Radhas Thulunada Channel

Radhas Thulunada Channel ಶುಚಿಯಾಗಿ ರುಚಿಯಾಗಿ ತುಳುನಾಡಿನ ಹಾಗೂ ಭಾರತೀಯ ಅಡುಗೆಗಳು, ಹೊಸ ರುಚಿ, ಉಪಯೋಗವಾಗುವಂತಹ ಉತ್ತಮ ಮಾಹಿತಿಗಳು, ತುಳುನಾಡಿನ ಆಚರಣೆಗಳು..

ನುಗ್ಗೆ ಸೊಪ್ಪಿನ ದೋಸೆ ಇಷ್ಟ ಅನ್ನುವವರು ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ.. ದೋಸೆ ಮಾಡುವ ವಿಧಾನ : 1 ಕಪ್ ಬೆಳ್ತಿಗೆ ಅಕ್ಕಿಯನ್ನು 3 ಗ...
21/09/2024

ನುಗ್ಗೆ ಸೊಪ್ಪಿನ ದೋಸೆ ಇಷ್ಟ ಅನ್ನುವವರು ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ..
ದೋಸೆ ಮಾಡುವ ವಿಧಾನ : 1 ಕಪ್ ಬೆಳ್ತಿಗೆ ಅಕ್ಕಿಯನ್ನು 3 ಗಂಟೆ ಅಥವಾ ರಾತ್ರಿ ಪೂರ್ತಿ ನೆನೆಸಿ ಇಡಬೇಕು. ಅಕ್ಕಿ ನೆನೆದ ಮೇಲೆ ಮತ್ತೊಮ್ಮೆ ತೊಳೆದು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 2 ಟಿ ಚಮಚ ತೆಂಗಿನ ತುರಿ, 2 ದೊಡ್ಡ ಚಮಚ ಅನ್ನ, ರುಬ್ಬಲು ಬೇಕಾಗುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ. ಇಲ್ಲಿ ಅನ್ನ ಹಾಗೂ ತೆಂಗಿನ ತುರಿ ಸೇರಿಸದೆ ಕೂಡಾ ದೋಸೆ ಮಾಡಬಹುದು. ಅನ್ನ ಹಾಕಿದರೆ ದೋಸೆ ಇಡೀ ದಿನ ಮೃದುವಾಗಿಯೇ ಇರುತ್ತದೆ. ತೆಂಗಿನತುರಿ ಹಾಕಿದರೆ ದೋಸೆ ರುಚಿ ಜಾಸ್ತಿ. ರುಬ್ಬಿದ ಹಿಟ್ಟನ್ನು ತೆಳ್ಳಗೆ ಮಾಡಿಕೊಳ್ಳಬೇಕು. ಒಂಥರಾ ಕೆನೆ ಭರಿತ ದಪ್ಪ ಹಾಲಿನ ಹದಕ್ಕೆ ಮಾಡಿಕೊಳ್ಳಬೇಕು. ನಂತರ ನುಗ್ಗೆ ಸೊಪ್ಪನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಂಡು ( ಕತ್ತರಿಸಿಯೂ ಹಾಕಬಹುದು ) ಹಿಟ್ಟಿಗೆ ಹಾಕಿ ಮಿಶ್ರ ಮಾಡಿ. ಕಬ್ಬಿಣದ ಕಾದ ಕಾವಲಿಗೆ ತೆಂಗಿನ ಎಣ್ಣೆಯನ್ನು ಸವರಿ ಒಂದು ಸೌಟು ಹಿಟ್ಟನ್ನು ತೆಳುವಾಗಿ ಹರಡಬೇಕು. ಉರಿಯನ್ನು ಸಣ್ಣದು ಮಾಡಿಕೊಂಡು ಮುಚ್ಚಳ ಮುಚ್ಚಿ 1 ನಿಮಿಷ ಬೇಯಿಸಿ. ನಂತರ ಕಾವಲಿಯಿಂದ ದೋಸೆಯನ್ನು ತೆಗೆಯುವಾಗ ಸ್ವಲ್ಪ ತುಪ್ಪ ಹಾಕಿ ತೆಗೆದರೆ ಬಿಸಿ ನುಗ್ಗೆ ಸೊಪ್ಪಿನ ನೀರ್ದೋಸೆ ಸವಿಯಲು ಸಿದ್ಧ.

ಕರಾವಳಿ ಶೈಲಿಯ ಪಚ್ಚಿಲೆ ಸುಕ್ಕ.. ಯಾರಿಗೆಲ್ಲಾ ಇಷ್ಟ? ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ..
20/09/2024

ಕರಾವಳಿ ಶೈಲಿಯ ಪಚ್ಚಿಲೆ ಸುಕ್ಕ.. ಯಾರಿಗೆಲ್ಲಾ ಇಷ್ಟ? ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ..

19/09/2024
Thanks for being a top engager and making it on to my weekly engagement list! 🎉 Shreedhara Naikap, Lokesh Kik, Guru Kira...
16/09/2024

Thanks for being a top engager and making it on to my weekly engagement list! 🎉 Shreedhara Naikap, Lokesh Kik, Guru Kiran, Padmanabha Guthu, Anupurna Anupurna, Varadaraj Shetty Manipal, Reshma A Bangarakodi, Umesh Naik, Bebi Bebi Bebi Bebi, Prema Basavaradhya

ನಮ್ಮನೆಯ ಓಣಂ ಸದ್ಯ.. ಇಷ್ಟ ಆಯಿತಾ ಸ್ನೇಹಿತರೆ? ಬಾಳೆ ಎಲೆಯಲ್ಲಿ ಊಟ ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಉಪ್ಪಿನ ಕಾಯಿ, ಪುಳಿ ಇಂಜಿ, ಅಲಸಂಡೆ ಪಲ್...
15/09/2024

ನಮ್ಮನೆಯ ಓಣಂ ಸದ್ಯ.. ಇಷ್ಟ ಆಯಿತಾ ಸ್ನೇಹಿತರೆ? ಬಾಳೆ ಎಲೆಯಲ್ಲಿ ಊಟ ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಉಪ್ಪಿನ ಕಾಯಿ, ಪುಳಿ ಇಂಜಿ, ಅಲಸಂಡೆ ಪಲ್ಯ,ಒಲನ್, ಹೆಸರು ಕಾಳು ಪಲ್ಯ, ಬೀಟ್ರೂಟ್ ಪಚಡಿ, ಸೌತೆಕಾಯಿ ಪಚಡಿ, ಸೌತೆಕಾಯಿ ಸಲಾಡ್, ಅವಿಯಲ್, ರಸಂ, ಸಾಂಬಾರ್, ಕುಂಬಳ ಮಜ್ಜಿಗೆ ಹುಳಿ, ಮೊಸರು, ಕೂಟ್ಟು ಕರಿ, ಪಪ್ಪಡ, ಮಟ್ಟ ಅಕ್ಕಿ ಅನ್ನ, ಹೆಸರು ಬೇಳೆ- ಸಬ್ಬಕ್ಕಿ (ಸಾಗೂ ) ಪಾಯಸ, ಕಡಲೆ ಬೇಳೆ ಪಾಯಸ, ಕದಲಿ ಬಾಳೆಹಣ್ಣು

13/09/2024

ತುಳುನಾಡಿನ ವಿಶೇಷ ಹಾಗೂ ಓಣಂ ಸದ್ಯ ವಿಶೇಷ ಕುಂಬಳ ಕಾಯಿ ಮಜ್ಜಿಗೆ ಹುಳಿ, ಕೇರಳದ ಓಣಂ ಸದ್ಯದಲ್ಲಿ ಹಾಗೂ ಕರಾವಳಿಯ ಶುಭ ಸಮಾರಂಭ ಹಾಗೂ ವಿಶೇಷ ದಿನಗಳಲ್ಲಿ ಸೌತೆಕಾಯಿ, ಕುಂಬಳ ಕಾಯಿ, ಸುವರ್ಣ ಗೆಡ್ಡೆ ಇದರಿಂದ ಕಾಯಿ ಹುಳಿ, ಮಜ್ಜಿಗೆ ಹುಳಿ ಮಾಡುವುದು ರೂಢಿ. ಬಹಳ ಸರಳ, ಹಾಗೆಯೇ ಬಹಳ ರುಚಿ. #ಓಣಂ #ಕಾಯಿಹುಳಿ #ಮಜ್ಜಿಗೆಹುಳಿ #ಕುಂಬಳಕಾಯಿಮಜ್ಜಿಗೆಹುಳಿ #ಸೌತೆಕಾಯಿಮಜ್ಜಿಗೆಹುಳಿ

ಮಧ್ಯಾಹ್ನಕ್ಕೆ ಸರಳವಾದ ಅಡುಗೆಗಳ ಭರ್ಜರಿ ಊಟ ಮಾವಿನಕಾಯಿ ಗಡಿ ಉಪ್ಪಿನಕಾಯಿ, ಒಣಗಿಸಿದ ಹಾಗಲಕಾಯಿಫ್ರೈ,ನುಗ್ಗೆಸೊಪ್ಪು ಹಾಕಿ ಮಾಡಿದ ಮೊಟ್ಟೆ ಬುರ್...
13/09/2024

ಮಧ್ಯಾಹ್ನಕ್ಕೆ ಸರಳವಾದ ಅಡುಗೆಗಳ ಭರ್ಜರಿ ಊಟ ಮಾವಿನಕಾಯಿ ಗಡಿ ಉಪ್ಪಿನಕಾಯಿ, ಒಣಗಿಸಿದ ಹಾಗಲಕಾಯಿಫ್ರೈ,ನುಗ್ಗೆಸೊಪ್ಪು ಹಾಕಿ ಮಾಡಿದ ಮೊಟ್ಟೆ ಬುರ್ಜಿ, ಕೂಟ್ಟುಕರಿ, ಬಟಾಣಿ ಬಟಾಟೆ ಗಸಿ, ರಸಂ, ಸೌತೆಕಾಯಿ ಸಲಾಡ್, ಕುಚುಲಕ್ಕಿ ಅನ್ನ, ಮಜ್ಜಿಗೆ.. ಇಷ್ಟ ಆಯಿತಾ ಸ್ನೇಹಿತರೆ.. ಇಷ್ಟ ಆದ್ರೆ ಲೈಕ್ ಮಾಡಿ , ಶೇರ್ ಮಾಡಿ, ಕಾಮೆಂಟ್ ಮಾಡಿ. ರೆಸಿಪಿ ಬೇಕಾದ್ರೆ ಕಾಮೆಂಟ್ ಮಾಡಿ

12/09/2024

ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದ ಸುಮಧುರ ಕ್ಷಣಗಳ ಸುಂದರ ದೃಶ್ಯ #ಕಾಸರಗೋಡು #ಮೆರವಣಿಗೆ

ಕಾಸರಗೋಡು ಸಾರ್ವಜನಿಕ ಗಣೇಶೋತ್ಸವ
12/09/2024

ಕಾಸರಗೋಡು ಸಾರ್ವಜನಿಕ ಗಣೇಶೋತ್ಸವ

11/09/2024

ಈ ವೀಡಿಯೋದಲ್ಲಿ ಓಣಂ ಸಧ್ಯಕ್ಕೆ ಕೇರಳದಲ್ಲಿ ಪ್ರತಿಯೊಬ್ಬರೂ ಮಾಡುವ ಕೂಟುಕರಿ ಮಾಡುವ ವಿಧಾನವನ್ನು ತೋರಿಸಿದ್ದೇನೆ. ಈ ಅಳತೆಯಲ್ಲಿ 7-10 ಜನರಿಗೆ ಬೇಕಾಗುವಷ್ಟು ಕೂಟು ಕರಿಯನ್ನು ಮಾಡಬಹುದು. ಕೇರಳದ ಎಲ್ಲಾ ಸಮಾರಂಭ, ಶುಭ ಕಾರ್ಯಕ್ರಮಗಳಲ್ಲಿ ಈ ಅಡುಗೆ ಮಾಡುತ್ತಾರೆ. ತುಂಬಾ ರುಚಿಯಾಗಿ ಇರ್ತದೆ. ನೀವೂ ಕೂಡಾ ಈ ವಿಧಾನದಲ್ಲಿ ಟ್ರೈ ಮಾಡಿ. #ಓಣಂ #ಓಣಂಸಧ್ಯ #ಓಣಂ #ಕೂಟುಕರಿ #ಕೇರಳ #ಕಡ್ಲೆಗಸಿ

ಹಲಸಿನ ಹಣ್ಣು ಮುಗಿಯುತ್ತಾ ಬರುವಾಗ ನಮಗೊಂದು ಹಲಸಿನ ಹಣ್ಣು ಸಿಕ್ಕಿತು. ಅಪರೂಪಕ್ಕೆ ಸಿಕ್ಕಿದ್ದು ಅಲ್ಲವೇ.. ಬಹಳ ಖುಷಿಯಾಯಿತು. ಅದರಲ್ಲಿ ಹೆಚ್ಚು...
11/09/2024

ಹಲಸಿನ ಹಣ್ಣು ಮುಗಿಯುತ್ತಾ ಬರುವಾಗ ನಮಗೊಂದು ಹಲಸಿನ ಹಣ್ಣು ಸಿಕ್ಕಿತು. ಅಪರೂಪಕ್ಕೆ ಸಿಕ್ಕಿದ್ದು ಅಲ್ಲವೇ.. ಬಹಳ ಖುಷಿಯಾಯಿತು. ಅದರಲ್ಲಿ ಹೆಚ್ಚು ತೊಳೆ ಇರಲಿಲ್ಲ.. ಜಾಸ್ತಿ ಹಣ್ಣು ಕೂಡಾ ಆಗಿರಲಿಲ್ಲ. ಕಾಯಿ ಅಲ್ಲ.. ಹಣ್ಣು ಕೂಡಾ ಅಲ್ಲ.. ಸಿಹಿಯಾಗಿತ್ತು.. ಅದರಿಂದ ದೋಸೆ ಮಾಡೋಣ ಎಂದು ದೋಸೆ ಮಾಡಿದೆ. ಬಹಳ ರುಚಿಯಾಗಿ ಬಂತು. ಬಾಳೆದಿಂಡಿನ ಚಟ್ನಿ ಕೂಡಾ ಮಾಡಿದೆ. ಕಾಂಬಿನೇಶನ್ ಮಾತ್ರ ಸಕತ್ ಆಗಿತ್ತು.
ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ :
1 ಕಪ್ ಬೆಳ್ತಿಗೆ ಅಕ್ಕಿಯನ್ನು 3 ಗಂಟೆ ಅಥವಾ ರಾತ್ರಿ ಪೂರ್ತಿ ನೆನೆಸಿ. ನೆನೆದ ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಮಿಕ್ಸಿ ಜಾರಿಗೆ ಹಾಕಿ.. ಹಲಸಿನ ಹಣ್ಣನ್ನು ಚಿಕ್ಕದಾಗಿ ತುಂಡು ಮಾಡಿಕೊಂಡು 1 ಕಪ್ ಹಲಸಿನ ಹಣ್ಣನ್ನು ಅಕ್ಕಿಯ ಜೊತೆ ಸೇರಿಸಿ. ಇದಕ್ಕೆ 1/4ಕಪ್ ತೆಂಗಿನ ತುರಿ, 1 ಚಮಚ ಜೀರಿಗೆ,ರುಚಿಗೆ ತಕ್ಕಷ್ಟು ಉಪ್ಪು, ಸಿಹಿ ಜಾಸ್ತಿ ಬೇಕಾದ್ರೆ ಸ್ವಲ್ಪ ಬೆಲ್ಲ, 1/2 ದಿಂದ 3/4 ಕಪ್ ಆಗುವಷ್ಟು ನೀರು ( ಉದ್ದಿನ ದೋಸೆಯ ಹದಕ್ಕೆ ರುಬ್ಬಬೇಕು) ಸೇರಿಸಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಕಬ್ಬಿಣದ ಕಾವಲಿಗೆ ಎಣ್ಣೆ ಸವರಿ ಸರಿಯಾಗಿ ಕಾವಲಿ ಬಿಸಿಯಾದ ಮೇಲೆ ಎಣ್ಣೆ ಹೆಚ್ಚು ಇದ್ದರೆ ಸ್ವಲ್ಪ ಉಜ್ಜಿ ಹಿಟ್ಟನ್ನು ಕಾವಲಿಗೆ ಹಾಕಿ ತೆಳುವಾಗಿ ಹರಡಿ, ಮೇಲಿನಿಂದ ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ 1ರಿಂದ 2ನಿಮಿಷ ಬೇಯಿಸಿ.. ಈಗ ರುಚಿಯಾದ ಹಲಸಿನ ಹಣ್ಣಿನ ದೋಸೆ ತಿನ್ನಲು ಸಿದ್ಧ.

ಬಾಳೆದಿಂಡಿನ ಚಟ್ನಿ :

ಬಾಲೆದಿಂಡನ್ನು ನಾರು ತೆಗೆದು ತುಂಡರಿಸಿ 1/2 ಕಪ್ ಆಗುವಷ್ಟು ಬಾಳೆದಿಂಡಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ 1/2ಕಪ್ ತೆಂಗಿನ ತುರಿ, 1/2ಚಮಚ ಬೆಲ್ಲ, 1/4ಚಮಚ ಉಪ್ಪು, ಸ್ವಲ್ಪ ಹುಣಸೆ ಹುಳಿ, ಖಾರಕ್ಕೆ ಹಸಿಮೆಣಸಿನಕಾಯಿ -1, 1ಚಮಚ ಕಾಳು ಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿ. ಬೇಕಾದ್ರೆ ಒಗ್ಗರಣೆ ಹಾಕಿ.. ಅನ್ನ, ದೋಸೆ, ಚಪಾತಿ ಎಲ್ಲದಕ್ಕೂ ಚೆನ್ನಾಗಿರುತ್ತದೆ.

ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ.

ನಮ್ಮೂರ ವಿಘ್ನ ನಿವಾರಕ  #ವಿನಾಯಕ  #ಗಣಪತಿ  #ಗಣೇಶ  #ಗೌರಿತನಯ
11/09/2024

ನಮ್ಮೂರ ವಿಘ್ನ ನಿವಾರಕ #ವಿನಾಯಕ #ಗಣಪತಿ #ಗಣೇಶ #ಗೌರಿತನಯ

10/09/2024

ಮಧ್ಯಾಹ್ನಕ್ಕೆ ಸುಲಭವಾಗಿ ಮಾಡುವ ತರಕಾರಿ ಊಟದ ವಿಧಾನವನ್ನು ಈ ವೀಡಿಯೊದಲ್ಲಿ ತೋರಿಸಿದ್ದೇನೆ. ತುಂಬಾ ಸರಳ ವಿಧಾನದ ಊಟ. ಆದ್ರೆ ಈ ಅಡುಗೆಗಳ ರುಚಿ ಮಾತ್ರ ತುಂಬಾ ಚೆನ್ನಾಗಿತ್ತು. ನೀವೂ ಕೂಡಾ ಈ ರೆಸಿಪಿಗಳನ್ನು ಟ್ರೈ ಮಾಡಿ. #ಮಧ್ಯಾಹ್ನದಊಟ #ತರಕಾರಿಊಟ #ಕೇನೆಕಡ್ಲೆಗಸಿ #ಸುವರ್ಣಗೆಡ್ಡೆಕಡ್ಲೆಗಸಿ #ಸುವರ್ಣಗೆಡ್ಡೆಗಸಿ #ಕಡ್ಲೆಗಸಿ #ಅಪ್ಪೆಹುಳಿ #ತಿಳಿಸಾರು #ಸಾರು #ನಿಂಬೆಸಾರು #ಬೋಳುಸಾರು #ಗಜನಿಂಬೆ #ಗಜನಿಂಬೆಸಾರು #ಸಲಾಡ್ #ಮೊಸರುಬಜ್ಜಿ

Thanks for being a top engager and making it on to my weekly engagement list! 🎉 Shreedhara Naikap, Mahesh Merkaje, Shrin...
09/09/2024

Thanks for being a top engager and making it on to my weekly engagement list! 🎉 Shreedhara Naikap, Mahesh Merkaje, Shrinivas Vivekandanagar, Chinnatambi Chinnatambii, Reshma A Bangarakodi, Sadanand Vantimar, Acchu Rachu, Hameed Sakleshpur, Mamatha Mamatha, Padmanabha Guthu

09/09/2024

ಮಂಗಳೂರು ಕಡೆ ಮಾಡುವ ಮೀನಿನ ಅಡುಗೆಗೆ ಅದರದ್ದೇ ಆದ ಭಿನ್ನ ರುಚಿ. ಅಂತಹದ್ದೇ ವಿಧಾನದಲ್ಲಿ ಇವತ್ತು ಬೂತಾಯಿ ಮೀನಿನ ಗಸಿ ಮಾಡುವ ವಿಧಾನ ಈ ವೀಡಿಯೊದಲ್ಲಿದೆ. #ಬೂತಾಯಿ #ಬೂತಾಯಿಮೀನಿನಗಸಿ #ಮೀನಿನಪದಾರ್ಥ #ತುಳುನಾಡು #ಮೀನು

ಓಣಂ ಕಾರ್ಯಕ್ರಮಕ್ಕೆ ಹೊರಟಾಗ ಸುಮ್ಮನೆ ಒಂದು ಫೋಟೋ ಕ್ಲಿಕ್.. #ಓಣಂ
09/09/2024

ಓಣಂ ಕಾರ್ಯಕ್ರಮಕ್ಕೆ ಹೊರಟಾಗ ಸುಮ್ಮನೆ ಒಂದು ಫೋಟೋ ಕ್ಲಿಕ್..
#ಓಣಂ

ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರ ನಾರಿನಾಂಶ ಹೆಚ್ಚಾಗಿರುವ ತಿಂಡಿ ಬಾಳೆದಿಂಡಿನ ದೋಸೆ, ಹೀರೆಕಾಯಿ ಪಲ್ಯ ಹಾಗೂ ಅದರ ನಾರಿನ ಚಟ್ನಿ.ಮಾಡುವ ವಿಧಾನ :...
09/09/2024

ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರ ನಾರಿನಾಂಶ ಹೆಚ್ಚಾಗಿರುವ ತಿಂಡಿ ಬಾಳೆದಿಂಡಿನ ದೋಸೆ, ಹೀರೆಕಾಯಿ ಪಲ್ಯ ಹಾಗೂ ಅದರ ನಾರಿನ ಚಟ್ನಿ.
ಮಾಡುವ ವಿಧಾನ :
1ಕಪ್ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 2-3ಗಂಟೆ ಅಥವಾ ರಾತ್ರಿ ಪೂರ್ತಿ ನೆನೆಸಿ. ಇದರ ಜೊತೆಗೆ ನಾನು 5 ಮೆಂತೆ ಕಾಳು ಕೂಡಾ ನೆನೆಸಿದ್ದೆ. ಮೆಂತೆ ಹಾಕದೆಯೂ ಮಾಡಬಹುದು. ನೆನೆದ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ಮೆಂತೆ ಕಾಳು, 2 ಚಮಚ ತೆಂಗಿನ ತುರಿ, ನಾರನ್ನು ತೆಗೆದು cut ಮಾಡಿರುವ 1/2ಕಪ್ ಬಾಳೆದಿಂಡಿನ ಹೋಲುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಉದ್ದಿನ ದೋಸೆಯ ಹದಕ್ಕೆ ಗಟ್ಟಿಯಾಗಿ ರುಬ್ಬಿ, ಕಾದ ಕಾವಲಿಗೆ ಎಣ್ಣೆ ಅಥವಾ ತುಪ್ಪ ಸವರಿ ಹಿಟ್ಟನ್ನುತೆಳುವಾಗಿ ಹರಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. Crispy ದೋಸೆ ಬೇಕಾದ್ರೆ ಹಾಗೆಯೇ ಕಾವಲಿಯಲ್ಲಿ ಕಾಯಲು ಬಿಡಿ. ಮೆದು ದೋಸೆ ಬೇಕಾದ್ರೆ 1 1/2ನಿಮಿಷ ಬೇಯಿಸಿ ಕಾವಲಿಯಿಂದ ತೆಗೆದು ಬಿಸಿ ಬಿಸಿ ಇರುವಾಗಲೇ ತಿನ್ನಲು ರುಚಿ.

ಹೀರೆಕಾಯಿ ಪಲ್ಯ ಮಾಡುವ ವಿಧಾನ :
ಹೀರೆಕಾಯಿಯ ನಾರನ್ನು ತೆಗೆದು ಹೋಳುಗಳಾಗಿ ಮಾಡಿ ಇಟ್ಟುಕೊಳ್ಳಬೇಕು. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ಸಾಸಿವೆ, ಉದ್ದಿನಬೇಳೆ ಹಾಕಿ ಸಾಸಿವೆ ಸಿಡಿದಾಗ ಕೆಂಪು ಮೆಣಸು ತುಂಡು ಮಾಡಿ ಹಾಕಿ ನಂತರ ಸ್ವಲ್ಪ ಕರಿಬೇವಿನ ಎಲೆ ಸೇರಿಸಿ.. ನಂತರ ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿ, ಚಿಕ್ಕದಾಗಿ ಹೆಚ್ಚಿ ಹಾಕಿ, ಚಿಟಿಕೆ ಅರಶಿನ ಪುಡಿ ಸೇರಿಸಿ, ಈರುಳ್ಳಿ ಸ್ವಲ್ಪ ಬಾಡಿದ ಮೇಲೆ ಹೀರೆಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಹುರಿದು ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಬಹುದು. ಹೀರೆಕಾಯಿ ಅರ್ಧದಷ್ಟು ಬೆಂದಾಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರ ಮಾಡಿ, ಸ್ವಲ್ಪ ತೆಂಗಿನ ತುರಿಯ ಜೊತೆಗೆ 1/2ಚಮಚದಷ್ಟು ಜೀರಿಗೆ, 5-6ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಮಿಶ್ರ ಮಾಡಿ ಮುಚ್ಚಳ ಮುಚ್ಚಿ ಉರಿಯನ್ನು ನಂದಿಸಿ. ಈಗ ರುಚಿಯಾದ ಹೀರೆಕಾಯಿ ಪಲ್ಯ ಸವಿಯಲು ಸಿದ್ಧ. ಈರುಳ್ಳಿ ಬೆಳ್ಳುಳ್ಳಿ ಹಾಕದೆ ಕೂಡಾ ಮಾಡಿಕೊಳ್ಳಬಹುದು.

ಹೀರೆಕಾಯಿ ನಾರಿನ ಚಟ್ನಿ ಮಾಡುವ ವಿಧಾನ :

ಹೀರೆಕಾಯಿಯ ನಾರನ್ನು ಸ್ವಲ್ಪ ನೀರು ಸೇರಿಸಿ 5-7ನಿಮಿಷ ಬೇಯಿಸಿ. ತಣ್ಣಗಾದ ಮೇಲೆ ಸ್ವಲ್ಪ ಹುಣಸೆ ಹುಳಿ, ರುಚಿಗೆ ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನಕಾಯಿ ಸೇರಿಸಿ ಬೇಯಿಸಿದ ನೀರಿನಲ್ಲಿಯೇ ರುಬ್ಬಿಕೊಳ್ಳಿ. ಬೇಕಾದರೆ ಒಗ್ಗರಣೆ ಕೊಡಬಹುದು.

ಇಡೀ ಗೋಧಿಯನ್ನು ರುಬ್ಬಿ ಮಾಡಿದ ಕಡುಬು ಮಾಡುವ ವಿಧಾನ : 1 ಕಪ್ ಗೋಧಿ ಹಾಗೂ ಒಂದು ಕಪ್ ಕಟ್ ಸಾಂಬಾ ಅಕ್ಕಿ ಅಥವಾ ಕುಚುಲಕ್ಕಿ ( ರೇಷನ್ ಲಿ ಸಿಗುವ ...
08/09/2024

ಇಡೀ ಗೋಧಿಯನ್ನು ರುಬ್ಬಿ ಮಾಡಿದ ಕಡುಬು
ಮಾಡುವ ವಿಧಾನ : 1 ಕಪ್ ಗೋಧಿ ಹಾಗೂ ಒಂದು ಕಪ್ ಕಟ್ ಸಾಂಬಾ ಅಕ್ಕಿ ಅಥವಾ ಕುಚುಲಕ್ಕಿ ( ರೇಷನ್ ಲಿ ಸಿಗುವ ಬಿಳಿಯ ಕುಚುಲಕ್ಕಿ ಇದ್ದರೆ ಅದನ್ನೂ ಹಾಕಬಹುದು ) ಚೆನ್ನಾಗಿ ತೊಳೆದು ರಾತ್ರಿ ಪೂರ್ತಿ ನೆನೆಸಿ. ನಂತರ ಇದರ ನೀರನ್ನು ಬಸಿದುಕೊಂಡು ಸ್ವಲ್ಪ ನೀರು ಸೇರಿಸಿ, 1 ಕಪ್ ತೆಂಗಿನ ತುರಿ ಸೇರಿಸಿ, ಸಿಹಿ ಬೇಕಾದರೆ ಸ್ವಲ್ಪ ಬೆಲ್ಲ ಕೂಡಾ ಸೇರಿಸಬಹುದು. ಚಿರೋಟಿ ರವೆಯ ಹದದಲ್ಲಿ ಸ್ವಲ್ಪ ಗಟ್ಟಿಯಾಗಿ ( ಎಲೆಯಿಂದ ಹೊರಗೆ ಹೋಗದ ಹಾಗೆ ) ಉಪ್ಪು ಸೇರಿಸಿ ರುಬ್ಬಿ. ನಂತರ ಬಾಳೆ ಎಲೆಯನ್ನು ಬಾಡಿಸಿಕೊಂಡು ಒಂದು ಸೌಟಿನಷ್ಟು ಹಿಟ್ಟನ್ನು ಎಲೆಗೆ ಹಾಕಿ ಮಡಚಿ ಹಭೆಯಲ್ಲಿ 30 ನಿಮಿಷ ಬೇಯಿಸಿಕೊಂಡರೆ ರುಚಿಯಾದ ಗೋಧಿ ಕಡುಬು ಸವಿಯಲು ಸಿದ್ಧ. ಉಪ್ಪಳಿಗೆ ಎಲೆಯಲ್ಲಿಯೋ ಮಡಚಿ ಇಡಬಹುದು.
ಟ್ರೈ ಮಾಡಿ. ಇಷ್ಟ ಆದ್ರೆ ಲೈಕ್ ಮಾಡಿ
ಶೇರ್ ಮಾಡಿ
ಕಾಮೆಂಟ್ ಮಾಡಿ

ಯಾರಿಗೆಲ್ಲಾ ಇಷ್ಟ ಉದ್ದಿನವಡ? ಇಷ್ಟ ಅನ್ನುವವರು ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ.
07/09/2024

ಯಾರಿಗೆಲ್ಲಾ ಇಷ್ಟ ಉದ್ದಿನವಡ? ಇಷ್ಟ ಅನ್ನುವವರು ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ.

   #ವಿಘ್ನನಿವಾರಕ  #ಗಣಪತಿ      #ಕಾಸರಗೋಡು  #ಗಣೇಶಚತುರ್ಥಿ    #ಗಣೇಶ  #ವಿನಾಯಕ
07/09/2024

#ವಿಘ್ನನಿವಾರಕ #ಗಣಪತಿ #ಕಾಸರಗೋಡು #ಗಣೇಶಚತುರ್ಥಿ #ಗಣೇಶ #ವಿನಾಯಕ

ನಮ್ಮೂರಗಣೇಶ  #ಗಣೇಶಚತುರ್ಥಿ          #ಗಣೇಶ  #ಗಣಪತಿ  #ವಿನಾಯಕ  #ವಿಘ್ನನಿವಾರಕ  #ಕಾಸರಗೋಡು
07/09/2024

ನಮ್ಮೂರಗಣೇಶ #ಗಣೇಶಚತುರ್ಥಿ #ಗಣೇಶ #ಗಣಪತಿ #ವಿನಾಯಕ #ವಿಘ್ನನಿವಾರಕ #ಕಾಸರಗೋಡು

ಇಬ್ಬರೂ ಅವರದ್ದೇ ಖುಷಿಯಲ್ಲಿರುವಾಗ ಅವರಿಬ್ಬರಿಗೂ ತಿಳಿಯದ ಹಾಗೆ ಒಂದು ಫೋಟೋ ಕ್ಲಿಕ್ ಮಾಡಿದ್ದು .. ಕಳೆದ ವರ್ಷದ್ದು..       #ಗಣೇಶಚತುರ್ಥಿ
07/09/2024

ಇಬ್ಬರೂ ಅವರದ್ದೇ ಖುಷಿಯಲ್ಲಿರುವಾಗ ಅವರಿಬ್ಬರಿಗೂ ತಿಳಿಯದ ಹಾಗೆ ಒಂದು ಫೋಟೋ ಕ್ಲಿಕ್ ಮಾಡಿದ್ದು .. ಕಳೆದ ವರ್ಷದ್ದು..
#ಗಣೇಶಚತುರ್ಥಿ

07/09/2024

ನಾಗರ ಪಂಚಮಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಕ್ಕೆ ವಿಶೇಷವಾಗಿ ಮಾಡುವ ಅರಶಿನ ಎಲೆಯ ಕಡುಬು ಅಥವಾ ಗಟ್ಟಿ, ಹೂರಣ ಮಾಡಿಕೊಳ್ಳದೆ ಸುಲಭವಾಗಿ ಮಾಡುವ ವಿಧಾನ #ಅರಶಿನಎಲೆಯಗಟ್ಟಿ #ಅರಶಿನಎಲೆಯಕಡುಬು

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.. ವಿಘ್ನಗಳೆಲ್ಲವೂ ನಿವಾರಣೆಯಾಗಿ ಶುಭವಾಗಲಿ..ಶುಭೋದಯ #ಗಣೇಶಚತುರ್ಥಿ  #ಚೌತಿ
07/09/2024

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..
ವಿಘ್ನಗಳೆಲ್ಲವೂ ನಿವಾರಣೆಯಾಗಿ ಶುಭವಾಗಲಿ..
ಶುಭೋದಯ
#ಗಣೇಶಚತುರ್ಥಿ #ಚೌತಿ

.. #ನಗು
05/09/2024

..
#ನಗು

Address

Kasaragod
671121

Alerts

Be the first to know and let us send you an email when Radhas Thulunada Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Radhas Thulunada Channel:

Videos

Share


Other Digital creator in Kasaragod

Show All