Vishwa vokkaligara Jagruti

Vishwa vokkaligara Jagruti Contact information, map and directions, contact form, opening hours, services, ratings, photos, videos and announcements from Vishwa vokkaligara Jagruti, Magazine, Bangalore.

25/11/2024

ಚುನಾವಣೆಯ ಗೆಲುವನ್ನ ಸಂಭ್ರಮಿಸಲು ಗೊತ್ತಿರುವವರು , ಸೋಲನ್ನ ಕೂಡಾ ಸಂಯಮದಿಂದಲೇ ಸ್ವೀಕರಿಸಬೇಕು . ವಿಧಿಯಿಲ್ಲದೇ ಅಲ್ಲ . ಆಟದ ನಿಯಮಗಳ ಪ್ರಕಾರ .

62 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ , ಕೇವಲ 6 ವರ್ಷಗಳ ಅಧಿಕಾರ ಅನುಭವಿಸಿದ ದೇವೇಗೌಡರು , ಪ್ರಧಾನಿಯಾಗಿ ಇಳಿದ ಮರು ಚುನಾವಣೆಯಲ್ಲಿಯೇ , ಒಂದೂವರೆ ಲಕ್ಷಗಳ ಅಂತರದಿಂದ ತವರು ನೆಲ ಹಾಸನದಲ್ಲಿಯೇ ಸೋತರು . ಅದಕ್ಕೂ ಮೊದಲು , ತಮ್ಮ ಸ್ನೇಹಿತ ಮತ್ತು ಅನುಯಾಯಿಯಾಗಿದ್ದ ಪುಟ್ಟಸ್ವಾಮಿಗೌಡರ ವಿರುದ್ಧ ಹೊಳೆ ನರಸೀಪುರದಲ್ಲಿಯೂ ಸೋತಿದ್ದರು . ಹೆಗಡೆ ಜೊತೆಗಿನ ಜಗಳದಿಂದ ಜನತಾದಳದಿಂದ ಹೊರಬಂದು , ತಮ್ಮದೇ ಸಮಾಜವಾದಿ ಜನತಾ ಪಕ್ಷದಿಂದ ಎಂ ಪಿ ಚುನಾವಣೆಯಲ್ಲಿ , ಹನುಮೇಗೌಡರ ಸಹಾಯದಿಂದ ಕೇವಲ ಆರು ಸಾವಿರ ಮತಗಳ ಅಂತರದಿಂದ ಗೆದ್ದು , ಫೀನಿಕ್ಸ್ ಗೆ ಉಪಮೆಯಾಗಿದ್ದರು .

ಇವುಗಳೆಲ್ಲವೂ ಸುಲಭಸಾಧ್ಯವಾಗಿರಲಿಲ್ಲ . ಮಾಧ್ಯಮಗಳೆಂದೂ ಜೊತೆಗಿರಲಿಲ್ಲ . ಮೀಡಿಯಾ ಡಾರ್ಲಿಂಗ್ ಆಗಿ ಹೆಗಡೆ ಮೆರೆಯುತ್ತಿದ್ದರು . ಆಗಲೂ ಹಲವು ಒಕ್ಕಲಿಗ ಶಾಸಕರು ಕೆಲವರು ಹೆಗಡೆ ಜೊತೆಗಿದ್ದರು .

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದರೆ , ಒಂದೇ ಭಾಗದಲ್ಲಿ ಕನ್ಸಾಲಿಡೇಟ್ ಆಗಿರುವ ಒಕ್ಕಲಿಗರು , ರಾಜಕೀಯವಾಗಿ ಮೇಲೇರಲು , ಯಾರೇ ಆಗಿದ್ದರೂ , ಒಕ್ಕಲಿಗರನ್ನೇ ಹಣಿದು ಬೆಳೆಯಬೇಕಿತ್ತು . ಹಾಸನದಲ್ಲಿ ದೇವೇ ಗೌಡ್ರು - ಶ್ರೀಕಂಠಯ್ಯ , ಮಂಡ್ಯದಲ್ಲಿ ಶಂಕರ ಗೌಡ್ರು - ಎಸ್ ಎಂ ಕೃಷ್ಣ - ಮಾದೇಗೌಡ್ರು , ಕೋಲಾರದಲ್ಲಿ ಭೈರೇ ಗೌಡ್ರು - ಬಚ್ಚೇ ಗೌಡ್ರು - ಚೌಡರೆಡ್ಡಿ ಕುಟುಂಬ .... ಹೀಗೆ ಇವರಿವರೇ ಹೊಡೆದಾಡಿಕೊಳ್ಳಬೇಕಿತ್ತು ಮತ್ತು ಮುಂದೆಯೂ ಹಾಗೆಯೇ ಇರುತ್ತದೆ . ಪ್ರತೀ ಪಂಚಾಯ್ತಿ ಚುನಾವಣೆಗಳಲ್ಲಿ , ರಾಜಕೀಯ ಆಕಾಂಕ್ಷೆ ಹೊಂದಿರುವ ಯುವಕರು ದಳ ಮತ್ತು ಕಾಂಗ್ರೆಸ್ ನಡುವೆಯೇ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು . ಹಾಗಾಗಿ , ಒಕ್ಕಲಿಗರು ಒಂದೇ ಪಕ್ಷದ ಪರ ನಿಲ್ಲುವುದು ಸಾಧ್ಯವಿಲ್ಲದ ಮಾತು ಮತ್ತು ದೇವೇ ಗೌಡರ , ಕುಮಾರಸ್ವಾಮಿಯವರ ಪರ ಸಿಂಪತಿ ಇರುವ ಒಕ್ಕಲಿಗರೇ ಹೆಚ್ಚು ಎನ್ನುವುದು ವಾಸ್ತವ . ಹಾಗಾಗಿಯೇ , ಚುನಾವಣೆ ಏನೇ ಆದರೂ , ಒಕ್ಕಲಿಗರ ಅಘೋಷಿತ ನಾಯಕರು ದೇವೇಗೌಡರೊಬ್ಬರೇ ..

ಜಾತಿಯೇ ವಿಜೃಂಭಿಸುವ ಈ ಕಾಲಘಟ್ಟದಲ್ಲಿ , ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರೂ ಸಿದ್ಧರಾಮಯ್ಯನವರನ್ನ ಓಲೈಸಲು ಪ್ರಮುಖ ಕಾರಣ ಕುರುಬ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ 5 ರಿಂದ 50000 ದವರೆಗೂ ಇರುವುದು . ಅದೇ ರೀತಿ ಜಮೀರ್ ಕೂಡಾ ಸಿದ್ಧರಾಮಯ್ಯನವರ ಹಾಗೆಯೇ . ರಾಜ್ಯ ರಾಜಕಾರಣವನ್ನ ಬುಗುರಿ ರೀತಿಯಲ್ಲಿ ಆಡಿಸಲು ಅವಕಾಶವಿರುವ , ಇವರಿಬ್ಬರ ಸಮುದಾಯಕ್ಕಿಂತ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿರುವ ದಲಿತರು , ತಮ್ಮದೇ ನಾಯಕತ್ವಕ್ಕೆ ಒತ್ತು ಕೊಡದಿರುವುದು ದುರಂತವಷ್ಟೇ .

ಅಭಿಮನ್ಯು ಇಂದಿಗೂ ಎಲ್ಲರಿಗೂ ಇಷ್ಟದವ . ಅರ್ಜುನನನ್ನ " ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು ..." ಎಂದು ಹೀಗಳೆಯುವವರೆಗೆ ಅರ್ಥ ಆಗಬೇಕಿರೋದು , ಅರ್ಜುನ " ಪರಮಾತ್ಮನಿಗೆ ಪ್ರಿಯನಾದ ಪಾರ್ಥ ….” ಅನ್ನೋದು .

ಕೊನೇ ಮಾತು : ಅಭಿಮನ್ಯುವನ್ನ ಕೊಂದವರು ಕೌರವರೆಂದು ಎಲ್ಲರಿಗೂ ಗೊತ್ತು . ಮತ್ತು ಸಮಾಜದಲ್ಲಿ ಕೌರವರಿಗೆ ಮತ್ತವರ ಸೋದರಮಾವ ಶಕುನಿಗೆ ಇರುವ ಸ್ಥಾನಮಾನಗಳೇನು ಅನ್ನೋದು ಎಲ್ಲರಿಗೂ ಗೊತ್ತು . ಅಂತಿಮ ವಿಜಯ ಸತ್ಯದ್ದೇ ... ನ್ಯಾಯದ್ದೇ ... ಮತ್ತು ಪಾಂಡವರದ್ದೇ ...

05/11/2024

ಬಡ ಮೇಷ್ಟ್ರು ಮಗ ಶಾಸಕನಾದ ರೋಚಕ ಕಥೆ...

ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಜನಿಸಿದ ಬಡ ಮೇಷ್ಟ್ರು ಮಗ ಯೋಗೇಶ್ವರ್ ಈ ಮಟ್ಟಕ್ಕೆ ಬೆಳೆಯಲು
ಕಾರಣವಾದ್ರೂ ಏನು...?

ಅಂದು ಬೆಂಗಳೂರಿಗೆ ಕೆಲಸ ಬಯಸಿ ಬಂದಿದ್ದ ಯೋಗೇಶ, ಆರಂಭದ ದಿನಗಳಲ್ಲಿ ಮಯೂರಿ ಟೆಕ್ಸ್ ಟೈಲ್ಸ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ...
ಊಟಕ್ಕಾಗಿ ಪರದಾಡ್ತಿದ್ದ ಯೋಗೇಶ ಊರಿಂದ ತಂದಿದ್ದ ತೆಂಗಿನಕಾಯಿ ಮಾರಿ ಬಂದ ಹಣದಲ್ಲಿ ಊಟ ಮಾಡ್ತಿದ್ನಂತೆ...
ಆಗ ಅವನಿಗೆ ಕಣ್ಣಿಗೆ ಬಿದ್ದದ್ದು ಮಯೂರಿ ಟೆಕ್ಸ್ ಟೈಲ್ಸ್ ಬಟ್ಟೆ ಅಂಗಡಿ ಮಾಲೀಕನ ಮಗಳು ಮಂಜುಳ, ಆಕೆಯನ್ನು ಬುಟ್ಟಿಗೆ ಹಾಕಿಕೊಂಡರೆ ನನ್ನ ಬಡತನ ತೊಲಗುತ್ತದೆ ಅನ್ನೋ ಆಲೋಚನೆ ಆತನಿಗೆ ಆಗ ಬರುತ್ತದೆ...

ಅದರಂತೆಯೇ ಆಕೆಯನ್ನು ತನ್ನ ಪ್ರೇಮದ ಪಾಷಕ್ಕೆ ಸಿಲುಕುವಂತೆ ಮಾಡಿ, ಅವರ ಮನೆ ಅಳಿಯನಾಗಿ ಬಿಡುತ್ತಾನೆ...
ಆನಂತರ ಅವರ ಆಸ್ತಿ ಯನ್ನ ಲಫಟಾಯಿಸಿಬಿಡುತ್ತಾನೆ...,

ತದನಂತರ ಆತ ಕೈ ಹಾಕಿದ್ದೆ ಮೇಘಾಸಿಟಿ ಟೌನ್ ಶಿಫ್ ಅನ್ನೋ ಕರ್ನಾಟಕದ ಅತೀ ದೊಡ್ಡ ಹಗರಣಕ್ಕೆ...

ಮೇಘಾಸಿಟಿ ಟೌನ್ ಶಿಫ್ ಅನ್ನೋ ಹೆಸರಿನಲ್ಲಿ ನ್ಯೂಸ್ ಪೇಪರ್ ನಲ್ಲಿ ಅಡ್ವರ್ಟೈಸ್ ಮೆಂಟ್ ಕೊಡಿಸಿದ ಯೋಗೇಶ, ಬಡವರಿಗೆ ಸೈಟ್ ಕೊಡಿಸುವ ಯೋಜನೆ ಇದಾಗಿದ್ದು, ಇದಕ್ಕೆ ಪ್ರತೀ ತಿಂಗಳು 3000 ದಂತೆ 60 ತಿಂಗಳುಗಳ ಕಂತುಗಳನ್ನು ಕಟ್ಟಿದರೆ ಸಾಕು ಸೈಟ್ ನಿಮ್ಮದಾಗುತ್ತದೆ ಎಂಬಂತೆ ಜನರನ್ನ ನಂಬಿಸಿಬಿಡುತ್ತಾನೆ...

ಅದನ್ನು ನಂಬಿ ಈತನ ಕುತಂತ್ರ ಕ್ಕೆ ಬಲಿಯಾದ ಕುಟುಂಬಗಳು ಬರೋಬ್ಬರಿ 10,000 ಕುಟುಂಬಗಳು, ಆರಂಭದಲ್ಲಿ ಕೇವಲ 5ಲಕ್ಷ ಹಣ ಇನ್ವೇಷ್ಟ್ ಮಾಡಿದ ಈತ ದೋಚಿದ್ದು ಮಾತ್ರ 70 ಕೋಟಿಯಂತ ಬೃಹತ್ ಮೊತ್ತ...

ಇದೆಲ್ಲಾ ನಡೆದದ್ದು 1995ನೇ ಇಸವಿಯಲ್ಲೇ ಅನ್ನೋದು ವಿಶೇಷ, ಇವತ್ತಿನ ಮಾರ್ಕೇಟ್ ವ್ಯಾಲ್ಯೂ ವನ್ನ ಪರಿಗಣಿಸಿದರೆ 70,000 ಕೋಟಿ ಅಷ್ಟಾಗಬಹುದು ಎಂದು ಅಂದಾಜಿಸಲಾಗಿದೆ...

ಈ ಪ್ರಕರಣದಲ್ಲಿ ಜನರನ್ನ ಯಾಮಾರಿಸಲು ಈತ ಬಳಸಿಕೊಂಡದ್ದು ಮಾತ್ರ ಸಮಾಜದ ಗಣ್ಯವ್ಯಕ್ತಿಗಳನ್ನ ಅನ್ನೋದು ವಿಷಾಧನೀಯ, ಈತನ ಈ ದೊಡ್ಡ ಫ್ರಾಡ್ ಕೆಲಸಕ್ಕೆ ಅತಿಥಿಗಳಾಗಿ ಕರೆಸಿದ್ದು ಡಾ.ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಬಾಲಗಂಗಾಧರ ನಾಥ ಸ್ವಾಮೀಜಿ, ಪೇಜಾವರ ಶ್ರೀ ಯಂತ ಇನ್ನೂ ಮುಂತಾದ ಗಣ್ಯವ್ಯಕ್ತಿಗಳನ್ನ...

ಈ ಫ್ರಾಡ್ ಖರೀಧಿಸಿದ್ದ ಭೂಮಿ ಕೇವಲ 1 ಎಕರೆ ಆದರೆ ಗ್ರಾಹಕರ ಬಳಿ ಹೇಳಿಕೊಂಡಿದ್ದು ಮಾತ್ರ 200 ಎಕರೆ ಭೂಮಿ ಖರೀಧಿಸಿರುವುದಾಗಿ...
ಈ ರೀತಿಯಾಗಿ ಆಗಿನ ಕಾಲಕ್ಕೆ ಅಂದರೆ 1995 ರಲ್ಲೇ 5 ಲಕ್ಷ ಹಣ ಹೂಡಿ 70 ಕೋಟಿಯಷ್ಟು ಹಣ ಗಳಿಸಿ ಬಿಡುತ್ತಾನೆ...

ಆ ಪಾಪದ ಹಣದಿಂದ ತನ್ನೂರು ಚಕ್ಕೆರೆಯಲ್ಲಿ ಒಂದು ದೇವಸ್ಥಾನ ಕಟ್ಟಿಸುತ್ತಾನೆ, ಸ್ವಂತ ಮನೆಯನ್ನೂ ಕೂಡ ಕಟ್ಟಿಸಿಕೊಳ್ಳುತ್ತಾನೆ, ಅಷ್ಟಲ್ಲದೇ ಸಿನಿಮಾ ಗಳಲ್ಲೂ ಹೂಡಿಕೆ ಮಾಡಿ ಹಿರೋ ಆಗಿಬಿಡುತ್ತಾನೆ‌‌..‌.

ಸಿನಿಮಾ ಅಷ್ಟರ ಮಟ್ಟಿಗೆ ಕೈಹಿಡಿಯದಿದ್ದಾಗ ರಾಜಕೀಯ ಕ್ಕೆ ಪ್ರವೇಶ ಪಡೆಯುತ್ತಾನೆ...

ಇಲ್ಲಿ ವಿಪರ್ಯಾಸ ಏನಪ್ಪಾ ಅಂದರೆ ತನ್ನ ರಾಜಕೀಯ ಪ್ರಚಾರಕ್ಕೆ ಆತ ತನ್ನ ಕೈಯಿಂದಲೇ ಮೋಸಕ್ಕೆ ಒಳಗಾಗಿದ್ದ ಮೇಘಾಸಿಟಿ ಟೌನ್ ಶಿಫ್ ನ ಸಂತ್ರಸ್ತ ಸಿನಿ ತಾರೆಯರನ್ನ ಬಳಸಿಕೊಂಡು ಶಾಸಕನೂ ಆಗಿಬಿಡುತ್ತಾನೆ‌‌...
ಮುಂದೆ ಸಚಿವನೂ ಆಗ್ತಾನೆ, ದೇವೇಗೌಡರು ಹಾಗೂ ವರದೇಗೌಡರು ಮಾಡಿದ ನೀರಾವರಿ ಕೆಲಸಗಳನ್ನ ತಾನೇ ಮಾಡಿರುವುದಾಗಿ, ಸಿನಿಮಾ ಪೋಟೋಶೂಟ್ ಮಾಡಿಸಿಬಿಡುತ್ತಾನೆ...
ಆ ಸಿನಿಮಾ ಪೋಟೋಶೂಟ್ ನಲ್ಲಿ ಚನ್ನಪಟ್ಟಣ ವನ್ನ ಬರಡು ಭೂಮಿಯನ್ನಾಗಿ ತೋರಿಸಿ, ರೈತರೆಲ್ಲ ತಲೆಮೇಲೆ ಕೈ ಇಟ್ಟು ಕೂತು ಮಳೆಗಾಗಿ ಎದುರು ನೋಡುವಂತೆ ಮಾಡಿ, ತಾನು ಭಗೀರಥನಂತೆ ಬಂದು ಚನ್ನಪಟ್ಟಣ ಕ್ಕೆ ನೀರು ಕೊಟ್ಟೆ ಎಂಬುದಾಗಿ ಟಿವಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆ ಗಳಲ್ಲಿ ಪ್ರಚಾರ ಮಾಡಿಸಿ ಚನ್ನಪಟ್ಟಣದ ಭಗೀರಥ ನೆನಿಸಿಕೊಂಡು ಬಿಡುತ್ತಾನೆ...

ಇವತ್ತಿಗೂ ಕೂಡ ಅಂದರೆ 30 ವರ್ಷಗಳು ಕಳೆದರೂ ಕೂಡ ಆತ ಮೇಘಾಸಿಟಿ ಅನ್ನೋ ಹೆಸರಿನ ಟೌನ್ ಶಿಫ್ ನಿರ್ಮಿಸಿಯೂ ಇಲ್ಲ,
ಒಂದೇ ಒಂದು ಸೈಟ್ ಕೂಡ ಯಾವ ಬಡ ಕುಟುಂಬಕ್ಕೂ ಕೊಟ್ಟಿಲ್ಲ...
ಹಾಗೂ ಚನ್ನಪಟ್ಟಣದ ಭಗೀರಥ ನೂ ಇವನಲ್ಲ, ಅಸಲಿ ಭಗೀರಥರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ವರದೇಗೌಡರು...

ಇಂತಹ ಒಬ್ಬ ಮನೆಹಾಳನನ್ನ, ಮೋಸಗಾರನನ್ನ, ಧಗಾಕೋರನನ್ನ, ಸುಳ್ಳೇಶ್ವರನನ್ನ ಚನ್ನಪಟ್ಟಣದ ಜನತೆ ಎಂದಿಗೂ ಕೂಡ ಕೈ ಹಿಡಿಯಬೇಡಿ...
ಮುಂದೆಯೂ ಕೂಡ ಚನ್ನಪಟ್ಟಣದಲ್ಲಾಗಲಿ ಬೇರಾವುದೇ ಕ್ಷೇತ್ರದಲ್ಲಾಗಲಿ ಆರಿಸಿ ಕಳಿಸಬೇಡಿ...

ಇಂತಿ
ಚನ್ನಪಟ್ಟಣದ ಪ್ರಜ್ಞಾವಂತ ಮತದಾರರು.

#ಚನ್ನಪಟ್ಟಣ #ಜೆಡಿಎಸ್

27/09/2024

ಬೆಂಗಳೂರು; ಹದಿನಾಲ್ಕು ಬದಲಿ ನಿವೇಶನ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆ ನಡೆಸಲು...

03/09/2024

ಎರಡೆರಡು ತಿಂಗಳಿಗೊಮ್ಮೆ ಆಡಳಿತ ಮಂಡಳಿ ಕೆಳಗಿಳಿಸುವ ನಾಟಕ ನಿಲ್ಲಬೇಕು.
ಸಂಘದ ಆಸ್ತಿ ನುಂಗುವ ಭೂಗಳ್ಳರ ಜೊತೆ ಷಾಮೀಲಾಗುವವರಿಗೆ ಒಕ್ಕಲಿಗರು ಛೀಮಾರಿ ಹಾಕಬೇಕು.
#ಒಕ್ಕಲಿಗರು #ಒಕ್ಕಲಿಗರಜಾಗೃತಿ #ಬಿಜಿಎಸ್
#ವಿಶ್ವಒಕ್ಕಲಿಗ #ಮಂಡ್ಯ

ಕರ್ಮ ರಿಟರ್ನ್ಸ್             #ಒಕ್ಕಲಿಗರು  #ಕೆಪಿಸಿಸಿ
18/08/2024

ಕರ್ಮ ರಿಟರ್ನ್ಸ್
#ಒಕ್ಕಲಿಗರು #ಕೆಪಿಸಿಸಿ

09/08/2024

ಸಿದ್ದರಾಮಯ್ಯ ಮೈಸೂರಿನ ಶ್ರೀಮಂತ ವ್ಯಕ್ತಿ 🤦‍♂️😂
#ಕೆಪಿಸಿಸಿ

ಕನ್ನಡದ ಖ್ಯಾತ ಸಾಹಿತಿ ಡಾ. ಬೆಸಗರಹಳ್ಳಿ ರಾಮಣ್ಣನವರ ಸುಪುತ್ರ ಹಾಗೂ  ದಕ್ಷ ಐಪಿಎಸ್ ಅಧಿಕಾರಿಗಳಾದ  ರವಿಕಾಂತೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗ...
05/08/2024

ಕನ್ನಡದ ಖ್ಯಾತ ಸಾಹಿತಿ ಡಾ. ಬೆಸಗರಹಳ್ಳಿ ರಾಮಣ್ಣನವರ ಸುಪುತ್ರ ಹಾಗೂ ದಕ್ಷ ಐಪಿಎಸ್ ಅಧಿಕಾರಿಗಳಾದ ರವಿಕಾಂತೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#ರವಿಕಾಂತೇಗೌಡ

ಅಕ್ರಮ ಗಣಿ ಮಾಡಿ ಕದ್ದರೆ ತಪ್ಪಿಲ್ಲ, ಅಕ್ರಮವಾಗಿ ಹಣ ಸಂಪಾದಿಸಿ ಜೈಲು ಸೇರಿದರೂ ತಪ್ಪಿಲ್ಲ, ಪರಿಶಿಷ್ಟ ಪಂಗಡದ ಹಣ ನುಂಗಿ ಹೆಂಡ ಕುಡಿದರೆ ತಪ್ಪಿಲ...
23/07/2024

ಅಕ್ರಮ ಗಣಿ ಮಾಡಿ ಕದ್ದರೆ ತಪ್ಪಿಲ್ಲ,
ಅಕ್ರಮವಾಗಿ ಹಣ ಸಂಪಾದಿಸಿ ಜೈಲು ಸೇರಿದರೂ ತಪ್ಪಿಲ್ಲ,
ಪರಿಶಿಷ್ಟ ಪಂಗಡದ ಹಣ ನುಂಗಿ ಹೆಂಡ ಕುಡಿದರೆ ತಪ್ಪಿಲ್ಲ,
ಪಾವಗಡದಲ್ಲಿ ಸೂರ್ಯನ ಹೆಸರಲ್ಲಿ ದರೋಡೆ ಮಾಡಿದರು ತಪ್ಪಿಲ್ಲ,
ರಾಜಕಾರಣಿಗಳು ಹೊಸ ಕಾಲುವೆಯನ್ನೆ ಮಾಡಿಕೊಂಡರು ತಪ್ಪಿಲ್ಲ
ಆದರೆ ರೈತ ಮಾತ್ರ ಬೆಳೆ ಒಣಗೋಗ್ತಿದೆ ಅಂತ ನೀರನ್ನು ಅಕ್ರಮವಾಗಿ ಬಳಸಬಾರದು.
ಸರ್ಕಾರ ನೀರು ಬಿಟ್ಟಿಲ್ಲ ಅಂದ್ರೆ ಕಾಲುವೆ ಕೆಳಗಿನ ಜಮೀನವರು ನೀರು ಮಾತ್ರ ಬಳಸಬಾರದು.
ರೈತ ಮಾಡಿದ್ರೆ ಮಾತ್ರ ತಪ್ಪು ಶಿಕ್ಷೆ....😡
#ಒಕ್ಕಲಿಗ #ರೈತ

ಲಾವಣಿ,ತತ್ವಪದಗಳ ಹರಿಕಾರ ವಿಶಿಷ್ಟ ಧ್ವನಿಯ ಗಾಯಕ ನಾಡಿನಾದ್ಯಂತ ಸಹಸ್ರಾರು ಧ್ವನಿ ಮುದ್ರಿಕೆಗಳ ವಾರಸುದಾರ.. ಖ್ಯಾತ ನಿರೂಪಕಿ ದಿವ್ಯಾ ಆಲೂರು ಅವ...
23/07/2024

ಲಾವಣಿ,ತತ್ವಪದಗಳ ಹರಿಕಾರ
ವಿಶಿಷ್ಟ ಧ್ವನಿಯ ಗಾಯಕ
ನಾಡಿನಾದ್ಯಂತ ಸಹಸ್ರಾರು ಧ್ವನಿ ಮುದ್ರಿಕೆಗಳ ವಾರಸುದಾರ..
ಖ್ಯಾತ ನಿರೂಪಕಿ ದಿವ್ಯಾ ಆಲೂರು ಅವರ ತಂದೆ
ಆಲೂರು ನಾಗಪ್ಪ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

ದೇಶ ಕಂಡ ಏಕೈಕ ಸಂತ ವಿಜ್ಞಾನಿ , ಧರ್ಮದೊಂದಿಗೆ ವಿಜ್ಞಾನ ಬೆಸೆದು , ಸದಾ ಬಡವರ , ರೈತರ ಸೇವೆಯನ್ನು ಮಾಡುವ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠ...
20/07/2024

ದೇಶ ಕಂಡ ಏಕೈಕ ಸಂತ ವಿಜ್ಞಾನಿ , ಧರ್ಮದೊಂದಿಗೆ ವಿಜ್ಞಾನ ಬೆಸೆದು , ಸದಾ ಬಡವರ , ರೈತರ ಸೇವೆಯನ್ನು ಮಾಡುವ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ವಿಶ್ವದಾದ್ಯಂತ ವಿಸ್ತರಿಸಿದ ಕೀರ್ತಿ,ನಮ್ಮೆಲ್ಲರ ಆರಾಧ್ಯಧೈವ ಪರಮಪೂಜ್ಯ ಜಗದ್ಗುರುಗಳಾದ ಜ್ಞಾನಿ ವಿಜ್ಞಾನಿ ಶ್ರೀ ಶ್ರೀ ಶ್ರೀ ಡಾ||ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರದ್ದು.55ನೆ ವರ್ಷದ ದೀಕ್ಷಾ ದಿನದ ಈ ಶುಭ ಸಂದರ್ಭದಲ್ಲಿ ಶ್ರೀಗಳನ್ನ ಸ್ಮರಿಸೋಣ, ಅವರ ದಿವ್ಯಾಶೀರ್ವಾದಕ್ಕೆ ಪಾತ್ರರಾಗೋಣ.
#ಒಕ್ಕಲಿಗ #ಗೌಡ #ಬಿಜಿಎಸ್

ಕೆಂಪೇಗೌಡರ ಕನಸಿನ ಕೂಸು ಬೆಂಗಳೂರು.‌"ಬೆಂಗಳೂರು" ಕಟ್ಟಿದ ದೊರೆ, ದೂರದೃಷ್ಟಿಯ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರ  515ನೇ ಜಯಂತ್ಯೋತ್ಸವದಈ ಶುಭ...
26/06/2024

ಕೆಂಪೇಗೌಡರ ಕನಸಿನ ಕೂಸು ಬೆಂಗಳೂರು.‌

"ಬೆಂಗಳೂರು" ಕಟ್ಟಿದ ದೊರೆ, ದೂರದೃಷ್ಟಿಯ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯೋತ್ಸವದ
ಈ ಶುಭದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಸಾಂಸ್ಕೃತಿಕ-ಸಾಮಾಜಿಕ-ಧಾರ್ಮಿಕವಾಗಿ ನಗರವೊಂದು ತಲೆಎತ್ತಿ ನಿಲ್ಲಬೇಕು ಎನ್ನುವ ದೂರದೃಷ್ಟಿಯೊಂದಿಗೆ ರೂಪಿತವಾದ ಬೆಂಗಳೂರು, ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ನಾಡಪ್ರಭುವಿನ ಕನಸನ್ನು ಸಾಕಾರಗೊಳಿಸಿದೆ.

ಕನ್ನಡಿಗರೆಲ್ಲರಿಗೂ ನಾಡಪ್ರಭು ಹೆಮ್ಮೆಯ ಶ್ರೀ ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.
#ಕೆಂಪೇಗೌಡಜಯಂತಿ #ನಾಡಪ್ರಭುಕೆಂಪೇಗೌಡಜಯಂತಿ #ಒಕ್ಕಲಿಗ #ಗೌಡ #ಕೆಂಪೇಗೌಡ

26/06/2024

IGP ರವಿಕಾಂತೇಗೌಡ ಮತ್ತು Ex PM, Ex CM ಅವಹೇಳನ, ಏಕವಚನ ಪದ ಪ್ರಯೋಗದಿಂದ
ಪವರ್ ಟಿವಿ ರಾಕೇಶ್ ಶೆಟ್ಟಿಯ ಪವರ್ ಕಟ್!
#ರಾಕೇಶಶೆಟ್ಟಿ

ರಾಕೇಶ ಶೆಟ್ಟಿಗೆ ಹೈಕೋರ್ಟ್ ಚಾಟಿ.   ಪ್ರಸಾರಕ್ಕೆ ನಿರ್ಭಂದ.ಚಾನೆಲ್ ಪರವಾನಗಿನೇ ನವೀಕರಣಗೊಳಿಸದೆ, ಸತ್ಯ ಹರಿಶ್ಚಂದ್ರನ ಕಡೇ ತುಂಡು ಅನ್ನೋ ತರ ಮ...
26/06/2024

ರಾಕೇಶ ಶೆಟ್ಟಿಗೆ ಹೈಕೋರ್ಟ್ ಚಾಟಿ. ಪ್ರಸಾರಕ್ಕೆ ನಿರ್ಭಂದ.
ಚಾನೆಲ್ ಪರವಾನಗಿನೇ ನವೀಕರಣಗೊಳಿಸದೆ, ಸತ್ಯ ಹರಿಶ್ಚಂದ್ರನ ಕಡೇ ತುಂಡು ಅನ್ನೋ ತರ ಮಾತಾಡ್ತಿದ್ದ. #ರಾಕೇಶಶೆಟ್ಟಿ

Address

Bangalore
560058

Alerts

Be the first to know and let us send you an email when Vishwa vokkaligara Jagruti posts news and promotions. Your email address will not be used for any other purpose, and you can unsubscribe at any time.

Contact The Business

Send a message to Vishwa vokkaligara Jagruti:

Videos

Share

Category