ಎಲ್ಲಾ ರಂಗಗಳಲ್ಲಿ ಸಕ್ರಿಯರಾಗಿರುವ ತರುಣ ಸಂಗಮವೇ ಯುವ ಭಾರತ್. ಇಲ್ಲಿ ಸಾಮಾಜಿಕ, ರಾಜಕೀಯ ಮತ್ತು ಭೌಗೋಳಿಕ ಚರ್ಚೆಗಳು ಸರ್ವೇ ಸಾಮಾನ್ಯ, ವಿಷಯತಾತ್ಪರ್ಯನಿಂದಕರಿಗೆ ಆಹ್ವಾನ, ಆಡ್ಮಿನ್ ವಿಷಯಗಳನ್ನು ವಿಮರ್ಶಿಸಿ ಪ್ರಕಟಿಸುತ್ತಾರೆ.
ನಿಂದಕರು ಅವರ ನಿಲುವನ್ನು ಪುರಾವೆಗಳೊಂದಿಗೆ ಸಾಬೀತುಪಡಿಸಿದರೆ ಮಾತ್ರ ನಿಮ್ಮ ನಿಂದನೆ ಪುರಸ್ಕೃತಗೊಳ್ಳುವುದು. ಅಸಂಬದ್ಧ (ಮನಸ್ಸಿಗೆ ತೋಚಿದ್ದು) ಬರಹಗಳಿಗೆ ಅವಕಾಶವಿಲ್ಲ, ಕೆಟ್ಟ ಶಬ್ದಗಳ ಬಳಕೆ ನಿಮ್ಮ ಘನತೆಯನ್ನು ಕೆಳಗಿಸುತ್ತದೆ. ಸುಸಂಸ್ಕೃತರಾಗಿ ಸಹಕರಿಸಿ,
ನಿಮ್ಮ ತೂಕ ಹೆಚ್ಚುವುದು.
ಯಾವುದೇ ನಿಂದನಾತ್ಮಕ ವೈಯುಕ್ತಿಕ ಸಂದೇಶಗಳಿಗೆ ಅವಕಾಶವಿಲ್ಲ, ತಪ್ಪಿ ಮಾಡಿದರೆ ಅದಕ್ಕೆ ನಾವು ಜವಾಬ್ದಾರರಲ್ಲ, (ಅನುಭವಗಳ ಬತ್ತಳಿಕೆಯಿಂದ)
ದೇಶದ ಬಗ್ಗೆ ಕಾಳಜಿ, ಸಂಕಷ್ಟದಲ್ಲಿದ್ದವರಿಗೆ ಸಹಾಯ, ರಕ್ತದಾನ, ಶ್ರಮದಾನ, ಪರಿಸರ ಕಾಳಜಿ, ಅಕ್ರಮ ಭೌಗೋಳಿಕ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸುವವರಾದರೆ ನೀವು ನಮ್ಮ ಬಳಗದ ಆತ್ಮೀಯ ಸದಸ್ಯತನವನ್ನು ಗಳಿಸುವಿರಿ.
- ಯುವ ಭಾರತ್