Sirsi Info - ಶಿರಸಿ ಇನ್ಫೋ

Sirsi Info - ಶಿರಸಿ ಇನ್ಫೋ Sirsi.Info provides latest news from Sirsi, Uttara Kannada, Karnataka, India and the world. We provide timely information and day-to-day event updates.
(33)

Sirsi.Info is Classifieds website. That helps people Buy, Sell, Rent, find in categories like Furniture, Mobile phones, cars & bikes, services, pets, real estate, jobs, education, entertainment and matrimonial. You can post ads and reqly to ads on Sirsi.Info in the city you live in. Sirsi.Info's classifieds websites allow you to post ads, find what you are looking for and address your reqular need

s by connecting people in a faster, simpler and easier way.

ಶ್ರೀ ಮಾರಿಕಾಂಬೆಯ ಆಶೀರ್ವಾದದಿಂದ ಆರಂಭಗೊಂಡ Sirsi.Info ಹೊಸತನ, ನವೀನತೆ, ವಿವಿಧತೆ, ವಿಶಿಷ್ಟತೆ ಹಾಗೂ ಅನನ್ಯತೆಯನ್ನು ಹೊಂದಿದೆ. ಹಣಗಳಿಸಲು ನಾನಾ ಕಸರತ್ತು ಕೈಗೊಳ್ಳದೇ ಪ್ರಚಾರದ ಗೀಳನ್ನು ಹಚ್ಚಿಸಿಕೊಳ್ಳದೇ, ನೈಜತೆ, ಪಾರದರ್ಶಕತೆ ಹಾಗೂ ಶಿರಸಿಯ ಸೊಬಗನ್ನು ದೇಶ ವಿದೇಶಗಳನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಮಲೆನಾಡಿನ ಮಡಿಲಲ್ಲಿನ ಸುಂದರ ನಗರಿ ಶಿರಸಿ ಕರ್ನಾಟಕದ ಪ್ರಮುಖ ತಾಲೂಕುಗಳಲ್ಲಿ ಒಂದು. ಪ್ರಸಿದ್ಧ ಯಾತ್ರಾ ಸ್ಥಳವಾಗಿ, ಪ್ರವಾಸಿ ತಾಣವಾಗಿ, ಉತ್ತರಕನ್ನಡ ಜಿಲ್ಲೆಯ ವಾಣಿಜ್ಯ ರಾಜಧಾನಿಯಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಶಿರಸಿಯು ಇಂದಿನ ಮಾಡರ್ನ್ ಯುಗದಲ್ಲಿಯೂ ಅಭಿವೃದ್ಧಿಗಳ ಬೆನ್ನತ್ತಿ ತಮ್ಮತನವನ್ನು ಕುಂದಿಸಿಕೊಳ್ಳುತ್ತಿರುವ ಎಷ್ಟೋ ಪ್ರದೇಶಗಳಿಗೆ ಅಪವಾದವೆಂಬಂತೆ, ಅಭಿವೃದ್ಧಿಗಳ ಜೊತೆ ಗ್ರಾಮೀಣ ಸೊಗಡನ್ನೂ ಉಳಿಸಿಕೊಂಡು ಬೆಳೆಯುತ್ತಿದೆ.ಅದು ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ ಹೀಗೆ ನಾನಾ ಪ್ರಕಾರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಜನರಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಜೊತೆಗೆ ಶಿರಸಿಯ ವಿಶೇಷತೆಗಳ ಬಗ್ಗೆ ಪರಿಚಯಿಸುವ ವೆಬ್ ತಾಣವೇ ನಮ್ಮ ಈ Sirsi.Info.
ನಮ್ಮ ವೆಬ್ ತಾಣಕ್ಕೆ ಭೇಟಿಕೊಡುವ ಎಲ್ಲರಿಗೂ ಇಲ್ಲಿ ಉಪಯುಕ್ತ ಮಾಹಿತಿಗಳು ಮತ್ತು ಭರಪೂರ ಮನರಂಜನೆಗಳನ್ನು ಕೊಡುವ ಪ್ರಯತ್ನ ನಮ್ಮದು. ಅದಕ್ಕಾಗಿ ಶಿರಸಿಯ ನಂಬರ್ 1 ವಾರಪತ್ರಿಕೆ ‘ಶಿರಸಿ ಸಿರಿ’ಯ e-Paper ಪ್ರತಿ ಬುಧವಾರ ನಮ್ಮಲ್ಲಿ ಪ್ರಕಟವಾಗುತ್ತಿದೆ. ಹಾಗೆಯೇ ಶಿರಸಿಯ ಸ್ಥಳೀಯ ಕೇಬಲ್ ಚಾನಲ್ ‘ನೂತನ ಟಿವಿ ಚಾನೆಲ್ ‘ನ ನ್ಯೂಸ್ ಪ್ರತಿದಿನ ಪ್ರಸಾರವಾಗುತ್ತಿದೆ. ಅದಲ್ಲದೇ ಟೆಕ್ನೋಲಜಿಗೆ ಸಂಬಂಧಪಟ್ಟ ವಿಷಯಗಳು, ಶಿರಸಿಯ ಎಲ್ಲಾ ಕಛೇರಿಯ ಫೋನ್ ನಂಬರಿಗಳು, ಹೆಸರಾಂತ ಲೇಖಕರ ಲೇಖನಗಳು, ಕವನಗಳು, ಕಥೆಗಳು, ನಗೆಹನಿಗಳು, ಪ್ರವಾಸಿ ತಾಣಗಳು, ಸ್ಥಳೀಯ ಪ್ರತಿಭೆಗಳ ಪ್ರತಿಭೆಯ ಅನಾವರಣಗಳು ಹೀಗೆ ದಿನಂಪ್ರತಿ ಎಲ್ಲರಿಗೂ ಉಪಯೋಗವಾಗುವಂತಹ ಮತ್ತು ಇಷ್ಟವಾಗುವಂತಹ ನೂರಾರು ವಿಚಾರಗಳನ್ನು ನಾವಿಲ್ಲಿ ಸ್ತುತಪಡಿಸುತ್ತೇವೆ. DifDesigner TechnologiesDIf-Main-Logo ನಡೆಸುತ್ತಿರುವ ಈ ವೆಬ್ ಸೈಟಿನ ಮೂಲ ಉದ್ಧೇಶ ಜನಗಳು ಮನೊರಂಜನೆಯ ಈ ತಾಣದಿಂದ ಪ್ರಯೋಜನ ಪಡೆದುಕೊಳ್ಳಲಿ’ ಎಂಬುದಷ್ಟೇ! ಯಾಕೆಂದರೆ ಆದಾಯ ಪಡೆಯದೇ, ಉಚಿತವಾಗಿ ಇದನ್ನು ನಿರ್ವಹಿಸಲಾಗುತ್ತಿದೆ. ಅಲ್ಲದೇ ಶಿರಸಿಯ ಐದು ರಸ್ತೆ ಬಳಿಯಿರುವ ನಮ್ಮ ಕಛೇರಿಯಲ್ಲಿ ಆಸಕ್ತರಿಗೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಕಂಪ್ಯೂಟರ್ ತರಬೇತಿಯನ್ನೂ ನೀಡಲಾಗುತ್ತಿದೆ. ಹೊರ ಊರಿನಲ್ಲಿರುವ ಶಿರಸಿಗರಿಗೂ ಸಹಾಯವಾಗಲಿ ಎನ್ನುವುದೇ ನಮ್ಮ ಆಶಯ. Sirsi.Info ನ ಮೂಲ ಮಂತ್ರ ಜನತೆಯನ್ನು ಅದರಲ್ಲೂ ಯುವ ಜನತೆಯನ್ನು ಶಿರಸಿಯತ್ತ ಸೆಳೆಯುವುದು. ಹೊಸತನಕ್ಕೆ ಮುನ್ನುಡಿಯನ್ನು ಬರೆಯುವ ಪ್ರತಿಭಾವಂತರನ್ನು ಗುರುತಿಸಿ ಪೋಶಿಸುವುದು. ಇಲ್ಲಿ ಎಲ್ಲರಿಗೂ ಒಂದು ಅಡಿಪಾಯ ನೀಡುವ ವ್ಯವಸ್ಥೆಯಿದೆ. ಯಾವುದನ್ನು ಅತಿಯಾಗಿಸದೇ, ಅಗತ್ಯಕ್ಕೆ ತಕ್ಕ ಉಪ್ಪಿನಕಾಯಿ ಉಣಬಡಿಸುವುದೇ ನಮ್ಮ ಕಾಯಕ.



ನೀವು ಕೂಡ ನಿಮ್ಮ ಪ್ರತಿಭೆಯನ್ನು Sirsi.Info ದಲ್ಲಿ ಪ್ರಕಟಿಸಬಹುದು.

Address

Chowkimath
Sirsi
581401

Telephone

+919986448244

Alerts

Be the first to know and let us send you an email when Sirsi Info - ಶಿರಸಿ ಇನ್ಫೋ posts news and promotions. Your email address will not be used for any other purpose, and you can unsubscribe at any time.

Contact The Business

Send a message to Sirsi Info - ಶಿರಸಿ ಇನ್ಫೋ:

Share


Other Media/News Companies in Sirsi

Show All