ನಗಾರಿ ಧ್ವನಿ

ನಗಾರಿ ಧ್ವನಿ ರಾಷ್ಟ್ರಧರ್ಮ ಪ್ರಾಧಾನ್ಯವಾಗಿಟ್ಟುಕೊಂಡು

ಬಹಳ ದಿನಗಳಿಂದ ಕೇಜ್ರಿವಾಲರ ಆಪ್ ಪಕ್ಷದ ದೆಹಲಿಯ ಸಾಧನೆ ಬಗ್ಗೆ ನೋಡುವಾಗೆಲ್ಲ ಆಶ್ಚರ್ಯವಾಗುತ್ತಿತ್ತು. ಸರ್ಕಾರಿ ಶಾಲೆಯ ವಿಚಾರ ಬಂದಾಗ “Delhi M...
10/09/2022

ಬಹಳ ದಿನಗಳಿಂದ ಕೇಜ್ರಿವಾಲರ ಆಪ್ ಪಕ್ಷದ ದೆಹಲಿಯ ಸಾಧನೆ ಬಗ್ಗೆ ನೋಡುವಾಗೆಲ್ಲ ಆಶ್ಚರ್ಯವಾಗುತ್ತಿತ್ತು. ಸರ್ಕಾರಿ ಶಾಲೆಯ ವಿಚಾರ ಬಂದಾಗ “Delhi Model” ಎನ್ನುವಷ್ಟರ ಮಟ್ಟಿಗೆ ಆಪ್ ನ್ನು ಬಿಂಬಿಸುವಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಯಶಸ್ವಿಯಾಗಿದ್ದವು. ದೆಹಲಿಯ ನಂತರ ಗೆದ್ದ ಪಂಜಾಬಿನಲ್ಲಿಯೂ ದೆಹಲಿ ಮಾಡೆಲ್ ಮಾಡಲು ಅರವಿಂದರ ಪಕ್ಷ ಪಡುತ್ತಿರುವ ಪಾಡು ತಮಗೆಲ್ಲ ಗೊತ್ತೇ ಇದೆ.

“ಎಲ್ಲವೂ ಉಚಿತ” ಎಂಬ ಆಮಿಷದೊಂದಿಗೆ ಅಧಿಕಾರ ಸ್ಥಾಪಿಸಹೊರಟ ಆಪ್ ದೇಶದುದ್ದಕ್ಕೂ ಹಬ್ಬಿಬಿಟ್ಟರೆ ಪರಿಸ್ಥಿತಿ ಏನಾಗಬಹುದು ಎಂಬುದಕ್ಕೆ ಎಲ್ಲ ಉಚಿತ ಕೊಟ್ಟು ಈಗ ಎಲ್ಲೆಡೆ ಬೇಡುವ ಪರಿಸ್ಥಿತಿ ಬಂದಿರುವ ರಾಷ್ಟ್ರಗಳ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಆದರೂ ನಮ್ಮ ಜನ, “ಬೇರೆಯದ್ದೆಲ್ಲ ಬಿಡಿ ನನಗೆಷ್ಟು ಸಿಗುತ್ತೆ ಹೇಳಿ!” ಎನ್ನುವ ಮನೋಭಾವನೆಯಿಂದ ಹೊರ ಬರುವಲ್ಲಿಯವರೆಗೂ, ಈ ರೀತಿ ಆಮಿಷವೆಂಬ ವಿಷವುಣಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ಬೇಳೆ ಬೇಯುತ್ತಲೆ ಇರುತ್ತದೆ.

ಆಪ್ ಸರ್ಕಾರದ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿರುವ ಶೈಕ್ಷಣಿಕ ಸಾಧನೆಯ ಆಳ ಅಗಲ ಎಷ್ಟೆಂಬುದರ ಬಗ್ಗೆ ವೆಬ್ಸೈಟ್ ಮಾಧ್ಯಮವೊಂದು ಬಹಳ ಚೆನ್ನಾಗಿ ವಿವರಿಸಿದೆ. ಅದರ ಕನ್ನಡ ಅನುವಾದವನ್ನು ನಿಮ್ಮೆದುರು ನೀಡುವ ಪ್ರಯತ್ನ ಮಾಡಿದ್ದೇನಷ್ಟೆ. ಆಪ್ ಸರ್ಕಾರ ಬಡಾಯಿಕೊಚ್ಚಿಕೊಳ್ಳುವ ವಿಶ್ವ ಶ್ರೇಣಿಯ ಶೈಕ್ಷಣಿಕ ವ್ಯವಸ್ಥೆಯ ಅತಿಶಯೋಕ್ತಿಯನ್ನು ಹೊರತು ಪಡಿಸಿ ನೋಡಿದಾಗ ಎಷ್ಟರ ಮಟ್ಟಿಗೆ ಸಾಕಾರಗೊಂಡಿದೆ ಎಂಬುದನ್ನೊಮ್ಮೆ ದಾಖಲೆ ಸಹಿತ ನೋಡಿ ಬರೋಣ ಬನ್ನಿ.

ಬಹಳ ದಿನಗಳಿಂದ ಕೇಜ್ರಿವಾಲರ ಆಪ್ ಪಕ್ಷದ ದೆಹಲಿಯ ಸಾಧನೆ ಬಗ್ಗೆ ನೋಡುವಾಗೆಲ್ಲ ಆಶ್ಚರ್ಯವಾಗುತ್ತಿತ್ತು. ಸರ್ಕಾರಿ ಶಾಲೆಯ ವಿಚಾರ ಬಂದ....

ತಪ್ಪೊಂದೇ ಸಾಕೇ ದೂರಾಗುವ ನೆಪಕ್ಕೆ!ಈ ಒಪ್ಪಿಕೊಳ್ಳುವುದು ಮತ್ತು ಬಿಟ್ಟು ಬಿಡುವುದು (Acceptance & Ignorance) ಎಂಬುದು ನಮ್ಮ ಜೀವನದಲ್ಲಿ ಬಲು...
01/10/2021

ತಪ್ಪೊಂದೇ ಸಾಕೇ ದೂರಾಗುವ ನೆಪಕ್ಕೆ!

ಈ ಒಪ್ಪಿಕೊಳ್ಳುವುದು ಮತ್ತು ಬಿಟ್ಟು ಬಿಡುವುದು (Acceptance & Ignorance) ಎಂಬುದು ನಮ್ಮ ಜೀವನದಲ್ಲಿ ಬಲು ದೊಡ್ಡ ಪಾತ್ರವನ್ನು ನಿರ್ವಹಿಸುತ್ತದೆ. ಯಾವುದನ್ನು ಒಪ್ಪಿಕೊಳ್ಳಬೇಕು ಯಾವುದನ್ನು ಬಿಟ್ಟುಬಿಡಬೇಕು ಎಂಬುದೇ ಕೆಲವರ ಸಮಸ್ಯೆ ಹಾಗೂ ಅದೇ ಅವರ ದುಃಖಕ್ಕೆ ಕಾರಣ ಕೂಡಾ. ಒಳ್ಳೆಯ ಕೆಲಸವಿದ್ದೂ ಸಂಬಳವೂ ಚೆನ್ನಾಗಿದ್ದು ಬಾಸ್ ಕಿರಿ ಕಿರಿ ಎನ್ನಿಸಿತೋ ಕೆಲಸವನ್ನೆ ಬಿಟ್ಟು ಬಿಡುತ್ತೇವೆ. ಇಲ್ಲಿ ನಿಜವಾಗಿ ಬಿಡಬೇಕಾದ್ದು ಆ ಕಿರಿ ಕಿರಿಯನ್ನು ಮನಸ್ಸಿಗೆ ತಗೊಳೋದನ್ನು ಹೊರತು ಕೆಲಸವನ್ನಲ್ಲ. ಕೆಲವೊಮ್ಮೆ ದುಡುಕಿನ ನಿರ್ಧಾರಗಳು ನಮ್ಮ ಭವಿಷ್ಯವನ್ನೆ ಹಾಳು ಮಾಡುವುದುಂಟು. ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಬಂಧಗಳನ್ನು ಶಾಶ್ವತವಾಗಿ ಕಳೆದುಕೊಂಡವರೂ ನಮ್ಮ ನಡುವೆ ಹಲವರಿರಬಹುದು.

ಕಿವಿಗೆ ಕೇಳಿಸುವ ಕಣ್ಣಿಗೆ ಕಾಣಿಸುವ ಎಲ್ಲ ವಿಚಾರಗಳನ್ನೂ ತಲೆಯಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಕೆಲವಷ್ಟನ್ನು ಕೇಳಿದಲ್ಲಿ ನೋಡಿದಲ್ಲಿಯೇ ಬಿಟ್ಟು ಬಿಡಬೇಕು. ಎಲ್ಲವನ್ನೂ ತಲೆಯಲ್ಲಿ ತುಂಬಿಸಿಕೊಳ್ಳುತ್ತಾ ಹೋದರೆ ನಮ್ಮ ಮೆದುಳಿಗೂ ಕಸದ ತೊಟ್ಟಿಗೂ ವ್ಯತ್ಯಾಸವೇನು ಹೇಳಿ. ಏನೂ ಅಲ್ಲದ ಮೊಬೈಲ್ ನ ಮೆಮೋರಿ ಚಿಪ್ಪನ್ನೇ ಆಗಾಗ ರಿಫ್ರೆಶ್ ಮಾಡಿ ಬೇಕಾದ್ದನ್ನು ಇಟ್ಟುಕೊಂಡು ಬೇಡದ್ದನ್ನು ಡಿಲಿಟ್ ಮಾಡುವ ನಾವುಗಳು ನಮ್ಮ ತಲೆಯಲ್ಲಿ ಮಾತ್ರ ಸದಾ ಬೇಡದ್ದನ್ನೇ ತುಂಬಿಸಿಟ್ಟುಕೊಂಡು ಕೊರಗುತ್ತಿರುತ್ತೇವೆ. ನಮ್ಮನ್ನು ನಾವೊಮ್ಮೆ ಅವಲೋಕಿಸಿಕೊಂಡು ಬೇಕಾದ್ದನ್ನು ಒಪ್ಪಿಕೊಂಡು ಬೇಡದ್ದನ್ನು ಬಿಡಬೇಕೆಂಬ ಗೊಡವೆಗೇ ಹೋಗುವುದಿಲ್ಲ. ಬಹಳ ಮಂದಿಯ ನೋವಿಗೂ ಇದೇ ಕಾರಣ.

ಗೆಳೆಯನೊಬ್ಬನಲ್ಲಿ ನಮಗಿಷ್ಟವಾಗುವ ನೂರು ಗುಣಗಳಿದ್ದರೂ ಇಷ್ಟವಾಗದ ಒಂದು ಗುಣದ ಬಗ್ಗೆ ಸದಾ ಕೋಪಿಸಿಕೊಂಡು ಆ ವಿಚಾರಕ್ಕೆಂದೇ ಜಗಳವಾಗುತ್ತಿರುತ್ತದೆ. 'ಅವನು ನನಗೆ ಬಹಳವೇ ಇಷ್ಟ ಆದರೆ ಆ ಒಂದು ಕಾರಣ ಅವನನ್ನು ಕಂಡಾಗಲೆಲ್ಲ ಕೋಪ ತರಿಸುತ್ತದೆ' ಎಂದು ಕೆಲವರು ಹೇಳುವುದನ್ನು ಕೇಳಿರಬಹುದು, ಬಹುಕಾಲದ ಬಿಟ್ಟಿರಲಾರದ ಗೆಳೆಯನ ಬಗ್ಗೆಯೂ ಹೀಗೊಂದು ಭಾವ ಮನಸ್ಸಲ್ಲಿ ಮೂಡುತ್ತದೆ. ಗುಣ ಅವಗುಣಗಳು ಮನುಷ್ಯನಲ್ಲಿರುವುದು ಸಾಮಾನ್ಯ ವಿಚಾರ. ಎಲ್ಲವನ್ನೂ ಸರಿಯೇ ಮಾಡಲು ನಾವೇನು ದೇವರಲ್ಲವಲ್ಲ. ಆ ಕೆಲವಷ್ಟು ತಪ್ಪುಗಳನ್ನು ignore ಮಾಡಿ ಒಳ್ಳೆಯ ಗುಣಗಳನ್ನು ಒಪ್ಪಿಕೊಂಡು ಹೋಗುವಲ್ಲಿ ಅದ್ಯಾವ ಮನಸ್ಸು ತಡೆ ಹಿಡಿಯುತ್ತದೋ ದೇವರೇ ಬಲ್ಲ.

ಆ ಒಂದು ಅವಗುಣದ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಟ್ಟರೆ ಸಂಬಂಧ ಬಹಳಷ್ಟು ಗಟ್ಟಿಯಾಗಿ ಬಿಡುತ್ತದೆ. ಆದರೆ ಕೆಲವೊಮ್ಮೆ ಒಂದು ಗುಣದಿಂದಾಗಿ ಸ್ನೇಹವನ್ನೇ ಬಿಟ್ಟು ಬಿಡುವವರಿರುತ್ತಾರೆ. ಹೆಚ್ಚಿನ ಪ್ರೇಮ ಪ್ರಕರಣಗಳು ಮುರಿದು ಬೀಳೋದು ಕೂಡಾ ಇದೇ ಕಾರಣದಿಂದ. ಗಂಡ ಹೆಂಡತಿಯ ಸಂಬಂಧ ಕೂಡಾ ಹಾಗೆ ಕ್ಷುಲ್ಲಕ ಕಾರಣಗಳಿಂದಾಗಿ ಮುರಿದು ಬೀಳುವುದುಂಟು. ನಾವು ತಪ್ಪು ಮಾಡಿದಾಗ ಹೇಗೆ ನಮ್ಮನ್ನು ನಾವು ಸಂತೈಸಿಕೊಂಡು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆಂದು ಮನಸ್ಸಿಗೆ ಹೇಳಿ ಮುಂದುವರೆಯುತ್ತೇವೆಯೋ ಅದೇ ನಮಗೆ ಹತ್ತಿರದವರು ಅದೇ ತಪ್ಪನ್ನು ಮಾಡಿದಾಗ ಒಪ್ಪುವ ಉದಾರ ಮನಸ್ಸು ನಮಗಿರುವುದಿಲ್ಲ ಆಗಲೇ ಸಂಬಂಧಗಳು ಮುರಿದು ಬೀಳುವುದು.

ಹೊಟೇಲ್ ಹೋದಾಗ ಅಡುಗೆಯ ಪಟ್ಟಿಯಲ್ಲಿ ಬೇಕಾದಷ್ಟಿರಬಹುದು ಆದರೆ ಇದೆ ಎಂಬ ಮಾತ್ರಕ್ಕೆ ಎಲ್ಲವನ್ನೂ ತಿಂದರೆ ಹೊಟ್ಟೆ ಹಾಳಾಗುವುದು ನಮ್ಮದೇ ಅಲ್ಲವೇನು! ಅದಕ್ಕೆಂದೆ ನಮಗಿಷ್ಟವಾದ ಖಾದ್ಯವನ್ನು ಎಷ್ಟು ಬೇಕೋ ಅಷ್ಟೇ ತಿಂದೆದ್ದು ಬರುತ್ತೇವೆ. ಅಂತೆಯೇ ಸಮಾಜದಲ್ಲಿ ಬದುಕುತ್ತಿರುವಾಗ ನಮ್ಮ ಸುತ್ತಲೂ ಬಹಳಷ್ಟು ವಿಚಾರಗಳು ನಡೆಯುತ್ತಿರುತ್ತದೆ ಎಲ್ಲದಕ್ಕೂ ತಲೆ ಕೆಡಿಸಿಕೊಳ್ಳುತ್ತಾ ಹೋದರೆ ಬದುಕು ಮುಂದೆ ಸಾಗುವುದಾದರೂ ಹೇಗೆ. ಯಾವುದು ನಮ್ಮ ಜೀವನದ ಒಳಿತಿಗೆ ಅನಿವಾರ್ಯವೋ ಅದನ್ನು ಮಾತ್ರವೇ ಸ್ವೀಕರಿಸಿ ಉಳಿದದ್ದನ್ನೆಲ್ಲ ನಿರಾಕರಿಸಿ ಬಾಳಿದರೆ ಬದುಕು ಸುಲಭವೆನ್ನಿಸಿ ಬಿಡುತ್ತದೆ.

ಹೆಚ್ಚಿನ ಜಗಳಗಳಿಗೆ ಕಾರಣ ನಮ್ಮ ದೃಷ್ಟಿಕೋನವೇ ಆಗಿರುತ್ತದೆ. ತೀರಾ ಹತ್ತಿರದವರ ಮೇಲೆ ಕೋಪ ಬಂದಾಗ ನಮಗೆ ಅವರ ಮೇಲಿರುವ ಪ್ರೀತಿ ಸ್ನೇಹವೇ ನಮಗೆ ದೊಡ್ಡದಾಗಿರುತ್ತದೆ. ಅದೇ ಅವರೂ ಕೂಡಾ ನಮ್ಮನ್ನು ಅಷ್ಟೇ ಹಚ್ಚಿಕೊಂಡಿರಬಹುದು ಎಂದು ಯೋಚಿಸುವುದೂ ಇಲ್ಲ ಬದಲಾಗಿ ಅವರು ಮಾಡಿದ ತಪ್ಪೇ ಅಕ್ಷಮ್ಯ ಎಂಬ ಭಾವವಿರುತ್ತದೆ. ಒಂದು ಕ್ಷಣ ಅವರಿರುವ ಜಾಗದಲ್ಲಿ ನಮ್ಮನ್ನಿಟ್ಟು ನೋಡಿದರೆ ಅಲ್ಲಿ ಯಾವ ತಪ್ಪೂ ಸಂಭವಿಸಿರುವುದಿಲ್ಲ. 6 ಸಂಖ್ಯೆಯ ಎದುರು ಬದುರಾಗಿ ನಿಂತು ಜಗಳವಾಡಿದಂತೆ. ನಮಗೆ ಆರಾಗಿ ಕಂಡದ್ದು ಎದುರಲ್ಲಿದ್ದವರಿಗೆ ಒಂಬತ್ತಾಗಿ ಕಂಡರೆ ತಪ್ಪೇನು? ಇಲ್ಲಿ ಇಬ್ಬರೂ ಸರಿಯೇ ಆದರೂ ನಮ್ಮ ದೃಷ್ಟಿಕೋನ ನಮ್ಮ ಮೂಗಿನ ನೇರಕ್ಕೆ ಸೀಮಿತವಾಗಿದ್ದಾಗ ಅದು ಜಗಳಕ್ಕೆ ಕಾರಣವಾಗುತ್ತದೆ. ಬಹು ಪ್ರೀತಿ ಪಾತ್ರರು ತಪ್ಪಿತಸ್ಥರಂತೆ ಕಂಡಾಗ ಒಮ್ಮೆ ಅವರ ಜಾಗದಲ್ಲಿ ನಿಂತು ನೋಡಿ ಕೋಪ ಮುಗಿದು ಪ್ರೇಮ ಹೆಚ್ಚುತ್ತದೆ. ಸ್ವೀಕರಿಸಬೇಕಾದ್ದನ್ನು ಮಾತ್ರ ಸ್ವೀಕರಿಸಿ ಉಳಿದದ್ದನ್ನು ಹಾಗೇ ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಮುಂದಿನದ್ದು ನಿಮ್ಮದೇ ಅನುಭವಕ್ಕೆ ಬರಲಿದೆ.

-ಶಶಿಧರ್ ತಲ್ಲೂರಂಗಡಿ

25/09/2021

ಸತ್ಯ-ಪರಮಸತ್ಯ

ಒಂದು ಸಂಜೆ ತಂದೆ ಮಗನನ್ನು ಊರ ಮುಂದೆ ಇರುವ ದೇವಾಲಯಕ್ಕೆ ಕರೆದುಕೊಂಡುಹೋದ. ದೇವಾಲಯದ ಹೆಬ್ಬಾಗಿಲಲ್ಲಿ ಕೆತ್ತಿದ್ದ ಸಿಂಹದ ವಿಗ್ರಹಗಳನ್ನ ನೋಡಿ ಮಗ ಕಿರುಚುತ್ತಾ ಹೇಳಿದ "ಅಪ್ಪಾ...!!ಓಡು.. ಓಡು.. ಇಲ್ಲಿ ಸಿಂಹಗಳು ಇದ್ದಾವೆ ನಮ್ಮನ್ನು ತಿಂದುಬಿಡುತ್ತವೆ...." ಓಡುತ್ತಿದ್ದ ಮಗನನ್ನು ನಿಲ್ಲಿಸಿ ತಂದೆ ಹೇಳಿದ "ಭಯ ಬೇಡ ಮಗೂ ಅವು ಕಲ್ಲಿನ ಸಿಂಹಗಳು ಅವುಗಳಿಂದ ನಮಗೆ ಏನೂ ಮಾಡಲು ಆಗುವುದಿಲ್ಲ. ಮಗ ಮರುಪ್ರಶ್ನೆ ಎಸೆದ "ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ, ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ ಅಪ್ಪಾ..!! ?" ತಂದೆ ತನ್ನ ಡೈರಿಯಲ್ಲಿ ಈ ರೀತಿ ಬರೆಯುತ್ತಾನೆ..
"'ಇದುವರೆಗೆ ನನ್ನ ಮಗನ ಪ್ರಶ್ನೆ ಗೆ ಉತ್ತರ ಕೊಡಲು ನನ್ನಿಂದ ಸಾಧ್ಯವಾಗಿಲ್ಲ. ಅಂದಿನಿಂದ ಕಲ್ಲಿನ ವಿಗ್ರಹ ಬಿಟ್ಟು ಮನುಷ್ಯರಲ್ಲಿ ದೇವರನ್ನು ಹುಡುಕಲು ಪ್ರಾರಂಭಿಸಿದ್ದೇನೆ. ದೇವರನ್ನು ಕಾಣಲಾಗಲಿಲ್ಲ ಆದರೆ, ಮಾನವೀಯತೆಯನ್ನು ಕಂಡೆ".

ವಾಟ್ಸಾಪ್ ನಲ್ಲಿ ಬಂದ ಕಥೆ ಇದು. ಎಲ್ಲರಿಗೂ ಕಳುಹಿಸಿ ಅಂಧಾಚರಣೆಯನ್ನು ಹೋಗಲಾಡಿಸಿ ಎಂಬ ಒಕ್ಕಣೆ ಬೇರೆ ಇತ್ತು ಈ ಕಥೆಗೆ. ಓದಿದವರಿಗೆ ಒಮ್ಮೆಗೆ ವಾಹ್ಹ್ ಈ ಬಗ್ಗೆ ಯೋಚಿಸಿಯೆ ಇರಲಿಲ್ಲವಲ್ಲ ಇದೆಷ್ಟು ಸತ್ಯ ಎಂದನ್ನಿಸಿದರೆ ತಪ್ಪೇನೂ ಇಲ್ಲ. ಆದರೆ ಇಲ್ಲಿ ಯೋಚಿಸಬೇಕಾದ್ದು ಹಲವಷ್ಟಿದೆ. ದೇವರಲ್ಲಿ ನಂಬುಗೆಯಿಟ್ಟು ದೇವಾಲಯಕ್ಕೆ ಹೋಗುವವರು ಯಾರೂ ಕೂಡಾ ಅಲ್ಲಿರುವ ಮೂರ್ತಿಯನ್ನು ಕಲ್ಲಿನ ರೂಪದಲ್ಲಿ ನೋಡುವುದಿಲ್ಲ. ದೇವರನ್ನು ಮೂರ್ತಿಯಲ್ಲಿ ಕಂಡು ಪುನೀತರಾಗುತ್ತಾರಷ್ಟೇ. ಅಷ್ಟಕ್ಕೂ ಈ ಕಥೆಯಲ್ಲಿ ಹೇಳಿರುವಂತೆ ತಂದೆ ಮಗನಿಗೆ ಉತ್ತರಿಸಲಾರದೇ ನಿರುತ್ತರನಾಗುತ್ತಾನೆ. ಛೇ ಆ ಮಗುವಿನ ಮನಸ್ಸಿನಲ್ಲಿ ನಮ್ಮ ಆಚರಣೆಗಳಿಗೆ ಅರ್ಥವೇ ಇಲ್ಲದಂತಾಯಿತಲ್ಲ. ಆತನಿಗೆ ನಿಜವಾಗಿ ನಮ್ಮ ಸಂಸ್ಕೃತಿಯ ಅರಿವಿದ್ದಿರುತ್ತಿದ್ದರೆ ಆ ಮಗುವನ್ನು ಸಂತೈಸಲು ಆತ ಹೀಗೆ ಹೇಳಬಹುದಿತ್ತು. "ಮಗು ಅದು ಸಿಂಹದ ಮೂರ್ತಿ. ದೇವಿ ಒಳ್ಳೆಯವರನ್ನು ರಕ್ಷಿಸುವಂತೆ ಕೆಟ್ಟವರನ್ನು ಶಿಕ್ಷಿಸುತ್ತಾಳೆ. ಅದರ ಸಂಕೇತವಾಗಿ ಕೆಟ್ಟ ಕೆಲಸ ಮಾಡದಿರುವಂತೆ ಈ ಸಿಂಹ, ದೇವಿಯ ಕೈಯಲ್ಲಿರುವ ಆಯುಧಗಳು ನಮ್ಮನ್ನು ಎಚ್ಚರಿಸುತ್ತವಷ್ಟೇ. ನಾವು ಒಳ್ಳೆಯ ಕೆಲಸಗಳನ್ನು ಮಾಡಿ ದೇವಿಯ ಮೇಲಿನ ಭಕ್ತಿಗೆ ದೇವಾಲಯಕ್ಕೆ ಬರುವವರು ಹಾಗಾಗಿ ನಮಗೆ ಆ ಸಿಂಹ ಏನೂ ತೊಂದರೆ ಕೊಡದು ಭಯ ಬೇಡ" ಎಂದು ಹೇಳಿ ಮಗುವನ್ನು ದೇವಾಲಯಕ್ಕೆ ಕರೆದೊಯ್ಯಬಹುದಿತ್ತು.

ಆಕಾಶವನ್ನು ನೋಡುತ್ತಿರುವಾಗ ಒಮ್ಮೊಮ್ಮೆ ನೀಲಿಯಾಗಿ ಕಂಡರೆ ಕೆಲವೊಮ್ಮೆ ಹಲವು ಬಣ್ಣದಲ್ಲಿ ಕಾಣುವುದು ಕೆಲವೊಮ್ಮೆ ತುಂಬಾ ಸನಿಹದಲ್ಲಿ ಕಂಡರೆ ಕೆಲವೊಮ್ಮೆ ಬಹಳಷ್ಟು ದೂರದಲ್ಲಿರುವಂತೆ ಭಾಸವಾಗುತ್ತದೆ. ಮೋಡಗಳೂ ಹಾಗೆ ಒಬ್ಬೊಬ್ಬರಿಗೆ ಒಂದೊಂದು ಕಥೆ ಹೇಳುವ ರೀತಿ ಕಾಣಿಸುತ್ತವೆ. ಹಾಗೆಂದು ಯಾವುದನ್ನೂ ಸುಳ್ಳೆಂದು ಪ್ರತಿಪಾದಿಸಲಾಗುವುದಿಲ್ಲ ಅಂತೆಯೆ ಅದೇ ಸತ್ಯವೆಂದೂ ಹೇಳಲಾಗದು. ಈ ಜಗತ್ತೇ ಹೀಗೆ ನಮ್ಮ ದೃಷ್ಟಿಯಿದ್ದಂತೆ ಸೃಷ್ಟಿಯ ಗೋಚರವಾಗುತ್ತದೆ. ಕಲ್ಲನ್ನು ಕಲ್ಲೆಂದು ನೋಡಿದರೆ ಕಲ್ಲು, ದೇವರೆಂದು ನೋಡಿದರೆ ದೇವರು ಅಷ್ಟೇ. ದೇವರು ಸರ್ವಾಂತರ್ಯಾಮಿ ಆತ ನಿರಾಕಾರಮಯ ಆತ ಸಕಲ ಜೀವಿಗಳಲ್ಲಿ ಹಾಗೂ ಗೋಚರವಾಗುವ ಪ್ರತಿ ವಸ್ತುಗಳಲ್ಲಿಯೂ ಅಡಕವಾಗಿ ಅಗೋಚರವಾಗಿರುವ ಶಕ್ತಿ ಎಂಬ ನಂಬಿಕೆ ಇದೆ. ಮಾನವನಲ್ಲಿ ಕಾಣಿಸಿಕೊಳ್ಳುವ ದೇವರು ಸಸ್ಯ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ದೇವರು ಕಲ್ಲಿನಲ್ಲಿ ಇರಲಾರನೇ?? ಆತನಿಗೆ ಅಷ್ಟೂ ಶಕ್ತಿ ಇರಲಾರುದೇ ಎಂದು ಕೇಳಿದರೆ ಬಹುಶಃ ಆ ಕಥೆಯ ತಂದೆಗೆ ಉತ್ತರ ಗೊತ್ತಿರಲಿಕ್ಕಿಲ್ಲ.

ಸ್ವಾಮಿ ವಿವೇಕಾನಂದರ ಬಳಿ ರಾಜನೊಬ್ಬ ಕೇಳಿದನಂತೆ. "ಸ್ವಾಮೀಜಿ ಕಲ್ಲನ್ನು ದೇವರೆಂದು ಪೂಜಿಸುತ್ತೀರಲ್ಲ ಆ ಕಲ್ಲು ಏನು ಮಾಡಬಲ್ಲುದು ಅದರಲ್ಲಿ ದೇವರಿರಲು ಹೇಗೆ ಸಾಧ್ಯ ನಿಮ್ಮದು ಮೂರ್ಖತನ ಎನ್ನಿಸುವುದಿಲ್ಲವೇ?!" ಆ ರಾಜನ ಪ್ರಶ್ನೆಗೆ ಸ್ವಾಮೀಜಿಗೆ ನಗು ಬಂದಿತು. ಅಲ್ಲಿಯೇ ನಿಂತಿದ್ದ ಮಂತ್ರಿಯ ಬಳಿ ಗೋಡೆಗೆ ನೇತು ಹಾಕಿದ್ದ ರಾಜನ ಭಾವಚಿತ್ರವನ್ನು ನೆಲಕ್ಕೆ ಹಾಕಿ ಅದನ್ನು ಕಾಲಿನಿಂದ ತುಳಿಯುವಿರಾ ಎಂದು ಕೇಳಿದರು. ಅದಕ್ಕೆ ಮಂತ್ರಿ ಸಿಡಿಮಿಡಿಗೊಂಡನು ರಾಜನಿಗೆ ಕೋಪವೂ ಬಂದಿತು. ಸ್ವಾಮೀಜಿ ಮುಂದುವರೆಸಿದರು ಮಂತ್ರಿಗಳೇ ಚಿಂತೆ ಏಕೆ ಅದು ಕೇವಲ ಭಾವಚಿತ್ರ ಮಾತ್ರ. ರಾಜ ನಿಮ್ಮೆದುರಿಗೇ ಇದ್ದಾನೆ. ನಾನು ಹೇಳುತ್ತಿರುವುದು ಭಾವಚಿತ್ರಕ್ಕೆ ತುಳಿಯಬೇಕೆಂದೇ ವಿನಃ ರಾಜನನ್ನಲ್ಲ ಎಂದಾಗ ಮಂತ್ರಿ ವಿನಯದಿಂದಲೇ "ಸ್ವಾಮೀಜಿ, ಅದು ರಾಜನ ಭಾವಚಿತ್ರವೇ ಆಗಿದ್ದರೂ ಕೂಡಾ ನಾವದರಲ್ಲಿ ರಾಜನನ್ನೇ ಕಾಣುವೆವು ನನ್ನಿಂದ ಅದನ್ನು ತುಳಿಯುವುದು ಅಸಾಧ್ಯ" ಎಂದನು. ಸ್ವಾಮೀಜಿ ರಾಜನ ಮುಖ ನೋಡಿದಾಗ ಆತ ಪೆಚ್ಚಾಗಿದ್ದನು. ಆತನ ಪ್ರಶ್ನೆಗೆ ಉತ್ತರ ದೊರಕಿತ್ತು. ತನ್ನ ತಪ್ಪಿನ ಅರಿವಾಗಿತ್ತು.

ಕೊನೆಯದಾಗಿ: ಹಲವಾರು ಮಹಾತ್ಮರು ಜಗತ್ತಿನ ಸಮಸ್ಯೆಯ ಪರಿಹಾರದ ಕುರಿತು ಧ್ಯಾನಾಸಕ್ತರಾದಾಗ ಅವರದ್ದೇ ಆದ ಉತ್ತರಗಳನ್ನು ಪಡೆದರು ಆ ಉತ್ತರಗಳನ್ನು ಪ್ರತಿಪಾದಿಸಿದರು. ಅಂತೆಯೇ ಹಲವರು ಅದನ್ನು ಬೆಂಬಲಿಸಿದರೂ ಕೂಡಾ. ಇಲ್ಲಿ ಅವರು ಕಂಡುಕೊಂಡದ್ದು ಸತ್ಯವೇ ಆದರೂ ಅದೇ ಪರಮಸತ್ಯ ಎಂಬುದು ಮಾತ್ರ ಸತ್ಯವಲ್ಲ. ಎಲ್ಲ ಸತ್ಯಗಳನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವ ನಮ್ಮದಾಗಿರಬೇಕಷ್ಟೆ.

ಶಶಿಧರ್ ತಲ್ಲೂರಂಗಡಿ

15/08/2021

ಭಾರತಿ ನಮಸ್ತುಭ್ಯಂ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಸಹೃದಯರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು. ವೀಕ್ಷಿಸದೇ ಇದ್ದವರು ನಗಾರಿಧ್ವನಿ ಚಾನಲ್ ನಲ್ಲಿ ಲಭ್ಯವಿದೆ ನಿಮ್ಮ ಸಮಯ ಅನುಕೂಲವಾದಾಗ ನೋಡಬಹುದು. ಅಭಿಪ್ರಾಯಗಳಿಗೆ ಸದಾ ಸ್ವಾಗತ. ಪ್ರೀತಿ ಪ್ರೋತ್ಸಾಹ ಹೀಗೆಯೇ ಇರಲಿ🙏🏻🙏🏻

15/08/2021

https://youtu.be/_yAIysvpTyA

ಇಂದು ಸಂಜೆ 7.30ಕ್ಕೆ... Reminder on ಇಟ್ಟುಕೊಳ್ಳಿ. ಕಾರ್ಯಕ್ರಮವನ್ನು ನೋಡಿ ಹರಸಿ ಹಾರೈಸಿ🙏🏻🙏🏻

ಬಂಧನದಲ್ಲಿರೋದು ಎಷ್ಟು ಕಷ್ಟ ಅನ್ನೋದು ಬಹುಶಃ ಕಳೆದ ವರ್ಷದಿಂದ ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಸುಮಾರು ಮೂರುನೂರು ವರ್ಷಗಳ ಕಾಲ ಬ್ರಿಟ...
14/08/2021

ಬಂಧನದಲ್ಲಿರೋದು ಎಷ್ಟು ಕಷ್ಟ ಅನ್ನೋದು ಬಹುಶಃ ಕಳೆದ ವರ್ಷದಿಂದ ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಸುಮಾರು ಮೂರುನೂರು ವರ್ಷಗಳ ಕಾಲ ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ನಮ್ಮವರ ಪರಿಸ್ಥಿತಿ ಇನ್ನದೆಂತದ್ದಿದ್ದಿರಬಹುದು! ಅವರನ್ನು ಭೌತಿಕವಾಗಿ ಹೊಡೆದೋಡಿಸಿದ ನಮ್ಮವರ ಸ್ವಾತಂತ್ರ್ಯದ ತುಡಿತ ಅದಿಷ್ಟಿತ್ತೋ! ಅಬ್ಬಾ ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಅಷ್ಟೆಲ್ಲ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯ ನಿಜಾರ್ಥದಲ್ಲಿ ನಾವೀಗ ಸ್ವತಂತ್ರರೇ ಎಂದು ಪ್ರಶ್ನಿಸಿಕೊಂಡರೆ ಒಮ್ಮೆ ತಲೆ ಕೆರೆದುಕೊಳ್ಳುವ ಪರಿಸ್ಥಿತಿ ನಮ್ಮದು. ಭೌತಿಕ ಸ್ವಾತಂತ್ರ್ಯಕ್ಕೂ ಭೌದ್ದಿಕ ಸ್ವಾತಂತ್ರ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಯಾವ ದಾರಿಯಲ್ಲಿ ನಾವಿದ್ದೇವೆ ಎತ್ತ ಸಾಗಬೇಕಿತ್ತು ಎಂದೆಲ್ಲ ಒಮ್ಮೆ ಯೋಚಿಸಲೇಬೇಕಾದ ಅನಿವಾರ್ಯತೆ ನಮಗಿದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯಕ್ಕೆ ಮುಕ್ಕಾಲ್ನೂರು ತುಂಬುವ ಈ ಸಂದರ್ಭವನ್ನು ಆಚರಿಸಿಕೊಳ್ಳಲು ಹೊಸ ಪ್ರಯತ್ನವೊಂದನ್ನು ಮಾಡಿದ್ದೇವೆ. ಪುನರೂರು ಪ್ರತಿಷ್ಠಾನ (ರಿ) ಪ್ರಾಯೋಜಕತ್ವದ ನಮ್ಮ ಕಾರ್ಯಕ್ರಮ ನಾಳೆ ಸಂಜೆ 7.30ಕ್ಕೆ ಸರಿಯಾಗಿ 'ನಗಾರಿಧ್ವನಿ' ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಾರ್ಯಕ್ರಮದ ಪಕ್ಷಿನೋಟ ಕಳುಹಿಸುತ್ತಿದ್ದೇವೆ ಒಮ್ಮೆ ನೋಡಿ. ಪೂರ್ತಿ ಕಾರ್ಯಕ್ರಮವನ್ನೂ ನೋಡಿ. ನಿಮ್ಮೆಲ್ಲರ ಹಾರೈಕೆ ಆಶಿರ್ವಾದ ಸದಾ ಇರಲಿ.

-ನಗಾರಿಧ್ವನಿ

Watch full program on 15.8.2021 Sunday at 7.30 PM - ಸಂಪೂರ್ಣ ಕಾರ್ಯಕ್ರಮವನ್ನು ದಿನಾಂಕ 15.8.2021 ಭಾನುವಾರ ರಾತ್ರಿ 7.30ಕ್ಕೆ ವೀಕ್ಷಿಸಿ. ಹರಸಿ, ಹಾರೈಸಿ, ನಮ್ಮ ಈ ಪ್ರಯತ್....

ಪುನರೂರು ಪ್ರತಿಷ್ಠಾನ ರಿ. ಇವರ ಸಂಪೂರ್ಣ ಸಹಕಾರದೊಂದಿಗೆ ಹೊಸ ಬಗೆಯ ಕಾರ್ಯಕ್ರಮವೊಂದನ್ನು ಮಾಡಲು ಅಣಿಯಾಗಿದ್ದೇವೆ ನಿಮ್ಮ ಸಹಕಾರ ಸದಾ ಇರಲಿ.
09/08/2021

ಪುನರೂರು ಪ್ರತಿಷ್ಠಾನ ರಿ. ಇವರ ಸಂಪೂರ್ಣ ಸಹಕಾರದೊಂದಿಗೆ ಹೊಸ ಬಗೆಯ ಕಾರ್ಯಕ್ರಮವೊಂದನ್ನು ಮಾಡಲು ಅಣಿಯಾಗಿದ್ದೇವೆ ನಿಮ್ಮ ಸಹಕಾರ ಸದಾ ಇರಲಿ.

ಚಕ್ರವರ್ತಿ ಅಣ್ಣನ ಲೇಖನ ನಗಾರಿಧ್ವನಿಯಲ್ಲಿ.Our paper is also available in Paperboy mobile app. Please subscribe and support us...
19/02/2021

ಚಕ್ರವರ್ತಿ ಅಣ್ಣನ ಲೇಖನ ನಗಾರಿಧ್ವನಿಯಲ್ಲಿ.
Our paper is also available in Paperboy mobile app. Please subscribe and support us.

ಆತ್ಮೀಯ ಓದುಗಮಿತ್ರರೆ ನಿಮ್ಮ ನೆಚ್ಚಿನ “ನಗಾರಿಧ್ವನಿ” ಪತ್ರಿಕೆ ಈಗ Paperboy ಮೊಬೈಲ್ ಅಪ್ಲಿಕೇಷನ್ ನಲ್ಲಿ  ಕನ್ನಡ ಮ್ಯಾಗಜಿನ್ ವಿಭಾಗದಲ್ಲಿ ಲಭ...
19/02/2021

ಆತ್ಮೀಯ ಓದುಗಮಿತ್ರರೆ ನಿಮ್ಮ ನೆಚ್ಚಿನ “ನಗಾರಿಧ್ವನಿ” ಪತ್ರಿಕೆ ಈಗ Paperboy ಮೊಬೈಲ್ ಅಪ್ಲಿಕೇಷನ್ ನಲ್ಲಿ ಕನ್ನಡ ಮ್ಯಾಗಜಿನ್ ವಿಭಾಗದಲ್ಲಿ ಲಭ್ಯವಿದೆ. ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ.

https://paperboy.com/
Read your newspapers without limits and well before your newspaper is delivered to your doorstep! Get over 450 newspapers and magazines at the touch of a button on your mobile device.

ಅಭ್ಯರ್ಥಿಯ ಆಯ್ಕೆ ಮಾಡೋಣ. ಮತದಾನವೇ ಆಯ್ಕೆಯಾಗದಿರಲಿ
19/12/2020

ಅಭ್ಯರ್ಥಿಯ ಆಯ್ಕೆ ಮಾಡೋಣ. ಮತದಾನವೇ ಆಯ್ಕೆಯಾಗದಿರಲಿ

ಈ ಬಾರಿಯ ನಗಾರಿಧ್ವನಿಯ ಸಂಪಾದಕೀಯ.
03/12/2020

ಈ ಬಾರಿಯ ನಗಾರಿಧ್ವನಿಯ ಸಂಪಾದಕೀಯ.

17/10/2020
 #ಬ್ರಹ್ಮ_ಜ್ಞಾನತನ್ನ ತಾನರಿತವನೇ ಸುಜ್ಞಾನಿ..ಸಂಸಾರ ಬಂಧನ ದಾಟಿ ಮೋಕ್ಷದ ದಾರಿಯಲ್ಲಿ ಬ್ರಹ್ಮ ಜ್ಞಾನ ಪಡೆಯುವುದು ಹೇಗೆ? ಕಣ್ತೆರೆಸುವ ಒಂದು ಸುಂ...
24/09/2020

#ಬ್ರಹ್ಮ_ಜ್ಞಾನ

ತನ್ನ ತಾನರಿತವನೇ ಸುಜ್ಞಾನಿ..
ಸಂಸಾರ ಬಂಧನ ದಾಟಿ ಮೋಕ್ಷದ ದಾರಿಯಲ್ಲಿ ಬ್ರಹ್ಮ ಜ್ಞಾನ ಪಡೆಯುವುದು ಹೇಗೆ? ಕಣ್ತೆರೆಸುವ ಒಂದು ಸುಂದರ ಕಿರು ಕಥೆ ನಿಮಗಾಗಿ.

https://youtu.be/-3zt29dACg4

Narration of small story of discovering ourselves and gaining brahma jnana and attaining mukti

 #ಕಿವುಡು_ಹೆಂಡತಿತನ್ನ ತಾನರಿತವನೇ ಸುಜ್ಞಾನಿ.. ನಮ್ಮ ಕಣ್ತೆರೆಸುವ ಒಂದು ಸುಂದರ ಕಥೆ ನಿಮಗಾಗಿ..https://youtu.be/NMQ_Gj3wvvk
24/09/2020

#ಕಿವುಡು_ಹೆಂಡತಿ

ತನ್ನ ತಾನರಿತವನೇ ಸುಜ್ಞಾನಿ.. ನಮ್ಮ ಕಣ್ತೆರೆಸುವ ಒಂದು ಸುಂದರ ಕಥೆ ನಿಮಗಾಗಿ..

https://youtu.be/NMQ_Gj3wvvk

Music: https://www.bensound.com

ದೈಹಿಕವಾಗಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋದಂತೆ ಮಾನಸಿಕವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸ್ಯ ತೊಲಗಲಿ ಎಂಬ ಹಾರೈಕೆಯೊಂದಿಗೆ  ಸ್ವಾತಂತ್ರ್ಯ...
15/08/2020

ದೈಹಿಕವಾಗಿ ಬ್ರಿಟೀಷರು ಭಾರತವನ್ನು ಬಿಟ್ಟು ಹೋದಂತೆ ಮಾನಸಿಕವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯ ದಾಸ್ಯ ತೊಲಗಲಿ ಎಂಬ ಹಾರೈಕೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಟೀಂ ನಗಾರಿಧ್ವನಿ.

ಭಾರತ ಧರಣೀಯಂಬದ್ಧತೆ ಭಾರತದ ಇತಿಹಾಸ ಬದಲಿಸಬಲ್ಲುದೆ?!‘ಎಂದಿನವರೆಗೂ ವ್ಯಕ್ತಿ ತಾನು ಮಾತನಾಡಿದ ಮಾತಿಗೂ ಮತ್ತು ಮಾಡಿದ ಕೆಲಸಕ್ಕೂ ತಾನು ಜವಾಬ್ದಾರ...
23/07/2020

ಭಾರತ ಧರಣೀಯಂ

ಬದ್ಧತೆ ಭಾರತದ ಇತಿಹಾಸ ಬದಲಿಸಬಲ್ಲುದೆ?!

‘ಎಂದಿನವರೆಗೂ ವ್ಯಕ್ತಿ ತಾನು ಮಾತನಾಡಿದ ಮಾತಿಗೂ ಮತ್ತು ಮಾಡಿದ ಕೆಲಸಕ್ಕೂ ತಾನು ಜವಾಬ್ದಾರನಾಗಿರುವುದಿಲ್ಲವೋ ಅಂದಿನವರೆಗು ಅವನ ಉದ್ಧಾರವಿಲ್ಲ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ಬದ್ಧತೆಯ ಮಹತ್ವ ಅಂತಹದ್ದು. ಇತಿಹಾಸದ ಪುಟಗಳನ್ನು ತಿರುವಿದರೆ ಅದೆಂತಹ ಕಷ್ಟ ಬಂದರೂ ಕೊನೆಗೆ ತಮ್ಮ ಪ್ರಾಣವೇ ಹೋಗುವ ಸಂದರ್ಭ ಬಂದರೂ ತಾವಾಡಿದ ಮಾತಿಗೆ ಅಥವಾ ತಮ್ಮ ಸಿದ್ದಾಂತಕ್ಕೆ ಬದ್ಧರಾಗಿದ್ದುಕೊಂಡು ಆದರ್ಶವಾಗಿ ಉಳಿದವರು ನಮ್ಮೆದುರಲ್ಲಿ ಕಾಣ ಸಿಗುತ್ತಾರೆ. ಇತಿಹಾಸ ಸೃಷ್ಟಿಯಾದದ್ದೇ ಜೀವನದಲ್ಲೊಂದು ಬದ್ಧತೆಯನ್ನು ಧ್ಯೇಯವಾಗಿಟ್ಟುಕೊಂಡು ಮುನ್ನಡೆದ ಮಹಾನ್ ವ್ಯಕ್ತಿಗಳಿಂದ. ನಾವಾಡಿದ ನುಡಿಗೆ ಬದ್ಧರಾಗಿದ್ದೇವೆ ಎನ್ನುತ್ತಲೇ ಗಳಿಗೆಗೊಮ್ಮೆ ತಮ್ಮ ನುಡಿಯನ್ನೇ ಬದಲಾಯಿಸುವ ಇಂದಿನ ಅವಕಾಶವಾದಿ ರಾಜಕಾರಣಿಗಳಿಗೆ ಬದ್ಧತೆಯ ಮಹತ್ವ ಅರಿವಾಗುವುದು ಬಹಳ ದೂರದ ವಿಚಾರವೇ ಸರಿ.

ಪುರಾಣದಲ್ಲಿ ಬರುವ ಯಾವ ಪಾತ್ರವನ್ನೇ ತೆಗೆದುಕೊಳ್ಳಿ ಅಲ್ಲಿರುವ ಪ್ರತಿಯೊಬ್ಬರೂ ಜೀವನದಲ್ಲೊಂದು ಸಿದ್ಧಾಂತವನ್ನಿರಿಸಿಕೊಂಡು ಅದಕ್ಕೆ ಬದ್ಧರಾಗಿ ಬದುಕಿದವರು. ಅದಕ್ಕೆಂದೇ ಅವರ ಹೆಸರಿನ್ನೂ ಜನಮಾನಸದಲ್ಲಿ ಅಜರಾಮರ. ತನ್ನ ಸಿದ್ಧಾಂತಕ್ಕಾಗಿ ತನ್ನ ರಾಜ್ಯವನ್ನು ಕಳೆದುಕೊಂಡು, ಹೆಂಡತಿ ಮಕ್ಕಳನ್ನು ಮಾರಿ ಕೊನೆಗೆ ತನ್ನನ್ನೇ ಮಾರಿಕೊಳ್ಳುವ ಪರಿಸ್ಥಿತಿ ಬಂದಾಗಲೂ ತಾನು ನಂಬಿಕೊಂಡು ಬಂದಿದ್ದ 'ಸತ್ಯ' ವನ್ನು ಬಿಡಲಿಲ್ಲ ಸತ್ಯ ಹರಿಶ್ಚಂದ್ರ. ತಂದೆಯ ಒಂದು ಮಾತನ್ನು ಉಳಿಸಲಿಕ್ಕಾಗಿ ತಂದೆಯೇ ಬೇಡವೆಂದು ಬೇಡಿದರೂ ೧೪ ವರ್ಷ ವನವಾಸಕ್ಕೆ ಹೊರಟು ನಿಂತ ರಾಮ ಮಾತಿನ ಬದ್ಧತೆಗೆ ಉದಾಹರಣೆ. ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುತ್ತಿದ್ದರೂ ಒಳಗಿನಿಂದ ರಕ್ತ ಕುದಿಯುತ್ತಿದ್ದರೂ ಏನನ್ನೂ ಮಾಡದೆ ದೇವರನ್ನೇ ನಂಬಿ ಧೃಢವಾಗಿ ಕುಳಿತ ಪಾಂಡವರು ಧರ್ಮದ ಬದ್ಧತೆಗೆ ಉದಾಹರಣೆ.

ಯಾರೆಲ್ಲ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಉಳಿದರೋ ಅವರೆಲ್ಲರಿಗೂ ಕೊನೆಯಲ್ಲಿ ಒಳ್ಳೆಯದೇ ಆಗಿದೆ. ಸತ್ಯವನ್ನೆ ನಂಬಿದ್ದ ಹರಿಶ್ಟಂದ್ರ ಸತ್ಯಹರಿಶ್ಚಂದ್ರನಾಗಿ ಇಂದಿಗೂ ಜನರ ನೆನಪಿನಲ್ಲಿದ್ದಾನೆ. ರಾಮ ಈ ನಾಡಿನ ಆದರ್ಶ ಪುರುಷನೇ ಆಗಿದ್ದಾನೆ. ಪಾಂಡವರು ಕೇವಲ ಐವರೇ ಆದರೂ ಬಲಿಷ್ಟ ಕೌರವ ಪಡೆಯನ್ನು ಯುದ್ಧದಲ್ಲಿ ಸೋಲಿಸಿದ್ದು ಇತಿಹಾಸ. ಇನ್ನು ತಮ್ಮ ಅಗತ್ಯಕ್ಕೆ ಬೇಕಾದಂತೆ ಸಿದ್ಧಾಂತವನ್ನು ಬದಲಾಯಿಸುತ್ತಾ ಸಾಗಿದವರು ಹೇಳ ಹೆಸರಿಲ್ಲದೇ ಅಳಿದಿದ್ದಾರೆ. ಈ ವಿಚಾರ ಪ್ರಸ್ತುತ ರಾಜಕಾರಣದಲ್ಲೂ ಅನ್ವಯವಾಗುತ್ತದೆ. ಒಂದು ಸಿದ್ಧಾಂತಕ್ಕೆ ಬದ್ಧರಾಗಿದ್ದುಕೊಂಡು ಅದನ್ನೇ ಪ್ರತಿಪಾದಿಸುತ್ತಾ ಒಂದೊಂದೇ ಹೆಜ್ಜೆ ಮೇಲೇರಿ ರಾಷ್ಟ್ರದ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿರುವವರೂ ನಮ್ಮ ಮುಂದಿದ್ದಾರೆ. ಗಳಿಗೆಗೊಮ್ಮೆ ಮಾತು ಬದಲಾಯಿಸುತ್ತಾ ಮೂಲೆಗುಂಪಾದವರೂ ನಮ್ಮೆದುರಲ್ಲಿ ಇದ್ದಾರೆ. ನಾವು ಅನುಸರಿಸಬೇಕಾದ ದಾರಿ ಯಾವುದು ಎಂಬ ಆಯ್ಕೆ ನಮ್ಮ ಮುಂದೆಯೇ ಇದೆ.

ಆಗಿನ್ನೂ ಭಾರತದ ಸ್ವಾತಂತ್ರ್ಯ ಹೋರಾಟ ದೇಶಾದ್ಯಂತ ನಡೆಯುತ್ತಿದ್ದ ಕಾಲ. ಬ್ರಿಟೀಷರನ್ನು ಹೊಡೆದೋಡಿಸಲೇಬೇಕು ಎಂಬ ಧೃಡ ಸಂಕಲ್ಪದೊಂದಿಗೆ ದೇಶ ಸಿದ್ದವಾಗಿತ್ತು. ಗಾಂಧೀಜಿ ಆಗಷ್ಟೆ ಅಖಾಡಕ್ಕಿಳಿದಿದ್ದರು. ದೇಶದೆಲ್ಲೆಡೆ ಅಸಹಕಾರ ಚಳುವಳಿ ನಡೆಯುತ್ತಿದ್ದ ಸಮಯ. ರಾಷ್ಟ್ರಾದ್ಯಂತ ಅಲ್ಲಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಆಂಗ್ಲ ಪೊಲೀಸರು ಅದನ್ನು ಹತ್ತಿಕ್ಕಲು ಪ್ರಯತ್ನ ಪಡುತ್ತಲೇ ಇದ್ದರು. ಕಾಶಿ ಪಟ್ಟಣದಲ್ಲಿಯೂ ಜನರ ಗುಂಪೊಂದು ಭಾರತ ಮಾತೆಗೆ ಜೈಕಾರ ಹಾಕುತ್ತಾ ಬ್ರಿಟೀಷ್ ಪ್ರಭುತ್ವಕ್ಕೆ ಧಿಕ್ಕಾರ ಕೂಗುತ್ತಾ ಸಾಗಿತ್ತು. ಆ ಚಳುವಳಿಯ ನೇತೃತ್ವ ವಹಿಸಿದ್ದ ಶಂಕರಾನಂದರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯುತ್ತದೆ. ಅದೆಷ್ಟು ಬೇಡವೆಂದರೂ ಕೇಳದ ಚಳುವಳಿಕಾರರ ಚಳುವಳಿ ಮುಂದುವರೆಯ ತೊಡಗಿದಾಗ ಲಾಠಿಚಾರ್ಜ್ ಎಂದು ಬೊಬ್ಬಿರಿಯುತ್ತಾನೆ ಪೊಲೀಸ್ ಇನ್ಸ್ಪೆಕ್ಟರ್.

ಕಾಶಿ ವಿದ್ಯಾಪೀಠದಿಂದ ಹೊರಟ ವಿದ್ಯಾರ್ಥಿಗಳ ಗುಂಫು ಈ ಚಳುವಳಿ ನಡೆಯುತ್ತಿದ್ದ ಜಾಗಕ್ಕೆ ಬರುವಾಗ ಸ್ವಾಮಿ ಶಂಕರಾನಂದರು ಲಾಠಿಯಿಂದ ಏಟು ತಿನ್ನುತ್ತಿರುತ್ತಾರೆ. ಆ ಗುಂಪಿನಲ್ಲಿದ್ದ ಬಾಲಕನೊಬ್ಬ ಅಪ್ರತಿಮ ದೇಶಭಕ್ತ. ಈ ಅನಾಚಾರವನ್ನು ನೋಡಿ ಸಹಿಸಲಾಗದೆ ಆತನ ರಕ್ತ ಕುದಿಯಲಾರಂಭಿಸುತ್ತದೆ. ತಕ್ಷಣವೇ ಬದಿಯಲ್ಲಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡವನೇ 'ಎಲೈ ಆಂಗ್ಲ ಕುನ್ನಿ' ಎಂದು ಬೊಬ್ಬಿರಿಯುತ್ತಾನೆ. ಸಬ್ ಇನ್ಸ್ಪೆಕ್ಟರ್ ಕೂಗಿದವರು ಯಾರೆಂದು ಕೋಪದಿಂದ ಅತ್ತ ತಿರುಗಿದ್ದೇ ವೇಗದಿಂದ ಬಂದ ಕಲ್ಲು ಆತನ ಹಣೆಯನ್ನು ಸೀಳುತ್ತದೆ. 'ಕ್ಯಾಚ್ ದಟ್ ಬಾಸ್ಟರ್ಡ್' ಎಂದು ಅರಚುತ್ತಾನೆ ಅಧಿಕಾರಿ. ಆದರೆ ಅಷ್ಟರಲ್ಲಿ ಅವರ ಕಣ್ಣಿಗೆ ಕಾಣದಂತೆ ದೂರಕ್ಕೆ ಓಡಿರುತ್ತಾನೆ ಆ ವೀರ ಬಾಲಕ.

ಬಹಳ ದಿನಗಳ ಹುಡುಕಾಟದ ನಂತರ ಬ್ರಿಟೀಷ್ ಪೊಲೀಸರ ಕೈಗೆ ಸಿಕ್ಕಿಬಿದ್ದ ತೇಜಸ್ವೀ ಬಾಲಕನನ್ನು ಹಿಡಿದು ನ್ಯಾಯಾಲಯ(!)ದ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಧೀಶರ ಎದುರಲ್ಲಿ ಕಲ್ಲೇಟು ತಿಂದ ಬ್ರಿಟೀಷ್ ಅಧಿಕಾರಿ ತನ್ನ ನೋವನ್ನು ಹೇಳಿಕೊಂಡ. ಆಗ ಆ ತೇಜಸ್ವೀ ಬಾಲಕನನ್ನು ಪ್ರಶ್ನಿಸಿದಾಗ ಆತ ಕೊಟ್ಟ ಉತ್ತರ ಅಲ್ಲಿದ್ದವರನ್ನು ದಂಗುಬಡಿಸಿತ್ತು. "ಹೌದು. ನಾನು ತಪ್ಪು ಮಾಡಿದೆನೆಂದು ಈಗ ಅನ್ನಿಸುತ್ತಿದೆ. ನಾನು ಕಲ್ಲಿನಿಂದ ಹೊಡೆಯಬಾರದಿತ್ತು. ಲಾಠಿಯಿಂದ ಅವನ ತಲೆ ಒಡೆಯಬೇಕಿತ್ತು.ನನ್ನ ಕೈಯಲ್ಲಿ ಪಿಸ್ತೂಲು ಇದ್ದಿದ್ದರೆ ಅಲ್ಲಿಯೇ ಸುಟ್ಪುಬಿಡುತ್ತಿದ್ದೆ." ಅವನ ರೋಷಪೂರಿತ ಮಾತುಗಳನ್ನು ಕೇಳಿ ಅಲ್ಲಿದ್ದವರೆಲ್ಲರ ಬಾಯಲ್ಲಿ "ಭಾರತ್ ಮಾತಾಕೀ ಜೈ" "ವಂದೇ ಮಾತರಂ" ಮಾರ್ದನಿಸಿತು.

ಆ ವೀರ ಬಾಲಕನ ಹೆಸರೇನು ಎಂದು ಕೇಳಿದಾಗ ಆತ ಕೊಟ್ಟ ಉತ್ತರ "ಆಜಾದ್" ಎಂದು. ಆಜಾದ್ ಎಂದರೆ ಸ್ವತಂತ್ರ ಎಂದರ್ಥ. ತಂದೆಯ ಹೆಸರೇನು ಕೇಳಿದಾಗ ಸ್ವಾಧೀನತೆ ಎಂದುತ್ತರವಿತ್ತ ಬಾಲಕ ಮನೆಯೆಲ್ಲಿ ಎಂದಾಗ ಸೆರೆಮನೆಯೆಂದ. ಇನ್ನ ಕೆಲಸವೇನು ಎಂದಾಗ ಬ್ರಿಟೀಷರನ್ನು ಭಾರತದಿಂದೋಡಿಸುವುದೇ ತನ್ನ ಕೆಲಸವೆಂದು ಹೆಮ್ಮೆಯಿಂದ ಹೇಳಿಕೊಂಡ. ೧೩ರ ಹರೆಯದ ಆ ಬಾಲಕನ ಕೆಚ್ಚು ಅಲ್ಲಿದ್ದವರೆಲ್ಲರಿಗೂ ದೇಶಭಕ್ತಿಯ ಕಿಚ್ಚನ್ನು ಹತ್ತಿಸುವಲ್ಲಿ ಯಶಸ್ವಿಯಾಗಿತ್ತು. ಮಂದೆ ೧೨ ಛಡಿಯೇಟುಗಳ ಶಿಕ್ಷೆ ಪ್ರಾಪ್ತವಾದಾಗ ಹೆದರದೆ ಎದೆಯೊಡ್ಡಿ ನಿಂತ ಬಾಲಕ ಪ್ರತಿ ಏಟು ಬಿದ್ದಾಗಲೂ ವಂದೇ ಮಾತರಂ ಘೋಷ ಕೂಗುತ್ತಿದ್ದ. ಆ ಕೂಗು ಜೈಲಿನ ಮೂಲೆ ಮೂಲೆಗೂ ತಲುಪಿ ಅಲ್ಲಿದ್ದ ಖೈದಿಗಳನ್ನೂ ಬಡಿದೆಬ್ಬಿಸಿತ್ತು. ಎಲ್ಲರೂ ವಂದೆ ಮಾತರಂ ಘೋಷಣೆ ಕೂಗುವವರೆ. ಛಡಿಯೇಟಿನಿಂದಾಗಿ ಪೃಷ್ಠ ಭಾಗದ ಮಾಂಸ ಕಿತ್ತು ಬಂದಾಗಲೂ ಧೃತಿಗೆಡದ ಬಾಲಕನನ್ನು ಕಂಡ ಬ್ರಿಟೀಷ್ ಪೊಲೀಸರೆ ದಂಗಾಗಿ ನಿಂತುಬಿಟ್ಟರು.

ಛಡಿಯೇಟಿನ ಶಿಕ್ಷೆಯ ನಂತರ ಜೈಲಿನಿಂದ ಬಿಡುಗಡೆಗೊಂಡ ಬಾಲಕ ನಂತರ ಮಾಡಿದ ಕೆಲಸಗಳೆಲ್ಲವೂ ಇತಿಹಾಸದ ಪುಟಗಳಲ್ಲಿ ಮಹತ್ವದ ಪಾತ್ರ ಪಡೆಯುವಂತಹವುಗಳು. ಆದರೆ ಕೆಲವಷ್ಟು ಸ್ವಾರ್ಥ ರಾಜಕಾರಣಿಗಳ ಆಶಯಕ್ಕೆ ಆಹಾರವಾಗಿ ಸಿಗಬೇಕಾದ ಮಾನ್ಯತೆ ಸಿಗದೆ ಹೋಯಿತು. ಆ ವೀರ ಬಾಲಕನ ಹೆಸರೇ ಚಂದ್ರಶೇಖರ್ ತಿವಾರಿ. "ಮೈ ಆಜಾದ್ ಹೂಂ ಆಜಾದ್ ಹೀ ರಹೂಂಗಾ" ಎಂಬ ಧ್ಯೇಯವಾಕ್ಯದೊಂದಿಗೆ ಮುಂದೆ ಚಂದ್ರವೇಖರ್ ಆಜಾದ್ ಎಂದೇ ಪ್ರಸಿದ್ದನಾದ ಬಾಲಕ. ಒಮ್ಮೆ ಪೊಲೀಸರ ಕೈಗೆ ಸಿಕ್ಕಿ ಬಿದ್ದವನು ಮುಂದೆ ತನ್ನ ಜೀವಿತಾವಧಿಯಲ್ಲಿ ಎಂದಿಗೂ ಯಾರ ಕೈಗೂ ಸಿಗಲಾರೆ ಎಂದು ಪ್ರತಿಜ್ಞೆ ಮಾಡಿದಾತ. ತನ್ನ ಮಾತಿಗೆ ಬದ್ಧನಾಗುಳಿದ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಮರೆಯುವಂತೆಯೇ ಇಲ್ಲ. ಆ ಕ್ರಾಂತಿಕಾರಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಚಂದ್ರಶೇಖರ್ ಆಜಾದ್. ಯಾವ ಕೆಲಸ ಮಾಡುವಾಗಲೂ ಉತ್ಸಾಹ ಒಂದಿದ್ದರೆ ಸಾಲದು ಜೊತೆಗೆ ತಾಳ್ಮೆಯೂ ಇರಬೇಕು ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದವರು ಆಜಾದ್. ಈ ರಾಷ್ಟ್ರಕ್ಕಾಗಿ ಪ್ರಾಣ ಕೊಟ್ಟ ಭಗತ್ ಸಿಂಗ್ ಪಳಗಿದ್ದೂ ಕೂಡಾ ಇದೇ ಚಂದ್ರಶೇಖರ್ ಆಜಾದ್ ಗರಡಿಯಲ್ಲಿ. ಸುಮಾರು ೧೨ ವರ್ಷಗಳ ಕಾಲ ಬ್ರಿಟೀಷರ ಎದೆಯಲ್ಲೊಂದು ನಡುಕವನ್ನು ಸೃಷ್ಟಿಸಿ ಆಜಾದ್ ಹೆಸರು ಕೇಳಿದರೇನೆ ಭಯ ಪಡುವಂತೆ ನೋಡಿಕೊಂಡಿದ್ದ ಚಂದ್ರಶೇಖರ್ ರ ದೇಶಭಕ್ತಿ ಎಲ್ಲರೂ ಮೆಚ್ಚುವಂತದ್ದು.

ಕ್ರಾಂತಿಯುಗಕ್ಕೆ ಹೊಸ ದಾರಿಯನ್ನು ಕಲ್ಪಿಸಿಕೊಟ್ಟ ಆಜಾದ್ ತಮ್ಮ ಗುರಿ ಸ್ಪಷ್ಟವಾಗಿರಿಸಿಕೊಂಡಿದ್ದರು. ಕಾಕೋರಿ ರೈಲು ದರೋಡೆಯಿಂದ ಹಿಡಿದು ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ನನ್ನು ಗುಂಡಿಟ್ಟು ಮುಗಿಸುವ ಸಾಹಸವನ್ನು ಮಾಡಬೇಕಾದಾಗ ಅವರ ಗುಂಡಿಗೆಯ ಧೈರ್ಯ ಅದೆಷ್ಟಿರಬೇಕು. ಬಹಳಷ್ಟು ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕನಾಗಿ ಮುಂದುವರೆದು ಬೆಳೆದರು. ಕೊನೆಗೆ ತಾನು ನಂಬಿದ ಸ್ನೇಹಿತನ ಮೋಸಕ್ಕೊಳಗಾಗಿ ಬ್ರಿಟೀಷರ ಕೈಗೆ ಸಿಕ್ಕಿ ಬೀಳಬೇಕಾಗಿ ಬಂದಾಗ ಎಂದಿಗೂ ಪೊಲೀಸರಿಗೆ ಸಿಗಲಾರೆ ಎಂಬ ತನ್ನ ಮಾತಿನ ಬದ್ಧತೆಗಾಗಿ ತನಗೆ ತಾನೇ ಗುಂಡಿಟ್ಟುಕೊಂಡು ಪ್ರಾಣತ್ಯಾಗ ಮಾಡಿದ ಆಜಾದ್ ಸಾಯುವಾಗ ಅವರಿಗೆ ವರ್ಷ ಕೇವಲ ೨೫.

೧೯೦೬ ಜುಲೈ ೨೩ರಂದು ಜನಿಸಿದ ಆಜಾದ್ ಕೇವಲ ತಮ್ಮ ೨೫ನೇ ವರ್ಷಕ್ಕೆ ತಮ್ಮ ಜೀವತ್ಯಾಗ ಮಾಡಿದರು. ಅದು ಅವರ ಮಾತಿನ ಬದ್ಧತೆಗಾಗಿ. ಆಜಾದ್ ರಷ್ಟಲ್ಲದಿದ್ದರೂ ಸ್ವಲ್ಪವಾದರೂ ಬದ್ಧತೆ ನಮ್ಮ ರಾಜಕಾರಣಿಗಳಿಗೆ ಬಂದಲ್ಲಿ ಈ ರಾಷ್ಟ್ರ ಅಭಿವೃದ್ದಿಯ ಪಥದಲ್ಲಿ ದಾಪುಗಾಲಿಡುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಕೊರೊನಾದಂತಹ ಅದೆಷ್ಟೆ ಸಮಸ್ಯೆಗಳು ಬಂದರೂ ಈ ದೇಶದ ಐಕ್ಯತೆಯನ್ನು ಒಡೆಯಲು ಸಾಧ್ಯವಿಲ್ಲ. ನಮ್ಮ ಮಾತಿಗೆ ಬೇರೆಯವರು ಬಿಡಿ ನಾವೇ ಬೆಲೆಕೊಟ್ಟುಕೊಂಡು ಆ ಮಾತಿಗೆ ಬದ್ಧರಾಗಿರುವ ನಿರ್ಧಾರ ಮಾಡಿದರೆ ಅದೇ ಆಜಾದ್ ಎಂಬ ಅದಮ್ಯ ಚೇತನಕ್ಕೆ ನಾವು ನೀಡುವ ಕಾಣಿಕೆಯಲ್ಲವೆ.

ಶಶಿಧರ್ ತಲ್ಲೂರಂಗಡಿ

ಈ ಬಾರಿಯ ನಗಾರಿಧ್ವನಿ ಬಿಡುಗಡೆಗೊಂಡಿದೆ. ವಿಶ್ವಕುಂದಾಪುರ ದಿನಾಚರಣೆಯ ಅಂಗವಾಗಿ ರಚಿಸಿದ ಸುಂದರ ಮುಖಪುಟದೊಂದಿಗೆ ರಾಷ್ಟ್ರಧರ್ಮವನ್ನು ಎತ್ತಿ ಹಿಡ...
16/07/2020

ಈ ಬಾರಿಯ ನಗಾರಿಧ್ವನಿ ಬಿಡುಗಡೆಗೊಂಡಿದೆ. ವಿಶ್ವಕುಂದಾಪುರ ದಿನಾಚರಣೆಯ ಅಂಗವಾಗಿ ರಚಿಸಿದ ಸುಂದರ ಮುಖಪುಟದೊಂದಿಗೆ ರಾಷ್ಟ್ರಧರ್ಮವನ್ನು ಎತ್ತಿ ಹಿಡಿಯುವ ಅನೇಕ ಲೇಖನಗಳನ್ನು ಒಳಗೊಂಡಿದೆ ನಗಾರಿಧ್ವನಿ. ನಿಮ್ಮ ಸಲಹೆ ಸಹಕಾರ ಪ್ರೋತ್ಸಾಹವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಸದಾ ನಮ್ಮೊಂದಿಗೆ ಇದ್ದೀರಿ ಎಂಬ ಆಶಯವಂತೂ ಇದೆ.

ಆದರ್ಶ ಪುರುಷರ ತಾಯ್ನಾಡು 'ಭಾರತ'ರಾಜಕೀಯದ ಇತಿಹಾಸ ಇಂದು ನಿನ್ನೆಯದಲ್ಲ. ಪ್ರತಿಯೊಂದು ವಿಷಯದಲ್ಲಿಯೂ ತನ್ನ ಕರಾಳಹಸ್ತ ಚಾಚಿರುವ ಇಂದಿನ ರಾಜಕೀಯವನ...
01/07/2020

ಆದರ್ಶ ಪುರುಷರ ತಾಯ್ನಾಡು 'ಭಾರತ'

ರಾಜಕೀಯದ ಇತಿಹಾಸ ಇಂದು ನಿನ್ನೆಯದಲ್ಲ. ಪ್ರತಿಯೊಂದು ವಿಷಯದಲ್ಲಿಯೂ ತನ್ನ ಕರಾಳಹಸ್ತ ಚಾಚಿರುವ ಇಂದಿನ ರಾಜಕೀಯವನ್ನು ಕಂಡ ನಮಗೆ ಹಿಂದೆ ಹೇಗಿದ್ದಿರಬಹುದೆಂಬ ಅರಿವು ಕಡಿಮೆಯೆ. ಭಾರತದ ನಿಜವಾದ ಇತಿಹಾಸವನ್ನು ಅರಿಯುತ್ತಾ ಹೋದಷ್ಟು ದೇಶಪ್ರೇಮಿಯ ಎದೆಯುಬ್ಬತೊಡಗುತ್ತದೆ. ಅದೊಂದು ಭವ್ಯಚರಿತ್ರೆ. ಆದರೂ ಈಗಿನಂತೆ ಆಗಲೂ ರಾಜಕೀಯದ ಪ್ರಭಾವ ಕಡಿಮೆ ಏನಿರಲಿಲ್ಲ. ಅದರಿಂದಲಾಗಿಯೇ ಕೆಲವೆಡೆ ನಾವು ತಲೆ ತಗ್ಗಿಸುವ ಪ್ರಸಂಗಗಳು ನಮ್ಮ ಇತಿಹಾಸದಲ್ಲಿ ಗೋಚರವಾಗುತ್ತವೆ.

ಭಾರತವನ್ನು ಆಳಿದ ರಾಜಮನೆತನಗಳು ಬಹಳಷ್ಟು. ಶ್ರೀರಾಮಚಂದ್ರನಂತಹ ಮಹಾನ್ ಪುರುಷರೂ ಆಳಿದ ರಾಷ್ಟ್ರವಿದು. ಇಂತಹ ರಾಷ್ಟ್ರದಲ್ಲಿ ನಾವು ಬದುಕಿದ್ದೇವೆ ಎಂಬುದೇ ಹೆಮ್ಮೆ ಪಡುವಂತಹ ವಿಚಾರ. ಕ್ರಿ.ಪೂ. 326 ರ ಸಮಯ. ಅಲೆಗ್ಸಾಂಡರ್ ಎನ್ನುವಾತನೊಬ್ಬ ಇಡೀ ಪ್ರಪಂಚವನ್ನೆ ತನ್ನದಾಗಿಸಿಕೊಳ್ಳಬೇಕೆಂಬ ಹಠದಲ್ಲಿ ದಂಡಯಾತ್ರೆ ಹೊರಟಿದ್ದ. ಅಂತೆಯೇ ಹಲವಾರು ರಾಷ್ಟ್ರಗಳನ್ನು ವಶಪಡಿಸಿಕೊಂಡಿದ್ದ ಕೂಡಾ. ಆದರೆ ಆತ ಗೆದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಇರಲಿಲ್ಲ ಎಂಬುದನ್ನು ಕೇಳಿದರೆ ಮೈರೋಮಾಂಚನವಾಗುತ್ತದೆ. ಪ್ರಪಂಚವನ್ನೆ ಗೆಲ್ಲಹೊರಟವನು ಭಾರತದ ನಂದರ ಕೈಯಿಂದ ಪೆಟ್ಟು ತಿಂದು ಎದ್ದು ಬಿದ್ದು ಓಡಿದ್ದ.

"ನಾತ್ಮ ಪ್ರಿಯಂ ಹಿತಂ ರಾಜ್ಞಃ, ಪ್ರಜಾನಾಂತು ಪ್ರಿಯಂ ಹಿತಂ" ಎಷ್ಟದ್ಬುತ ಮಾತಿದು. ರಾಜನಾದವನೊಬ್ಬನಿಗೆ ಸ್ವಂತಕ್ಕಿಂತಲೂ ಪ್ರಜೆಗಳ ಹಿತವೇ ಪ್ರಿಯವಾಗಿರಬೇಕು. ಈ ಬಗೆಯಲ್ಲಿ ನೀತಿಯನ್ನು ರೂಪಿಸಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದ ರಾಜಾಡಳಿತವನ್ನು ಸರಿದಾರಿಗೆ ತಂದು ತನ್ನ ಸುಪರ್ದಿಯಲ್ಲಿ ಎಲ್ಲವೂ ಸರಿಯಾದ ನಿಟ್ಟಿನಲ್ಲಿ ನಡೆಯುವಂತೆ ನೋಡಿಕೊಂಡವರು 'ಆಚಾರ್ಯ ಚಾಣಕ್ಯ'. ಆಗೆಲ್ಲ ರಾಜನಿಗೊಬ್ಬ ಗುರುವಿರುತ್ತಿದ್ದ ಗುರು ತೋರಿದ ದಾರಿಯಲ್ಲಿ ರಾಜಸಾಗುತ್ತಿದ್ದ ಹೀಗಾಗಿ ಪ್ರಜಾಹಿತವೇ ಪರಮಹಿತವಾಗಿರುತ್ತಿತ್ತು ರಾಜನಿಗೆ. ಗುರುಗಳುಈಗಲೂ ಇದ್ದಾರೆ ಆದರೆ ಅವರಲ್ಲಿ ಚಾಣಕ್ಯನಂತಹವರನ್ನು ಊಹಿಸಲೂ ಸಾಧ್ಯವಿಲ್ಲ ಬಿಡಿ.

ಮಗಧ ರಾಜ್ಯದ ಕೇಂದ್ರ ಪಾಟಲೀಪುತ್ರದಲ್ಲಿ ನವನಂದರ ಆಳ್ವಿಕೆ ಚಾಲ್ತಿಯಲ್ಲಿತ್ತು. ಅಧಿಕಾರದ ಮಧದಿಂದ ಕೊಬ್ಬಿ ಮೆರೆಯುತ್ತಿದ್ದರು ನಂದರು. ನಂದರ ಕೊನೆಯ ರಾಜ ಧನಾನಂದನ ಆಸ್ಥಾನಕ್ಕೆ ತೇಜಸ್ವೀ ಬ್ರಾಹ್ಮಣನೊಬ್ಬನ ಆಗಮನವಾಗುತ್ತದೆ. ಕುಡಿದ ಮತ್ತಿನಲ್ಲಿದ್ದ ಧನಾನಂದ ಆ ಬ್ರಾಹ್ಮಣನಿಗೆ ಮಾಡಿದ ಅವಮಾನ ನಂದರ ಕೊನೆಯಾಗಲು ಕಾರಣವಾಗಿಬಿಟ್ಟಿತು.ಪರಮ ಶಿಷ್ಯನಾದ ಚಂದ್ರಗುಪ್ತ ಮೌರ್ಯನ ಮೂಲಕ ಧನಾನಂದನನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿ ಅಖಂಡ ಭಾರತಕ್ಕೆ ರಾಜನಾಗಿ ಚಂದ್ರಗುಪ್ತನನ್ನು ನೇಮಿಸಿದ ಆ ಅವಮಾನಿತ ಬ್ರಾಹ್ಮಣನ ಹೆಸರೇ ಆಚಾರ್ಯ ಚಾಣಕ್ಯ.

ಚಂದ್ರಗುಪ್ತ ಮೌರ್ಯ ಗೆದ್ದು ಚಕ್ರವರ್ತಿಯಾಗಿದ್ದರೂ ಗುರು ಚಾಣಕ್ಯರ ಮಾತನ್ನು ಮೀರುತ್ತಿರಲಿಲ್ಲ. ಗುರು ಚಾಣಕ್ಯ ಕೂಡಾ ಅಂತೆಯೇ ತನ್ನ ಶಿಷ್ಯ ಚಕ್ರವರ್ತಿಯಾಗಿದ್ದರೂ ತಾನು ಮಾತ್ರ ಗುಡಿಸಲಿನಲ್ಲಿಯೇ ವಾಸ ಮಾಡುತ್ತಿದ್ದ. ಗುಡಿಸಲಲ್ಲಿ ನಿಂತ ಗುರು ಒಂದು ಕರೆ ಕಳುಹಿಸಿದರೆ ಸಾಕು ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಗುರುವಿನ ಎದುರಿನಲ್ಲಿ ಕೈಮುಗಿದು ನಿಲ್ಲುತ್ತಿದ್ದ. ಇದು ಭಾರತದ ಇತಿಹಾಸ. ಗುರು ಶಿಷ್ಯರ ಸಂಬಂಧ ಹೇಗಿತ್ತು ಎಂಬುದಕ್ಕೆ ಚಂದ್ರಗುಪ್ಯ ಮೌರ್ಯ ಹಾಗೂ ಆಚಾರ್ಯ ಚಾಣಕ್ಯರಿಗಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ.

ಜ್ಞಾನವೇ ದೇಶವನ್ನು ಆಳುತ್ತಿರುವಾಗ ಎಲ್ಲವೂ ಸುಗಮವಾಗಿರುತ್ತದೆ. ಶಾಸ್ತ್ರ ಹಾಗು ಶಸ್ತ್ರ ಎರಡನ್ನೂ ಸರಿದಾರಿಯಲ್ಲಿ ನಡೆಸಿಕೊಂಡು ಹೋದ ಕೀರ್ತಿ ಆಚಾರ್ಯ ಚಾಣಕ್ಯರದ್ದು. ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಧರ್ಮ, ಆಚಾರ ವಿಚಾರ, ಅರ್ಥಶಾಸ್ತ್ರ ಗಳಲ್ಲಿ ಚಾಣಕ್ಯರ ನೀತಿ ಇಂದಿಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹದ್ದು. ಭ್ರಷ್ಟಾಚಾರ ನಿರ್ಮೂಲವಾಗದ ಹೊರತು ರಾಷ್ಟ್ರವೊಂದರ ಅಭಿವೃದ್ದಿ ಸಾಧ್ಯವಿಲ್ಲ ವೆಂಬ ಕಲ್ಪನೆ ಅಂದೇ ಕೊಟ್ಟಿದ್ದರು ಆಚಾರ್ಯ. ಸರಿಯಾದ ರೀತಿಯ ತೆರಿಗೆಯನ್ನು ವಿಧಿಸಿ ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳಬಾರದೆಂದು ಅವರು ಕೈಗೊಂಡ ನೀತಿ ಅದ್ಬುತ. ಕಳ್ಳರು ಹಾಗೂ ದೇಶದ್ರೋಹಿಗಳ ಪಾಲಿಗೆ ಆಚಾರ್ಯ ಚಾಣಕ್ಯರು ದುಃಸ್ವಪ್ನವಾಗಿ ಕಾಡಿದರು.

ಪ್ರಸ್ತುತ ಜಗತ್ತಿಗೂ ಒಬ್ಬ ಚಾಣಕ್ಯನ ಅಗತ್ಯವಿದೆ. ಆಚಾರ್ಯ ಚಾಣಕ್ಯ ರಚಿಸಿದ ಅರ್ಥಶಾಸ್ತ್ರ ಕೃತಿ ಇಂದಿಗೂ ಪ್ರಸ್ತುತ. ಆಗಿನ ಕಾಲದಲ್ಲಿಯೇ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದರು ಆಚಾರ್ಯ ಚಾಣಕ್ಯ ಎಂಬುದು ಅವರ ಜ್ಞಾನಕ್ಕೆ ಹಿಡಿವ ಕೈಗನ್ನಡಿ. ಎಲ್ಲ ವಿಚಾರಗಳಲ್ಲಿಯೂ ಪಾರಂಗತರಾಗಿದ್ದ ಚಾಣಕ್ಯ ಎಂದಿಗೂ ಅಧಿಕಾರದ ಹಿಂದೆ ಹೋದವರಲ್ಲ. ಅಖಂಡಬ್ರಹ್ಮಚಾರಿಯಾಗಿ ಕೇವಲ ಈ ರಾಷ್ಟ್ರದ ಅಭಿವೃದ್ದಿಯನ್ನೇ ಬಯಸಿ ಅದರಂತೆಯೇ ಬದುಕಿದವರು ಚಾಣಕ್ಯ.

ಪ್ರಪಂಚದ ಉಳಿದೆಲ್ಲ ರಾಷ್ಟ್ರಗಳು ಅಭಿವೃದ್ದಿ ಹೊಂದಬೇಕಾದರೆ ಮುಂದುವರಿಯಬೇಕಾದರೆ ಭಾರತ ಅಭಿವೃದ್ದಿ ಹೊಂದಲು ಹಿಂದುವರಿಯಬೇಕಾದ ಅಗತ್ಯತೆ ಇದೆ. ಅಂದರೆ ನಮ್ಮ ಹಿರಿಯರನ್ನು ಅರಿಯುವ ಅಗತ್ಯವಿದೆ. ಭಾರತ ಉಳಿದವರಿಂದ ಕಲಿಯಲು ಏನೂ ಇಲ್ಲ ಎಲ್ಲವೂ ನಮ್ಮೊಳಗೇ ಇದೆ ಅದನ್ನು ಅರಿಯುವ ದೃಷ್ಟಿ ಮಾತ್ರ ನಮಗಿರಬೇಕಷ್ಟೆ. ಯಾವ ವಿಚಾರಕ್ಕೆ ಹೋದರೂ ನಮಗೊಬ್ಬ ಆದರ್ಶ ಪುರುಷ ಕಾಣಸಿಗುತ್ತಾನೆ. ಭಾರತ ಅಂದಿಗೂ ವಿಶ್ವಗುರು ಇಂದಿಗೂ ವಿಶ್ವಗುರು.

-ಶಶಿಧರ್ ತಲ್ಲೂರಂಗಡಿ

ಜಗತ್ತಿಗಂಟಿರುವ ಕೊರೊನಾ ಮಾರಿಯನ್ನು ಹೊಡೆದೋಡಿಸುವಲ್ಲಿ ಹಗಲಿರುಳು ನಿಸ್ವಾರ್ಥ ಭಾವದಿಂದ ದುಡಿಯುತ್ತಿರುವ ವೈದ್ಯರುಗಳಿಗೆ ವಿಶ್ವ ವೈದ್ಯರ ದಿನದ ಶ...
01/07/2020

ಜಗತ್ತಿಗಂಟಿರುವ ಕೊರೊನಾ ಮಾರಿಯನ್ನು ಹೊಡೆದೋಡಿಸುವಲ್ಲಿ ಹಗಲಿರುಳು ನಿಸ್ವಾರ್ಥ ಭಾವದಿಂದ ದುಡಿಯುತ್ತಿರುವ ವೈದ್ಯರುಗಳಿಗೆ ವಿಶ್ವ ವೈದ್ಯರ ದಿನದ ಶುಭಾಶಯಗಳು. ಹಾಗೆಯೇ ನಿಷ್ಪಕ್ಷಪಾತವಾಗಿ ವರದಿ ಮಾಡಿಕೊಂಡು ಜನರಿಗೆ ಸುದ್ದಿ ಮುಟ್ಟಿಸುವ ಪತ್ರಿಕಾ ಬಳಗದ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ಈ ಬಾರಿಯ ನಗಾರಿಧ್ವನಿಯು ಬಿಡುಗಡೆಗೊಂಡಿದೆ. ಪ್ರತಿಗಳಿಗಾಗಿ ಸಂಪರ್ಕಿಸಿ. ಪ್ರೋತ್ಸಾಹ ಹಾಗೂ ಸಹಕಾರವಿರಲಿ. ಪ್ರತಿಗಳಿಗೆ ಸಂಪರ್ಕಿಸಿ :9964964628

ಜೂನ್ 15ರಿಂದ 30ರ ವರೆಗಿನ ನಗಾರಿಧ್ವನಿಯಲ್ಲಿನ ಭಾರತ ಧರಣೀಯಂ ಲೇಖನ. ಚಂದಾದಾರರಾಗಲು ಸಂಪರ್ಕಿಸಿ.https://tallurangadi.wordpress.com/2020...
24/06/2020

ಜೂನ್ 15ರಿಂದ 30ರ ವರೆಗಿನ ನಗಾರಿಧ್ವನಿಯಲ್ಲಿನ ಭಾರತ ಧರಣೀಯಂ ಲೇಖನ. ಚಂದಾದಾರರಾಗಲು ಸಂಪರ್ಕಿಸಿ.

https://tallurangadi.wordpress.com/2020/06/24/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%9c%e0%b3%80%e0%b2%b5-%e0%b2%b8%e0%b2%b5%e0%b3%86%e0%b2%b8%e0%b2%bf%e0%b2%a6/

ಯಾವುದೇ ಕೆಲಸವನ್ನು ನಾವು ಸಾಧಿಸಬೇಕಾದರೆ ಅದಕ್ಕೆ ನಮ್ಮ ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯವಾಗಿರುತ್ತದೆ. ಮಾಡುವ ಇಚ್ಚೆ ಮನದಲ್ಲಿದ್ದ...

"ಗುರುಕುಲ ಶಿಕ್ಷಣ" ಪದ್ದತಿಯಿಂದ ಆರಂಭಗೊಂಡು ಮೆಕಾಲೆ ಶಿಕ್ಷಣ ಪದ್ದತಿಯ ಧಾಳಿಗೊಳಗಾಗಿ ಈಗ "ಆನ್ಲೈನ್" ಮೂಲಕವೇ ಶಿಕ್ಷಣ ನೀಡಬಹುದು ಎಂದು ಮುನ್ನುಗ...
16/06/2020

"ಗುರುಕುಲ ಶಿಕ್ಷಣ" ಪದ್ದತಿಯಿಂದ ಆರಂಭಗೊಂಡು ಮೆಕಾಲೆ ಶಿಕ್ಷಣ ಪದ್ದತಿಯ ಧಾಳಿಗೊಳಗಾಗಿ ಈಗ "ಆನ್ಲೈನ್" ಮೂಲಕವೇ ಶಿಕ್ಷಣ ನೀಡಬಹುದು ಎಂದು ಮುನ್ನುಗ್ಗುತ್ತಿರುವ ಈ ಸಮಯದಲ್ಲಿ ಪವನ್ ಕಿರಣಕೆರೆಯವರ ಸಮಯೋಚಿತ ಬರಹ. *ನಗಾರಿಧ್ವನಿ*ಯ ಸಂಪಾದಕೀಯದಲ್ಲಿ. ಪತ್ರಿಕೆಗಾಗಿ ಸಂಪರ್ಕಿಸಿ.

ನಗಾರಿಧ್ವನಿಯ ಜೂನ್15-30ರ ವರೆಗಿನ ಸಂಚಿಕೆಗಾಗಿ ಸಂಪರ್ಕಿಸಿ.
15/06/2020

ನಗಾರಿಧ್ವನಿಯ ಜೂನ್15-30ರ ವರೆಗಿನ ಸಂಚಿಕೆಗಾಗಿ ಸಂಪರ್ಕಿಸಿ.

ಅಮ್ಮನ ವ್ಯಕ್ತಿತ್ವ ವರ್ಣಿಸಲಸದಳ ಆದರೂ ಒಂದೇ ಸಾಲಿನಲ್ಲಿ ಅಮ್ಮನ ಬಗ್ಗೆ  ಏನೆನ್ನಬಹುದು. ಒಮ್ಮೆ ಪ್ರಯತ್ನಿಸಿ. ಧನ್ಯವಾದ🙏🏻
12/05/2020

ಅಮ್ಮನ ವ್ಯಕ್ತಿತ್ವ ವರ್ಣಿಸಲಸದಳ ಆದರೂ ಒಂದೇ ಸಾಲಿನಲ್ಲಿ ಅಮ್ಮನ ಬಗ್ಗೆ ಏನೆನ್ನಬಹುದು. ಒಮ್ಮೆ ಪ್ರಯತ್ನಿಸಿ. ಧನ್ಯವಾದ🙏🏻

ನಮ್ಮ ಬದುಕಿನ ಹಲವು ಮಜಲುಗಳನ್ನು ದಾಟಿ ಹೋಗುವಾಗ ಕೆಲವೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪಿ ಬಿಡುತ್ತೇವೆ. ಮುಂದೇನು ಎಂಬ ಪ್ರಶ್ನೆ ಕಾಡತೊಡಗಿಬಿಡ...
20/04/2020

ನಮ್ಮ ಬದುಕಿನ ಹಲವು ಮಜಲುಗಳನ್ನು ದಾಟಿ ಹೋಗುವಾಗ ಕೆಲವೊಮ್ಮೆ ಸಂದಿಗ್ದ ಪರಿಸ್ಥಿತಿಗೆ ತಲುಪಿ ಬಿಡುತ್ತೇವೆ. ಮುಂದೇನು ಎಂಬ ಪ್ರಶ್ನೆ ಕಾಡತೊಡಗಿಬಿಡುತ್ತದೆ. ಆಗೆಲ್ಲ ನಮ್ಮನ್ನು ಸರಿ ದಾರಿಯಲ್ಲಿ ಕರೆದುಕೊಂಡು ಹೋಗಲು ಕೆಲವಷ್ಟು ಗ್ರಂಥಗಳಿವೆ. ರಾಮಾಯಣ, ಮಹಾಭಾರತ ದಂತಹ ಮಹಾನ್ ಕೃತಿಗಳಲ್ಲಿ ರಾಮ ಕೃಷ್ಣರು ತಮ್ಮ ಜೀವನವನ್ನೇ ನಮಗೆ ಆದರ್ಶವಾಗಿ ಬದುಕಿ ತೋರಿಸಿದ್ದಾರೆ. ನಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟಗಳಿಗೂ ಅಲ್ಲಿ ಉತ್ತರವಿರುತ್ತದೆ. ಇನ್ನು ಬದುಕಿನ ಸೂತ್ರವನ್ನು ಶ್ರೀಕೃಷ್ಣ ಪರಮಾತ್ಮ ತನ್ನ ಗೀತೆಯ ಮೂಲಕ ಹಂತ ಹಂತವಾಗಿ ಸರಳವಾಗಿ ವಿವರಿಸಿದ್ದಾನೆ. ಶ್ರೀ ಬನ್ನಂಜೆ ಗೋವಿಂದ ಆಚಾರ್ಯರ ಭಗವದ್ಗೀತೆ ಪ್ರವಚನದ ಆಧಾರದಲ್ಲಿ ಈ ಕೆಳಗಿನ ಗೀತಾರ್ಥವನ್ನು ದಿನಕ್ಕೊಂದು ಶ್ಲೋಕದಂತೆ ನಿಮ್ಮ ಮುಂದಿಡುತ್ತೇವೆ.

ಯಕ್ಷರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಕಲಾವಿದ ಶ್ರೀ ತೀರ್ಥಹಳ್ಳಿ ಗೋಪಾಲ ಆಚಾರ್ಯ. ಬಹಳಷ್ಟು ಯುವ ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿರು...
19/04/2020

ಯಕ್ಷರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಕಲಾವಿದ ಶ್ರೀ ತೀರ್ಥಹಳ್ಳಿ ಗೋಪಾಲ ಆಚಾರ್ಯ. ಬಹಳಷ್ಟು ಯುವ ಕಲಾವಿದರಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ತೀರ್ಥಹಳ್ಳಿಯವರು ತಮ್ಮ ಅರವತ್ತನೆ ವಯಸ್ಸಿನಲ್ಲಿಯೂ ಅಭಿಮನ್ಯುವಿನ ವೇಷವನ್ನು ಸಮರ್ಥವಾಗಿ ನಿರ್ವಹಿಸಿ ಸೈ ಎನ್ನಿಸಿಕೊಂಡವರು. ಅದೆಷ್ಟೋ ಅಭಿಮಾನಿಗಳ ಹೃದಯದಲ್ಲಿ ಅರವತ್ತರ ಅಭಿಮನ್ಯುವಾಗಿ ಮೆರೆದ ಗೋಪಾಲ ಆಚಾರ್ಯರ ಒಂದು ಭಂಗಿಯ ಚಿತ್ರ ನಿಮಗಾಗಿ. ಚಿತ್ರ ಬಿಡಿಸಿದವರು ಅನನ್ಯ.

ತಪ್ಪು ಮಾಡುವುದು ಮನುಷ್ಯನ ಸಹಜಗುಣ. ಅದೇ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ದೊಡ್ಡತನ. ಮಾಡಿದ ತಪ್ಪನ್ನು ಒಪ್ಪಿಕೊಂಡು ಅದನ್ನು ತಿದ್ದಿ ನಡೆಯು...
19/04/2020

ತಪ್ಪು ಮಾಡುವುದು ಮನುಷ್ಯನ ಸಹಜಗುಣ. ಅದೇ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ದೊಡ್ಡತನ. ಮಾಡಿದ ತಪ್ಪನ್ನು ಒಪ್ಪಿಕೊಂಡು ಅದನ್ನು ತಿದ್ದಿ ನಡೆಯುವುದಿದೆಯಲ್ಲ ಅದೇ ಮಾನವನ ನಿಜವಾದ ಧರ್ಮ. ಅಂತಹವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯನಲ್ಲಿರುವ ಅಹಂಕಾರ ಗುಣವೇ ಆತನ ತಪ್ಪನ್ನು ಒಪ್ಪಿಕೊಳ್ಳಲು ಬಿಡುವುದಿಲ್ಲ. ಎಲ್ಲಿ ತಪ್ಪನ್ನು ಒಪ್ಪಿಕೊಂಡು ಬಿಟ್ಟರೆ ಚಿಕ್ಕವರಾಗಿ ಬಿಡುತ್ತೇವೆಯೋ ಎನ್ನುವ ಭಾವ ಆ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳುವಲ್ಲಿ ಸಾವಿರ ದಾರಿಯನ್ನು ಹುಡುಕತೊಡಗುತ್ತದೆ. ರಾಮಾಯಣದಲ್ಲಿ ಬರುವ ರಾವಣ ಸೀತೆಯನ್ನು ಕದ್ದೊಯ್ದು ತಪ್ಪು ಮಾಡಿಬಿಟ್ಟ. ಅನಂತರ ಆತನ ತಮ್ಮ ವಿಭೀಷಣ, ಮಡದಿ ಮಂಡೋದರಿ, ಮಗ ಅತಿಕಾಯ, ಇಂದ್ರಜಿತು ಹಾಗೆಯೇ ತಮ್ಮನಾದ ಕುಂಭಕರ್ಣ ಅದ್ಯಾವ ರೀತಿಯಲ್ಲಿ ಬೇಡಿಕೊಂಡರೂ ಆತನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ದನಿರಲಿಲ್ಲ.ಆತನ ಅಹಂಕಾರ ಆತನ ತಪ್ಪನ್ನು ಒಪ್ಪಿಕೊಳ್ಳಲು ಬಿಡಲಿಲ್ಲ. ಶ್ರೀರಾಮಚಂದಿರ ಹಲವು ಬಾರಿ ಅವಕಾಶ ಕೊಟ್ಟರೂ ಕೂಡಾ ರಾವಣ ದರ್ಪವನ್ನೇ ಮೆರೆದ. ಪರಿಣಾಮವಾಗಿ ತನ್ನವರೆಲ್ಲರನ್ನೂ ಕೊನೆಗೆ ತನ್ನನ್ನೇ ಕಳೆದುಕೊಂಡ ರಾವಣ. ಸ್ನೇಹಿತರೇ ಜೀವನದಲ್ಲಿ ತಪ್ಪು ಮಾಡಿದೆವು ಎಂದಾಕ್ಷಣ ಕೊರಗಬೇಕಾದ ಅಗತ್ಯವಿಲ್ಲ ಆದರೆ ಮಾಡಿದ ತಪ್ಪನ್ನು ಧೈರ್ಯದಿಂದ ಒಪ್ಪಿಕೊಂಡು ತಿದ್ದಿ ಮುನ್ನಡೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ.

ವಿಶ್ವದಾದ್ಯಂತ ಕೊರೊನಾ ಸೋಂಕು ಹಬ್ಬುತ್ತಿರುವ ರೀತಿ ನೋಡಿದರೆ ಭಾರತದ ಸ್ಥಿತಿ ಕೊಂಚಮಟ್ಟಿಗೆ ಉತ್ತಮವಾಗಿಯೇ ಇದೆ. ಆದರೆ ಪರಿಸ್ಥಿತಿ ಹೀಗೆಯೆ ಮುಂದ...
18/04/2020

ವಿಶ್ವದಾದ್ಯಂತ ಕೊರೊನಾ ಸೋಂಕು ಹಬ್ಬುತ್ತಿರುವ ರೀತಿ ನೋಡಿದರೆ ಭಾರತದ ಸ್ಥಿತಿ ಕೊಂಚಮಟ್ಟಿಗೆ ಉತ್ತಮವಾಗಿಯೇ ಇದೆ. ಆದರೆ ಪರಿಸ್ಥಿತಿ ಹೀಗೆಯೆ ಮುಂದುವರಿದರೆ ಮುಂದೇನು ಎಂಬುದು ಯಾರಿಗೂ ತಿಳಿದಿಲ್ಲ. ಕೊರೊನಾ ಮುಗಿದ ನಂತರ ಆರ್ಥಿಕ ಸ್ಥಿತಿ ಬಹಳಷ್ಟು ಹದಗೆಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಆದಷ್ಟೂ ಬೇಗ ಸೋಂಕು ನಿವಾರಣೆಯಾದಷ್ಟು ಅದರಿಂದಾಗುವ ಅಡ್ಡ ಪರಿಣಾಮಗಳ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ನಾವೀಗ ಮಾಡಬೇಕಾದ್ದು ಇಷ್ಟೆ. ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸಬೇಕಷ್ಟೆ.

Address

ಕಿರಣಕೆರೆ
Thirthahalli

Telephone

+919964964628

Website

Alerts

Be the first to know and let us send you an email when ನಗಾರಿ ಧ್ವನಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಗಾರಿ ಧ್ವನಿ:

Videos

Share


Other Thirthahalli media companies

Show All