News Network Kodagu

News Network Kodagu ಕೊಡಗು ಜಿಲ್ಲೆಯ ಸುದ್ದಿಗಳಿಗಾಗಿ NEWS NETWORK KODAGU ?

*BIG BREAKING NEWS**ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನೆಲೆ*ಕುಶಾಲನಗರ ಸೇರಿದಂತೆ ಕಾವೇರಿ ನದಿ ಪ...
24/07/2021

*BIG BREAKING NEWS*

*ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಹಿನ್ನೆಲೆ*

ಕುಶಾಲನಗರ ಸೇರಿದಂತೆ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತ.

*ಆತಂಕದಲ್ಲಿ ನದಿ ತಟದ ಹಲವು ಬಡಾವಣೆಗಳ ನಿವಾಸಿಗಳು.*

ಹಾರಂಗಿ ಜಲಾಶಯದಿಂದ ಬೆಳಗ್ಗೆ 6 ರಿಂದ 18 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ನದಿಗೆ.
ಹಾರಂಗಿ ಜಲಾಶಯಕ್ಕೆ ಒಳಹರಿವು 18 ಸಾವಿರ ಕ್ಯೂಸೆಕ್ಸ್.

ಮಧ್ಯಾಹ್ನ ತನಕ ಇದೇ ಪರಿಸ್ಥಿತಿ ಮುಂದುವರಿಕೆ ಸಾದ್ಯತೆ.

24/07/2021
ಸೋಂಕು ಇಳಿಕೆಯ ನಡುವೆ ಯೋಧರ ತವರೂರು ಕೊಡಗು ಜಿಲ್ಲೆಯ ಗ್ರಾಮ ಒಂದರಲ್ಲಿ 25 ಜನರಿಗೆ ಕೊರೋನಾ ದೃಡ,ಕೊಡಗು ): ಕೊಡಗು ಜಿಲ್ಲೆಯಲ್ಲಿ ಸದ್ಯ ಕೊರೋನಾ ...
16/06/2021

ಸೋಂಕು ಇಳಿಕೆಯ ನಡುವೆ ಯೋಧರ ತವರೂರು ಕೊಡಗು ಜಿಲ್ಲೆಯ ಗ್ರಾಮ ಒಂದರಲ್ಲಿ 25 ಜನರಿಗೆ ಕೊರೋನಾ ದೃಡ,

ಕೊಡಗು ): ಕೊಡಗು ಜಿಲ್ಲೆಯಲ್ಲಿ ಸದ್ಯ ಕೊರೋನಾ ಸೋಂಕಿನ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ ಕೆಲವು ಗ್ರಾಮ ಪಂಚಾಯಿತಿ ಮತ್ತು ಗ್ರಾಮಗಳಲ್ಲಿ ಮಾತ್ರ ಕೋವಿಡ್​​ ಸೋಂಕು ಇನ್ನೂ ಅಬ್ಬರಿಸುತ್ತಲೇ ಇದೆ. ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಯ ನರಿಯಂದಡ ಗ್ರಾಮದಲ್ಲಿ ಬರೋಬ್ಬರಿ 25 ಪಾಸಿಟಿವ್ ಪ್ರಕರಣಗಳಿವೆ. ಹೀಗಾಗಿಯೇ ಈ ಗ್ರಾಮವನ್ನೇ ಒಂದು ವಾರದ ಕಾಲ ಸಂಪೂರ್ಣ ಸೀಲ್ ಡೌನ್ ಮಾಡಲು ಪಂಚಾಯಿತಿಯ ಟಾಸ್ಕ್ ಫೋರ್ಸ್ ನಿರ್ಧರಿಸಿದೆ. ನಾಳೆಯಿಂದ ಅಂದರೆ ಜೂನ್ 17 ರಿಂದ ಇದೇ ಜೂನ್ 24 ರವರೆಗೆ ಅಂದರೆ ಏಳು ದಿನಗಳ ಕಾಲ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ.

ಇದುವರೆಗೆ ಗ್ರಾಮದಲ್ಲಿ 209 ಕೋವಿಡ್​ ಪಾಸಿಟಿವ್​​ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಮೊದಲ ಅಲೆಯಲ್ಲಿ ದಾಖಲಾಗಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆಗಿಂತ ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳೇ ಹೆಚ್ಚು ಇನ್ನು ಕಳೆದ ನಾಲ್ಕು ದಿನಗಳಲ್ಲಿ ಈ ಗ್ರಾಮದಲ್ಲಿ ಬರೋಬ್ಬರಿ 25 ಸೋಂಕು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಇಡೀ ಗ್ರಾಮವನ್ನು ಆತಂಕಕ್ಕೆ ದೂಡಿದೆ. ನಾಳೆಯಿಂದ ಈ ಗ್ರಾಮಕ್ಕೆ ಹೊರಗಿನ ಯಾರು ಬರುವಂತಿಲ್ಲ, ಊರಿನವರು ಯಾರೂ ಗ್ರಾಮಬಿಟ್ಟು ಹೊರಗೆ ಹೋಗುವಂತಿಲ್ಲ. ಅಷ್ಟೇ ಅಲ್ಲ ಮನೆಯಿಂದಲೂ ಯಾರೂ ಹೊರಗೆ ಬರುವಂತಿಲ್ಲ. ಹೀಗೆ ಒಂದು ವಾರ ಬಂದ್ ಮಾಡುವುದರಿಂದ ಗ್ರಾಮದ ಜನರಿಗೆ ತೊಂದರೆಯಾಗಬಾರದು ಎಂದು ಪಂಚಾಯಿತಿಯಿಂದಲೇ ಮೂರು ವಾಹನಗಳಲ್ಲಿ ತರಕಾರಿ ಮತ್ತು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅವರು ಮಾತ್ರವೇ ಗ್ರಾಮದಲ್ಲಿ ಓಡಾಡಿ ಮನೆ ಮನೆಗೆ ಹಣ್ಣು ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲಿದ್ದಾರೆ.

ಒಂದು ವೇಳೆ ಯಾರಾದ್ರು ಅನಗತ್ಯವಾಗಿ ಮನೆಯಿಂದ ಹೊರಗೆ ಬಂದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಜೊತೆಗೆ ಸುಖಾಸುಮ್ಮನೆ ವಾಹನಗಳು ಓಡಾಡಿದಲ್ಲಿ ಅವುಗಳನ್ನು ಸೀಜ್ ಮಾಡಲು ಟಾಸ್ಕ್ ಫೋರ್ಸ್ ಸಮಿತಿ ನಿರ್ಧರಿಸಿದೆ. ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರನ್ನು ನಿಯೋಜಿಸುವಂತೆ ಈಗಾಗಲೇ ಪಂಚಾಯಿತಿ ವತಿಯಿಂದ ವಿರಾಜಪೇಟೆ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್.

ಇನ್ನು ಗ್ರಾಮದಲ್ಲಿ ಇಷ್ಟೊಂದು ಸೋಂಕಿನ ಪ್ರಕರಣಗಳು ದಾಖಲಾಗಿರುವುದಕ್ಕೆ ಕಾರಣವೇನು ಎಂದರು ವಿಚಾರಿಸಿದರೆ, ಗ್ರಾಮದ ಯಾರದೋ ಮನೆಯಲ್ಲಿ ಪಂಚಾಯಿತಿ ಅಧಿಕಾರಿಗಳಿಗೂ ಗೊತ್ತಿಲ್ಲದಂತೆ ಕಾರ್ಯಕ್ರಮ ಒಂದು ನಡೆದಿದೆ ಯಂತೆ. ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರಿಂದಲೇ ಗ್ರಾಮದಲ್ಲಿ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ಹರಡುವುದಕ್ಕೆ ಕಾರಣ ಎನ್ನುತ್ತಾರೆ ಪಂಚಾಯಿತಿ ಪಿಡಿಓ ಆಶಾ. ಇನ್ನೂ ಅಚ್ಚರಿಯ ವಿಷಯವೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಂದೇ ಕುಟುಂಬದ ಹತ್ತು ಜನರಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿಯೇ ಗ್ರಾಮದಲ್ಲಿ ಹರಡಿರುವ ಸೋಂಕಿನ ಚೈನ್ ಮುರಿಯಲು ಗ್ರಾಮವನ್ನು ಒಂದು ವಾರ ಸೀಲ್ ಡೌನ್ ಮಾಡಲು ಮುಂದಾಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

14/06/2021

ನಿಜಕ್ಕೂ ನಿಮ್ಮನ್ನು ಮೆಚ್ಚಲೆ ಬೇಕು ಗೆಳೆಯ ಸಮಾಜ ಸೇವೆ ಮಾಡುವವರನ್ನು ಕೀಳಾಗಿ ಕಾಣುವವರು, ಬಡವರು, ನಿರಾಶ್ರಿತರು, ರೋಗಿಗಳ ಚಿಕಿತ್ಸೆಗಾಗಿ ಹಣ ಕೇಳಿದಾಗ ಸಮಾಜ ಸೇವಕರನ್ನು ಬಯ್ಯುವವರು ಕೇವಲವಾಗಿ ಕಾಣುವವರು ಈ ವೀಡಿಯೋವನ್ನು ತಪ್ಪದೆ ನೋಡಿ.

*ತಾಯಿಯ ನೆನಪುಗಳಿರುವ ಹಳೆಯ ಮೊಬೈಲ್ ಕೇಳಿದ ಬಾಲಕಿಗೆ ಹೊಸ ಮೊಬೈಲ್ ಖರೀದಿಸಿಕೊಟ್ಟ ಕೈ ನಾಯಕರು.**🌍NEWS NETWORK KODAGU 📡*     ನಮ್ಮ ಜಿಲ್ಲೆ...
24/05/2021

*ತಾಯಿಯ ನೆನಪುಗಳಿರುವ ಹಳೆಯ ಮೊಬೈಲ್ ಕೇಳಿದ ಬಾಲಕಿಗೆ ಹೊಸ ಮೊಬೈಲ್ ಖರೀದಿಸಿಕೊಟ್ಟ ಕೈ ನಾಯಕರು.*

*🌍NEWS NETWORK KODAGU 📡*
ನಮ್ಮ ಜಿಲ್ಲೆ ನಮ್ಮ ಸುದ್ದಿ

*ಮಡಿಕೇರಿ* : ಕೊರೋನಾದಿಂದ ತಾಯಿ ಕಳೆದುಕೊಂಡ ಮಗಳು ಭಾವನಾತ್ಮಕ ಪತ್ರ ಬರೆದಿದ್ದಳು. . ಮೇ 16 ರಂದು ಕೋವಿಡ್‌ನಿಂದ ತಾಯಿ ಮೃತಪಟ್ಟಿದ್ದರು. ಆ ವೇಳೆ ತಾಯಿಯ ಬಳಿಯಿದ್ದ ಮೊಬೈಲ್ ಸಿಕ್ಕಿರಲಿಲ್ಲ. 'ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ಬಳಿ ಇರುವ ಮೊಬೈಲ್‌ವೊಂದೇ ನನಗೆ ನೆನಪು. ಆ ಮೊಬೈಲನ್ನು ಹುಡುಕಿಕೊಡಿ ಎಂದು ಡಿಸಿ, ಶಾಸಕರಿಗೆ ಮಗಳು ಬಹಿರಂಗ ಪತ್ರ ಬರೆದಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗಿತ್ತು.

ಯುವ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಶ್ರೀನಿವಾಸ್ ಬಿವಿ ಸಹ ಬಾಲಕಿಯ ನೆರವಿಗೆ ಧಾವಿಸಲು ಮನವಿ ಮಾಡಿಕೊಂಡಿದ್ದರು. ಯೂತ್ ಕಾಂಗ್ರೆಸ್ ಬಾಲಕಿಗೆ ಹೊಸ ಮೊಬೈಲ್ ಕೊಡಿಸಿದೆ. ನಲಪಾಡ್ ಹ್ಯಾರಿಸ್ ಸೂಚನೆ ಮೇರೆಗೆ ಮೊಬೈಲ್‌ ಕೊಡಿಸಲಾಗಿದೆ.

ಅಮ್ಮನ ನೆನಪುಗಳಿರುವ ಮೊಬೈಲ್ ಕೊಡಿಸಿ

ಆದರೆ ಕಾಂಗ್ರೆಸ್ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿದೆ.

ಬಾಲಕಿ ಕೇಳಿದ್ದು ಅಮ್ಮನ ಫೋಟೋ, ವೀಡಿಯೋ ದಾಖಲೆ ಇರುವ ಮೊಬೈಲ್, ಕಾಂಗ್ರೆಸ್‌ನವರು ಮೊಬೈಲ್‌ ಕೊಡಿಸಿದ್ದು ಹೊಸ ಮೊಬೈಲ್ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಹೊಸ ಮೊಬೈಲ್‌ನಿಂದ ಅಮ್ಮನ ಭಾವನೆಗಳನ್ನು ತಂದು ಕೊಡಲು ಸಾಧ್ಯವಾ? ಅವಕಾಶ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘನೆಯನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಕೊಡಗು ಯುವ ಕಾಂಗ್ರೆಸ್ ಮುಖಂಡರಿಂದ ನಿಯಮ ಉಲ್ಲಂಘನೆಯಾಗಿದೆ. 6 ಮಂದಿ ಒಟ್ಟಿಗೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಲಾಕ್‌ಡೌನ್ ಇರುವಾಗ ಮೊಬೈಲ್ ಶಾಪ್ ಓಪನ್ ಮಾಡಿದ್ದು ಯಾರು? ಎಂದು ಸಾಮಾಜಿಕ‌ ಜಾಲತಾಣದಲ್ಲಿ‌ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

*🌍NEWS NETWORK KODAGU*
ನಮ್ಮ ಜಿಲ್ಲೆ ನಮ್ಮ ಸುದ್ದಿ

18/05/2021

ಕೊಡಗಿನಲ್ಲಿ ಇಳಿಕೆ ಕಂಡ ಕೊರೋನಾ ಸೋಂಕಿತ ಪ್ರಕರಣಗಳು, ಸಾವಿನ ಪ್ರಮಾಣ ಸ್ಥಿರ

ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಸೋಂಕಿನ ಸಂಖ್ಯೆ 192ಕ್ಕೆ ಇಳಿಕೆಯಾಗಿದ್ದರೂ, ಕಳೆದ 24ಗಂಟೆಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಮಂಗಳವಾರ ಮಡಿಕೇರಿ ‌ತಾಲೂಕಿನಲ್ಲಿ 63, ಸೋಮವಾರಪೇಟೆ ತಾಲೂಕಿನಲ್ಲಿ 69 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 60 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ._ _ಇದರೊಂದಿಗೆ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿರುವುದು ಗೋಚರಿಸಿದೆ.
ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ 696ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದರೊಂದಿಗೆ ಸೋಂಕು ಮುಕ್ತರಾದವರ ಸಂಖ್ಯೆ16,820ರಷ್ಟಾಗಿದ್ದು, 3546 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೋನಾ‌ ಸೋಂಕಿತರ ಒಟ್ಟು ಸಂಖ್ಯೆ 20620ರಷ್ಟಾಗಿದ್ದು, ಮಂಗಳವಾರ 6ಮಂದಿ ಸಾವಿಗೀಡಾಗುವುದರೊಂದಿಗೆ ಸೋಂಕಿಗೆ ಬಲೊಯಾದವರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಮಂಗಳವಾರ ಜಿಲ್ಲೆಯಲ್ಲಿ ಹೊಸದಾಗಿ 16 ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 451ರಷ್ಟಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ._

*TV1 NEWS UPDATE*ಸೋಮವಾರಪೇಟೆ  ಮೇ 17 ; *ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಕಾಡು ಕುರಿ ಹಾಗೂ ಜಿಂಕೆಯೊಂದನ್ನು ಬೇಟೆಯಾಡಿದ್ದ ಇಬ್ಬರು...
17/05/2021

*TV1 NEWS UPDATE*
ಸೋಮವಾರಪೇಟೆ ಮೇ 17 ; *ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಕಾಡು ಕುರಿ ಹಾಗೂ ಜಿಂಕೆಯೊಂದನ್ನು ಬೇಟೆಯಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.*

ಖಚಿತ ಸುಳಿವಿನ ಮೇರೆಗೆ ಇಲ್ಲಿಗೆ ಸಮೀಪದ ಹೊಸಳ್ಳಿ ಗ್ರಾಮದ ತಮ್ಮು ಆಲಿಯಾಸ್‌ ಕಾವೇರಪ್ಪ ಎಂಬುವವರ ಮನೆ ಮೇಲೆ ಧಾಳಿ ನಡೆಸಿದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಭರತ್‌ ಮತ್ತು ಸಿಬ್ಬಂದಿಗಳು ಎರಡು ಕೆಜಿ ಜಿಂಕೆ ಮಾಂಸ, ಮೂರು ಕೆಜಿ ಕುರಿ ಮಾಂಸ . ಒಂದು ಒಂಟಿ ನಳಿಕೆಯ ಕೋವಿ ಮತ್ತು ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ ಆರೋಪಿಗಳು ಜೇನುಕಲ್ಲು ಬೆಟ್ಟ ಮೀಸಲು ಅರಣ್ಯಕ್ಕೆ ತೆರಳಿ ಬೇಟೆ ಆಡಿದ್ದಾಗಿ ಒಪ್ಪಿಕೊಂಡಿದ್ದು ಕುರಿ ಹಾಗೂ ಜಿಂಕೆ ಚರ್ಮವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ಜತೆಗೆ ಬೇಟೆಗೆ ತರಳಿದ್ದ ಸುರೇಶ ಎಂಬಾತನನ್ನೂ ಬಂಧಿಸಲಾಗಿದ್ದು ಆರೋಪಿಗಳ ವಿರುದ್ದ 1972 ರ ವನ್ಯ ಜೀವಿ ಕಾಯ್ದೆ 9, 39, 50,51, 56 ಮತ್ತು ಶಸ್ತ್ರಾಸ್ತ್ರ ಕಾಯ್ದೆ 3 ಹಾಗೂ 25 ರ ಅನ್ವಯ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗಳಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
*TV1 NEWS UPDATE*

*ಎಂ. ಜಿ. ಟಿ.(ರಿ )ಸಂಸ್ಥೆಯ  ವತಿಯಿಂದ ಸಹಾಯ ಹಸ್ತ*     ಕೋವಿಡ್ ಲಾಕ್ ಡೌನ್ ನಿಂದಾಗಿ  ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ  ಮಡಿಕೇರಿಯ ಆಯ್ದ ಹ...
17/05/2021

*ಎಂ. ಜಿ. ಟಿ.(ರಿ )ಸಂಸ್ಥೆಯ ವತಿಯಿಂದ ಸಹಾಯ ಹಸ್ತ*

ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಡಿಕೇರಿಯ ಆಯ್ದ ಹತ್ತು ಕುಟುಂಬಗಳಿಗೆ ಇಂದು ಎಂ. ಜಿ. ಟಿ ಸಂಸ್ಥೆಯ ಪದಾಧಿಕಾರಿಗಳಾದ ಆಶೀಶ್ ಮಡಿಕೇರಿ ಮತ್ತು ಖಲೀಲ್ ಕ್ರಿಯೇಟಿವ್ ಅವರ ನೇತೃತ್ವದಲ್ಲಿ ಒಂದು ತಿಂಗಳಿಗೆ ಬೇಕಾದ ಧವಸಧಾನ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಗೋಣಿಕೊಪ್ಪ ಅವರು ಈಗಾಗಲೇ ಕೊಡಗಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು. ನಮ್ಮ ಮನವಿಗೆ ಸ್ಪಂದಿಸಿ, ಸಂಪೂರ್ಣ ಬೆಂಬಲ ನೀಡುತ್ತಿರುವ ಕೇಂದ್ರ ಸಮಿತಿ (ಸೌದಿ ಅರೇಬಿಯಾ ) ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಿಟ್ ವಿತರಣೆಯ ವೇಳೆ ಸಂಸ್ಥೆಯ ಜಲೀಲ್ ಅಮ್ಮತ್ತಿ, ನೌಶಾದ್ ಜನ್ನತ್ತ್, ಜಿನಾಸುದ್ದಿನ್ ಸುಂಟಿಕೊಪ್ಪ, ಹನೀಫ್ ಕೊಡ್ಲಿಪೇಟೆ, ಅತಿಕ್ ಕುಶಾಲನಗರ ಉಪಸ್ಥಿತರಿದ್ದರು.

17/05/2021

🚔🚔🚔🚔🚔🚔🚔🚔🚔🚔🚔🚔🚔🚔

*ವಾಹನಗಳ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಜಿಲ್ಲೆಗೆ ಬರುವ ಜನರನ್ನು ಕ್ವಾರಂಟೈನ್ ಮಾಡಲು ಸೂಚನೆ*

🌍🌍🌍🌍🌍🌍🌍🌍🌍🌍🌍🌍

ಕೊಡಗು ಗಡಿಭಾಗದ ಕುಶಾಲನಗರ ಕೋವಿಡ್ ತಪಾಸಣಾ ಕೇಂದ್ರದ ಮೂಲಕ ನೆರೆ ಜಿಲ್ಲೆಗಳಿಂದ ಆಗಮಿಸಿದ 150 ಕ್ಕೂ ಅಧಿಕ ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್ ತಿಳಿಸಿದ್ದಾರೆ.
ಅವರು ಕುಶಾಲನಗರ-ಕೊಪ್ಪ ಗಡಿಯ ವಾಹನಗಳ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನಂತರ ಕಾವೇರಿ ಟಿವಿ ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ಮಾಡಲಾಗುತ್ತದೆ. ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದ್ದು, ತಾಲ್ಲೂಕಿನ 6 ಗಡಿ ತಪಾಸಣಾ ಕೇಂದ್ರಗಳಲ್ಲಿ ದಿನದ 24 ಗಂಟೆಗಳ ಕಾಲ ಪೊಲೀಸ್ ಸಹಕಾರದೊಂದಿಗೆ ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ಪ್ರಯಾಣಿಕರ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದರು.

ದಕ್ಷಿಣ ಕೊಡಗಿನಾದ್ಯಂತ ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೊನ್ನಂಪೇಟೆ -ಹುದಿಕೇರಿ ರಸ್ತೆಯ ಮಾಪಿಳೆತೋಡು ತಿರುವಿನಲ್ಲಿ ನೂ...
16/05/2021

ದಕ್ಷಿಣ ಕೊಡಗಿನಾದ್ಯಂತ ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೊನ್ನಂಪೇಟೆ -ಹುದಿಕೇರಿ ರಸ್ತೆಯ ಮಾಪಿಳೆತೋಡು ತಿರುವಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸೇತುವೆಯ ಜೋಡಣೆಗೆ ಹಾಕಿದ ಮಣ್ಣು ಕೊಚ್ಚಿ ಹೋಗಿದೆ.

11/05/2021

*ಕೊಡಗು : ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ.*

*🌎 NEWS NETWORK KODAGU 🌎*
ನಮ್ಮ ಜಿಲ್ಲೆ, ನಮ್ಮ ಸುದ್ದಿ

ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ನಿರ್ಧರಿಸಿದ್ದರು. ಪವಿತ್ರನ್ ಮತ್ತು ಮಕ್ಕಳು ಕಳೆದ ವರ್ಷದ ಲಾಕ್​ಡೌನ್ ನಲ್ಲಿ ಉಪವಾಸ ಆರಂಭಿಸಿ ಲಾಕ್ ಮುಗಿಯುವವರೆಗೆ ಅದನ್ನು ಮುಂದುವರೆಸಿದ್ದರಂತೆ.

*ಕೊಡಗು* : ದೇಶದಲ್ಲಿ ಕೋವಿಡ್ ಮಹಾಮಾರಿ ವ್ಯಾಪಿಸುತ್ತಿದ್ದಂತೆ ಇನ್ನಷ್ಟು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ 2020 ರಲ್ಲಿ ಇಡೀ ದೇಶವನ್ನೇ ಸಂಪೂರ್ಣ ಲಾಕ್​ಡೌನ್ ಮಾಡಿತ್ತು. ಆ ಸಂದರ್ಭ ಎಷ್ಟೋ ಲಕ್ಷಾಂತರ ಕುಟುಂಬಗಳು ಅನುಭವಿಸಿದ ನೋವು, ಸಂಕಷ್ಟ ಅಷ್ಟಿಷ್ಟಲ್ಲಾ. ಇದರಿಂದ ಕೊಡಗು ಜಿಲ್ಲೆ ಏನು ಹೊರತ್ತಾಗಿರಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಪವಿತ್ರನ್ ಎಂಬುವರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡಿತ್ತು. ದುಡಿದು ದಿನ್ನೋದಕ್ಕೂ ಅವಕಾಶ ಇಲ್ಲದಿದ್ದರಿಂದ ತೀವ್ರ ಸಂಕಷ್ಟ ಅನುಭವಿಸಿತ್ತು. ಆದರೆ ಲಾಕ್​ಡೌನ್ ಸಂದರ್ಭದಲ್ಲಿ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ನೋಡಿದ್ದ ಪವಿತ್ರನ್ ಕುಟುಂಬ ತಾವೂ ಉಪವಾಸ ಮಾಡಲು ನಿರ್ಧರಿಸಿತ್ತು.

ಮುಸ್ಲಿಂ ಕುಟುಂಬಗಳು ಉಪವಾಸ ಮಾಡುವುದಾದರೆ ನಾವು ಯಾಕೆ ಉಪವಾಸ ಮಾಡಬಾರದು ಎಂದು ಪವಿತ್ರನ್ ಮತ್ತು ಅವರ ಇಬ್ಬರು ಹೆಣ್ಣು ನಿರ್ಧರಿಸಿದ್ದರು. ಪವಿತ್ರನ್ ಮತ್ತು ಮಕ್ಕಳು ಕಳೆದ ವರ್ಷದ ಲಾಕ್​ಡೌನ್ ನಲ್ಲಿ ಉಪವಾಸ ಆರಂಭಿಸಿ ನಾಕ್ ಮುಗಿಯುವವರೆಗೆ ಅದನ್ನು ಮುಂದುವರೆಸಿದ್ದರಂತೆ. ಲಾಕ್​ಡೌನ್ ಮುಗಿದ ಬಳಿಕ ಪವಿತ್ರನ್ ಅವರಿಗೆ ಸಾಕಷ್ಟು ಕೂಲಿ ಕೆಲಸಗಳು ದೊರೆತ್ತಿದ್ದವು. ಬಳಿಕ ದುಡಿದು ತಮ್ಮ ಹಸಿವು ನೀಗಿಸಿಕೊಂಡಿದ್ದರು. ಈಗ ಆಹಾರದ ಕೊರತೆ ಏನು ಇಲ್ಲ.

ಆದರೂ ಪವಿತ್ರನ್ ಅವರ ಮಕ್ಕಳು ಕಳೆದ ಬಾರಿಯ ರಂಜನ್ ಸಂದರ್ಭದ ಉಪವಾಸವನ್ನು ನೆನೆದು ಈ ಬಾರಿಯೂ ಉಪವಾಸ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕೊವಿಡ್ ಸೋಂಕು ಮಿತಿಮೀರಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ವಾರದ ಐದು ದಿನ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿ ಮತ್ತೆಷ್ಟೋ ಕುಟುಂಬಗಳು ಜಿಲ್ಲೆಯಲ್ಲಿ ಉಪವಾಸದಿಂದ ಬಳಲುತ್ತಿರಬಹುದು.

ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ನಾವು ಹಸಿವಿನಿಂದ ಬಳಲಿ, ಕೊನೆಗೆ ಉಪವಾಸವನ್ನೇ ಒಂದು ಆಚರಣೆಯಾಗಿ ಮಾಡಿಕೊಂಡಿದ್ದು ಇನ್ನೂ ನೆನಪಿದೆ. ಹೀಗಾಗಿ ಈ ಬಾರಿ ನಮ್ಮ ಮಕ್ಕಳು ಉಪವಾಸ ಮುಂದುವರೆಸುತ್ತಿದ್ದಾರೆ ಎನ್ನುತ್ತಾರೆ ಪವಿತ್ರನ್. ಮುಂಜಾನೆ ಐದುವರೆಗೆ ಆಹಾರ ತಿನ್ನುವ ಪವಿತ್ರನ್ ಅವರ ಮಗಳು ಪ್ರಾಂಜನ್ ಮತ್ತು ಆಕೆಯ ತಂಗಿ ಇಬ್ಬರು ಇಡೀ ದಿನ ಉಪವಾಸ ಇರುತ್ತಿದ್ದಾರೆ.

ಬಳಿಕ ಸಂಜೆ ಆರುವರೆಗೆ ತಮ್ಮ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಬಳಿಕ ಏನನ್ನಾದರು ತಿಂದು ಉಪವಾಸ ಕೈಬಿಡುತ್ತಿದ್ದಾರೆ. ಇವರ ಈ ಆಚರಣೆ ನೋಡಿದರೆ ಒಮ್ಮೆ ಯಾರಿಗಾದರೂ ಇವರು ಮತಾಂತರ ಆಗುತ್ತಿರಬಹುದೇನ್ನೋ ಎನ್ನೋ ಅನುಮಾನ ಕಾಡಬಹುದು. ಆದರೆ ಪವಿತ್ರನ್ ಅವರ ಮನೆಯ ಮುಂದೆ ತುಳಿಸಿಕಟ್ಟೆ ಇದ್ದು, ಇಂದಿಗೂ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ.

ನಮಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ ಎನ್ನುತ್ತಾರೆ ಪವಿತ್ರನ್. ಒಟ್ಟಿನಲ್ಲಿ ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ತಾವು ಹಸಿವಿನಿಂದ ಬಳಲಿದ್ದನ್ನು ನೆನಪಿಸಿಕೊಂಡು ಈ ಕುಟುಂಬ ಇಂದಿಗೂ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದನ್ನು ರೂಢಿಸಿಕೊಂಡಿದೆ.

*🌎 NEWS NETWORK KODAGU 🌎*
ನಮ್ಮ ಜಿಲ್ಲೆ, ನಮ್ಮ ಸುದ್ದಿ

*ವಿವಿಧೆಡೆ ವಿವಿಧ ದಿನ ಪವರ್ ಕಟ್* *ಮೇ 08 ರಂದು ವಿದ್ಯುತ್ ವ್ಯತ್ಯಯ* *📡 NEWS  NETWORK KODAGU 📡*   ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ...
07/05/2021

*ವಿವಿಧೆಡೆ ವಿವಿಧ ದಿನ ಪವರ್ ಕಟ್*
*ಮೇ 08 ರಂದು ವಿದ್ಯುತ್ ವ್ಯತ್ಯಯ*

*📡 NEWS NETWORK KODAGU 📡*

ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ವಿತರಣಾ ಕೇಂದ್ರದ ಫಿಡರ್‍ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 8 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಆಲೂರು, ಮಾಲಂಬಿ ಫೀಡರ್‍ಗಳ ವ್ಯಾಪ್ತಿಯ ಗೋಪಾಲಪುರ, ಜಾಗೇನಹಳ್ಳಿ, ಹಿತ್ತಲಕೇರಿ, ಗೌಡಳ್ಳಿ, ಡಬನಹಳ್ಳಿ, ಹೊನ್ನೆಕೊಪ್ಪಲು, ಹೊಸಳ್ಳಿ, ಕೈಸರವಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.

*ಮೇ 09 ರಂದು ವಿದ್ಯುತ್ ವ್ಯತ್ಯಯ*
************
ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ವಿತರಣಾ ಕೇಂದ್ರದ ಫಿಡರ್‍ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 9 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಐಗೂರು, ಗೋಣಿಮರೂರು ಫೀಡರ್‍ಗಳ ವ್ಯಾಪ್ತಿಯ ಯಡವಾರೆ, ಕಾಜೂರು, ಗರಂಗದೂರು, ಗಣಗೂರು, ಬಾಣಾವಾರ, ಸಂಗಯ್ಯನಪುರ, ನಾಗವಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ...

*ಮೇ ** *11 ರಂದು* ವಿದ್ಯುತ್ ವ್ಯತ್ಯಯ*
***************
ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದ ಫಿಡರ್‍ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ.

ಈ ಹಿನ್ನೆಲೆ ಮೇ 11 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.

ಹೊದ್ದೂರು, ನಂಜರಾಯಪಟ್ಟಣ, ಚೆಟ್ಟಳ್ಳಿ, ದೊಡ್ಡಮಾಳ್ತೆ, ಮಲ್ಲೂರು, ಕ್ಲಬ್ ಮಹೇಂದ್ರ, ಮೇಕೂರು, ಪೊನ್ನಂಪೇಟೆ, ಶ್ರೀಮಂಗಲ, ಯಸ್ಲೂರು ಫೀಡರ್‍ಗಳ ವ್ಯಾಪ್ತಿಯ ಹೊದ್ದೂರು, ಕುಂಬಳದಾಳು, ಬೆಟ್ಟಗೇರಿ, ವಾಲ್ನೂರು ತ್ತಾಗತ್ತೂರು, ಚೆಟ್ಟಳ್ಳಿ, ಮೋದೂರು, ಪೊನ್ನತ್ತ್‍ಮೊಟ್ಟೆ, ಗೌಡಳ್ಳಿ, ಮಲ್ಲೂರು, ಕ್ಲಬ್ ಮಹೇಂದ್ರ, ಬೋಯಿಕೇರಿ ಚೆರ್ಚ್ ಕೆದಮಳ್ಳೂರು, ಮೇಕೂರು, ಹಳ್ಳಿಗಟ್ಟು, ಹೊದ್ದೂರು, ಪೊನ್ನಂಪೇಟೆ, ಶ್ರೀಮಂಗಲ, ಕೊಡ್ಲಿಪೇಟೆ, ಯಸ್ಲೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.
*📡 NEWS NETWORK KODAGU 📡* ..
*ಮೇ 10 ರಂದು ವಿದ್ಯುತ್ ವ್ಯತ್ಯಯ*
******************
ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯತ್ ವಿತರಣಾ ಕೇಂದ್ರದ ಫಿಡರ್‍ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 10 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಬೋಯಿಕೇರಿ, ಮೇಕೇರಿ, ಪಾರಾಣೆ, ಗುಡ್ಡೆಹೊಸೂರು, ನಾಕೂರು, ಸಿದ್ದಾಪುರ, ಅಮ್ಮತ್ತಿ, ಬೆಸಗೂರು, ಬಿರುಬಾಣಿ ಫೀಡರ್‍ಗಳ ವ್ಯಾಪ್ತಿಯ ಬೋಯಿಕೇರಿ, ಮಕ್ಕಂದೂರು ಹಮಿಯಾಲ, ಮೂಕ್ಕೋಡ್ಲು, ಮೇಕೇರಿ, ಕಡಗದಾಳು, ಕಗ್ಗೋಡ್ಲು, ಪಾರಾಣೆ, ಕರಡ, ಬಾವಲಿ,ಬಸವನಹಳ್ಳಿ,, ಅತೂರು, ನಾಕೂರು ಶಿರಮಗಾಲ, ಅಂದಗೋವೆ, ಹೆರೂರು, ಮೈಸೂರು ರಸ್ತೆ, ಕರಡಿಗೋಡು, ಅಮ್ಮತ್ತಿ, ಕಾವಾಡಿ, ಕಾರ್ಮಾಡು, ಬೆಸಗೂರು, ಬಿರುನಾಣಿ, ತೆರಾಲು ಪರಕಟಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.

*📡 NEWS NETWORK KODAGU 📡*

*ರಾಜ್ಯದ 40 ಜಿಲ್ಲಾ ಹಾಗೂ ತಾಲೂಕು ಆಸ್ಫತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅನುಮೋದನೆ**📡 NEWS NETWORK KODAGU 📡*ಬೆಂಗಳೂರು...
07/05/2021

*ರಾಜ್ಯದ 40 ಜಿಲ್ಲಾ ಹಾಗೂ ತಾಲೂಕು ಆಸ್ಫತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅನುಮೋದನೆ*

*📡 NEWS NETWORK KODAGU 📡*

ಬೆಂಗಳೂರು: 10 ಜಿಲ್ಲಾ ಆಸ್ಪತ್ರೆಗಳು ಮತ್ತು 30 ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.

ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗಿದೆ.

ಎಲ್ಲ 40 ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸಿವಿಲ್ ಹಾಗೂ ವಿದ್ಯುತ್ ಕಾಮಗಾರಿಗಳನ್ನು ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನುರಿತ ಅರ್ಹ ಗುತ್ತಿದಾರರಿಂದ ಅನುಷ್ಠಾನಗೊಳಿಸಲು ನಿರ್ದೇಶಿಸಿದೆ.

10 ಜಿಲ್ಲಾ ಆಸ್ಪತ್ರೆಗಳಲ್ಲಿ 500 ಎಲ್‌ಪಿಎಂ (ವಿಎಸ್‌ಎ ತಂತ್ರಜ್ಞಾನ) ಮತ್ತು 30 ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ 390 ಎಲ್‌ಪಿಎಂ (ಪಿಎಸ್‌ಎ ತಂತ್ರಜ್ಞಾನ) ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು.

40 ಆಸ್ಪತ್ರೆಗಳ ಪಟ್ಟಿಯಲ್ಲಿ ಬೆಂಗಳೂರು, ಕಲಬುರ್ಗಿ, ಮೈಸೂರು, ಉತ್ತರ ಕನ್ನಡ, ಮೈಸೂರು, ದಕ್ಷಿಣ ಕನ್ನಡ, ಕೊಡಗು, ಗದಗ, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳು ಸೇರಿವೆ.

ಸಂಪೂರ್ಣ ಪಟ್ಟಿ ಕೆಳಗೆ ನೀಡಿರುವ ಛಾಯಚಿತ್ರದಲ್ಲಿದೆ:

📡 NEWS NETWORK KODAGU 📡

Address

Madikeri
571201

Website

Alerts

Be the first to know and let us send you an email when News Network Kodagu posts news and promotions. Your email address will not be used for any other purpose, and you can unsubscribe at any time.

Share