The Editorial Board-JSSSTU

The Editorial Board-JSSSTU The Editorial Board is responsible for bringing out the annual college magazine- Jayzine and organiz Welcome to the official page of JC ED!

The Editorial Board of SJCE is an active group of creatively inclined minds that are responsible for two things:
1. JAYZINE-The official annual college magazine of SJCE and
2. || SHABD ||- The annual literary fest of the college, the only of its kind in a technical institute in the state. Most of the colourful happenings on your campus have something to do with the Editorial Board in one way or a

nother, be it little alien spaceships promoting SHABD or sessions of JAM that have everybody in splits! The board inevitably finds ways to the most mundane things in an unconventional manner and if you want to be in on it, this is the place to be.

12/01/2022
07/10/2021
Rules of events for Shabd 2021.Does any event interest you? Register now! The registration link is in our bio.          ...
25/05/2021

Rules of events for Shabd 2021.

Does any event interest you? Register now! The registration link is in our bio.

Event list for ||SHABD|| - 2021.Rules for the events will be posted soon.
23/05/2021

Event list for ||SHABD|| - 2021.
Rules for the events will be posted soon.

In these uncertain times, it can be disheartening to realise that our college experience leaves a lot to be desired.Well...
21/05/2021

In these uncertain times, it can be disheartening to realise that our college experience leaves a lot to be desired.

Well, fret not, for we have an exciting announcement to make- Shabd 2021 is finally here!

We're honoured to announce that Dr. Nagathihalli Chandrashekhar, the prominent Kannada director and screenwriter, will be joining us this year as the chief guest.

Due to the pandemic, Shabd 2021 will be conducted online. Join us on the 5th and 6th of June, 2021 to celebrate art and literature, and most importantly, have fun!

More details regarding the events and registrations will be out soon!
ಬಾನಂಗಳವೆಂಬ ಹಾಳೆಯ ಮೇಲೆ, ಮೋಡಗಳೆಂಬ ಅಕ್ಷರಗಳು ಸಾಲುಗಟ್ಟಿವೆ. ಅಕ್ಷರಗಳ ಘರ್ಷಣೆಗೆ ಪದಗಳ ಮಳೆಯು ಸುರಿಯುತಿದೆ. ಸಾಹಿತ್ಯವೆಂಬ ಚಿಗುರೊಡೆದಾಗ, ರವಿವರ್ಮನ ಕುಂಚಗಳು ಮಯೂರ ನೃತ್ಯಕ್ಕೆ ಗರಿಗಳಾಗಿವೆ. ಸಂಪಾದಕ ಮಂಡಳಿ ಎಂಬ ಮಾಮರದಲ್ಲಿ, ನಮ್ಮ ಕೋಗಿಲೆ ||ಶಬ್ದ್|| ಕೂಗುವ ಹೊತ್ತಾಗಿದೆ. ||ಶಬ್ದ್||-2021ಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಇದೇ ಜೂನ್ ತಿಂಗಳ 5 ಮತ್ತು 6ನೇ ತಾರೀಖಿನಂದು, ಸಂಪಾದಕ ಮಂಡಳಿಯು ಎಲ್ಲರೊಡಗೂಡಿ ಈ ಕಲಾ-ಸಾಹಿತ್ಯಿಕ ಪರ್ವವನ್ನು ಆಚರಿಸಲಿದೆ. ಈ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ, ಖ್ಯಾತ ನಿರ್ದೇಶಕರಾದ ಶ್ರೀಯುತ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ. ಈ ಸಂಭ್ರಮಾಚರಣೆಗೆ ಸಂಪಾದಕ ಮಂಡಳಿಯು ನಿಮ್ಮೆಲ್ಲರನ್ನು ಸ್ವಾಗತಿಸುತ್ತದೆ.

Congratulations!
03/04/2021

Congratulations!

Papers, pens and enthusiastic faces- it was a wonderful atmosphere here today at IS001. We could feel the excitement amo...
17/03/2021

Papers, pens and enthusiastic faces- it was a wonderful atmosphere here today at IS001. We could feel the excitement among the folks as we kicked off our first round of recruitment. We hope you enjoyed writing the test, and that it wasn't too stressful.

The Art Section will definitely have a tough time choosing between all the amazing artworks. As for the English and Kannada section, we can't wait to see what you have in store for us!

Thank you everyone for attending! The results for the next round of recruitment while be announced via WhatsApp.
ತನ್ನ ಚಿಕ್ಕ ಕುಟುಂಬವನ್ನು ವಿಸ್ತರಿಸುವ ಸಲುವಾಗಿ ಹೊಸ ಪ್ರತಿಭೆಗಳನ್ನು ಹುಡುಕುತ್ತಾ, ಸಂಪಾದಕ ಮಂಡಳಿಯು ಇಂದು ಪ್ರವೇಶ ಪರೀಕ್ಷೆಯನ್ನು ನಡೆಸಿತು. ಮಧ್ಯಾಹ್ನದ ತರಗತಿ ಮುಗಿಸಿದವರು ಸಂಜೆಯವರೆಗೆ ಕಾದಿದ್ದು, ಸಂಜೆಯ ತರಗತಿ ಮುಗಿಸಿದವರು ಪಟ್ಟನೆ IS001 ಮುಂದೆ ಹಾಜರಾಗಿ, ಅತ್ಯುತ್ಸಾಹದಿಂದ ಪರೀಕ್ಷೆಯಲ್ಲಿ ಭಾಗವಹಿಸಿದ ಸರ್ವರಿಗೂ ಸಂಪಾದಕ ಮಂಡಳಿಯ ಪರವಾಗಿ ಧನ್ಯವಾದಗಳು. ಶೀಘ್ರದಲ್ಲೇ ಫಲಿತಾಂಶವನ್ನು ತಿಳಿಸಲಾಗುವುದು.

The Editorial Board is craving some young blood and is looking to recruit! If you are someone who loves creating art or ...
12/03/2021

The Editorial Board is craving some young blood and is looking to recruit! If you are someone who loves creating art or penning down your thoughts, you should definitely come attend our recruitment test on the 16th of March at IS001, 5:30 p.m. All you need to bring in is your pen and a whole lot of creativity.
Art aspirants can bring in your portfolio in a neat folder or pen drive.

Register now using the link : http://bit.ly/ed_recruitment
ಕೈಗೆ ಲೇಖನಿ ಸಿಕ್ಕಾಗಲೆಲ್ಲಾ ಸೃಜನಾತ್ಮಕವಾಗಿ ಏನನ್ನಾದರೂ ಗೀಚುವ ಅಥವಾ ಕುಂಚ ಹಿಡಿದು ವರ್ಣಚಿತ್ರಗಳನ್ನು ಚಿತ್ರಿಸುವ ಹವ್ಯಾಸ ನಿಮಗಿದ್ದರೆ, ಇದೋ ಇಲ್ಲಿದೆ ಸುವರ್ಣಾವಕಾಶ. ಸಂಪಾದಕ ಮಂಡಳಿಯು ತನ್ನ ಪರಿವಾರವನ್ನು ವಿಸ್ತರಿಸುವ ಸಲುವಾಗಿ ಹೊಸ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ. ಇದರ ಅಂಗವಾಗಿ ಕನ್ನಡ, ಆಂಗ್ಲ ಹಾಗೂ ಕಲಾ ವಿಭಾಗದ ಪ್ರವೇಶ ಪರೀಕ್ಷೆಯು 16/03/2021 ರಂದು ಸಂಜೆ 5:30 ಕ್ಕೆ IS001 ನಲ್ಲಿ ನಡೆಯಲಿದ್ದು, ಕನ್ನಡ ಅಥವಾ ಆಂಗ್ಲ ವಿಭಾಗದ ಪರೀಕ್ಷೆ ನೀಡಬಯಸುವವರು ಒಂದು ಲೇಖನಿಯೊಂದಿಗೆ ಮತ್ತು ಕಲಾ ವಿಭಾಗಕ್ಕೆ ಸೇರಬಯಸುವವರು ತಾವು ರಚಿಸಿದ ಚಿತ್ರಗಳೊಂದಿಗೆ (ಕನಿಷ್ಠ 2) ಅಥವಾ ಅವುಗಳ ಛಾಯಾಚಿತ್ರಗಳೊಂದಿಗೆ ಆಗಮಿಸಿ, ಭಾಗವಹಿಸಿ, ನಮ್ಮಲ್ಲೊಬ್ಬರಾಗಿ!

With enthusiasm and excitement all over the place, we had our first offline event of the year- 'The Pilot Episode'.As ev...
26/02/2021

With enthusiasm and excitement all over the place, we had our first offline event of the year- 'The Pilot Episode'.

As everyone sprinted out of Golden Jubilee Bhavan, trying to put their decoding skills in action, it was super heartwarming to see our campus come back to life!

Congratulations to all the winners (Shamath and Anand, Devansh and Siddharth) and a huge 'Thank You' to all the participants! To all the people who've tired themselves out by running all over the campus, extra congratulations on completing your workout for the day and ashte ashte!

P.S.Multiple Eddies have discovered that their passion in life is to throw T-Shirts and chocolates into a screaming crowd, and we'd like to express our gratitude for that.
ಅತಿಯುತ್ಸಾಹದಿಂದ ‘Pilot Episode’ ನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ ಎಲ್ಲರಿಗೂ ಸಂಪಾದಕ ಮಂಡಳಿಯ ಕಡೆಯಿಂದ 'ಅಷ್ಟೇ ಅಷ್ಟೇ'. ಬೆನ್ನಿನ ಮೇಲೆ ಪರೀಕ್ಷೆಯೆಂಬ ಬೇತಾಳ ಕುಳಿತಿದ್ದರೂ, ವಿಕ್ರಮನ ತಾಳ್ಮೆಯನ್ನನುಸರಿಸುತ್ತಾ, ಮೆದುಳಿಗೆ ಸುಳಿವು ಬಿಡಿಸುವ ಕಾಯಕವನ್ನು ನೀಡಿ, ಉತ್ಸಾಹದಿಂದ ಎಲ್ಲೆಡೆ ಓಡಿದ ಸ್ಪರ್ಧಾರ್ಥಿಗಳಿಗೆ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು! ಮುಂಬರುವ ನಮ್ಮ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ನಿರೀಕ್ಷಿಸುತ್ತೇವೆ.

The spring has ushered in a horde of new, doe-eyed, zealous little juniors to college and all of us are excited about it...
21/02/2021

The spring has ushered in a horde of new, doe-eyed, zealous little juniors to college and all of us are excited about it. Due to the restrictions imposed in the wake of the pandemic, we unfortunately haven’t had the chance to meet the newbies. It is high time that we right this wrong. Thus, we bring you The Pilot Episode. It is an introductory event tailored to introduce you to our club, The Editorial Board. We have a lot of fun activities lined up for you and that includes a very intense and fun Treasure Hunt. *pst psst *A little birdy told me that there are cash prizes involved. You don’t want to miss this one.

The Treasure Hunt is a fun event that will help you know more about our campus. You can form teams of two and participate. Hurry up! Only the first fifty teams to register can join the hunt. The registration link is in the comment section.

Join us at IS Seminar Hall on the 26th of February at 17:30 hours. Let’s have some fun!
ಸಾವಿರಾರು ಕನಸುಗಳೊಂದಿಗೆ ನೂರಾರು ಬಯಕೆಗಳನ್ನು ಹೊತ್ತು, ಹಲವಾರು ಸುಮಧುರ ಕ್ಷಣಗಳಿಗಾಗಿ ಉತ್ಸಾಹದಿಂದ ಎದುರು ನೋಡುತ್ತಿರುವ ತಮ್ಮೆಲ್ಲರನ್ನು The Pilot Episode ಮೂಲಕ ಸಂಪಾದಕ ಮಂಡಳಿಯು ಹರುಷದ ಹಸಿರಿನೆಡೆಗೆ ಕರೆದೊಯ್ಯಲು 26-02-2021ರಂದು ಸಂಜೆ 5:30ಕ್ಕೆ ಸಜ್ಜಾಗಿದೆ. ಅಷ್ಟೇ ಅಲ್ಲದೆ, ಈ ಸುಂದರ ಸಂಜೆಯ ಸಂತಸವನ್ನು ಇಮ್ಮಡಿಸಲು ನಿಧಿ ಶೋಧ (Treasure Hunt) ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ಇಬ್ಬರನ್ನೊಳಗೊಂಡ ತಂಡವನ್ನು ರಚಿಸಿಕೊಂಡು ಭಾಗವಹಿಸಿ. ಈ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮೊದಲ 50 ತಂಡಗಳಿಗೆ ಮಾತ್ರ ಅವಕಾಶ. ಬನ್ನಿ ಕೂಳೆ ಮಾಡಿ, ಬಹುಮಾನ ಗೆಲ್ಲಿ!

26/01/2021

Happy Republic Day everyone!

Watching the spectacular Republic Day Parade march along the Rajpath, it's easy to remember our glorious heritage and rich history. As we celebrate the spirit of our motherland, let us honour those who've brought pride to our nation, including the brave souls who continue to protect and fight for us every day. Keeping the sacred Constitutional values in our hearts, let us take our country to greater heights- together!
ಧೈರ್ಯವೆಂಬ ಕೇಸರಿಯ ಸೂರಿನಡಿಯಲ್ಲಿ, ಶಾಂತ ಶ್ವೇತಾಂಬರವನ್ನುಟ್ಟು, ಹಸಿರು ಸಮೃದ್ಧಿಯ ಹಾದಿಯನ್ನು ಹಿಡಿದು; ವಿನಮ್ರತೆ, ಶೌರ್ಯ, ಆದರ್ಶಗಳನ್ನು ಮೈಗೂಡಿಸಿಕೊಂಡು, ಐಕ್ಯತೆ, ಸಹೋದರತ್ವವನ್ನು ಸಾರುತ್ತಾ, ಜೊತೆಗೂಡಿ ಸಾಗುತಿಹ ಸಮಸ್ತ ಭಾರತೀಯರಿಗೆ, ಸಂಪಾದಕ ಮಂಡಳಿಯು 72ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತದೆ.
Music credits: https://youtu.be/lgO4fY6RFHo ( Mention NOTT )

01/11/2020

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ 'ಪದಬಂಧ' ಸ್ಪರ್ಧೆಯು ಪ್ರಾರಂಭವಾಗಿದೆ!

ಸ್ಪರ್ಧೆಯಲ್ಲಿ ಭಾಗವಹಿಸಲು https://bit.ly/35RhHtI ಈ ಕೊಂಡಿಯನ್ನು ಬಳಸಿ.

01/11/2020

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ, ಕರ್ನಾಟಕದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಖ್ಯಾತಿಗೊಳಿಸಿದ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಎನ್. ಸಂತೋಷ್ ಹೆಗ್ಡೆಯವರ ಸಂದರ್ಶನವನ್ನು ಮಾಡುವ ಅವಕಾಶ ದೊರೆತದ್ದು ನಮ್ಮ ಅದೃಷ್ಟ. ತೃಪ್ತಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು, ಅವುಗಳನ್ನು ಜಾರಿಗೆ ತಂದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ನಂಬುವ ಇವರು, ತಮ್ಮ ವಕೀಲ ವೃತ್ತಿ ಹಾಗೂ ನಮ್ಮ ದೇಶದ ಪ್ರಸ್ತುತ ಆಗು-ಹೋಗುಗಳ ಕುರಿತು ತಮ್ಮ ಅಭಿಪ್ರಾಯವನ್ನು ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಯುವ ಪೀಳಿಗೆಯಿಂದ ಬದಲಾವಣೆ ಸಾಧ್ಯ ಎಂದು ನಮ್ಮನ್ನು ಹುರಿದುಂಬಿಸಿ, ನಮ್ಮ ಕರೆಗೆ ಓಗೊಟ್ಟು ಸಂದರ್ಶನಕ್ಕೆ ಒಪ್ಪಿದ್ದಕ್ಕಾಗಿ ಸಂಪಾದಕ ಮಂಡಳಿಯ ವತಿಯಿಂದ ಧನ್ಯವಾದಗಳು.
ಸಂದರ್ಶನದ ಸಂಪೂರ್ಣ ವಿಡಿಯೋ ತುಣುಕನ್ನು ನಮ್ಮ ಯೂಟ್ಯೂಬ್ ಚಾನೆಲ್ ನ ಕೊಂಡಿ- https://youtu.be/T8M8ooBbvKg ಮೂಲಕ ವೀಕ್ಷಿಸಬಹುದಾಗಿದೆ.

ಸಿರಿಗನ್ನಡಂ ಗೆಲ್ಗೆ!

#ಕನ್ನಡ #ರಾಜ್ಯೋತ್ಸವ #ಸಂಸ್ಕೃತಿ #ಕಲೆ #ಸಾಹಿತ್ಯ #ಕನ್ನಡರಾಜ್ಯೋತ್ಸವ #ಕರ್ನಾಟಕ

ಕನಸೊಂದ ಕಣ್ಣಲ್ಲೊತ್ತು, ಕಾಣದ ಕಾಲ್ದಾರಿಯನ್ನು ಹಿಡಿದು ಹೊರಟ ಕಂದಮ್ಮಗಳ ಕೈಹಿಡಿಯುವಳೀಕೆ. ಮೊದಲ ತೊದಲ ಪದಗಳಿಂದ, ಸಾಲು ಸಾಲು ಕಥೆ, ಕವಿತೆಗಳನ್ನ...
01/11/2020

ಕನಸೊಂದ ಕಣ್ಣಲ್ಲೊತ್ತು, ಕಾಣದ ಕಾಲ್ದಾರಿಯನ್ನು ಹಿಡಿದು ಹೊರಟ ಕಂದಮ್ಮಗಳ ಕೈಹಿಡಿಯುವಳೀಕೆ. ಮೊದಲ ತೊದಲ ಪದಗಳಿಂದ, ಸಾಲು ಸಾಲು ಕಥೆ, ಕವಿತೆಗಳನ್ನು ಹಾಳೆಗಳಲ್ಲಿ ಗೀಚುವ ತನಕ ಜೊತೆಗಿದ್ದು, ಕಲಿಸಿ, ತಪ್ಪುಗಳನ್ನು ಮನ್ನಿಸಿ, ಅವುಗಳನ್ನು ತಿದ್ದಿ- ತೀಡಿ, ಸಲಹಿ, ನಮ್ಮೆಲ್ಲರ ಅಭ್ಯುದಯದ ಅವಿಭಾಜ್ಯ ಅಂಗವಾಗಿರುವಳೀಕೆ. ಸರ್ವರ ಕಾಯುತಿಹ ಕಣ್ಣುಗಳು, ಮೊಗದಲ್ಲಿನ ಮಂದಹಾಸ, ಸಂಕಟವೆಂದರೆ ಕೈಚಾಚಿ ತನ್ನ ಮಕ್ಕಳ ಸಲಹುವ ಮಮತಾಮಯಿ, ತಾಯಿ ಕನ್ನಡಾಂಬೆಯನ್ನು ಸಾಂಕೇತಿಕವಾಗಿ ಹಾಡಿ, ಹೊಗಳಿ ಪೂಜಿಸುವ ದಿನ ಇದಾದರೂ, ಅವಳ ಮೇಲಿರುವ ನಮ್ಮ ಪ್ರೀತಿ, ಗೌರವ, ಆಕೆಗೆ ನಿತ್ಯೋತ್ಸವದಂತೆ. ಕನ್ನಡನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಮತ್ತಷ್ಟು ಬೆಳೆಸಲು ನಮ್ಮೆಲ್ಲರನ್ನು ಹರಸುತ್ತಿರುವ ಕನ್ನಡಾಂಬೆಯನ್ನು ಕರ ಜೋಡಿಸಿ ನಮಿಸುತ್ತಾ, ಸಂಪಾದಕ ಮಂಡಳಿಯು ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ!
#ಕನ್ನಡ #ರಾಜ್ಯೋತ್ಸವ #ಸಂಸ್ಕೃತಿ #ಕಲೆ #ಸಾಹಿತ್ಯ #ಕನ್ನಡರಾಜ್ಯೋತ್ಸವ #ಕರ್ನಾಟಕ

'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು'.ನೆಲ ಕನ್ನಡ, ಜಲ ಕನ್ನಡ, ಭಾಷೆ ಕನ್ನಡ, ನಮ್ಮೆಲ್ಲರ ಹೃದಯ ಕನ್ನಡ....
25/10/2020

'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು'.
ನೆಲ ಕನ್ನಡ, ಜಲ ಕನ್ನಡ, ಭಾಷೆ ಕನ್ನಡ, ನಮ್ಮೆಲ್ಲರ ಹೃದಯ ಕನ್ನಡ.
'ಆಹಾ! ಎಂಥ ಪ್ರಕೃತಿ ಸೌಂದರ್ಯ, ಭವ್ಯ ಪರಂಪರೆ, ಶ್ರೀಮಂತ ಇತಿಹಾಸ ಮತ್ತು ಅದ್ಭುತ ಸಾಹಿತ್ಯ-ಸಂಪತ್ತಿನಿಂದ ಕೂಡಿದ ಈ ಶ್ರೇಷ್ಠ ನಾಡಿನಲ್ಲಿ ಜನಿಸಿದ ನಾವೇ ಧನ್ಯರು'.
ಕನ್ನಡಾಂಬೆಗೆ ನಮಿಸಿ, ಕನ್ನಡ ನಾಡು-ನುಡಿಗೆ ಶ್ರಮಿಸಿದ ಸರ್ವರ ನೆನೆಯುವ ಸುದಿನ ಸನ್ನಿಹಿತವಾಗಿದೆ. ಸಂಪಾದಕ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು‌ ಆಚರಿಸುತ್ತಿದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಎನ್‌. ಸಂತೋಷ್ ಹೆಗ್ಡೆ ಅವರ ಜೊತೆ ನಡೆಸಿದ ಸಂದರ್ಶನದ ವೀಡಿಯೊ ತುಣುಕನ್ನು ನಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುವುದು. ಕನ್ನಡ ರಾಜ್ಯೋತ್ಸವದ ಮೆರಗನ್ನು ಹೆಚ್ಚಿಸಲು ಸಂಪಾದಕ ಮಂಡಳಿಯು ಆನ್‌ಲೈನ್ ಪದಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.‌ ಎಲ್ಲರೂ ತಪ್ಪದೇ ಭಾಗವಹಿಸಿ, ಆಕರ್ಷಕ ಬಹುಮಾನ ಗೆಲ್ಲಿ.
||ಸಿರಿಗನ್ನಡಂ ಗೆಲ್ಗೆ||

ದಿನಾಂಕ: 01-11-2020
ಸ್ಪರ್ಧೆ ಮತ್ತು ಸಮಯ: ಪದಬಂಧ, ರಾತ್ರಿ 8 ಗಂಟೆಯಿಂದ 10ರ ವರೆಗೆ.
ಸೂಚನೆ ಮತ್ತು ನಿಯಮಾವಳಿಗಳು:
1.ಪದಬಂಧದ ಚಿತ್ರ ಮತ್ತು ಸುಳಿಹುಗಳಿರುವ ಕೊಂಡಿಯನ್ನು ನಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟದಲ್ಲಿ ಹಾಕಲಾಗುವುದು.
2.ನಿಮ್ಮ ಉತ್ತರಗಳನ್ನು ಬರೆದು ಫೋಟೋ ಕ್ಲಿಕ್ಕಿಸಿ ಗೂಗಲ್ ಫಾರ್ಮ್‌ನಲ್ಲಿ ಅಪ್ಲೋಡ್ ಮಾಡಿ.
3.ಗೂಗಲ್ ಫಾರ್ಮ್‌ನ ಲಿಂಕನ್ನು ನವೆಂಬರ್ 1ರ ರಾತ್ರಿ 8 ಗಂಟೆಗೆ ಇನ್ಸ್ಟಾಗ್ರಾಮ್ ಬಯೋದಲ್ಲಿ ಹಾಕಲಾಗುವುದು.
4.ಭಾಗವಹಿಸುವುದನ್ನು ಮರೆಯದಿರಿ.

#ಕನ್ನಡ #ರಾಜ್ಯೋತ್ಸವ #ಸಂಸ್ಕೃತಿ #ಕಲೆ #ಸಾಹಿತ್ಯ #ಕನ್ನಡರಾಜ್ಯೋತ್ಸವ #ಕರ್ನಾಟಕ

‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’. ಹೌದು, ಕನ್ನಡ ತಾಯಿಯ ಡಿಂಡಿಮವನ್ನು ಬಾರಿಸಲು ಇನ್ನು ಕೆಲವೇ ದಿನಗಳಿವೆ. ತಾಯಿ ಎಂದಾಗ ನೆನಪಾ...
21/10/2020

‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’. ಹೌದು, ಕನ್ನಡ ತಾಯಿಯ ಡಿಂಡಿಮವನ್ನು ಬಾರಿಸಲು ಇನ್ನು ಕೆಲವೇ ದಿನಗಳಿವೆ. ತಾಯಿ ಎಂದಾಗ ನೆನಪಾಗುವುದು ಒಂದು ಹೆತ್ತ ತಾಯಿ ಇನ್ನೊಂದು ಹೊತ್ತ ನಾಡು. ನಮ್ಮೆಲ್ಲರನ್ನು ಪೊರೆಯುತ್ತಿರುವ ಕನ್ನಡ ತಾಯಿಗೆ ನಮಿಸುವ ಸುದಿನವೇ ಕನ್ನಡ ರಾಜ್ಯೋತ್ಸವ. ಸಂಪಾದಕ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವದ ಸುಸಂದರ್ಭದ ಹೊಸ್ತಿಲಲ್ಲಿ, ಕನ್ನಡ ಭಾಷಾಭಿಮಾನವನ್ನು ವ್ಯಕ್ತಪಡಿಸಲು ಸರ್ವರಿಗೂ ಸದವಕಾಶ ನೀಡುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಪೂರ್ವಭಾವಿ ಸ್ಪರ್ಧೆಗಳನ್ನು ನಿಮಗಾಗಿ ಹೊತ್ತು ತರುತ್ತಿದೆ.
ಸ್ಪರ್ಧೆಗಳ ವಿವರ ಈ ಕೆಳಗಿನಂತಿವೆ:
೧. ಸೃಜನಾತ್ಮಕ ಬರವಣಿಗೆ ಸ್ಪರ್ಧೆ
● ವಿಷಯ: ತೊದಲು ನುಡಿ
೨. ಚಿತ್ರಕಲಾ ಸ್ಪರ್ಧೆ
● ವಿಷಯ: ಗತ ವೈಭವ
೩. ಛಾಯಾಚಿತ್ರ ಸ್ಪರ್ಧೆ
● ವಿಷಯ: ಸೌಹಾರ್ದತೆ
ಸೂಚನೆಗಳು:
ಚಿತ್ರಕಲೆ ಹಾಗು ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು, ತಾವು ಚಿತ್ರಿಸಿದ ಚಿತ್ರ ಅಥವಾ ಸೆರೆಹಿಡಿದ ಛಾಯಾಚಿತ್ರದ ಕುರಿತಾಗಿ ಎರಡು ಸಾಲುಗಳನ್ನು ಬರೆಯತಕ್ಕದ್ದು.
ನೀವು ಬರೆದ ಲೇಖನ, ಚಿತ್ರ ಅಥವಾ ಸೆರೆ ಹಿಡಿದ ಛಾಯಾಚಿತ್ರವನ್ನು ದಿನಾಂಕ 28/10/2020 ರ ಒಳಗೆ ಸಂಪಾದಕ ಮಂಡಳಿಯ ಈ-ಮೇಲ್ ವಿಳಾಸ, [email protected] ಗೆ ಕಳುಹಿಸತಕ್ಕದ್ದು.
ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳು ಕಾದಿವೆ.

#ಕನ್ನಡ #ರಾಜ್ಯೋತ್ಸವ #ಸಂಸ್ಕೃತಿ #ಕಲೆ #ಸಾಹಿತ್ಯ #ಕನ್ನಡರಾಜ್ಯೋತ್ಸವ #ಕರ್ನಾಟಕ

ನಿರೀಕ್ಷಿಸಿ... #ಕನ್ನಡ  #ರಾಜ್ಯೋತ್ಸವ  #ಸಂಸ್ಕೃತಿ  #ಕಲೆ  #ಸಾಹಿತ್ಯ  #ಕನ್ನಡರಾಜ್ಯೋತ್ಸವ   #ಕರ್ನಾಟಕ
18/10/2020

ನಿರೀಕ್ಷಿಸಿ...

#ಕನ್ನಡ #ರಾಜ್ಯೋತ್ಸವ #ಸಂಸ್ಕೃತಿ #ಕಲೆ #ಸಾಹಿತ್ಯ #ಕನ್ನಡರಾಜ್ಯೋತ್ಸವ #ಕರ್ನಾಟಕ

Friends, JC-ians, fellow compatriots, send us your creative talent! The Editorial Board is accepting submissions for the...
07/10/2020

Friends, JC-ians, fellow compatriots, send us your creative talent!

The Editorial Board is accepting submissions for the 2021 edition of Jayzine! Mail your essays, stories, poetry, photography or artworks to [email protected].
ಜೇಜ಼ೀನ್ ಎಂದಾಕ್ಷಣ ಎಲ್ಲರ ನೆನಪಿಗೆ ಬರುವ ಚಿತ್ರಣಗಳೇ ವರ್ಣರಂಜಿತ ಕಲಾಕೃತಿಗಳು, ಅಚ್ಚುಕಟ್ಟಾದ ಬರಹಗಳು, ಛಾಯಾಗ್ರಹಣಗಳು! ಹೊಸ ಆಲೋಚನೆಗಳನ್ನು ಹೊತ್ತು ಕುಳಿತಿರುವ ಲೇಖಕರಿಗೆ, ನವನವೀನ ಕಲ್ಪನೆಯಲ್ಲಿ ತೊಡಗಿಕೊಂಡಿರುವ ಚಿತ್ರಕಾರರಿಗೆ, ಸೃಜನಾತ್ಮಕವಾಗಿ ಫೋಟೋ ಕ್ಲಿಕ್ಕಿಸಲು ಸಜ್ಜಾದ ಪ್ರತಿಭೆಗಳಿಗೆ ಇಲ್ಲಿದೆ ಸದವಕಾಶ. ನಿಮಗಿಷ್ಟವಾದ ವಿಷಯದ ಬಗ್ಗೆ ಲೇಖನ, ಕಥೆ, ಕವನಗಳನ್ನು ಬರೆದು, ಕಲ್ಪನೆಗಳಿಗೆ ಚಿತ್ರರೂಪವನ್ನಿತ್ತು ಕಲಾಕೃತಿಗಳನ್ನು ರಚಿಸಿ, ವಿಶಿಷ್ಟ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ ಸಂಪಾದಕ ಮಂಡಳಿಯ ಇಮೇಲ್ ವಿಳಾಸ [email protected] ಗೆ ಕಳುಹಿಸಿ. ಜೇಜ಼ೀನ್ 2021ರ ಭಾಗವಾಗಿ.

Congratulations Apoorva and Ananya! Welcome to the Board.
20/09/2020

Congratulations Apoorva and Ananya! Welcome to the Board.

THE ART SECTION IS RECRUITING!If you're an artist who likes to bring your ideas and visions to life, then you'd be a per...
01/09/2020

THE ART SECTION IS RECRUITING!

If you're an artist who likes to bring your ideas and visions to life, then you'd be a perfect fit for the board! We are on the lookout for new blood to join us, and we would love for you to send in your creative works for the first round of our recruitment drive! Enclosed below is everything you need to know about the process.

Guidelines:
1. Mail your portfolios to our official email address i.e. [email protected]
2. Both digital and traditional forms of art are gladly accepted.
3. In case of traditional illustrations, scan or take a clear picture of the artwork and mail it to us.
4. Multiple entries are allowed.
5. Make sure to send in your artwork to our official mail address before 07-09-2020, 23:59 hrs.
6. Don't forget to include your name, semester/year, branch and contact number.
7. Please write the subject line as "Recruitment for the Art Section"
ಸಂಪಾದಕ ಮಂಡಳಿಯು ಪ್ರತಿವರ್ಷದಂತೆ ಈ ವರ್ಷವೂ ತನ್ನ ಪುಟ್ಟ ಪರಿವಾರವನ್ನು ವಿಸ್ತರಿಸಲು ಹೊಸ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ. ಸಂಪಾದಕ ಮಂಡಳಿಯ ಕಲಾ ವಿಭಾಗದ ಸದಸ್ಯರಾಗಲು ಆಶಿಸುವವರಿಗೆ ಇಲ್ಲಿದೆ ಸದವಕಾಶ. ಈ ಆಯ್ಕೆ ಪ್ರಕ್ರಿಯೆಗಾಗಿ ನೀವು ರಚಿಸಿರುವ ಸುಂದರ ಕಲಾಕೃತಿಗಳನ್ನು, ವರ್ಣಚಿತ್ರಗಳನ್ನು ಸ್ಕ್ಯಾನ್ ಮಾಡಿ ಅಥವಾ ಫೋಟೋ ಕ್ಲಿಕ್ಕಿಸಿ, ನಿಮ್ಮ ಹೆಸರು, ವಿಭಾಗ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ನಮೂದಿಸಿ [email protected] ಗೆ ಸೆಪ್ಟಂಬರ್ 7ರ ಒಳಗೆ ಕಳುಹಿಸಿ. ಎಲ್ಲಾ ಶೈಲಿಯ ಡಿಜಿಟಲ್ ಮತ್ತು ಸಾಂಪ್ರದಾಯಿಕ ಕಲಾಕೃತಿಗಳನ್ನು ಕಳುಹಿಸಬಹುದಾಗಿದೆ. ಒಂದಕ್ಕಿಂತ ಅಧಿಕ ಕಲಾಕೃತಿಗಳನ್ನು ಕಳುಹಿಸಲು ಅವಕಾಶವಿದ್ದು, ಎಲ್ಲಾ ಕಲಾಕೃತಿಗಳನ್ನು ಒಂದೇ ಮೇಲ್‌ನಲ್ಲಿ, "Recruitment for the Art Section" ಎಂಬ ಶೀರ್ಷಿಕೆಯಡಿಯಲ್ಲಿ ಕಳುಹಿಸತಕ್ಕದ್ದು. ಬನ್ನಿ, ಭಾಗವಹಿಸಿ, ನಮ್ಮಲ್ಲೊಬ್ಬರಾಗಿ!

Greetings from The Editorial Board!The next issue of the official university magazine, Jayzine, is currently under progr...
29/08/2020

Greetings from The Editorial Board!

The next issue of the official university magazine, Jayzine, is currently under progress and we are accepting entries for publication! The pages of our magazine have always been a safe haven for anyone wanting to express themselves. Whether you want to find purpose through art, inspire people, tell stories or whether you're just trying to score brownie points with your muses by giving them the glory they deserve, we'd love to feature you! Mail your essays, stories, poetry, photography or artworks to [email protected]. We are accepting submissions in Kannada and English.
ಸೂರ್ಯ ರಶ್ಮಿಯನ್ನರಸುತ, ಯೋಚನಾಲಹರಿಯಲ್ಲಿ ಸಾಗುತ್ತಿರುವ ಆಲೋಚನೆಗಳ ದೋಣಿಯ ಅಂಬಿಗ, ನಮ್ಮ ವಾರ್ಷಿಕ ಸಂಚಿಕೆ ಜೇಜ಼ೀನ್. ನೀವು ಬರೆದಿರುವ ಕಥೆ, ಕವನ, ಲೇಖನಗಳನ್ನು, ರಚಿಸಿದ ಕಲಾಕೃತಿಗಳನ್ನು ಹಾಗೂ ಸೆರೆಹಿಡಿದ ಛಾಯಾಚಿತ್ರಗಳನ್ನು [email protected] ಗೆ, ಹೆಸರು, ವರ್ಷ ಹಾಗೂ ವಿಭಾಗವನ್ನು ಕಡ್ಡಾಯವಾಗಿ ನಮೂದಿಸಿ ಕಳುಹಿಸಿ. ನಿಮ್ಮ ಆಲೋಚನೆಗಳನ್ನು ಸಂಚಿಕೆಯ ಭಾಗವನ್ನಾಗಿಸುವ ಜವಾಬ್ದಾರಿ ನಮ್ಮದು.

25/08/2020
"Any man who stands for progress has to criticize, disbelieve, and challenge every item of the old faith." - Bhagat Sing...
15/08/2020

"Any man who stands for progress has to criticize, disbelieve, and challenge every item of the old faith." - Bhagat Singh

On this Independence Day, let us reinstill the spirit of nationalism and remember all the things we should be grateful for. This day reminds us of all the sacrifices that were made by our freedom fighters in order to set India free from the oppressive rule of the colonizers. To every soldier who risked their life and is still fighting so that we all can go about our day unperturbed, and to the essential workers who are on the front lines sacrificing their own safety and well-being in this crisis- you are the true heroes. We appreciate you and your sacrifices more than words can express. We're all Indians fighting for a better India, and we must never forget that.

Thank you so much to Lekhana L R from GSSIETW and Nagendra M (.m.92) from 2nd Year ISE, JSSSTU for sharing their creativity and how they perceive our country. They are the winners for our contest! We also would like to thank everyone who participated by sharing your wonderful and inspiring art.

Happy Independence Day everyone!
Stay home and stay safe.
"ವಂದೇ ಮಾತರಂ" ಘೋಷಣೆಯನ್ನು ಕೇಳಿದಾಕ್ಷಣ ನಮ್ಮೆಲ್ಲರಲ್ಲೂ ದೇಶಭಕ್ತಿಯ ಭಾವನೆಯು ಮೈದುಂಬಿ, ನರ-ನಾಡಿಗಳಲ್ಲಿ ಸಂಚರಿಸಿ, ರೋಮಾಂಚನವನ್ನು ಸೃಷ್ಟಿಸುತ್ತದೆ. ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ಶ್ರಮ, ಬಲಿದಾನವನ್ನು ನಾವು ನೆನೆಯಲೇ ಬೇಕು. ಇಂದಿನ ಕರೋನಾ ಸಂಕಷ್ಟ ಕಾಲದಲ್ಲಿ ಇಡೀ ಭಾರತ ದೇಶದ ಉದ್ದಗಲಗಳಲ್ಲಿ ಹಗಲಿರುಳು ಜನಸೇವೆಯಲ್ಲಿ ತೊಡಗಿರುವ ಸರ್ವ ಯೋಧರಿಗೂ ಗೌರವ ಸಮರ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅಂದು ಇಂದು ಮುಂದೆಂದೂ ಹೀಗೆಯೇ ಭಾರತ ಮಾತೆಯ ಸೇವೆಗಾಗಿ ಸದಾ ಸನ್ನದ್ಧರಾಗಿರುವೆವೆಂಬ ಪ್ರತಿಜ್ಞೆ ಮಾಡುತ್ತಾ, ಪ್ರತಿ ಮನೆ-ಮನಗಳಲ್ಲಿ "ಜೈ ಹಿಂದ್" ಉದ್ಘೋಷದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ. ಸರ್ವರಿಗೂ ಸಂಪಾದಕ ಮಂಡಳಿಯ ಪರವಾಗಿ ೭೪ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಲಾ ಸ್ಪರ್ಧೆಯ ವಿಜೇತರಿಗೆ ಅಭಿನಂದನೆಗಳು. ಎಲ್ಲಾ ಸ್ಪರ್ಧಿಗಳಿಗೂ ಧನ್ಯವಾದಗಳು.

With the quarantine almost completely destroying our perception of time, it’s hard to believe that it’s August already! ...
10/08/2020

With the quarantine almost completely destroying our perception of time, it’s hard to believe that it’s August already! To celebrate our Independence Day, we’ve got something that’ll get your creative juices flowing. Back by popular demand, The Editorial Board is conducting another art competition! This time, the theme is ‘India Through My Eyes’. Use your talents to express what the theme means to you, and have fun!
-
-
Rules:
• The contest will run till August 14th, 2020, 3 PM.
• Visual art mediums- photography, traditional and digital art are acceptable.
• No post processing is allowed for photography and all mediums of art are welcome.
• The entrants should mail their artwork to our email, [email protected], with their name, semester and branch.
• And of course, the most important one is to maintain the rules of self-distancing, wash those hands and keep them away from your face.
Winners will get the chance to display their entries on our page on Independence Day!
Contact .edboard if you have any queries.
-
-
-
ಎಲ್ಲೆಲ್ಲೂ ಕೊರೊನಾ! ಕೆಲವರಿಗೆ ಸುದ್ದಿ ಕೇಳಿ ಕೇಳಿ ಸಾಕಾಗಿದೆ, ಕೆಲವರಿಗೆ ಸುದ್ದಿ ಹೇಳಿ ಹೇಳಿ ಸಾಕಾಗಿದೆ. ಈ ಹೇಳಿ-ಕೇಳಿಯ ನಡುವೆ ವರುಣನ ಆರ್ಭಟ ಜೋರಾಗಿದೆ. ನಮಗೆಲ್ಲಾ ಮನೆಯಲ್ಲಿ ಕೂತು ಬೇಜಾರಾಗಿದೆ. ಆದರೆ ಎಲ್ಲರಲ್ಲೂ ಆತ್ಮಸ್ಥೈರ್ಯ, ದೇಶಭಕ್ತಿಯನ್ನು ವೃದ್ಧಿಸುವ ಸ್ವಾತಂತ್ರ್ಯ ದಿನವು ಸನ್ನಿಹಿತವಾಗಿದೆ. 'ಭವ್ಯ ಭಾರತ'ದ ನಿರ್ಮಾಣದ ಕನಸಿನ ಆಲೋಚನೆಯಲ್ಲಿ ಎಲ್ಲರ ಮನಸ್ಸು ಮಗ್ನವಾಗಿದೆ. ಕಲ್ಪನೆಯಲ್ಲಿ ಪ್ರಯಾಣ ಮಾಡಿ ನಮ್ಮೆಲ್ಲರ ಕನಸಿನ ಭವ್ಯ ಭಾರತವನ್ನು ನಿಮ್ಮ ದೃಷ್ಟಿಕೋನದಿಂದ ಅಳೆದು, ಅದಕ್ಕೆ ಆಕೃತಿಯ ರೂಪ ನೀಡುವ ಹಂಬಲ ನಿಮ್ಮದೇ?

ಹಾಗಿದ್ದರೆ ಇಲ್ಲಿದೆ ನಿಮಗೊಂದು ಸದವಕಾಶ. ನಿಮ್ಮೆಲ್ಲರಿಗೋಸ್ಕರ ಸಂಪಾದಕ ಮಂಡಳಿಯು 'ನನ್ನ ದೃಷ್ಟಿಕೋನದಲ್ಲಿ ಭಾರತ' ಎಂಬ ಶೀರ್ಷಿಕೆಯಾಧಾರಿತ ಕಲಾ ಸ್ಪರ್ಧೆಯನ್ನು ಆಯೋಜಿಸಿದೆ.

ಸ್ಪರ್ಧೆಯ ನಿಯಮಾವಳಿಗಳು ಹೀಗಿವೆ:
1. ಸ್ಪರ್ಧೆಯು 10 ಆಗಸ್ಟ್ 2020ರಿಂದ 14 ಆಗಸ್ಟ್ 2020ರ 15:00 ತನಕ ನಡೆಯುತ್ತದೆ.
2. ಕಲಾ ಮಾಧ್ಯಮಗಳಾದ ಛಾಯಾಗ್ರಹಣ, ಸಾಂಪ್ರದಾಯಿಕ ಶೈಲಿಯ ಕಲೆ, ಡಿಜಿಟಲ್ ಕಲೆಯ ಮುಖಾಂತರ ನಿಮ್ಮ ಕಲಾಕೃತಿಯನ್ನು ರಚಿಸಿ ನಮಗೆ ಕಳುಹಿಸಿ.
3. ಛಾಯಾಚಿತ್ರಗಳ ಸಂಸ್ಕರಣೆಯನ್ನು ಉತ್ತೇಜಿಸಲಾಗುವುದಿಲ್ಲ.
4. ಸ್ಪರ್ಧಾರ್ಥಿಗಳು ತಮ್ಮ ಕಲಾಕೃತಿಯನ್ನು [email protected] ಗೆ, ತಮ್ಮ ಹೆಸರು, ಸೆಮಿಸ್ಟರ್, ವಿಭಾಗ ಹಾಗೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಹೆಸರನ್ನು ಕಡ್ಡಾಯವಾಗಿ ಸೂಚಿಸಿ ಕಳುಹಿಸಬೇಕು.
ಕಲಾ ಹಾಗೂ ಛಾಯಾಗ್ರಹಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕಲಾಕೃತಿಗಳನ್ನು ಸ್ವಾತಂತ್ರ್ಯೋತ್ಸವದ ದಿನದಂದು ನಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಾಕಲಾಗುವುದು.

01/08/2020

ಅಷ್ಟೇ ಅಷ್ಟೇ! 🥳
'ಜಾಗರಣೆ' ಸ್ಪರ್ಧೆಯು ಅಂತ್ಯಗೊಂಡಿದ್ದು, ಉತ್ತರ ಪ್ರತಿಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ. ಫಲಿತಾಂಶಗಳನ್ನು ಅತಿ ಶೀಘ್ರದಲ್ಲಿ ತಿಳಿಸಲಾಗುವುದು.
ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು ಹಾಗೂ ಮುಂಬರುವ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ಎದುರು ನೋಡುತ್ತೇವೆ.
ಧನ್ಯವಾದಗಳು!

ಜಾಗರಣೆ ನಾಳೆ ಸರಿಯಾಗಿ 8 ಗಂಟೆಯಿಂದ ಆರಂಭವಾಗಲಿದೆ. http://bit.ly/3gasvHc ಲಿಂಕ್ ಮೂಲಕ ನಿಮ್ಮ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
31/07/2020

ಜಾಗರಣೆ ನಾಳೆ ಸರಿಯಾಗಿ 8 ಗಂಟೆಯಿಂದ ಆರಂಭವಾಗಲಿದೆ. http://bit.ly/3gasvHc ಲಿಂಕ್ ಮೂಲಕ ನಿಮ್ಮ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

" ಬೆಂಬಿಡದ ಭೂತದಂತೆ ಕಾಡುತ್ತಿರುವ ಕರೋನಾ ನಡುವೆ ಸವೆಸುತ್ತಿರುವ ಬಾಳು ಸಾಕಾಗಿ ಹೋಗಿದ್ಯಾ? ಮನೆಯಿಂದ ಹೊರಬರಲಾಗದಂತಾಗಿದ್ಯಾ? ಹಾಗಿದ...

" ಬೆಂಬಿಡದ ಭೂತದಂತೆ ಕಾಡುತ್ತಿರುವ ಕರೋನಾ ನಡುವೆ ಸವೆಸುತ್ತಿರುವ ಬಾಳು ಸಾಕಾಗಿ ಹೋಗಿದ್ಯಾ? ಮನೆಯಿಂದ ಹೊರಬರಲಾಗದಂತಾಗಿದ್ಯಾ? ಹಾಗಿದ್ದರೆ ಮನೆಯಲ...
29/07/2020

" ಬೆಂಬಿಡದ ಭೂತದಂತೆ ಕಾಡುತ್ತಿರುವ ಕರೋನಾ ನಡುವೆ ಸವೆಸುತ್ತಿರುವ ಬಾಳು ಸಾಕಾಗಿ ಹೋಗಿದ್ಯಾ? ಮನೆಯಿಂದ ಹೊರಬರಲಾಗದಂತಾಗಿದ್ಯಾ? ಹಾಗಿದ್ದರೆ ಮನೆಯಲ್ಲೇ ಕುಳಿತು ನಿಮ್ಮ ಮೆದುಳನ್ನು ಚುರುಕುಗೊಳಿಸಿಲು, ಸಂಪಾದಕ ಮಂಡಳಿ ಪ್ರಸ್ತುತಪಡಿಸುತ್ತಿದೆ "ಜಾಗರಣೆ". "
--ಸರ್-ಎಡಿಟ್-ಅ-ಲಾಟ್

ಇದೇ ಶನಿವಾರ ಆಗಸ್ಟ್ 1 ರಂದು ರಾತ್ರಿ 08:00 ಗಂಟೆಗೆ ಪ್ರಾರಂಭವಾಗುವ ಈ ಚೇತೋಹಾರಿ ಸ್ಪರ್ಧೆಯು 4 ಮನೋರಂಜಕ ಸುತ್ತುಗಳನ್ನು ಒಳಗೊಂಡಿರುತ್ತದೆ.
ಎಲ್ಲಾ ಸುತ್ತುಗಳ ಪ್ರಶ್ನೆಗಳಿರುವ ಕೊಂಡಿಯನ್ನು ರಾತ್ರಿ 07:45 ಗಂಟೆಗೆ ನಮ್ಮ ಪುಟದ ಬಯೋದಲ್ಲಿ ನೀಡಲಾಗುವುದು. ವಿವರ ಹಾಗೂ ನಿಯಮಗಳನ್ನು ಆಯಾ ಸುತ್ತಿನ ಪ್ರಾರಂಭದಲ್ಲಿ ತಿಳಿಸಲಾಗುವುದು.

ನಮ್ಮ ಪುಟದ ಬಯೋದಲ್ಲಿರುವ ಕೊಂಡಿಯ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಈ ಸ್ಪರ್ಧೆಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿರುವುದಿಲ್ಲ ಹಾಗೂ ಎಲ್ಲರಿಗೂ ಮುಕ್ತವಾಗಿರುತ್ತದೆ.
ಜಾಗರಣೆ ಸ್ಪರ್ಧೆಯ ಮೊದಲೆರಡು ವಿಜೇತರಿಗೆ ಅತ್ಯಾಕರ್ಷಕ ಬಹುಮಾನವನ್ನು ನೀಡಲಾಗುವುದು.
ಬನ್ನಿ ಭಾಗವಹಿಸಿ, ನಿಮ್ಮ ಮೆದುಳಿಗೆ ಸ್ವಲ್ಪ ಕಸರತ್ತು ಕೊಡಿ!

Registration link: https://bit.ly/3gasvHc

28/06/2020

Final Crossword round link is up! All rounds must be submitted before 1 am.

28/06/2020

Second round of Quiz link is up on the doc!

28/06/2020

Word origins and Riddles round is up!

28/06/2020

First round of Quiz link is up on the doc!

28/06/2020

Rebus and Picture Connect link is up on the doc!

Winner Takes All - Late Night EditionLink to the doc - https://rb.gy/vnttjjThe first round's link will be posted to this...
28/06/2020

Winner Takes All - Late Night Edition

Link to the doc - https://rb.gy/vnttjj

The first round's link will be posted to this doc at 7.30p.m!

The Editorial Board Winner Takes All - Late Night Edition 7:30p.m (28th June) to 1:00a.m(29th June) Registration link: Click to register Contact information for any queries: Sumi- 7022418836 Bhavana - 9148647495 Instagram - .edboard Rules Each round’s respective links will be released...

28/06/2020

WINNER TAKES ALL Rules List.
1 . A link to a doc will be posted to this page at 7p.m.
2. The event begins at 7.30pm with Rebus and Picture Connect as the first round!
3. Each round’s respective links will be added to the doc as the event progresses. Don't worry, we'll be posting reminders whenever a new link is added!
4. Each event’s rules and instructions are given in the individual event link, please do go through them before answering the questions.
5. You have the absolute freedom to use the internet!
6. If you have any questions, please do message us!

Do you feel like time has no meaning anymore? Are you so bored out of your mind that days are starting to blur together?...
25/06/2020

Do you feel like time has no meaning anymore? Are you so bored out of your mind that days are starting to blur together? Fret not, we have something fun for you!

The Editorial Board presents: Winner Takes All- Late Night Edition! Join us from 7:30 PM on the 28th of June, and enjoy the quizzes, picture rounds, riddles, and other rounds that will tease your brain.

We have seven very interesting rounds for you- Rebus and Quiz (Level 1), Word Origins, Riddles, and Quiz (Level 2), Movie Dialogues and Crossword (Level 3).

Of course, there are attractive prizes lined up for the first two winners! Be on the lookout for the rules and instructions on how to participate in our Instagram stories.

This event is open to everyone! Don’t forget to register, and it will remain open till the event ends.
Registration link: https://forms.gle/FXFWnFVozyt1t11i7

For more details, contact:
Sumi - 70224 18836
Bhavana - 91486 47495

Bored of staying in all the time? Tired of having to deal with all those assignments and online tests? We have something...
28/05/2020

Bored of staying in all the time? Tired of having to deal with all those assignments and online tests? We have something to tickle your brain. Come, take our spunky general quiz and you might even win a prize! Registrations are open now! Join us on the 31st of May, this Sunday, and have some fun. The link to the quiz will be provided on the day of the quiz.

Registration link: https://bit.ly/2M6lFVH
Contact info: Shashank (83107 88631)
ಎಲ್ಲಿ ನೋಡಿದರಲ್ಲಿ ಕರೋನಾ ಕರೋನಾ ಕರೋನಾ!
ಸ್ವಗೃಹದಲ್ಲಿ ಬಂಧಿಯಾಗಿ ಸುಮಾರು ಎರಡೂವರೆ ತಿಂಗಳುಗಳೇ ಕಳೆದು ಹೋಗಿವೆ. ಈ ಸಂದರ್ಭದಲ್ಲಿ ಸ್ತಬ್ಧವಾಗಿರುವ ನಿಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡಲು ಸಂಪಾದಕ ಮಂಡಳಿಯು ರಸಪ್ರಶ್ನೆ ಸ್ಪರ್ಧೆಯನ್ನು ಹೊತ್ತು ತರುತ್ತಿದೆ.
* ವಿಷಯ : ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ವಿದ್ಯಮಾನ.
* ದಿನಾಂಕ : 31/5/2020 (ಇದೇ ಭಾನುವಾರ)
* ಸಮಯ : ಸಂಜೆ 5 ಗಂಟೆಗೆ
* ನೋಂದಾವಣಿ ಕೊಂಡಿ ನಮ್ಮ ಇನ್ಸ್ಟಾಗ್ರಾಮ್ ಪುಟದ ಬಯೋನಲ್ಲಿ ಲಭ್ಯವಿದೆ.
* ನೊಂದಾಯಿಸಿಕೊಂಡ ಮೊದಲ 50 ಸ್ಪರ್ಧಿಗಳಿಗೆ ಮಾತ್ರ ಅವಕಾಶ.
ವಿಜಯಶಾಲಿ ಸ್ಪರ್ಧಾಳುಗಳು ಅತ್ಯಾಕರ್ಷಕ ಬಹುಮಾನಕ್ಕೆ ಪಾತ್ರರಾಗುವರು. ಮನೆಯಲ್ಲೇ ಕುಳಿತು ಭಾಗವಹಿಸಿ, ಬಹುಮಾನ ಗಳಿಸಿ!

As people across the globe are stuck in quarantine, many are looking for ways to escape from this new dystopian-like rea...
22/03/2020

As people across the globe are stuck in quarantine, many are looking for ways to escape from this new dystopian-like reality. It’s easy for this extended time indoors to cause major cabin fever, but we have just the right thing for you! The Editorial Board is conducting an art competition with the theme 'From My Window'. Channel your inner creativity, look outside your window and make art from what you see with the hashtag !

Rules:
• The contest runs from March 22nd, 2020 till March 29th, 2020.
• Visual art mediums- photography, traditional and digital art are acceptable. .
• The entrants should post the artwork on their Instagram with the hashtag , tag .edboard and send a screenshot of the same with their name, semester and branch for us to keep track.
• Maintain the rules of self-distancing, wash those hands and keep them away from your face.

All artists will receive a digital award certificate. Winners will be displayed on our page!

Contact .edboard if you have any queries.
ಹಲವಾರು ದಿನಗಳಿಂದ ನಾಲ್ಕು ಗೋಡೆಯ ನಡುವೆ ಸೆರೆಯಾಗಿ ನೀವೆಲ್ಲರೂ ರೋಸಿ ಹೋಗಿದ್ದೀರೆಂದು ನಮಗೆ ತಿಳಿದಿದೆ. ನಿಮ್ಮ ಸೃಜನಾತ್ಮಕತೆಗೆ ಸ್ವಲ್ಪ ಕೆಲಸ ಕೊಡೋಣ ಎಂದು ಸಂಪಾದಕ ಮಂಡಳಿಯು ಕಲಾ ಸ್ಪರ್ಧೆಯೊಂದಿಗೆ ಬಂದಿದೆ. ನಾಲ್ಕು ಗೋಡೆಯ ಕತ್ತಲಿನ ನಡುವೆ, ಬೆಳಕು ಚೆಲ್ಲುವ 'ಆ ಕಿಟಕಿ'ಯಿಂದ ಕಂಡು ಬಂದ ಜಗತ್ತಿನ ಸ್ವರೂಪವನ್ನು ಕಲೆಯ ಮೂಲಕ ವ್ಯಕ್ತಪಡಿಸಿ. ನಿಯಮಾವಳಿಗಳು:
1. ಸ್ಪರ್ಧೆಯು ಮಾರ್ಚ್ 22, 2020ರಿಂದ ಮಾರ್ಚ್ 29, 2020ರ ತನಕ ನಡೆಯುತ್ತದೆ.
2. ಕಲಾ ಮಾಧ್ಯಮಗಳಾದ ಛಾಯಾಗ್ರಹಣ, ವಿಡಿಯೋ, ಸಾಂಪ್ರದಾಯಿಕ ಶೈಲಿಯ ಕಲೆ, ಡಿಜಿಟಲ್ ಕಲೆಯ ಮುಖಾಂತರ ನಿಮ್ಮ ಕಲಾಕೃತಿಯನ್ನು ರಚಿಸಿ ನಮಗೆ ಕಳಿಸಿ.
3. ಸ್ಪರ್ಧಾರ್ಥಿಗಳು ತಮ್ಮ ಕಲಾಕೃತಿಯನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಾಗಿ, ಹ್ಯಾಷ್ಟಾಗ್ ನ ಬಳಿಸಿ, .edboard ಇನ್ಸ್ಟಾಗ್ರಾಮ್ ಖಾತೆಯನ್ನು ಟ್ಯಾಗ್ ಮಾಡಿ, ಹಾಕಬೇಕು. ಅದರ ಸ್ಕ್ರೀನ್ ಶಾಟ್ ಒಂದನ್ನು ನಮ್ಮ ಖಾತೆಗೆ ಹೆಸರು, ಸೆಮಿಸ್ಟರ್ ಹಾಗೂ ವಿಭಾಗವನ್ನು ಕಡ್ಡಾಯವಾಗಿ ಸೂಚಿಸಿ (ಡಿ.ಎಂ.) ಕಳುಹಿಸಬೇಕು.
ಎಲ್ಲಾ ಕಲಾವಿದರಿಗೆ ಡಿಜಿಟಲ್ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರ ಹೆಸರನ್ನು ನಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಾಕಲಾಗುವುದು. ವಿ.ಸೂ. ಕಲಾಕೃತಿಯನ್ನು ರಚಿಸುವ ಭರದಲ್ಲಿ ಕೈಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಆಗಾಗ್ಗೆ ಕೈಯನ್ನು ತೊಳೆಯುತ್ತಿರಿ!

This year's ||SHABD|| was the culmination of thousands of moments, each of them ineffable in their own way. The turnout ...
17/02/2020

This year's ||SHABD|| was the culmination of thousands of moments, each of them ineffable in their own way. The turnout for the 14th edition of SHABD exceeded our expectations, once again!

The Editorial Board is extremely grateful to Mr. Amoghavarsha () for having attended the inauguration, marking the release of Jayzine 2020. We would like to extend our sincere gratitude to the management and the college faculty for their support and guidance. We thank the participants who took the time to be a part of all the events. We are extremely grateful for the volunteers for their faithful dedication, time and interest. SHABD wouldn't have been the success it is today without you. The prefest events leading up to SHABD foreshadowed the excitement to come. The days leading up to SHABD, though stressful, have been one of the most magical moments, bringing people closer and creating countless bonds. The time put in resulted in beautiful and colourful installations. Then came the big weekend. Events were held and prizes were distributed.We would also like to congratulate all the winners!

SHABD surely takes up a big space in all of our hearts and we hope everyone enjoyed being a part of it. A huge 'Thank You' to everyone who played a role, big or small. We look forward to SHABD 2021 and hope to see you all there!

"ಅವನಾರವನವನವನು ಸುರನರರಿಗೆ.....", "ವಾಗ್ಝರಿ", "ಕಾಲಹರಣ ತಂತ್ರವನ್ನು ಬಳಸಿದರು", " ಈ ವಿಷಯದ ವಿರೋಧವಾಗಿ ನನ್ನ ವಾದವನ್ನು ಮಂಡಿಸಲು ಇಚ್ಛಿಸುತ್ತೇನೆ"... ಈ ಮಾತುಗಳನ್ನಾಡುತ್ತಲೇ ಈ ವರ್ಷದ ಬಹುನಿರೀಕ್ಷಿತ ಸಾಹಿತ್ಯಿಕ ಪರ್ವ ||ಶಬ್ದ್|| 2020 ಕ್ಕೆ ಅಂತಿಮ ಚರಣವ ಹಾಡಿದ್ದಾಯಿತು. ಈ 'ಶಬ್ದ'ಕ್ಕೆ ಕಾರಣವಾದ ಪ್ರತಿಯೊಂದು ದನಿಗೂ ನಮ್ಮ ನಮನಗಳು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಅಮೋಘವರ್ಷರವರಿಗೆ ಧನ್ಯವಾದಗಳು. ನಮಗೆ ಅತ್ಯುತ್ತಮ ಮಾರ್ಗದರ್ಶನ ನೀಡಿದ ಸಮಸ್ತ ಅಧ್ಯಾಪಕ ವೃಂದದವರಿಗೆ ಹಾಗೂ ನಮ್ಮನ್ನು ಸದಾ ಪ್ರೋತ್ಸಾಹಿಸಿ, ನಮ್ಮಲ್ಲಿ ಚೈತನ್ಯವನ್ನು ತುಂಬಿದ, ತುಂಬುತ್ತಿರುವ ಎಲ್ಲಾ ಹಿರಿಯ ಸಂಪಾದಕರಿಗೆ ಧನ್ಯವಾದಗಳು. ಅವಿರತವಾಗಿ ನಗುಮೊಗದೊಂದಿಗೆ ನಮ್ಮೊಟ್ಟಿಗಿದ್ದು, ಕಾರ್ಯಕ್ರಮವು ಸುಲಲಿತವಾಗಿ ನಡೆಯಲು ಕಾರಣಕರ್ತರಾದ ಎಲ್ಲಾ ಸ್ವಯಂಸೇವಕರಿಗೆ ವಂದನೆಗಳು. ಸ್ಪರ್ಧಾತ್ಮಕ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಧನ್ಯವಾದಗಳು ಹಾಗೂ ಬಹುಮಾನಗಳನ್ನು ಹೊತ್ತೊಯ್ದ ಎಲ್ಲಾ ವಿಜೇತರಿಗೆ ಅಭಿನಂದನೆಗಳು.

ನಿಮ್ಮೆಲ್ಲರ ಅಮೂಲ್ಯ ಬೆಂಬಲವನ್ನು ಹಾಗೂ ಪ್ರೋತ್ಸಾಹವನ್ನು ಮುಂದಿನ ಕಾರ್ಯಕ್ರಮಗಳಲ್ಲಿಯೂ ಸಹ ಎದುರುನೋಡುತ್ತಿದ್ದೇವೆ.

Address

Mysore

Alerts

Be the first to know and let us send you an email when The Editorial Board-JSSSTU posts news and promotions. Your email address will not be used for any other purpose, and you can unsubscribe at any time.

Contact The Business

Send a message to The Editorial Board-JSSSTU:

Videos

Share

Category


Other Magazines in Mysore

Show All