Mathru TV ಮಾತೃ ಟಿವಿ

Mathru TV ಮಾತೃ ಟಿವಿ mathru tv
(15)

20/10/2023

ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಕೆಂಪೇಗೌಡರ ನಾಡು ಮಾಗಡಿ ತಾಲೂಕು
ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡ ನಾಡು ಮಾಗಡಿ ನಗರಕ್ಕೆ ಮೂಲಭೂತ ಸೌಕರ್ಯವಿಲ್ಲವಾಯಿತೆ
ಮಾಗಡಿ ತಾಲೂಕು ಕಚೇರಿ ಅನ್ನೇ ಸ್ವಚ್ಛವಾಗಿ ಇಡಲು ವಿಫಲವಾದ ತಾಲೂಕು ದಂಡಾಧಿಕಾರಿ ಸುರೇಂದ್ರ ಮೂರ್ತಿ ಹಾಗೂ ಶಾಸಕ ಹೆಚ್ ಸಿ ಬಾಲಕೃಷ್ಣ
ತಾಲೂಕು ಕಚೇರಿಯಲ್ಲಿರುವ ಒಂದಲ್ಲ ಮೂರು ಶೌಚಾಲಯಗಳಲ್ಲಿ ಒಂದು ಬಳಕೆಯಲ್ಲಿಲ್ಲವೇ
ಬೀಗ ಜಡಿದಿರುವ ಎರಡು ಶೌಚಾಲಯಗಳು ಮತ್ತೊಂದು ಬೀಗ ತೆರೆದರು ಬಳಸಲು ಅಸಾಧ್ಯವಾದ ಶೋಚನೀಯ ಸ್ಥಿತಿಯಲ್ಲಿ
ಪ್ರತಿನಿತ್ಯ ಕೆಲಸ ಕಾರ್ಯಗಳಿಗೆoದು ತಾಲೂಕು ಕಚೇರಿಗೆ ಬರುವವರ ಸ್ಥಿತಿ ಅದೋಗತಿ
ಹೆಸರಾಂತ ಮಾಗಡಿಯನ್ನು ರಾಜಕಾರಣಿಗಳು ಅಧಿಕಾರಿಗಳು ಏನು ಮಾಡ ಹೊರಟಿದ್ದಾರೆ ಇನ್ನಾದರೂ ಇತ್ತ ಗಮನ ಹರಿಸುವರೆ ಅಥವಾ ಇದನ್ನೇ ಮುಂದುವರಿಸೋವರೇ ಕಾದು ನೋಡಬೇಕಿದೆ
ವರದಿ ಮಾತೃ ಟಿವಿ ದೇವೇಗೌಡ ಸಿ

07/03/2023

Doddaballapura breaking:-

ಅಡಿಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

CPI ಪಕ್ಷದಿಂದ ಬೆಲೆ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆ

ತಾಲೂಕು ಕಚೇರಿ ವೃತ್ತದಲ್ಲಿ CPIಪಕ್ಷದಿಂದ ಪ್ರತಿಭಟನೆ

ರಸ್ತೆ ಮದ್ಯದಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ಮಾಡಿದ CPI ಪಕ್ಷ

CPI ಪಕ್ಷದ ಪ್ರತಿಭಟನೆಗೆ ಬೆಂಬಲ ನೀಡಿದ ಪ್ರಜಾ ವಿಮೋಚನಾ ಸಮಿತಿ ಸಂಘಟನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು

ತಾಲ್ಲೂಕು ಕಚೇರಿ ವೃತ್ತದಲ್ಲಿ ನಡೆದ ಪ್ರತಿಭಟನೆ

07/03/2023

*ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಪಕ್ಷ ಸೇರಿದ ಯುವಕರು*

*ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಭಾಜಪ ಆಕಾಂಕ್ಷಿ ಅಭ್ಯರ್ಥಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ*

*ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯುವಕರು ಹಾಗೂ ಕಾರ್ಯಕರ್ತರು ಮತ್ತು ಮಹಿಳಾ ಮಣಿಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.*

ಕೊರಟಗೆರೆ:-ತಾಲ್ಲೂಕಿನ ಕೊಳಲ ಹೋಬಳಿಯ ಮಾವತ್ತೂರು ಗ್ರಾಮದ ಕಾರ್ಯಕರ್ತರು ಎರಡು ಪಕ್ಷ ತೊರೆದು ಅಭ್ಯರ್ಥಿ ಅನಿಲ್ ಕುಮಾರ್ ಹಾಗೂ ಮಂಡಲ ಅಧ್ಯಕ್ಷ ಪವನ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಇತ್ತೀಚಿನ ದಿನಗಳಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬೇರೆ ಬೇರೆ ಪಕ್ಷಗಳನ್ನು ತೊರೆದು ಮುಖಂಡರುಗಳು ಮತ್ತು ಯುವಕರು ಹಾಗೂ ಮಹಿಳಾ ಮತದಾರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಭಾಜಪ ಪಕ್ಷದಲ್ಲಿ ಸೃಷ್ಟಿಯಾಗುತ್ತಿರುವ ಹಲೆಯನ್ನು ನೋಡಿ ವಿರೋದ ಪಕ್ಷದ ಮುಖಂಡರಿಗೆ ಅನಿಲ್ ಕುಮಾರ್ ರವರು ನಿದ್ದೆಗೇಡಿಸುತ್ತಿದ್ದಾರೆ ಕ್ಷೇತ್ರದಲ್ಲಿ ಎಂಬ ಕುತೂಹಲ ಮೂಡಿದೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಕಾಂಕ್ಷಿ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಅನ್ನದಾತ ರೈತರಿಗೆ, ಶಿಕ್ಷಣಕ್ಕೆ, ಬಡಕುಟುಂಬಗಳಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ನೇರವಾಗಿ ಸಿಗುತ್ತಿದೆ.

ಎಂದರೆ ನಮ್ಮ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಬಸವರಾಜು ಬೊಮ್ಮಾಯಿ, ಯಡಿಯೂರಪ್ಪನವರ ಸರ್ಕಾರದಲ್ಲಿ ಮಾತ್ರ ಹೆಚ್ಚಾಗಿ ಎಲ್ಲಾ ಸವಲತ್ತುಗಳು ಸಿಕ್ಕಿದೆ ಎಂದು ಹೇಳಿದರು.

2023 ರಲ್ಲಿ ಬಿಜೆಪಿ ಪಕ್ಷವು ರಾಜ್ಯದಲ್ಲಿ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಹೆಚ್ಚಿನ ಬಹುಮತಗಳಿಂದ ಗೆದ್ದು ಸರ್ಕಾರ ರಚಿಸುವುದು ಖಚಿತ, ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವಂತೆ ಕ್ಷೇತ್ರದ ಜನತೆ ಆಶೀರ್ವಾದಿಸಿ, ಪಕ್ಷದ ಸಾಧನೆಗಳ ಬಗ್ಗೆ ತಿಳಿದು.

ಇತರೆ ಪಕ್ಷಗಳನ್ನು ತೊರೆದು ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಕ್ಕೆ ತಮಗೆಲ್ಲಾ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಪವನ್‍ಕುಮಾರ್ ಮಾತನಾಡಿ, ಇತರೆ ಪಕ್ಷಗಳನ್ನು ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಿರುವುದಕ್ಕೆ ತಮಗೆಲ್ಲಾ ಅಭಿನಂದನೆ ಜೊತೆಗೆ ಧನ್ಯವಾದ ತಿಳಿಸಲು ಇಚ್ಚಿಸುತ್ತೇನೆ. ಪಕ್ಷದ ಮುಖಂಡರು, ಕಾರ್ಯಕರ್ತರ ಹೆಚ್ಚಿನಶ್ರಮ ಮತ್ತು ಜನಸ್ಪಂದನೆ ನೋಡಿದರೆ 2023ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಈ ಭಾರಿ ಕಮಲ ಅರುಳುವುದು ಖಚಿತ ಎಂದರು.

ಕಾರ್ಯಕ್ರಮದಲ್ಲಿ.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಪವನ್ ಕುಮಾರ್,
ದಾಡಿ ವೆಂಕಟೇಶ್,ಗುರುದತ್ತ್, ಮಧುಗೋವಿಂದರಾಜು,
ಗಿರೀಶ್ ಗೌಡ

28/02/2023

# # #
ಮಾರ್ಚ್ 1 ರಿಂದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಸರ್ಕಾರಕ್ಕೆ ಕಡಕ್ ಎಚ್ಚರಿಕೆ ಕೊಟ್ಟ ಸರ್ಕಾರಿ ನೌಕರರು...

ಆಂಕರ್..
ಸರ್ಕಾರಿ ನೌಕರರಿಗೆ ಓ ಪಿ ಎಸ್ ಸೇರಿದಂತೆ ವಿವಿಧ ಬೇಡಿಕೆಗಳು ತಕ್ಷಣ ಜಾರಿಗೆ ಬರುವಂತೆ ಮಾಡಬೇಕು ಇಲ್ಲದಿದ್ದರೆ ಮಾರ್ಚ್ 1ರಿಂದ ತಾಲೂಕಿನ ಅದ್ಯಂತ ಯಾವುದೇ ಸರ್ಕಾರಿ ಕಚೇರಿಗಳು ಓಪನ್ ಆಗುವುದಿಲ್ಲ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್ ಸರ್ಕಾರಕ್ಕೆ ಈ ಮೂಲಕ ಸಂದೇಶ ನೀಡಿದರು...

ವಾಯ್ಸ್ ಓವರ್..
ಕೊರಟಗೆರೆ:- ತಾಲೂಕಿನ ಸರ್ಕಾರಿ ನೌಕರರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 202324ನೇ ಸಾಲಿನ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಬತ್ತಿ ಪರಿಷ್ಕರಣಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ ಇದನ್ನು ಮನಗೊಂಡ ಸರ್ಕಾರ ನೌಕರರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಮಾನ್ಯ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ಫೆಬ್ರುವರಿ 28ರ ವರೆಗೆ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಎಂದರೆ ಮಾರ್ಚ್ 1ನೇ ತಾರೀಖಿನಿಂದ ಯಾವುದೇ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವುದಿಲ್ಲ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು.
ಹಾಗೆಯೇ 6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ವಿಧಾನಸಭಾ ಚುನಾವಣೆ ನೀತಿ ಸಹಿತ ಜಾರಿಗೂ ಮೊದಲು ಸರ್ಕಾರಿ ನೌಕರರ ಬೇಡಿಕೆಗಳನ್ನ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬೈಟ್ 1

ವಾಯ್ಸ್ ಓವರ್..
ಸರ್ಕಾರಿ ನೌಕರರ ಗೌರವಾಧ್ಯಕ್ಷ ಚೆನ್ನರಾಜು ಮಾತನಾಡಿ :-
ಪಂಜಾಬ್ ರಾಜಸ್ಥಾನ್ ಹಿಮಾಚಲ ಪ್ರದೇಶಗಳ ಮಾದರಿಯಂತೆ ಕರ್ನಾಟಕ ಸರ್ಕಾರವು ಎನ್‌ಪಿಎಸ್ ರದ್ದುಪಡಿಸಿ ಓ ಪಿ ಎಸ್ ಜಾರಿಗೊಳಿಸಿ ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಈ ಮೂಲಕ ನೌಕರರ ವೃದ್ಧಪ್ಯ ಸಮಯಕ್ಕೆ ಆಸರೆಯಾಗಬೇಕು ಇಲ್ಲವಾದಲ್ಲಿ ಮಾರ್ಚ್ 1ರಿಂದ ನಮ್ಮ ಸರ್ಕಾರಿ ಅಧಿಕಾರಿಗಳಾಗಲಿ ಸಿಬ್ಬಂದಿ ವರ್ಗದವರಾಗಲಿ ಯಾರು ಕೂಡ ಕಚೇರಿಗಳಿಗೆ ಹಾಜರಾಗುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರಿಕಾ ಹೇಳಿಕೆಯ ಮುಖಾಂತರ ಮನವಿ ಮಾಡಿದರು ...

ಬೈಟ್ 2

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕಿನ ಎಲ್ಲಾ ಅಧಿಕಾರಿಗಳು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು, ಶಿಕ್ಷಕರು, ನೌಕರರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ:-ಸತೀಶ್ ಎಸ್
ಕೊರಟಗೆರೆ

28/02/2023

ಹಿರಿಯೂರು ;-

ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಕೊಡಿ ಮಾಜಿ ಶಾಸಕರು ಹಾಗೂ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಿ ಸುಧಾಕರ್

ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ ಎಂದು ಮಾಜಿ ಶಾಸಕರು ಹಾಗೂ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಿ. ಸುಧಾಕರ್ ತಿಳಿಸಿದರು.

ಎಸ್ ಎಸ್ ಸ್ಪರ್ಶ್ ಆಸ್ಪತ್ರೆ ರಾಜರಾಜೇಶ್ವರಿ ನಗರ ಬೆಂಗಳೂರು ಮತ್ತು ಇಮಾಮ್ ಬಾಡ ಆಶುಖಾನ ನೇಕ್ ಬೀಬಿ ದರ್ಗಾ ಹಿರಿಯೂರು ಹಾಗೂ ಸಹಾಯ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ವೆಲ್ಫೇರ್ ಸೊಸೈಟಿ ಹಿರಿಯೂರು ಇವರ ವತಿಯಿಂದ ಇಮಾಮ್ ಬಾಡ ಆಶೂಖಾನ ನೇಕ್ ಬೀಬಿ ದರ್ಗಾ ಶಾದಿ ಮಹಲ್ ನಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಡಿ ಸುಧಾಕರ್ ಅವರು ಮಾತನಾಡಿದರು.

ಸಾಮಾನ್ಯ ವೈದ್ಯಕೀಯ ತಪಾಸಣೆ, ಹೃದಯ ರೋಗಗಳ ತಪಾಸಣೆ, ನರ ರೋಗ ತಪಾಸಣೆ ಮೂತ್ರಕೋಶ ಮೂತ್ರಪಿಂಡ ರೋಗಗಳ ತಪಾಸಣೆ ನಡೆಸಲಾಯಿತು .

ಹಾಗೂ ಉಚಿತವಾಗಿ ಇಸಿಜಿ ಮತ್ತು ಎಕೋ ಪರೀಕ್ಷೆ ಮಾಡಲಾಯಿತು. ತಜ್ಞ ವೈದ್ಯರಾದ ಡಾ. ಅಭಿಲಾಶ್ ಬನ್ಸಾಲ್, ಡಾ. ಶಿವಪ್ರಕಾಶ್, ಜೋಸೆಫ್ ಹಾಗೂ ತಂಡದ ಮಂಜುನಾಥ್, ಶ್ರೀರಾಮ್, ಕೃತಿಕ, ಪ್ರಿಯಾ, ಪರಿಮಳ, ಅರುಣ್ ಕುಮಾರ್, ಕಲ್ಯಾಣಿ ಹಾಗೂ ಮುಖಂಡರಾದ ಹೆಚ್.ಆರ್. ಅಬ್ದುಲ್ ಅಜೀಜ್, ಪಿ.ಎಸ್ ಸಾದತ್ ಉಲ್ಲಾ , ಜಿ ದಾದಾಪೀರ್, ಮುನೀರ್ ಮುಲ್ಲಾ , ಅಬೀದ್ ಹುಸೇನ್, ಸನಾವುಲ್ಲ ,ಮಹಮದ್ ನೂರುಲ್ಲಾ, ಮಹಮದ್ ಸೈಫುಲ್ಲಾ , ಸಮಿವುಲ್ಲಾ, ಅಬ್ದುಲ್ ಕರೀಂ, ಶಿವಕುಮಾರ್, ತಿರುಪತಿ ದಾದಾಪೀರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಟಿ ವೆಂಕಟೇಶ್ ಹಾಗೂ ಸಂಘದ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ ;- ಮುರುಳಿಧರನ್ ಆರ್ ಹಿರಿಯೂರು.

28/02/2023

ಕೊರಟಗೆರೆ ಪಟ್ಟಣದ ಪ್ರತಿಷ್ಠಿತ ಚಾಣಕ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಆಡಳಿತ ವರ್ಗ ಪೋಷಕರು ಹಾಗೂ ಶಾಲಾ ಶಿಕ್ಷಕರ ಪ್ರೋತ್ಸಾಹ ದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಿಷನ್ 2023ರ ವಿವಿಧ ವಿಷಯಗಳ ಬಗ್ಗೆ ವಸ್ತು ಪ್ರದರ್ಶನ ಅತ್ಯುತ್ತಮವಾಗಿ ನಡೆಸಲಾಯಿತು.

ಆಡಳಿತ ವರ್ಗ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರ ಸಹಯೋಗದಲ್ಲಿ ನಡೆದ ವಸ್ತು ಪ್ರದರ್ಶನ

ಸ್ಲಗ್:-

1)ಈ ವಸ್ತು ಪ್ರದರ್ಶನದಲ್ಲಿ ಪುರಾತನ ಕಾಲದ ವಸ್ತುಗಳು ಹಾಗೂ ಮಧ್ಯಕಾಲದಲ್ಲಿ ನಶಿಸಿ ಹೋಗುತ್ತಿರುವ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

2)ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಭಾಷಾ ವಸ್ತು ಪ್ರದರ್ಶನವನ್ನು ನಡೆಸಲಾಯಿತು.

3)ವಸ್ತು ಪ್ರದರ್ಶನದಲ್ಲಿ ಭೌತಶಾಸ್ತ್ರ ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರಗಳ ಹಾಗೂ ಗಣಿತ ವಿಷಯಗಳ ಬಗ್ಗೆ ವಿಶೇಷವಾದ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನವನ್ನು ಪೋಷಕರಿಗೆ ವಿವರಿಸಿ ತಿಳಿಸಿದರು.

4)ಸಿರಿಧಾನ್ಯದ ಬಗ್ಗೆ ವಿಶೇಷವಾದ ಅರಿವನ್ನು ಪ್ರದರ್ಶಿಸಲಾಗಿತ್ತು.

5)ಈ ವಸ್ತು ಪ್ರದರ್ಶನದಲ್ಲಿ ಪುಟಾಣಿ ಮಕ್ಕಳಿಂದ ವಿನ್ಯಾಸಗೊಂಡ ದೇಶದ ಭಾವೈಕ್ಯತೆಯ ಪೂಜ ಮತ್ತು ಪ್ರಾರ್ಥನಾ ಮಂದಿರಗಳು ಎಲ್ಲರ ಮನಸ್ಸನ್ನು ಸೂರ್ಯಗೊಂಡಿತು.

6)ಇನ್ನು ಈ ಸಂದರ್ಭದಲ್ಲಿ ನೂರಾರು ಪೋಷಕರು ಮತ್ತು ಸಾರ್ವಜನಿಕರು ವಸ್ತು ಪ್ರದರ್ಶನ ಮಾಹಿತಿಯನ್ನು ಪಡೆದರು.

7)ಇನ್ನು ಈ ಸಂದರ್ಭದಲ್ಲಿ ಪೋಷಕ ಜಗದೀಶ್ , ಆಡಳಿತ ಮಂಡಳಿಯ ಸಿಎಸ್ ಹನುಮಂತರಾಜು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಗೀತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವರದಿ:-ಸತೀಶ್ ಎಸ್
ಕೊರಟಗೆರೆ

25/02/2023

ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಆಯ್ಕೆ.

ತುರುವೇಕೆರೆ ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಅವರನ್ನು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರು ಆಯ್ಕೆ ಮಾಡಿ ಅಭಿನಂದಿಸಿದರು.

ಇದೇ ವೇಳೆ ಮಾತನಾಡಿದ ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸೂಳೆಕೆರೆ ಮೋಹನ್ ಕುಮಾರ್ ಮಾತನಾಡಿ, ಕ್ಷೇತ್ರ ಅಭಿವೃದ್ಧಿಯಾಗಲು ಇರುವ ಅವಕಾಶಗಳನ್ನು ನಾವುಗಳು ಮೈಮರೆಯಬಾರದು, ಜೆಡಿಎಸ್ ಗೆ ಮತ ನೀಡುವ ಮೂಲಕ ಜೆ ಡಿ ಎಸ್ ಪಕ್ಷವನ್ನು ಬಲಿಷ್ಠ ಗೊಳಿಸಿ ಜೊತೆಗೆ ಚುನಾವಣಾ ಸಮಯದಲ್ಲಿ ಕೆಲವು ಆಸೆ ಆಮಿಷ ತೋರಿಸುತ್ತಾರೆ ಯಾವುದೇ ಕಾರಣಕ್ಕೂ ಅಂಥವುಗಳಿಗೆ ಯಾವುದೇ ರೀತಿಯ ಮಣೆ ಹಾಕದೆ ಈ ಬಾರಿ ಎಂ ಟಿ ಕೃಷ್ಣಪ್ಪನವರನ್ನು ತಾಲೂಕಿನ ಶಾಸಕರನ್ನಾಗಿ ಆಯ್ಕೆ ಮಾಡುವುದು ನಮ್ಮೆಲ್ಲರ ಗುರಿ ಎಂದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಗೋಣಿ ತುಮಕೂರು ನಾಗೇಂದ್ರ.ಸೂಳೆಕೆರೆ ಶಂಕರೇಗೌಡ.ಮಂಜುನಾಥ್ . ವೆಂಕಟೇಶ್.ಚಂದ್ರಣ್ಣ.ಗೋಣಿ ತುಮಕೂರು ಮಂಜು.(ಜಲ್ಲಿ) ಮಾದಿಹಳ್ಳಿ ಮಲ್ಲಿಕಾ.ಕಾಂತಣ್ಣ.ಶ್ರೀನಿವಾಸ್.ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ನಗರದ ಕಿರಣ್.ಕಲ್ಕೆರೆ ಅವಿನಾಶ್.ಇನ್ನು ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

25/02/2023

*ಮಧುಗಿರಿ ಬ್ರೇಕಿಂಗ್...*

ವಿದ್ಯಾರ್ಥಿನಿಯರ ಮೊಬೈಲ್ ಗೆ ಅಸಭ್ಯ ಸಂದೇಶ ಕಳಿಸುತ್ತಿದ್ದ ಶಿಕ್ಷಕ ಅಮಾನತು.

ಪಿ.ನಾಗಭೂಷಣ್ ಅಮಾನತು ಗೊಂಡ ಶಿಕ್ಷಕ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ಸಹ ಶಿಕ್ಷಕ.

ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ.

ಪರೀಕ್ಷೆಯಲ್ಲಿ ಕಡಿಮೆ‌ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶಿಕ್ಷಕನೇ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದ ಎಂಬ ಆರೋಪ.

ಈ ಆರೋಪದ ವಿಚಾರವಾಗಿ ಕಾರಣ ಕೇಳಿ ಶಿಕ್ಷಕ ಪಿ.ನಾಗಭೂಷಣ್ ಗೆ ನೋಟಿಸ್ ನೀಡಿದ್ದ ಮುಖ್ಯ ಶಿಕ್ಷಕ.

ತನ್ನ ತಪ್ಪನ್ನು ತಿದ್ದಿಕೊಳ್ಳುವುದಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದ ಶಿಕ್ಷಕ ಪಿ.ನಾಗಭೂಷಣ್.

ಶಿಕ್ಷಕರ ಈ ದುರ್ವರ್ತನೆ ವಿದ್ಯಾರ್ಥಿ ಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ಅಮಾನತು ಆದೇಶ.

ಅಮಾನತು ಆದೇಶ ಹೊರಡಿಸಿದ
ಮಧುಗಿರಿ ಡಿ.ಡಿ.ಪಿ.ಐ ಕೆ.ಜಿ.ರಂಗಯ್ಯ.

ವರದಿ:ನಾಗೇಶ್ ಜೀವಾ
ಮಾತೃ ಟಿವಿ ನ್ಯೂಸ್.
ಮಧುಗಿರಿ.

30/10/2022

* #@

29/09/2022

ಕುಡಿಯುವ ನೀರಿನ ತೊಂದರೆಯಿಂದ ಬೇಸೆತ್ತ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮಹಿಳೆಯರಿಂದ ಮುತ್ತಿಗೆ.

29/09/2022

ಸುಮಾರು 7 ಲಕ್ಷ ಮೌಲ್ಯದ ಮಧ್ಯವನ್ನು ನಾಶಪಡಿಸಿದ ಮಧುಗಿರಿಯ ಅಬಕಾರಿ ಇಲಾಖೆ -

29/09/2022

ತಾಲೂಕಿನಲ್ಲಿರುವ ಪ್ರವಾಸಿ ಮಂದಿರಕ್ಕೆ ಇಂದು ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮರೆಡ್ಡಿ ಹಾಗೂ ತಂಡ ಭೇಟಿ ನೀಡಿದ್ದು ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಲೋಕಾಯುಕ್ತರ ಬರುವಿಕೆಗಾಗಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಹಾಸಿನರಾಗಿದ್ದ ಸಭಾಂಗಣದ ಒಳಗಡೆ ಪ್ರವೇಶಿಸಿ ನಾವು ಯಾವುದೇ ತರಹದ ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಬಂದಿಲ್ಲ

23/09/2022
20/09/2022

#@ #@

16/09/2022
16/09/2022

#@@ #

13/09/2022
13/09/2022
13/09/2022

Address

6th Cross Heggnhalli
Bangalore
562091

Telephone

+919742223627

Website

Alerts

Be the first to know and let us send you an email when Mathru TV ಮಾತೃ ಟಿವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Mathru TV ಮಾತೃ ಟಿವಿ:

Videos

Share


Other News & Media Websites in Bangalore

Show All