24/10/2023
#ಶಮೀವೃಕ್ಷ.. ಅದೇಕೆ ವಿಜಯದಶಮಿಯ ದಿನ ನಾವು ಶಮೀವೃಕ್ಷವನ್ನು ಪೂಜೆ ಮಾಡುತ್ತೇವೆ...ಅದರ ಬಗ್ಗೆ ಒಂದು ಚಿಕ್ಕ ಲೇಖನ..
ವಿಜಯದಶಮಿಯ ದಿನ ಮಾತ್ರ ನಾವು ಶಮೀವೃಕ್ಷವನ್ನು ಜ್ಞಾಪಿಸಿಕೊಳ್ಳುವುದು ಸಹಜ. ಆದರೆ ಪ್ರತಿದಿನ ಶಮೀವೃಕ್ಷವನ್ನು ನಾವು ಪ್ರದಕ್ಷಿಣೆಯನ್ನುಮಾಡುವುದು ಅಥವಾ ನೋಡುವುದು, ಅಥವಾ ಸ್ಪರ್ಶಿಸುವುದು ಮಾಡಿದರೆ ಅದರಿಂದ ನಮಗೆಷ್ಟು ಒಳಿತಾಗುವುದು ಎಂಬುದಂತೂ ಸತ್ಯ..
ವಿಜಯದಶಮಿಯ ದಿನ ಶಮೀವೃಕ್ಷವನ್ನು ಪೂಜಿಸುವುದು ಅನಾದಿಕಾಲದಿಂದಲೂ ಬಂದಿದೆ. ರಾಮಾಯಣ,, ಮಹಾಭಾರತಗಳಲ್ಲಿ ಕೂಡ ಇದರ ವಿವರಣೆ ಉಂಟು..
ಮಹಾಭಾರತದಲ್ಲಿ ವಿರಾಟಪರ್ವದ ಐದನೆಯ ಅಧ್ಯಾಯದಲ್ಲಿ ಶಮೀವೃಕ್ಷದ ಮೇಲೆ ಪಾಂಡವರು ತಮ್ಮ ಆಯುಧಗಳನ್ನೆಲ್ಲ ಕಟ್ಟಿ ಇಟ್ಟಿದ್ದರು ಎಂಬುದನ್ನು ನಾವು ಕೇಳಿದ್ದೇವೆ ಕಾರಣ.. ಪಾಂಡವರ ಆಯುಧಗಳನ್ನೆಲ್ಲ ಪಾಂಡವರು ತಮ್ಮ 13ವರ್ಷದ ಅಜ್ಞಾತವಾಸದ ಕಾಲದಲ್ಲಿ, ತಮ್ಮ ಆಯುಧಗಳನ್ನೆಲ್ಲ ಅವರು ಮುಚ್ಚಿಡಲು ಶಮೀವೃಕ್ಷವನ್ನು ಬಳಸಿಕೊಂಡಿದ್ದರು.
ಶಮೀವೃಕ್ಷವು ಸಾಧಾರಣವಾದದ್ದಲ್ಲ.. ಆಶ್ರಯಿಸಿದ ವರ ಪಾಪಗಳನ್ನೆಲ್ಲ ಪರಿಹಾರ ಮಾಡುವಂತಹ ವೃಕ್ಷ. ಅದಕ್ಕಾಗಿಯೇ ದಿಗ್ವಿಜಯಕ್ಕಾಗಿ ಹೊರಟವರಿಗೆ ಶಮೀವೃಕ್ಷದ ಪೂಜೆ ಮಹತ್ತರವಾದದ್ದು..
ಆದ್ದರಿಂದಲೇ ಅಲ್ಲಿ ಆಯುಧಗಳನ್ನು ಇಡಲು ಪಾಂಡವರು ನಿಶ್ಚಯಿಸುತ್ತಾರೆ.
ಅರ್ಜುನನು ಶಮೀವೃಕ್ಷವನ್ನು ಕುರಿತು ಹೇಳಿದಂತಹ ಶ್ಲೋಕವೇ ಇಂದಿಗೂ ಜಗಜ್ಜನನಿತ.
ಏಷಾ ಶಮೀ ಪಾಪಹರಾ ಸದೈವ
ಯಾತ್ರೋತ್ಸವಾನಾo ವಿಜಯಾಯ ಹೇತು:
ಅತ್ರಾ ಯುಧಾನಾಮ್ ಕೃತ ಸನ್ನಿವೇಶೇ
ಕೃತಾರ್ಥಕಾಮ ಜಯಮಂಗಲಂ ಚ ll
ಪ್ರದಕ್ಷಿಣೀಕೃತ್ಯ ಶಮೀಲತಾo ತೇ
ಪ್ರಣಮ್ಯ ಜಾನರ್ಚುರಥ ಪ್ರವೀರಾ:
ಮೃತ್ಪಿಂಡ ಮಾದಾಯ ನಿಜಾನ್ಚಲೇನ
ಸೂತಿo ಚಕಾರ ಪ್ರಥಮಂ ಕಿರೀಟೀ ll
ಶಮೀ ಶಮಯತೇ ಪಾಪಂ ಶಮೀ ಶಮಯತೇ ರಿಪೂನ್l
ಶಮೀ ಶಮಯತೇ ರೋಗನ್ ಶಮಿ
ಸರ್ವಾರ್ಥ ಸಾಧನಾ ll
ರಾಮ:ಸೀತಾ ಸಮುದಾಯ ತತ್ಪ್ರಸಾದಾ ಮಿಚ್ಚಮೀತಲೇl
ಕೃತಕೃತ್ಯ: ಪುರೇ ಪ್ರಾಪ್ತ: ಪ್ರಸಾದಾತ್ರೇ ತಥಾಸ್ತುಮೇ ll
ಅಂತಹ ಶಮೀವೃಕ್ಷವು ಪಾಪವನ್ನು ಪರಿಹಾರ ಮಾಡುತ್ತದೆ ಶಮೀವೃಕ್ಷವು ಶತ್ರುಗಳನ್ನು ವಿನಾಶಗೊಳಿಸುತ್ತದೆ. ಶಮೀವೃಕ್ಷವು ರೋಗನಾಶನ ವನ್ನು ಮಾಡುತ್ತದೆ. ಸರ್ವಥಾ ಕಾಮನೆಗಳು ಶಮೀವೃಕ್ಷದ ಆರಾಧನೆಯಿಂದ ಸಾಧಿಸಿ ಕೊಳ್ಳಬಹುದು..
ಆದ್ದರಿಂದಲೇ ಅರ್ಜುನನು ಶಮೀವೃಕ್ಷವನ್ನು ಪ್ರದಕ್ಷಿಣೆಯನ್ನು ಮಾಡಿ, ತನ್ನ ಉತ್ತರಿಯ ದಿಂದ ಮೃತ ಪಿಂಡವನ್ನು ತೆಗೆದುಕೊಂಡು ಮೊದಲು ಪ್ರಾರ್ಥನೆಯನ್ನು ಮಾಡುತ್ತಾನೆ. ಶಮೀ ಶಮಯತೇ ಪಾಪಂ ಎಂಬ ಮಂತ್ರವನ್ನು ಹೇಳುತ್ತಾ
ನ್ನಿನ್ನoತಹ ವೃಕ್ಷದ ದಯೆಯಿಂದಲೇ ಶ್ರೀರಾಮನು ಸೀತೆಯನ್ನು ಪುನಹ ಪಡೆದುಕೊಂಡು ಅಯೋದ್ಯೆಗೆ ಹಿಂತಿರುಗುತ್ತಾನೆ.
ಯುದ್ಧಷ್ಠಿರನು, ಶಮಿವೃಕ್ಷಕ್ಕೆ,, ನಿನ್ನ ಪ್ರಸಾದದಿಂದ ನಮಗೂ ಕಳೆದುಹೋಗಿರುವ ರಾಜ್ಯವನ್ನು ಪ್ರಾಪ್ತಿಯನ್ನು ನೀಡು ಎಂದು ಹೇಳುತ್ತಾನೆ.
ಆನಂತರಯುಧಿಷ್ಠಿರನು ಶಮೀವೃಕ್ಷವನ್ನು ಬೇಡುತ್ತಾನೆ. ತನ್ನ ಆಯುಧಗಳನ್ನೆಲ್ಲ ಅಲ್ಲಿ ಇಡುವುದರಿಂದ ಶಮೀ ವೃಕ್ಷದಲ್ಲಿ ಬ್ರಹ್ಮನನ್ನು, ಇಂದ್ರನನ್ನು,ಕುಬೇರನನ್ನು,ವರುಣನನ್ನು, ವಾಯುವನ್ನು, ರುದ್ರನನ್ನು ವಿಷ್ಣು,ಚಂದ್ರ, ಯಮ, ಸೂರ್ಯ ಧರ್ಮದೇವತೆ ಪೃಥ್ವಿ ಅಂತರಿಕ್ಷ,ದಿಕ್ಕುಗಳು ಉಪದಿಕ್ಕುಗಳು, ಅಷ್ಟವಸುಗಳು, ಮಹದೇಶ್ವರ, ಶಿವನ ಭೂತಗಳ್ಳೇಲ್ಲವನ್ನು ಅಲ್ಲಿ ಅವಾಹನೆ ಮಾಡಿ,ನಮಸ್ಕರಿಸಿ ಶರಣಾಗತನಾಗಿ ತನ್ನೆಲ್ಲ ಆಯುಧಗಳನ್ನೆಲ್ಲ ಸೂರ್ಯ ಸೋಮಾಗ್ನಿಗಳ ಆಶೀರ್ವಾದವನ್ನು ತೆಗೆದುಕೊಂಡು,13 ವರ್ಷಗಳು ಪೂರ್ಣವಾದ ನಂತರ ತಮ್ಮ ಆಯುಧಗಳನ್ನು ಶಮಿವೃಕ್ಷ ದಿಂದ ಪಡೆಯುವುದಾಗಿಯೂ ಮತ್ತೆ ತಾನಾ ಗಲಿ ಅಥವಾ ಪಾರ್ಥನಾಗಲಿ ಬಂದಾಗ ಮಾತ್ರ ಆಯುಧಗಳನ್ನೆಲ್ಲ ಕೊಡಬೇಕೆಂದು ಕೇಳಿಕೊಳ್ಳುತ್ತಾನೆ..
ಬೇರೆ ಯಾರ ಕಣ್ಣಿಗೂ ಕೂಡ ಅದು ಆಯುಧದಂತೆ ಕಾಣದೆ ವಸ್ತ್ರದಿಂದ ಸುತ್ತಿಟ್ಟ ಹೆಣದಂತೆ ಕಾಣುವಂತೆ ಆಗಿಬಿಡುತ್ತದೆ. (ಆನಂತರ ಅರ್ಜುನನೇ ಮುಂದೆ ಆಯುಧಗಳನ್ನೆಲ್ಲ ತೆಗೆದುಕೊಳ್ಳುವಂತೆ ಆಗುತ್ತದೆ..)
ಆದ್ದರಿಂದಲೇ ಇಂದಿಗೂ ಕೂಡ ವಿಜಯದ ಸಂಕೇತವಾಗಿ ಇಂದಿಗೂ ಮೈಸೂರಿನ ರಾಜಮನೆತನದ ಒಡೆಯರಿಂದ ಶಮೀವೃಕ್ಷದ ಪೂಜೆಯೊಂದಿಗೆ ದಸರಾ ಉತ್ಸವವು ಸಂಪೂರ್ಣವಾಗುತ್ತದೆ..
ಅಂತಹ ಶಮೀವೃಕ್ಷದ ಆರೋಗ್ಯಕಾರಿ ಗುಣಗಳನ್ನು ಒಂದಿಷ್ಟು ತಿಳಿಯೋಣ....
ಸರಿಯಾದ ಜೀರ್ಣಕ್ರಿಯೆ ಆಗದಿದ್ದಾಗ ಮತ್ತು ಅತಿಸಾರ ಭೇದಿ ಯಾದಾಗ ಇದನ್ನು ಒಂದೆರಡು ಎಲೆಗಳನ್ನು ತಿನ್ನುವುದರಿಂದ ಸಮಸ್ಯೆ ಸ್ವಲ್ಪ ಪರಿಹಾರವಾಗುತ್ತದೆ.ಅಥವಾ, ಶಮೀ ವೃಕ್ಷದ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದಲೂ ಕೂಡ ಉಪಶಮನ ವಾಗುತ್ತದೆ.
ಮೂಳೆಗಳ ನೋವು, ಕೀಲುಗಳನೋವು ಇದ್ದಾಗ ಎಲೆಗಳನ್ನು ಅಗಿದು ತಿಂದರೆoತೂ ಇನ್ನು ಆರೋಗ್ಯಕ್ಕೆ ಒಳ್ಳೆಯದು.
ದೇಹದಲ್ಲಿ ಕೆಲವೊಮ್ಮೆ ತುರಿಕೆ, ನವೆ ಉಂಟಾದಾಗ ಸ್ನಾನದ ನೀರಿಗೆ ಈ ಪತ್ರಗಳನ್ನೆಲ್ಲ ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಸ್ನಾನ ಮಾಡಿದರೆ ಸಮಸ್ಯೆ ಇಲ್ಲದಂತಾಗುತ್ತದೆ.
ಸ್ತ್ರೀಯರಿಗೆ ಮುಖದಲ್ಲಿ ರೋಮಗಳು ಹೆಚ್ಚಾಗಿ ಸೌಂದರ್ಯಕ್ಕೆ ಮಾರಕವಾಗಿರುತ್ತದೆ. ಅಂತಹ ಸಮಯದಲ್ಲಿ ಶಮಿ ಎಲೆಗಳನ್ನು ಅರಿಶಿನದ ಜೊತೆ ಅರೆದು ಫೇಸ್ ಪ್ಯಾಕ್ ನಂತೆ ಲೇಪನ ಮಾಡಿಕೊಂಡು, ಅರ್ಧಗಂಟೆಯ ನಂತರ ಮುಖವನ್ನು ತೊಳೆದರೆ ಕ್ರಮೇಣ ಕೂದಲುಗಳು ಉದುರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಹೆಂಗಸರನ್ನು ಕಾಡುವ ಅತೀ ರಕ್ತಸ್ರಾವ ಸಮಸ್ಯೆಯೂ ಕೂಡ ಶಮಿ ಎಲೆಯನ್ನು ತಿನ್ನುವುದರಿಂದ ಕೂಡ ಕಮ್ಮಿಯಾಗುತ್ತದೆ. ಎಲೆ ತಿನ್ನಲು ಇಷ್ಟಪಡದವರು ಕಷಾಯದಂತೆ ಬಳಸಬಹುದು.
ಕೆಲವರಿಗೆ ಗರ್ಭವೇ ನಿಲ್ಲದೆ ಆಗಾಗ ಅಬಾಷನ್ ಆಗುವವರು ವಾರಕ್ಕೆ ಎರಡು ದಿನವಾದರೂ ಈ ಎಲೆ ಗಳನ್ನು ಹಾಗೆಯೇ ತಿನ್ನುವುದು ಒಳಿತು.
ಜ್ಯೋತಿಷ್ಯ ಪ್ರಕಾರವಾಗಿ ನೋಡಿದರೂಕೂಡ,, ಸಾಡೇಸಾತಿ ಅಂದರೆ ಶನಿಯ ಪ್ರಭಾವ ಇರುವವರು ಶಮೀವೃಕ್ಷದ ದರ್ಶನ.. ಸ್ಪರ್ಶನ..ಮತ್ತು ಪ್ರದಕ್ಷಿಣ ವನ್ನು ಮಾಡಿದರೆ ಶನಿಯ ಪ್ರಭಾವ ಕಮ್ಮಿಯಾಗುತ್ತದೆ.. ✍️✍️ಯಶುಪ್ರಸಾದ್ ✍️✍️ಇಷ್ಟೆಲ್ಲಾ ಆರೋಗ್ಯಕಾರಿ ಮತ್ತು ಧಾರ್ಮಿಕತೆಯಿಂದ ತುಂಬಿರುವ ಈ ವೃಕ್ಷವನ್ನು ಆಗಾಗ ಸ್ಪರ್ಶಿಸಿ ವೀಕ್ಷಿಸಿ ಪ್ರದಕ್ಷಿಣೆ ಮಾಡಿ..🙏🏿🙏🏿🙏🏿