28/01/2024
#ಶಿರಸಿ
#ಸಾಮಾಜಿಕ_ಜಾಲತಾಣಗಳ ಉಪಯೋಗ, ದುರುಪಯೋಗ, ಮಹತ್ವ ಅರಿತುಕೊಂಡು ನಿಯಂತ್ರಿಸಿದರೆ ಮಾತ್ರ ಮುಂದೆ ನಡೆಯುವ ಅಪೂರ್ಣ ಜಗತ್ತನ್ನು ನಿಯಂತ್ರಿಸಲು ಸಾಧ್ಯ ಎಂದು #ಸಂಯುಕ್ತ_ಕರ್ನಾಟಕ ಸಿಇಓ #ಮೋಹನ್_ಹೆಗಡೆ ಹೇಳಿದರು.
ಅವರು ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ, ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣ ಪತ್ರಿಕೋದ್ಯಮದ ನಡೆ ಕುರಿತು ಮಾತನಾಡಿದರು.
ಸಾಮಾಜಿಕ ಜಾಲತಾಣಗಳಿಂದ ಪತ್ರಿಕೋದ್ಯಮದ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಒಂದು ಕ್ಷಣದಲ್ಲಿ ಲಕ್ಷಾಂತರ ಜನರಿಗೆ ಸುದ್ದಿ ಕಳುಹಿಸುವ ಕಾಲಘಟ್ಟದಲ್ಲಿದ್ದೇವೆ. ಇದರ ನಡುವೆ ಪತ್ರಿಕೆಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ. ಸಮಾಜಿಕ ಜಾಲತಾಣದಿಂದ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಹಮ್ಮು ಬಿಮ್ಮು ಕಡಿಮೆಯಾಗಿದೆ. ಸಾಮಾಜಿಕ ಜಾತಾಣಗಳು ಸಾಕಷ್ಟು ವ್ಯಾಪಿಸಿದೆ. ೭೦ ಕೋಟಿ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂಬ ಅಂಶ ಸರ್ವೇಯಿಂದ ಬೆಳಕಿಗೆ ಬಂದಿದೆ ಮುಂದಿನ ೫ ವರ್ಷದ ಒಳಗಡೆ ೧೩೦ ಕೋಟಿ ದಾಟಬಹುದು ಎಂದರು.
ಸಾಮಾಜಿಕ ಜಾಲತಾಣಗಳನ್ನು ಜನರು ಗಂಭೀರವಾಗಿ ಪರಿಣಿಸುತ್ತಿಲ್ಲ. ಶೇ.೬೦ ರಷ್ಟು ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂಬ ಅಂಶ ಹೊರ ಬಿದ್ದಿದೆ. ಸುಳ್ಳು, ಅಶ್ಲೀಲಲತೆಗಳು ಸಾಮಾಜಿಕ ಜಾಲತಾಣಗಳಲ್ಲು ತುಂಬಿದೆ ಎಂದರೆ ತಪ್ಪಾಗಲಾರದು ಎಂದರು.
ಪತ್ರಿಕೋದ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಅನ್ಯೋನ್ಯ ಸಂಬಂಧ ಹೊಂದಿದೆ. ಜನರಿಗೆ ಪತ್ರಿಕೆ ಬೇಕಾಗಿಲ್ಲ. ಆಳ ಅಧ್ಯಯನ ಬೇಕಾಗಿಲ್ಲ. ಇದರಿಂದ ಬಹಳಷ್ಟು ಹಾನಿಯಾಗಿದೆ. ಸತ್ಯ ಮತ್ತು ಅಸತ್ಯತೆ ಪರಾಮರ್ಶಿಸುವ ಸಹನೆ ಜನರರಿಲ್ಲ. ಟಿವಿ ಬಂದಾಗ ಪತ್ರಿಕೆ ಮುಚ್ಚುತ್ತವೆ ಎಂಬ ಭಯ ಇತ್ತು. ಪ್ರಸಾರ ಸಂಖ್ಯೆ ಹೆಚ್ಚಳವಾಗಿದೆ. ಕೊರೊನಾ ನಂತರ ಪತ್ರಿಕೆ ಮೇಲೆ ಬಹಳ ಪರಿಣಾಮ ಬೀರಿವೆ. ಪ್ರಾದೇಶಿಕ ಪತ್ರಿಕೆಗಳು ಬಹಳಷ್ಟು ಮುಚ್ಚಿ ಹೋದವು. ೧೫ ವರ್ಷದ ಹಿಂದೆ ಪತ್ರಕರ್ತರ ಬಳಿ ಶಾಸಕರು, ಸಚಿವರು ಸಲಹೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಚಿವರು, ಶಾಸಕರ ಮನೆ ಬಾಗಿಲಿನಲ್ಲಿ ಇರುತ್ತಾರೆ. ಯಾಕೆ ಎಂಬುದು ಎಲ್ಲರಿಗೂ ತಿಳಿದಿದೆ. ಪತ್ರಕರ್ತರ ಜೀವನ ಮಟ್ಟದ ಬಹಳಷ್ಟು ಸುಧಾರಿಸಿದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಎಲ್ಲರ ಕಣ್ಣು ಹಳದಿಯಾಗಿದೆ. ನಿಷ್ಠಾವಂತ, ಬದ್ಧತೆ ಹೊಂದಿದವರನ್ನು ನೋಡಿದಾಗ ಬೇಸರವಾಗುತ್ತದೆ ಎಂದರು.
ಓದುಗರನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದು ಪತ್ರಿಕೆಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಹೊಸ ಪ್ರಯೋಗಗಳು ಕಷ್ಟಸಾಧ್ಯ. ಆದಾಯ ಮೂಲಗಳನ್ನು ಬದಲಾವಣೆ ಮಾಡಿಕೊಂಡಿವೆ. ಇದು ಅನಿವಾರ್ಯವಾಗಿದೆ. ದೊಡ್ಡ ಉದ್ಯಮಗಳು ಪ್ರಚಾರಕ್ಕಾಗಿ ಶೇ.೬೦ ರಷ್ಟು ಪತ್ರಿಕೆಗಳನ್ನು ಬಳಸಿಕೊಳ್ಳುತ್ತಿದ್ದವು. ಈಗ ಅದು ಶೇ.೩೦ ಕ್ಕೆ ಇಳಿದಿದೆ ಎಂದರು.
ಸಂಯುಕ್ತ ಕರ್ನಾಟಕ
ಸಂಯುಕ್ತ ಕರ್ನಾಟಕ
ಸಂಯುಕ್ತ ಕರ್ನಾಟಕ ಪೇಪರ್