17-11-23 ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ಐದು ದಿನಗಳು ವಿಜೃಂಭಣೆಯಿಂದ ನಡೆಯುವ ಕುಮಟಾ ವೈಭವ-2023ರ 6ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆಯಿತು.
17-11-23 ಕಳೆದ ಆರು ತಿಂಗಳಿಂದ ಅಧಿಕಾರಿಗಳ ಕೆಲಸ ನೋಡಿದ್ದೇನೆ. ನಿಮ್ಮ ಕೆಲಸ ತೃಪ್ತಿ ತಂದಿಲ್ಲ. ಇನ್ನು ಮುಂದೆ ಏನಿದ್ದರು ಆಕ್ಷನ್ ತೆಗೆದುಕೊಳ್ಳುವುದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ
17-11-23 ಬಿಜೆಪಿಗರು ಯಡಿಯೂರಪ್ಪ ನವರನ್ನೇ ಬಿಟ್ಟಿಲ್ಲ,ಇನ್ನು ಅವರ ಮಗನನ್ನ ಬಿಡ್ತಾರಾ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಹೇಳಿಕೆ ನೀಡಿದ್ದಾರೆ
17-11-23 ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ತಾಲೂಕು ಘಟಕಗಳ ಆಶ್ರಯದಲ್ಲಿ 'ಕನ್ನಡ ಕಾರ್ತಿಕ : ಅನುದಿನ- ಅನುಸ್ಪಂದನ' ಕಾರ್ಯಕ್ರಮದ ಭಾಗವಾಗಿ ದಾಂಡೇಲಿಯ ಗಣೇಶ ನಗರದ ಮುರ್ತುಜಾ ಹುಸೇನ, ಆನೆಹೊಸೂರವರ ಮನೆಯಲ್ಲಿ ನಡೆದ 'ಕಾವ್ಯ ದೀಪೋತ್ಸವ, ಕವಿಗೋಷ್ಠಿ ಹಾಗೂ ದೀಪಾವಳಿ ಗಾನ ಸಂಭ್ರಮೋತ್ಸವ' ಕಾರ್ಯಕ್ರಮ ನಡೆಯಿತು.
17-11-23 ಸಹಕಾರಿ ಕ್ಷೇತ್ರ ಜೀವಂತವಾಗಿದ್ದಲ್ಲಿ ರೈತರು ನೆಮ್ಮದಿಯ ಜೀವನ ನಡೆಸುತ್ತಾರೆ. ಇಲ್ಲವಾದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು
17-11-23 ಭಾರತದ ಪ್ರಥಮ ಪ್ರಧಾನಿ, ಚಾಚಾ ನೆಹರುರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುವುದರಿಂದ ಮಕ್ಕಳಿಗೆ ಕ್ರೀಡೆಗಳನ್ನು ಆಡಿಸುವ ಮೂಲಕ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು
17-11-23 ಕುಮಟಾದ ರೋಟರಿ ಸಂಸ್ಥೆಯವರು ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಆಶುಭಾಷಣ ಸ್ಪರ್ಧೆಯಲ್ಲಿ ಸಿವಿಎಸ್ಕೆ ಪ್ರೌಢಶಾಲೆಯ ಸ್ನೇಹ ಉದಯ ನಾಯ್ಕ ‘ರೋಟರಿ ವರ ಮಾತುಗಾರ ಪುರಸ್ಕಾರ’ಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿನ ಪ್ರೌಢ ಶಾಲೆಗಳಲ್ಲಿಯೇ ಅತ್ಯುತ್ತಮ ವಾಗ್ಮಿಯೆಂಬ ಹೆಮ್ಮೆಗೆ ಪಾತ್ರರಾದರು.
17-11-23 ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಪೋಲೀಸರಿಗೆ ವಿವಿಧ ಪರಿಸ್ಥಿತಿಯಲ್ಲಿ ಅತ್ಯುಪಯುಕ್ತವಾದ ಬ್ಯಾರಿಕೆಡನ್ನು ಪೊಲೀಸ್ ಇಲಾಖೆಗೆ ನೀಡುವ ಮೂಲಕ ವಿನಾಯಕ ರೆಕ್ಸೀನ್ ಹೌಸ್ ನ ಮಾಲೀಕ ವಿನಾಯಕ ಹೆಗಡೆಕಟ್ಟೆ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ
17-11-23 ತನ್ನ ಖುಕೃತ್ಯದ ಮೂಲಕವೇ ಗುರುತಿಸಿಕೊಂಡ ಚಾರ್ಲ್ಸ ಶೋಭರಾಜ ಅವರ ಬಂಧನವಾಗಲು ಕಾರಣ ಉತ್ತರಕನ್ನಡದ ನೆಲ, ಅವರ ಬಂಧನಕ್ಕೆ ಉತ್ತರಕನ್ನಡ ಜಿಲ್ಲೆಯ ಪೊಲೀಸರ ಶ್ರಮ ಹಾಗೂ ತ್ಯಾಗ ಬಹು ಅಮೂಲ್ಯವಾದುದು ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಡಿ.ವಿ ಗುರುಪ್ರಸಾದ ಹೇಳಿದರು.
16-11-23 ಕೊಂಕಣಿ ಭಾಷೆಯಲ್ಲಿ ಸೆ.15ರಂದು ತೆರೆಕಂಡು ದೇಶ ವಿದೇಶಗಳಲ್ಲಿ 400ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿರುವ ಅಸ್ಮಿತಾಯ್ ಚಲನಚಿತ್ರ ಕಾರವಾರ ನಗರದ ಅರ್ಜುನ ಚಿತ್ರ ಮಂದಿರದಲ್ಲಿ ನ.24ರಿಂದ ನ.30ರವರೆಗೆ ಪ್ರದರ್ಶನಗೊಳ್ಳಲಿದೆ ಎಂದು ಕಾರವಾರ ಅಂಕೋಲಾ ಕ್ರಿಶ್ಚಿಯನ್ ವೇದಿಕೆ ಉಪಾಧ್ಯಕ್ಷ ಲಿಯೋ ಪ್ರಾನ್ಸಿಸ್ ತಿಳಿಸಿದರು.
16-11-23 ನಮ್ಮ ಬೆಟಾಲಿಯನ್ ರನ್ನರ್ಸ್ ಸಂಸ್ಥೆಯಿಂದ ನವೆಂಬರ್ 19ರಂದು ಪುರಾಣ ಪ್ರಸಿದ್ಧ ಮುರುಡೇಶ್ವರದ ಕಡಲ ತೀರದಲ್ಲಿ ಬೀಚ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಸವಿತಾ ನಾಯ್ಕ ತಿಳಿಸಿದರು.
16-11-23 ದೀಪಾವಳಿಯ ಪಾಡ್ಯದಂದು ಗೋಪೂಜೆ, ಲಕ್ಷ್ಮಿಯ ಪೂಜೆಯನ್ನು ಹಿಂದೂಗಳು ಭರ್ಜರಿಯಾಗಿ ಆಚರಿಸುತ್ತಿದ್ದಂತೆ ಅಚ್ಚಿ ಕಾಂಪ್ಲೆಕ್ಸ್ನ ಮೈಸ್ ಕಂಪ್ಯೂಟರನ ಮಾಲೀಕ ಸಿರಿ ನೆಲ ಸೌಹಾರ್ದ ರಾಜ್ಯೋತ್ಸವ ಪ್ರಶಸ್ತಿ ವಿಜೆತ ಸಮೀರ ಮಿರ್ಜಾನಕರ ಪ್ರತಿ ವರ್ಷದಂತೆ ಈ ವರ್ಷವೂ ಸಹ ತಮ್ಮ ಅಂಗಡಿಯಲ್ಲಿ ಶ್ರೀ ಲಕ್ಷ್ಮಿಯ ಪೂಜೆ ಸಲ್ಲಿಸುವ ಮೂಲಕ ಹಿಂದೂ ಮುಸ್ಲಿಂ ಭಾವೈಕತೆ ಸಾರಿದರು.
16-11-23 ಕುಮಟಾದ JBSB ಸಮಾಜ ಬಾಂಧವರು ಪರಮಪೂಜ್ಯ ಶ್ರೀಗುರುಗಳ ಅಭಿನಂದನಾ ಮಹೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮಣ ನಾರಾಯಣ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದರು
16-11-23 ರಾಜ್ಯದ ಕರಾವಳಿಯಲ್ಲಿ ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ ನಡೆಯುವ ಸಾಗರ ಕವಚ ಅಣಕು ಕಾರ್ಯಾಚರಣೆಯು ಗುರುವಾರ ಜಿಲ್ಲೆಯಾದ್ಯಂತ ನಡೆಯಿತು.
16-11-23 ಶೀಘ್ರ ರೋಗಪತ್ತೆ ಹಾಗೂ ಚಿಕಿತ್ಸೆಯಿಂದ ಕ್ಷಯರೋಗವನ್ನು ಬೇಗ ಗುಣಪಡಿಸಿ, ಬಹು ಔಷಧ ಪ್ರತಿಬಂಧಕ ಕ್ಷಯ ಬರದಂತೆ ತಡೆಯ ಬಹುದು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ರವರು ಅಭಿಪ್ರಾಯಪಟ್ಟರು.
16-11-23 ಜಿಲ್ಲೆಯ ಗ್ರಾಮೀಣ ಭಾಗದ ಪ್ರಸಿದ್ದ ಕ್ರೀಡೆ ಸೂಲ್ ಗಾಯಿ ಆಟ ಬಹುತೇಕ ಕಣ್ಮೆಯಾಗುತ್ತಿರುವ ನಡುವೆ ತಾಲೂಕಿನ ಕೋಡ್ಕಣಿಯ ಯುವಕರ ತಂಡ ಸುಲಗಾಯಿ ಪಂದ್ಯಾವಳಿಯನ್ನು ಆಯೋಜಿಸಿ ಕ್ರೀಡೆಗೆ ಮತ್ತಷ್ಟು ಮೆರಗು ನೀಡಿದೆ
16-11-23 ಕುಮಟಾ ತಾಲೂಕಿನ ಹೆಗಲೆಯ ಶಕ್ತಿ ಕ್ಷೇತ್ರ ಹಾಗೂ ದೈವೀ ಕ್ಷೇತ್ರವಾಗಿರುವ, ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ನೆಲೆಸಿರುವ ಗುಜಗಪುರದಲ್ಲಿ ದೇವಾಲಯದ ಮಹಾದ್ವಾರ ಉದ್ಘಾಟನೆ ವಿದ್ಯಕ್ತವಾಗಿ ನೆರವೇರಿತು.
16-11-23 ಕುಮಟಾ ತಾಲೂಕಿನ ಹಳಕಾರ್ ನಲ್ಲಿ ಶ್ರೀ ಕೃಷ್ಣೋತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
15-11-23 ನಾಡ ಹಬ್ಬ ದೀಪಾವಳಿ ಹಬ್ಬವನ್ನು ಕರಾವಳಿ ಭಾಗದ ಗ್ರಾಮೀಣ ಭಾಗದಲ್ಲಿ ವಿಶೇಷ ಧಾರ್ಮಿಕ ಮತ್ತು ಜಾನಪದ ವೈವಿಧ್ಯತೆಯೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು
15-11-23 ಅತಿಕ್ರಮಣದಾರರ ವಿವಿಧ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ.
15-11-23 ವಿವಿಧ ಇಲಾಖೆಗಳ ಸಹಯೋಗದಲ್ಲಿ ಭಗವಾನ್ ಶ್ರೀ ಬಿರ್ಸಾಮುಂಡಾ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಕಾರ್ಯಕ್ರಮ ಕಾರವಾರದಲ್ಲಿ ನಡೆಯಿತು.
15-11-23 ದೀಪಾವಳಿ ಅಂಗವಾಗಿ ಅಂಕೋಲಾದಲ್ಲಿ ನಡೆದ ಟ್ಯಾಬ್ಲೊಗಳ ಮೆರವಣಿಗೆಯಲ್ಲಿ ಭಜರಂಗಿ ಟ್ಯಾಬ್ಲೊ ಎಲ್ಲರ ಗಮನ ಸೆಳೆಯಿತು.
15-11-23 ಎಲ್ಲೆಡೆ ದೀಪಾವಳಿ ಸಂಭ್ರಮ ಮನೆಮಾಡಿದ ನಡುವೆಯೇ ಇಲ್ಲೊಬ್ಬ ಯುವಕ ಮೀನುಗಾರಿಕಾ ಬೋಟ್ ಮಾದರಿ ಒಂದನ್ನು ಹೆದ್ದಾರಿ ಅಂಚಿನ ತನ್ನ ಮನೆ ಮುಂದೆ ನಿಲ್ಲಿಸಿ ಸುದ್ದಿಯಾಗಿದ್ದಾನೆ
15-11-23 ದೀಪಾವಳಿಯ ಬಲಿಪಾಡ್ಯದಂದು ಕುಮಟಾದ ಕೋಮಾರಪಂತ ಸಮಾಜದವರು ಪಟ್ಟಣದಲ್ಲಿ ಆಯೋಜಿಸಿದ ಅಂಬಾರಿ ಮೇಲೆ ಕುಳಿತ ಕನ್ನಡಾಂಬೆ ಮತ್ತು ಸ್ತಬ್ದ ಚಿತ್ರಗಳ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023
ದಿನಾಂಕ : 16-11-2023, ಗುರುವಾರ, ಬೆಳಗ್ಗೆ 11.00 ಘಂಟೆ
ಸ್ಥಳ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಆವರಣ, ಶಿರಸಿ
70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023
ದಿನಾಂಕ : 16-11-2023, ಗುರುವಾರ, ಬೆಳಗ್ಗೆ 11.00 ಘಂಟೆ
ಸ್ಥಳ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಆವರಣ, ಶಿರಸಿ
14-11-23 ದೀಪಾವಳಿ ಹಬ್ಬದ ನಿಮಿತ್ತ ಕುಮಟಾ ಪಟ್ಟಣದ ವಿವಿಧೆಡೆ ಕಂಡುಬಂದ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರ ಗಮನ ಸೆಳೆಯಿತು.
14-11-23 ಪುತ್ರನ ಸಾವಿನ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಸೇರಿ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ.
14-11-23 ಕರಾವಳಿ ಪ್ರದೇಶದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಭಿನ್ನವಾದ ವಿಶೇಷತೆಗಳಿವೆ. ಅದರಂತೆ ದೀಪಾವಳಿ ಹಬ್ಬದಲ್ಲಿಯೂ ಹಲವು ವಿಶೇಷತೆಗಳಿವೆ. ದೀಪಾವಳಿಯ ಬಲಿಪಾಡ್ಯಮಿಯ ದಿನ ಅಂಕೋಲಾ ತಾಲೂಕಿನ ಕ್ಷತ್ರೀಯ ಕೋಮಾರಪಂಥ ಸಮಾಜದಿಂದ ವಿಶಿಷ್ಟವಾದ ಹೊಂಡೆಯಾಟ ನಡೆಯಿತು.