SLJ TV

SLJ TV SLJTV KANNADA
(1)

07/11/2024
ದಿನಾಂಕ  07-11-2024 ರಂದು ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು  ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ...
07/11/2024

ದಿನಾಂಕ 07-11-2024 ರಂದು ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಹೀರೆಮಲ್ಲೂರ.ಚಾವಡಲ.ಬದ್ನಿ ಗ್ರಾಮಗಳಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆಗಳನ್ನು ಹಮ್ಮಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಯಾಸೀರ್ ಖಾನ್ ‌ಪಠಾಣ್ ಅವರನ್ನು ಗೆಲ್ಲಿಸಲು ಮನವಿ ಮಾಡಿದರು
ಈ ವೇಳೆ ವಿವಿಧ ಸಮುದಾಯಗಳ ಮುಖಂಡರು ಜೊತೆಗೆ ಚರ್ಚೆ ನಡೆಸಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲು ಮನವಿ ಮಾಡಿದರು

ಮೂಡಲಗಿ: ರೈತರು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡುವ ಮೂಲಕ ನೇರ ಮಾರುಕಟ್ಟೆ ಒದಗಿಸುವ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರಕಾರವು 750 ರೈತ ಉತ್ಪ...
07/11/2024

ಮೂಡಲಗಿ: ರೈತರು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡುವ ಮೂಲಕ ನೇರ ಮಾರುಕಟ್ಟೆ ಒದಗಿಸುವ ಹಿನ್ನಲೆಯಲ್ಲಿ ರಾಜ್ಯದ ಬಿಜೆಪಿ ಸರಕಾರವು 750 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಒಟ್ಟು ರೂ 225 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಂಗ್ರೇಸ್ ಸರ್ಕಾರ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಬಿಡಿಗಾಸನ್ನು ಬಿಡುಗಡೆ ಮಾಡದೇ ಈ ರೈತ ಉತ್ಪಾದಕ ಸಂಸ್ಥೆಯ ಆಶೆಯಗಳಿಗೆ ತೀಲಾಂಜಲಿ ನೀಡಿದೆ. ಇದು ಕಾಂಗ್ರೇಸ್ ಸರ್ಕಾರದ ರೈತ ವಿರೋಧಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನ-07 ರಂದು ಹಳ್ಳೂರ ಗ್ರಾಮದ ಹಳ್ಳೂರ ರೈತ ಉತ್ಪಾದಕ ಕಂಪನಿಯ ಅನ್ನದಾತ ಅರಶಿನ ಪುಡಿ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಅರಶಿನ ಪುಡಿ ಘಟಕ ನಿರ್ಮಾಣಕ್ಕೆ ಆಯ್.ಸಿ.ಆಯ್.ಸಿ ಬ್ಯಾಂಕ್ ಸುಮಾರು 20 ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವ ಮೂಲಕ ಈ ಭಾಗದ ರೈತರ ನೆರವಿಗೆ ಬಂದಿರುವುದು ಅತ್ಯಂತ ಶ್ಲಾಘನೀಯ ಕಾರ್ಯವೆಂದು ಕೊಂಡಾಡಿದರು.
ಇದುವರೆಗೆ ರೈತ ತಾನು ಬೆಳೆದ ಫಸಲಿಗೆ ಒಂದು ನೂರು ರೂಪಾಯಿ ಬೆಲೆ ಬಂದರೆ ಅದರಲ್ಲಿ ಕೇವಲ 30 ರೂಪಾಯಿ ಮಾತ್ರ ರೈತನಿಗೆ ಸಿಗುತ್ತದೆ. ಉಳಿದ 70 ರೂಪಾಯಿ ಮಧ್ಯವರ್ತಿಗಳ ಪಾಲಾಗುತ್ತಿತ್ತು ಅದನ್ನು ಹೋಗಲಾಡಿಸುವ ಹಿನ್ನಲೆಯಲ್ಲಿ ರೈತ ತಾನು ಬೆಳೆದ ಫಸಲನ್ನು ಮೌಲ್ಯವರ್ಧನೆ ಮಾಡುವ ಮೂಲಕ ಉದ್ಯಮಿಯಾಗಬೇಕು ಜೊತೆಗೆ ವ್ಯಾಪಾರಿಯಾಗಬೇಕು ಹಾಗಾದಾಗ ಮಾತ್ರ ರೈತನು ಬೆಳೆದ ಫಸಲಿಗೆ ಯೋಗ್ಯ ಬೆಲೆ ಸಿಗಬಹುದು. ಇದು ರೈತ ಉತ್ಪಾದಕ ಸಂಸ್ಥೆಗಳನ್ನು ಕಟ್ಟಿಬೆಳೆಸುವುದರಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ನೋಂದಣಿಯಾದ ರೈತರಿಂದ ಷೇರುಗಳನ್ನು ಸಂಗ್ರಹಿಸಿ, ಸಂಘದ ಸದಸ್ಯರಿಗೆ ನೇರ ಮಾರುಕಟ್ಟೆ ಸೌಲಭ್ಯಗಳ ಬೆಂಬಲ ನೀಡುವುದು, ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಸೂಕ್ತ ಬೆಲೆ ದೊರಕಿಸಿಕೊಡಲು ಇಂತಹ ರೈತ ಉತ್ಪಾದಕ ಸಂಸ್ಥೆಗಳನ್ನು ಇಡಿ ರಾಜ್ಯದಾದ್ಯಂತ ಬೆಳೆಸಿ, ಉಳಿಸಬೇಕಾಗಿದೆ ಆ ಮೂಲಕ ರೈತರ ಆದಾಯ ದ್ವಿಗುಣ ಮಾಡಲು ಇದು ಒಂದು ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಡವಾಡ ವಿರಕ್ತಮಠದ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀಕಾಂತ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಎಫ.ಪಿ.ಓ ಸಿಇಓ ಮಂಜುನಾಥ ಬೆಳಗಲಿ ಸ್ವಾಗತಿಸಿದರು, ಮುರಿಗೆಪ್ಪ ಮಾಲಗಾರ ಕಾರ್ಯಕ್ರಮ ನಿರೂಪಿಸಿದರು ಮಹಾಂತೇಶ ಗಿರೆಣ್ಣವರ ವಂದಿಸಿದರು.
ಮಲ್ಲನಗೌಡ ಪಾಟೀಲ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಜನಮಟ್ಟಿ, ಆಯ್.ಸಿ.ಆಯ್.ಸಿ ಬ್ಯಾಂಕ್ ಮ್ಯಾನೇಜರ ರೋಹಿತ ರೆಡ್ಡಿ, ಪ್ರೋಜೆಕ್ಟ ಅಧಿಕಾರಿ ರಾಜೇಸಾಬ ಶಿಕಾರಿ, ಪಿ.ಡಿಒ ರಂಗಣ್ಣ ಗುಜನಟ್ಟಿ, ಗ್ರಾಮ ಪಂಚಾಯತ ಸದಸ್ಯ ಬಸವರಾಜ ಲೋಕನ್ನವರ, ಮಹಾದೇವ ಮಸರಗುಪ್ಪಿ, ಹಣಮಂತ ಗೋಡಿಗೌಡರ, ಪರಮಾನಂದ ಶೇಡಬಾಳಕರ, ಈರಣ್ಣ ಕೌಜಲಗಿ, ಬಾಬು ಅಂಗಡಿ, ಶ್ರೀಶೈಲ ಕೌಜಲಗಿ, ಸದಾಶಿವ ಮಾವರಕರ ಪ್ರಗತಿ ರೈತರಾದ ದುಂಡಪ್ಪ ಕೊಂಗಾಲಿ, ಶಂಕರ ಅಂಗಡಿ, ಸೇರಿದಂತೆ ಸಂಸ್ಥೆಯ ನಿದೇರ್ಶಕರು, ಸ್ಥಳೀಯ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

ಹಿಡಕಲ್ ಡ್ಯಾಮ್ ಎಂಬ ಹೆಸರು ಅಲ್ಲಿನ ಜನರ ಒಂದು ಉಸಿರುಈ ಉಸಿರನ್ನು  ಕಾಪಾಡಿಕೊಳ್ಳಲು ಅಲ್ಲಿ ಜನರ ಸಮಾಜ ಸೇವಕರಾಗಿ ಹಾಗೂ ಬಡವರ ಪಾಲಿನ ಬಂಧುವಾಗಿ ...
07/11/2024

ಹಿಡಕಲ್ ಡ್ಯಾಮ್ ಎಂಬ ಹೆಸರು ಅಲ್ಲಿನ ಜನರ ಒಂದು ಉಸಿರು

ಈ ಉಸಿರನ್ನು ಕಾಪಾಡಿಕೊಳ್ಳಲು ಅಲ್ಲಿ ಜನರ ಸಮಾಜ ಸೇವಕರಾಗಿ ಹಾಗೂ ಬಡವರ ಪಾಲಿನ ಬಂಧುವಾಗಿ ನಿಂತಿದ್ದಾರೆ ನಮ್ಮೆಲ್ಲರ ನೆಚ್ಚಿನ ಶ್ರೀ ಚಂದ್ರಶೇಖರ ಭೀಮಪ್ಪ ಗಣಾಚಾರಿ ರವರು ವಯಸ್ಸು 68 ಆದರೂ
ಚಲ ಬಿಡದೆ ನಮ್ಮ ಊರು ನಮ್ಮ ಹೆಮ್ಮೆ ಎನ್ನುತ್ತಾ ಹಿಡಕಲ್ ಡ್ಯಾಮ್ ನ ಬಗ್ಗೆ ಚಿಂತಿಸುತ್ತಾ ಜನರಿಗೆ ಸಹಾಯ ಮಾಡುತ್ತಿರುವ ಈ ಹಿರಿಯ ವ್ಯಕ್ತಿ ಗೆ ಒಂದು ಸಲಾಂ

ಇವರು ಗ್ರಾಮ್ ಪಂಚಾಯತ್ ಸದಸ್ಯರು ಅಲ್ಲ ಯಾವ ಸದಸ್ಯರು ಅಲ್ಲ ಆದ್ರೂ ಊರಿನ ಅಭಿಮಾನಿ

ಸಮಸ್ತ ಜನತೆಯ ಪರವಾಗಿ ಹಾಗೂ ಇವರಿಗೆ ನಮ್ಮ ಕೆಡೆಯಿಂದ ತುಂಬು ಹೃದಯದ ಧನ್ಯವಾದಗಳು.... 💐💐💐💐

07/11/2024

I am God, God is great’ - ತಮಗೆ ತಾವೇ ಪೂಜೆ ಮಾಡಿಕೊಂಡು, ಟ್ರೋಲ್ ಆದ ಚೈತ್ರಾ ಕುಂದಾಪುರ!
Bigg Boss Kannada 11 Week 6: ‘ದೇವರ ಮುಂದೆ ನಿಂತು ತಮಗೆ ತಾವೇ ಪೂಜೆ ಮಾಡಿಕೊಳ್ಳುವ ಪದ್ಧತಿ ಇದ್ಯಾ?’ - ಹೀಗಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ.. ‘ಬಿಗ್ ಬಾಸ್’ ಮನೆಯಲ್ಲಿ ಚೈತ್ರಾ ಕುಂದಾಪುರ ತಮಗೆ ತಾವೇ ಪೂಜೆ ಮಾಡಿಕೊಂಡಿದ್ದು!

‘ಬಿಗ್ ಬಾಸ್’ ಮನೆಯಲ್ಲಿ ತಮಗೆ ತಾವೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರ ಪೂಜೆ ಕಂಡು ‘ಐ ಆಮ್ ಗಾಡ್‌, ಗಾಡ್ ಈಸ್ ಗ್ರೇಟ್‌’ ಎಂದ ವೀಕ್ಷಕರು!
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದ್ದಾರೆ ಚೈತ್ರಾ ಕುಂದಾಪುರ

‘I am God, God is great’ - ತಮಗೆ ತಾವೇ ಪೂಜೆ ಮಾಡಿಕೊಂಡು, ಟ್ರೋಲ್ ಆದ ಚೈತ್ರಾ ಕುಂದಾಪುರ!

ಬಿಜೆಪಿ, ಹಿಂದೂ ಪರ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಆಗಾಗ ಧ್ಯಾನ, ಪೂಜೆ ಮಾಡುವ ಚೈತ್ರಾ ಕುಂದಾಪುರ ಬುಧವಾರದ ಸಂಚಿಕೆಯಲ್ಲಿ (ನವೆಂಬರ್‌ 6) ಎಲ್ಲರ ಕಣ್ಣರಳಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿರುವ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದಾರೆ ಚೈತ್ರಾ ಕುಂದಾಪುರ. ಇದನ್ನ ಕಂಡ ಶಿಶಿರ್‌ ಶಾಸ್ತ್ರಿ ಅಕ್ಷರಶಃ ನಿಬ್ಬೆರಗಾಗಿದ್ದಕೃಪೆ)

(ಕಲರ್ಸ ಕನ್ನಡ ಕೃಪೆ

07/11/2024

ಏನ್ರೀ ಮಾಧ್ಯಮ???

ಇದು ಮಾದ್ಯಮಗಳ ಶಕ್ತಿ. ಇವರು ಬಯಸಿದರೆ ಟ್ರಂಪ್ ಕನ್ನಡಿಗ ಆಗಬಹುದು ಇದು ಮಿಡಿಯಾ ಪವರ್

Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿಕಬ್ಬು ಕಟಾವು ಕಾರ್ಯವನ್ನು ಈ ಹಂಗಾಮಿನಲ್ಲಿ ಏಳು ದಿನಗಳ ಮು...
07/11/2024

Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ

ಕಬ್ಬು ಕಟಾವು ಕಾರ್ಯವನ್ನು ಈ ಹಂಗಾಮಿನಲ್ಲಿ ಏಳು ದಿನಗಳ ಮುಂಚೆ ಆರಂಭಿಸಲು ನಿರ್ಧರಿಸಿದ್ದು, ನ.8 ರಿಂದ ಕಟಾವು ಕಾರ್ಯ ಆರಂಭವಾಗಲಿದೆ. ಈ ಹಿಂದೆ ನ.15 ಕಟಾವಿಗೆ ದಿನ ನಿಗದಿ ಮಾಡಲಾಗಿತ್ತು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳಿನಿಂದ ಕಟಾವು ನಡೆಯುತ್ತಿದೆ. ನ.8 ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸಲಿದೆ. ಆದರೆ ಇಲ್ಲಿನ ರೈತರು ಹಾಗೂ ಕಾರ್ಖಾನೆ ಮಾಲೀಕರು ಕಟಾವು ಆರಂಭಿಸಲು ಮನವಿ ಮಾಡಿದ ಮೇರೆಗೆ ನಿಗದಿ ಪೂರ್ವದಲ್ಲೇ ಕಟಾವು ಆರಂಭಿಸಲಾಗುತ್ತಿದೆ. ಹಿಂದಿನ ವರ್ಷ 3150 ರೂ ಪ್ರತಿ ಟನ್ ಬೆಂಬಲ ಬೆಲೆಯಿತ್ತು. ಈ ವರ್ಷ 3400ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಏಕಕಾಲಕ್ಕೆ ಕಟಾವು ಆರಂಭವಾಗುತ್ತಿತ್ತು. ಈ ಬಾರಿ ದಿನಾಂಕ ಬದಲು ಮಾಡಿದ ಕಾರಣ ಮಹಾರಾಷ್ಟ್ರ ಸರಕಾರಕ್ಕೂ ನಾವು ನಿಗದಿ ಮಾಡಿದ ದಿನದ ಬಗ್ಗೆ ಮನವಿ ಮಾಡಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಅವರು ದಿನ ಬದಲು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯಾದ್ಯಂತ 80 ಕಾರ್ಖಾನೆಗಳು ಕಬ್ಬು ಅರೆಯಲಿವೆ ಎಂದರು.

07/11/2024

"ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ
ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಒತ್ತಾಯ, ಮಾನವ ಸರಪಳಿ ನಿರ್ಮಿಸಿ ಸಚಿವೆ ಲಕ್ಷ್ಮೀ ವಿರುದ್ಧ ಗುಡುಗಿದ ಬಿಜೆಪಿ ಕಾರ್ಯಕರ್ತರು

ಬೆಳಗಾವಿ: ಸರ್ಕಾರಿ ನೌಕರ ರುದ್ರೇಶ್ ಆತ್ಮಹತ್ಯೆ ಖಂಡನೀಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಹೆಬ್ಬಾಳಕರ್‌ ವಿರುದ್ಧ ಗುಡುಗಿದರು. ಬಳಿಕ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸೋಮು ಮೇಲೆ ಆರೋಪ ಬಂದಿದೆ ಸರ್ಕಾರ ಶೀಘ್ರವೇ ಲಕ್ಷ್ಮೀ ಹೆಬ್ಬಾಳ್ಕರ್ ಸಂಪುಣದಿಂದ ಕೈ ಬೀಡಬೇಕು. ಈ ಪ್ರಕರಣ ಸರ್ಕಾರಕ್ಕೆ ಗಂಭೀರವಾಗಿ ಪರಿಗಣಿಸಿ ಸಿಬಿಐ ವಹಿಸಿ ರುದ್ರೇಶ್ ಸಾವಿಗೆ ಸರ್ಕಾರ ನ್ಯಾಯ ಕೋಡಿಸಬೇಕು ಒತ್ತಾಯಿಸಿದರು."

"ಸಚಿವೆ ಲಕ್ಷ್ಮೀ ರಾಜೀನಾಮೆ ನೀಡುವರೆಗೂ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಎಸ್ ಡಿಎ ನೌಕರ ರುದ್ರೇಶ್ ಯರಗಣ್ಣವರ ತನಿಖೆಯನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ. ಕುಟುಂಬಸ್ಥರು ಹೆಬ್ಬಾಳಕರ್‌ ಹೆಸರಿನಲ್ಲಿ ಕಣ್ಣೀರಿನ ಕೈ ತೊಳೆಯುತ್ತಿದೆ ಆ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗಬೇಕಿದೆ. ಆತ್ಮಹತ್ಯೆ ಆಗಿ ಮೂರು ದಿನಗಳೂ ಕಳೆದರೂ ಪೊಲೀಸ್‌ ರು ಆರೋಪಿಗಳನ್ನು ಬಂಧಿಸಿಲ್ಲ, ತಕ್ಷಣವೇ ಬಂಧಿಸಿ ನಿಜಾಂಶ ಕಕ್ಕಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ನೌಕರ ರುದ್ರೇಶ್ ಯರಗಣ್ಣನವರ ಆತ್ಮಹತ್ಯೆ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸೋಮು ಹೆಸರು ತಳುಕು ಹಾಕಿಕೊಂಡಿದೆ. ಮೃತ ವ್ಯಕ್ತಿ ಕೂಡ ಆತನ ಹೆಸರು ಉಲ್ಲೇಖ ಮಾಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಸಾವಿನ ಜೊತೆ ಚೆಲ್ಲಾಟ ಆಡುತ್ತಿದೆ, ಕೂಡಲೇ ಲಕ್ಷ್ಮೀ ರಾಜೀನಾಮೆ ಕೊಡಬೇಕು. ಇಲ್ಲವಾದರೂ ಇಲ್ಲಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ರುದ್ರೇಶ್ ಯರಗಣ್ಣವರ ಆತ್ಮಹತ್ಯೆಯ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಪಾರದರ್ಶಕವಾದ ತನಿಖೆ ನಡೆಸಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.

ಸಾಕ್ಷ್ಯಗಳ ನಾಶ ಮಾಡಿ ಪ್ರಕರಣದ ದಿಕ್ಕು ತಪ್ಪಿಸುವ ಯತ್ನದಲ್ಲಿರುವ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರನ್ನು ಸಂಪುಟದಿಂದ ವಜಾಗೊಳಿಸಲು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು"
"ಮಾಜಿ ಶಾಸಕ ಸಂಜಯ ಪಾಟೀಲ್ ಮಾತನಾಡಿ, ರುದ್ರೇಶ್ ಆತ್ಮಹತ್ಯೆಯಾಗಿ ಮೂರು ದಿನ ಕಳೆದಿದೆ. ರುದ್ರೇಶ್ ಲಿಂಗಾಯತ ಸಮಾಜದವರು, ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಮಂಚೂಣಿಯಲ್ಲಿದ್ದರು. ಪ್ರಭಾವಿ‌ ಸಚಿವರು. ಎರಡೂ ದಿನ ಯಾಕೆ ಮೌನವಾಗಿದ್ದರು ಹೆಬ್ಬಾಳ್ಕರ್ ಎಂದು ಪ್ರಶ್ನಿಸಿದರು.
ಎರಡೂ‌ ದಿನದಲ್ಲಿ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡು ಸಾಕ್ಷಿ ನಾಶಪಡಿಸುವ ಕೆಲಸವನ್ನು ಮಾಡಿದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರುದ್ರೇಶ್ ಗೆ ನ್ಯಾಯ ಸಿಗಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ಇದು ದೊಡ್ಡ ಹಾಸ್ಯಾಸ್ಪದ ಎಂದರು.
ರುದ್ರೇಶ್ ಮೊಬೈಲ್ ಕಾಣೆಯಾಗಿದೆ. ಹೆಬ್ಬಾಳ್ಕರ್ ಗೆ ಅಧಿಕಾರ ಆಸೆ ಇಲ್ಲದೆ ಇದ್ದರೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ಹೆಬ್ಬಾಳ್ಕರ್ ಎರಡೂ ದಿನ ಮೌನವಿದ್ದಿದ್ದು ಯಾಕೆ ? ಸರಕಾರದ ಕಡೆಯಿಂದ ರುದ್ರೇಶ್ ಆತ್ಮಹತ್ಯೆಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ರುದ್ರಣ್ಣ ತಹಶಿಲ್ದಾರ ಕಚೇರಿಗೆ ಹೋಗಿ ಅವರ ಕಚೇರಿಯ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡರು. ಆರೋಪಿಗಳನ್ನು ಇಲ್ಲಿಯವರೆಗೂ ‌ಪೊಲೀಸರು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅರವಿಂದ ಪಾಟೀಲ್, ಬಿಜೆಪಿ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ್, ರುದ್ರಣ್ಣ ಚಂದರಗಿ, ಡಾ. ಸೋನಾಲಿ ಸರ್ನೋಬತ್, ಸವಿತಾ ಗುಡ್ಡಕಾಯು, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ, ಶಂಕರ ಮಾಡಲಗಿ, ನ್ಯಾಯವಾದಿ ವಿನೋದ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು."

*ಅಡಿಬಟ್ಟಿ* (ತಾ.ಗೋಕಾಕ)- ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಡಿಬಟ್ಟಿ ಮುಖ್ಯರಸ್ತೆಯಿಂದ ವಿಠ್ಠಪ್ಪ ಗುಡ...
07/11/2024

*ಅಡಿಬಟ್ಟಿ* (ತಾ.ಗೋಕಾಕ)-
ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಡಿಬಟ್ಟಿ ಮುಖ್ಯರಸ್ತೆಯಿಂದ ವಿಠ್ಠಪ್ಪ ಗುಡಿಯವರೆಗೆ ರಸ್ತೆಯನ್ನು
ಅಭಿವೃದ್ಧಿಪಡಿಸಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು.
ಇತ್ತೀಚೆಗೆ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ ವಿಠ್ಠಪ್ಪನ ದೇವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಠ್ಠಪ್ಪ ದೇವಸ್ಥಾನ ( ಬಸಳಿಗುಂದಿ ಮನೆಯಿಂದ ಪೂಜೇರಿ ಮನೆತನಕ) ದ ರಸ್ತೆಯನ್ನು ಸುಧಾರಿಸಲಾಗುವುದು ಎಂದು ತಿಳಿಸಿದರು.
ದಂಡಿನ ಮಾರ್ಗದ ರಸ್ತೆಯಲ್ಲಿರುವ ಅಡಿಬಟ್ಟಿ ಗ್ರಾಮಸ್ಥರು ಮೊದಲಿನಿಂದಲೂ ವಿಶ್ವಾಸವನ್ನಿಟ್ಟುಕೊಂಡು ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ಪ್ರತಿಯೊಂದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುತ್ತ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸುತ್ತ ಬರುತ್ತಿದ್ದಾರೆ. ಆದ್ದರಿಂದ ಗ್ರಾಮಸ್ಥರಿಗೆ ಸದಾ ಋಣಿಯಾಗಿರುವುದಾಗಿ ಅವರು ತಿಳಿಸಿದರು.
ಜಾತ್ರೆಗಳು ನಮ್ಮ
ಸಂಸ್ಕೃತಿಗಳನ್ನು ಬಿಂಬಿಸುತ್ತಿವೆ. ಜಾತ್ಯಾತೀತ ಮನೋಭಾವನೆಗೆ ಇಂತಹ ಜಾತ್ರೆಗಳು ಸಾಕ್ಷಿಯಾಗಿವೆ. ಎಲ್ಲ ಜಾತಿಯವರು ಕೂಡಿಕೊಂಡು ಜಾತ್ರೆಗಳನ್ನು ಮಾಡುವುದು ಈ ಮೂಲಕ ನಮ್ಮ ಆಚಾರ- ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಹಿರಿಯರು ಎಲ್ಲರನ್ನೂ ಒಗ್ಗೂಡಿಸುತ್ತಿರುವ ಕಾರ್ಯವು ಪ್ರಶಂಸನೀಯ ಎಂದು ಅವರು ಹೇಳಿದರು. ಜಾತ್ರೆಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟು ತನು,ಮನ,ಧನ ಸೇವೆ ಸಲ್ಲಿಸಿರುವ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಕಮೀಟಿಯವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಮೆಳವಂಕಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಯಲ್ಲವ್ವ ಶಿಂತ್ರಿ, ಶಿವಾನಂದ ಬಸಳಿಗುಂದಿ, ಕೆಂಚಪ್ಪ ಶಿಂತ್ರಿ, ನಿಂಗಪ್ಪ ಶಿಂತ್ರಿ, ಅಡಿವೆಪ್ಪ ಕಂಕಾಳಿ, ಡಾ. ಅಡಿವೆಪ್ಪ ಭಂಗಿ, ವಿಠ್ಠಪ್ಪ ಬಸಳಿಗುಂದಿ, ನಾಗಪ್ಪ ಕಾಪಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

07/11/2024

#ವಿಜಯಪೂರ

07/11/2024

ಚಲಿಸುವ ಸ್ಕೂಟಿಯಲ್ಲಿ ಕುಳಿತು ಹೋಂವರ್ಕ್‌ ಮಾಡಿದ ಬಾಲಕ; ವಿಡಿಯೋ Viral.!

07/11/2024

ಶ್ರೀ ಡಾ!! ರಾಜೇಂದ್ರ ಸಣ್ಣಕ್ಕಿ ಕುರುಬ ಸಮಾಜದ ಮಾಜಿ ರಾಜ್ಯ ಅಧ್ಯಕ್ಷರು ಪ್ರಹ್ಲಾದ ಜೋಶಿ ಅವರ ಬಗ್ಗೆ ಏನು ಹೇಳಿದರು. #ಬೆಳಗಾವಿ #ಸಿದ್ದರಾಮಯ್ಯ #ಕುರಬ #ಸಮಾಜ #ಕುರಬಸಮಾಜ

"ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಖಂಡನೀಯ: ಡಾ. ರಾಜೇಂದ್ರ ಸಣ್ಣಕ್ಕಿ
"

ಗೋಕಾಕ: ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಕಾಂಗ್ರೆಸ್‌ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಖಂಡನೀಯ ಎಂದು ಕುರುಬ ಸಮಾಜದ ಮಾಜಿ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸರು ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಪಕ್ಷದ ಅಧಿಕಾರಿಗಳೆಂದು ಇವತ್ತಿನವರೆಗೂ ತಿಳಿದುಕೊಂಡಿಲ್ಲ ಎಂದು ಹೇಳಿದರು.
ಜೋಶಿಗಿದೆ ದುಷ್ಟ ಬುದ್ದಿ: ಬಿಜೆಪಿಯ ಹಿರಿಯ ರಾಜಕಾರಣಿ ಹಾಗೂ ಕೇಂದ್ರ ಸಚಿವರಾಗಿ ಪ್ರಹ್ಲಾದ ಜೋಶಿ ಅವರು ಅಧಿಕಾರಿಗಳನ್ನು ಪಕ್ಷಕ್ಕೆ ಸೀಮಿತಗೊಳಿಸುವ ಕಾರ್ಯ ಮಾಡುತ್ತಿರುವ ಇವರ ದುಷ್ಟ ಬುದ್ದಿಯನ್ನು ನಾನು ಖಂಡಿಸುತ್ತೇನೆಂದ ಅವರು, ಮುಡಾ ಹಗರಣವನ್ನು ಸಿಬಿಐಗೆ ಕೋಡಬೇಕೆಂದು ಬೇಡಿಕೆ ಇಡುತ್ತಿದ್ದಿರಿ, ಇದರಲ್ಲಿ ನಿಮ್ಮದು ಹುನ್ನಾರ ಅಡಗಿದೆ ಎಂಬ ಸಂಶಯ ಎಲ್ಲರಿಗೂ ಕಂಡು ಬರುತ್ತಿದೆ. ಸಿಬಿಐ ಕೇಂದ್ರ ಸರ್ಕಾರ ಅದಿನದಲ್ಲಿ ಕೆಲಸ ಮಾಡುತ್ತಿದ್ದು, ಇದರ ದುರ್ಬಳಕೆ ಮಾಡಿಬೇಕೆಂಬ ನಿಮ್ಮ ದುರ್ಬದ್ದಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಜೋಶಿಗಿಲ್ಲ ಸಾಮಾನ್ಯ ಜ್ಞಾನ: ಲೋಕಾಯುಕ್ತ ಪೊಲೀಸರು ಕಾಂಗ್ರೆಸ್‌ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡುವ ಜೋಶಿ ಅವರೇ ನೀವು ಕೂಡಾ ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಏಕೆ ಒತ್ತಾಯ ಮಾಡುತ್ತಿದ್ದಿರಿ ಎಂದು ನಮಗೂ ಗೊತ್ತಿದೆ. ಕೇಂದ್ರ ಸರ್ಕಾರದ ಅದಿನದಲ್ಲಿ ಕೆಲಸ ಮಾಡುವ ಸಿಬಿಐ ಇಲಾಖೆಯಲ್ಲಿ ಬಿಜೆಪಿ ಏಜೆಂಟರನ್ನು ಬಿಟ್ಟು ಮುಡಾ ಹಗರಣದಲ್ಲಿ ಸಿಎಂ ಅವರನ್ನು ಜಾಲದಲ್ಲಿ ಸಿಕ್ಕಿಸುವ ತಂತ್ರವನ್ನು ಮಾಡುತ್ತಿದ್ದಿರಿ. ಇದು ನಿಮ್ಮ ದುಷ್ಟ ಬುದ್ದಿ. ಈ ವಿಚಾರ ನಮಗೆನೂ ತಿಳಿದಿಲ್ಲ ಎಂದುಕೊಳ್ಳಬೇಡಿ. ಅಧಿಕಾರಿಗಳನ್ನು ಪಕ್ಷಕ್ಕೆ ಹೋಲಿಸುವ ಕೇಂದ್ರ ಸಚಿವ ಜೋಶಿ ಅವರಿಗೆ ಒಂದು ಸಾಮಾನ್ಯ ಜ್ಞಾನವು ಇಲ್ಲ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಭಾವನಾತ್ಮಕವಾಗಿ ಬಳಕೆ ಮಾಡಿದ ಜೋಶಿ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ಒಂದು ದುಷ್ಟ ಕೆಲಸದಲ್ಲಿ ನೀವು ಭಾವನಾತ್ಮಕವಾಗಿ ಬಳಕೆ ಮಾಡಿ ಗೆದ್ದು ಬಂದಿದ್ದಿರಿ ಅಷ್ಟೆ. ಇಲ್ಲದಿದ್ದರೆ ಒಂದು ಲಕ್ಷ ಅಂತರದಿಂದ ಸೋತು ಸುಣ್ಣವಾಗುತ್ತಿದ್ದಿರಿ. ಇದನ್ನು ನೀವು ಮೊದಲು ಅರ್ಥಮಾಡಿಕೋಳ್ಳಬೇಕು ಎಂದು ಮಾತಿನ ಮೂಲಕ ತಿವಿದರು.
ಹಣ ತಿಂದ ಜೋಶಿ ಸಹೋದರ: ನಿಮ್ಮ ಸಹೋದರ ಹಣ ತೆಗೆದುಕೊಂಡ ಹಗರಣದಲ್ಲಿ ಸಿಲುಕಿಕೊಂಡಾಗ ನಮ್ಮ ಸಹೋದರ ನಮ್ಮ ಸಂಪರ್ಕಕ್ಕೆ ಇಲ್ಲ. ಕಳೆದ 40 ವರ್ಷಗಳಿಂದ ಅವರ ಸಂಪರ್ಕ ನಮ್ಮಗಿಲ್ಲ ಎಂದು ವಾದ ಮಾಡುತ್ತಿರಿ. ಅದೇ ರೀತಿ ಬೇರೆವರೂ ಮಾಡಿದಾಗ ಅವರ ಮನೆತನದವರೂ ಮಾಡಿದ್ದಾರೆ ಎನ್ನುತ್ತಿರಿ. ಇಂಥ ದುಷ್ಟ ಬುದ್ದಿ ಹೊಂದಿರುವ ನೀವು ಕೂಡಲೇ ಇಂತಹ ಹೇಳಿಕೆ ನೀಡುವದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು.

ಸಾಮಥ್ರ್ಯ ನಿಮ್ಮದು ಸ್ಪರ್ಧೆ ನಮ್ಮದು ..... KLE  GOKAK
07/11/2024

ಸಾಮಥ್ರ್ಯ ನಿಮ್ಮದು ಸ್ಪರ್ಧೆ ನಮ್ಮದು ..... KLE GOKAK

ನೆನ್ನೆ ಬೆಳಗಾವಿ ಇಂದ ಗೋಕಾಕ ಹೋಗುವಾಗ, ನನ್ನ ತಂಗಿಯ passport ಕಳೆದುಹೋಗಿದೆ. ಇದು ತುಂಬಾ ಅವಶ್ಯಕತೆ ಇದ್ದು , ಹುಡುಕಿ ಕೊಟ್ಟರೆ 2000 ಕೊಡುತ್...
07/11/2024

ನೆನ್ನೆ ಬೆಳಗಾವಿ ಇಂದ ಗೋಕಾಕ ಹೋಗುವಾಗ, ನನ್ನ ತಂಗಿಯ passport ಕಳೆದುಹೋಗಿದೆ. ಇದು ತುಂಬಾ ಅವಶ್ಯಕತೆ ಇದ್ದು , ಹುಡುಕಿ ಕೊಟ್ಟರೆ 2000 ಕೊಡುತ್ತೇವೆ. ದಯವಿಟ್ಟು ಯಾರಿಗಾದರೂ ಸಿಕ್ಕಿದ್ರೆ ಈ ನಂಬರಿಗೆ ಫೋನ್ ಮಾಡಿ. ಬಾಳೇಶ್ - 8618857702

ಕರ್ನಾಟಕ ಛಾಯಾಗ್ರಾಹಕರ ಸಂಘದಿಂದ  ಕೊಡಮಾಡುವ ರಾಜ್ಯ ಮಟ್ಟದ ಛಾಯಾಶ್ರೀ ಪ್ರಶಸ್ತಿಗೆ ಭಾಜೀನರಾದ  ಗೋಕಾಕ ವೃತ್ತಿ ನಿರತ ಹಾಗೂ ಪತ್ರಿಕಾ ಛಾಯಾಗ್ರಾಹ...
06/11/2024

ಕರ್ನಾಟಕ ಛಾಯಾಗ್ರಾಹಕರ ಸಂಘದಿಂದ ಕೊಡಮಾಡುವ ರಾಜ್ಯ ಮಟ್ಟದ ಛಾಯಾಶ್ರೀ ಪ್ರಶಸ್ತಿಗೆ ಭಾಜೀನರಾದ ಗೋಕಾಕ ವೃತ್ತಿ ನಿರತ ಹಾಗೂ ಪತ್ರಿಕಾ ಛಾಯಾಗ್ರಾಹಕರಾದ ಶ್ರೀ.ಬಿ‌.ಪ್ರಭಾಕರ ( ಪ್ರವೀಣ) ಅವರನ್ನು ಗೋಕಾಕ ನಗರದ ಶಿವಾಲೀಲಾ ಬೆಳ್ಳಂಕಿಮಠ ಫೌಂಡೇಷನ ಟ್ರಸ್ಟ್ ಕಮಿಟಿ ಗೋಕಾಕ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು...
ಈ ಸಂದರ್ಭದಲ್ಲಿ ಫೌಂಡೇಷನ ಅಧ್ಯಕ್ಷರಾದ ದೇವು ಬೆಳ್ಳಂಕಿಮಠ , ಮುರಗೇಶ ಹುಕ್ಕೇರಿ , ಕೃಷ್ಣಾ ಖಾನಪ್ಪನವರ , ನಾಗೇಶ ಮಹಾರೆಡ್ಡಿ , ದಯಾನಂದ ವಾಗುಲೆ , ಗುರು ಮುನ್ನೋಳಿಮಠ , ಸಂಪತ್ತ ಹೊನಕುಪ್ಪಿ , ಶ್ರೀನಿವಾಸ ಕಳ್ಳಿಗುದ್ದಿ , ವಿದ್ಯಾಧರ ಕೋಳಿ ಸೇರಿದಂತೆ ಉಪಸ್ಥಿತರಿದ್ದರು

06/11/2024

ಬಸ್ ಚಾಲನೆಯಲ್ಲಿ ಇರುವಾಗಲೇ ಡ್ರೈವರ್‌ಗೆ ಹೃದಯಾಘಾತ

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರು ಇರುವಾಗ ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿರುವ ಘಟನೆ ನೆಲಮಂಗಲ ಟೌನ್ ಬಿನ್ನಮಂಗಲ ಬಸ್ ನಿಲ್ದಾಣ ಬಳಿ ನಡೆದಿದೆ. ಹಾಸನ ಮೂಲದ ಚಾಲಕ ಕಿರಣ್‌ಕುಮಾರ್ (40) ಮೃತ ಚಾಲಕ. ಇಂದು (ನವೆಂಬರ್ 06) ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿದೆ.

"ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲ...
06/11/2024

"ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಹುಬ್ಭಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂ.20669) ರಾಯಬಾಗ ತಾಲೂಕು ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ತಾಲೂಕಿನಿಂದ ಪುಣೆಗೆ ತೆರಳುವವರು, ಇಲ್ಲವೇ ಅಲ್ಲಿಂದ ಬೆಳಗಾವಿ ಜಿಲ್ಲೆಗೆ ಬರುವವರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದ್ದಾರೆ.
ಸದ್ಯ ಹುಬ್ಬಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕುಡಚಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡುವಂತೆ ಜನರಿಂದ ಒತ್ತಾಯ ಕೇಳಿ ಬಂದಿದೆ. ಅದರಲ್ಲೂ ಮುಖ್ಯವಾಗಿ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಇಲ್ಲಿರುವ ಜನರಿಗೆ ತಮ್ಮ ದೈನಂದಿನ ಕೆಲಸಕ್ಕಾಗಿ ಬೆಳಗಾವಿ ನಗರಕ್ಕೆ ತೆರಳಲು ಕ್ಷೇತ್ರದ ಜನರಿಂದ ಭಾರಿ ಬೇಡಿಕೆಯಿದ್ದು, ಶೀಘ್ರವೇ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ."

Address

Gokak

Telephone

+918722796002

Website

Alerts

Be the first to know and let us send you an email when SLJ TV posts news and promotions. Your email address will not be used for any other purpose, and you can unsubscribe at any time.

Videos

Share

Nearby media companies