ತುಂಬಿ ಹರಿಯುತ್ತಿರುವ ಕೊಡಗಿನ ಚಿಕ್ಲಿಹೊಳೆ ಜಲಾಶಯ
ವಿವಿಧ ಪಕ್ಷದ ಪ್ರಮುಖರು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್ ಅವರ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ಅನ್ನು ತೆರೆಯಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇತರರು ಇದ್ದರು.
*ಮನೆಯೊಳಗೆ ನುಗ್ಗಿದ ಮಳೆನೀರು*
******************
*KODAGU NEWS*
******************
ಮಡಿಕೇರಿಯಲ್ಲಿ ಇಂದು ಸುರಿದ ಭಾರಿ ಮಳೆಗೆ ನಗರದ ರಾಣಿಪೇಟೆಯ ಅಂಬೇಡ್ಕರ್ ನಗರ ನಿವಾಸಿ ಕಲಾ ಎಂಬುವವರ ಮನೆಯೊಳಗೆ ಕೊಳಚೆ ನೀರು ಹರಿದು ಬಂದಿರುವ ದೃಶ್ಯ....
ಕುಶಾಲನಗರಕ್ಕೆ ತಂಪೆರೆದ ಮಳೆರಾಯ
ಮಡಿಕೇರಿ ದಸರಾ. ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ. ದಶಮಂಟಪ. ಭಾಗ 2
ಮಡಿಕೇರಿ ದಸರಾ. ಶ್ರೀ ಕೋಟೆ ಮಹಾಗಣಪತಿ ದಶಮಂಟಪ. ಭಾಗ 1
ಮಡಿಕೇರಿ ದಸರಾ. ಶ್ರೀ ಕೋಟೆ ಮಾರಿಯಮ್ಮ ದಶಮಂಟಪ. ಭಾಗ 1
ಮಡಿಕೇರಿ ದಸರಾ. ಶ್ರೀ ಕೋಟೆಮಾರಿಯಮ್ಮ ದಶಮಂಟಪ. ಭಾಗ 2
ಮಡಿಕೇರಿ ದಸರಾ ಶ್ರೀ ಕೋಟೆ ಮಾರಿಯಮ್ಮ ದಶಮಂಟಪ. ಭಾಗ 3
ಶ್ರೀ ಕರವಲೆ ಭಗವತಿ ದಶಮಂಟಪ 2022*.
ಮಳೆಯ ರುದ್ರನರ್ತನಕ್ಕೆ ತತ್ತರಿಸಿದ ಮಂಜಿನ ನಗರಿ ಮಡಿಕೇರಿ ನಗರದ ಪ್ರಕ್ರತಿ ಬಡವಣೆ. ಮತ್ತು ಹಲವು ಕಡೆ ಮನೆ ಒಳಗೆ ನೀರು ಹರಿದು ತುಂಬಿರುವ ದೃಶ್ಯ ಗಳು
KODAGU NEWS
ಕುಂಬೂರಿನಲ್ಲಿ ಅಬಕಾರಿ ದಾಳಿ ; ಅಕ್ರಮ ಮದ್ಯ ವಶಕ್ಕೆ , ಆರೋಪಿ ಪರಾರಿ
******************
*KODAGU NEWS*
******************
ಮಡಿಕೇರಿ ; ಸೋಮವಾರಪೇಟೆ ವ್ಯಾಪ್ತಿಯ ಕುಂಬೂರಿನಲ್ಲಿ ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿರುವ ಬಗ್ಗೆ ಕೊಡಗು ನ್ಯೂಸ್ ಹಾಗೂ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದ ಬೆನ್ನಲ್ಲೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮ ಮಾಲನ್ನು ವಶ ಪಡಿಸಿಕೊಂಡು ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಕುಂಬೂರು ಗ್ರಾಮದ ಕೋಳಿ ಚಂದ್ರ ಎಂಬುವವರು ಅಕ್ರಮವಾಗಿ ಮಾರಾಟಕ್ಕೆ ಇರಿಸಿದ್ದ ಸುಮಾರು 5 ಲೀಟರ್ ಗಳಿಗೂ ಅಧಿಕ ಮಾಲನ್ನು ವಶ ಪಡಿಸಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ತೋಟಕ್ಕೆ ಹಾರಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸೋಮವಾರಪೇಟೆ ಅಬಕಾರಿ ಉಪ ಅಧೀಕ್ಷಕರಾದ ಚೈತ್ರ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಲಾಖೆಯ ಸಿಬ್ಬಂದಿಗಳು ಭಾಗಿ
ಕೊಡಗಿನಲ್ಲಿ ವಿಪರೀತ ಮಳೆ : ನಷ್ಟದ ಭೀತಿಯಲ್ಲಿ ಬೆಳೆಗಾರರು
****************
KODAGU NEWS
****************
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಂಬೂರು ವ್ಯಾಪ್ತಿಯಲ್ಲಿ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಬೆಳೆಯಲಾಗಿದ್ದ ಬೆಳೆಗಳು ನಾಶವಾಗುತ್ತಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಬೆಳೆಗಾರ ದಿವಾಕರ್ ಕೊಡಗು ನ್ಯೂಸ್ ನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಾಡಾನೆಗಳನ್ನು ಕಾಡಿಗಟ್ಟಿದ ಅರಣ್ಯ ಸಿಬ್ಬಂದಿಗಳು
*****************
*KODAGU NEWS*
*****************
ಮಡಿಕೇರಿ : ಪಾಲಿಬೆಟ್ಟ ಸಮೀಪದ ಚನ್ನಂಗಿ ವ್ಯಾಪ್ತಿಯ ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವ ಮೂಲಕ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..
ವಿಡಿಯೋ ಕೃಪೆ : ಸುರೇಶ್
*ಕುಶಾಲನಗರದಲ್ಲಿ ಭೀಕರ ಅಪಘಾತ: ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾದಚಾರಿಗೆ ಕಾರು ಗುದ್ದಿದ್ದ ದೃಶ್ಯ..!*
********************
*KODAGU NEWS*
********************
ಮಡಿಕೇರಿ : ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಡಿಕ್ಕಿಯ ರಭಸಕ್ಕೆ ಪಾದಚಾರಿಯ ಕಾಲುಗಳು ಮುರಿತಗೊಂಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ
ಪಟ್ಟಣದ ಆಧಿಶ್ವರ್ ಶೋ ರೂಂ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಎದುರಿನಿಂದ ಕಾರೊಂದು ವೇಗವಾಗಿ ಬರುತ್ತಿರುವುದನ್ನು ಗಮನಿಸಿ ಬದಿಯಲ್ಲಿ ನಿಂತಿದ್ದ ಲಾರಿಯ ಮುಂಭಾಗಕ್ಕೆ ಸರಿದಿದ್ದಾನೆ. ಆದರೂ ಕಾರು ಏಕಾಏಕಿ ನಿಂತಿದ್ದ ಲಾರಿಯ ಮೇಲೆ ಅಪ್ಪಳಿಸಿದೆ. ಪರಿಣಾಮ ಕಾರು ಲಾರಿ ಮಧ್ಯೆ ಸಿಲುಕಿ ಪಾದಚಾರಿಯ ಕಾಲುಗಳು ಮುರಿತಕ್ಕೆ ಒಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುಶಾಲನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.