News Kadaba

News Kadaba 24x7 Regional news 24x7 Regional News
(1)

20/04/2024

💥 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಿಂದ ಕಡಬದಲ್ಲಿ ರೋಡ್ ಶೋ, ಮತ ಯಾಚನೆ

💥ಬಿಜೆಪಿಯು ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಕಾಂಗ್ರೆಸ್ ಸಾಮರಸ್ಯದ ಗತ ವೈಭವವನ್ನು ಮರಳಿ ನೀಡಲಿದೆ

💥ಕರಾವಳಿಗೆ ರೈಲು, ಬಂದರು, ಏರ್‌ಪೋರ್ಟ್ ನೀಡಿದ್ದು ಕಾಂಗ್ರೆಸ್ ಸಾಧನೆ, ಅದನ್ನು ಮಾರಾಟ ಮಾಡಿದ್ದು ಬಿಜೆಪಿ ಸಾಧನೆ

💥 ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಒಂದು ಅವಕಾಶ ಕೊಡಿ ಎಂದ ಪದ್ಮರಾಜ್

*💥 ಪ್ರವಾಸಿ ತಾಣವನ್ನಾಗಿಸಿ ಇಲ್ಲಿನ ಯುವಕರಿಗೆ ಜಿಲ್ಲೆಯಲ್ಲೇ ಕೆಲಸ ಸೃಷ್ಟಿ ಮಾಡುವುದಾಗಿ ಭರವಸೆ*

💥ಮಂಗಳೂರಿನ ಎಜ್ಯಕೇಶನಲ್ ಹಬ್, ಮೆಡಿಕಲ್ ಹಬ್ ಬಗ್ಗೆ ಅವರು ಹೇಳಿದ್ದು ಹೀಗೆ

14/03/2024

ಆಪತ್ಬಾಂಧವನಾಗಿ 50 ಪ್ರಯಾಣಿಕರ ಪ್ರಾಣ ಉಳಿಸಿದ ಕಡಬದ ಬಸ್ ಚಾಲಕ

ತನ್ನ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ದಡ ಸೇರಿಸಿದ 'ಅದೃಷ್ಟವಂತ ಮನುಷ್ಯ'

26/02/2024

ಹೇಗಿದೆ ಗೊತ್ತಾ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ 3D ವೀಡಿಯೋ

25/02/2024

ಪ್ರಧಾನಿ ಮೋದಿಯವರ 110ನೇ ಮನ್ ಕಿ ಬಾತ್

16/02/2024

Live | ಕರ್ನಾಟಕ ವಿಧಾನಸಭಾ ಅಧಿವೇಶನ ನೇರಪ್ರಸಾರ | Karnataka Vidhanasabha Adhiveshana

15/02/2024

ಕಡಬ: ದಲಿತ ಭೂಮಿ ಒತ್ತುವರಿ ಆರೋಪ - ಸ್ಥಳೀಯರು ಹೇಳಿದ್ದೇನು ಗೊತ್ತಾ..?

11/02/2024

ವೈರಲ್ ವೀಡಿಯೋ | ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಮಹಿಳೆ

29/01/2024
10/01/2024

ಕಡಬದಲ್ಲಿ ಅಕ್ರಮ ಮರಳುಗಾರಿಕೆಯಿಂದ ಸರಕಾರಕ್ಕೆ ಕೋಟ್ಯಂತರ ನಷ್ಟ - ಭಾಸ್ಕರ ಗೌಡ ಪದಕ ಆರೋಪ

08/01/2024

ಗೂಡಂಗಡಿ ಮತ್ತು ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಬಿದ್ದ ಬೃಹತ್ ಮರ

24/11/2023

ಗೂಗಲ್ ಪೇ ಗ್ರಾಹಕರಿಗೆ ಬಿಗ್ ಶಾಕ್..!

(ನ್ಯೂಸ್ ಕಡಬ)newskadaba.com ರಾಯಚೂರು, ಆ.11. ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೇಗಳಪೇಟೆ ಹ...
11/08/2023

(ನ್ಯೂಸ್ ಕಡಬ)newskadaba.com ರಾಯಚೂರು, ಆ.11. ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಯಲ್ಲಿ ಚೌಡಮ್ಮ(34), ರಾಮಣ್ಣ(4), ಮುತ್ತಣ್ಣ(3) ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳನ್ನು ಮೊದಲು ಬಾವಿಗೆ ಎಸೆದು ಬಳಿಕ ತಾಯಿ ಬಾವಿಗೆ ಹಾರಿದ ಬಗ್ಗೆ ಸಂಶಯ ವ್ಯಕ್ತವಾಗಿದೆ.

https://newskadaba.com/84130/

(ನ್ಯೂಸ್ ಕಡಬ)newskadaba.com ರಾಯಚೂರು, ಆ.11. ಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೇಗಳಪೇಟೆ ಹೊರ ವಲ....

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.11. ಬೋರ್ ವೆಲ್ ಯಂತ್ರ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಚಾ...
11/08/2023

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.11. ಬೋರ್ ವೆಲ್ ಯಂತ್ರ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾಣತ್ತೂರು ಕಡೆಗೆ ತೆರಳುತ್ತಿದ್ದ ಲಾರಿ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಈ ಅವಘಡ ನಡೆದಿದೆ. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು.

https://newskadaba.com/84128/

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.11. ಬೋರ್ ವೆಲ್ ಯಂತ್ರ ಸಾಗಾಟದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಚಾಲಕ ಸೇರ...

(ನ್ಯೂಸ್ ಕಡಬ)newskadaba.com ಮೈಸೂರು, ಆ.11. ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ​ ಬರೋಬ...
11/08/2023

(ನ್ಯೂಸ್ ಕಡಬ)newskadaba.com ಮೈಸೂರು, ಆ.11. ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ​ ಬರೋಬ್ಬರಿ 5.48 ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು, ಲಿಂಕ್​ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ. ಇನ್ನು ಕರೆ ಕಡಿತಗೊಳಿಸಿದ ಬಳಿಕ ಕಣ್ಣನ್ ಅವರ ಫೋನ್ ​ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದು, ಅದರಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಕಣ್ಣನ್​ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.

https://newskadaba.com/84126/

(ನ್ಯೂಸ್ ಕಡಬ)newskadaba.com ಮೈಸೂರು, ಆ.11. ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ​ ಬರೋಬ್ಬರ....

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ಕೋಟೆ, ರಾಜ್‍...
11/08/2023

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ಕೋಟೆ, ರಾಜ್‍ಘಾಟ್ ಹಾಗೂ ಐಟಿಒನಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಈ ವರ್ಷ ಕೂಡ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, ದೇಶಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಇನ್ನು ಕೆಂಪು ಕೋಟೆ ಹಾಗೂ ರಾಜ್‍ಘಾಟ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳನ್ನು ಮಾಡಲು ಅನುಮತಿ ನೀಡಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

https://newskadaba.com/84124/

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಆಗಸ್ಟ್ 15 ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಕೆಂಪು ಕೋಟೆ, ರಾಜ್‍ಘಾಟ್...

(ನ್ಯೂಸ್ ಕಡಬ)newskadaba.com ಶ್ರೀನಗರ, ಆ.11. ಆರು ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮು...
11/08/2023

(ನ್ಯೂಸ್ ಕಡಬ)newskadaba.com ಶ್ರೀನಗರ, ಆ.11. ಆರು ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾದ ಉರಿ ಪ್ರದೇಶದಲ್ಲಿ ಭಯೋತ್ಪಾದನಾ ಘಟಕವನ್ನು ಪತ್ತೆಹಚ್ಚಲಾಗಿದ್ದು ,ಎಲ್ಇಟಿ ಉಗ್ರರ ಮೂವರು ಸಹಚರರನ್ನು ಬಂಧಿಸಲಾಗಿದೆ. ಇನ್ನು ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಜಂಟಿ ಗಸ್ತು ತಿರುಗುತ್ತಿದ್ದ ವೇಳೆ ಓರ್ವ ಶಂಕಿತ ನನ್ನು ಬಂಧಿಸಿದರು. ಬಳಿಕ ಎರಡು ಗ್ರೆನೇಡ್‌ಗಳು, ಒಂದು ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್ ಮತ್ತು ನಾಲ್ಕು ಲೈವ್ ರೌಂಡ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

https://newskadaba.com/84122/

(ನ್ಯೂಸ್ ಕಡಬ)newskadaba.com ಶ್ರೀನಗರ, ಆ.11. ಆರು ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ...

(ನ್ಯೂಸ್ ಕಡಬ)newskadaba.com ವಿಟ್ಲ, ಆ.11. ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಠಾಣಾ ಪೊಲೀಸರು...
11/08/2023

(ನ್ಯೂಸ್ ಕಡಬ)newskadaba.com ವಿಟ್ಲ, ಆ.11. ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಆರೋಪಿಯನ್ನು ಬಂಟ್ವಾಳ ನೆಟ್ಲಮುಡ್ನೂರು ಗ್ರಾಮದ ಶಶಿಧರ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಯ ವಶದಲ್ಲಿದ್ದ ಅಂದಾಜು ರೂ 1,516.21 ಮೌಲ್ಯದ ವಿವಿಧ ಕಂಪೆನಿಯ ಒಟ್ಟು ಪ್ರಮಾಣ 2.880 ಲೀಟರ್ ಅಕ್ರಮ ಮದ್ಯದ ಸ್ಯಾಚೆಟ್ ಗಳು ಹಾಗೂ ಮದ್ಯ ಮಾರಾಟದಿಂದ ಬಂದ ರೂಪಾಯಿ 550 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

https://newskadaba.com/84120/

(ನ್ಯೂಸ್ ಕಡಬ)newskadaba.com ವಿಟ್ಲ, ಆ.11. ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಠಾಣಾ ಪೊಲೀಸರು ಬಂ....

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (Prime Ministers Employment Generatio...
11/08/2023

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (Prime Ministers Employment Generation Programme) ಯೋಜನೆಯಡಿ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ ಉದ್ಯೋಗಕ್ಕಾಗಿ ಬ್ಯಾಂಕುಗಳ ಮೂಲಕ ಸಾಲ ಸಹಾಯಧನಕ್ಕೆ ಆನ್ಲೈೆನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎನ್ನಲಾಗಿದೆ. PMEGP ವೆಬ್ಸೈ್ಟ್ ನಲ್ಲಿ ಆನ್ಲೈಧನ್ ಮೂಲಕ ಅರ್ಜಿ ಸಲ್ಲಿಸಲು ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ಸಂಬಂಧಿತ ಬ್ಯಾಂಕುಗಳಿಗೆ ಕಳುಹಿಸಲಾಗುವುದು. ಅರ್ಜಿ ಸಲ್ಲಿಕೆಯ ನಂತರದಲ್ಲಿನ ವಿವಿಧ ಹಂತಗಳ ಪ್ರಗತಿಯನ್ನು ಆನ್ಲೈಲನ್ ಸ್ಟೇಟಸ್ ನೋಡಬಹುದು. ಏಜೆನ್ಸಿ ಹೆಸರು ಡಿಐಸಿ ಎಂದು ನಮೋದಿಸಬೇಕು. ಹೆಚ್ಚಿನ ಮಾಹಿತಿಗೆ ಇಂಡಸ್ಟ್ರಿಯಲ್ ಎಸ್ಟೇಟ್ನ‍ಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0824-2214021 ಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://newskadaba.com/84117/

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (Prime Ministers Employment Generation Programme) ಯೋಜನೆಯಡಿ ಜಿಲ್ಲೆಯ ನಿರು.....

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.11. KSRTC ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖ...
11/08/2023

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.11. KSRTC ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿ ನಡೆದಿದೆ. ಫ್ರಾನ್ಸಿಸ್ ಲೋಬೋ ಅವರು ಬಂಟ್ವಾಳ ಪೇಟೆಯ ಕಡೆಯಿಂದ ಮೂಡಬಿದಿರೆಯ ಕಡೆ ಹೋಗುವ ವೇಳೆ ನಾಲ್ಕು ಮಾರ್ಗ ಕೂಡುವ ಬೈಪಾಸ್ ಜಂಕ್ಷನ್ ನಲ್ಲಿ ಅಪಘಾತ ನಡೆದಿದ್ದು, ಬೈಕ್ ಸವಾರ ಬಂಟ್ವಾಳದಿಂದ ಹೈವೆಯ ಮೂಲಕ ಮೂಡಬಿದಿರೆ ರಸ್ತೆಗೆ ಏಕಾಏಕಿ ನುಗ್ಗಿಸಿದ ಪರಿಣಾಮವಾಗಿ ಬಸ್ ಚಾಲಕನಿಗೆ ಬೈಕ್ ಬರುವುದು ಕಂಡಿಲ್ಲ. ಹಾಗಾಗಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸರಕಾರಿ ಬಸ್ ಚಾಲಕ ಅಪಘಾತ ತಪ್ಪಿಸಲು ಬ್ರೇಕ್ ಹಾಕಿ ಸಾಕಷ್ಟು ಪ್ರಯತ್ನ ಪಟ್ಟ ಬಗ್ಗೆ ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.

https://newskadaba.com/84115/

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.11. KSRTC ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಮಂಗಳೂರು ಖಾಸಗಿ ಆಸ್.....

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೋ ವನ್ನು ಅನಾವರಣ ಮಾಡಿ...
11/08/2023

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೋ ವನ್ನು ಅನಾವರಣ ಮಾಡಿದ್ದು, ಏರ್ ಇಂಡಿಯಾ ಹೊಸ ಲೋಗೋಗೆ 'ದಿ ವಿಸ್ತಾ' ಎಂದು ನಾಮಕರಣ ಮಾಡಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷ ಆದ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಿದ್ದು, ಇನ್ನು ವಿಮಾನಯಾನ ಸಂಸ್ಥೆಯು ತನ್ನ ಹೊಸ ಬಾಲ ವಿನ್ಯಾಸ ಮತ್ತು ಥೀಮ್ ಹಾಡನ್ನು ಕೂಡ ಬಹಿರಂಗಪಡಿಸಿದ್ದು, ಏರ್ ಇಂಡಿಯಾ ಒಂದು ವ್ಯಾಪಾರವಲ್ಲ, ಟಾಟಾ ಸಮೂಹಕ್ಕೆ ಇದು ಉತ್ಸಾಹ ಈ ಉತ್ಸಾಹವು ರಾಷ್ಟ್ರೀಯ ಮಿಷನ್ ಆಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

https://newskadaba.com/84113/

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೋ ವನ್ನು ಅನಾವರಣ ಮಾಡಿದ್ದು...

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅನಾಮಧೇಯ ಬ್ಯಾಗ್‌ ನಲ್ಲಿ ದೊರೆತ ಗಾಂಜಾವನ್ನು ರೈಲ್ವೇ ಪ...
11/08/2023

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅನಾಮಧೇಯ ಬ್ಯಾಗ್‌ ನಲ್ಲಿ ದೊರೆತ ಗಾಂಜಾವನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿಲ್ದಾಣದ ಎರಡನೇ ಫ್ಲ್ಯಾಟ್‌ ಫಾರಂನಲ್ಲಿ ಕಾರವಾರ-ಯಶವಂತಪುರ (ನಂ.16516) ಎಕ್ಸ್ ಪ್ರೆಸ್‌ ರೈಲಿನಲ್ಲಿ 3,16,650 ರೂ. ಮೌಲ್ಯದ 6.333 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿತ್ತು. ರೈಲಿನ ನಿಯಮಿತ ತಪಾಸಣೆ ವೇಳೆ ಪತ್ತೆಯಾದ ಅನಾಮಧೇಯ ಬ್ಯಾಗ್‌ ನಲ್ಲಿ ಗಾಂಜಾ ಕಂಡು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದ‌ಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

https://newskadaba.com/84110/

(ನ್ಯೂಸ್ ಕಡಬ)newskadaba.com ಮಂಗಳೂರು, ಆ.11. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಅನಾಮಧೇಯ ಬ್ಯಾಗ್‌ ನಲ್ಲಿ ದೊರೆತ ಗಾಂಜಾವನ್ನು ರೈಲ್ವೇ ಪೊಲೀ....

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಆ.11. ಬಿಜೆಪಿ ಮುಖಂಡ ಅನುಜ್ ಚೌಧರಿ(34) ಅವರನ್ನು ಉತ್ತರ ಪ್ರದೇಶದ ಸಂಭಾಲ್‌ನ ಮೊರಾದಾಬಾದ್‌ನಲ...
11/08/2023

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಆ.11. ಬಿಜೆಪಿ ಮುಖಂಡ ಅನುಜ್ ಚೌಧರಿ(34) ಅವರನ್ನು ಉತ್ತರ ಪ್ರದೇಶದ ಸಂಭಾಲ್‌ನ ಮೊರಾದಾಬಾದ್‌ನಲ್ಲಿರುವ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಚೌಧರಿ ಅವರು ತಮ್ಮ ಅಪಾರ್ಟ್‌ ಮೆಂಟ್‌ನ ಹೊರಗೆ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್‌ ನಲ್ಲಿ ಬಂದ ಮೂವರು ಅನೇಕ ಬಾರಿ ಗುಂಡು ಹಾರಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ ಎನ್ನಲಾಗಿದೆ.

https://newskadaba.com/84108/

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಆ.11. ಬಿಜೆಪಿ ಮುಖಂಡ ಅನುಜ್ ಚೌಧರಿ(34) ಅವರನ್ನು ಉತ್ತರ ಪ್ರದೇಶದ ಸಂಭಾಲ್‌ನ ಮೊರಾದಾಬಾದ್‌ನಲ್ಲಿರು....

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.11. ಕಾರ್ಮಿಕ ವರ್ಗದ ಓಡಾಟಕ್ಕೆ ಇದ್ದ ರಿಯಾಯಿತಿ ಬಸ್‌ ಪಾಸ್‌ ಯೋಜನೆ ಸದ್ದಿಲ್ಲದೇ ಸ್ಥಗಿತಗೊಳಿಸಲ...
11/08/2023

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.11. ಕಾರ್ಮಿಕ ವರ್ಗದ ಓಡಾಟಕ್ಕೆ ಇದ್ದ ರಿಯಾಯಿತಿ ಬಸ್‌ ಪಾಸ್‌ ಯೋಜನೆ ಸದ್ದಿಲ್ಲದೇ ಸ್ಥಗಿತಗೊಳಿಸಲಾಗುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಂದ ಯೋಜನೆಯ ಮೂಲಕ ಉಚಿತ ಬಸ್ ಪಾಸು ಪಡೆದ ನೋಂದಾಯಿತ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕರು ಪಾಸಿನೊಂದಿಗೆ KSRTC ಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ಈ ಪಾಸ್‌ ಅವಧಿ 3 ತಿಂಗಳು ಚಾಲ್ತಿಯಲ್ಲಿದ್ದು, ನಂತರ ಪಾಸ್‌ ನವೀಕರಣ ಮಾಡಿಸಿಕೊಳ್ಳಬೇಕಾಗಿತ್ತು ಎನ್ನಲಾಗಿದೆ. ಕಾರ್ಮಿಕರ‌‌ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಚುನಾವಣಾ ಗಿಮಿಕ್ ಮಾಡಿರುವುದು ಎಂಬ ನಿಲುವನ್ನು ಕಾಂಗ್ರೆಸ್ ಸರ್ಕಾರ ತಳೆದಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕರಿಗಾಗಿ ಜಾರಿಗೆ ತಂದಿದ್ದ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸರ್ಕಾರ ಮಾರ್ಚ್ 31ರ ನಂತರ ಪಾಸ್ ವಿತರಿಸದಂತೆ ಹಾಗೂ ಅಂತಹ ಪಾಸ್‌ಗಳಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದೆ ಎನ್ನಲಾಗಿದೆ.

https://newskadaba.com/84105/

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.11. ಕಾರ್ಮಿಕ ವರ್ಗದ ಓಡಾಟಕ್ಕೆ ಇದ್ದ ರಿಯಾಯಿತಿ ಬಸ್‌ ಪಾಸ್‌ ಯೋಜನೆ ಸದ್ದಿಲ್ಲದೇ ಸ್ಥಗಿತಗೊಳಿಸಲಾಗ.....

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಸದನದೊಳಗೆ ಟೊಮೆಟೊ ಹಾರ ಧರಿಸಿ ಪ್ರವೇ...
10/08/2023

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಸದನದೊಳಗೆ ಟೊಮೆಟೊ ಹಾರ ಧರಿಸಿ ಪ್ರವೇಶಿಸಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದಿನದ ಅಧಿವೇಶನದ ಪ್ರಾರಂಭ ಮತ್ತು ಪಟ್ಟಿ ಮಾಡಲಾದ ಕಾರ್ಯ ಸೂಚಿಯ ಪ್ರಾರಂಭದ ನಂತರ, ಟೊಮೆಟೊ ಹಾರ ಹಾಕಿದ್ದ ಸುಶೀಲ್‌ ಕುಮಾರ್‌ ಗುಪ್ತಾ ಅವರ ಈ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಸಭೆಯ ಅಧ್ಯಕ್ಷನಾಗಿ, ಗೌರವಾನ್ವಿತ ಸದಸ್ಯರಾದ ಸುಶೀಲ್ ಗುಪ್ತಾ ಅವರು ಬಂದ ರೀತಿಯನ್ನು ನೋಡಿ ನನಗೆ ತುಂಬಾ ನೋವಾಗಿದೆ" ಎಂದು ಧನಕರ್ ಹೇಳಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು....

https://newskadaba.com/84076/

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಸದನದೊಳಗೆ ಟೊಮೆಟೊ ಹಾರ ಧರಿಸಿ ಪ್ರವೇಶಿಸಿ.....

(ನ್ಯೂಸ್ ಕಡಬ)newskadaba.com ಮಣಿಪಾಲ, ಆ.10. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದ...
10/08/2023

(ನ್ಯೂಸ್ ಕಡಬ)newskadaba.com ಮಣಿಪಾಲ, ಆ.10. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದಲ್ಲಿ ನಡೆಯುವ ಅಕ್ರಮ ಪಬ್ ಮತ್ತು ಗಾಂಜಾ ವ್ಯವಹಾರದ ಬಗ್ಗೆ ಗಮನ ಸೆಳೆಯುವ ಒಂದು ಮನವಿಯನ್ನು ಉಡುಪಿ ಕಾಂಗ್ರೆಸ್ ಪಕ್ಷದ ನಿಯೋಗದಿಂದ ನೀಡಲಾಯಿತು. ಮುಂದುದರಿದ ಹಂತವಾಗಿ ಮಣಿಪಾಲ ಪೊಲೀಸ್ ಸ್ಟೇಶನ್ ನ ಇನ್ಸ್ಪೆಕ್ಟರ್ ಶ್ರೀ ದೇವರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಶ್ರೀ ಅಬ್ದುಲ್ ಖಾದರ್ ಅವರನ್ನು ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿಯಾಗಿ ಮಣಿಪಾಲದಲ್ಲಿ ಪಬ್ ಮತ್ತು ಗಾಂಜಾ ವಿಚಾರದಲ್ಲಿ ನಡೆಯುವ ವ್ಯವಹಾರ ಮತ್ತು ನಿಯಮ ಮೀರಿ ಮಧ್ಯರಾತ್ರಿ ನಂತರ ಕೂಡ ನಡೆಯುತ್ತಿರುವ ವಿಧ್ಯಾರ್ಥಿಗಳ ಮತ್ತು ಹೊರಗಿನಿಂದ ಬಂದ ಯುವಕರ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ಯಾವುದೇ ಶಕ್ತಿ ಇರಬಹುದು ಅದನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು....

https://newskadaba.com/84074/

(ನ್ಯೂಸ್ ಕಡಬ)newskadaba.com ಮಣಿಪಾಲ, ಆ.10. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದಲ್.....

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿಗೆ ಸಂ...
10/08/2023

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಜನ ಸಂಪರ್ಕ ಸಭೆಯು ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರಿಂದ ಒಟ್ಟು 13 ದೂರುಗಳು ಸ್ವೀಕೃತವಾಗಿದ್ದು, ಪ್ರಮುಖವಾಗಿ ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗಳಿಗೆ ಸಂಬಂಧಿಸಿದ್ದವಾಗಿದ್ದು, ಕೆಲವು ದೂರುಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದ್ದು ಬಾಕಿ ಉಳಿದ ದೂರುಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಗಿದೆ. ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸೈಮನ್ ಸಿ.ಎ. ಅವರ ಉಪಸ್ಥಿತಿಯಲ್ಲಿ ಪುತ್ತೂರು ತಹಶೀಲ್ದಾರ್ ಶಿವಶಂಕರ್, ಡಿವೈಎಸ್ಪಿ ಚೆಲುವರಾಜ ಬಿ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

https://newskadaba.com/84071/

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿಗೆ ಸಂಬಂ.....

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ನಾಲ್ಕು ವಾರಸುದಾರರಿಲ್ಲದ ಶವಗಳ ...
10/08/2023

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ನಾಲ್ಕು ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರವನ್ನು ನಗರ ಪೊಲೀಸ್ ಠಾಣೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಸೇರಿಕೊಂಡು ಬೀಡಿನಗುಡ್ಡೆಯ ಹಿಂದುರುದ್ರ ಭೂಮಿಯಲ್ಲಿ ಗೌರಯುತವಾಗಿ ನಡೆಸಿದರು. ಎ.ಎಸ್.ಐ ಜಯಕರ್, ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್, ತನಿಖಾ ಸಹಾಯಕ ಕಾನೂನು ಪ್ರಕ್ರಿಯೆ ನಡೆಸಿದ್ದು, ಮೃತರ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆಯ ಕಾಲಮಿತಿ ಕಳೆದರೂ ಮೃತರ ಸಂಬಂಧಿಕರು ಇಲಾಖೆಯನ್ನು ಸಂಪರ್ಕಿಸಿರಲ್ಲ. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಮುಂದಾಳತ್ವ ವಹಿಸಿದ್ದರು. ಯತೀಶ್, ಸಾಜಿ ಕುಮಾರ್, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಫ್ಲವರ್ ವಿಷ್ಣು, ಪ್ರದೀಪ್ ಹಾಗೂ ಜಿಲ್ಲಾಸ್ಪತ್ರೆ, ನಗರಸಭೆ ಸಹಕರಿಸಿದೆ.

https://newskadaba.com/84068/

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ನಾಲ್ಕು ವಾರಸುದಾರರಿಲ್ಲದ ಶವಗಳ ಅಂ...

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಯುವತಿಯ ಮಾನ ಹಾನಿಯಾಗುವಂತೆ ವರ್ತಿಸಿದ್ದ ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,00...
10/08/2023

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಯುವತಿಯ ಮಾನ ಹಾನಿಯಾಗುವಂತೆ ವರ್ತಿಸಿದ್ದ ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆದೇಶಿಸಿದ್ದಾರೆ ಎನ್ನಲಾಗಿದೆ. ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆ, ಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ವೇಳೆ, ಅವರಿಗೆ ತಿಳಿಯದಂತೆ, ಅವರ ಛಾಯಾ ಚಿತ್ರವನ್ನು ಮೊಬೈಲ್‌ ನಲ್ಲಿ ತೆಗೆದು ಅದನ್ನು ಗೋಪಾಲನಿಗೆ ನೀಡಿದ್ದು, ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದು, ಸದ್ರಿಯವರು ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲನು ಊರಿನಲ್ಲಿ ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು ಮಾಡಿರುತ್ತಾರೆ.

https://newskadaba.com/84066/

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಯುವತಿಯ ಮಾನ ಹಾನಿಯಾಗುವಂತೆ ವರ್ತಿಸಿದ್ದ ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವ....

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ನಿಷೇದಿತ ಪ್ಲಾಸ್ಟಿಕ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ...
10/08/2023

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ನಿಷೇದಿತ ಪ್ಲಾಸ್ಟಿಕ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 62 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ಗಳನ್ನು ವಶಪಡಿಸಿಕೊಂಡು ಸಂತೆ ಅಂಗಡಿಯವರಿಗೆ ರೂ. 700 ದಂಡ ವಿಧಿಸಲಾಯಿತು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಹಾಗೂ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸಿದ್ದಲ್ಲಿ ಬಾರಿ ದಂಡವನ್ನು ವಿಧಿಸಿ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ತಿಳಿಸಲಾಯಿತು. ನಗರಸಭೆಯ ಪೌರಾಯುಕ್ತರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್‌ ವೈಸರ್ ಹಾಗೂ ಪೌರ ಕಾರ್ಮಿಕರು ದಾಳಿಯಲ್ಲಿ ಭಾಗವಹಿಸಿದ್ದರು....

https://newskadaba.com/84063/

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ನಿಷೇದಿತ ಪ್ಲಾಸ್ಟಿಕ್‌ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ....

(ನ್ಯೂಸ್ ಕಡಬ)newskadaba.com ಆ.10. ಸ್ಮಾರ್ಟ್‌ ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದ್ದು, ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ ...
10/08/2023

(ನ್ಯೂಸ್ ಕಡಬ)newskadaba.com ಆ.10. ಸ್ಮಾರ್ಟ್‌ ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದ್ದು, ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬ್ಯಾಟರಿ ಸ್ಫೋಟದಿಂದ ಅನಾಹುತಗಳು ಸಂಭವಿಸುತ್ತಿವೆ. ಕಾಲಾನಂತರದಲ್ಲಿ ಫೋನ್‌ ಗಳ ಬ್ಯಾಟರಿ ಕೆಟ್ಟು ಹೋಗುತ್ತದೆ. ಅದನ್ನು ಬದಲಾಯಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಫೋನ್‌ ನ ಬ್ಯಾಟರಿ ಕೆಡದಂತೆ ಸ್ಮಾರ್ಟ್ ಆಗಿ ಚಾರ್ಜ್ ಮಾಡುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಫೋನಿನ ಬ್ಯಾಟರಿ ಬೇಗ ಹಾಳಾಗುವುದಿಲ್ಲ ಮತ್ತು ಬ್ಲಾಸ್ಟ್ ನಂತಹ ಸಮಸ್ಯೆ ಬರುವುದಿಲ್ಲ....

https://newskadaba.com/84060/

(ನ್ಯೂಸ್ ಕಡಬ)newskadaba.com ಆ.10. ಸ್ಮಾರ್ಟ್‌ ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದ್ದು, ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ ಫೋ.....

Address

Mahaganapathi Complex, Opp: Street Joachims Church
Puttur
574221

Alerts

Be the first to know and let us send you an email when News Kadaba posts news and promotions. Your email address will not be used for any other purpose, and you can unsubscribe at any time.

Contact The Business

Send a message to News Kadaba:

Videos

Share


Other News & Media Websites in Puttur

Show All