ಆನೇಕಲ್ ತಾಲ್ಲೂಕಿನಲ್ಲಿ ಭೂಮಿಗೆ ಚೆನ್ನದ ಬೆಲೆ ಬಂದಿದ್ದು, ವಿವಾದಗಳ ಸಂಕೋಲೆಯಾಗಿದೆ. ಒಂದೇ ಜಮೀನಿಗೆ ಎರಡು ಕುಟುಂಬಗಳು ಪೈಪೋಟಿ ನಡೆಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿವೆ. ಅಂತಹದ್ದ ಒಂದು ವಿವಾದ . ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಚಿಕ್ಕನೆಕ್ಕುಂದಿ ಗ್ರಾಮದ ಸರ್ವೆ ನಂ. 55/2 ರಲ್ಲಿ ಒಟ್ಟು ವಿಸ್ತೀರ್ಣ 3-33.00 ಗುಂಟೆ ಜಮೀನು ಸಿಲುಕಿದೆ.
ಈ ಮೇಲಿನ ಸರ್ವೆ ನಂಬರ್ ನ ವಾರಸುದಾರರು ತಾವೆಂದು ಹೇಳಿಕೊಳ್ಳುತ್ತಿರುವವರ ಹೆಸರುಗಳು ಒಂದೇ ಆಗಿರುವುದರಿಂದ ವಿವಾದ ಕಗ್ಗಂಟಾಗಿದೆ. ಈ ಇಬ್ಬರು ವಾರಸುದಾರರೆಂದು ಹೇಳಿಕೊಳ್ಳುವವರು ಪತ್ರಿಕಾಗೋಷ್ಟಿಯನ್ನು ಕರೆದು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದು ಹೀಗೆ....
ಅಮಿತ್ ಶಾ ಹೇಳಿಕೆ ಖಂಡಿಸಿ,
ಆನೇಕಲ್ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಬಳಿ ಪ್ರತಿಭಟನೆ.
ಸಾವಿರ ಸತಿ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಘೋಷಣೆ
ಆನೇಕಲ್ ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ನೂರಾರು ಅಂಬೇಡ್ಕರ್ ಅನುಯಾಯಿಗಳು ಗೃಹ ಸಚಿವ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಇನ್ನು ಅಂಬೇಡ್ಕರ್ ಪುತ್ತಳಿ ಬಳಿ ಪಂಜುಗಳನ್ನು ಹಿಡಿದು ಬರಹಗಳು ಮತ್ತು ಭಾಷಣದ ಪುಸ್ತಕದಲ್ಲಿರುವ 19ನೇ ಅಧ್ಯಯನವನ್ನು ಓದಲಾಯಿತು.
ಇನ್ನು ಈ ಕಾರ್ಯಕ್ರಮದಲ್ಲಿ ಜಿಗಣಿ ಪುರಸಭಾ ಸದಸ್ಯ ವಿನೋದ್, ವಕೀಲರಾದ ಪುರುಷೋತ್ತಮ್, ಆನಂದ್ ಚಕ್ರವರ್ತಿ, ನಾಗರಾಜ್ ಮೌರ್ಯ, ಮರ್ಸೂರು ಎಸ್ ಟಿ ಡಿ ರಮೇಶ್, ಜಯ ಸುಧಾ, ಮುರುಗೇಶ್, ಹರೀಶ್, ಸುರೇಶ್ ಪೋತ, ವೆಂಕಟೇಶ್ ಮೂರ್ತಿ, ಬಳಗಾರನಹಳ್ಳಿ ಮಂಜು, ಮುತ್ತನಲ್ಲೂರು ಶಿವು, ಆದೂರು ರುದ್ರಪ್ಪ, ಗೋವಿಂದ ಮೌರ್ಯ ಹಾಗೂ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿದ್ದರು.
ರೈತರಿಂದ ಬೃಹತ್ ಪ್ರತಿಭಟನಾ ಬೈಕ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಕೆ.ಐ.ಎ.ಡಿ.ಬಿ ಸಂಸ್ಥೆಯು ಆನೇಕಲ್ ತಾಲ್ಲೂಕಿನ ಕೃಷಿ ಭೂಮಿಗಳ ಮೇಲೆ ಹೊರಡಿಸಿರುವ ಅಕ್ರಮ ಭೂಸ್ವಾದೀನ ಆದೇಶವನ್ನು ಖಂಡಿಸಿ ಇಂದು ಆನೇಕಲ್ ತಾಲ್ಲೂಕು ಭೂ ಸ್ವಾದೀನ ವಿರೋದಿ ಹೋರಾಟ ಸಮಿತಿ ಹಾಗೂ ಸರ್ಜಾಪುರ ಹೋಬಳಿಯ ರೈತರಿಂದ ಬೃಹತ್ ಪ್ರತಿಭಟನಾ ಬೈಕ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಕೊಮ್ಮಸಂದ್ರ ಗ್ರಾಮದ ಬಳಿಯಿರುವ ಬಯಲು ಬಸವೇಶ್ವರ ದೇವಾಲಯದಿಂದ ಬೃಹತ್ ಪ್ರತಿಭಟನಾ ಬೈಕ್ ಜಾಥ ಪ್ರಾರಂಭಗೊoಡು ನಂತರ ಚಂದಾಪುರ ಮಾರ್ಗವಾಗಿ ಆನೇಕಲ್ ಪಟ್ಟಣ ತಲುಪಿತು. ನಂತರ ಆನೇಕಲ್ ಎಎಸ್ ಬಿ ಕಾಲೇಜು ಆಟದ ಮೈಧಾನದಿಂದ ತಹಶೀಲ್ದಾರ್ ಕಚೇರಿ ವರೆಗೆ ಸಾವಿರಾರು ರೈತರು ಪಾದಯಾತ್ರೆ ಮೂಲಕ ತಹಶೀಲ್ದಾರ್ ಕಚೇರಿಯನ್ನು ತಲುಪಿದರು.
ಇನ್ನು ಪ್ರತಿಭಟನಾಕಾರರು ನಮ್ಮ ಭೂಮಿ. ನಮ್ಮ ಹಕ್ಕು ಎಂದು ಘೋಷಣೆಗಳನ್ನು ಕೂಗೂತ್ತಾ ಜೊತೆಗೆ ರಾಜ್ಯ ಸರ್ಕಾರ ಮತ್ತು ಅದಿಕಾರಿಗಳ ವಿರುದ್ದ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಇನ್ನು ಪ್ರತಿಭ
ಗ್ರಾಮ ಪಂಚಾಯಿತಿ 125 ವಿವಿಧ ವೃಂದದ ಸಿಬ್ಬಂದಿಗಳಿಗೆ ಖಾಯಂ ನೇಮಕಾತಿ ಅನುಮೋದನ ಪತ್ರ ವಿತರಣಾ ಕಾರ್ಯಕ್ರಮ,
ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲತಾ ಕುಮಾರಿ ರವರು ಮಾತನಾಡಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5000 ಸಸಿಯನ್ನು ನೆಟ್ಟು ಪೋಷಿಸುವ ಆಯಾ ಪಂಚಾಯಿತಿಗಳ ಜವಾಬ್ದಾರಿ ಎಂದು ತಿಳಿಸಿದರು,
ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಲತಾ ಕುಮಾರಿರವರು ಚಾಲನೆ ನೀಡಿ ನಂತರ ಮಾತನಾಡಿದ ಅವರು ಗ್ರಾಮಗಳು ಸುಂದರವಾಗಿ/ಸ್ವಚ್ಚವಾಗಿ ಕಾಣಬೇಕಾದರೆ ಗ್ರಾಮ ಪಂಚಾಯಿತಿಗಳ ಕೆಲಸ ಮಾಡುವ ಜಲಗಾರರು ಮತ್ತು ಸ್ವಚ್ಚತಾಗಾರರು ಪ್ರಮುಖ ಕಾರಣ ಕರ್ತರಾಗಿದ್ದಾರೆ ಎಂದರು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 600 ಜನರಿಗೆ ಖಾಯಂ ಆದೇಶದ ಪತ್ರವನ್ನು ಖುದ್ದು ನೀಡಿದ್ದೇವೆ ಇದು ನಮ್ಮ ಕರ್ತವ್ಯವಾಗಿದೆ ಎಂದರು. ಜ
Pavithra Gowda Realease : ಪರಪ್ಪನ ಅಗ್ರಹಾರ ಜೈಲಿನಿಂದ ಕೊ* ಆರೋಪಿ ಬೆಲ್ ಮೇಲೆ ಪವಿತ್ರಾಗೌಡ ರಿಲೀಸ್.. |
Pavithra Gowda Realease : ಪರಪ್ಪನ ಅಗ್ರಹಾರ ಜೈಲಿನಿಂದ ಕೊ* ಆರೋಪಿ ಬೆಲ್ ಮೇಲೆ ಪವಿತ್ರಾಗೌಡ ರಿಲೀಸ್.. |
#PavithraGowda #ChallengingStarDarshan #bailtoDarshan #DarshaninHopital #Renukaswamy #KamakshipalyaPolice
ಶ್ರೀ ಕಾಶೀವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ಶಿವ ಲಿಂಗಕ್ಕೆ ಆರಿದ್ರ ನಕ್ಷತ್ರ ದ ವಿಶೇಷ ಪೂಜಾ ಕಾರ್ಯಕ್ರಮ.
ಅಭಿಷೇಕದಿಂದ ನಮ್ಮ ಮನಸ್ಸಿನಲ್ಲಿ ಇರುವ ತಾಪಗಳು ಅಂದರೆ ಕೋರಿಕೆಗಳು,ದುಃಖ ಗಳಿಂದ ,ದುರ್ಗಣಗಳಿಂದ,ಚಡಪಡಿಸುತ್ತಿರುವ ಮನಸ್ಸಿನ ತಾಪವನ್ನು ತೀರಿಸುವ ಅಭಿಷೇಕ ಎಂದರೆ ಮಾರ್ಗಶಿರ ಮಾಸದ ಆರ್ದ್ರ ನಕ್ಷತ್ರ ಅಭಿಷೇಕ ನೋಡುವುದರಿಂದ ಸಮಸ್ತ ತಾಪೋಪ ಶಮನ ವಾಗುತ್ತದೆ ಹಾಗೆ ಶಿವನಿಗೆ ಅತ್ಯಂತ ಪ್ರಿಯವಾದ ಅಭಿಷೇಕ ಶಿವನಿಗೆ ಅತ್ಯಂತ ಪ್ರೀತಿಕರ ವಾದಂತ ಸುಬ್ರಹ್ಮಣ್ಯ ಸ್ವಾಮಿ ನಾವು ಆರಿದ್ರ ನಕ್ಷತ್ರದ ಅಭಿಷೇಕ ನೋಡಿದರೆ ದರ್ಶನ ಪಡೆದರೆ ಪೂಜೆಗೆ ಭಾಗವಹಿಸಿದರೆ ಶಿವನಿಗೆ ನಾವು ಸಹ ಅಷ್ಟೇ ಪ್ರೀತಿ ಪಾತ್ರರಾಗುತ್ತೇವೆ.
ಆನೇಕಲ್: ಡಾ.ಅಂಬೇಡ್ಕರ್ ಯೂತ್ ಅಸೋಸಿಯೇಷನ್ ವತಿಯಿಂದ ಮುತ್ತನಲ್ಲೂರು ಗ್ರಾಮದಲ್ಲಿ ಹುಣ್ಣಿಮೆ ಪ್ರಯುಕ್ತ ಬುದ್ಧ ಬೆಳದಿಂಗಳ ಸಾಂಸ್ಕೃತಿಕ ಸಂಜೆಯ ಪ್ರಯುಕ್ತ ಭೂಮ್ತಾಯಿ ಬಳಗದ ವತಿಯಿಂದ ಅರಿವಿನ ಹಾಡು ಹಾಗೂ ಸಿದ್ದಲಿಂಗಯ್ಯ ಅವರ ಜೀವನಾಧಾರಿತ ಊರುಕೇರಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಮುತ್ತನಲ್ಲೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡವಣೆಯ ಕುಟುಂಬದ ಸದಸ್ಯರು ಒಳಗೊಂಡAತೆ, ಸುತ್ತಮುತ್ತಲ ಗ್ರಾಮದ ಬುದ್ಧನ ಅನುಯಾಯಿಗಳು ಬುದ್ಧನ ಪ್ರತಿಮೆ ಹಾಗೂ ದೀಪವನ್ನು ಕೈಯಲ್ಲಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬುದ್ಧನ ಶಾಂತಿ, ಮೈತ್ರಿ, ಸಮಾನತೆಯ ಸಂದೇಶವನ್ನು ಸಾರಿದರು.
ಈ ವೇಳೆ ಮುತ್ತನಲ್ಲೂರು ಗ್ರಾಮಪಂಚಾಯತಿ ಸದಸ್ಯ ಜಯರಾಮ್ ಸರ್ಜಾ ಮಾತನಾಡಿ, ಬುದ್ಧನ ತತ್ವಗಳು ಶಾಂತಿ, ಸಹೋದರತೆ, ಮೈತ್ರಿಯ ಸಂಕೇತವಾಗಿದ್ದು, ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಬುದ್ಧನ ಸಂದೇಶಗಳು ತಲುಪಬೇಕೆಂಬುದು ನಮ್ಮ ಆಶಯವಾಗಿದೆ. ಅದರ ಭಾಗವಾಗಿ ಮುತ್ತನಲ್ಲೂರು ಗ್ರಾಮದಲ್ಲಿ ಬುದ್ಧಬೆಳದಿಂಗಳು ಕಾರ್ಯಕ್ರಮವನ್ನು ಆಯೋ
ನಿವೃತ್ತ ಐಎಎಸ್ ಅಧಿಕಾರಿಯಾದ ದಿ|| ಕೆ.ಶಿವರಾಮುರವರ ಹುಟ್ಟು ಹಬ್ಬದ ಅಂಗವಾಗಿ ಆನೇಕಲ್ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ತೆಯ ರೋಗಿಗಳಿಗೆ ಹಣ್ಣು ಮತ್ತು ಸಿಹಿ ವಿತರಿಸುವ ಮೂಲಕ ಕೆ.ಶಿವರಾಮುರವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ ಛಲವಾದಿ ಮಹಾ ಸಭಾ ಮತ್ತು ಕೆ.ಶಿವರಾಮ್ ರವರ ಅಭಿಮಾನಿಗಳು.
ಇನ್ನು ಕಾರ್ಯಕ್ರಮದಲ್ಲಿ ಛಲವಾದಿ ಮಹಾ ಸಭದ ರಾಜಪ್ಪ. ರಾಮ್ ಕುಮಾರ್. ಗೋಪಾಲಕೃಷ್ಣ. ಪ್ಯಾನ್ಸಿ ರಮೇಶ್, ರತ್ನಮ್ಮ ರಾಜಪ್ಪ. ವೆಂಕಟಸ್ವಾಮಿ, ಹಾರಗದ್ದೆ ರುದ್ರಪ್ಪ. ಎಸ್.ಟಿ.ಡಿ. ರಮೇಶ್. ದೊಡ್ಡತಿಮ್ಮಸಂದ್ರ ರಮೇಶ್. ಶ್ರೀನಿವಾಸ್, ಸೋಮಣ್ಣ. ಬ್ಯಾಟ್ ರಾಜ್, ಹೆಬ್ಬಗೋಡಿ ಕೃಷ್ಣಪ್ಪ. ನರೇಂದ್ರ ಕುಮಾರ್ ಚಂದ್ರು. ಮೂರ್ತಿ. ರಮೇಶ್, ಪ್ರಭಾಕರ್. ಆಸ್ಪತ್ತೆ ಸಿಬ್ಬಂದಿ ಸಂಪAಗಿ ಮತ್ತು ಛಲವಾದಿ ಮಹಾ ಸಭಾದ ಪದಾದಿಕಾರಿಗಳು ಮತ್ತು ಕೆ.ಶಿವರಾಮ್ ರವರ ಅಭಿಮಾನಿಗಳು ಬಾಗವಹಿಸಿದ್ದರು.
ತಳಿ ರಸ್ತೆಯಲ್ಲಿ ಅಭಿವೃದ್ದಿ ವಿಳಂಬ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ
ಆನೇಕಲ್ ತಳಿ ರಸ್ತೆ ಅವ್ಯವಸ್ಥೆ ವಿರೋಧಿಸಿ ಸಾರ್ವಜನಿಕರ ಪ್ರತಿಭಟನೆ,
ತಳ್ಳಿ ರಸ್ತೆ ಅಗಲೀಕರಣ ಮಾಡುವಂತೆ ಸಾಕಷ್ಟು ವರ್ಷಗಳಿಂದ ಒತ್ತಾಯ ಮಾಡುತ್ತಿರುವ ಸಾರ್ವಜನಿಕರು, ಆದರೂ ಕೂಡ ಅಗಲೀಕರಣ ಕೆಲಸ ವಿಳಂಬವಾಗುತ್ತಿದ್ದು ಕಣ್ಮುಚ್ಚಿ ಕುಳಿತಿರುವ ಶಾಸಕರು ಹಾಗೂ ಅಧಿಕಾರಿಗಳು, ಇಂದು ಸಂಜೆ TATA ACE ವಾಹನ ಹಳ್ಳದಲ್ಲಿ ಸಿಲುಕಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್, ಪ್ರತಿಭಟನೆ ಸ್ಥಳಕ್ಕೆ ಬಂದ ಪೊಲೀಸರಿಂದ ಗುಂಪು ಚದುರಿಸುವ ಪ್ರಯತ್ನ ಹಾಗೂ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಆನೇಕಲ್ ನ ಪೊಲೀಸರು, ಅಧಿಕಾರಿಗಳ ಮೇಲೆ ಹಿಡಿ ಶಾಪ ಹಾಕುತ್ತಿರುವ ಸಾರ್ವಜನಿಕರು.
ತಳಿ ರಸ್ತೆಯಲ್ಲಿ ಅಭಿವೃದ್ದಿ ವಿಳಂಬ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ
ಆನೇಕಲ್ ತಳಿ ರಸ್ತೆ ಅವ್ಯವಸ್ಥೆ ವಿರೋಧಿಸಿ ಸಾರ್ವಜನಿಕರ ಪ್ರತಿಭಟನೆ,
ತಳ್ಳಿ ರಸ್ತೆ ಅಗಲೀಕರಣ ಮಾಡುವಂತೆ ಸಾಕಷ್ಟು ವರ್ಷಗಳಿಂದ ಒತ್ತಾಯ ಮಾಡುತ್ತಿರುವ ಸಾರ್ವಜನಿಕರು, ಆದರೂ ಕೂಡ ಅಗಲೀಕರಣ ಕೆಲಸ ವಿಳಂಬವಾಗುತ್ತಿದ್ದು ಕಣ್ಮುಚ್ಚಿ ಕುಳಿತಿರುವ ಶಾಸಕರು ಹಾಗೂ ಅಧಿಕಾರಿಗಳು,
ಇಂದು ಸಂಜೆ TATA ACE ವಾಹನ ಹಳ್ಳದಲ್ಲಿ ಸಿಲುಕಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್, ಪ್ರತಿಭಟನೆ ಸ್ಥಳಕ್ಕೆ ಬಂದ ಪೊಲೀಸರಿಂದ ಗುಂಪು ಚದುರಿಸುವ ಪ್ರಯತ್ನ ಹಾಗೂ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಆನೇಕಲ್ ನ ಪೊಲೀಸರು, ಅಧಿಕಾರಿಗಳ ಮೇಲೆ ಹಿಡಿ ಶಾಪ ಹಾಕುತ್ತಿರುವ ಸಾರ್ವಜನಿಕರು.
ಆನೇಕಲ್: ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಕೆ.ಶಿವರಾಮು ಅವರು ಶಾಸಕರಾಗಿ ವಿಧಾನಸಭೆಗೆ ಹೋಗಿದ್ದರೆ, ಮತ್ತಷ್ಟು ಜನಪರವಾದ ಕಾರ್ಯಕ್ರಮಗಳು ಅನುಷ್ಟಾನಕ್ಕೆ ಬರುತ್ತಿದ್ದವು ಎಂದು ಕಿಯೋನೆಕ್ಸ್ ಮಾಜಿ ಅಧ್ಯಕ್ಷ ಯಂಗಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಕೆ.ಶಿವರಾಮು ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಿಸಿಮಾತನಾಡಿದ ಅವರು, ಅಧಿಕಾರಿಯಾಗಿ ಕೆ.ಶಿವರಾಮು ಐಎಎಸ್ ಅಧಿಕಾರಿಯಾಗಿ ಜನಸಾಮಾನ್ಯರ ಪರವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದರು. ಅವರಿಗೆ ಶಾಸಕನಾಗಿ ಮತ್ತಷ್ಟು ಜನಸೇವೆ ಮಾಡಬೇಕೆಂಬ ಆಸೆಯಿತ್ತು. ಆದರೆ, ಆ ಅವಕಾಶ ಅವರಿಗೆ ಸಿಗಲೇಯಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ಬಳ್ಳೂರು ಮುನಿವೀರಪ್ಪ ಮಾತನಾಡಿ, ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯಬಾರದು ಎಂಬ ನಾಣ್ಣುಡಿಯಂತೆ ಕಡುಬಡತನದಲ್ಲಿ ಹುಟ್ಟಿದ ಕೆ.ಶಿವರಾಮು ಅವರು ಐಎಎಸ
ಆನೇಕಲ್: ಹನುಮ ಜಯಂತಿಯ ಪ್ರಯುಕ್ತ ಪಟ್ಟಣದ ವೆಂಕಟೇಶ್ಚರ ಚಿತ್ರಮಂದಿರ ವೃತ್ತದಲ್ಲಿರುವ ಶ್ರೀ ವೀರಾಂಜನೆಯ ಗುಡಿಯಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಶ್ರೀ ವೀರಾಂಜನೇಯ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಅನ್ನಸಂತಾರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಇಲ್ಲಿನ ವೀರಂಜನೆಯ ಗುಡಿಯಲ್ಲಿ ಕಳೆದ ಐದು ವರ್ಷದಿಂದ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಈ ವರ್ಷವು ದೇವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಮಾಡಲಾಗಿತ್ತು ಎಂದು ಮಾದೇಶ್ ರೆಡ್ಡಿ ತಿಳಿಸಿದರು.
ಶ್ರೀನಿವಾಸ್ ರೆಡ್ಡಿ, ಮದೇಶ್ ರೆಡ್ಡಿ, ಗೋಪಾಲ್, ಮಂಜುನಾಥ್, ದಿಲೀಪ್ ರಂಗಸ್ವಾಮಿ, ತಿಮ್ಮರಾಜು, ಶಿವರಾಮ್, ಕಾವಲಹೋಸಹಳ್ಳಿ ಸತೀಶ್, ರವಿ, ವಿಶಾಲ್ ರೆಡ್ಡಿ, ಶ್ರೀನಿವಾಸ್, ಅಶೋಕ್, ಶೆಟ್ಟಿ ಬಾಬು, ಜಯಮ್ಮ ಮತ್ತು ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದ್ದರು