*29 ರಂದು ಕುಮಟಾದಲ್ಲಿ ಚಿಂತನ ಮಂಥನ ಸಭೆ*
ಕುಮಟಾ: ನಗರದ ಬಗ್ಗೋಣದಲ್ಲಿನ ಕೆನರಾ ಹೆಲ್ತ್ ಸೆಂಟರ್ ಸಮೀಪದ ಲಯನ್ಸ್ ಹಾಲ್ ನಲ್ಲಿ ನ.29 ರಂದು ಸಾಯಂಕಾಲ 5 ಕ್ಕೆ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಆಸಕ್ತರು ಪಾಲ್ಗೊಂಡು ತಮ್ಮ ಸಲಹೆ, ಸೂಚನೆ ನೀಡಬಹುದಾಗಿದೆ. ತುರ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಜನ ಪಕ್ಕದ ಪಣಜಿ, ಮಂಗಳೂರು, ಶಿವಮೊಗ್ಗ ಇಲ್ಲವೇ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆ ಎದುರಾಗಿ ದಶಕಗಳೇ ಸಂದಿವೆ. ಜಿಲ್ಲೆಯ ಮಧ್ಯವರ್ತಿ ಸ್ಥಳ ಎಂದೇ ಕರೆಯಲ್ಪಡುವ ಕುಮಟಾದಲ್ಲಿ ಸರಕಾರದ 11 ಎಕರೆ ಜಾಗವೂ ಇದೆ. ಆದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಾನಾ ಕಾರಣಗಳಿಂದ ಆಗುತ್ತಿಲ್ಲ. ಇನ್ನೂ ಹೀಗೆ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಗಣ್ಯರು, ಮುಖಂಡರು, ಚಿಂತಕರು ಒಂದೆಡೆ ಸೇರಿ ಹೂಡಿಕೆದಾರರನ್ನು ಸಂಪರ್ಕಿಸಿ ಮತ್ತು ಸಿಎಸ್ ಆರ್ ಫಂಡ್ ಮೂಲಕ ಸರಕಾರದ ದಾರಿ ಕಾಯುತ್ತಾ ಕೂರದೇ ಪರ್
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿ ತಾಲೂಕಿನ ಕುಳವೆ ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಜಿಲ್ಲೆಯ ಅಭಿವೃದ್ಧಿಯೇ ನನ್ನ ಮಂತ್ರ.ಕಾಂಗ್ರೆಸ್ ಈ ಚುನಾವಣೆಯಲ್ಲಿ ಹತಾಶಗೊಂಡಿದ್ದು ಗೆಲ್ಲಲು ಅನ್ಯಮಾರ್ಗ ಹಿಡಿದಿದೆ ಎಂದರು.
ಮಹಾ ಶಿವರಾತ್ರಿಯ ಶುಭ ಪರ್ವದಂದು ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈ ಫೈ -೭ ಸೇವೆಯನ್ನು ಸಂಸದ ಅನಂತಕುಮಾರ ಹೆಗಡೆ ಅವರು ಲೋಕಾರ್ಪಣೆ ಮಾಡಿದರು.
ಕುಮಟಾ ಜಾತ್ರಾ ಪ್ರಯುಕ್ತ ಕಲಾ ಗಂಗೋತ್ರಿ ಸಂಯೋಜನೆಯಲ್ಲಿ ಪೆರ್ಡೂರು ಮೇಳದಿಂದ ನಡೆದ
"ಹನುಮ ಸಂಜೀವಿನಿ" ಹಾಗೂ " ಪವಿತ್ರ ಪದ್ಮಿನಿ" ಯಕ್ಷಗಾನದಲ್ಲಿ ನೂರು ಅಡಿಗಳ ಮೇಲಿಂದ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ವೇದಿಕೆಗೆ ಇಳಿದು ಬರುವ ಆಕರ್ಷಕ ಸನ್ನಿವೇಶ : ಹನುಮನಾಗಿ ಕಲಾವಿದ ಗಣೇಶ ಭಟ್ಟ ಬಗ್ಗೋಣ
ಚಿತ್ರಗಿಯ ವಿಷ್ಣುತೀರ್ಥದಲ್ಲಿ ನಡೆದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಮನಭೋಜನ ಕಾರ್ಯಕ್ರಮದಲ್ಲಿ ಕುಮಟಾದ ಶಕ್ತಿ ದೇವತೆಗಳ ಆರಾಧನೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ , ನಾಡೋಜ ಸುಕ್ರಿ ಬೊಮ್ಮ ಗೌಡರವರು ಅನಂತ ಮೂರ್ತಿ ಹೆಗಡೆಯವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಪಾದಯಾತ್ರೆಗೆ ಬೆಂಬಲ
ಸೂಚಿಸಿದರು.
ಇದು ಒಳ್ಳೆಯ ಕಾರ್ಯ, ಮಾರ್ಗ ಮಧ್ಯೆ ಅಂಕೋಲಾ ದಲ್ಲೀ ತಾವೂ ಕೂಡ ಭಾಗ ವಹಿಸುವುದಾಗಿ ತಿಳಿಸಿದರು. ತಮಗೂ ಕೂಡ ಆರೋಗ್ಯ ಸರಿಯಿಲ್ಲ, ಸ್ವಲ್ಪ ದಿನದ ಹಿಂದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುವ ಅನಿವಾರ್ಯತೆ ಉಂಟಾಯಿತು. ನಮ್ಮ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲೇ ಬೇಕು ಎಂದು ಪ್ರತಿಪಾದಿಸಿದರು.