ಸುದ್ದಿ ಸ್ಪರ್ಶ Suddi sparsha

ಸುದ್ದಿ ಸ್ಪರ್ಶ Suddi sparsha News & Entertainment

22/04/2024

Live : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್‌ನ ಹೆಬ್ಬಗೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಪರ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಮಾಡಿದರು. ಶಾಸಕರಾದ B. ಶಿವಣ್ಣ ಉಪಸ್ಥಿತರಿದ್ದರು.

21/04/2024

LIVE : ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಅವರ ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ.

21/04/2024

Live : ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಎಸ್‌. ಬೊಮ್ಮಾಯಿ ಮತ್ತು ಪ್ರಮುಖರು ಪತ್ರಿಕಾಗೋಷ್ಠಿ.

21/04/2024

Live : ಸಿದ್ದರಾಮಯ್ಯ ಕಾಲಿಟ್ರು... ಬರಗಾಲ ಆವರಿಸಿತು, ಸಿದ್ದರಾಮಯ್ಯರನ್ನ ಶನಿ ಎಂದ ಆರ್​. ಅಶೋಕ್​​​​​

21/04/2024

ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ತಾಲ್ಲೂಕಿನ ಸಾವಿರಾರು ಭಕ್ತರು ವೈಭವದ ರಾಜಮುಡಿ ಉತ್ಸವಕ್ಕೆ ಸಾಕ್ಷಿಯಾದರು.

ರಾಜಮುಡಿ ಉತ್ಸವದ ಅಂಗವಾಗಿ ಶ್ರೀ ತಿಮ್ಮರಾಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ಉತ್ಸವ ಮೂರ್ತಿಗೆ ರಾಜಮುಡಿಯನ್ನು ತೊಡಿಸಿ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ನಂತರ ಭಕ್ತರು ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಪ್ರಾಂಗಣವನ್ನು ಮೂರು ಸುತ್ತು ಹಾಕುವ ಮೂಲಕ ರಾಜಮುಡಿ ಉತ್ಸವ ಮೆರವಣಿಗೆ ನಡೆಸಲಾಯಿತು. ಪಂಜಿನ ಸೇವೆಯ ಮೂಲಕ ಸ್ವಾಮಿಯ ಮೆರವಣಿಗೆಯು ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ, ಮಂಗಳವಾಧ್ಯ, ಪಂಚವಾಧ್ಯ ಆಯೋಜಿಸಲಾಗಿತ್ತು. ಇನ್ನು ಈ ಉತ್ಸವಕ್ಕೆ ಮೆರಗು ನೀಡಿದಂತೆ ಬಾಣ ಬಿರುಸು, ಪಟಾಕಿಗಳ ಬೆಳಕು ಸದ್ದು ಆಕರ್ಷಣೀಯವಾಗಿತ್ತು.
ಆನೇಕಲ್ ನ ಎಸ್. ಮೋಹನ್‌ ರಾಜ್, ವಿ. ನಾಗರಾಜ್, ಎಸ್. ಚರಣ್ ರಾಜ್ ಮತ್ತು ಕೆ.ಬಿ. ರೇಣುಕಾ ರಾಜ್ ರವರು ರಾಜಮುಡಿ ಉತ್ಸವವನ್ನು ಆಯೋಜಿಸಿದ್ದರು.
ಮೇಲುಕೋಟೆಯ ಮಾದರಿಯಲ್ಲಿ ರಾಜಮುಡಿ ಉತ್ಸವ ನಡೆಯಿತು. ತಾಲ್ಲೂಕಿನ ಸಾವಿರಾರು ಭಕ್ತರು ಆಗಮಿಸಿ ಉತ್ಸವವನ್ನು ಕಣ್ತುಂಬಿಕೊಂಡ್ರು. ರಾಜಮುಡಿ ಧಾರಣೆಯಿಂದ ಕಂಗೊಳಿಸುತ್ತಿದ್ದ ಶ್ರೀ ತಿಮ್ಮರಾಯಸ್ವಾಮಿಯ ದರ್ಶನಪಡೆದ ಭಕ್ತರು ಪುಳಕಿತರಾದ್ರು.
#ಕರ್ನಾಟಕರತ್ನ Anekal Sri LakshmiThimmarayaswamy Temple

20/04/2024

Live : ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಷಣ.

20/04/2024

Live : ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಷಣ.

20/04/2024

Live : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ

19/04/2024

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಪ್ರಮುಖರು ಪತ್ರಿಕಾಗೋಷ್ಠಿ.

19/04/2024

ಕಾಂಗ್ರೆಸ್‌ ಸರ್ಕಾರದ ವಿರುದ್ದ ಆರೋಪ ಪಟ್ಟಿ ಬಿಡುಗಡೆ. ಪ್ರತಿಪಕ್ಷ ನಾಯಕರಾದ ಶ್ರೀ ಆರ್.‌ ಅಶೋಕ್‌

19/04/2024

LIVE : ಪಕ್ಷ ಸೇರ್ಪಡೆ ಕಾರ್ಯಕ್ರಮ, ಕೆಪಿಸಿಸಿ ಕಚೇರಿ.

18/04/2024

ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪಬ್ಲಿಕ್‌ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಯಲ್ಲಿ ಶೇ.94.5ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 88 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ 84 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸಿಹಿ ತಿನ್ನಿಸಿ ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು.

ಕಾಲೇಜಿನ ಪಿ. ನೀರಜಾ ಅವರು 582 (ಶೇ.97) ಅಂಕಗಳನ್ನು ಗಳಿಸಿ ವಿಜ್ಞಾನ ವಿಭಾಗದಲ್ಲಿ ಮೊದಲಿಗರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಎಸ್‌. ಚಂದನಾ ಅವರು 571(ಶೇ.95.1) ಅಂಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ನೀರಜಾ, ಮಾನಸ, ಸ್ವಾತಿ ಅವರು ಜೀವಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ದೀಪಾಶ್ರೀ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾಳೆ ಎಂದು ಕಾಲೇಜಿನ ಪ್ರಾಚಾರ್ಯ ಡಿ. ಮುನಿರಾಜು ತಿಳಿಸಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಅತ್ತಿಬೆಲೆ ಪಬ್ಲಿಕ್‌ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

15/04/2024

ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಬಹು ಜನ ಸಮಾಜ ಪಕ್ಷದ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಚಿಕ್ಕಗಾಡೆ ನಾಮಪತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದ ಹಿನ್ನೆಲೆ, ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಸ್ಪಷ್ಟನೆ ನೀಡಿದ್ದು ನಾನು ಹಾಗೂ ನನ್ನ ಕಾರ್ಯಕರ್ತರ ಉಳಿವಿಗಾಗಿ ನಾನು ಕಣದಿಂದ ಹಿಂದೆ ಸರಿದಿದ್ದೇನೆ, ಕಳೆದ ಒಂದು ವಾರದ ಹಿಂದೆ ನಮ್ಮನ್ನು ಕೆಲವರು ನಿರಂತರವಾಗಿ ಹಿಂಬಾಲಿಸುವ ಕೆಲಸವನ್ನು ಮಾಡಿದ್ದರು ಇದರಿಂದ ನನಗೆ ಹಾಗೂ ನನ್ನ ಜೊತೆಗಿದ್ದ ಕಾರ್ಯಕರ್ತರಿಗೆ ಸುರಕ್ಷತೆ ಇಲ್ಲ ಎನ್ನುವ ನಿಟ್ಟಿನಲ್ಲಿ ನಮ್ಮ ಪಕ್ಷದ ಹಿರಿಯರಿಗೆ ಮಾಹಿತಿ ತಿಳಿಸಿಯೇ ನಾಮಪತ್ರವನ್ನು ಹಿಂಪಡೆದಿದ್ದೇನೆ.

ಇನ್ನು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿ 20 ಸಾವಿರ ಮತಗಳನ್ನು ಬೆಂಗಳೂರು ಗ್ರಾಮಾಂತರದಿಂದ ಪಡೆದಿದ್ದೆ ಇದಾದ ಬಳಿಕ ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೂ ನಾನು ಶಾಸಕ ಸ್ಥಾನಕ್ಕೆ ಬಹುದಿನ ಸಮಾಜ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ, ಯಾವುದೇ ಸಂದರ್ಭದಲ್ಲಿ ಸಹ ನಾನು ನಾಮಪತ್ರವನ್ನು ಹಿಂಪಡೆದು ಹಣದಿಂದ ಹಿಂದೆ ಸರಿಯುವ ಕೆಲಸ ಮಾಡಿರಲಿಲ್ಲ ಆದರೆ ಈ ಬಾರಿ ನನಗೆ ಆದ ನೋವು ಯಾರಿಂದ ಆಯ್ತು ಹೇಗಾಯಿತು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಹಿನ್ನೆಲೆ ನಾನು ನಾಮಪತ್ರವನ್ನು ಹಿಂಪಡಬೇಕಾಯಿತು ಎಂದು ಹೇಳಿದರು.

ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಾಕಷ್ಟು ಪ್ರಬಲವಾಗಿದ್ದು ಎರಡು ಪಕ್ಷದ ನಡುವೆ ನಾನು ಸೆಣೆಸುವುದು ಸಾಕಷ್ಟು ತೊಂದರೆ ಆಗುತ್ತದೆ ಎನ್ನುವುದು ನನಗೆ ಬಂದ ಕೆಲವು ಬೆದರಿಕೆಯಿಂದ ಗೊತ್ತಾಯಿತು.

ನಾನು ನಾಮಪತ್ರ ವಾಪಸ್ ಪಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಈಗಾಗಲೇ ಕೆಲವರು ಮಾಡಿರುವ ಆರೋಪಗಳ ಬಗ್ಗೆ ದೂರು ನೀಡಲು ಅವರ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆಯಲ್ಲಿರುವ ಪೋಸ್ಟ್ಗಳನ್ನು ಸ್ಕ್ರೀನ್ಶಾಟ್ ತೆಗೆದುಕೊಂಡಿರುತ್ತೇನೆ. ನಾನು ಯಾವುದೇ ರಾಜಕಾರಣಿ ಹಾಗೂ ಪಕ್ಷದಿಂದ ಕಿಕ್ ಬ್ಯಾಕ್ ಪಡೆದಿಲ್ಲ, ನನ್ನ ಕಾರಿನ ಬಗ್ಗೆ ಆರೋಪ ಮಾಡುವವರು ಬ್ಯಾಂಕನಲ್ಲಿ ಇರುವ ಲೋನ್ ಕಟ್ಟುತ್ತಾರಾ ಎಂದು ಪ್ರಶ್ನೆ ಮಾಡಿದರು.

ನಾನು ನಾಮಪತ್ರ ವಾಪಸ್ ಪಡೆದ ಬಳಿಕ ಪಕ್ಷದ ಮುಖಂಡರು ಹಿರಿಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಉಚ್ಚಾಟನೆ ಮಾಡಿರುವುದಾಗಿ ಹೇಳಿದ್ದಾರೆ ಹಾಗಾಗಿ ನಾನು ನನ್ನ ಜೊತೆಗಿದ್ದ ಕಾರ್ಯಕರ್ತರ ಜೊತೆ ಚರ್ಚಿಸಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ .ಜೈನ್ ವಿಧಿವಶರಾಗಿದ್ದಾರೆ.ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ 67 ವರ್ಷದ ಎಸ್ ಕೆ ಜೈ...
12/04/2024

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಜ್ಯೋತಿಷಿ ಎಸ್.ಕೆ .ಜೈನ್ ವಿಧಿವಶರಾಗಿದ್ದಾರೆ.

ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ 67 ವರ್ಷದ ಎಸ್ ಕೆ ಜೈನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

12/04/2024

ಕನ್ನಡ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಸ್​.ಕೆ. ಜೈನ್ ನಿಧನ

12/04/2024

ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ : ಅಧಿಕಾರಿಗಳ ಸಂಧಾನ ಸಭೆ ವಿಫಲ.

ಶುದ್ಧ ನೀರಿಗಾಗಿ ಆಗ್ರಹಿಸಿ ದೊಡ್ಡಬಳ್ಳಾಪುರ ತಾಲೂಕಿನ ಎರಡು ಗ್ರಾಮ ಪಂಚಾಯ್ತಿಯ 18 ಗ್ರಾಮಗಳ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ, ಗ್ರಾಮಸ್ಥರ ಒಲೈಕೆಗೆ ಮುಂದಾದ ಅಧಿಕಾರಿಗಳು ಸಂಧಾನ ಸಭೆ ನಡೆಸಿದರು, ಮೂರನೇ ಹಂತದ ಸಂಸ್ಕರಣಾಘಟಕ ಸ್ಥಾಪನೆಯಾಗದ ಹೊರತು ಚುನಾವಣೆ ಬಹಿಷ್ಕಾರ ಹಿಂತೆಗೆದು ಕೊಳ್ಳುವುದಿಲ್ಲವೆಂದು ಹೋರಾಟಗಾರರು ಪಟ್ಟುಹಿಡಿದರು. ಚಿಕ್ಕ ಮತ್ತು ದೊಡ್ಡತುಮಕೂರು ಕೆರೆಗಳು ಈಗಾಗಲೇ ಹಾಳಾಗಿದ್ದು ಅಧಿಕಾರಿಗಳಿಂದ ಸ್ಪಂದನೆ ಸಿಗದೆ ಹಿನ್ನಲೆ ಚುನಾವಣೆ ಬಹಿಷ್ಕಾರ ಮಾಡಲಾಗಿದೆ.

12/04/2024

ಬೆಂಗಳೂರಿನ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಟೈರ್ ಶಾಪ್ ಗೆ ತಗುಲಿದ ಬೆಂಕಿ

ಟೈರ್ ಶಾಪ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಟೈರ್ ಗಳು ಸುಟ್ಟುಹೋಗಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಜೆ 4 ಗಂಟೆಗೆ ಟೈರ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರೋದಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ಆರಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಎರಡು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ದೌಡಯಿಸಿ ಬೆಂಕಿ ನಂದಿಸಿದ್ದಾರೆ.

06/04/2024

ಏ. 12ರಂದು ನಾಮಪತ್ರ ಸಲ್ಲಿಕೆ : ಕೆ. ಎಸ್. ಈಶ್ವರಪ್ಪ

ಏಪ್ರಿಲ್ 12ರಂದು ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಲು ದೆಹಲಿ ಯಾತ್ರೆ ಭಗವಂತ ಕೊಟ್ಟ ವರ. ಏ. 12ರಂದು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದಲೂ ನನಗೆ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.

06/04/2024

ಬೈಕ್‌ ಸವಾರನಿಗೆ ಗುಮ್ಮಿದ ಕೋಲೆಬಸವ

ರಸ್ತೆಯ ಬದಿಯಲ್ಲಿ ಸಾಗುತ್ತಿದ್ದ ಕೋಲೆ ಬಸವ ಎತ್ತೊಂದು ಬೈಕ್‌ ಸವಾರನಿಗೆ ಗುಮ್ಮಿದ ಪರಿಣಾಮ ಬೈಕ್‌ ಚಾಲಕ ಲಾರಿಯ ಚಕ್ರಕ್ಕೆ ತಲೆ ಕೊಟ್ಟಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಬಳಿ ನಡೆದಿದೆ. ಆದರೆ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬೈಕ್‌ ಸವಾರ ಪವಾಡ ದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ದೃಶ್ಯಾವಳಿ ಸ್ಥಳೀಯ ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದೆ.

ಹಿಟ್ ಆ್ಯಂಡ್ ರನ್‌ಗೆ ಬೈಕ್‌ ಸವಾರ ಬಲಿಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನ ಹಿಂಭಾದಿಂದ...
06/04/2024

ಹಿಟ್ ಆ್ಯಂಡ್ ರನ್‌ಗೆ ಬೈಕ್‌ ಸವಾರ ಬಲಿ

ಹಿಟ್ ಆ್ಯಂಡ್ ರನ್‌ಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನ ಹಿಂಭಾದಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಮಿರ್ಜಾ ರಸ್ತೆಯಲ್ಲಿ ನಡೆದಿದೆ.. ಬೆಳಗಿನ ಜಾವ 6:30ಕ್ಕೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ..ಆನೇಕಲ್ ಪಟ್ಟಣದ ಶಭಾಷ್ 16 ವರ್ಷದ ಯುವಕ ಮೃತಪಟ್ಟ ಬಾಲಕ.

ಇನ್ನೂ ಖಾಸಗಿ ಚಾಲಕ ಶ್ರೀಕಾಂತ್ ಆನೇಕಲ್ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ..

05/04/2024

ಡಿ.ಕೆ.ಸುರೇಶ್ : ನಿಮ್ ಕ್ಷೇತ್ರವೇ ಟಾರ್ಗೆಟ್ ಯಾಕೆ ಅಂದಿದ್ದಷ್ಟೇ.. DK ರಿಯಾಕ್ಷನ್ ನೋಡಿ.

04/04/2024

Live || ಇಂದು ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಶ್ರೀ ಹೆಚ್ ಡಿ ಕುಮಾರಸ್ವಾಮಿರವರು.
ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪರವರು, ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಪ್ರಮೋದ್ ಸಾವಂತರವರು, ಮಾಜಿ ಸಚಿವರಾದ ಶ್ರೀ ಸಿ ಎಸ್ ಪುಟ್ಟರಾಜುರವರು, ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಶ್ರೀ ನಿಖಿಲ್ ಕುಮಾರಸ್ವಾಮಿರವರು, ಮಾಜಿ ಸಚಿವರಾದ ಶ್ರೀ ಸಾ ರಾ ಮಹೇಶ್ ರವರು, ಮಾಜಿ ಸಚಿವರಾದ ಶ್ರೀ ನಾರಾಯಣಗೌಡ ರವರು ಹಾಗೂ ಮಂಡ್ಯ ಜಿಲ್ಲೆಯ ಮಾಜಿ ಮತ್ತು ಹಾಲಿ ಶಾಸಕರುಗಳು ಉಪಸ್ಥಿತರಿದ್ದರು.

Vijayendra Yediyurappa H D Kumaraswamy Nikil Kumaraswamy Yuva Brigade

04/04/2024

ಬರ ಪರಿಹಾರವನ್ನು ಅಮಿತ್ ಶಾ ತಮ್ಮ ಮನೆಯಿಂದ ಕೊಡುತ್ತಾರಾ? : ಸಿಎಂ ಪ್ರಶ್ನೆ

ಕರ್ನಾಟಕಕ್ಕೆ ಬರ ಪರಿಹಾರವನ್ನು ಅಮಿತ್ ಶಾ ತಮ್ಮ ಮನೆಯಿಂದ ಕೊಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಆಯೋಗವು ರಾಜ್ಯಕ್ಕೆ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿ ಐದು ತಿಂಗಳು ಕಳೆದಿದೆ. ಆದರೆ ಕೇಂದ್ರ ಸರ್ಕಾರದಿಂದ ಒಂದೇ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ. ಬರ ಪರಿಹಾರವನ್ನು ಅಮಿತ್ ಶಾ ತಮ್ಮ ಮನೆಯಿಂದ ನೀಡಿದ್ದಾರೆಯೇ ನಮ್ಮ ತೆರಿಗೆ ಹಣವನ್ನು ನಮಗೆ ನೀಡಲೇನು ಎಂದು ಪ್ರಶ್ನೆ ಮಾಡಿದರು.

04/04/2024

ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ನನಗೆ 78 ವರ್ಷದ ವಯಸ್ಸಾಗಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಇನ್ನೂ ನನಗೆ ಕೆಲಸ ಮಾಡುವ ಅವಕಾಶವಿದೆ. ಆದರೆ ಮುಂದಿನ ಬಾರಿ ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನಾಲ್ಕು ವರ್ಷಗಳ ನಂತರ ನನ್ನ ವಯಸ್ಸು 81 ರಿಂದ 82 ಆಗಿರುತ್ತದೆ. ಆವಯಸ್ಸಿನಲ್ಲಿ ಹರುಷದಿಂದ ಕೆಲಸ ಮಾಡಲಾಗುವುದಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

03/04/2024

ಯಾರು ಕುಂಬಳಕಾಯಿ ಕಳ್ಳ ಅಂತ ದೇಶಕ್ಕೆ ಗೊತ್ತಿದೆ : ಸುಮಲತಾ.

03/04/2024

ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದುದೇವೇಗೌಡ್ರು ಅಂತೇ ಹೌದಾ ಸರ್ .?

02/04/2024

LIVE || ಕಮ್ಮಸಂದ್ರ ಕೆ.ಪಿ‌.ರಾಜು ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ. ಬೆಂಗಳೂರು ಗ್ರಾಮಾಂತರ ಲೋಕಸಬಾ ಕ್ಷೇತ್ರದ
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್. ಶಾಸಕ ಬಿ.ಶಿವಣ್ಣ ಸೇರಿದಂತೆ ಅನೇಕರು ಬಾಗಿಯಾಗಿದ್ದರು.
DK Suresh DK Shivakumar B Shivanna

02/04/2024

Live : ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ರೋಡ್‌ ಶೋ

02/04/2024

ಪಕ್ಷ ಸೇರ್ಪಡೆ ಕಾರ್ಯಕ್ರಮ, ಕೆಪಿಸಿಸಿ ಕಚೇರಿ.

02/04/2024

ತುಮಕೂರು ಗ್ರಾಮಾಂತರ ಕಾಂಗ್ರೆಸ್ ಮಾಜಿ ಶಾಸಕರಾದ ಹೆಚ್ ನಿಂಗಪ್ಪ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ. #ᴛᴜᴍᴋᴜʀ

Address

Anekal

Telephone

+919060606034

Website

Alerts

Be the first to know and let us send you an email when ಸುದ್ದಿ ಸ್ಪರ್ಶ Suddi sparsha posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ ಸ್ಪರ್ಶ Suddi sparsha:

Videos

Share


Other Media/News Companies in Anekal

Show All