UK Times

UK Times ಉತ್ತರ ಕನ್ನಡ ಜೀವನಾಡಿ

27/11/2023

*ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗುವ ತನಕ ನಿರಂತರ ಹೋರಾಟ :- ಅನಂತಮೂರ್ತಿ ಹೆಗಡೆ*
*ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಸರ್ಕಾರಕ್ಕೆ ಅನಂತಮೂರ್ತಿ ಎಚ್ಚರಿಕೆ.*

*ಶಿರಸಿ:-* ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣ ವಿಚಾರವಾಗಿ ಈಗ ನಾವು ಮಾಡುತ್ತಿರುವುದು ಶಾಂತಿಯುತ ಹೋರಾಟ, ಈ ಹೋರಾಟಕ್ಕೆ ರಾಜಕಾರಣಿಗಳು, ಸರ್ಕಾರದವರು ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಂಡು ಅಸಡ್ಡೆ ಮಾಡಿದರೇ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು, ನಮ್ಮ ಹೋರಾಟ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಆಗುವವರೆಗೂ ನಿರಂತರವಾಗಿರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇಂದು ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಅವರ ನೇತೃತ್ವದಲ್ಲಿ ಶಿರಸಿಯ ತಹಶೀಲ್ದಾರ್ ಕಚೇರಿಯಲ್ಲಿ 7 ದಿನಗಳ ಕಾಲ ಹಮ್ಮಿಕೊಂಡ ಧರಣಿ ಸತ್ಯಾಗ್ರಹದ ರ್ಯಾಲಿಗೆ ಶ್ರೀ ಮಾರಿಕಾಂಬಾ ದೇವಾಲಯದಿಂದ ಚಾಲನೆ ನೀಡಿ ಮಾತನಾಡಿದರು.
ರಸ್ತೆಯಲ್ಲಿ ಅಪಘಾತ ಆದ ನಂತರ ತೀವ್ರ ರಕ್ತಸ್ರಾವವಾಗಿ ಅನೇಕ‌ ಜನ ಸಾವನ್ನಪ್ಪಿದ್ದವರನ್ನು ಕಾಣುತ್ತಿದ್ದೇವೆ ವಾರಕ್ಕೆ ಕನಿಷ್ಟ ಪಕ್ಷ 4 ರಿಂದ 5 ಜನ ತುರ್ತು ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ. ತಕ್ಷಣ ತುರ್ತು ಚಿಕಿತ್ಸೆ ಬೇಕೆಂದರೆ 3 ಘಂಟೆ ಪ್ರಯಾಣ ಮಾಡಬೇಕು, ಇದು ನೋವಿನ‌ ವಿಚಾರ. ನಾವು ಜೀವನದಲ್ಲಿ ಯಾವುದೇ ಸಣ್ಣಪುಟ್ಟ ಘಟನೆಗಳಿಗೂ ಬಹಳ ರೀಯ್ಯಾಕ್ಟ್ ಮಾಡುತ್ತೇವೆ. ಯಾವುದೇ ಒಂದು ಮನರಂಜನೆ ಕಾರ್ಯಕ್ರಮ ಎಂದರೆ ಜಾಸ್ತಿ‌ ಜನ ಹೋಗುತ್ತೇವೆ. ಮನುಷ್ಯನಿಗೆ ಜೀವನದಲ್ಲಿ ಎಲ್ಲವೂ ಬೇಕೆ ಬೇಕು ಆದರೆ, ಬೇರೆ ಎಲ್ಲಾ ವಿಷಯಗಳಿಗೆ ಹೇಗೆ ಮಹತ್ವ ನೀಡುತ್ತೇವೋ ಹಾಗೇಯೇ ನಮ್ಮ ಊರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಅವೆಂದರೆ ಆಸ್ಪತ್ರೆ, ಮೆಡಿಕಲ್ ಕಾಲೇಜು. ನಮ್ಮೂರಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂದರೆ ಯಾವುದೇ ಉದ್ಯಮಗಳು ಬರುವುದಿಲ್ಲ. ಯಾವ ಪ್ಯಾಕ್ಟರಿ ಕೂಡ ನಮ್ಮೂರಿಗೆ ಬರುವುದಿಲ್ಲ‌. ಯಾವ ರೀತಿಯಲ್ಲೂ ಅಭಿವೃದ್ಧಿ ಕೂಡ ಆಗೋದಿಲ್ಲ. ಉದ್ಯಮ, ಪ್ಯಾಕ್ಟರಿ ಬರೋದಿಲ್ವೋ ಆಂತಹ ಊರು ಅಭಿವೃದ್ಧಿ ಆಗೋದಿಲ್ಲ.

ನಾವು ಮುಂದಿನ 7 ದಿನಗಳ ಕಾಲ ತಹಶೀಲ್ದಾರ್ ಕಛೇರಿ ಎದುರು ದಿನನಿತ್ಯ ಹೋರಾಟ ಮಾಡಿ, ನಂತರ ನಮ್ಮ ಮುಂದಿನ ಹೋರಾಟ ಬೆಳಗಾವಿಯ ಸುವರ್ಣಸೌಧದಲ್ಲಿ. ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧೀವೇಶನ ನಡೆಯುವ ಸುವರ್ಣ ಸೌಧಕ್ಕೆ ಹೋಗಿ ಉಗ್ರವಾದ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜನರಲ್ಲಿ ಮನವರಿಕೆ ಮಾಡಿ ಸಂಘಟನೆ ಮಾಡುತ್ತೇವೆ. ಎಲ್ಲಾ ಗಣ್ಯರು ಕೂಡ ಸತ್ಯಾಗ್ರಹ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದಿದ್ದಾರೆ. ನಾವು ಜನರಲ್ಲಿ ಆಶಾಭಾವನೆ ಮೂಡಿಸುತ್ತಿದ್ದೇವೆ. ಈಗ ನಾವು ಮಾಡುತ್ತಿರುವುದು ಶಾಂತಿಯುತ ಹೋರಾಟ, ಈ ಹೋರಾಟಕ್ಕೆ ರಾಜಕಾರಣಿಗಳು, ಸರ್ಕಾರದವರು ನಮ್ಮ ಹೋರಾಟವನ್ನು ಲಘುವಾಗಿ ತೆಗೆದುಕೊಂಡು ಅಸಡ್ಡೆ ಮಾಡಿದರೇ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು, ನಮ್ಮ ಹೋರಾಟ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಆಗುವವರೆಗೂ ನಿರಂತರವಾಗಿರುತ್ತದೆ. ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅಗ್ರಹಿಸಿದರು.

ನಂತರ ಮಾತನಾಡಿದ ಕರ್ನಾಟಕ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ನಾವು ಆಯ್ಕೆ ಮಾಡುವ ರಾಜಕಾರಣಿಗಳು ಎಲ್ಲರೂ ಕೂಡ ಹಣ ಮಾಡುವವರು. ಕೋಟಿಗಟ್ಟಲೆ ಹಣ ಮಾಡುತ್ತಾರೆ ವಿನಹಃ ಒಂದು ಆಸ್ಪತ್ರೆ ಮಾಡಲ್ಲ. ನೀವು ಬಡವರಿಗೆ ಆಸ್ಪತ್ರೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಅನಂತಮೂರ್ತಿ ಹೆಗಡೆಯವರಿಗೆ ನಮ್ಮ ಸಂಘದಿಂದ ಬೆಂಬಲ ನೀಡುತ್ತೇವೆ. ಬಡವರಿಗೆ ಅನುಕೂಲ ಮಾಡಿಕೊಡದಿದ್ದರೆ ಅವರ ಶಾಪ ನಿಮಗೆ ತಟ್ಟುತ್ತದೆ. ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ರಕ್ತವನ್ನು ಚೆಲ್ಲುತ್ತೇವೆ ವಿನಹಃ ಆಸ್ಪತ್ರೆ ಹೋರಟ ಬಿಡುವುದಿಲ್ಲ ಇದು ನನ್ನ ಎಚ್ಚರಿಕೆ ಎಂದರು.

ನಂತರ‌ ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ ಮಾತನಾಡಿ, ನಾವು ಒಂದನೇ ಹಂತದಲ್ಲಿ ಶಿರಸಿಯಿಂದ ಕಾರವಾರದವರೆಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದು ಎರಡನೇ ಹಂತದ ಹೋರಾಟ, ಮೂರನೇ ಹೋರಾಟ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧೀವೇಶನದ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಆಸ್ಪತ್ರೆಗೆ ನಿರ್ಮಾಣಕ್ಕೆ ಸ್ಥಳ ಇಲ್ಲವಾದರೇ ನಾವೇ ನಿಮಗೆ ಸ್ಥಳದ ಬಗ್ಗೆ ಮಾಹಿತಿ ನೀಡುತ್ತೇವೆ ಶಿರಸಿ ದೋಡ್ನಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಆಸ್ಪತ್ರೆಗೆ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗ ಸರ್ಕಾರದ್ದೇ ಇದೆ ಎಂದು ಹೇಳಿದರು.

ನಂತರ ಮಾರಿಕಾಂಬಾ ದೇವಾಲಯದಿಂದ ನೂರಾರು ಆಟೋ ಚಾಲಕರು ಹಾಗೂ ಆಟೋಗಳೊಂದಿಗೆ ಸಾಗಿದ ರ್ಯಾಲಿ ಶಿರಸಿಯ ವಿವಿಧ ರಸ್ತೆಗಳ ಮೂಲಕ ಸಾಗಿ ನಗರದ ತಹಶೀಲ್ದಾರ್ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಲುಪಿ, ಸತ್ಯಾಗ್ರಹ ಮುಂದುವರೆಯಿತು. ಮುಂದಿನ 7 ದಿನಗಳ ಕಾಲ ಪ್ರತಿನಿತ್ಯ ಮಧ್ಯಾಹ್ನ 1 ಘಂಟೆಯವರೆಗೆ ಧರಣಿ ಸತ್ಯಾಗ್ರಹ ಮಾಡಲಿದ್ದು, ಪ್ರತಿನಿತ್ಯ ಜಿಲ್ಲೆಯ ಅನೇಕ ಗಣ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಪಂಚಾಯತಿ, ಸಹಕಾರಿ ಸಂಘಗಳು,ಮಹಿಳಾ ಮಂಡಳ, ಸಾಮಾಜಿಕ ಸಂಘಟನೆಗಳು ಒಂದೊಂದು ದಿನ ಆಗಮಿಸಿ ಹೋರಾಟದಲ್ಲಿ ಭಾಗವಹಿಸಲಿವೆ.

ಸತತ 7 ದಿನ ಹೋರಾಟದ ನಂತರ ದಿನಾಂಕ 04.12.2023 ಸೋಮವಾರದಂದು ಬೆಳಗಾವಿಗೆ ಪ್ರಯಾಣ ಮಾಡಿ ಸುವರ್ಣಸೌಧ ದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ಧರಣಿ ಸತ್ಯಾಗ್ರಹ ಮಾಡಿ ನೇರವಾಗಿ ಮುಖ್ಯಮಂತ್ರಿಯವರಿಗೆ ಮನವಿ ನೀಡಲಿದ್ದಾರೆ.
Ananthamurthy Hegde Ananthamurthy Hegde Abhimani Balaga

*ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ‌ ಆರೋಪ**ಆಸ್ಪತ್ರೆ ಆಗುವವರೆಗೂ ನಿರಂತರ ಹೋರಾಟ :  ಸರ್ಕಾರದ ವಿರ...
09/11/2023

*ಉತ್ತರ ಕನ್ನಡ ಜಿಲ್ಲೆ ಹಿಂದುಳಿಯಲು ದೇಶಪಾಂಡೆ ನೇರ ಹೊಣೆ: ಅನಂತಮೂರ್ತಿ ಹೆಗಡೆ‌ ಆರೋಪ*
*ಆಸ್ಪತ್ರೆ ಆಗುವವರೆಗೂ ನಿರಂತರ ಹೋರಾಟ : ಸರ್ಕಾರದ ವಿರುದ್ಧ ಗುಡುಗಿದ ಅನಂತಮೂರ್ತಿ*

*ಕಾರವಾರ*:- ನಮ್ಮ ಜಿಲ್ಲೆ ಸಂಪದ್ಭರಿತ ಜಿಲ್ಲೆ, ಜಿಲ್ಲೆಯಲ್ಲಿ ಯಾವುದೇ ಒಂದು ಕೈಗಾರಿಕೆ ಇಲ್ಲ, ಇದಕ್ಕೆ ನೇರ ಹೊಣೆ ಯಾರು, ನಮ್ಮ ಜಿಲ್ಲೆಯವರೇ ಮೂರು ಭಾರಿ ಬೃಹತ್ ಕೈಗಾರಿಕಾ ಸಚಿವರಾದರೂ ಯಾವುದೇ ಒಂದು ಕೈಗಾರಿಕೆ ಇಲ್ಲ, ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರ ಹೆಸರು ಹೇಳದೆ ಅವರ ಮೇಲೆ ಆರೋಪಿಸಿದರು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗೋವರೆಗೂ ನಮ್ಮ‌ಹೋರಾಟ‌ ನಿರಂತರವಾಗಿರುತ್ತದೆ. ಇದು ನಾವು ಸರ್ಕಾರಕ್ಕೆ ನೀಡುವ ನೇರ ಎಚ್ಚರಿಕೆಯಾಗಿದೆ ಎಂದರು.

ಇಂದು ಅವರು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಎಂಟು ದಿನಗಳವರೆಗೆ ಪಾದಯಾತ್ರೆ ಮಾಡಿ‌ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಮ್ಮಿಕೊಂಡ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಮ್ಮ ಜಿಲ್ಲೆ ಸಂಪದ್ಭರಿತವಾಗಿದ್ದು, ನಾವು ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಹಾಗೂ ಸೀಬರ್ಡ ನೌಕಾನೆಲೆಗೆ ನೂರಾರು ಎಕರೆ ಪ್ರದೇಶ ನೀಡಿದ್ದೇವೆ. ನಮ್ಮ ಜಿಲ್ಲೆಯ ಜನರು ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುವಂತಾಗಿದೆ. ಜಿಲ್ಲೆಯ ಹಿರೇಗುತ್ತಿಯಲ್ಲಿ 1800 ಎಕರೆ ಕೆಐಡಿಬಿ ಭೂಮಿ ಇದೆ. ಹಿಂದೆ ಸಾಕಷ್ಟು ವರ್ಷ ಕೈಗಾರಿಕಾ ಸಚಿವರಾಗಿದ್ದ ಜಿಲ್ಲೆಯ ಜನಪ್ರತಿನಿಧಿಯೊಬ್ಬರು ಜಿಲ್ಲೆಗೆ ಒಂದೂ ಕೈಗಾರಿಕೆ ತಂದಿಲ್ಲ. ಕರೊನಾ ಬಂದ ನಂತರ ಹೃದಯಾಘಾತಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯ ಯಾವುದೇ ತಾಲೂಕಿನ ಜನರಿಗೆ ಗಂಭೀರ ಅನಾರೋಗ್ಯ ಸಮಸ್ಯೆ ಎದುರಾದರೆ ಕನಿಷ್ಠ 300 ಕಿಮೀ ತೆರಳಬೇಕಾದ ದುಸ್ಥಿತಿ ಇದೆ.
ಉಡುಪಿಯಲ್ಲಿ, ಮಂಗಳೂರಿನಲ್ಲಿ ಆಗುವ ಆಸ್ಪತ್ರೆ ಉತ್ತರ ಕನ್ನಡದಲ್ಲೇಕೆ ಆಗುವುದಿಲ್ಲ. ನಮಗೆ ಸೌಲಭ್ಯ ಬೇಕು ಎಂದು ಪಟ್ಟು ಹಿಡಿಯುವವರೆಗೂ ಸರ್ಕಾರ ಅದಕ್ಕೆ ಸ್ಪಂದಿಸದು. ನಾವು ಎಲ್ಲಿಯವರೆಗೆ ಆಸ್ಪತ್ರೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮಾಡುತ್ತೇವೆ ಎಂದು ಶಪಥ ಮಾಡೋಣ. ಉತ್ತರ ಕನ್ನಡ ಧೀರರ ನಾಡು, ಶೂರರ ನಾಡು, ಪದ್ಮಶ್ರೀ ಪುರಸ್ಕೃತರಿದ್ದಾರೆ. ಆದರೆ, ಅವರಿಗೇ ಅನಾರೋಗ್ಯಕ್ಕೊಳಗಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಹಾಗಾಗಿ ಜಿಲ್ಲೆಯ ಕರಾವಳಿಯಲ್ಲಿ ಒಂದು ಹಾಗೂ ಘಟ್ಟದ ಮೇಲೊಂದು ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು. ನಮ್ಮ ಜಿಲ್ಲೆಯ ಖ್ಯಾತ ರಾಜಕಾರಣಿ ಒಬ್ಬರು ಐದು ಭಾರಿ ಮಂತ್ರಿಯಾಗುತ್ತಾರೆ, ಮೂರು ನಾಲ್ಕು ಭಾರಿ ಬೃಹತ್ ಕೈಗಾರಿಕಾ ಮಂತ್ರಿಯಾಗಿದ್ದಾರೆ ಅದರೆ ಒಂದೇ ಒಂದು ಪ್ಯಾಕ್ಟರಿ ಮಾಡಿಲ್ಲ, ಇದು ದುರ್ದೈವ. ಇಂತಹ ರಾಜಕಾರಣಿಗಳು ಮಾಡಿದ ತಪ್ಪಿನಿಂದ ನಮ್ಮ ಜನರು ಕಷ್ಟ ಪಡುವಂತಾಗಿದೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ.‌ ಆಸ್ಪತ್ರೆ ಆಗೋವರೆಗೂ ನಮ್ಮ ಹೋರಾಟ ನಿರಂತರ, ಇದು ನಾವು ಸರ್ಕಾರಕ್ಕೆ ಎಚ್ಚರಿಕೆ‌ ನೀಡುತ್ತೇನೆ ಎಂದು ಗುಡುಗಿದರು.
ನಮ್ಮ ಪಾದಯಾತ್ರೆ ತಡೆಯಲು, ಕೆಲವರು ಷಡ್ಯಂತ್ರವನ್ನು ಮಾಡಿದ್ದಾರೆ, ಪಾದಯಾತ್ರೆಗೆ ಹೋಗಬೇಡಿ ಎಂದು ಜನರನ್ನು ಪಡೆದಿದ್ದಾರೆ, ತಾಯಿ ಮಾರಿಕಾಂಬೆಯ ಆಶೀರ್ವದದಿಂದ ಎಲ್ಲಾ ಷಡ್ಯಂತ್ರವನ್ನು ಹಿಮ್ಮೆಟ್ಟಿಸಿ 140 ಕಿಲೋ‌ಮೀಟರ್ ದೂರ ಪಾದಯಾತ್ರೆ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಇನ್ನಮೇಲೆ ಯಾರಿಗೆ ಯಾವುದೇ ಕಾರಣಕ್ಕೂ ಹೆದರುವ ಮಾತಿಲ್ಲ, ಇಲ್ಲಿಯವರೆಗೆ ಒಂದು ಲೆಕ್ಕ , ಇನ್ನೂ ಮೇಲೆ ಇನ್ನೊಂದು ಲೆಕ್ಕ ಎಂದು ಗುಡುಗಿದರು.

ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ಶಿರಸಿಯ ಅನಂತಮೂರ್ತಿ ಹೆಗಡೆ ಟ್ರಸ್ಟ್ ಕೈಗೊಂಡಿದ್ದ ಪಾದಯಾತ್ರೆ ಗುರುವಾರ ಕಾರವಾರ ತಲುಪಿತು.
ನ.2 ರಿಂದ ಶಿರಸಿ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಕುಮಟಾ, ಅಂಕೋಲಾ ಮಾರ್ಗವಾಗಿ 140 ಕಿಮೀ ಸಾಗಿ ಬಂದಿದೆ. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ , ಅಂಕೋಲಾದಲ್ಲಿ ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಆಗಮಿಸಿ ಪಾದಯಾತ್ರೆಯ ಉದ್ದೇಶವನ್ನು ಶ್ಲಾಘಿಸಿದರು. ನಡುವೆ ಸುಮಾರು 30 ಕ್ಕೂ ಅನೇಕ ಸಂಘಟನೆಗಳ ಪ್ರಮುಖರು ಪಾದಯಾತ್ರೆಯನ್ನು ಬೆಂಬಲಿಸಿ ಅನಂತಮೂರ್ತಿ ಅವರ ಜತೆ ಹೆಜ್ಜೆ ಹಾಕಿದರು. ಸಾವಿರಾರು ಜನ ಹೋರಾಟದಲ್ಲಿ ಭಾಗಿಯಾದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಸಾರ್ವಜನಿಕ ನಡೆಸಿ, ಪಾದಯಾತ್ರೆಯ ಉದ್ದೇಶ ಹಾಗೂ ಬೇಡಿಕೆಗಳನ್ನು ಮಂಡಿಸಿ, ನಂತರ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.

ಸೇಂಟ್ ಮಿಲಾಗ್ರಿಸ್ ಬ್ಯಾಂಕ್‌ನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಆಸ್ಪತ್ರೆ ಸ್ಥಾಪಿಸಿ ಸಾವು ನಿಲ್ಲಿಸಿ ಎಂದು ಒತ್ತಾಯಿಸಿದರು.

ಜಿಲ್ಲಾ ಜನಪರ ಸಂಘಟನೆಯ ಅಧ್ಯಕ್ಷ ನಾಗೇಶ ನಾಯ್ಕ ಕಾಗಾಲ ಮಾತನಾಡಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ನಿಷ್ಕಿçಯವಾಗಿದೆ. ಜನರ ಪರವಾದ ಹೋರಾಟಕ್ಕೆ ಹೆಚ್ಚಿನ ಶಾಸಕರು, ಮಾಜಿ ಶಾಸಕರು ಬೆಂಬಲ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಘು ನಾಯ್ಕ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜ್ ಕಾರವಾರದಲ್ಲಿ ನಿರ್ಮಾಣವಾದರೂ. ಅದು ಕೆಲವು ಧನ ದಾಹಿಗಳ ಕೇಂದ್ರವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಿಂದೆ ರಕ್ತದಲ್ಲಿ ಪತ್ರಬರೆದಿದ್ದೆವು.

ಯಲ್ಲಾಪುರ ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ ಮಾತನಾಡಿ, ಜಿಲ್ಲೆಯ ರಾಜಕಾರಣಿಗಳು ನಿಷ್ಕ್ರಿಯರಾಗಿದ್ದಾರೆ. ಅನಂತಮೂರ್ತಿ ಅವರಂತ ಜನನಾಯಕರು ನಮಗೆ ಬೇಕು, ಇಂತಹ ಜನನಾಯಕ ನಮ್ಮ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ಅನಂತಮೂರ್ತಿ ಅವರ ಪಾದಯಾತ್ರೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಅಡುಗೆ ಅನಿಲ ವಿತರಕರ ಸಂಘದ ಬಸವರಾಜ ಓಶಿಮಠ ಮಾತನಾಡಿ, ಜಿಲ್ಲೆಗೆ ಬರಗಾಲ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ. ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲೆಯ ಮಾಜಿ ಸಚಿವರೊಬ್ಬರು ಕಾಶ್ಮೀರಕ್ಕೆ ಮೋಜು ಮಾಡಲು ತೆರಳಿದ್ದಾರೆ. ಅವರು ತುಂಬುವ ಇನ್‌ಕಮ್ ಟ್ಯಾಕ್ಸ್ ದುಡ್ಡಿನಲ್ಲಿ ಎರಡು ಆಸ್ಪತ್ರೆ ಕಟ್ಟಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು
ಮುಂದೆಯೂ ಹೋರಾಟಕ್ಕೆ ಬದ್ಧ ಎಂದರು. ಡಾ.ವೆಂಕಟೇಶ ನಾಯ್ಕ, ಸುನೀಲ ಸೋನಿ, ಪ್ರೀತಮ್ ಮಾಸೂರಕರ್, ಎಸ್. ಫಕೀರಪ್ಪ, ಉಮೇಶ ಹರಿಕಾಂತ, ಶಿವರಾಜ ಮೇಸ್ತ, ಪರಮಾನಂದ ಹೆಗಡೆ, ಸುಬ್ರಾಯ ಹೆಗಡೆ ಇತರರು ಮಾತನಾಡಿದರು.......
ಬಾಕ್ಸ್----
ನಮ್ಮ ಪಾದಯಾತ್ರೆ ತಡೆಯಲು, ಕೆಲವರು ಷಡ್ಯಂತ್ರವನ್ನು ಮಾಡಿದ್ದಾರೆ, ಪಾದಯಾತ್ರೆಗೆ ಹೋಗಬೇಡಿ ಎಂದು ಜನರನ್ನು ಪಡೆದಿದ್ದಾರೆ, ತಾಯಿ ಮಾರಿಕಾಂಬೆಯ ಆಶೀರ್ವದದಿಂದ ಎಲ್ಲಾ ಷಡ್ಯಂತ್ರವನ್ನು ಹಿಮ್ಮೆಟ್ಟಿಸಿ 140 ಕಿಲೋ‌ಮೀಟರ್ ದೂರ ಪಾದಯಾತ್ರೆ ಮಾಡಿ ಇಲ್ಲಿಗೆ ಬಂದು ನಿಂತಿದ್ದೇವೆ. ಇನ್ನಮೇಲೆ ಯಾರಿಗೆ ಯಾವುದೇ ಕಾರಣಕ್ಕೂ ಹೆದರುವ ಮಾತಿಲ್ಲ, ಇಲ್ಲಿಯವರೆಗೆ ಒಂದು ಲೆಕ್ಕ , ಇನ್ನೂ ಮೇಲೆ ಇನ್ನೊಂದು ಲೆಕ್ಕ ಎಂದು ಗುಡುಗಿದರು.
Ananthamurthy Hegde Bhimanna Naik Ananthamurthy Hegde Abhimani Balaga

07/11/2023

ಅನಂತಮೂರ್ತಿ ಹೆಗಡೆಯನ್ನು ಮೊಮ್ಮಗನಂತೆ ಮುದ್ದು ಮಾಡಿ, ಆಶೀರ್ವದಿಸಿದ ಸುಕ್ರಜ್ಜಿ :- ಪಾದಯಾತ್ರೆಯಲ್ಲಿ ಭಾಗಿ

ಅಂಕೋಲಾ:- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ ,ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಮೊಮ್ಮಗನಂತೆ ಮುದ್ದು ಮಾಡಿ ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದ್ದಾರೆ.
ಇಂದು ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯ ಆರನೇ ದಿನವಾದ ಇಂದು ಅಂಕೋಲಾ ನಗರವನ್ನು ಪ್ರವೇಶಿಸಿದ್ದು, ಪಾದಯಾತ್ರೆಗೆ ಬೆಂಬಲ ನೀಡಲು ಬಂದ ಪದ್ಮಶ್ರೀ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಅನಂತಮೂರ್ತಿ ಅವರನ್ನು ಮೊಮ್ಮಗನಂತೆ ಮುತ್ತು ನೀಡಿ ಮುದ್ದು ಮಾಡಿ, ಅವರಿಗೆ ನಿಮ್ಮ ಈ ಹೋರಾಟ ಜಯವಾಗಲಿ, ನೀನು ಜಯಶಾಲಿಯಾಗು ಎಂದು ಹೇಳಿ ಆಶೀರ್ವದಿಸಿ ಬೆಂಬಲ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನಂತಮೂರ್ತಿ ಹೆಗಡೆ ಅವರು ಶಿರಸಿಯಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಕೂಡಲೇ ಆಸ್ಪತ್ರೆ ಆಗಬೇಕು, ನಾನು ಮೋದಿಯವರಿಗೆ ಅಗ್ರಹಿಸುತ್ತೇನೆ. ಜಿಲ್ಲೆಯ ನಮ್ಮ ಮಕ್ಕಳು ( ಜನರು) ಬೇಜಾರಾಗಿದ್ದಾರೆ. ಇಲ್ಲಿ ದೇವರ ಅನುಗ್ರಹದಿಂದ ಒಂದು ಆಸ್ಪತ್ರೆಯಾದರೆ ಎಲ್ಲರಿಗೂ ಅನೂಕೂಲವಾಗುತ್ತದೆ ಎಂದರು.

ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಜ್ಜಿ ಅವರನ್ನು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ನಮಸ್ಕರಿಸಿ, ಅವರನ್ನು ಸನ್ಮಾನಿಸಿದರು ನಿಮ್ಮ ಈ ಬೆಂಬಲಕ್ಕೆ ನಾನೆಂದು ಚಿರೃಣಿಯಾಗಿತುತ್ತೇನೆ. ಮೋದಿ ಅವರಂತೆ ನನಗೂ ನಿಮ್ಮ ಆಶೀರ್ವಾದ ಇರಲಿ ಎಂದು ನಮಸ್ಕರಿಸಿದರು. ಪಾದಯಾತ್ರೆಯೂ ಅಂಕೋಲಾ ಅವರ್ಸಾ ಮೂಲಕ ಕಾರವಾರ ತಾಲೂಕಿನ ಅಮದಳ್ಳಿ ತಲುಪಿ ಅಲ್ಲೆ ವಾಸ್ತವ್ಯ ಮಾಡಿದ್ದಾರೆ.

ಅಂಕೋಲಾದಲ್ಲಿ ವಿವಿಧ ಮುಂಖಡರುಗಳ ಬೆಂಬಲ

ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯ 6 ದಿನವಾದ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಸ್ಥಳೀಯ ಮುಖಂಡರು ಹಾಗೂ ಅನೇಕ ರಿಕ್ಷಾ ಚಾಲಕರು ಭವ್ಯ ಸ್ಥಾಗತ ನೀಡಿ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.‌ ಅಂಕೋಲಾದ ವಕೀಲರಾದ ಉಮೇಶ ನಾಯ್ಕ, ಬಿ. ಡಿ. ನಾಯ್ಕ, ಸಮಾಜ ಸೇವಕರಾದ ವಿಜಯಕುಮಾರ ನಾಯ್ಕ, ಸುಬ್ರಮಣ್ಯ ರೇವಣಕರ್, ಪ್ರವೀಣ ನಾಯ್ಕ, ಅಟೋ ಚಾಲಕರಾದ ಬಾಷಾ ಶೇಖ್ , ಅಟೋ ಚಾಲಕರ ಜಿಲ್ಲಾ ಉಪಾಧ್ಯಕ್ಷರಾದ ವಿಶ್ವಗೌಡ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಉಮೇಶ್ ಹರಿಕಂತ್ರ , ಬಾವೀಕೇರಿಯ ರಾಮಕೃಷ್ಣ ನಾಯ್ಕ, ರಾಜಶೇಖರ ನಾಯಕ ಸೇರಿದಂತೆ ಇನ್ನಿತರರು ಹಾಗೂ ಊರ ನಾಗರಿಕರು ಬೆಂಬಲಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
Ananthamurthy Hegde Ananthamurthy Hegde Abhimani Balaga

ಗಂಗಾಷ್ಟಮಿ ಉತ್ಸವದ ಮೆರವಣಿಗೆಗೆ ತಾಯಿ ಗಂಗಾಮಾತಾ ಹೊತ್ತ ಟ್ರ್ಯಾಕ್ಟರ್ ನ ಸಾರಥಿಯಾದ ಶಿರಸಿ ಸಿದ್ದಾಪುರದ ಜನಮೆಚ್ಚಿದ ಶಾಸಕರಾದ ಶ್ರೀ ಭೀಮಣ್ಣ ನಾ...
06/11/2023

ಗಂಗಾಷ್ಟಮಿ ಉತ್ಸವದ ಮೆರವಣಿಗೆಗೆ ತಾಯಿ ಗಂಗಾಮಾತಾ ಹೊತ್ತ ಟ್ರ್ಯಾಕ್ಟರ್ ನ ಸಾರಥಿಯಾದ ಶಿರಸಿ ಸಿದ್ದಾಪುರದ ಜನಮೆಚ್ಚಿದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ.
Bhimanna Naik

ಐದು ದಿನದಿಂದ ಸಾಗುತ್ತಿರುವ ಅನಂತಮೂರ್ತಿ ಹೆಗಡೆ ಪಾದಯಾತ್ರೆ : ಜನರಿಂದ ಅಭೂತಪೂರ್ವ ಬೆಂಬಲ ಶಿರಸಿ:- ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರ...
06/11/2023

ಐದು ದಿನದಿಂದ ಸಾಗುತ್ತಿರುವ ಅನಂತಮೂರ್ತಿ ಹೆಗಡೆ ಪಾದಯಾತ್ರೆ : ಜನರಿಂದ ಅಭೂತಪೂರ್ವ ಬೆಂಬಲ

ಶಿರಸಿ:- ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯು ಐದು ದಿನಗಳನ್ನು ಪೂರೈಸಿದ್ದು ಇಂದು ಕುಮಟಾ ತಾಲೂಕಿನ ಬಗ್ರಿಯಿ‌ಂದ ಹೊರಟು ಅಂಕೋಲಾ ನಗರವನ್ನು ತಲುಪಿದೆ. ಈ ಬಗ್ಗೆ ಮಾತನಾಡಿದ ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆ, ನವೆಂಬರ್ 2 ರಂದು ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡ ನಮ್ಮ ಪಾದಯಾತ್ರೆ ಕಳೆದ ಐದು ದಿನಗಳಿಂದ ಸಾಗುತ್ತಿದ್ದು ಮಾರ್ಗಮಧ್ಯ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಇಂದು ಕುಮಟಾದ ಬಗ್ರಿಯಿಂದ ಹೊರಟ ಪಾದಯಾತ್ರೆ ಹಿರೇಗುತ್ತಿ, ಮಾದನಗೇರಿ, ಶಿರೂರು ಮಾರ್ಗವಾಗಿ ಚಲಿಸಿ ಅಂಕೋಲಾ ನಗರವನ್ನು ತಲುಪಿದ್ದೇವೆ. ಮಾರ್ಗಮಧ್ಯ ಹಿರೇಗುತ್ತಿಯಲ್ಲಿ ಸ್ಥಳೀಯರಾದ ನೀಲಪ್ಪ ಗೌಡ, ಸುಧಾಕರ್ ಭಂಡಾರಿ, ಕಮಲಾಕರ್ ಹರಿಕಾಂತ, ಸುಧಾಕರ ಹಿರೇಗುತ್ತಿ, ರಮಾಕಾಂತ ಬಾಲಪುಡ್ತಿ ಹಾಗೂ ಊರನಾಗರಿಕರು ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.

ನಂತರ ಪಾದಯಾತ್ರೆಯೂ ಹಿರೇಗುತ್ತಿ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಸ್ಥಳೀಯ ಮುಖಂಡರಾದ ರಾಮು ಕೆಂಚನ್, ದೇವಿದಾಸ ನಾಯ್ಕ, ಗ್ರಾಪಂ ಸದಸ್ಯ ಆನಂದ್ ನಾಯಕ, ಹರೀಶ ನಾಯ್ಕ, ಜಗದೀಶ ನಾಯ್ಕ ಸೇರಿದಂತೆ ಇನ್ನಿತರರು ನಮ್ಮನ್ನು ಸ್ವಾಗತಿಸಿ ತಾವು ಈ ಹೋರಾಟವನ್ನು ಬೆಂವಲಿಸುವುದಾಗಿ ತಮ್ಮ ಬೆಂಬಲ ಯಾವಾಗಲೂ ಇದೆ ಎಂದು ಪಾದಯಾತ್ರೆಯಲ್ಲಿ ತಮ್ಮ ಹೆಜ್ಜೆಹಾಕಿದರು.

ಹಾಗೆ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನ ಸುಮಾರಿಗೆ ಅಂಕೋಲಾ ತಾಲೂಕಿನ ಶಿರೂರು ತಲುಪಿದ್ದು ಅಲ್ಲಿ ಊರ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ ಪಾದಯಾತ್ರೆಯನ್ನು ಬೆಂಬಲಿದರು. ಹಾಗೆಯೇ ಶಿರಸಿ ತಾಲೂಕಿನ ಊಲ್ಲಾಳಕೋಪ್ಪದಿಂದ ಬಂದ ಅನಂತ ಭಟ್, ಸುದರ್ಶನ ಭಟ್, ಶಶಿಕಾಂತ್ ಭಟ್, ಎಸ್.‌ಜಿ.ಭಟ್, ನರಸಿಂಹ ಭಟ್ , ಗಣಪತಿ ಭಟ್ ಹೀಗೆ ಇನ್ನೂ ಹಲವರು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿ ತಮ್ಮ ಬೆಂಬಲವನ್ನು ನೀಡಿದ್ದು, ಇ‌ದು ಅಂಕೋಲಾ ನಗರವನ್ನು ನಮ್ಮ ಪಾದಯಾತ್ರೆಯೂ ತಲುಪಿದ್ದು, ಅಂಕೋಲಾ ನಗರದಲ್ಲಿ ವಾಸ್ತವ್ಯವಾಗಲಿದ್ದೇವೆ, ನಾಳೆ ಅಂಕೋಲಾದಿಂದ ಅಮದಳ್ಳಿಯವರೆಗೆ ಪಾದಯಾತ್ರೆಯೂ ಮುಂದೆ ಸಾಗಲಿದೆ ಎಂದು ಅನಂತಮೂರ್ತಿ ಹೆಗಡೆ ಎಂದು ಹೇಳಿದರು.

ಅನಂತಮೂರ್ತಿ ಹೆಗಡೆಯವರೇ ಇದೇ ಹೋರಾಟವನ್ನು ನೀವು ನಿರಂತರವಾಗಿ ಮಾಡಿದರೇ ಮುಂದೆ ನೀವು ಜಿಲ್ಲೆಯಲ್ಲಿ ಜನನಾಯಕನಾಗಿ ಹೊರಹೊಮ್ಮುತ್ತೀರಿ, ಜಿಲ್ಲೆಯಲ್ಲಿ ಈಗಾಗಲೇ ನಾಯಕತ್ವದ ಕೊರತೆಯಿದೆ. ಜನರಿಗೆ ತೀರಾ ಅವಶ್ಯವಾಗಿ ಬೇಕಾದ ವ್ಯವಸ್ಥೆ ಎಂದರೆ ಅದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನಿಮಗೆ ನೀಡುತ್ತೇವೆ.

*ನೀಲಪ್ಪ ಗೌಡ, ಹಿರಿಯ ಮುಖಂಡ ಹಿರೇಗುತ್ತಿ.*
Ananthamurthy Hegde Ananthamurthy Hegde Abhimani Balaga

19/09/2023

ಮಾನ್ಯರೇ,
ನಿಮ್ಮ ಊರು ಹಾಗೂ ನಗರದಲ್ಲಿ ಗಣೇಶಮೂರ್ತಿಯ ಪೋಟೋವನ್ನು ನಮ್ಮ ಉಕೆಟೈಮ್ಸ್ ನಲ್ಲಿ ಪ್ರಕಟಿಸಲಾಗುವುದು ತಾವು ಗಳು ಪೋಟೋ ಹಾಗೂ ವಿವರವನ್ನು ಮೆಂಸೆಂಜರ್ ನಲ್ಲಿ ಕಳುಹಿಸಿ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಗಣೇಶ ಚತುರ್ಥಿಯ ಗಣಪತಿಮೂರ್ತಿಗಳು.
19/09/2023

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಗಣೇಶ ಚತುರ್ಥಿಯ ಗಣಪತಿಮೂರ್ತಿಗಳು.

ಮಾನ್ಯರೇ,*ದಿನಾಂಕ 15.09.2023 ಶುಕ್ರವಾರ ಬೆಳಿಗ್ಗೆ 10.30 ಘಂಟೆಗೆ   ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚಂದರಗಿ ಸಭಾಭವನದಲ್ಲಿ  ಶ್ರೀ ಅನಂತಮೂರ್ತ...
14/09/2023

ಮಾನ್ಯರೇ,

*ದಿನಾಂಕ 15.09.2023 ಶುಕ್ರವಾರ ಬೆಳಿಗ್ಗೆ 10.30 ಘಂಟೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚಂದರಗಿ ಸಭಾಭವನದಲ್ಲಿ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆದ್ದರಿಂದ ತಾವುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ಸಮಾಜಮುಖಿ ಕಾರ್ಯಗಳನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ತಮ್ಮ ವಿಶ್ವಾಸಿ,
ಶ್ರೀ ಅನಂತಮೂರ್ತಿ ಎಮ್. ಹೆಗಡೆ
*ಅಧ್ಯಕ್ಷರು.
Ananthamurthy Hegde Everyone

20/07/2023

Address

Court Road
Sirsi
581401

Website

Alerts

Be the first to know and let us send you an email when UK Times posts news and promotions. Your email address will not be used for any other purpose, and you can unsubscribe at any time.

Videos

Share


Other Media/News Companies in Sirsi

Show All