News star Kannada

News star Kannada ರಾಜಕೀಯ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಆರೋಗ್ಯ ಮತ್ತು ಇನ್ನೂ ಹೆಚ್ಚಿನವುಗಳ ಇತ್ತೀಚಿನ ಸುದ್ದಿಗಳಿಗಾಗಿ A Small Mirror Of Karnataka. Culture

15/12/2024

ನಮ್ಮ ಮೆಟ್ರೋ ರೈಲ್ ನಲ್ಲೂ ಭಿಕ್ಷಾಟನೆ

ಅಂಗವಿಕಲನೊಬ್ಬ ಮೆಟ್ರೋ ಟ್ರೈನ್ ಒಳಗೆಯೇ ಭಿಕ್ಷಾಟನೆ..

ಟ್ರೈನ್ ನಲ್ಲಿ ಪ್ರಯಾಣ ಮಾಡಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೇಟ್ ಪಡೆದಿರೋ ಭಿಕ್ಷುಕ..

ಚಲಘಟ್ಟ ಟು ವೈಟ್ ಫ್ಲೀಡ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದಿರೋ ವ್ಯಕ್ತಿ..

ಪ್ರಯಾಣಿಕರ ಬಳಿ ತನ್ನ ದೈಹಿಕ ಹೂನವನ್ನ ತೋರಿಸಿಕೊಂಡು ಭಿಕ್ಷಾಟನೆ..

ನಮ್ಮ ಮೆಟ್ರೋದಲ್ಲಿ ಭಿಕ್ಷುಕನ ಕಂಡು ಪ್ರಯಾಣಿಕರು ದಂಗು..

ನಮ್ಮ ಮೆಟ್ರೊದಲ್ಲೂ ಭಿಕ್ಷೆ ಬೇಡೊದಕ್ಕೆ ಶುರು ಮಾಡಿಕೊಂಡು ಬಿಟ್ರಾ ಇವ್ರು ಅನ್ನೋ ಮಾತುಗಳು..

15/12/2024

ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ ಲಾಂಗ್ ತೋರಿಸಿ ಎಸ್ಕೇಪ್ ಆದ ಮೊಬೈಲ್ ಕಳ್ಳರು

ಬೈಕ್ ನಲ್ಲಿ ಮೊಬೈಲ್ ಕಸಿದು ಎಸ್ಕೇಪ್ ಆಕ್ತಿದ್ದ ಕಳ್ಳರು

ಈ ವೇಳೆ ಸ್ಕಾರ್ಪಿಯೋ ನಲ್ಲಿ ಚೇಸ್ ಮಾಡಿ ಬೈಕ್ ಗೆ ಗುದ್ದಿದ ಮಾಜಿ ಕಾರ್ಪೋರೇಟರ್ ಗಣೇಶ್ ರೆಡ್ಡಿ

ಬೆಳಗಿನ ಜಾವ 5 ರ ವೇಳೆ ಜಿಮ್ ಗೆ ಹೆಚ್ ಬಿಆರ್ ಲೇಔಟ್ ನಲ್ಲಿ ತೆರಳ್ತಿದ್ದ ವೇಳೆ ಘಟನೆ

ಮೊಬೈಲ್ ಕಳೆದುಕೊಂಡಿದ್ದವರ ಕಾರಿನಲ್ಲಿ ಕೂರಿಸಿಕೊಂಡು ಚೇಸ್ ಮಾಡಿದ್ದ ಗಣೇಶ್

ಬೈಕ್ ನಲ್ಲಿ ಬೀಳ್ತಿದ್ದಂತೆ ಓಡಿ, ಬಳಿಕ ಲಾಂಗ್ ಹಿಡಿದು ಬಂದು ಬೆದರಿಕೆ

ಲಾಂಗ್ ತೋರಿಸಿ ಬೆದರಿಸಿ, ಮೊಬೈಲ್ ಎಸೆದು ಬೈಕ್ ನಲ್ಲಿ ಎಸ್ಕೇಪ್ ಆದ ಮೊಬೈಲ್ ಕಳ್ಳರು

ಮೊಬೈಲ್ ಕಳ್ಳರ ಚೇಸ್ ಮಾಡಿ, ಬೀಳಿಸಿ, ಲಾಂಗ್ ತೋರಿಸಿ ಬೆದರಿಸುವ ವಿಡಿಯೋ ಸೆರೆ

ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುವ ದೃಶ್ಯ

ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಇದುವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ

15/12/2024

ಜಾಮೀಯ ಮಸೀದಿ ವೃತ್ತದಲ್ಲಿ ಹೈಡ್ರಾಮ ಮಾಲಾಧಾರಿಗಳ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಮಸೀದಿ ಸುತ್ತಲೂ 10 ಅಡಿ ಎತ್ತರದ ಜಾಲರಿ ಹಾಕಿ ಮಸೀದಿಗೆ ಭದ್ರತೆ....

15/12/2024

ಪಕ್ಷವನ್ನು ಎಷ್ಟೋ ವರ್ಷಗಳಿಂದ ಕಟ್ಟಿ ಬೆಳೆಸಿದ ನಾಯಕರು ಯಡಿಯೂರಪ್ಪ ನವರ ಅವರ ವಿರುದ್ಧ ಮಾತನಾಡುತ್ತಿರುವುದು ತಪ್ಪು ಎಂದು ಹೇಳುಲು ಈ ಸಭೆ :-ಮಾಜಿ ಶಾಸಕ ಸೋಮಶೇಖರ್ ರೆಡ್ಡಿ

15/12/2024

ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಆರಂಭ ನಿಮಿಷಾಂಭ ದೇಗುಲದ ಬಳಿ ಹನುಮ ದೇಗಲದ ಬಳಿ ಯಾತ್ರೆ ಗೆ ಚಾಲನೆ....

15/12/2024

ನೀರಾವರಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ ಆದರೆ ಬಿಜೆಪಿ ರಾಜಕೀಯದಲ್ಲಿ ಆಸಕ್ತಿ ಹೊಂದಿದೆ ಅವರಲ್ಲಿ ಒಗ್ಗಟ್ಟು ಇಲ್ಲ, ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಸಿದ್ಧರಿಲ್ಲ :- ಡಿಸಿಎಂ ಡಿಕೆ ಶಿವಕುಮಾರ್

15/12/2024

ಇನ್ನೊಂದು ವಾರ ತಡೆಯಿರಿ ಎಂದು ಕಾಂಗ್ರೆಸ್ ಸರ್ಕಾರದ ಹಗರಣ ಬಯಲು ಮಾಡ್ತೀನಿ :-ಶಾಸಕ ಯತ್ನಾಳ್

ಬಿಜೆಪಿಯವರು ಏನೇನು ಅವ್ಯವಹಾರ ಮಾಡಿದ್ದಾರೆ ಅಂತ ನಿಮ್ಮ ತಲೆಗೆ ಇದೆ ತನಿಖೆ ಮಾಡ್ರಿ 40ಪರ್ಸೆಂಟ್ ಅಂದ್ರಿ ಎಲ್ಲಿ ಹೋಯಿತು ನಿಮ್ಮದು 90ಪರ್ಸೆಂಟ್ ಆಗಿದೆ ಕಸವಿಲೇವಾರಿದು 30ಸಾವಿರ ಕೋಟಿ ಹಗರಣವಿದೆ,ಎಲ್ಲಾ ದಾಖಲೆಗಳಿವೆ.

14/12/2024

ರಾಯಸಂದ್ರ ಗ್ರಾಮದ ಮುಖ್ಯರಸ್ತೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ.ಶಿವಣ್ಣನವರು

ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಾಂತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಸಂದ್ರ ಮುಖ್ಯ ರಸ್ತೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ.ಶಿವಣ್ಣನವರು ಮತ್ತು ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೂಡಸಂದ್ರ ಎಸ್. ಮದನ್ ರವರು.

ಇನ್ನು ಕಾರ್ಯಕ್ರಮದಲ್ಲಿ ಶಾಂತಿಪುರ ಗ್ರಾಮ ಪಂಚಾಯತಿ ಸದಸ್ಯರಾದ ಬಾಬುರೆಡ್ಡಿ. ವೆಂಕಟೇಶ್. ಗೋವಿಂದರಾಜು. ರವಿಚಂದ್ರ. ಮಧುಸೂದನ್. ಸುವರ್ಣ. ನಾಗರತ್ನಮ್ಮ. ಮುಖಂಡರಾದ ಅಶೋಕ್ ರೆಡ್ಡಿ. ಶಂಕರಪ್ಪ. ಪಾರಿಜಾತ ದೊರೆಸ್ವಾಮಿ. ವಿನೋದ್ ರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

14/12/2024

ಶ್ರೀ ಪಂಚಮುಖಿ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸಂಭ್ರಮದಿAದ ನಡೆದ ಹನುಮ ಜಯಂತಿ ಕಾರ್ಯಕ್ರಮ

ಆನೇಕಲ್ ತಾಲ್ಲೂಕಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಸಬ್‌ಮಂಗಲ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಪಂಚಮುಖಿ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮವು ಅಪಾರ ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.

ಇನ್ನು ವಿಶೇಷವಾಗಿ ಶ್ರೀ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ಆನೆ ಅಂಬಾರಿ ಮೇಲೆ ಕೂರಿಸಿ ಸಬ್ ಮಂಗಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಳ್ಳರಿಸಿ ಮೆರವಣಿಗೆ ನಡೆಸಲಾಯಿತು.

ಇನ್ನು ವಿಶೇಷವಾಗಿ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸ್ವಾಮಿಗೆ ಹಾಗೂ ದೇವಾಲಯಕ್ಕೆ ಹೂವಿನ ಅಲಂಕಾರ ಮತ್ತು ಹೋಮ. ಮಹಾ ಮಂಗಳಾರತಿ. ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು. ಹಾಗೆಯೇ ಹಲವು ಕಲಾತಂಡಗಳು ಬಾಗವಹಿಸಿದ್ದವು. ಇನ್ನು ಕಾರ್ಯಕ್ರಮದಲ್ಲಿ ಡಾ|| ಮಹರ್ಷಿ ಆನಂದಗುರೂಜಿ. ಶಾಸಕ ವೈ.ಪ್ರಕಾಶ್. ಮುಖಂಡರಾದ ಪಾರ್ಥಪ್ಪ, ವೀರಭದ್ರಪ್ಪ. ಆದ್ಯಾತ್ಮಿಕ ಚಿಂತಕರಾದ ಲಷ್ಮೀ ನಾರಾಯಣಾಚಾರ್ಯ, ಮುಖಂಡರಾದ ಕೋದಂಡರಾಮ್ ಹಾಗೂ ಶ್ರೀ ಮಾರುತಿ ಸೇವಾ ಸಮತಿ ಪದಾದಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತು ಭಕ್ತರು ಬಾಗವಹಿಸಿದ್ದರು.

12/12/2024

ಆನೇಕಲ್ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಜಗದೀಶ್ ಬೇಟಿ ನೀಡಿ ಸರ್ಕಾರಿ ಸ್ಥಳಗಳ ವಿಚಾರದಲ್ಲಿ ಎಚ್ಚೆತ್ತುಕೊಳ್ಳುವಂತೆ ತಾಲ್ಲೂಕು ಕಚೇರಿ ಅಧಿಕಾರಿಗಳಿ ಸೂಚನೆ

12/12/2024

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ

12/12/2024

ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಅಂಬೇಡ್ಕರ್ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟನೆ

12/12/2024

ಇಲ್ಲಿಯ ರೈತರಿಗೆ ಪರಿಹಾರ ನೀಡಿಲ್ಲ, ಇಲ್ಲಿನ ಸಂತ್ರಸ್ಥರು ಬೀದಿಯಲ್ಲಿದ್ದಾರೆ ಇಲ್ಲಿಯವರಿಗೆ ಬಿಟ್ಟು ಅಲ್ಲಿಯವರಿಗೆ ಸಹಾಯ ರಾಜಕೀಯ ಗುಲಾಮಗಿರಿ ಸಂಕೇತ :-ಮಾಜಿ ಸಚಿವ ಸಿ.ಟಿ.ರವಿ

11/12/2024

ಹೊಸೂರು ಸಮೀಪದ ಶಾನಮಾವು ಅರಣ್ಯದಲ್ಲಿ 35ಕ್ಕೂ ಹೆಚ್ಚು ಆನೆಗಳು

ಹೊಸೂರು ಸಮೀಪದ ಶಾನಮಾವು ಅರಣ್ಯದಲ್ಲಿ 35ಕ್ಕೂ ಹೆಚ್ಚು ಆನೆಗಳು ಎರಡು ಗುಂಪುಗಳಾಗಿ ಒಡೆದು ಬೀಡು ಬಿಟ್ಟಿವೆ ಗ್ರಾಮಸ್ಥರು ಪ್ರದೇಶಕ್ಕೆ ಬಾರದಂತೆ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಇಂದು ಬೆಳಗ್ಗೆ 20 ಆನೆಗಳ ಗುಂಪನ್ನು ಅರಣ್ಯ ಇಲಾಖೆಯವರು ಶಿವನಂಜುAಡೇಶ್ವರ ಬೆಟ್ಟಗಳ ಮೂಲಕ ಡೆಂಕಣಿಕೋಟೆ ಅರಣ್ಯಕ್ಕೆ ಓಡಿಸುತ್ತಿದ್ದಾರೆ. ಕೆಲಮಂಗಲ ಸಮೀಪದ ಜಖೇರಿ ಪಂಚಾಯಿತಿ ವ್ಯಾಪ್ತಿಯ ಒನ್ನುಕುರುಕಿ ಬಳಿಯ ಕಲು ಕ್ವಾರಿ ಪ್ರದೇಶದಲ್ಲಿ 15 ಆನೆಗಳ ಗುಂಪು ಕೂಡ ಬೀಡುಬಿಟ್ಟಿದೆ. ಆನೆಗಳು ಗ್ರಾಮಕ್ಕೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರಣ್ಯ ಇಲಾಖೆ ಆನೆಗಳ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿದೆ. ಹೀಗಾಗಿ ಹೊಸೂರು 35 ಆನೆಗಳು ಎರಡು ಗುಂಪುಗಳು ಬೀಡು ಬಿಟ್ಟಿದ್ದು, ಈ ಭಾಗದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ

11/12/2024

ಹೊಸೂರಿನ ನೆಲಗಾನಕೊತ್ತಪಲ್ಲಿ ಬಳಿ ರೈತರ ಜಮೀನಿನಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗ

ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ನೆಲಗಾನಕೊತ್ತಪಲ್ಲಿಯಲ್ಲಿ ಒಂಟಿಸಲಗ ಪ್ರತ್ಯಕ್ಷ್ಯವಾಗಿ ಗ್ರಾಮಸ್ಥರ ಅತಂಕಕ್ಕೆ ಕಾರಣವಾಗಿತ್ತು. ಜಮೀನಿನಲ್ಲಿ ಒಂಟಿ ಸಲಗವನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿಗಳನ್ನ ಸಿಡಿಸಿ ಕಾಡಾನೆಯನ್ನು ಮತ್ತೆ ಅರಣ್ಯಕ್ಕೆ ಕಳುಹಿಸಲು ಕಾರ್ಯಾಚರಣೆ ಶುರು ಮಾಡಿದರು

10/12/2024

ಎಸ್.ಎಂ.ಕೃಷ್ಣ ಅವರ ನಿಧನ ನನಗೆ ವೈಯಕ್ತಿಕವಾಗಿ ನೋವು ತಂದಿದೆ. ಅವರು ಅಜಾತಶತ್ರುವಾಗಿದ್ದರು

ಕೃಷ್ಣ ಅವರು ಅತ್ಯಂತ ವಿದ್ಯಾವಂತರು, ಸುಶಿಕ್ಷಿತರು ಮತ್ತು ಅಜಾತಶತ್ರು ರಾಜ್ಯದ ಇತಿಹಾಸದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಕೃಷ್ಣ ಅವರೊಂದಿಗಿನ ನೆನಪುಗಳನ್ನು ಮೆಲಕು ಹಾಕಿದ:- ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

10/12/2024

ಸುಬ್ರಹ್ಮಣ್ಯ ದೇವರಿಗೆ ಕುಮಾರಧಾರ ನದಿಯಲ್ಲಿ ದೋಣಿ ಮೆರವಣಿಗೆ ಮತ್ತು ಅವಭೃತ ಉತ್ಸವ ದೇವಸ್ಥಾನದ ಆನೆ ಯಶಸ್ವಿ ಕುಮಾರಧಾರಾ ನದಿಯಲ್ಲಿ ಈಜಾಡುವ ಮೂಲಕ ಸಂಭ್ರಮಿಸಿತು

ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಹಿನ್ನೆಲೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ದೇವರಿಗೆ ಕುಮಾರಧಾರ ನದಿಯಲ್ಲಿ ದೋಣಿ ಮೆರವಣಿಗೆ ಮತ್ತು ಅವಭೃತ ಉತ್ಸವ ದೇವಸ್ಥಾನದ ಆನೆ ಯಶಸ್ವಿ ಕುಮಾರಧಾರಾ ನದಿಯಲ್ಲಿ ಈಜಾಡುವ ಮೂಲಕ ಸಂಭ್ರಮಿಸಿತು

Address

Https://maps. App. Goo. Gl/XrM294y5c1ATfy1fA
Anekal
562106

Alerts

Be the first to know and let us send you an email when News star Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News star Kannada:

Videos

Share