Udupi News ಉಡುಪಿ ನ್ಯೂಸ್

  • Home
  • Udupi
  • Udupi News ಉಡುಪಿ ನ್ಯೂಸ್

Udupi News ಉಡುಪಿ ನ್ಯೂಸ್ ಪಾಸಿಟಿವ್ ಸಮಾಜ ನಿರ್ಮಾಣಕ್ಕೆ ಪಾಸಿಟಿವ್ ಮಾಧ್ಯಮ ಉಡುಪಿ ನ್ಯೂಸ್

ನೀವು ಉತ್ತರಿಸಬಹುದೇ ?
21/07/2024

ನೀವು ಉತ್ತರಿಸಬಹುದೇ ?

ನಾನೂ ದರ್ಶನ್ ಅಭಿಮಾನಿನೇ ಎಲ್ಲಾ ಅಭಿಮಾನಿಗಳೂ ಬಂದು ಫಿಲಂ ನೋಡಿ.. "ಕಾಗದ" ಮೂವಿ ಡೈರೆಕ್ಟರ್
09/07/2024

ನಾನೂ ದರ್ಶನ್ ಅಭಿಮಾನಿನೇ ಎಲ್ಲಾ ಅಭಿಮಾನಿಗಳೂ ಬಂದು ಫಿಲಂ ನೋಡಿ.. "ಕಾಗದ" ಮೂವಿ ಡೈರೆಕ್ಟರ್

ಮಂಗಳೂರನ್ನೇ ಬೆಚ್ಚಿ ಬೀಳಿಸಿದ 'ಚಡ್ಡಿ ಗ್ಯಾಂಗ್' ಐದು ಗಂಟೆಯಲ್ಲಿ ಬಂಧನ : ವೃದ್ಧ ದಂಪತಿಯ ದರೋಡೆಗೈದ ಚಡ್ಡಿ ಗ್ಯಾಂಗನ್ನು ಕೆಲವೇ ಗಂಟೆಗಳಲ್ಲಿ ಬ...
09/07/2024

ಮಂಗಳೂರನ್ನೇ ಬೆಚ್ಚಿ ಬೀಳಿಸಿದ 'ಚಡ್ಡಿ ಗ್ಯಾಂಗ್' ಐದು ಗಂಟೆಯಲ್ಲಿ ಬಂಧನ : ವೃದ್ಧ ದಂಪತಿಯ ದರೋಡೆಗೈದ ಚಡ್ಡಿ ಗ್ಯಾಂಗನ್ನು ಕೆಲವೇ ಗಂಟೆಗಳಲ್ಲಿ ಬಲೆಗೆ ಕೆಡವಿದ ಉರ್ವಾ ಪೊಲೀಸರು : ಮಧ್ಯಪ್ರದೇಶ ಮೂಲದ ನಾಲ್ವರು ಎಸ್ಕೇಪ್ ಆಗ್ತಿದ್ದಾಗಲೇ ಸಕಲೇಶಪುರದಲ್ಲಿ ಅರೆಸ್ಟ್..!

ಮಂಗಳೂರು : ಉರ್ವಾದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆಗೈದು ಚಿನ್ನಾಭರಣ ದರೋಡೆ ಮಾಡಿದ್ದ ಮಧ್ಯಪ್ರದೇಶ ಮೂಲದ ಚಡ್ಡಿ ಬನಿಯಾನ್ ಗ್ಯಾಂಗ್ ಸದಸ್ಯರನ್ನು ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಸಕಲೇಶಪುರದಲ್ಲಿ ಬಂಧಿಸಿದ್ದಾರೆ.

ಮಧ್ಯಪ್ರದೇಶ ಗುಣಾ ಜಿಲ್ಲೆಯ ರಗೋಗರ್ ತಾಲೂಕಿನ ವಿಶ್ವನಗರ ನಿವಾಸಿ ರಾಜು ಸಿಂಗ್ವಾನಿಯ (24), ಭೋಪಾಲ್ ಜಿಲ್ಲೆಯ ಗುಲಾಬ್ಗಂಜ್ ನಿವಾಸಿ ಮಯೂರ್ (30), ಮಾಧವ್ಗಡ್ ಅಶೋಕನಗರ ನಿವಾಸಿ ಬಾಲಿ (22), ಗುಣಾ ಜಿಲ್ಲೆಯ ಕೋತ್ವಾಲಿ ನಿವಾಸಿ ವಿಕ್ಕಿ (21) ಬಂಧಿತರು.‌

ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಯುವಕರು (ಚೆಡ್ಡಿ ಗ್ಯಾಂಗ್) ಉರ್ವಾ ಬಳಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ಸ್ ತುಂಡರಿಸಿ ಒಳನುಗ್ಗಿದ್ದು ವೃದ್ಧ ದಂಪತಿಗೆ ಹಲ್ಲೆಗೈದು ಬೆದರಿಸಿ, ಮನೆಯಲ್ಲಿದ್ದ 3 ಮೊಬೈಲ್ ಫೋನ್ ಗಳನ್ನು ನೆಲಕ್ಕೆ ಬಡಿದು ಕಪಾಟಿನ ಲಾಕರ್ ಒಳಗೆ ಇರಿಸಿದ್ದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ರೂ 1 ಲಕ್ಷ ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ. 3000 ನಗದು ಹಣವನ್ನು ಸುಲಿಗೆ ಮಾಡಿ, ಸದ್ರಿ ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ವಿಕ್ಟರ್ ಅವರ ಪತ್ನಿ ಪ್ಯಾಟ್ರಿಸಿಯಾ ಮೆಂಡೊನ್ಸಾ ನೀಡಿದ ದೂರಿನಂತೆ ಉರ್ವಾ ಠಾಣೆಯಲ್ಲಿ ಅ.ಕ್ರ 69/2024 ಕಲಂ 309(6), 331(7), 311, 305, 3(5) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು‌.

ಪ್ರಕರಣ ನಡೆದ ಬೆನ್ನಲ್ಲೇ ಪೊಲೀಸರು ನಗರ ನಿಸ್ತಂತು ಕೊಠಡಿಗೆ ನೀಡಿದ್ದು, ಎಲ್ಲ ಠಾಣೆಯ ಪೊಲೀಸರಿಗೆ ಅಲರ್ಟ್ ಸೂಚನೆ ಹೋಗಿತ್ತು. ಮುಲ್ಕಿ ಬಸ್ಸು ನಿಲ್ದಾಣದ ಸಮೀಪ ನಿಲ್ಲಿಸಿದ್ದ ಕಳವು ಮಾಡಲ್ಪಟ್ಟ ಕಾರನ್ನು ಪತ್ತೆ ಮಾಡಿ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಶಂಕಿತ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡುಬಂದಿತ್ತು.

ಕೂಡಲೇ ಕೆ.ಎಸ್.ಅರ್.ಟಿ.ಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮಾಹಿತಿ ಪಡೆದಿದ್ದು ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ತಿಳಿಸಿದ್ದರು. ಸದರಿ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ ಬಗ್ಗೆ ತಿಳಿಸಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್ಸಿನ ನಿರ್ವಾಹಕರನ್ನು ಸಂಪರ್ಕಿಸಿ ಅವರ ಮಾಹಿತಿಯಂತೆ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಾಗಿತ್ತು. ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಸದರಿ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿ ಪ್ರಯಾಣಿಸುತ್ತಿದ್ದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದರೋಡೆ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅವರ ಬಳಿಯಲ್ಲಿದ್ದ ಮಂಗಳೂರಿನಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಹಾಗೂ ಹಣವನ್ನು ವಶಪಡಿಸಿ ಉರ್ವಾ ಪೊಲೀಸರಿಗೆ ನೀಡಿರುತ್ತಾರೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸುಳಿವೇ ಇಲ್ಲದ ಕೃತ್ಯದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ದಿನೇಶ್ ಕುಮಾರ್, ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ತೋರಟ್, ಉರ್ವಾ ಠಾಣೆಯ ನಿರೀಕ್ಷಕರಾದ ಭಾರತೀ ಜಿ. ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆಯ ಎಸ್.ಐ ಹರೀಶ ಹೆಚ್.ವಿ , ಅನಿತಾ ಹೆಚ್.ಬಿ, ಎ.ಎಸ್.ಐ ವಿನಯ್ ಕುಮಾರ್, ವೇಣುಗೋಪಾಲ್ ಸಿಬ್ಬಂದಿಗಳಾದ ಪುಷ್ಪರಾಜ್, ಪ್ರಮೋದ್, ನಾರಾಯಣ, ಸತೀಶ್, ಪೀಟರ್, ರಾಮಚಂದ್ರ ವೆಂಕಟೇಶ್, ಅಭಿಷೇಕ್, ಪ್ರಜ್ವಲ್ ಕಾರ್ಯಾಚರಣೆ ನಡೆಸಿದ್ದಾರೆ. ಶೀಘ್ರ ಪತ್ತೆ ಕಾರ್ಯಕ್ಕೆ ಹಾಸನ ಜಿಲ್ಲೆಯ ಎಸ್ಪಿ ಮಹಮ್ಮದ್ ಸುಜೀತಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಮ್ಮಯ್ಯ ಎಂ.ಕೆ , ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಪ್ರಮೋದ್ ಬಿ., ಸಕಲೇಶಪುರ ನಗರ ಪಿ.ಎಸ್.ಐ ಪ್ರಮೋದ್ ಕೆ.ಎಸ್ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಸದಾಶಿವ ತಿಪ್ಪರೆಡ್ಡಿ, ಸಿಬ್ಬಂದಿಗಳಾದ ಖಾದರ್ ಆಲಿ, ಸುನಿಲ್, ಜಗದೀಶ್, ಯೋಗಿಶ್, ಮೂಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಾಯಕ್ ಬಾವಿಕಟ್ಟೆ, ಸಿಬ್ಬಂದಿಗಳಾದ ಹರೀಶೇಖರ್ ಎ.ಎಸ್.ಐ ಕಿಶೋರ್ ಕೋಟ್ಯಾನ್ , ಚಂದ್ರಶೇಖರ್ ಹಾಗೂ ಶಶಿಧರ್ ಸಹಕರಿಸಿರುತ್ತಾರೆ.

Hats Off to Karnataka Police Karnataka Police Diaries Udupi News ಉಡುಪಿ ನ್ಯೂಸ್

08/07/2024

Lady driver ಬೇಕಾಗಿದ್ದಾರೆ .

Sir , We need lady driver's for electrical vehicles with BGV certificates and Driving licence. Timings 8am to 6pm . Company location Domlur with afternoon free lunch .Salary 28000-30000 .. Only 5 days in week . Travels name :Silicon city transport solutions pvt.Ltd. contact number : Vishwanath [Managinging Director] +919902726006...Manjunath: [Operation manager ] +919900378718 .

ರಾಹುಲ್​ ಕೆನ್ನೆಗೆ ಬಾರಿಸಬೇಕಿತ್ತು.. ಬಿಜೆಪಿ MLA ಡಾ.ವೈ.ಭರತ್ ಶೆಟ್ಟಿ ವಿವಾದಿತ ಹೇಳಿಕೆ.!
08/07/2024

ರಾಹುಲ್​ ಕೆನ್ನೆಗೆ ಬಾರಿಸಬೇಕಿತ್ತು.. ಬಿಜೆಪಿ MLA ಡಾ.ವೈ.ಭರತ್ ಶೆಟ್ಟಿ ವಿವಾದಿತ ಹೇಳಿಕೆ.!

ಮಂಡ್ಯದಲ್ಲಿ ಕುಮಾರಣ್ಣನ ಹೆಸ್ರಲ್ಲಿ ಸರ್ಕಲ್
08/07/2024

ಮಂಡ್ಯದಲ್ಲಿ ಕುಮಾರಣ್ಣನ ಹೆಸ್ರಲ್ಲಿ ಸರ್ಕಲ್

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ, ನಿಲ್ಲದ ವರುಣನ ಆರ್ಭಟ
08/07/2024

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ, ನಿಲ್ಲದ ವರುಣನ ಆರ್ಭಟ

08/07/2024

ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ, ನಿಲ್ಲದ ವರುಣನ ಆರ್ಭಟ .

03/07/2024
ಇವತ್ತು ದರ್ಶನ್ ಬಗ್ಗೆ ಯರ್ರಾಬಿರ್ರಿ ಮಾತಾಡ್ತಿರೋ ಪ್ರಥಮ್ 2 ವರ್ಷದ ಹಿಂದೆ ಯಾವ ಲೆವೆಲ್ ಗೆ ಬಕೆಟ್ ಹಿಡ್ದಿದ್ರು ನೋಡಿ😁🙄
24/06/2024

ಇವತ್ತು ದರ್ಶನ್ ಬಗ್ಗೆ ಯರ್ರಾಬಿರ್ರಿ ಮಾತಾಡ್ತಿರೋ ಪ್ರಥಮ್ 2 ವರ್ಷದ ಹಿಂದೆ ಯಾವ ಲೆವೆಲ್ ಗೆ ಬಕೆಟ್ ಹಿಡ್ದಿದ್ರು ನೋಡಿ😁🙄

R Boss ರಕ್ಷಕ್ ಬುಲೆಟ್ ಸಿನಿಮಾ ಮಾಡಿದ್ರೆ ನೀವು ನೋಡ್ತೀರಾ? ಸುಪರ್ ಹಿಟ್ ಮಾಡ್ತೀರಾ??
24/06/2024

R Boss ರಕ್ಷಕ್ ಬುಲೆಟ್ ಸಿನಿಮಾ ಮಾಡಿದ್ರೆ ನೀವು ನೋಡ್ತೀರಾ? ಸುಪರ್ ಹಿಟ್ ಮಾಡ್ತೀರಾ??

ಯಾರದ್ದು ಸರಿ? ಯಾರದ್ದು ತಪ್ಪು???ನಿಮ್ಮ‌ ಬೆಂಬಲ ಯಾರಿಗೆ?ಅಜಿತ್ ಹನುಮಕ್ಕನವರ್? ದರ್ಶನ್?
16/06/2024

ಯಾರದ್ದು ಸರಿ? ಯಾರದ್ದು ತಪ್ಪು???
ನಿಮ್ಮ‌ ಬೆಂಬಲ ಯಾರಿಗೆ?
ಅಜಿತ್ ಹನುಮಕ್ಕನವರ್? ದರ್ಶನ್?

'ನನಗೊಂದು ಲವ್ ಬ್ರೇಕಪ್ ಆಗಿದೆ, ಸದ್ಯಕ್ಕೆ ಮತ್ತೆ ಲವ್ ಮಾಡಲ್ಲ'- ನಟಿ ಸಪ್ತಮಿ ಗೌಡ
16/06/2024

'ನನಗೊಂದು ಲವ್ ಬ್ರೇಕಪ್ ಆಗಿದೆ, ಸದ್ಯಕ್ಕೆ
ಮತ್ತೆ ಲವ್ ಮಾಡಲ್ಲ'- ನಟಿ ಸಪ್ತಮಿ ಗೌಡ

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ
12/06/2024

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾ...
12/06/2024

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾನ್ ಆಗಿ ತಗೊಳ್ಳಿ! ಡಿ ಬಾಸ್ ಅಭಿಮಾನಿಗಳು ತಮ್ಮ ಕರ್ಮಾನ ತೊಳ್ಕೊಬೇಕಾದ್ರೆ ರೇಣುಕಾ ಸ್ವಾಮಿ ಹೆಂಡತಿಗೆ ಚಂದಾ ಎತ್ತಿ ದುಡ್ಡು ಕೊಡಿ! ನನ್ನ ಕಡೆಯಿಂದ ೧೦೦೧ ರು ಕೊಡ್ತೀನಿ. ಪ್ರಶಾಂತ್ ಸಂಭರ್ಗಿ ಸಲಹೆ.


ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿ...
12/06/2024

ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿಗೆ ಅರೋಗ್ಯ ಸಮಸ್ಯೆ ಇತ್ತು. ದೇಹದಲ್ಲಿ ಆಗಿರೋ ಗಾಯ ಹೊಡೆದಿದ್ದರಿಂದ ಆಗಿದ್ದಿಲ್ಲ. ಡೆಡ್ ಬಾಡಿ ಮೇಲೆ ನಾಯಿ ಕಚ್ಚಿದ್ದ ಕಾರಣ ಗಾಯ ಆಗಿದೆ! : ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ನಟ ಕೊಲೆಯಂತಹ ಹೀನ ಕೃತ್ಯ ನಡೆಸಲು ಕುಮ್ಮಕ್ಕು ನೀಡಿದ್ದು ಆಗಿರಬಹುದಾ? ಅಥವಾ ಇದೇನೋ ಷಡ್ಯಂತ್ರ ಆಗಿರಬಹುದಾ?ನ...
11/06/2024

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ನಟ ಕೊಲೆಯಂತಹ ಹೀನ ಕೃತ್ಯ ನಡೆಸಲು ಕುಮ್ಮಕ್ಕು ನೀಡಿದ್ದು ಆಗಿರಬಹುದಾ? ಅಥವಾ ಇದೇನೋ ಷಡ್ಯಂತ್ರ ಆಗಿರಬಹುದಾ?

ನಿಮ್ಮ ಅನಿಸಿಕೆ ಏನು?? ಕಾಮೆಂಟ್ ಮಾಡಿ

ಪುನೀತ್ ರಾಜ್ ಕುಮಾರ್ ಜೊತೆ ಕಂಪೇರ್ ಮಾಡಿ ಈ ಮನುಷ್ಯ(ದರ್ಶನ್) ಮಾತಾಡಿದ್ರು. ಅವ್ರ ಬಳಿ ಲಂಬೋರ್ಗಿನಿ ಉರುಸ್ ಇದೆ ನನ್ನ ಬಳಿನೂ ಇದೆ ಅಂತ. ಇವತ್ತ...
11/06/2024

ಪುನೀತ್ ರಾಜ್ ಕುಮಾರ್ ಜೊತೆ ಕಂಪೇರ್ ಮಾಡಿ ಈ ಮನುಷ್ಯ(ದರ್ಶನ್) ಮಾತಾಡಿದ್ರು. ಅವ್ರ ಬಳಿ ಲಂಬೋರ್ಗಿನಿ ಉರುಸ್ ಇದೆ ನನ್ನ ಬಳಿನೂ ಇದೆ ಅಂತ. ಇವತ್ತು ಪೊಲೀಸ್ ಕರ್ಕೊಂಡ್ ಹೋಗಿದ್ದು ಮಹಿಂದ್ರಾ ಬೊಲೆರೋ ದಲ್ಲಿ!
ರೊಚ್ಚಿಗೆದ್ದ ಅಜಿತ್ ಹನುಮಕ್ಕನವರ್🔥

ಇದೊಂದು ನಾಚಿಕೆಗೇಡಿನ ಸಂಗತಿ! ದರ್ಶನ್ ಗೆ ಶಿಕ್ಷೆ ಆಗಲೇ ಬೇಕು! ಭಾವನಾ ಬೆಳಗೆರೆ ಆಕ್ರೋಶ
11/06/2024

ಇದೊಂದು ನಾಚಿಕೆಗೇಡಿನ ಸಂಗತಿ! ದರ್ಶನ್ ಗೆ ಶಿಕ್ಷೆ ಆಗಲೇ ಬೇಕು! ಭಾವನಾ ಬೆಳಗೆರೆ ಆಕ್ರೋಶ

ಪ್ರೀತಿ ಅಥವಾ ಹಣ ಯಾವುದು ಮುಖ್ಯ ?
10/06/2024

ಪ್ರೀತಿ ಅಥವಾ ಹಣ ಯಾವುದು ಮುಖ್ಯ ?

ನಿಮಗೆಲ್ಲ ಇತ್ತು ನಿಮ್ಮ ಬೀದಿಗೆ ಬರ್ಲಿಲ್ಲ ಅಂತ , ನಿಮ್ಮ ಬೀದಿಗೂ ಬರ್ತೀನಿ ನಿಮ್ಮ ಮನೆಗೂ ಬರ್ತೀನಿ , ನಿಮ್ಮ ಊರಿಗೂ ಬರ್ತೀನಿ, ಎಲ್ಲ ಕೆಲಸ ಕಾರ...
10/06/2024

ನಿಮಗೆಲ್ಲ ಇತ್ತು ನಿಮ್ಮ ಬೀದಿಗೆ ಬರ್ಲಿಲ್ಲ ಅಂತ , ನಿಮ್ಮ ಬೀದಿಗೂ ಬರ್ತೀನಿ ನಿಮ್ಮ ಮನೆಗೂ ಬರ್ತೀನಿ , ನಿಮ್ಮ ಊರಿಗೂ ಬರ್ತೀನಿ, ಎಲ್ಲ ಕೆಲಸ ಕಾರ್ಯಗಳನ್ನು ಖಂಡಿತ ನಿಮ್ಮ ಜೊತೆ ಇದ್ದುಕೊಂಡು ಮಾಡ್ತೀನಿ, ನಾನು ಬದುಕಬೇಕು , ಬಾಳಬೇಕು , ಧೈರ್ಯವಾಗಿರಿ , ಯಾರೆಲ್ಲ ಏನೇನು ಮಾಡಿದ್ದಾರೆ ಅದನ್ನೆಲ್ಲ ಭಗವಂತ ನೋಡ್ಕೊಳ್ತಾನೆ! ಡಿ ಕೆ ಸುರೇಶ್ ಭಾವುಕ

ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಇಂದಿನ ಅಲಂಕಾರ  10/06/2024
10/06/2024

ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಇಂದಿನ ಅಲಂಕಾರ 10/06/2024

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದ ಚಿತ್ರ ನಟ, ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ
10/06/2024

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದ ಚಿತ್ರ ನಟ, ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ

ಶೋಭಾ ಕರಂದ್ಲಾಜೆಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
09/06/2024

ಶೋಭಾ ಕರಂದ್ಲಾಜೆ

ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಲಲನ್ ಸಿಂಗ್, ಸರ್ಭಾನಂದ್ ಸೋನಾವಾಲ, ಡಾ ವೀರೇಂದ್ರ ಕುಮಾರ್, ಕಿಂಜಿರಪ್ಪು ರಾಮ್ ಮೋಹನ್ ...
09/06/2024

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ
ಲಲನ್ ಸಿಂಗ್, ಸರ್ಭಾನಂದ್ ಸೋನಾವಾಲ, ಡಾ ವೀರೇಂದ್ರ ಕುಮಾರ್, ಕಿಂಜಿರಪ್ಪು ರಾಮ್ ಮೋಹನ್ ನಾಯ್ಡು

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಜೈಶಂಕರ್, ಮನೋಹರ್ ಲಾಲ್ ಕಟ್ಟರ್
09/06/2024

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ
ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಜೈಶಂಕರ್, ಮನೋಹರ್ ಲಾಲ್ ಕಟ್ಟರ್

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಪ್ರಹ್ಲಾದ್ ಜೋಶಿ, ಜುಯಲ್ ಓರಮ್, ಗಿರಿರಾಜ್ ಸಿಂಗ್, ಅಶ್ವನೀ ವೈಶ್ಣವ್
09/06/2024

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ
ಪ್ರಹ್ಲಾದ್ ಜೋಶಿ, ಜುಯಲ್ ಓರಮ್, ಗಿರಿರಾಜ್ ಸಿಂಗ್, ಅಶ್ವನೀ ವೈಶ್ಣವ್

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆ ಪಿ ನಡ್ಡಾ
09/06/2024

ಕ್ಯಾಬಿನೆಟ್ ದರ್ಜೆ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ
ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆ ಪಿ ನಡ್ಡಾ

ಪ್ರಹ್ಲಾದ್ ವೆಂಕಟೇಶ್ ಜೋಶಿ...ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಹ್ಲಾದ್ ಜೋಶಿ
09/06/2024

ಪ್ರಹ್ಲಾದ್ ವೆಂಕಟೇಶ್ ಜೋಶಿ...

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಹ್ಲಾದ್ ಜೋಶಿ

ಐ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ....ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಣ್ಣ
09/06/2024

ಐ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ....

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಣ್ಣ

Address

Badagupette Udupi
Udupi
576101

Alerts

Be the first to know and let us send you an email when Udupi News ಉಡುಪಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Videos

Share


Other Media/News Companies in Udupi

Show All