Sadhvi

Sadhvi Digital version of Sadhvi, a 121 year old daily Kannada eveninger. Voicing the aspirations of our motherland since 1899. Now at your fingertips

SADHVI is a century old kannada newspaper, started in the year 1899, sadhvi played a very important role in the freedom struggle of our mother land. Its sharp editorials motivated thousands of youth to jump into the freedom struggle. Perturbed by the strong pro-independence policy of sadhvi, the erstwhile British government in India had banned the publication of sadhvi twice, this incident of bann

ing the publication of sadhvi stands as a mile stone in the annals of the history of kannada journalism and Indian freedom movement. Sadhvi was first started by “M. VENKATAKRISHNAIAH” popularly called as “THATHAIAH”, the grand old man of Mysore. He is also known as “father of kannada journalism. Agaram Rangaiah, a renowned freedom fighter tookover as the editor of sadhvi after Thathaiah he published it successfully for 63 years. Sadhvi is now being published as a daily kannada eveninger, known for its commitment to ethical values of journalism, it is voicing the opinions of aspirations of the people. This century old kannada newspaper under the editorship of C.Maheshwarian is a house hold name in Mysore .

22/01/2024

ಅಯೋಧ್ಯ ರಾಮಂದಿರದ ಉದ್ದಗಾಟನೆ ಹಾಗೂ ಪ್ರತಿಷ್ಠಾಪನೆ ಕುರಿತು ಮಾತನಾಡಿದ ಹಿರಿಯ ವಕೀಲರಾದ ಶಾಮ್ ಭಟ್

22/01/2024

ಅಯೋಧ್ಯ ರಾಮಮಂದಿರ ಉದ್ಘಾಟನೆ ಬಗ್ಗೆ ಮಾತನಾಡಿದ ಶಾಸಕ ಟಿಎಸ್ ಶ್ರೀವತ್ಸ

22/12/2023
22/12/2023

ಸಾಧ್ವಿ ಪತ್ರಿಕೆ ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಧ್ವಿ ಪತ್ರಿಕೆ ಬರುವುದನ್ನೇ ನಾನು ಎದುರು ನೋಡುತ್ತಿದ್ದೆ

ಸಾಧ್ವಿ ಸಂಜೆ ದಿನ ಪತ್ರಿಕೆಯಾಗಿ ಬರುತ್ತಿತ್ತು

ಮೈಸೂರು ನಗರದ ವ್ಯಾಪ್ತಿಯ ಸುದ್ದಿಗಳು ನಮಗೆ ಓದಲು ಸಿಗುತ್ತಿತ್ತು

ಆ ಕಾರಣಕ್ಕೆ ಪತ್ರಿಕೆ ಬರುವುದನ್ನ ಕುತೂಹಲದಿಂದ ಕಾಯುತ್ರಿದ್ದೆ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಹಾಗೂ ಪತ್ರಕರ್ತರ ತರಬೇತಿ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ತಮದಲ್ಲಿ ಸಾಧ್ವಿ ಪತ್ರಿಕೆಯನ್ನು ಮೆಲುಕು ಹಾಕಿದ ಸಿಎಂ ಸಿದ್ದರಾಮಯ್ಯ

15/08/2023

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರನ್ನು ಎರಡು ಬಾರಿ ನೇರ ಸಂದರ್ಶನ ಮಾಡಿದ ಮೈಸೂರಿನ ಹಿರಿಯ ಗಾಂಧಿವಾದಿ ಹಾಗೂ ಸಾಧ್ವಿ ಪತ್ರಿಕೆಯನ್ನು ಆರು ದಶಕಗಳ ಕಾಲ ಮುನ್ನಡೆಸಿದ ಧೀಮಂತ ಪತ್ರಕರ್ತ
ಅಗರಂ ರಂಗಯ್ಯ ಅವರು ಗಾಂಧೀಜಿಯವರ ಸ್ಚಾತಂತ್ರ್ಯೋತ್ತರ ಭಾರತದ ಕಲ್ಪನೆಯನ್ನು ತೆರೆದಿಟ್ಟಿದ್ದರು. ಗಾಂಧೀಜಿಯವರ ಆಶಯಗಳು ಹೇಗಿತ್ತು ಎಂಬುದನ್ನ ಅಗರಂ ರಂಗಯ್ಯನವರು ವಿವರಿಸಿದ ಆಡಿಯೋ ಇದು.
77ನೇ ಸ್ವಾತಂತ್ರ್ಯ ದಿನವಾದ ಇಂದು ಈ ಆಡಿಯೋ ಅತ್ಯಂತ ಪ್ರಸ್ತುತ...ಅನಿಸುತ್ತದೆ‌.....

12/08/2023

ಮೈಸೂರು

*ಕೊರೋನಾ ಸಾಂಕ್ರಾಮಿಕದ ಬಳಿಕ‌ ಈಗ ಮದ್ರಾಸ್ ಐ ಬಾಧೆ*

*ಸಾಂಸ್ಕೃತಿಕ ನಗರಿಯ ಜನರನ್ನು ಕಾಡುತ್ತಿರುವ ಮದ್ರಾಸ್‌ ಐ*

*ಮದ್ರಾಸ್ ಐ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿದ ಎ‌.ಎಸ್.ಜಿ. ಆಸ್ಪತ್ರೆಯ ನೇತ್ರ ತಜ್ಞ ಡಾ. ಪವನ್ ಜೋಷಿ*

ಮದ್ರಾಸ್ ಐ ಒಬ್ಬೊರನ್ನೊಬ್ಬರು ನೋಡಿದರೆ ಬರುತ್ತೆ ಅನ್ನೋದು ತಪ್ಪು‌ ಕಲ್ಫನೆ

ಮದ್ರಾಸ್ ಐ ಆಗಿದ್ದವರ ಕಣ್ಣು ನೋಡಿದ ತಕ್ಷಣ ಬರಲ್ಲ

ಮದ್ರಾಸ್ ಐ ಆದವರು ತಮ್ಮ ಕಣ್ಣನ್ನು ಸೋಕಿಸಿ, ಅದೇ ಕೈಯನ್ನು ಮತ್ತೊಬ್ಬರು ಸ್ಪರ್ಶಿಸಿದರೆ ಬರುತ್ತೆ

ಕಣ್ಣಿನ ಶ್ವೇತ ಬಣ್ಣದ ಚರ್ಮ ಕೆಂಪಾಗುವುದು, ಕಣ್ಣು ಉರಿ, ಕಣ್ಣು ಮುಚ್ಚುವಿಕೆ, ನಿರಂತರವಾಗಿ ನೀರು ಸೋರುವುದು ಮದ್ರಾಸ್ ಐ ಲಕ್ಷಣಗಳು

ಮದ್ರಾಸ್ ಐ ಆದವರ ಕೈಗಳನ್ನು ಸ್ಪರ್ಶ, ಅವರು ಬಳಸಿದ ಟವಲ್, ಸೋಪ್ ಬಳಸದಂತೆ ತಡೆದರೆ ಮದ್ರಾಸ್ ಐ ಹರಡದಂತೆ ನೋಡಿಕೊಳ್ಳಬಹುದು

ವಿಶೇಷವಾಗಿ ಮಕ್ಕಳನ್ನು ಸೋಂಕಿತರಿಂದ ದೂರ ಇರಿಸಬೇಕು

ಇದಕ್ಕೆ ಸ್ವಯಂ ವೈದ್ಯ ಮಾಡಿಕೊಳ್ಳದೆ ತಜ್ಞ ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಸೋಂಕು‌ ಬಹಳ ಬೇಗ ನಿವಾರಣೆ ಆಗಲಿದೆ

25/07/2023

ಸರಗೂರು : ಇಲ್ಲಿನ ಅಂಚೆ ಕಚೇರಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡಿಗೆ ಫೋನ್ ನಂಬರ್ ಇನ್ನಿತರ ಹೆಸರುಗಳ ತಪ್ಪುಗಳನ್ನು ಸರಿಪಡಿಸಲು ಆಧಾರ್ ಕಾರ್ಡಿಗೆ ಮುಗಿ ಬಿದ್ದಿರುವ ಜನರು ಜೋಡಣೆ ಮಾಡಲು ಬೆಳಗಿನ ಜಾವ 5:30 ಯಿಂದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ, ಹಾಗೂ ಪಕ್ಕದಲ್ಲಿರುವ ಎಸ್‌ಬಿಐ ಬ್ಯಾಂಕಿನಲ್ಲೂ ಆದಾರ್ ಜೋಡಣೆಗೆ ಒಂದು ವಾರದ ಮುಂಚಿತವಾಗಿ ಆಗಸ್ಟ್ ಒಂದರ ತನಕ ಟೋಕನ್ ಗಳನ್ನು ನೀಡಿರುತ್ತಾರೆ. ಅಂದರೆ ಯಾವ ದಿನಾಂಕ ಎಂದು ಆ ಚೀಟಿಯಲ್ಲಿ ಬರೆದು ಕೊಟ್ಟಿರುತ್ತಾರೆ.ಆಗ ಮಾತ್ರ ಹೋಗಿ ಆಧಾರ್ ಕಾರ್ಡ್ ಮಾಡಿಸಬೇಕು, ಮತ್ತು ದಿನಕ್ಕೆ 30 ಜನರಿಗೆ ಮಾತ್ರ ಮಾಡಿಕೊಡಲಾಗುತ್ತದೆ.ಈ ರೀತಿಯ ವ್ಯವಸ್ಥೆ ಏಕೆ ಬೇಕು, ಕೆಲವರು ಸುಮಾರು ಬಾರಿ ಬಂದು ಬಂದು ವಾಪಸ್ ಹೋಗಿರುತ್ತಾರೆ. ಆದ್ದರಿಂದ ಇನ್ನೂ ಆಧಾರ ಹಾಗೂ ಇನ್ನಿತರ ಗ್ಯಾರಂಟಿ ಕಾರ್ಡ್ ಗಳ ವ್ಯವಸ್ಥೆ ಗೆ ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ ಆದ್ದರಿಂದ ಇನ್ನು ಹೆಚ್ಚಿನ ಕೇಂದ್ರಗಳನ್ನು ತೆರೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

25/07/2023

ಸಿದ್ದಾರ್ಥ ನಗರ: ಹೆಣ್ಣು ಮಕ್ಕಳಿಗೆ ರಕ್ಷಣೆ ನಡೆದಿದ್ದರೆ ನೈತಿಕ ಹೊಣೆ ಹೊತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ಪ್ರತಿನಿಧಿಗಳು ರಾಜೀನಾಮೆ ನೀಡಲಿ, ಕರ್ನಾಟಕ ಭೀಮ್ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ: ಎಮ್ ಮಂಜುನಾಥ್.

ನಮ್ಮ ಕರ್ನಾಟಕ ಭೀಮ ಸೇನಾ ಸಂಘಟನೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ, ಇಂದು ಬಹತ್ ಪ್ರತಿಭಟನಾ ಹೋರಾಟ ಮಾಡುವ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಡಿಷನಲ್ ತಾಸಿಲ್ದಾರ್ ಓ ಎ ರೇಖಾ ಅವರಿಗೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರತಿನಿಧಿಗಳಿಗೆ ಚಾಟಿ ಬೀಸಿದ್ದಾರೆ. ಜಿಲ್ಲಾಧಿಕಾರಿಗಳು ನಮ್ಮ ದೂರನ್ನು ಹಾಗೂ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ಯಾಗುವ ಹಾಗೆ ಮತ್ತು ಇಷ್ಟೆಲ್ಲಾ ಕೃತ್ಯ ನಡೆದರು ಕಣ್ಣು ಕಾಣದ ಹಾಗೆ ಮೂಕರಂತೆ ಇರುವ ರಾಜಕಾರಣಿಗಳು ರಾಜ್ಯದ ಹಾಗೂ ದೇಶದ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಾಗದಿರುವ ರಾಜಕಾರಣಿಗಳು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುವಂತೆ ಎಚ್ಚರಿಕೆ ನೀಡಬೇಕಾಗಿ ಗೌರವಾನ್ವಿತ ರಾಜ್ಯಪಾಲರಲ್ಲಿ ಕರ್ನಾಟಕ ಭೀಮ್ ಸೇನೆ (ರಿ) ಸಂಘಟನ ವತಿಯಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದರ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

19/06/2023

ಮೈಸೂರು: ಆಷಾಢ ಮಾಸ ಆರಂಭ ಹಿನ್ನೆಲೆ.
ಚಾಮುಂಡಿಬೆಟ್ಟ ಸಿಕ್ಕಾಪಟ್ಟೆ ರಶ್ಸು.
ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಮುಗಿಬಿದ್ದ ಜನ.
ಭಕ್ತರು, ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ದೇವಾಲಯ.
ದೇವಿ ದರ್ಶನಕ್ಕೆ ಉದ್ದದ ಸರತಿ ಸಾಲು.
100 ರೂ. ವಿಶೇಷ ದರ್ಶನ, ಧರ್ಮ ದರ್ಶನ ಎರಡೂ ಕಡೆ ನೂಕುನುಗ್ಗಲು.
ಮುಂಜಾನೆಯಿಂದಲೇ ಕ್ಯೂನಲ್ಲಿ ನಿಂತಿರುವ ಸಾವಿರಾರು ಭಕ್ತರು.
ಶಕ್ತಿ ಯೋಜನೆಯಡಿ ಕೆ.ಎಸ್.ಆರ್.ಟಿ.ಸಿ. ಉಚಿತ ಬಸ್ ಸೇವೆ.
ಗ್ಯಾರಂಟಿ ಯೋಜನೆ ಲಾಭ ಪಡೆದು ದೇವಾಲಯಕ್ಕೆ ಬಂದ ಮಹಿಳೆಯರು.

09/06/2023

*ದಿ ಆಕ್ಮಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಅರ್ಥಪೂರ್ಣ ಆಚರಣೆ*

ಮೈಸೂರಿನ ಶಾರದಾದೇವಿ ನಗರದಲ್ಲಿರುವ ದಿ ಆಕ್ಮಿ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಅಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪರಿಸರವಾದಿಗಳಾದ ಶ್ರೀಕಾಂತ್ ಭಟ್ ಹಾಗೂ ಪರಿಸರ ಚಂದ್ರು ಅವರು ಶಾಲಾ ಆಡಳಿತ ಮತ್ತು ಸಿಬ್ಬಂದಿ ವರ್ಗದವರ ಜತೆಗೂಡಿ ಶಾಲಾವರಣದಲ್ಲಿ ಸಸಿ ನೆಟ್ಟು ಅದಕ್ಕೆ ನೀರೆರೆದು ಪರಿಸರದ ದಿನವನ್ನು ಸ್ಮರಣೀಯವಾಗಿರಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಕಾಂತ್ ಭಟ್, ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿದರು. ಮಕ್ಕಳು ಪರಿಸರ ಪ್ರೇಮಿಗಳಾಗಬೇಕೆಂದು ಮತ್ತೊಬ್ಬ ಅತಿಥಿ ಪರಿಸರ ಚಂದ್ರು ಕರೆ ನೀಡಿದರು. ಬಳಿಕ ಶಾಲಾ ವಿದ್ಯಾರ್ಥಿಗಳು ಪರಿಸರ ಜಾಗೃತಿ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಶಾರದಾದೇವಿ ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತು ಬದ್ದವಾಗಿ ಜಾಗೃತಿ ಜಾಥಾ ನಡೆಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಅರುಣ್ ಸಿಂಗ್, ಶಾಲೆಯ ಅಧ್ಯಕ್ಷ ಡಾ. ಸಿ.‌ ಶರತ್ ಕುಮಾರ್, ಶಾಲೆಯ ಪ್ರಾಂಶುಪಾಲರಾದ ಸುಭಾಷಿಣಿ, ಮುಖ್ಯ ಶಿಕ್ಷಕಿ ಶ್ರೀದೇವಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಹಾಜರಿದ್ದರು.

31/05/2023

ಮೈಸೂರು: ತಿ. ನರಸೀಪುರ ತಾಲೂಕಿನ ಬನ್ನೂರು ಸಮೀಪ ಅತ್ತಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಜಿಪಿಪಿ ಶಾಲೆಯ ಕಟ್ಟಡವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಲೋಕಾರ್ಪಣೆ ಮಾಡಿದರು. ಅತ್ತಹಳ್ಳಿ ಗ್ರಾಮದ ಮಂಚಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ ನೀಡಿ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ಇದೇ ಸಂದರ್ಭದಲ್ಲಿ ಜಿಪಿಪಿ ಶಾಲೆಯ ಸಂಸ್ಥಾಪಕರಾದ ಪುಟ್ಟೇಗೌಡರ ವಿದ್ಯಾದಾನವನ್ನು ಸ್ವಾಮೀಜಿಯವರು ಸ್ಮರಿಸಿದರು. ಕಾರ್ಯಕ್ರಮದ ಬಳಿಕ
ಬನ್ನೂರಿನ ಸಮಾಜಸೇವಕರಾದ ಮಹೇಂದ್ರ ಸಿಂಗ್ ಕಾಳಪ್ಪ ಅವರ ನಿವಾಸಕ್ಕೂ ಭೇಟಿ ನೀಡಿದ್ದರು.
ಮಹೇಂದ್ರ ಸಿಂಗ್ ಕಾಳಪ್ಪನವರ ಕುಟುಂಬದವರು ಸ್ವಾಮೀಜಿಯವರಿಗೆ ಸಾಂಪ್ರದಾಯಿಕ ಪಾದ ಪೂಜೆ ನೆರವೇರಿಸಿ ಧನ್ಯತೆ ಮೆರೆದರು. ಆದಿಚುಂಚನಗಿರಿ ಪೀಠದ ಮೈಸೂರು ಶಾಖಾ ಮಠದ ಮುಖ್ಯಸ್ಥರಾದ ಶ್ರೀ ಸೋಮನಾಥ ಸ್ವಾಮೀಜಿ ಉಪಸ್ಥಿತರಿದ್ದರು.

30/05/2023

*ಹೆಲ್ಮೆಟ್ ಧರಿಸಿ...ಬೈಕ್ ಓಡಿಸೋಕೆ ರೆಡಿಯಾಗಿದ್ದ ನಾಗಪ್ಪ...*
ಮೈಸೂರು: ಹಾವುಗಳು ಅಲ್ಲಿ...ಇಲ್ಲಿ ಅವಿತುಕೊಳ್ಳೋದನ್ನ ನೋಡಿದ್ದೀವಿ‌‌..ಹೆಲ್ಮೆಟ್ ಧರಿಸಿದ್ದನ್ನು ಎಲ್ಲಾದರೂ ನೋಡಿದ್ಷೀರಾ...ಹೌದು ಸಾಂಸ್ಕೃತಿಕ ನಗರಿಯಲ್ಲಿ ನಾಗಪ್ಪ ಹೆಲ್ಮೆಟ್ ಧರಿಸಿ ಬೈಕ್ ಓಡಿಸೋಕೆ ತಯಾರಿ ಮಾಡಿದ್ದ...ಅಷ್ಟರಲ್ಲಿ ಉರಗಮಿತ್ರ ಸ್ನೇಕ್ ಶ್ಯಾಮ್ ನಾಗಪ್ಪನನ್ನ ಜೋಪಾನವಾಗಿ ಹೆಲ್ಮೆಟ್ ನಿಂದ ಮುಕ್ತಿಗೊಳಿಸಿದರು.
ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕಚೇರಿ ಮುಂದೆ ಬೈಕ್ ನಿಲ್ಲಿಸಿ, ಬೈಕ್ ನಲ್ಲೆ ಹೆಲ್ಮೆಟ್ ಗ್ಲಾಸ್ ನ್ನು ಅರ್ಧದಷ್ಟು ಓಪೆನ್ ಮಾಡಿ ಇಟ್ಟಿದ್ದರು. ಅದು ಎಲ್ಲಿತ್ರೋ ನಾಗರಹಾವು ಓಡಿ ಬಂದು ಹೆಲ್ಮೆಟ್ ಒಳಗೆ ಸೇರಿಕೊಳ್ಳಬೇಕೆ..ಇನ್ನು ಹೆಲ್ಮೆಟ್ ಒಳಗಿಂದಲೇ ಜನರ ನೋಡಿ ಹೆಡೆ ಬಿಚ್ಚಿದ್ದ ನಾಗಪ್ಲನನ್ನು ನೋಡಿ ಬೈಕ್ ಸವಾರ ದಂಗಾಗಿ ಹೋದ. ತಕ್ಷಣ ಸ್ನೇಕ್ ಶ್ಯಾಮ್ ಕರೆ ಮಾಡಿದ್ದರು. ತಕ್ಚಣವೇ ಬಂದ ಸ್ನೇಕ್ ಶ್ಯಾಮ್ ನಾಗಪ್ಪನ ಅವತಾರ ನೋಡಿ ಆಶ್ಚರ್ಯ ಗೊಂಡರು. ಹೆಲ್ಮೆಟ್ ಗಳನ್ನು ಓಪೆನ್ ಮಾಡಿ ಇಡಬೇಡಿ. ಹಾಗೆ ಇಟ್ಟರೆ ಇಂತಹ ಅಚಾತೂರ್ಯಗಳಾಗುತ್ತೆ ಅಂತಾ ಬುದ್ದಿವಾದ ಹೇಳಿ, ನಾಗರಹಾವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಸ್ಥಳದಲ್ಲಿದ್ದವರನ್ನು ನಿರಾಳ ಮಾಡಿದರು.

30/05/2023

ತಿ.ನರಸೀಪುರ ರಸ್ತೆಯಲ್ಲಿ ಅಪಘಾತ: ೨ ಲಕ್ಷ ರೂ.ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ೧೦ ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬದವರಿಗೆ ತಲಾ ೨ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊಳ್ಳೇಗಾಲದ ತಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದ ದುರ್ಘಟನೆಯಲ್ಲಿ ಬಳ್ಳಾರಿ ಮೂಲದ ೮ ಮಂದಿ ಮಂದಿ ಹಾಗೂ ಬಸ್‌ನಲ್ಲಿದ್ದ ತಾಯಿ ಮಗು ಮೃತಪಟ್ಟಿದ್ದರು.
ಪ್ರಧಾನಮಂತ್ರಿಯವರು ಮೈಸೂರು ಮತ್ತು ಧನ್‌ಬಾದ್‌ನಲ್ಲಿ ಸಂಭವಿಸಿದ ದುರಂತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ Pಒಓಖಈ ನಿಂದ ತಲಾ ೨ ಲಕ್ಷ ರೂ. ಗಾಯಾಳುಗಳಿಗೆ ತಲಾ ರೂ. ೫೦ ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಮೈಸೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಕ್ಕಳೂ ಸೇರಿದಂತೆ ೧೦ ಮಂದಿ ಮೃತಪಟ್ಟಿದ್ದರ ಬಗ್ಗೆ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಮೃತರ ಕುಟುಂಬಗಳಿಗೆ ಆ ದೇವರು ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಜತೆಗೆ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಸೋಮವಾರ ನಡೆದ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಿ. ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಲ್ಲಿ ದಾಖಲಿಸಿದ್ದಾರೆ.
ಸರ್ಕಾರ ಕ್ಷಣವೇ ೧೦ ಲಕ್ಷ ರೂ. ಪರಿಹಾರ ನೀಡಬೇಕು: ಬಳ್ಳಾರಿಯವರು ಮಹದೇಶ್ವರ ಬೆಟ್ಟಕ್ಕೆಹೋಗುತ್ತಿದ್ದರು. ಮೈಸೂರಿನಲ್ಲಿ ಇನ್ನೋವಾ ಕಾರ್ ಬಾಡಿಗೆ ಪಡೆದು ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಪಕ್ಕದಲ್ಲಿ ಜಂಗಲ್ ಕಟಿಂಗ್ ಮಾಡದೇ ಇದ್ದ ಕಾರಣ ಎದುರು ಬದುರು ವಾಹನಗಳಿಗೆ ಕಾಣದೇ ಇದ್ದ ಕಾರಣ ಇಂತಹ ಭೀಕರ ಅಪಘಾತ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕು. ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಗಳಿಗೂ ಸರ್ಕಾರ ಕ್ಷಣವೇ ೧೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ರೈತ ರತ್ನ ಕುರುಬೂರು ಶಾಂತಕುಮಾರ ಒತ್ತಾಯಿಸಿದ್ದಾರೆ.

ತಿ.ನರಸೀಪುರ ರಸ್ತೆಯಲ್ಲಿ ಅಪಘಾತ: ೨ ಲಕ್ಷ ರೂ.ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ೧೦ ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬದವರಿಗೆ ತಲಾ ೨ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊಳ್ಳೇಗಾಲದ ತಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದ ದುರ್ಘಟನೆಯಲ್ಲಿ ಬಳ್ಳಾರಿ ಮೂಲದ ೮ ಮಂದಿ ಮಂದಿ ಹಾಗೂ ಬಸ್‌ನಲ್ಲಿದ್ದ ತಾಯಿ ಮಗು ಮೃತಪಟ್ಟಿದ್ದರು.
ತಿ.ನರಸೀಪುರ ರಸ್ತೆಯಲ್ಲಿ ಅಪಘಾತ: ೨ ಲಕ್ಷ ರೂ.ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ೧೦ ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬದವರಿಗೆ ತಲಾ ೨ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊಳ್ಳೇಗಾಲದ ತಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದ ದುರ್ಘಟನೆಯಲ್ಲಿ ಬಳ್ಳಾರಿ ಮೂಲದ ೮ ಮಂದಿ ಮಂದಿ ಹಾಗೂ ಬಸ್‌ನಲ್ಲಿದ್ದ ತಾಯಿ ಮಗು ಮೃತಪಟ್ಟಿದ್ದರು.
ಪ್ರಧಾನಮಂತ್ರಿಯವರು ಮೈಸೂರು ಮತ್ತು ಧನ್‌ಬಾದ್‌ನಲ್ಲಿ ಸಂಭವಿಸಿದ ದುರಂತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ Pಒಓಖಈ ನಿಂದ ತಲಾ ೨ ಲಕ್ಷ ರೂ. ಗಾಯಾಳುಗಳಿಗೆ ತಲಾ ರೂ. ೫೦ ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಮೈಸೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಕ್ಕಳೂ ಸೇರಿದಂತೆ ೧೦ ಮಂದಿ ಮೃತಪಟ್ಟಿದ್ದರ ಬಗ್ಗೆ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಮೃತರ ಕುಟುಂಬಗಳಿಗೆ ಆ ದೇವರು ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಜತೆಗೆ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಸೋಮವಾರ ನಡೆದ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಿ. ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಲ್ಲಿ ದಾಖಲಿಸಿದ್ದಾರೆ.
ಸರ್ಕಾರ ಕ್ಷಣವೇ ೧೦ ಲಕ್ಷ ರೂ. ಪರಿಹಾರ ನೀಡಬೇಕು: ಬಳ್ಳಾರಿಯವರು ಮಹದೇಶ್ವರ ಬೆಟ್ಟಕ್ಕೆಹೋಗುತ್ತಿದ್ದರು. ಮೈಸೂರಿನಲ್ಲಿ ಇನ್ನೋವಾ ಕಾರ್ ಬಾಡಿಗೆ ಪಡೆದು ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಯ ಪಕ್ಕದಲ್ಲಿ ಜಂಗಲ್ ಕಟಿಂಗ್ ಮಾಡದೇ ಇದ್ದ ಕಾರಣ ಎದುರು ಬದುರು ವಾಹನಗಳಿಗೆ ಕಾಣದೇ ಇದ್ದ ಕಾರಣ ಇಂತಹ ಭೀಕರ ಅಪಘಾತ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕು. ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಗಳಿಗೂ ಸರ್ಕಾರ ಕ್ಷಣವೇ ೧೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ರೈತ ರತ್ನ ಕುರುಬೂರು ಶಾಂತಕುಮಾರ ಒತ್ತಾಯಿಸಿದ್ದಾರೆ.

Manjeeth, [5/30/2023 12:28 PM]
ತಿ.ನರಸೀಪುರ ರಸ್ತೆಯಲ್ಲಿ ಅಪಘಾತ: ೨ ಲಕ್ಷ ರೂ.ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಮೈಸೂರು: ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ೧೦ ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬದವರಿಗೆ ತಲಾ ೨ ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ೫೦ ಸಾವಿರ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊಳ್ಳೇಗಾಲದ ತಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ನಡೆದ ದುರ್ಘಟನೆಯಲ್ಲಿ ಬಳ್ಳಾರಿ ಮೂಲದ ೮ ಮಂದಿ ಮಂದಿ ಹಾಗೂ ಬಸ್‌ನಲ್ಲಿದ್ದ ತಾಯಿ ಮಗು ಮೃತಪಟ್ಟಿದ್ದರು.

30/05/2023

ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪಗೆ ಸನ್ಮಾನ ಅಭಿನಂದನೆ ಸಲ್ಲಿಕೆ.
ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮೈಸೂರಿಗೆ ಆಗಮಿಸಿದ ಸಚಿವ ಮಹದೇವಪ್ಪಗೆ ಬೆಂಬಲಿಗರು, ಹಿಥೈಷಿಗಳಿಂದ ಸನ್ಮಾನ ಅಭಿನಂದನೆ ಸಲ್ಲಿಕೆ.
ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹಕ್ಕೆ ಆಗಮಿಸಿದ ಸಚಿವ ಮಹದೇವಪ್ಪಗೆ ಹೂಗುಚ್ಚ ನೀಡಿ, ಶಾಲು ಹೊದಿಸಿ, ಪೇಟ ತೊಡಿಸಿ, ಹೂವಿನ ಹಾರಗಳನ್ನು ಸಮರ್ಪಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಕೆ.
ಇದೇ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದ ಸಚಿವ ಮಹದೇವಪ್ಪ.
ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವ ಭರವಸೆ ನೀಡಿದ ಸಚಿವ ಮಹದೇವಪ್ಪ.

26/05/2023

ಸಿದ್ದರಾಮಯ್ಯ ಮುಖ್ಯಮಂತ್ರಿ ಆಯ್ಕೆ ಆಗುತ್ತಿದ್ದಂತೆ ನಂಜನಗೂಡು ತಾಲೂಕಿನ ಚಿನ್ನದ ಗುಡಿಗುಂಡಿ ಗ್ರಾಮದಲ್ಲಿ ಮುಗಿಲು ಮುಟ್ಟಿದ ಗ್ರಾಮಸ್ಥರ ಸಂಭ್ರಮ
ಗ್ರಾಮಸ್ಥರು ಹಾಗೂ ಮುಖಂಡರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯನವರಿಗೆ ಶುಭ ಕೋರಿದರು

26/05/2023

ಮೈಸೂರು: ಸಾಂಸ್ಕೃತಿಕ ನಗರಿಯ ಗೋಕುಲಂ ಮುಖ್ಯ ರಸ್ತೆಯಲ್ಲಿ ಆಂಧ್ರಪ್ರದೇಶದ ಪ್ರಸಿದ್ದ ಜಗವಿಸ್ ಕೃತುಂಗಾ ರೆಸ್ಟೋರೆಂಟ್ ಆರಂಭವಾಗಿದೆ. ರೆಸ್ಟೋರೆಂಟ್ ಗೆ ಭೇಟಿ ನೀಡಿದ ಸಂಸದ ಪ್ರತಾಪಸಿಂಹ ಶುಭ ಚಾಲನೆ ನೀಡಿದರು. ಆಂಧ್ರದಲ್ಲಿ 16 ಬ್ರಾಂಚ್ ಗಳು, ಬೆಂಗಳೂರಿನಲ್ಲಿ 4 ಬ್ರಾಂಚ್ ಗಳಿರುವ ಕೃತುಂಗಾ ರೆಸ್ಟೋರೆಂಟ್ ಬಯಸುವ ತರೋವರಿ ಫುಡ್ ಟೇಬಲ್ ಗೆ ರೈಲಿನ ಮೇಲೆ ಬರುವುದು ವಿಶೇಷ. ಇದು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಇನ್ನು 7-8 ಬಗೆಯ ಬಿರಿಯಾನಿ ಮಾಂಸಾಹಾರಿ ಪ್ರಿಯರಿಗೂ ಇಷ್ಟವಾಗುತ್ತದೆ ಎಂದು ರೆಸ್ಟೋರೆಂಟ್ ಮುಖ್ಯಸ್ಥ ರಾಜೇಶ್ ಹೇಳಿದರು.

26/05/2023

ಮೈಸೂರು
ಈ ಪೆಟ್ರೋಲ್ ಬಂಕ್ ನಲ್ಲಿ ಬಡವರಿಗೆ ಪೆಟ್ರೋಲ್ ಉಚಿತ
ಕೂಲಿ ಕಾರ್ಮಿಕರು, ಗಾರೆ ಕೆಲಸ, ತರಕಾರಿ ಮಾರಾಟ, ಸೆಕ್ಯುರಿಟಿ‌ ಕೆಲಸ ಮಾಡುವ ಇಬ್ಬರಿಗೆ ನಿತ್ಯ ಫುಲ್ ಟ್ಯಾಂಕ್ ಪೆಟ್ರೋಲ್
ಮೈಸೂರಿನ ಬೋಗಾದಿ ಜಂಕ್ಷನ್ ಬಳಿ ಎಚ್.ಪಿ. ಏಜೆನ್ಸಿಯ ಕುಮಾರ್ ಮಾಲೀಕತ್ವದ ಸುಂದರಂ ಅಂಡ್ ಸನ್ಸ್ ಫ್ಯೂಯಲ್ ಸ್ಟೇಷನ್ ನಿಂದ ಸಾಮಾಜಿಕ ಕಾರ್ಯ
ಬಡವರಿಗೆ ಮಾತ್ರ ಲಕ್ಕಿ ಡಿಪ್ ಯೋಜನೆ
ಬಂಕ್ ಗೆ ಬಂದು ಪೆಟ್ರೋಲ್ ಹಾಕಿಸುವ ಬಡವರ ಹೆಸರು ಬರೆದು ಡಬ್ಬಕ್ಕೆ ಹಾಕಿ ಲಕ್ಕಿ ಡಿಪ್ ಮೂಲಕ ಆಯ್ಕೆ
ಲಕ್ಕಿ ಡಿಪ್ ನಲ್ಲಿ ಆಯ್ಕೆಯಾದ ಇಬ್ಬರಿಗೆ ದ್ವಿಚಕ್ರ ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಭರ್ತಿ
ನಮ್ಮ ಫ್ಯೂಯಲ್ ಸ್ಟೇಷನ್ ನಿಂದಲೂ ಬಡವರಿಗೆ ಅಳಿಲು ಸೇವೆ
ಪೆಟ್ರೋಲ್ ಗಾಗಿ ಬಡ ಕೂಲಿ ಕಾರ್ಮಿಕರು ಪರದಾಡುವುದನ್ನು ನೋಡಿದ್ದೇವೆ
ಅಂತಹವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆ ನಮ್ಮದು
ನಾವೆಲ್ಲಾ ಬಡತನದ ಬೇಗುದಿಯಲ್ಲೇ ಬೆಳೆದವರು
ನಮ್ಮ ಈ ಪ್ರಯತ್ನಕ್ಕೆ ಮಾಲೀಕರಾದ ಕುಮಾರ್ ಸಂಪೂರ್ಣ ಸಹಕಾರ ನೀಡಿದ್ದಾರೆ
ಪ್ರತಿ ತಿಂಗಳು 60 ಮಂದಿಗೆ ಉಚಿತವಾಗಿ ಫುಲ್ ಟ್ಯಾಂಕ್ ಪೆಟ್ರೋಲ್ ಭರ್ತಿ ಮಾಡ್ತೇವೆ
ಇದರಿಂದ ಬಡವರು, ಕೂಲಿ ಕಾರ್ಮಿಕರು ಸಂತುಷ್ಟಗೊಂಡಿದ್ದಾರೆ
ನಮ್ಮಂತೆ ಇನ್ನಷ್ಟು ಮಂದಿ ಈ ಸೇವಾ ಕಾರ್ಯ ಮಾಡಿದರೆ ಜನರಿಗೆ ಹೆಚ್ಚು ಅನುಕೂಲ
ಪೆಟ್ರೋಲ್ ಬಂಕ್ ಮ್ಯಾನೇಜರ್ ಸುರೇಶ್ ಹೇಳಿಕೆ

20/05/2023

ಜೆಎಸ್ಎಸ್ ಅರ್ಬನ್ ಹಾತ್ ಗುಜರಾತ್ ಕರಕುಶಲ ಉತ್ಸವ*

ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಇಂದಿನಿಂದ ಗುಜರಾತ್ ಕರಕುಶಲ ಉತ್ಸವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು

10 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ
ಗುಜರಾತ್ ಸಂಸ್ಕೃತಿಯ ಉಡುಗೆ ತೊಡುಗೆಗಳು ಹಾಗೂ ಅಲಂಕಾರಿಕ ವಸ್ತುಗಳು ನೇರವಾಗಿ ಉತ್ತಮ ಗುಣಮಟ್ಟದಲ್ಲಿ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ ಹಾಗೂ ಈ ಬಾರಿ ವಿಶೇಷವಾಗಿ,ಆಸಕ್ತಿಯುಳ್ಳ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಕರ್ಪೋರೆಟ್ ಗಳಲ್ಲಿ ಕೆಲಸ ಮಾಡುವವರಿಗೆ ತರಬೇತಿ ನೀಡಲಾಗುತ್ತದೆ ತಿಳಿಸಿದರು

13/05/2023

ಸಿದ್ದರಾಮಯ್ಯನವರ ನಿವಾಸದ ಮುಂದೆ ಗೆಲುವಿನ ಸಂಭ್ರಮ

13/05/2023

ನಮ್ಮ ನಿರೀಕ್ಷೆಯಂತೆ ನಮ್ಮ ಹೆಚ್ಚು ಸ್ಥಾನ ಗೆದ್ದಿದೆ | ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ

13/05/2023

ಕೃಷ್ಣರಾಜದಲ್ಲಿ ಬಿಜೆಪಿ ಅಭ್ಯರ್ಥಿ
ಟಿ.ಎಸ್.ಶ್ರೀವತ್ಸ ಜಯಭೇರಿ ಬಾರಿಸಿದ್ದಾರೆ.ಎಂ.ಕೆ.ಸೋಮಶೇಖರ್ ವಿರುದ್ಧ ಗೆಲುವು ಸಾಧಿಸಿರುವ ಶ್ರೀವತ್ಸ
ಹಳೇ ಮೈಸೂರು ಭಾಗದ ಏಕೈಕ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ಶಾಸಕ ರಾಮದಾಸ್ ಬದಲಿಗೆ ಶ್ರೀವತ್ಸ ಟಿಕೆಟ್ ಪಡೆದಿದ್ದರು.
7250 ಮತಗಳಿಂದ ಶ್ರೀವತ್ಸ ಗೆಲುವು ಸಾಧಿಸಿದ್ದಾರೆ.

09/05/2023

ನಾಳೆ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಿ.
ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಮನವಿ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದೆ.
ಜಿಲ್ಲೆಯಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣದಲ್ಲಿದ್ದಾರೆ..
ಒಟ್ಟು 2655988 ಮತದಾರರಿದ್ದಾರೆ.
ಈ ಪೈಕಿ ಪುರುಷರು 1317121,
ಮಹಿಳೆಯರು 1338637,
ಹಾಗೂ ಇತರೆ 230 ಮತದಾರರಿದ್ದಾರೆ.
ಈ ಬಾರಿ2667 ಮಂದಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಅಂಗವಿಕಲರು ಮತ ಚಲಾಯಿಸಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 5 ಸಖಿ ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾರರು ಮತದಾನ ಮಾಡಬಹುದು.
ಮತದಾನಾಧಿಕಾರಿಗಳನ್ನು ಮತಗಟ್ಟೆಗಳಿಗೆ ತಲುಪಿಸಲು ಒಟ್ಟು 481 KSRTC ಬಸ್ ಗಳು, 84 ಮಾಕ್ಸಿ ಕ್ಯಾಬ್ ಹಾಗೂ 29 ಜೀಪ್ ವ್ಯವಸ್ಥೆ ಮಾಡಲಾಗಿದೆ.
ಮಾಧ್ಯಮಗಳಲ್ಲಿ ಚುನಾವಣಾ ಚರ್ಚೆ, ಸಂವಾದ, ಸಮೀಕ್ಷೆ, ಎಗ್ಸಿಟ್ ಪೋಲ್ ನಿಷೇಧ ಮಾಡಲಾಗಿದೆ.
ನಾಳೆ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ಸಂತೆ, ಜಾತ್ರೆಗಳನ್ನ ಮುಂದೂಡಲಾಗಿದೆ.
ಮತಗಟ್ಟೆಗಳಲ್ಲಿ ಮೊಬೈಲ್ ಫೋನ್, ಕ್ಯಾಮೆರಾ ಇತ್ಯಾದಿ ನಿಷೇದ.
ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು.
ಮತದಾನ ಮುಗಿದ ಬಳಿಕ ಮತಗಟ್ಟೆಗಳನ್ನು ಮೈಸೂರಿನ ವಾಲ್ಮೀಕಿ ರಸ್ತೆಯ ಮಹಾರಾಣಿ ಕಾಲೇಜಿನಲ್ಲಿ ಭದ್ರಪಡಿಸಲಾಗುವುದು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಹೇಳಿಕೆ.

08/05/2023

ಬಿಜೆಪಿ ಸರ್ಕಾರ ಅಭಿವೃದ್ಧಿಯ ಸಾಧನೆಗೆ ಅವಕಾಶ ನೀಡಿ : ಟಿ ಎಸ್ ಶ್ರೀವತ್ಸ ಮನವಿ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ
ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಸಾಧನೆಗಳನ್ನು ನೋಡಿಕೊಂಡು ನಮ್ಮ ಪಕ್ಷಕ್ಕೆ ಜನರು ಮತವನ್ನು ಕೊಡಬೇಕು ಎಂದು ಬಿಜೆಪಿ ಅಭ್ರ‍್ಥಿ ಟಿಎಸ್ ಶ್ರೀವತ್ಸ ಮನವಿ ಮಾಡಿದರು
ನಗರದ ಕುವೆಂಪು ನಗರದಲ್ಲಿ ಪ್ರಚಾರದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ
ಅವರು ರಾಜ್ಯದ ಎಲ್ಲಾ ರ‍್ಗದ ಕಲ್ಯಾಣಕ್ಕಾಗಿ ಬಿಜೆಪಿ ಅನೇಕ ಜನಪರ ಕರ‍್ಯ ಮಾಡಿದೆ
ಎಂದು ಹೇಳಿದರು
ಇದೇ ಸಂರ‍್ಭದಲ್ಲಿ ನಗರಪಾಲಿಕಾ ಸದಸ್ಯರಾದ ಎಂ ಸಿ ರಮೇಶ್, ಕೆ ಆರ್ ಕ್ಷೇತ್ರದ ಪ್ರಧಾನ ಕರ‍್ಯರ‍್ಶಿ ಓಂ ಶ್ರೀನಿವಾಸ್, ಮಾಜಿ ಉಪಮಹಾಪೌರರಾದ ಶೈಲೇಂದ್ರ, ಕ್ಷೇತ್ರದ ಪ್ರಧಾನ ಕರ‍್ಯರ‍್ಶಿ ನಾಗೇಂದ್ರ, ಜೈ ಶಂಕರ, ಗೋಕುಲ್ ಗೋರ‍್ಧನ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್, ರ‍್ಷ, ಕಿಶೋರ್, ವೆಂಕಟೇಶ್ ದಾಸ್, ಹಾಗೂ ಇನ್ನಿತರರು ಭಾಗಿಯಾದರು

08/05/2023

ಸಕಲ ಗೌರವದಿಂದ ನಡೆದ ಬಲರಾಮನ ಅಂತ್ಯಕ್ರಿಯೆ

05/05/2023

ಮೈಸೂರು: ತಮ್ಮ ಪರ ನಟ ಶಿವರಾಜ್ ಕುಮಾರ್ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಸೋಮಣ್ಣ ಮತ್ತು ಪ್ರತಾಪ್ ಸಿಂಹ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ಪ್ರತಾಪ್ ಸಿಂಹ ಸೋಮಣ್ಣ ಹೇಳಿಕೆಗೆ ಯಾಕೆ ಮಹತ್ವ ಕೊಟ್ಟಿದ್ದೀರಿ. ಇವರಿಬ್ಬರಿಗೆ ನಟ ಶಿವರಾಜ್ ಕುಮಾರ್ ಅವರೇ ಉತ್ತರ ಕೊಟ್ಟಿದ್ದಾರೆ. ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ಮುಂದಾಗಿರುವ ನಟ ದುನಿಯಾ ವಿಜಯ್ ಸಹ ಮಾತನಾಡಿ, ಶಿವಣ್ಣ ಎಲ್ಲರನ್ನೂ ಪ್ರೀತಿಸುವವರೇ. ಯಾರೇ ಕರೆದರೂ ಹೋಗುತ್ತಾರೆ. ಶಿವಣ್ಣರದ್ದು, ದೇವರಂತಹ ಮನಸ್ಸು ನಟ ಶಿವರಾಜ್ ಕುಮಾರ್ ಬಗ್ಗೆ ಯಾರು ಮಾತನಾಡಬಾರದು. ಶಿವಣ್ಣ ಅವರ ದೊಡ್ಡತನ ಅದೇ ರೀತಿ ಇದೆ. ಅಣ್ಣಾವ್ರ ಮನೆ ಅಂದ್ರೆ ವಿಶೇಷ ಎಂದು ಹೇಳಿದರು.

03/05/2023

ರಾಮ, ಹನುಮಂತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಕೋಪ? ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ಶಿವ ಬೆಟ್ಟವನ್ನು ಏಸು ಬೆಟ್ಟವಾಗಿ ಪರಿರ‍್ತನೆ ಮಾಡಿದ ಡಿ.ಕೆ ಶಿವಕುಮಾರ್, ಹನುಮಂತನ ಜನ್ಮ ದಿನವನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಭಜರಂಗಿ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರ ನವರಂಗಿ ಆಟ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರವಾಗಿ ಪ್ರತಾಪ್ ಸಿಂಹ ಮಾತನಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಒಸಾಮಾ ಬಿನ್ ಲ್ಯಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಘಜ್ನಿ ಮಹಮದ್, ಟಿಪ್ಪು ಸುಲ್ತಾನ್​ನನ್ನು ವೈಭವೀಕರಿಸುವ ಪಠ್ಯ ಬರುತ್ತದೆ ಎಂದು ಹೇಳಿದರು.

ರಾಮ, ಹನುಮಂತನ ಮೇಲೆ ಕಾಂಗ್ರೆಸಿಗರಿಗೆ ಯಾಕಿಷ್ಟು ಕೋಪ?
ಸೀತೆ ಹುಡುಕಿ ಕೊಂಡು ಹೋದ ಭಜರಂಗಿ ರಾಮನಿಗಾಗಿ ರ‍್ವತವನ್ನೇ ಎತ್ತಿಕೊಂಡು ಬಂದ. ರ‍್ನಾಟಕದ ಭಜರಂಗಿಗಳು ಹಿಂದೂತ್ವಕ್ಕಾಗಿ, ಗೋ ಮಾತೆಗಾಗಿ ಅದೇ ರ‍್ವತದಡಿ ಕಾಂಗ್ರೆಸ್​ನನ್ನು ಹೊಸಕಿ ಹಾಕುತ್ತಾರೆ. ಎಚ್ಚರಿಕೆಯಿಂದ ಮಾತನಾಡಿ. ರಾಮ, ಹನುಮಂತನ ಮೇಲೆ ಕಾಂಗ್ರೆಸಿಗರಿಗೆ ಯಾಕೆ ಇಷ್ಟು ಕೋಪ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ರಾಮ, ಹನುಮಂತ ಈ ದೇಶದ ಅಸ್ಮಿತೆಯ ಪ್ರತೀಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನ್ನಡಿಗರ ಸರಕಾರ ರಚನೆ ಆಗುವುದಿಲ್ಲ. ಬದಲಾಗಿ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಅಕ್ರಮವಾಗಿ ಮುಸ್ಲಿಮರಿಗೆ ರ‍್ನಾಟಕದಲ್ಲಿ ಮೀಸಲಾತಿ ಕೊಡಲಾಗುತ್ತಿತ್ತು.‌ ಅದನ್ನು ನಾವು ತೆಗೆದಿದ್ದೇವೆ. ಕಾಂಗ್ರೆಸಿಗರು ಐತಿಹಾಸಿಕ ಅನ್ಯಾಯ ಮಾಡಿದ್ದರು. ನಾವು ನ್ಯಾಯ ನೀಡಿದ್ದೇವೆ ಎಂದರು.

ಇದನ್ನೂ ಓದಿ: ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ರ‍್ಥಿ ಧನಂಜಯ ಪ್ರಚಾರ

ಬಜರಂಗದಳದವರು ರ‍್ನಾಟಕದ ಹಿತ ರಕ್ಷಣೆಗೆ ಹೋರಾಟ ಮಾಡಿದ್ದಾರೆ
ಬಜರಂಗದಳದವರು ಯಾವ ಅಪಹರಣ ಮಾಡಿದ್ದಾರೆ? ಯಾರನ್ನು ಕೊಲೆ ಮಾಡಿದ್ದಾರೆ? ಅಶಾಂತಿ ಕದಡುವು ಕೆಲಸ ಏನು ಮಾಡಿದ್ದಾರೆ? ಪಿಎಫ್ಐ, ಎಸ್​ಡಿಪಿಐ ಸಂಘಟನೆ ಮೇಲೆ ನೂರಾರು ಕ್ರಿಮಿನಲ್ ಕೇಸ್ ಇವೆ. ಅವರಿಗೂ ಇವರಿಗೂ ಹೇಗೆ ಹೋಲಿಕೆ ಮಾಡುತ್ತೀರಿ? ಭಜರಂಗದಳದವರು ಗೋಮಾತೆ ರಕ್ಷಣೆಗೆ, ಹಿಂದುತ್ವದ ರಕ್ಷಣೆಗೆ, ರ‍್ನಾಟಕದ ಹಿತ ರಕ್ಷಣೆಗೆ ಹೋರಾಟ ಮಾಡಿದ್ದಾರೆ. ತಾಲಿಬಾನ್ ಸರಕಾರ ಬಂದರೆ ಹಿಂದು ಸಂಘಟನೆಗಳಿಗೆ ಮಾತ್ರವಲ್ಲ, ಹಿಂದುಗಳಿಗೆ, ಹಿಂದುತ್ವಕ್ಕೆ ಉಳಿಗಾಲ ಇರುವುದಿಲ್ಲ. ರಾಮನ ಆರ‍್ಶ ಪಾಲಿಸುವ ಯಾರಿಗೂ ಉಳಿಗಾಲವಿಲ್ಲ ಎಂದು ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

01/05/2023

ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಪಾರಂಪರಿಕ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಭರ್ಜರಿ ರೋಡ್ ಶೋ ನಡೆಸಿದರು. ಪ್ರಧಾನಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತ್ತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆಗೈದರು.

ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಿದರು. ಮಾಜಿ ಸಚಿವ ಕೆ.ಎಸ್ .ಈಶ್ವರಪ್ಪ, ಬಿಜೆಪಿ ಶಾಸಕ ರಾಮದಾಸ್ ಕೂಡ ಜೊತೆಗಿದ್ದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಿಸುತ್ತಿದ್ದವು. ಮೋದಿಗೆ ವಾದ್ಯ ಮೇಳಗಳಿಂದ ಸ್ವಾಗತ ಕೋರಲಾಯಿತು.

27/04/2023

ವರುಣ ಕ್ಷೇತ್ರಕ್ಕೆ ಸೇರಿದ ಮೆಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು ರೋಡ್ ಶೋ ನಡೆಸಿ ಮತ ಯಾಚಿಸಿದರು.

Address

NO 198/AKSHETRIAH Road
Mysore
570024

Opening Hours

Monday 9am - 5pm
6pm - 7pm
Tuesday 9am - 5pm
6pm - 7pm
Wednesday 9am - 5pm
6pm - 7pm
Thursday 9am - 5pm
6pm - 7pm
Friday 9am - 5pm
6pm - 7pm
Saturday 9am - 5pm
6pm - 7pm

Telephone

+919901553520

Alerts

Be the first to know and let us send you an email when Sadhvi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sadhvi:

Videos

Share

Category


Other Magazines in Mysore

Show All