16/10/2023
ಜೀವನದಲ್ಲಿ ಕೈತುಂಬಾ ಹಣಗಳಿಸಬೇಕು, ಸುಂದರವಾದ ಮನೆಕಟ್ಟಿ ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕು ಅನ್ನುವ ಹಂಬಲ ಎಲ್ಲರಿಗೂ ಇದೆ, ಹಾಗೆಯೇ ದೇವನು ಕೊಟ್ಟದ್ದರಲ್ಲಿ ಬಡವರಿಗೆ ನಿರ್ಗತಿಕರಿಗೂ ಹಂಚಬೇಕು ಎನ್ನುವುದೂ ಕೆಲವರಲ್ಲಿ ಇರಬಹುದು, ಆದರೆ ಹಣ ಶ್ರೀಮಂತಿಕೆ ಕೈಹಿಡಿದಾಗ ಇದನ್ನೆಲ್ಲಾ ಮರೆಯುವವರೇ ಅಧಿಕ. ಇದಕ್ಕೆ ತದ್ವಿರುದ್ಧವಾಗಿ ಜೀವನದಲ್ಲಿ ಕಷ್ಟಪಟ್ಟು ದುಡಿದು ಮೇಲೆ ಬಂದು ಆಥಿಕವಾಗಿ ಸಾಕಷ್ಟು ಗಳಿಸಿದ ಸುಳ್ಯದ ಕೆಲವೇ ಕೆಲವು ಯುವಕರಲ್ಲಿ Shahul Hameed ಕುತ್ತಾಮೊಟ್ಟೆಯವರು ಮೇರು ಪರ್ವತ ದಂತೆ ಎದ್ದು ಕಾಣುವುದು ಅವರ ಸಾಮಾಜಿಕ ಚಟುವಟಿಕೆಗಳಿಂದ. ಇಲ್ಲಿನ ಎಲ್ಲಾ ಸಂಘ ಸಂಸ್ಥೆಗಳ ಮುಂಚೂಣಿ ನಾಯಕನಾಗಿ ಜೀವಕಾರುಣ್ಯ ಸೇವಾಕಾರ್ಯಗಳನ್ನು ನಡೆಸುತ್ತಿರುವ ಬಡವ ದೀನದಲಿತರ ನಿರ್ಗತಿಕರ ಆಶಾಕಿರಣದಂತೆ ಬೆಳಗುತ್ತಿರುವ ಈ ಯುವಕ ತನಗಾಗಿ ತನ್ನ ಕನಸನ್ನು ನನಸು ಮಾಡಲು ಭವ್ಯವಾದ ಮನೆಯೊಂದನ್ನು ಕಟ್ಟಿ ಪೂರ್ತಿಗೊಳಿಸಿದ್ದಾನೆ..ವಿಷಯ ಅದಲ್ಲ, ಇಂದು ತನ್ನ ಮನೆಯ ' #ಗೃಹ_ಪ್ರವೇಶ'ವನ್ನು ಅದ್ಧೂರಿಗೊಳಿಸಲು ಆಯ್ದುಕೊಂಡದ್ದು ಏಳು ಬಡ ಹೆಣ್ಣುಮಕ್ಕಳಿಗೆ #ಶಾದಿ_ಭಾಗ್ಯ ಕೊಡುವ ತೀರ್ಮಾನ ಆತನ ಬಡವರ ಬಗ್ಗೆ ಇರುವ #ಹೃದಯ_ವೈಶಾಲ್ಯ ತೆಯನ್ನು ತೆರೆದಿಡುತ್ತಿದೆ. ಹೌದು #ಏಳು_ಬಡ_ಜೋಡಿಗಳ ' #ನಿಖಾಹ್' ಕಾರ್ಯಕ್ರಮ ಇಂದು ಗೃಹ ಪ್ರವೇಶ ಗೊಂಡ ಮನೆಯಂಗಳದಲ್ಲಿ ಅದ್ಧೂರಿಯಾಗಿ ನಡೆಯಲಿದೆ, ಅದಕ್ಕಿಂತ ವಿಶೇಷ #ಏಳು_ಕಡು_ಬಡವರಿಗೆ ತನ್ನ ಮತ್ತು ತನ್ನ ಸ್ನೇಹಿತರ ಸಹಕಾರದಿಂದ ನಿರ್ಮಿಸಿದ ಸುಂದರವಾದ ' #ಏಳು_ಮನೆ'ಗಳನ್ನೂ #ಹಸ್ತಾಂತರಿಸುವ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಹಾಗೆಯೇ ಸುಮಾರು ಹತ್ತು ಸಾವಿರ ಜನರಿಗೆ ಭಾರೀ ಭೋಜನ ವ್ಯವಸ್ಥೆಯನ್ನು ಏರ್ಪಡಿಸಿದ್ದಾನೆ. ಇಂತಹ ಹೃದಯ ವೈಶಾಲ್ಯತೆಯನ್ನೂ ಸನ್ಮನಸ್ಸನ್ನೂ ಕರುಣಿಸಿದ ಆಲ್ಲಾಹುವಿಗೆ ಶುಖ್ರ್ ಹೇಳುತ್ತಾ ಕಿರಿಯ ಮಿತ್ರ Shahul hameed kuthamotte ಗೆ ಹೃದಯಾಂತರಾಳದಿಂದ ಶುಭ ಹಾರೈಸುವೆನು. ಅಲ್ಲಾಹು ಅವನ ಎಲ್ಲಾ ಕಾರ್ಯಗಳನ್ನು ವಿಜಯಗೊಳಿಸಲಿ..ಖೈರ್ ಬರ್ಕತ್ ಸಂಪತ್ತನ್ನೂ ಎಂದೆಂದೂ ವರ್ಷಿಸುತ್ತಿರಲಿ..ಬಡವರ ಬಗ್ಗೆ ಆತನ ಹೃದಯ ಮಿಡಿತ ಮನಸ್ಸಿನ ತುಡಿತ ಇನ್ನಷ್ಟು ವಿಶಾಲಗೊಳಿಸಲಿ..ಆಮೀನ್ ಯಾ ರಬ್ಬಲ್ ಆಲಮೀನ್.