ ತಳವಾರ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಸಚಿವರ ಆಪ್ತರು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಮ ಗುಳ್ಳಿ ಮಲಗೌಡ ಪಾಟೀಲ್ ಸಿದ್ದು ಸುಣಗಾರ ಸಮಸ್ತ ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

*ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ**ಗೋಕಾಕ್* - ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್ ಟ್ಯ...
08/01/2025

*ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*
*ಗೋಕಾಕ್* - ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್ ಟ್ಯಾಪ್ಗಳನ್ನು ನೀಡಲಾಗುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿಯ ಎನ್ ಎಸ್ ಎಫ್ ಕಾರ್ಯಾಲಯದಲ್ಲಿ ಅರಭಾವಿ ಪಟ್ಟಣ ಪಂಚಾಯತ್ ಸಮಿತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜನಿಯರಿಂಗ್ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ನಗರೋತ್ಥಾನ ಯೋಜನೆಯಡಿ ೪ ರ ಹಂತದಲ್ಲಿ ಈ ಪಟ್ಟಣ ಪಂಚಾಯತ್ ವ್ಯಾಪ್ತಿಯ ೬ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ಗಳನ್ನು ವಿತರಿಸಲಾಗುತ್ತಿದೆ. ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬಗಳ ವಿಧ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗುತ್ತಿದೆ. ಇಂಜನಿಯರಿಂಗ್ ಮತ್ತು ಮೆಡಿಕಲ್ ಕಲಿಯುತ್ತಿರುವ ಮಕ್ಕಳಿಗೆ ಅನುಕೂಲವಾಗಲಿದೆ. ಬಡ ಕುಟುಂಬಗಳನ್ನು ಉತ್ತೇಜಿಸಲು ಸರಕಾರವು ಇಂಥ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಹೇಳಿದರು.
ಅರಭಾವಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್. ಸಿ/ ಎಸ್ಟಿ ಕುಟುಂಬಗಳ ಫಲಾನುಭವಿಗಳಿಗೆ ಸೋಲಾರ್ ವಿತರಿಸುವ ಕಾರ್ಯವು ಸಹ ನಡೆಯುತ್ತಿದೆ. ಸುಮಾರು ೨೧ ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಕೆ ಮಾಡುತ್ತಿದ್ದು, ಇದರಲ್ಲಿ ೮೬ ಎಸ್ಸಿ ಮತ್ತು ೨೨ ಎಸ್ಟಿ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಫಲಾನುಭವಿಗಳಿಗೆ ಈ ಯೋಜನೆಯು ತಲುಪಲಿದೆ ಎಂದು ಅವರು ತಿಳಿಸಿದರು.
*ಲ್ಯಾಪ್ ಟ್ಯಾಪ್ ವಿತರಣೆ -* ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜನಿಯರಿಂಗ್ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಗಳನ್ನು ವಿತರಿಸಿದರು.
ಅರುಣ್ ಸುರೇಶ ಗಾಡಿವಡ್ಡರ್, ಸೌಭಾಗ್ಯ ಲಕ್ಕಪ್ಪ ಮಾದರ, ಸೌಂದರ್ಯ ರಾಮಪ್ಪ ಪೂಜೇರಿ, ಕೆದಾರ್ಲಿಂಗ್ ಮಾರುತಿ ಮಾಳಿ, ವಿಶಾಲ್ ವಿಠ್ಠಲ್ ಸಮಯದವರ, ಮಹಾದೇವ ಕಡಲಗಿ ಅವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಟ್ಟಣ ಪಂಚಾಯತ್ ಸಮಿತಿಯಿಂದ ಲ್ಯಾಪ್ ಟ್ಯಾಪ್ ವಿತರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪಟ್ಟಣ ಪಂಚಾಯತ್ ಸಮಿತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ನಿಂಗಪ್ಪ ಇಳಿಗೇರಿ, ಅಡಿವೆಪ್ಪ ಬಿಲಕುಂದಿ, ಸುರೇಶ್ ದೊಡ್ಡಲಿಂಗಣ್ಣವರ, ಬಾಳೇಶ್ ನಾನಪ್ಪಗೊಳ, ರಮೇಶ್ ಸಂಪಗಾವಿ, ಹಣಮಂತ ಕೇಂದಾರಿ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಕರೆಪ್ಪ ಗಡ್ಡಿ ಸೇರಿದಂತೆ ಅನೇಕರು ಉಪ್ಥಿತರಿದ್ದರು.

07/01/2025

ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗ್ಬೇಕು, ಜಾರಕಿಹೊಳಿ ಸಿಎಂ ಆದ್ರೆ ಸ್ವಾಗತ, ಜೆಡಿಎಸ್‌ ಶಾಸಕ ಕಂದಕೂರ.

ಯಾದಗಿರಿ(ಜ.07): ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಅದರಲ್ಲೂ, ಸರಳ ಸಜ್ಜನಿಕೆಯ ಸತೀಶಣ್ಣ (ಜಾರಕಿಹೊಳಿ) ಸಿಎಂ ಆದರೆ ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ಹಾಗೂ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಚುನಾವಣೆಗೂ ಮುನ್ನ, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ 'ಭಿನ್ನ' ನಿಲುವು ವ್ಯಕ್ತಪಡಿಸಿದ್ದ ಹಾಗೂ ಮೈತ್ರಿಯಿಂದ ಜೆಡಿಎಸ್‌ಗೆ ನಷ್ಟವೇ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಶಾಸಕ ಶರಣಗೌಡ ಕಂದಕೂರ, ಈಗ ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರ ಪರ ಬಹಿರಂಗವಾಗಿ ಬ್ಯಾಟ್ ಬೀಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

06/01/2025

ಪೂಜ್ಯರಾದ ಕೈ.ವಾ.ಲಕ್ಷ್ಮಣರಾವ ಜಾರಕಿಹೊಳಿ ಮತ್ತು ಕೈ.ವಾ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ 13ನೇ ಪುಣ್ಯಸ್ಮರಣೆ

ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಚಿಂಚಲಿ ಪಟ್ಟಣದ ಶ್ರೀ  ಮಾಯಕ್ಕಾ ದೇವಿ ದೇವಸ್ಥಾನಕ್ಕೆ...
06/01/2025

ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಚಿಂಚಲಿ ಪಟ್ಟಣದ ಶ್ರೀ ಮಾಯಕ್ಕಾ ದೇವಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯ ವತಿಯಿಂದ ಮಂಜೂರಾದ ರೂ. 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಇಂದು ಚಾಲನೆ ನೀಡಿದರು.

ಈ ವೇಳೆ ಉಪ್ಪಾರವಾಡಿಯ ಸುಭಾಷ ರೆಂಟಿ ಯವರ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲನ್ನು ಆಲಿಸಿದ ಬಳಿಕ ಶಾಲಾ ಮಕ್ಕಳಿಗೆ ಬುಕ್ ಹಾಗೂ ಪೆನ್ನು ವಿತರಣೆ ಮಾಡಿದರು.

05/01/2025

ಬೆಳಗಾವಿಯ ಅನಿಗೋಳ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಅನಾವರಣ ಕುರಿತು :ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್

03/01/2025

ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್‌ ಮೀಟಿಂಗ್‌, ಡಿಕೆಶಿ ಇಲ್ಲದೆ ಸಿಎಂ ಏನೆಲ್ಲ ಚರ್ಚೆ?

02/01/2025

ಗೋಕಾಕ : ಸ್ಕೂಲ ಬ್ಯಾಗ ತರಲು‌ ನಿರಕಾರಿಸಿದ್ದಕ್ಕೆ ಸಹಪಾಠಿಗಳಿಂದ ಚಾಕು ಇರಿತ,

ಗೋಕಾಕ ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳಿಂದ ಒರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ

ಸಂಜೆ ಶಾಲೆ ಬಿಟ್ಟ ನಂತರ 10 ನೇಯ ತರಗತಿಯಲ್ಲಿ ಒದುತಿದ್ದ ಪ್ರದೀಪ ಬಂಡಿವಡ್ಡರ ಇತನಿಗೆ ಅದೆ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಒದುತಿದ್ದ ಸಹಪಾಠಿಗಳಾದ ರವಿ ಚಿನ್ನವ, ಅಶೋಕ ಕಂಕಣವಾಡಿ,ಸಿದ್ದಾರ್ಥ ಮತ್ತಿಕೊಪ್ಪ ಇವರೆಲ್ಲರೂ ಸೇರಿ ಪ್ರದೀಪ ಬಂಡಿವಡ್ಡರ ಇತನಿಗೆ ತಮ್ಮ ಬ್ಯಾಗ ತರಲು ಹೇಳಿದ್ದರು,ಆಗ ಆತ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಆಕ್ರೊಶಗೊಂಡು ಮೂವರು ಸೇರಿ ಕುತ್ತಿಗೆ,ಕೈಗೆ, ಮತ್ತು ಹೊಟ್ಟೆಗೆ ಮನಸೋ ಇಚ್ಚೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ,

ರಕ್ತ ಸ್ರಾವದಿಂದ ಸ್ಥಳದಲ್ಲಿ ಬಿದ್ದು ನರಳಾಡುತಿದ್ದ ಗಾಯಾಳು ಪ್ರದೀಪ ಬಂಡಿವಡ್ಡರ ಇತನನ್ನು ಸ್ಥಳಿಯ ಶಿಕ್ಷಕರು ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು,ನಂತರ ಹೆಚ್ವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಗಂಗಾ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ, ಸುದ್ದಿ ತಿಳಿದ ನಗರ ಪೋಲಿಸ ಸಿಬ್ಬಂದಿಗಳು ಆಸ್ಪತ್ರೆಗೆ ದೌಡಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ, ಇನ್ನು ಆರೋಪಿಗಳು ಮತ್ತು ಗಾಯಾಳು ಒಂದೆ ಶಾಲೆಯಲ್ಲಿ 10 ನೇಯ ತರಗತಿಯಲ್ಲಿ ಒದುತಿದ್ದರೆಂದು ತೀಳಿದು ಬಂದಿದೆ.

ಇನ್ನು ಆರೋಪಿಗಳ ಪತ್ತೆ ಹಚ್ವಲು ಪೋಲಿಸರು ಬಲೆ ಬಿಸಿದ್ದು, ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿದ್ದರು. ಇನ್ನು ಪಾಲಕರ ಅಕ್ರಂದನ ಮುಗಿಲು ಮುಟ್ಟಿದೆ,

ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ ಡಾಲಿ ಧನಂಜಯ ಅವರು ಇಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ  ಸತೀಶ  ಜಾರಕಿಹೊಳಿಯವರನ್ನು ಭೇಟಿಯಾಗಿ ತಮ್ಮ...
02/01/2025

ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ ಡಾಲಿ ಧನಂಜಯ ಅವರು ಇಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರನ್ನು ಭೇಟಿಯಾಗಿ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.

02/01/2025

ಗೋಕಾಕ ನಗರದ ಕುಂಬಾರ ಗಲ್ಲಿಯಲ್ಲಿ ರಾತ್ರೋರಾತ್ರಿ ಕುಡಿದ ಮತ್ತಿನಲ್ಲಿ ವಾಹನಗಳ ಗ್ಲಾಸ್ ಒಡೆದ ಕಿಡಿಗೇಡಿಗಳು.

Address

Opp PWD Office Underground Of Shetty Lunch Home , , Gokak Sandesha Office
Gokak
591307

Opening Hours

Monday 9am - 8pm
Tuesday 9am - 8pm
Wednesday 9am - 8pm
Thursday 9am - 8pm
Friday 9am - 8pm
Saturday 9am - 8pm
Sunday 9am - 8pm

Telephone

+918722672906

Website

Alerts

Be the first to know and let us send you an email when Gokak Sandesha posts news and promotions. Your email address will not be used for any other purpose, and you can unsubscribe at any time.

Contact The Business

Send a message to Gokak Sandesha:

Videos

Share