Kendasampige

Kendasampige ಕೆಂಡಸಂಪಿಗೆ ಎಂಬುದು ಕನ್ನಡ ಅಂತರ್ಜಾಲ ಲೋಕ

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ.

ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ

್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ.

ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ.

ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.

ದುಡಿದಷ್ಟೂ ಖರ್ಚು…: ಶಶಿಭೂಷಣ ರಾಜು ಅಂಕಣಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್ಲಿನ ಹವಾಮಾನ. ತಂಪಿನ ರಾಜ್ಯಗಳಲ್ಲಿ ನೆಲೆಸುವವರಿಗೆ ಹೆಚ್ಚು ಹ...
30/03/2024

ದುಡಿದಷ್ಟೂ ಖರ್ಚು…: ಶಶಿಭೂಷಣ ರಾಜು ಅಂಕಣ

ಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್ಲಿನ ಹವಾಮಾನ. ತಂಪಿನ ರಾಜ್ಯಗಳಲ್ಲಿ ನೆಲೆಸುವವರಿಗೆ ಹೆಚ್ಚು ಹಿಂಸೆ. ಬೇಸಿಗೆಯಲ್ಲಿ ಬಿಸಿ ಹೆಚ್ಚಿದ್ದರೂ ತಾಳಬಹದು, ಆದರೆ ಚಳಿಗಾಲದಲ್ಲಿ ಅತೀ ಹೆಚ್ಚಿನ ಚಳಿ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮ ಸುರಿಯುತ್ತದೆ. ಮನೆಯಲ್ಲಿ, ಕಾರಿನಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಹೀಟರ್ ಇರುವುದರಿಂದ ಪರ್ವಾಗಿಲ್ಲ, ಆದರೆ ಹೊರಗಡೆ ಹೆಚ್ಚಿನ ಸಮಯ ಕಳೆಯುವುದು ಕಷ್ಟ. ಸುಮಾರು ಐದು ತಿಂಗಳು ಚಳಿ ಇರುತ್ತದೆ, ಚಳಿಗಾಲದಲ್ಲಿ ಬಹುತೇಕ ಹೊರಗಿನ ಕಾರ್ಯಕ್ರಮಗಳು ಇರುವುದಿಲ್ಲ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”

ದುಡಿದಷ್ಟೂ ಖರ್ಚು…: ಶಶಿಭೂಷಣ ರಾಜು ಅಂಕಣ ಎಂ.ವಿ. ಶಶಿಭೂಷಣ ರಾಜು |  Mar 30, 2024 | ದಿನದ ಅಗ್ರ ಬರಹ | ಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್.....

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ...
29/03/2024

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ ಕೆಂಡಸಂಪಿಗೆ |  Mar 29, 2024 | ದಿನದ ಅಗ್ರ ಬರಹ | ಪುಣೆಯ ಫಿಲ್ಮ್ ಇನ್‌ಸ್ಟ...

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
29/03/2024

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ ಮಾಲಾ ಮ. ಅಕ್ಕಿಶೆಟ್ಟಿ |  Mar 29, 2024 | ದಿನದ ಕವಿತೆ | ಸಣ್ಣ ದೇವರು ಮೃದು ಕೈಗಳಿಂದ ಸ್ಪರ್ಶಿಸಿದಾ.....

ಟೈಂ ಪಾಸ್‌ ಫ್ರೆಂಡೊಬ್ಬನ ಕತೆ..: ಗುರುಪ್ರಸಾದ ಕುರ್ತಕೋಟಿ ಸರಣಿನಾನು ಎಲ್ಲರ ಜೊತೆಗೆ ಕುಳಿತು ಕೊನೆಯ ಹಂತದ ಕೆಲವು ಕಾರ್ಯಕ್ರಮಗಳನ್ನು ವೀಕ್ಷಿಸು...
28/03/2024

ಟೈಂ ಪಾಸ್‌ ಫ್ರೆಂಡೊಬ್ಬನ ಕತೆ..: ಗುರುಪ್ರಸಾದ ಕುರ್ತಕೋಟಿ ಸರಣಿ

ನಾನು ಎಲ್ಲರ ಜೊತೆಗೆ ಕುಳಿತು ಕೊನೆಯ ಹಂತದ ಕೆಲವು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾಗ, ನಿರ್ಗಮಿಸುತ್ತಿದ್ದ ಹಾಲಿ ಅಧ್ಯಕ್ಷರು ನನ್ನನ್ನು ಹುಡುಕಿಕೊಂಡು ಬಂದು ನನ್ನ ಕಿವಿಯಲ್ಲಿ, ಮುಂದಿನ ವರ್ಷದ ಹೊಸ ಕನ್ನಡ ಸಂಘದ ಸಮಿತಿಯಲ್ಲಿ ನಿಮಗೆ ಸಾಂಸ್ಕೃತಿಕ ತಂಡದ ಜವಾಬ್ದಾರಿ ಕೊಟ್ಟಿದ್ದೇವೆ ಅಂತ ತಿಳಿಸಿದರು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಆಗಿತ್ತು ಈ ಒಂದು ಆಹ್ವಾನ. ಹೆಚ್ಚು ಯೋಚಿಸದೆ ಹೂಂ ಅಂದುಬಿಟ್ಟೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹನ್ನೆರಡನೆಯ ಬರಹ

ಟೈಂ ಪಾಸ್‌ ಫ್ರೆಂಡೊಬ್ಬನ ಕತೆ..: ಗುರುಪ್ರಸಾದ ಕುರ್ತಕೋಟಿ ಗುರುಪ್ರಸಾದ್‌ ಕುರ್ತಕೋಟಿ |  Mar 28, 2024 | ದಿನದ ಅಗ್ರ ಬರಹ | ನಾನು ಎಲ್ಲರ ಜೊತೆಗ....

ಸದಾ ಕಾಯುವ ನೆರಳು: ಚೈತ್ರಾ ಶಿವಯೋಗಿಮಠ ಸರಣಿ“ನನ್ನನ್ನು ತೀವ್ರವಾಗಿ ಅಲುಗಾಡಿಸಿದ್ದು, ನಿಸ್ಸಹಾಯಕವಾಗಿ ನನ್ನ ಕವಿತೆಯಲ್ಲಿ ಧ್ವನಿ ಮಾತ್ರ ನೀಡಲು...
27/03/2024

ಸದಾ ಕಾಯುವ ನೆರಳು: ಚೈತ್ರಾ ಶಿವಯೋಗಿಮಠ ಸರಣಿ

“ನನ್ನನ್ನು ತೀವ್ರವಾಗಿ ಅಲುಗಾಡಿಸಿದ್ದು, ನಿಸ್ಸಹಾಯಕವಾಗಿ ನನ್ನ ಕವಿತೆಯಲ್ಲಿ ಧ್ವನಿ ಮಾತ್ರ ನೀಡಲು ಸಾಧ್ಯವಾಗಿದ್ದು ನಮ್ಮ ನಾಡಿನ ಹೆಂಗಸರ ಅಸಂಖ್ಯ ನೋವು. ತಮ್ಮವರು, ಪರರು ಎನ್ನದೆ ಎಲ್ಲರನ್ನೂ ಪ್ರೀತಿಯಿಂದ ಕಂಡವರು. ಜೀವನೋತ್ಸಾಹದಿಂದ ತುಂಬಿ ತುಳುಕುವ ಇವರು, ಘಟ್ಟಿಗಿತ್ತಿಯರಾದರೂ ಮೃದು ಮನಸ್ಸಿನವರು. ಇವರೆಷ್ಟು ಅಭಾಗ್ಯರೆಂದರೆ, ಇವರು ಹುಟ್ಟಿರುವುದೇ ಇಡೀ ಮನುಕುಲದ ನೋವನ್ನು, ಕಷ್ಟಗಳನ್ನು ಅನುಭವಿಸಲೆಂದೇ ತಿಳಿದವರು.”
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ರೊಸಾಲಿಯಾ ದಿ ಕಾಸ್ತ್ರೋ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ಸದಾ ಕಾಯುವ ನೆರಳು: ಚೈತ್ರಾ ಶಿವಯೋಗಿಮಠ ಸರಣಿ ಚೈತ್ರಾ ಶಿವಯೋಗಿಮಠ |  Mar 27, 2024 | ದಿನದ ಅಗ್ರ ಬರಹ | “ನನ್ನನ್ನು ತೀವ್ರವಾಗಿ ಅಲುಗಾಡಿಸಿದ್ದ...

ಜವಾಬ್ದಾರಿಗಳು ಹೊರೆಯಲ್ಲ..: ಎಸ್. ನಾಗಶ್ರೀ ಅಜಯ್ ಅಂಕಣ“ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ ದೊಡ್ಡಪ್ಪ ಎನ್ನುವ ಆಡಳಿತ ಮಂಡಳಿ, ನಮ್ಮ ವೈಯ...
27/03/2024

ಜವಾಬ್ದಾರಿಗಳು ಹೊರೆಯಲ್ಲ..: ಎಸ್. ನಾಗಶ್ರೀ ಅಜಯ್ ಅಂಕಣ

“ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ ದೊಡ್ಡಪ್ಪ ಎನ್ನುವ ಆಡಳಿತ ಮಂಡಳಿ, ನಮ್ಮ ವೈಯಕ್ತಿಕ ಬದುಕಿನ ಕಷ್ಟಗಳೇ ಹಾಸಿಹೊದ್ದುಕೊಳ್ಳುವಷ್ಟು ಇರುವಾಗ ಈ ಪೀಡೆಗಳಿಗೆ ಪುಸ್ತಕದಲ್ಲಿರೋದನ್ನ ಹೇಳಿಕೊಟ್ಟು ಬಂದರೆ ಆಯ್ತು. ಊರ ಉಸಾಬರಿ ನಮಗ್ಯಾಕೆ? ಬದುಕೋ ದಾರಿ ಹುಡುಕಬೇಕು. ಟ್ಯೂಷನ್ ಮಾಡಿದರೆ, ಪಿಪಿಟಿ, ಸ್ಟಡಿ ಮೆಟೀರಿಯಲ್ ಮಾಡಿ ಮಾರ್ಕೆಟ್‌ಗೆ ಬಿಟ್ಟರೆ ಸಂಪಾದನೆಯಾದರೂ ಆಗತ್ತೆ. ಇವರನ್ನು ತಿದ್ದಿದರೆ ಏನು ಸಿಗತ್ತೆ?” ಎನ್ನುವ ಮನೋಭಾವ ಶಿಕ್ಷಕರಲ್ಲಿ ಹೆಚ್ಚುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

ಜವಾಬ್ದಾರಿಗಳು ಹೊರೆಯಲ್ಲ..: ಎಸ್. ನಾಗಶ್ರೀ ಅಜಯ್ ಅಂಕಣ ಎಸ್. ನಾಗಶ್ರೀ ಅಜಯ್ |  Mar 27, 2024 | ಅಂಕಣ | “ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ...

ಜಂಬೋಸರ್ಕಸ್ ಮತ್ತು ವಸಂತ ಚಂದಿರ: ಸುಮಾವೀಣಾ ಸರಣಿಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ...
27/03/2024

ಜಂಬೋಸರ್ಕಸ್ ಮತ್ತು ವಸಂತ ಚಂದಿರ: ಸುಮಾವೀಣಾ ಸರಣಿ

ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿಯಲ್ಲಿ ಸೇಬನ್ನು ಇಬ್ಭಾಗ ಮಾಡುವ ಪುಟ್ಟ ಹುಡುಗಿಗೆ ಆ ದಿನ ಆಯ ತಪ್ಪಿ ಉದ್ದನೆಯ ಕತ್ತಿ ಹೊಟ್ಟೆಯನ್ನು ತೂರಿ ಬೆನ್ನಿಂದ ಆಚೆ ಬರುತ್ತಿರುವಾಗಲೂ ಇದೂ ಒಂದು ಕಸರತ್ತು ಎಂದು ನೋಡಿದ ಪ್ರೇಕ್ಷಕರು ಇದ್ದರು. ಮರುದಿನ ಶಕ್ತಿ ಪೇಪರಿನಲ್ಲಿ ಆದ ದುರ್ಘಟನೆ ಬಗ್ಗೆ ಸುದ್ದಿ ಓದಿ ಎಷ್ಟೋ ಜನರು ಬೇಸರಿಸಿದ್ದಿದೆ. ಅಂಥ ಘಟನೆ ಆದರೂ ಆ ಸಂದರ್ಭದಲ್ಲಿ ಕಂಪೆನಿ ಅದನ್ನು ಗೌಪ್ಯವಾಗಿರಿಸಿದ್ದು ಆಶ್ಚರ್ಯ. ಆದರೆ ಹಬ್ಬ ಬಂತಲ್ಲ, ಅದರಲ್ಲಿ ವ್ಯಸ್ತವಾದವು….. ಲೋಕದ ರೀತಿನೇ ಹಾಗಲ್ವೆ..
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಜಂಬೋಸರ್ಕಸ್ ಮತ್ತು ವಸಂತ ಚಂದಿರ: ಸುಮಾವೀಣಾ ಸರಣಿ ಸುಮಾವೀಣಾ |  Mar 27, 2024 | ದಿನದ ಅಗ್ರ ಬರಹ | ಅದೇ ದಿನ ಎಷ್ಟೋ ಎತ್ತರದಿಂದ ಉದ್ದನೆಯ ಕತ್ತಿ....

ರೇಡಿಯೋ, ಕ್ರಿಕೆಟ್ಟಾಟ ಮತ್ತು ತಾತ ಕಲಿಸಿದ ಪಾಠ: ಬಸವನಗೌಡ ಹೆಬ್ಬಳಗೆರೆ ಸರಣಿರೇಡಿಯೋವನ್ನು ಮುಟ್ಟಲೂ ಬಿಡದಿದ್ದ ಅಜ್ಜ ಸೈಕಲ್ಲನ್ನೂ ಸಹ ಮುಟ್ಟಲು...
26/03/2024

ರೇಡಿಯೋ, ಕ್ರಿಕೆಟ್ಟಾಟ ಮತ್ತು ತಾತ ಕಲಿಸಿದ ಪಾಠ: ಬಸವನಗೌಡ ಹೆಬ್ಬಳಗೆರೆ ಸರಣಿ

ರೇಡಿಯೋವನ್ನು ಮುಟ್ಟಲೂ ಬಿಡದಿದ್ದ ಅಜ್ಜ ಸೈಕಲ್ಲನ್ನೂ ಸಹ ಮುಟ್ಟಲು ಬಿಡುತ್ತಿರಲಿಲ್ಲ. ಅವರಿಗೆ ಉಳಿತಾಯ ಸ್ವಭಾವ ತುಸು ಜಾಸ್ತೀನೇ ಇತ್ತು! ಹಲ್ಲುಜ್ಜೋಕೆ ಅಂತಾನೆ ತಂದಿದ್ದ ಒಂದು ಕೋಲ್ಗೇಟ್ ಹಲ್ಲುಪುಡಿಯ ಡಬ್ಬಿಯನ್ನು ನಮಗೆ ಸಿಗದಂತೆ ಮೇಲೆ ಇರಿಸಿದ್ದರು. ಹಲ್ಲುಜ್ಜೋಕೆ ಹೋಗುವಾಗ ಹಲ್ಲುಪುಡಿಯನ್ನು ಅವರೇ ಹಾಕುತ್ತಿದ್ದರು! ಆ ಡಬ್ಬಿಗೆ ಚಿಕ್ಕ ರಂಧ್ರ ಮಾಡಿ ಅದರ ಮೂಲಕ ಚೂರೇ ಚೂರು ಹಾಕುತ್ತಿದ್ದರು. ಕೇಳಿದರೆ ಜಪ್ಪಯ್ಯಾ ಅಂದರೂ ಎಕ್ಸ್‌ಟ್ರಾ ಹಾಕುತ್ತಿರಲಿಲ್ಲ. ಅದರಲ್ಲೇ ಬೆರಳುಗಳಿಂದಲೇ ಹಲ್ಲುಜ್ಜಬೇಕಾಗಿತ್ತು. ಒಂದೊಮ್ಮೆ ಇದು ಖಾಲಿಯಾದಾಗ ಮತ್ತೆ ಹೊಸದನ್ನು ತರೋವರೆಗೂ ಕಲ್ಲುಪ್ಪು, ಇದ್ದಿಲ ಪುಡಿಯೇ ಗತಿಯಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ

ರೇಡಿಯೋ, ಕ್ರಿಕೆಟ್ಟಾಟ ಮತ್ತು ತಾತ ಕಲಿಸಿದ ಪಾಠ: ಬಸವನಗೌಡ ಹೆಬ್ಬಳಗೆರೆ ಸರಣಿ ಬಸವನಗೌಡ ಹೆಬ್ಬಳಗೆರೆ |  Mar 26, 2024 | ದಿನದ ಅಗ್ರ ಬರಹ | ರೇಡಿ....

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರ...
26/03/2024

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು, ಮಹಿಳೆಯು ಸಮಾಜದ ಒಂದು ಅಂಗ ಎಂಬುದು ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ಅನೇಕರ ಕಣ್ಣು ತೆರೆಸಲು ಯತ್ನಿಸುತ್ತಲೇ ಬಂದಿದೆ. ಅದಕ್ಕೆ ಪೂರಕವಾಗಿ ಹಬ್ಬು ಸರ್, ಇಲ್ಲಿ ಆಚಾರ್ಯ ಕೃಪಲಾನಿ ಹೇಳಿದ ಹೀಗೊಂದು ಮಾತನ್ನು ನೆನೆಯುತ್ತಾರೆ, ‘ಹಕ್ಕಿಗೆ ಒಂದೇ ರೆಕ್ಕೆಯಿಂದ ಹೇಗೆ ಹಾರಲು ಸಾಧ್ಯವಿಲ್ಲವೋ ಹಾಗೆಯೇ ಮಹಿಳೆಯ ಅಭಿವೃದ್ಧಿಯಾಗದೇ ಇದ್ದಂತಹ ಸಮಾಜ ಕೂಡ ಅಂಥದೊಂದು ಅಂಗವಿಕಲತೆಯಿಂದ ಬಳಲುತ್ತದೆ’ ಈ ಮಾತು ಮಹಿಳೆಯರ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
ಅರುಣಕುಮಾರ ಹಬ್ಬು ಅವರು ಬರೆದ “ಮಹಿಳೆ ಮತ್ತು ಮಾಧ್ಯಮ – ಒಂದು ಅವಲೋಕನ” ಕೃತಿಯ ಕುರಿತು ಸುನಂದಾ ಪ್ರಕಾಶ ಕಡಮೆ ಬರಹ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ ಸುನಂದಾ ಪ್ರಕಾಶ ಕಡಮೆ |  Mar 26, 2024 | ದಿನದ ಪುಸ್ತಕ, ಪುಸ್ತಕ ಸಂಪಿಗೆ | ಇಲ್ಲಿಯ ವ...

ಕೇವಲ ಮನುಷ್ಯ; ಸುಬ್ಬಣ್ಣ ರಂಗನಾಥ ಎಕ್ಕುಂಡಿ: ರಂಜಾನ್ ದರ್ಗಾ ಸರಣಿಮನುಷ್ಯತ್ವಕ್ಕೆ ಸಮಾನಾಗುವ ಮಾರ್ಕ್ಸ್ ಆಗಲಿ, ಮಧ್ವಾಚಾರ್ಯ ಆಗಲಿ ಅವರಿಗೆ ಬೇರ...
25/03/2024

ಕೇವಲ ಮನುಷ್ಯ; ಸುಬ್ಬಣ್ಣ ರಂಗನಾಥ ಎಕ್ಕುಂಡಿ: ರಂಜಾನ್ ದರ್ಗಾ ಸರಣಿ

ಮನುಷ್ಯತ್ವಕ್ಕೆ ಸಮಾನಾಗುವ ಮಾರ್ಕ್ಸ್ ಆಗಲಿ, ಮಧ್ವಾಚಾರ್ಯ ಆಗಲಿ ಅವರಿಗೆ ಬೇರೆಯಾಗಿ ಕಾಣುವುದಿಲ್ಲ. ಅದ್ವೈತವು ಅಂತಿಮ ಸತ್ಯವಾದರೆ ದ್ವೈತವು ದೈನಂದಿನ ವಾಸ್ತವವಾಗಿದೆ. ಅಂತಿಮ ಸತ್ಯಕ್ಕೆ ಶರಣಾಗುವುದು ಕಷ್ಟಕರವಾದುದಲ್ಲ. ಆದರೆ ದೈನಂದಿನ ವಾಸ್ತವದ ಮಧ್ಯೆ ಒಳ್ಳೆಯತನವನ್ನು ಹೆಚ್ಚಿಸುವುದು ಕಷ್ಟದ ಕೆಲಸ. ದೇವರು ಬೇರೆ, ಮನುಷ್ಯರು ಬೇರೆ ಎಂದು ಮಧ್ವಾಚಾರ್ಯರು ಹೇಳಿದರು. ಮಾರ್ಕ್ಸ್ ದೇವರ ಹಂಗಿಲ್ಲದೆ ಮನುಷ್ಯರೊಳಗೆ ಕೇವಲ ಮನುಷ್ಯನನ್ನು ಹುಡುಕುವುದಕ್ಕಾಗಿ ಶ್ರಮಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 73ನೇ ಕಂತು ನಿಮ್ಮ ಓದಿಗೆ

ಕೇವಲ ಮನುಷ್ಯ; ಸುಬ್ಬಣ್ಣ ರಂಗನಾಥ ಎಕ್ಕುಂಡಿ: ರಂಜಾನ್ ದರ್ಗಾ ಸರಣಿ ರಂಜಾನ್ ದರ್ಗಾ |  Mar 25, 2024 | ದಿನದ ಅಗ್ರ ಬರಹ | ಮನುಷ್ಯತ್ವಕ್ಕೆ ಸಮಾನಾ....

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತ...
24/03/2024

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ಎಷ್ಟೋ ಮನೆಗಳವರು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು. ನಿಮ್ಮ ಜನಾಂಗದವರು ಮಾಡುವ ಹಾಗೆ ಊರ ಮುಂದೆ ಒಂದು ಪುಟ್ಟ ಜಾಗ ಗುರುತು ಮಾಡಿಕೊಂಡು ಒಂದು ನಾಲ್ಕು ಮಣ ಸೌದೆ ಸೇರಿಸಿ ಸುಟ್ಟುಹಾಕಿ ಕೈ ತೊಳೆದುಕೊಳ್ಳುವುದೇ ಒಳ್ಳೆಯದಲ್ಲವೇ ಎಂದು ನನಗೆ ಮರುಪ್ರಶ್ನೆ ಮಾಡಿದ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ “ಪಾರ್ಸಿ ಸಂಸ್ಕಾರದ ರೀತಿಯೇ ಶ್ರೇಷ್ಠ” ನಿಮ್ಮ ಓದಿಗೆ

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ಕೆ. ಸತ್ಯನಾರಾಯಣ |  Mar 24, 2024 | ದಿನದ ಅಗ್ರ ಬರಹ | ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶ.....

ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ…ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂ...
23/03/2024

ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ…

ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ನಾಳೆ ಬಿಡುಗಡೆಯಾಗಲಿದ್ದು, ಈ ಕೃತಿಗೆ ಅವರು ಬರೆದ ಮಾತುಗಳು ಹಾಗೂ ಘಟಶ್ರಾದ್ಧ ಚಲನಚಿತ್ರದ ಕುರಿತ ಮಾತುಕತೆಯ ಆಯ್ದ ಭಾಗ ನಿಮ್ಮ ಓದಿಗೆ

ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ… ಕೆಂಡಸಂಪಿಗೆ |  Mar 23, 2024 | ದಿನದ ಅಗ್ರ ಬರಹ | ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊ.....

ಶರತ್ಕಾಲದ ತಂಪೂ, ಸಾಮರಸ್ಯದ ವಾರವೂ: ವಿನತೆ ಶರ್ಮ ಅಂಕಣಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರು...
23/03/2024

ಶರತ್ಕಾಲದ ತಂಪೂ, ಸಾಮರಸ್ಯದ ವಾರವೂ: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ ಶರತ್ಕಾಲದ ಚಿಹ್ನೆಯಾದ ಎಲೆ ಉದುರುವುದು ಶುರುವಾಗಿದೆ. ದಿನದ ಉಷ್ಣಾಂಶ ತಗ್ಗುತ್ತಿದೆ. ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಬೇಸಿಗೆಯ ತೀವ್ರತೆಯಿಂದ ಬಳಲಿದ್ದ ಮೈಮನಗಳಿಗೆ ಈ ತಂಪು ಹಿತವಾಗಿದ್ದು, ಬೆಚ್ಚನೆ ಹೊದಿಕೆಯಲ್ಲಿ ಮೈ ತೂರಿಸಿ ಸುಖವಾಗಿ ನಿದ್ರಿಸುವ ಈ ದಿನಗಳು ಅಪ್ಯಾಯಮಾನವಾಗಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

ಶರತ್ಕಾಲದ ತಂಪೂ, ಸಾಮರಸ್ಯದ ವಾರವೂ: ವಿನತೆ ಶರ್ಮ ಅಂಕಣ ಡಾ. ವಿನತೆ ಶರ್ಮ |  Mar 23, 2024 | ಅಂಕಣ | ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಈಗಾಗಲೇ .....

ಒಲವು ಬಾಂಧವ್ಯಗಳ ಹುಡುಕಾಟದ ಕತೆ: ರಾಮ್ ಪ್ರಕಾಶ್ ರೈ ಕೆ. ಸರಣಿಆತ ‘ಎಲ್ಲವನ್ನೂ ತೆಗೆದುಕೊಂಡೆವು, ಆದರೆ ಬಹು ಅಮೂಲ್ಯವಾದ ವಸ್ತುವೊಂದನ್ನು ಇಲ್ಲೇ...
22/03/2024

ಒಲವು ಬಾಂಧವ್ಯಗಳ ಹುಡುಕಾಟದ ಕತೆ: ರಾಮ್ ಪ್ರಕಾಶ್ ರೈ ಕೆ. ಸರಣಿ

ಆತ ‘ಎಲ್ಲವನ್ನೂ ತೆಗೆದುಕೊಂಡೆವು, ಆದರೆ ಬಹು ಅಮೂಲ್ಯವಾದ ವಸ್ತುವೊಂದನ್ನು ಇಲ್ಲೇ ಬಿಟ್ಟು ಹೋಗಬೇಕಿದೆ’ ಎನ್ನುತ್ತಾನೆ. ಆಗ ಪತ್ನಿ ಏನೆಂದು ಕೇಳುತ್ತಾಳೆ. ‘ಗೋಡೆಯ ಮೇಲೆ ಮಗ ಗೀಚಿದ ಚಿತ್ರ’ ಎನ್ನುತ್ತಾನೆ ಅವನು. ಅದೆಷ್ಟು ಸುಂದರ ಭಾವವಲ್ಲವೇ ಇದು? ಅಂತಹುದೇ ಪ್ರೀತಿ, ಕನಸುಗಳೆಲ್ಲವನ್ನೂ ಮಾತಿಗೆ ಸಿಲುಕಿಸದೆ, ಮನದೊಳಗೆ ಬಿತ್ತಿ, ಮಗನ ಬದುಕಿಗೆ ರಹದಾರಿಯಾಗಿ ಮೌನವಾಗಿ ಬಿಡುವ ಎಲ್ಲಾ ಅಪ್ಪಂದಿರ ತೆರನಾದ ಬದುಕೇ ವೆಂಕೋಬರದ್ದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹೇಮಂತ್‌ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ವಿಶ್ಲೇಷಣೆ

ಒಲವು ಬಾಂಧವ್ಯಗಳ ಹುಡುಕಾಟದ ಕತೆ: ರಾಮ್ ಪ್ರಕಾಶ್ ರೈ ಕೆ. ಸರಣಿ ರಾಮ್ ಪ್ರಕಾಶ್ ರೈ ಕೆ. |  Mar 22, 2024 | ದಿನದ ಅಗ್ರ ಬರಹ | ಆತ ‘ಎಲ್ಲವನ್ನೂ ತೆಗೆ.....

ಸರಣಿ ಕಳ್ಳತನ ತಪ್ಪಿಸಿದ ಅಮ್ಮ…:ಎಚ್. ಗೋಪಾಲಕೃಷ್ಣ ಸರಣಿಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತ...
22/03/2024

ಸರಣಿ ಕಳ್ಳತನ ತಪ್ಪಿಸಿದ ಅಮ್ಮ…:ಎಚ್. ಗೋಪಾಲಕೃಷ್ಣ ಸರಣಿ

ಕಾಲ ಮೇಲೆ ಏನೋ ಬಿದ್ದ ಹಾಗನ್ನಿಸಿತು ಅಂತ ಕಾಲಿನ ಕಡೆ ನೋಡ್ತಾಳೆ. ಇವಳದ್ದೆ ಕಾಸಿನ ಸರ ತುಂಡಾಗಿ ಕಾಲಮೇಲೆ ಕಾಸು ಬಿದ್ದಿದೆ. ಕೂಡಲೇ ಸೆರಗು ಅಡ್ಡ ಹಿಡಿದಳು ಮತ್ತು ಆದಷ್ಟು ಕಾಸು, ಗುಂಡು ಅಲ್ಲೇ ಬೀಳಿಸಿಕೊಂಡಳು. ಇವಳ ಪಾಡು ನೋಡಿ ಯಾರೋ ಬಸ್ಸು ನಿಲ್ಲಿಸಿ ಅಂತ ಕೂಗಿದರು. ಬಸ್ಸು ನಿಲ್ತು. ಇಡೀ ಬಸ್ಸಿನ ಜನ ಸೀಟು ಕೆಳಗೆ ಬಗ್ಗಿ ಬಗ್ಗಿ ಹುಡುಕಿ ಇವಳ ಕಾಸು ಗುಂಡು ಆರಿಸಿ ಇವಳ ಕೈಗೆ ಕೊಟ್ಟರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

ಸರಣಿ ಕಳ್ಳತನ ತಪ್ಪಿಸಿದ ಅಮ್ಮ…:ಎಚ್. ಗೋಪಾಲಕೃಷ್ಣ ಸರಣಿ ಎಚ್. ಗೋಪಾಲಕೃಷ್ಣ |  Mar 22, 2024 | ದಿನದ ಅಗ್ರ ಬರಹ | ಕಾಲ ಮೇಲೆ ಏನೋ ಬಿದ್ದ ಹಾಗನ್ನಿ.....

ಎಲ್ಲ ನಿಮ್ಮ ಲೀಲೆ ತಾಯೇ…: ಸುಧಾ ಆಡುಕಳ ಅಂಕಣನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ...
21/03/2024

ಎಲ್ಲ ನಿಮ್ಮ ಲೀಲೆ ತಾಯೇ…: ಸುಧಾ ಆಡುಕಳ ಅಂಕಣ

ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ನಡೆದ ಮಾರಾಮಾರಿ ಜಗಳದ ಕತೆ. ಇಂದಿಗೂ ಊರತುಂಬಾ ಮೆರವಣಿಗೆ ಹೊರಡುವ ಮಾರಿಯ ಪಲ್ಲಕ್ಕಿ ಸುಬ್ಬಮ್ಮನವರ ಅಂಗಳಕ್ಕೆ ಕಾಲಿಡುವುದಿಲ್ಲ. ಹಾಗೇನಾದರೂ ತಪ್ಪಿ ನಡೆದರೂ ಆ ಮನೆಯ ಹೆಣ್ಮಕ್ಕಳು ದಡಕ್ಕನೆ ಬಾಗಿಲಿಕ್ಕುವುದನ್ನು ಮರೆಯುವುದಿಲ್ಲ. ಆ ದೊಡ್ಡ ಮನೆಯ ಹಿರಿಕಳಾದ ಸುಬ್ಬಮ್ಮನೆಂಬ ಜೀವ ಮನೆಯ ಹೆಣ್ಣುಗಳಿಗೆ ವಿಧಿಸಿದ ನಿಯಮವದು. ಅಸಲಿಗೆ ನಡೆದಿದ್ದು ಇಷ್ಟು ಎಂದು ನೀಲಿಯ ಅಮ್ಮ ತನ್ನಮ್ಮ ತನಗೆ ಹೇಳಿದ ಸಂಗತಿಯನ್ನು ನೀಲಿಗೆ ಕತೆಯಂತೆ ಹೇಳಿದ್ದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಆರನೆಯ ಕಂತು ನಿಮ್ಮ ಓದಿಗೆ

ಎಲ್ಲ ನಿಮ್ಮ ಲೀಲೆ ತಾಯೇ…: ಸುಧಾ ಆಡುಕಳ ಅಂಕಣ ಸುಧಾ ಆಡುಕಳ |  Mar 21, 2024 | ದಿನದ ಅಗ್ರ ಬರಹ | ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾ...

ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ
21/03/2024

ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ

ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ ಕೆಂಡಸಂಪಿಗೆ |  Mar 21, 2024 | ದಿನದ ಕವಿತೆ | ಕೆಂಪುಟೇಪು ಅದು ಕೆಂ…ಪು ಟೇಪು! ಬಸಿದಿಟ್ಟ ಶುದ್ಧ ಪ್ರೀತಿಯಲ....

ಆತಂಕ ಮೂಡಿಸಿದ ಅನಾಥ ಚಪ್ಪಲಿ!: ಶರಣಗೌಡ ಬಿ.ಪಾಟೀಲ ಪ್ರಬಂಧಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅ...
20/03/2024

ಆತಂಕ ಮೂಡಿಸಿದ ಅನಾಥ ಚಪ್ಪಲಿ!: ಶರಣಗೌಡ ಬಿ.ಪಾಟೀಲ ಪ್ರಬಂಧ

ಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅನಾಥ ಚಪ್ಪಲಿ ನೋಡಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ. ಕೆಲಸಕ್ಕೆ ಹೋಗಲೂ ಮನಸ್ಸಾಗುತ್ತಿಲ್ಲ ಅಂತ ಪಂಪಾಪತಿ ಹೇಳಿದಾಗ ಆತನಿಗೋಸ್ಕರ ಇವತ್ತು ನಾವು ಕೆಲಸಾ ಬಿಟ್ಟರೂ ಪರವಾಗಿಲ್ಲ ನಮಗೆ ನಮ್ಮ ಗೆಳೆಯನ ಸುರಕ್ಷತೆ ಮುಖ್ಯ ಅಂತ ದೇವಿಂದ್ರನೂ ದನಿಗೂಡಿಸಿದ. ಇವರ ಮಾತು ರಾಜೇಂದ್ರನಿಗೆ ಯೋಚಿಸುವಂತೆ ಮಾಡಿತು.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಆತಂಕ ಮೂಡಿಸಿದ ಅನಾಥ ಚಪ್ಪಲಿ!: ಶರಣಗೌಡ ಬಿ.ಪಾಟೀಲ ಪ್ರಬಂಧ ಶರಣಗೌಡ ಬಿ ಪಾಟೀಲ, ತಿಳಗೂಳ |  Mar 20, 2024 | ದಿನದ ಅಗ್ರ ಬರಹ | ಮಾರೂತಿ ಮುಂಜಾನೆ ನಡು...

ಅಮ್ಮ ಮತ್ತು ಕಟ್ಟಿಗೆಯ ಒಲೆ: ಮಾರುತಿ ಗೋಪಿಕುಂಟೆ ಸರಣಿಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂ...
19/03/2024

ಅಮ್ಮ ಮತ್ತು ಕಟ್ಟಿಗೆಯ ಒಲೆ: ಮಾರುತಿ ಗೋಪಿಕುಂಟೆ ಸರಣಿ

ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂದೊಂದೆ ಕಟ್ಟಿಗೆಯನ್ನು ಇಡುವುದರಲ್ಲಿ ಏನೊ ಒಂದು ಖುಷಿ ಇರುತ್ತಿತ್ತು. ಬೆಳಗಿನ ಚುಮು ಚುಮು ಚಳಿಗೆ ಒಲೆ ಮುಂದೆ ಕುಳಿತು ಬಿಸಿಕಾಯಿಸುತ್ತಿದ್ದಾಗ ಕಟ್ಟಿಗೆ ಉರಿಯಿಂದ ಬೆರಳು ಸುಟ್ಟುಕೊಂಡಿದ್ದು ಇದೆ. ಎಲ್ಲರೂ ಒಟ್ಟಿಗೆ ಕುಳಿತು ಕಾಫಿ ಕುಡಿದು ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ ದಿನಗಳು ಈಗಲೂ ಕಣ್ಣಲ್ಲಿ ನೀರು ತರಿಸುತ್ತದೆ. ಕಟ್ಟಿಗೆಯ ಒಲೆಯ ಮೇಲೆ ಬೇಯಿಸುತ್ತಿದ್ದ ರಾಗಿ ರೊಟ್ಟಿಯ ಘಮ ಮರೆಯಲಾಗದಂತಹದು. ಹಬ್ಬಗಳಲ್ಲಿ ಅಡುಗೆ ಮಾಡುವಾಗ ಕಟ್ಟಿಗೆಯನ್ನು ಇಡುವ ಕೆಲಸ ನನ್ನದೆ ಆಗಿರುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

ಅಮ್ಮ ಮತ್ತು ಕಟ್ಟಿಗೆಯ ಒಲೆ: ಮಾರುತಿ ಗೋಪಿಕುಂಟೆ ಸರಣಿ ಮಾರುತಿ ಗೋಪಿಕುಂಟೆ |  Mar 19, 2024 | ಸರಣಿ | ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡು.....

ಪ್ರವಾಸಗಳೆಂಬ ಜವಾಬ್ದಾರಿ ಮತ್ತು ಮಕ್ಕಳು: ಅನುಸೂಯ ಯತೀಶ್ ಸರಣಿನಾನೂ ಹೊರಡಲು ಸಿದ್ಧಳಾದಾಗ ನನ್ನ ಕೈಯನ್ನು ಮೃದುವಾಗಿ ಹಿಡಿದುಕೊಂಡ. ಪುಟ್ಟ ಹಸುಳ...
19/03/2024

ಪ್ರವಾಸಗಳೆಂಬ ಜವಾಬ್ದಾರಿ ಮತ್ತು ಮಕ್ಕಳು: ಅನುಸೂಯ ಯತೀಶ್ ಸರಣಿ

ನಾನೂ ಹೊರಡಲು ಸಿದ್ಧಳಾದಾಗ ನನ್ನ ಕೈಯನ್ನು ಮೃದುವಾಗಿ ಹಿಡಿದುಕೊಂಡ. ಪುಟ್ಟ ಹಸುಳೆ ತನ್ನ ತಾಯಿಯ ಬೆರಳು ಹಿಡಿದಂತ ಅನುಭವವಾಯಿತು. ನಾನು ಮುಖ್ಯ ಶಿಕ್ಷಕರನ್ನು ಸರ್, ನನಗೇಕೋ ಬರಲು ಮನಸ್ಸಿಲ್ಲ. ನೀವೆಲ್ಲ ಹೋಗಿ ಬನ್ನಿ ನಾನು ಸಂಜೆವರೆಗೂ ಇಲ್ಲೇ ಇವನೊಂದಿಗೆ ಇದ್ದು ಮನೆಗೆ ಹೋಗುವೆ ಎಂದೆ. ಶಿಕ್ಷಕರು ಆಗಲ್ಲ ಮೇಡಂ. ಹೆಣ್ಣು ಮಕ್ಕಳು ಪ್ರವಾಸ ಬರುತ್ತಿರುವುದರಿಂದ ಮಹಿಳಾ ಶಿಕ್ಷಕಿ ಬರಲೇಬೇಕು ಇಲ್ಲದಿದ್ದರೆ ಪೋಷಕರ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾಗುತ್ತದೆ. ನಾವೆಲ್ಲ ಬೇರೆಯವರ ಬಾಯಿಗೆ ಎಲೆ ಅಡಿಕೆ ಆಗುವುದು ಬೇಡ. ಜೊತೆಗೆ ಜವಾಬ್ದಾರಿಯು ಅಷ್ಟೇ ಇದೆ… ಬನ್ನಿ ಅವನು ಹುಷಾರಾಗುತ್ತಾನೆ ಎನ್ನುತ್ತಾ ಹೊರ ನಡೆದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಪ್ರವಾಸಗಳೆಂಬ ಜವಾಬ್ದಾರಿ ಮತ್ತು ಮಕ್ಕಳು: ಅನುಸೂಯ ಯತೀಶ್ ಸರಣಿ ಅನುಸೂಯ ಯತೀಶ್ |  Mar 19, 2024 | ದಿನದ ಅಗ್ರ ಬರಹ | ನಾನೂ ಹೊರಡಲು ಸಿದ್ಧಳಾದಾ.....

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು....
18/03/2024

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ

ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಕವಿ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರವರ (ANNA SWIRSZCZYNSKA, 1909–1984) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಮೌನ ದಂಗೆಯ ಕವಿತೆಗಳು…: ಎಸ್. ಜಯಶ್ರೀನಿವಾಸ ರಾವ್ ಸರಣಿ ಎಸ್. ಜಯಶ್ರೀನಿವಾಸ ರಾವ್ |  Mar 18, 2024 | ದಿನದ ಅಗ್ರ ಬರಹ | ಎರಡನೆಯ ವಿಶ್ವಯುದ್ಧದ ಸ.....

ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗ...
17/03/2024

ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ

ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ಮಾಮೂಲಿನ ಕ್ಷೇಮ ಸಮಾಚಾರ, ಉಭಯ ಕುಶಲೋಪರಿ, ಅಳಿಯಂದಿರಿಗೆ ಮೊಮ್ಮಕ್ಕಳಿಗೆ ಆಶೀರ್ವಾದದ ಜೊತೆಗೆ ಪತ್ರ ಮುಗಿಯುತಿದ್ದರೆ ಬಾಗಿದೊಡ್ಡನಿಗೆ ಬರೆಯಲು ಬಾಕಿ ಇನ್ನೊಂದಷ್ಟು ವಿಚಾರಗಳು ಇರುತ್ತಿದ್ದವು. ಮೊಮ್ಮಗನ ಸುದ್ದಿಸೊಲಕ ಮೊಲೆ ಹಾಲು ತಿನ್ನುವ ಮೊಮ್ಮಗಳಿಗೆ ಅಮಾವಾಸ್ಯೆ ಹುಣ್ಣಿಮೆಗೆ ಕೊಡಬೇಕಾದ ಮನೆ ಔಷಧಿಯ ಪಟ್ಟಿ. ಮೊಮ್ಮಕ್ಕಳಿಬ್ಬರೂ ಲೂಟಿ ಮಾಡಿಕೊಳ್ಳದ ಹಾಗೆ ವಸಂತಿ ಮಕ್ಕಳನ್ನು ಸಂಭಾಳಿಸುತ್ತಾಳೆಯೇ ಎನ್ನುವ ವಿವರ.
ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ “ಕತೆ ಕತೆ ಕಾರಣ” ನಿಮ್ಮ ಓದಿಗೆ

ದೇವಿಕಾ ನಾಗೇಶ್‌ ಬರೆದ ಈ ಭಾನುವಾರದ ಕತೆ ದೇವಿಕಾ ನಾಗೇಶ್ |  Mar 17, 2024 | ದಿನದ ಅಗ್ರ ಬರಹ | ಸಬಿತ ಚಿಕ್ಕಿಗೆ ಬರೆಯುವ ಪತ್ರದಲ್ಲಿ ಪದ್ದಜ್ಜನ ....

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟ...
16/03/2024

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ದ್ವೀಪ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ ಕೆಂಡಸಂಪಿಗೆ |  Mar 16, 2024 | ದಿನದ ಅಗ್ರ ಬರಹ | ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್.....

ಕಾನೂನು ಮತ್ತು ಕಾಗದದ ಗಂಡ-ಹೆಂಡತಿ: ಎಂ.ವಿ. ಶಶಿಭೂಷಣ ರಾಜುಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನ...
16/03/2024

ಕಾನೂನು ಮತ್ತು ಕಾಗದದ ಗಂಡ-ಹೆಂಡತಿ: ಎಂ.ವಿ. ಶಶಿಭೂಷಣ ರಾಜು

ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕಥೆ ಇದೆ. ಅಮೇರಿಕಾಗೆ ತುಂಬಾ ಹಿಂದೆ ಬಂದು ಈಗ ನಾಗರೀಕನಾಗಿರುವ ಹುಡುಗ ಮೆಕ್ಸಿಕೋಗೆ ಬಂದು ಅಕ್ಕನನ್ನು ಮದುವೆಯಾಗಿ ಅಮೇರಿಕಾಗೆ ಕರೆತರುತ್ತಾನೆ. ಅಕ್ಕನಿಗೆ ಅವನ ಮೂಲಕ ಒಂದು ವರುಷದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗುತ್ತದೆ . ಅದಾದನಂತರ ಅವ ಅಕ್ಕನಿಗೆ ವಿಚ್ಚೇದನ ನೀಡುತ್ತಾನೆ. ಮತ್ತೆ ಮೆಕ್ಸಿಕೋಗೆ ಹಿಂತಿರುಗಿ ತಂಗಿಯನ್ನು ಮದುವೆಯಾಗಿ ಕರೆತರುತ್ತಾನೆ. ತಂಗಿಗೆ ಗ್ರೀನ್ ಕಾರ್ಡ್ ಸಿಕ್ಕಿದಮೇಲೆ, ಅವಳಿಗೆ ವಿಚ್ಚೇದನ ಕೊಟ್ಟು ಮತ್ತೆ ಅಕ್ಕನನ್ನು ಮದುವೆ ಆಗುತ್ತಾನೆ.
ಎಂ.ವಿ. ಶಶಿಭೂಷಣ ರಾಜು ಬರೆಯುವ “ಅನೇಕ ಅಮೆರಿಕಾ” ಅಂಕಣ

ಕಾನೂನು ಮತ್ತು ಕಾಗದದ ಗಂಡ-ಹೆಂಡತಿ: ಎಂ.ವಿ. ಶಶಿಭೂಷಣ ರಾಜು ಎಂ.ವಿ. ಶಶಿಭೂಷಣ ರಾಜು |  Mar 16, 2024 | ಅಂಕಣ | ಅವಳ ಅಮೇರಿಕೆಗೆ ಬರುವ ಹಿಂದೆ ಒಂದು ಕ....

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ...
15/03/2024

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ

ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು. ತಪ್ಪಿಲ್ಲದೆ ಬರೆಯಲು, ಬರೆದುದನ್ನು ಓದಲು ಕೈಬರಹ ಅನಿವಾರ್ಯವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನಾರನೆಯ ಕಂತಿನಲ್ಲಿ ಕೈ ಬರಹದ ಕುರಿತ ಬರಹ ನಿಮ್ಮ ಓದಿಗೆ

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ ಡಾ. ಚಂದ್ರಮತಿ ಸೋಂದಾ |  Mar 15, 2024 | ದಿನದ ಅಗ್ರ ಬರಹ | ಶಾಲೆಯ ಪಠ್ಯದ ಭಾಗವಾಗಿ ಪತ್ರಲೇ...

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
15/03/2024

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ ಕೆಂಡಸಂಪಿಗೆ |  Mar 15, 2024 | ದಿನದ ಕವಿತೆ | ಛೇದನೋಟ ಅಸ್ತಿತ್ವದ ಕುರಿತ ಊಹಾಪೋಹಗಳಿಗೆ ಕಿವಿಗೊಡದೆ ನನ್ನನ...

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲ...
14/03/2024

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಅದರ ಮುಂದೆ ಒಂದಿಷ್ಟು ಹುಲ್ಲು ತಿನ್ನಲು ಕೊಟ್ಟರು. ಅವತ್ತು ಆಗಮಿಸಿದ್ದ ಒಬ್ಬೊಬ್ಬರಿಗೆ ಕರೆದು ಕುರಿಯ ಹಾಲು ಹಿಂಡಿ ಅಂತ ಹೇಳಿದಳು. ಎಲ್ಲರೂ ತಮಗೆ ತಿಳಿದ ರೀತಿಯಲ್ಲಿ ಹಿಂಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದರೆ ಕುರಿ ಎಷ್ಟು ಒದ್ದಾಡುತ್ತಿತ್ತೋ ಅಂತ ಬೇಜಾರಾಯ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹನ್ನೊಂದನೆಯ ಬರಹ

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ ಗುರುಪ್ರಸಾದ್‌ ಕುರ್ತಕೋಟಿ |  Mar 14, 2024 | ದಿನದ ಅಗ್ರ ಬರಹ | ಎಲ್ಲ ಅಡ್ಡಾಡಿ .....

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗ...
13/03/2024

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹ

ಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗಳು, ಮುಂದಾಳುಗಳು ಹಾಗೂ ಇನ್ನಿತರರು ಮಾಧ್ಯಮಗಳ ನಡುವೆ ಅಸೂಯೆ, ವೈಮನಸ್ಸು, ಅಹಂಕಾರ ಇರುತ್ತದೆ; ಆದರೆ ಬಂಡವಾಳಶಾಹಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ದಂಧೆಕೋರರು, ಭಯೋತ್ಪಾದಕರು, ಉಗ್ರಗಾಮಿಗಳು, ಆಯಕಟ್ಟಿನ ಜಾಗಗಳಲ್ಲಿ ಆಡಳಿತ ನಡೆಸುವ ಭ್ರಷ್ಟಾಚಾರಿಗಳ ನಡುವೆ ತುಂಬಾ ದೊಡ್ಡ ಸಾಮರಸ್ಯವಿದೆ: ಸಹಕಾರವಿದೆ. ಸಮಾಜ ಇನ್ನೂ ಬಹಳ ದೊಡ್ಡ ವೈರುಧ್ಯದಿಂದ ಕೂಡಿರಲು ಇದೂ ಒಂದು ಕಾರಣವಾಗಿದೆ.
ಗೋಳೂರ ನಾರಾಯಣಸ್ವಾಮಿ ಬರಹ ನಿಮ್ಮ ಓದಿಗೆ

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹ ಗೋಳೂರ ನಾರಾಯಣಸ್ವಾಮಿ |  Mar 13, 2024 | ದಿನದ ಅಗ್ರ ಬರಹ | ಇಂದು ಸಮಾಜದಲ್ಲಿ ನಡೆಯುತ್ತಿರ.....

“ಹಾದಿಖರ್ಚಿಗೆ ನಿನ್ನ ಮುದ್ದಿರಲಿ ಸಾಕು”: ಎಸ್ ನಾಗಶ್ರೀ ಅಜಯ್ ಅಂಕಣನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ,...
13/03/2024

“ಹಾದಿಖರ್ಚಿಗೆ ನಿನ್ನ ಮುದ್ದಿರಲಿ ಸಾಕು”: ಎಸ್ ನಾಗಶ್ರೀ ಅಜಯ್ ಅಂಕಣ

ನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ, ಸಮಯಸಾಧಕಿ, ಅವಕಾಶವಾದಿಯೇ ಆಗಿರಬೇಕೆಂಬ ಮೌಢ್ಯ ಉಸಿರುಗಟ್ಟಿಸುತ್ತದೆ. ನಮ್ಮ ಧಾರಾವಾಹಿಗಳಂತೂ ನಾಯಕಿಗಿಂತ ಸುಂದರಿಯಾದ ಲೇಡಿ ವಿಲನ್‌ಗಳನ್ನು ತೋರಿಸಿ ಜನರ ಮೌಢ್ಯಕ್ಕೆ ಪುಷ್ಟಿ ನೀಡುತ್ತವೆ. ದೇವರು ಕೊಟ್ಟ ರೂಪ. ಅದರಲ್ಲಿ ಅವರದ್ದೇನು ತಪ್ಪು? ಎಂದು ನೋಡಲು ಸುಮಾರಾಗಿರುವವರ ಪರ ವಹಿಸುವ ಸಮಾಜವೇ, ಚೆಂದ ಇರುವವರನ್ನು “ದೇವರು ಕೊಟ್ಟ ರೂಪ. ಅವರನ್ನೇಕೆ ಶಿಕ್ಷಿಸಬೇಕು?” ಎಂದು ಯೋಚಿಸುವುದಿಲ್ಲ. ಪ್ರತಿ ಬಾರಿಯೂ ಪ್ರತಿ ಸಾಧನೆಯನ್ನೂ ತನ್ನ ಯೋಗ್ಯತೆಯಿಂದಲೇ ಸಾಧಿಸಿದ್ದು ಎಂದು ಋಜುವಾತು ಮಾಡಿಕೊಂಡು ಓಡಾಡಬೇಕಾದ ಶಿಕ್ಷೆಯನ್ನು ಸುಂದರಿಯರು ಭರಿಸಬೇಕು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

“ಹಾದಿಖರ್ಚಿಗೆ ನಿನ್ನ ಮುದ್ದಿರಲಿ ಸಾಕು”: ಎಸ್ ನಾಗಶ್ರೀ ಅಜಯ್ ಅಂಕಣ ಎಸ್. ನಾಗಶ್ರೀ ಅಜಯ್ |  Mar 13, 2024 | ದಿನದ ಅಗ್ರ ಬರಹ | ನೋಡಲು ಸುಂದರವಾಗ...

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ...
12/03/2024

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ

ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು. ಅದರಿಂದ ಯಾರಿಗಾದರೂ ತೊಂದರೆಯಾಗಬಹುದು, ನೋವಾಗಬಹುದೆಂದೂ ಲೆಕ್ಕಿಸಲಾರೆವು. ತಿಳಿದೂ ತಡೆಯಲಾರೆವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ ಆಶಾ ಜಗದೀಶ್ |  Mar 12, 2024 | ದಿನದ ಅಗ್ರ ಬರಹ | ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವ....

Address

Bangalore

Alerts

Be the first to know and let us send you an email when Kendasampige posts news and promotions. Your email address will not be used for any other purpose, and you can unsubscribe at any time.

Contact The Business

Send a message to Kendasampige:

Share


Other News & Media Websites in Bangalore

Show All