ANK NEWS.

ANK NEWS. news channel

06/02/2024

ಹೊಸೂರು.
ಸಾಕು ನಾಯಿಗೆ ಸೀಮಂತ ಮಾಡಿದ ಮಾಲೀಕ.
ತಮಿಳುನಾಡಿನ ಹೊಸೂರು ಸಮೀಪದ ಸಣ್ಣಪಲ್ಲಿ ಗ್ರಾಮ ಪಂಚಾಯಿತಿ.ಸಣ್ಣಪಲ್ಲಿ ಗ್ರಾಮ ಪಂಚಾಯಿತಿಯ ಕೂರಕ್ಕನ ಹಳ್ಳಿ ಗ್ರಾಮ.
ಈ ಗ್ರಾಮದ ನಾರಾಯಣ ಎಂಬುವರ ಮನೆಯಲ್ಲಿ ನಾಯಿಗೆ ಸೀಮಂತ.ಹೂವು ಹಣ್ಣು ಅರಿಶಿನ ಕುಂಕುಮ ಇಟ್ಟು ಪೂಜೆ ನೆರವೇರಿಸಿದ ಮಾಲೀಕ.ತಮ್ಮ ಸಾಕು ನಾಯಿ ಮೊದಲ ಗರ್ಭ ಧರಿಸಿತ್ತು..ಗರ್ಭಾವಸ್ಥೆಯಲ್ಲಿದ್ದ ನಾಯಿಗೆ ಸೀಮಂತ ಮಾಡಿ ಗ್ರಾಮದ ಜನರಿಗೆ ಆಹ್ವಾನ.ಗ್ರಾಮದ ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ.ನಾಯಿಗೆ ಹೊಸ ಬಟ್ಟೆ ಧರಿಸಿ ಸೀಮಂತ ಮಾಡಿದ ಮಾಲೀಕ.ತಮ್ಮ ನಾಯಿಗೆ ಇಷ್ಟ ಆಗುವ ಬಿರಿಯಾನಿ, ಬಿಸ್ಕೆಟ್, ಇಟ್ಟು ಸೀಮಂತ..
ಸದ್ಯ ನಾರಾಯಣ್ ಅವರ ನಾಯಿ ಸೀಮಂತದ ವಿಚಾರ ಎಲ್ಲೆಡೆ ಸದ್ದು...

04/02/2023

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಲ್ಕನೇ ಸಮ್ಮೇಳನ

10/01/2023

ಪ್ರಜಾ ವಿಮೋಚನಾ ಚಳವಳಿ (PVC)ವತಿಯಿಂದ ಸಾವಿತ್ರಿ ಬಾ ಫುಲೆ ಅವರ ಜಯಂತಿಯ ಕಾರ್ಯಕ್ರಮ ಆನೇಕಲ್ ಕೃಷ್ಣಪ್ಪ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ಆಯೋಜನೆ

07/01/2023
31/12/2022

ಸಮಸ್ತ ವೀಕ್ಷಕರಿಗೆ ANK News ವತಿಯಿಂದ 2023 ನೇ ಹೊಸ ವರ್ಷದ ಶುಭಾಶಯಗಳು

ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ ಆಧುನಿಕತೆಯಿಂರ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ ಮಹಿಳೆಯರು ಕಾನೂನು ತಿಳಿದುಕೊ...
09/11/2022

ಮಹಿಳೆಯರ ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ ಆಧುನಿಕತೆಯಿಂರ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ ಮಹಿಳೆಯರು ಕಾನೂನು ತಿಳಿದುಕೊಳ್ಳಬೇಕು ಎಂದು 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿನುತ ಬಿಸ್ ರವರು ಹೇಳಿದರು,

ಆನೇಕಲ್ ತಾಲೂಕಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯ ಕ್ರಮವನ್ನು ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಉದ್ಘಾಟಣೆ ಮಾಡಿ ಮಾತನಾಡಿದ ಅವರು ಹೆಣ್ಷುಮಕ್ಕಳು ಸಮಾಜದಲ್ಲಿ ತುಂಬಾ ಹಿಂದೆ ಉಳಿದ್ದಾರೆ,ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮುಂದೆಬರಬೇಕು,ಮಹಿಳೆಯರಿಗೆ ಆಗುತ್ತಿರುವಂತಹ ದೌರ್ಜನ್ಯವನ್ನು ವಿರೋಧಿಸಿ ಧ್ವನಿ ಎತ್ತಬೇಕು ಮತ್ತು ಕಾನೂನಿನ ಬಗ್ಗೆ ಮಾಹಿತಿಗಳನ್ನು ತಿಳಿಸಿದರಬೇಕು ಎಂದು ಹೇಳಿದರು,
ಟೆಲಿ ಲಾ ಕರ್ನಾಟಕ ವಕೀಲರಾದ ಪುರುಷೋತ್ತಮ ಎ ಮಾತನಾಡಿ ನ್ಯಾಯಾಧೀಶರು ಜನರ ಬಳಬರಬೇಕು, ಸಾಮಾನ್ಯ ಜನರಿಗೂ ಕಾನೂನು ತಲುಪಬೇಕು, ನಂಬರ್ ತಿಂಗಳ 9 ನೇ ತಾರೀಖು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆ ಮಾಡಿ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಉಚಿತವಾಗಿ ಸಿಗಬೇಕು ಎಂಬುದೇ 1987 ರ ಕಾನೂನು ಸೇವೆಗಳ ಕಾಯ್ದೆಯ ಉದ್ದೇಶ ಎಂದರು,
ಶ್ರೀ.ಆರ್.ಚಂದ್ರಶೇಖರ ಸಹಾಯಕ ಸರ್ಕಾರಿ ಅಭಿಯೋಜಕರು ಮಾತನಾಡಿ, ಹೊಲಿಗೆ ಯಂತ್ರದಿಂದ ಒಂದು ಕುಟುಂಬವನ್ನು ಸಾಕಬಹುದು, ನಮ್ಮ ತಂದೆ ಕೂಡ ಹೊಲಿಗೆ ಯಂತ್ರದಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ, ಕಾನೂನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಲ್ಲರೂ ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು,
ಆರ್.ರಮೇಶ ಅಧ್ಯಕ್ಷರು ವಕೀಲರ ಸಂಘ, ಇವರು ಮಾತನಾಡಿ ಮನುಷ್ಯ ‌ಹುಟ್ಟಿದಾಗಿನಿಂದ ಕಾನೂನು ನಿಮ್ಮನ್ನು ಹಿಂಬಾಲಿಸುತ್ತದೆ ಹಾಗೆಯೇ ಸತ್ತಮೇಲೂ ಕೂಡ ಕಾನೂನು ಬೇಕಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ವಕೀಲರ ಸಂಘ ಕಾರ್ಯದರ್ಶಿ ವೈ ಮಂಜುನಾಥ, ಕಖಜಾಂಚಿ ಕೆ ವಿ ರವಿ, ವಕೀಲರಾದ ಶಿವರಾಜು, ಭಾಗ್ಯ, ನಾಗರತ್ನ, ನಿರ್ಮಲ, ಕೌಶಲ್ಯ ತರಬೇತಿ ಕೇಂದ್ರದ ರಾಜು, ಸೌಮ್ಯ, ಮಂಜುಳಾ, ಮುರಳಿ, ಜಯಶ್ರೀ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು, ಮತ್ತು ಹೊಲಿಗೆ ತರಬೇತಿ ಶಿಬಿರದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು,

02/08/2022

ಆನೇಕಲ್.
ಕ್ರೈಂ ಪ್ರಕರಣ ಹಾಗೂ ಅಕ್ರಮ ತಡೆಯಲು ಮುಂದಾದ ಬೆಂಗಳೂರು ಗ್ರಾಮಾಂತರ ಪೊಲೀಸರು.
ಕೈಗಾರಿಕೋದ್ಯಮಿಗಳು ಹಾಗೂ ಪೊಲೀಸರ ಸಂವಾದ ಕಾರ್ಯಕ್ರಮ.
ಆನೇಕಲ್ ನ ಬೊಮ್ಮಸಂದ್ರದಲ್ಲಿ ಆಯೋಜನೆ.
ಕೇಂದ್ರೀಯ ವಲಯ ಐಜಿಪಿ ಎಂ ಚಂದ್ರಶೇಖರ್,ಎಸ್.ಪಿ ವಂಶಿ ಕೃಷ್ಣ ಜೊತೆ ಚರ್ಚಾ ಸಭೆ.
ಕೈಗಾರಿಕೋದ್ಯಮಿಗಳ ಸಹಾಯ ಪಡೆದು ಕ್ರೈಂ ತಡೆಗಟ್ಟಲು ಆಯೋಜನೆ.
ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಕೈಗಾರಿಕೋದ್ಯಮಗಳು ಸಭೆಯಲ್ಲಿ ಭಾಗಿ.
ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ.
ಕೈಗಾರಿಕೋದ್ಯಮಗಳು ಹಾಗೂ ಪೊಲೀಸರ ನಡುವೆ ಸಂವಾದ ಸಭೆ.
ನೂರಾರು ಕೈಗಾರಿಕೋದ್ಯಮಗಳು ಸಭೆಯಲ್ಲಿ ಭಾಗಿ.
ಕಳೆದ ವಾರ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನನ್ನ ಕೊಲೆ ಮಾಡಲಾಗಿತ್ತು.

ಈ ಹಿನ್ನೆಲೆ ಕೈಗಾರಿಕೋದ್ಯಮಗಳ ಸಹಾಯ ಪಡೆದು ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ.

27/07/2022

ಸಮಂದೂರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದಂತಹ ಗುಡ್ಡನಹಳ್ಳಿ ಸೋಮಶೇಖರ್ ರೆಡ್ಡಿ (ಎಂ ಬಿ ಐ ಬಾಬು) ಅವರ ಹುಟ್ಟುಹಬ್ಬವನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಆಚರಣೆ ಮಾಡಲಾಯಿತು.

25/07/2022

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯೋತ್ಸವ ಕಾರ್ಯಕ್ರಮ ಆನೇಕಲ್ ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಆಚರಣೆ

ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ ಸರ್ಕಾರದ ವಿರುದ್ಧ ವ್ಯಾಪಕ ಟ...
16/07/2022

ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯಬಾರದು ಮತ್ತು ವಿಡಿಯೋ ಮಾಡಬಾರದು ಎಂಬ ಆದೇಶ
ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ
ರಾಜ್ಯ ಸರ್ಕಾರದ ನಡವಳಿಕೆಗೆ ಬಿಜೆಪಿ ಹೈಕಮಾಂಡ್ ನಿಂದಲೂ ಅಸಮಾಧಾನ.
ಪದೇ ಪದೇ ಪಾರದರ್ಶಕತೆ ಬಗ್ಗೆ ಮಾತನಾಡುತ್ತೇವೆ.
ಕೇಂದ್ರದಿಂದಲೂ ಆಡಳಿತದಲ್ಲಿ ಪಾರದರ್ಶಕತೆ ತರುವ ಹಲವು ಸುಧಾರಣೆಗಳು ಆಗುತ್ತಿವೆ
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಮಾನ ಬರುವ ರೀತಿಯಲ್ಲಿ ಬಿಜೆಪಿ ಸರ್ಕಾರ ನಡೆದುಕೊಳ್ಳಬಾರದೆಂದು ಹೈಕಮಾಂಡ್ ಚಾಟಿ
ಈ ಬೆನ್ನಲ್ಲೇ ಮಧ್ಯರಾತ್ರಿ ಹಿಂದಿನ ಆದೇಶ ವಾಪಸ್ ಪಡೆದು ಅಧಿಕೃತವಾಗಿ ಇನ್ನೊಂದು ಆದೇಶ ಜಾರಿ ಮಾಡಿದ ಸರ್ಕಾರ.

15/07/2022

ವಕೀಲ ಪ್ರವೀಣ್ ಗೌಡರ ಮೇಲೆ ನಡೆದ ಹಲ್ಲೆ ಖಂಡಿಸಿ
ಆನೇಕಲ್ ವಕೀಲರ ಸಂಘದ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.

ಬೆಂಗಳೂರು ವಕೀಲರ ಸಂಘದ ಮಾಜಿ ಖಜಾಂನ್ಸಿಗಳಾದ ಪ್ರವೀಣ್ ಗೌಡರ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಆನೇಕಲ್ ನ ಕೋರ್ಟ್ ಮುಂಭಾಗ ಆನೇಕಲ್ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು, ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿರುವ ರಾಕೇಶ್ ಮತ್ತು ರಂಗನಾಥ್ ರವರಿಗೆ ವಕಾಲತ್ ವಹಿಸಿಬಾರದು ಎಂದು ನೂರಾರು ಆನೇಕಲ್ ವಕೀಲರು ಸೇರಿ, ನ್ಯಾಯಾಲಯದ ಆವರಣದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು, ದಾರಿಯಲ್ಲಿ ಹೋಗುವಾಗ ನೋಡಿಕೊಂಡು ಹೋಗು ಎಂಬ ಕ್ಷುಲ್ಲಕ ಕಾರಣಕ್ಕೆ ಹಿಂಬಾಲಿಸಿ ಬಂದು ವಕೀಲರಾದ ಪ್ರವೀಣ್ ಗೌಡರ ಮೇಲೆ ಹಲ್ಲೆ ಮಾಡಿರೋದು ಬಹಳ ಬೇಸರ ಹಾಗೆಯೇ ವಕೀಲರ ಬಿಲ್ಲನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ವಕೀಲರಾದ ಪ್ರಕಾಶ್ ಪಟಾಪಟ್ ಹೇಳಿದರು.

ಪ್ರತಿಭಟನೆಯಲ್ಲಿ ವಕೀಲರುಗಳಾದ ಎ ಎಂ, ಶ್ರೀನಿವಾಸ್, ಎಂ.ಆರ್ ವೇಣುಗೋಪಾಲ್, ನಾಗರಾಜು, ಸಿ ವಿಜಯಕುಮಾರ್, ಆರ್ ವಿ ವಿ ಮೂರ್ತಿ, ಸತೀಶ್, ಆರ್ ರಮೇಶ್, ಹರೀಶ್, ಸತೀಶ್ ಚಂದ್ರ, ರೂಪ, ಮಂಜುನಾಥ, ಮತ್ತು ಇನ್ನೂ ಆನೇಕ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದರು,

22/06/2022

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರಗತಿಪರ,ದಲಿತ ಸಂಘಟನೆಗಳಿಂದ ಪ್ರತಿಭಟನೆ ಆನೇಕಲ್ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ

22/06/2022

ಆನೇಕಲ್ : ತಾಲ್ಲೂಕಿನ ಚಂದಾಪುರದಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ವತಿಯಿಂದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತೋತ್ಸವನ್ನು ಆಚರಿಸಲಾಯಿತು.

ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಮಾತನಾಡಿ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಸಲ್ಲುತ್ತದೆ. ಅಸ್ಪೃಶ್ಯತೆಯನ್ನು ನಿರ್ಮೂಲನೆ ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಮೈಸೂರು ಅರಸರ ಪಾತ್ರ ಹೆಚ್ಚಿದೆ. ಕೃಷ್ಣರಾಜ ಒಡೆಯರ್‌ ಅವರು ಕೃಷಿ, ಶಿಕ್ಷಣ, ಸಾಹಿತ್ಯ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸಬೇಕಾದುದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಭಾರತ ಸಂವಿಧಾನವನ್ನು ರಚಿಸಿ ಸಮಾನತೆ ಮತ್ತು ಸಾಮಾಜಿಕ ಪರಿಕಲ್ಪನೆಯನ್ನು ನೀಡಿದ್ದಾರೆ. ವಿವಿಧ ದೇಶಗಳ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್‌ ಅವರ ಅಧ್ಯಯನ ಪೀಠವನ್ನು ಸ್ಥಾಪಿಸಿದೆ. ಆದರೆ ಕರ್ನಾಟಕ ರಾಜ್ಯ ಪಠ್ಯ ಪರಿಷ್ಕರಣಾ ಸಮಿತಿಯು ಅಂಬೇಡ್ಕರ್‌ ಅವರ ಸಂಬಂಧಿಸಿದ ಪಠ್ಯಗಳಲ್ಲಿ ವಿಷಯ ಕಡಿತಗೊಳಿಸಿರುವುದು ಬೇಸರದ ಸಂಗತಿ ಎಂದರು.
ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ವಿಭಾಗೀಯ ಅಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಕೊಪ್ಪ ರಾಮಾಂಜಿ, ದೊರೆ, ಮುಖಂಡರಾದ ಅಶ್ವಥ್‌, ಚಿಕ್ಕಹಾಗಡೆ ಶ್ರೀನಿವಾಸ್‌, ಪಟಾಪಟ್‌ ಸುರೇಶ್‌, ಹಳೇಹಳ್ಳಿ ರವಿ, ಮುನಿರಾಜು, ಪರಶುರಾಮ್‌, ರಜೀಯಾ ಬೇಗಂ, ಶಶಿಕಲಾ, ವೆಂಕಟೇಶ್, ಶ್ರೀನಿವಾಸ್, ರಮೇಶ್, ಆದೂರು ಮದ್ದೂರಪ್ಪ ಇದ್ದರು.

21/06/2022

ಆನೇಕಲ್ ಪುರಸಭೆ ವಾರ್ಡ್ ನಂಬರ್ ನಂಬರ್ 16 ಅಭ್ಯರ್ಥಿಯಾಗಿ ದಂತಹ ಶ್ರೀಧರ್ ಶೋಭಾ ಶ್ರೀಧರ್ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು

21/06/2022

ಆನೇಕಲ್ ಪುರಸಭೆ ಚುನಾವಣೆ ಫಲಿತಾಂಶ ಹಿನ್ನೆಲೆ

16/06/2022

ಬಿಜೆಪಿ ಮುಖಂಡ ಮತ್ತು ಕರ್ಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಂಗಳೂರು ರಾಜು ಮತ್ತು ಜನಾರ್ಧನ್ ಅವರ ಹುಟ್ಟುಹಬ್ಬ ಪ್ರಯುಕ್ತ ಬಡವರಿಗೆ ರೇಷನ್ ಕಿಟ್ ಕೊಡುವ ಮುಖಾಂತರ ನಮ್ಮ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ತಮ್ಮ ದಿನ್ನೂರು ನಿವಾಸದ ಬಳಿ ಆಚರಿಸಲಾಯಿತು ಇನ್ನು ನೂರಾರು ಬೆಂಬಲಿಗರು ಮತ್ತು ಸ್ನೇಹಿತರು ಬಂದು ಶುಭ ಹಾರೈಸಿದ್ದಾರೆ.

ಆನೇಕಲ್ ಯೋಜನೆ ಪ್ರಾಧಿಕಾರ ದ ನೂತನ ಅಧ್ಯಕ್ಷ ರಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷರು ಆದ ಕೆ.ವಿ.ಶಿವಪ್ಪ ರವರಿಗೆ ಹೃದಯದ ಶುಭಾಶಯಗಳು.
14/06/2022

ಆನೇಕಲ್ ಯೋಜನೆ ಪ್ರಾಧಿಕಾರ ದ ನೂತನ ಅಧ್ಯಕ್ಷ ರಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷರು ಆದ ಕೆ.ವಿ.ಶಿವಪ್ಪ ರವರಿಗೆ ಹೃದಯದ ಶುಭಾಶಯಗಳು.

14/06/2022

ಕಾಳಿಯಮ್ಮ ಉತ್ಸವದಲ್ಲಿ ಭಕ್ತರ ಮೇಲೆ ಉರುಳಿದ ರಥ: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಬೆಂಗಳೂರು14:- ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.
ಮೃತರು ಮಾದೇನಹಳ್ಳಿ ಮನೋಹರಂ ಮತ್ತು ಶರವಣನ್.
ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಕಾಳಿಯಮ್ಮ ದೇವಾಲಯದ ರಥೋತ್ಸವದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ರಥವನ್ನು ನೂರಾರು ಭಕ್ತರು ಎಳೆದುಕೊಂಡು ಹೋಗುವ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದಿದೆ.
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಜಾತ್ರೆಯಲ್ಲಿ ಸುಮಾರು 18 ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ ಸ್ಥಳೀಯ ನಿವಾಸಿಗಳಲ್ಲಿ ದೇವರಿಗೆ ಭಿನ್ನ ಆಗಿದೆ ಎಂಬ ಆತಂಕದಲ್ಲಿದ್ದಾರೆ.

31/05/2022

ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ಯಲ್ಲಿ ಮುಖ್ಯ ಅಧಿಕಾರಿ ಮುಂಭಾಗದಲ್ಲಿ ಅವಾಚ್ಯ ಶಬ್ದಗಳಿಂದ ಪುರಸಭೆಯ ವಾಟರ್ ಮ್ಯಾನ್ ವೆಂಕಟಸ್ವಾಮಿ ಮಾತನಾಡುತ್ತಿರುವ ದೃಶ್ಯ

01/05/2022

ರಾಮ ಭಜನೆ ನವೀನ್ ಚಂದ್ರ ಶೆಟ್ಟಿ ಎಸ್ ಬಿ ಎಸ್ ಅಂಗಡಿ ಮಾಲೀಕರ ನಿವಾಸದ ಕುಂದಾಪುರ ಸಮೀಪದ ಕೆರಾಡಿ ಗ್ರಾಮದ ಮನೆಯಲ್ಲಿ ಉತ್ಸವ ಪಾರ್ಟ್- 02

01/05/2022

ರಾಮ ಭಜನೆ ನವೀನ್ ಚಂದ್ರ ಶೆಟ್ಟಿ ಎಸ್ ಬಿ ಎಸ್ ಅಂಗಡಿ ಮಾಲೀಕರ ನಿವಾಸದ ಕುಂದಾಪುರ ಸಮೀಪದ ಕೆರಾಡಿ ಗ್ರಾಮದ ಮನೆಯಲ್ಲಿ ಉತ್ಸವ

24/04/2022

ಸಂಕ್ರಮಣ ಬಳಗ ಮತ್ತು ಸುಭಾಷ್ ಸೇವಾಸಂಸ್ಥೆ ಮತ್ತು ಪುರುಷೋತ್ತಮ್ ಅವರ ನೇತೃತ್ವದಲ್ಲಿ ಬಾಲ್ಯ ಬೇಸಿಗೆ ಶಿಬಿರದ ಕಾರ್ಯಕ್ರಮ ಆಯೋಜನೆ

Address

Anekal

Website

Alerts

Be the first to know and let us send you an email when ANK NEWS. posts news and promotions. Your email address will not be used for any other purpose, and you can unsubscribe at any time.

Videos

Share