ಅಮೇರಿಕಾದಿಂದ ಕೊಡಗು ಜಿಲ್ಲೆಗೆ ವೈದ್ಯಕೀಯ ಉಪಕರಣಗಳ ಕೊಡುಗೆ
ಸಾಗರದಾಚೆಯ ಸ್ಕೋಪ್ ಫೌಂಡೇಶನ್ ಮೂಲಕ ಕಾವೇರಿನಾಡಿನ ಕೋವಿಡ್ ಆಸ್ಪತ್ರೆಗೆ ಕೋಟ್ಯಾಂತರ ಮೌಲ್ಯದ ಸಾಮಾಗ್ರಿ ತಲುಪಿಸಿದ ಉದ್ಯಮಿ.
ಅಮೆರಿಕದಲ್ಲಿ ನೆಲೆಸಿರುವ ಮೂಲತಃ ಮಂಡ್ಯ ಜಿಲ್ಲೆಯ ಹಳ್ಳಿಗೆರೆಯವರಾದ ನರಸಿಂಹಮೂರ್ತಿ ಹಾಗೂ ಪುತ್ರ ವಿವೇಕ್ ಮೂರ್ತಿ ಅವರು ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನೀಡಿದ್ದಾರೆ.
ಕೋವಿಡ್ ಬೇಗೆಯಲ್ಲಿ ಭಾರತ ಬೇಯುತ್ತಿರುವಾಗ ಹುಟ್ಟೂರಿಗೆ ನೆರವಾಗುವ ದೃಷ್ಟಿಯಿಂದ ನರಸಿಂಹ ಮೂರ್ತಿ ಅವರು, ಮಂಡ್ಯ ಜಿಲ್ಲೆ ಹಾಗೂ ಕೊಡಗು ಜಿಲ್ಲೆಗೆ ಸಹಕಾರ ನೀಡುವ ಮೂಲಕ ತಾಯ್ನಾಡಿನ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ನರಸಿಂಹಮೂರ್ತಿ, ವಿವೇಕ್ ಮೂರ್ತಿ ಅವರ ಸ್ಕೋಪ್ ಸಂಸ್ಥೆಯ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ 2.40 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಡ ಜನರ ಸೇವೆಗೆ ಮ
ಗೋಣಿಕೊಪ್ಪಲಿನಲ್ಲಿರುವ ಮಾನಸ ಮೆಡಿಕಲ್ಗೆ ಬೆಂಕಿ
ಮುoಜಾನೆ ಸರಿಸುಮಾರು 5-20 ಕ್ಕೆ ನಡೆದ ಘಟನೆ ಲಕ್ಷಾಂತರ ರೂಪಾಯಿ ನಷ್ಟ
ಬೆಂಕಿಯಿoದ ಅಪಾರ ಪ್ರಮಾಣದ ಔಷಧಿಗಳು ಸುಟ್ಟು ಕರಕಲು
ವಿದ್ಯುತ್ ವ್ಯತ್ಯಾಸದಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ
ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ
ನಗರದ ಹೃದಯ ಭಾಗದಲ್ಲಿರುವ ಮೆಡಿಕಲ್ ಸ್ಟೊರ್.
ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ವಾಹನದಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ನೀಡುತ್ತಿರುವ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ
ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೆ ಮಾದರಿಯಾದ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಅಬ್ದುಲ್ ಲತೀಫ್
ಕೊಡಗಿನ ಯಾವುದೇ ಗ್ರಾಮೀಣ ಭಾಗದಿಂದ ಕರೆ ಬಂದರೂ ಅಲ್ಲಿಗೆ ಹೋಗಿ ರೋಗಿಗಳನ್ನು ಕರೆತಂದು ಆಸ್ಪತ್ರೆಗೆ ದಾಖಲು ಸೇವೆ
ಕೊರೋನಾ 1 ನೇ ಅಲೆ ಸಮಯದಿಂದಲೂ ಈ ರೀತಿಯ ಸೇವೆಯಲ್ಲಿ ತೊಡಗಿರೋ ಲತೀಫ್
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಹಾರ ಕಿಟ್ ಗಳ ವಿತರಣೆ
ಇವರ ಮಾನವೀಯತೆ ಕಾರ್ಯಕ್ಕೆ ಜಿಲ್ಲೆಯಲ್ಲಿ ವ್ಯಕ್ತಗೊಂಡ ವ್ಯಾಪಕ ಮೆಚ್ಚುಗೆ
ಸೋಮವಾರ ಪೇಟೆ ತಾಲೂಕು ಕರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಕಿಟ್ಗಳ ವಿತರಣೆ
ತಾಲೂಕಿನ 50 ಕ್ಕೂ ಅಧಿಕ ಸದಸ್ಯರಿಗೆ ಸಂಘದ ವತಿಯಿಂದ ಕಿಟ್ ವಿತರಣೆ
ಸೋಮವಾರ ಪೇಟೆ ತಾಲೂಕು ಕರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಾನಿಗಳ ಸಹಕಾರದೊಂದಿಗೆ ಸದಸ್ಯರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ತಾಲೂಕಿನ 50 ಕ್ಕೂ ಅಧಿಕ ಸದಸ್ಯರಿಗೆ ಸಂಘದ ಪದಾಧಿಕಾರಿಗಳು,ಗಣ್ಯರು, ದಾನಿಗಳು ಕಿಟ್ ಗಳ ವಿತರಣೆ ಮಾಡಿದರು.
ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ 19 ವೈರಾಣು ಸೋಂಕು
2 ನೇ ಅಲೆಯ ಬೆನ್ನಲ್ಲೇ ಶುರುವಾಗಲಿದೆ ಮೂರನೇ ಕೋವಿಡ್ ಅಲೆ
ಪೂರ್ವ ಸಿದ್ದತೆಗೆ ಸಜ್ಜಾಗಿರೋ ಕೊಡಗು ಜಿಲ್ಲಾಡಳಿತ
ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ 19 ವೈರಾಣು ಸೋಂಕಿನ ಪ್ರಸರಣವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಆದೇಶದ ಮೇಲೆ ಆದೇಶಗಳನ್ನು ಹೊರಡಿಸುತ್ತಿದ್ದು, ಹಲವಾರು ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದೆ. ಇದೀಗ 2 ನೇ ಅಲೆಯ ಬೆನ್ನಲ್ಲೇ ಮೂರನೇ ಕೋವಿಡ್ ಅಲೆಯ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದ್ದು ಕೊಡಗು ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ರ್ಯಯೋಜನೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಡಗು ಜಿಲ್ಲೆಯ ಅಧಿಕಾರಿಗಳು ಈಗಾಗಲೇ ಪೂರ್ವ ಸಿದ್ದತೆಗೆ ಸಜ್ಜಾಗಿರೋದು ಗೋಚರಿಸಿದೆ.
ರೈಲ್ವೆ ಬ್ಯಾರಿಗೇಡ್ ತಡೆಗೂ ಜಗ್ಗದ ಕಾಡಾನೆಗಳು
ಬ್ಯಾರಿಗೇಡ್ ದಾಟಿ ಅರಣ್ಯದಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳು
ಕುಶಾಲನಗರ ಸಮೀಪದ ವಾಲ್ನೂರು ತ್ಯಾಗತ್ತೂರಿನಲ್ಲಿ ಕಂಡುಬoದ ದೃಶ್ಯ
ಕಾಫಿ ತೋಟಗಳಿಂದ ದುಬಾರೆ ಮೀಸಲು ಅರಣ್ಯದತ್ತ ಸಾಗಿದ ಮೂರು ಕಾಡಾನೆಗಳು
ಸೋಮವಾರ ಸಂಜೆ ವಾಲ್ನೂರು ತಾಗತ್ತೂರು ಬಳಿ ಸಾಗಿದ ಆನೆಗಳು
ಕಾಡಿನಿಂದ ನಾಡಿಗೆ ಗಜಪಡೆ ಬರುವುದನ್ನು ತಪ್ಪಿಸಲು ಮಾಡಿದ್ದ ರೈಲ್ವೇ ಬ್ಯಾರಿಕೇಡ್ ಯೋಜನೆ
ಅರಣ್ಯ ಇಲಾಖೆಯ ಯೋಜನೆಗೆೆ ಕ್ಯಾರೇ ಎನ್ನದ ಕಾಡಾನೆಗಳು
ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಎಂಎಲ್ಎ ಅಪ್ಪಚ್ಚುರಂಜನ್ ಭೇಟಿ.
ಕೋವಿಡ್ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ ಶಾಸಕ ರಂಜನ್
ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ ಪಿ ಅಪ್ಪಚ್ಚುರಂಜನ್ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ರಂಜನ್, ಕೋವಿಡ್ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ..ಕೋವಿಡ್ ರೋಗಿಗಳಿಗೆ ಉತ್ತಮ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿಸ್ಚಾರ್ಜ್ ಸಂಖ್ಯೆ ಹೆಚ್ಚಳದೊಂದಿಗೆ ಡೆತ್ ರೇಟ್ ಇಳಿಮುಖ ಕಂಡಿದೆ ಎಂದರು.