Imp News Kannada

Imp News Kannada ಐ ಎಂ ಪಿ ನ್ಯೂಸ್ ಕನ್ನಡ , ಸುದ್ದಿ ನಿಮ್ಮದು....?

20/09/2021

*ನಮ್ಮ ಆರೋಗ್ಯ ಉತ್ತಮವಾಗಿರಲು ನಿತ್ಯ ಸೌತೆಕಾಯಿ ಸೇವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅತಿಯಾದರೆ ಅಮೃತವೂ ವಿಷ ಎಂ.....

20/09/2021

ಅರಕಲಗೂಡು: ಮಂಡ್ಯ ಜಿಲ್ಲೆಯಲ್ಲಿರುವ ಮೈ ಶುಗರ್ಸ್ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಪುನರಾರಂಭಿಸಲು ರೈತ ಸಂಘಟನೆಗಳು ಹಮ್ಮಿ....

20/09/2021

ಅರಕಲಗೂಡು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲವು ಪುಂಡರು ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದು ಈ ಕೃತ್ಯಕ್ಕೆ ...

20/09/2021

ಅರಕಲಗೂಡು: ರೌಡಿ ಶೀಟರ್ ಪರ ಸದ್ದು ಮೊಳಗಿಸಿದ ಶಾಸಕ, ತನ್ನ ಜತೆಯಲ್ಲೇ ಇರುವ ರೌಡಿ ಶೀಟರ್‌ಗಳ ಹೆಸರನ್ನು ಪೊಲೀಸ್ ಇಲಾಖೆ ಕಡತದಿಂದ ತೆಗೆ...

20/09/2021

ಅರಕಲಗೂಡು: ಮಾತೆತ್ತಿದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕರು ತಾಲೂಕಿನ ಕೆಲವು ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವ್...

20/09/2021

ಅರಕಲಗೂಡು: ರಾಜಕೀಯ ಜೀವನದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಅವರೊಂದಿಗೆ ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣ ನಡೆಸಿಲ್ಲ ಎಂದು ಮಾಜಿ ಸಚಿ....

18/09/2021

ಅರಕಲಗೂಡು: ಭೂಕಂಪ, ಪ್ರಳಯದ ಅಘಾತವಿದೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸುವ ಕುರಿತು ಸದ್ಯಕ್ಕೆ ಏನನ್ನೂ ಹೇ.....

18/09/2021

ವಾಸಂತಿ ನಲಿದಾಗ ಸಿನಿಮಾದ ಅಮರಶಿಲ್ಪಿ ಜಕಣಾಚಾರಿ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ಶ್ರೀಗಳು, ಗಣ್ಯರ ಸಮಾಗಮ ಅರಕಲಗೂಡು: ತಾಲೂಕಿನ ಅರೇಮ...

18/09/2021

ಅರಕಲಗೂಡು: ಕೊರೋನಾ ಲಸಿಕೆ ಹಲವರಲ್ಲಿ ಇಂದಿಗೂ ಅನುಮಾನಗಳನ್ನು ಕೆದಕಿಸುತ್ತಿದೆ, ಇದಕ್ಕಿಲಗಲೊಂದು ಪ್ರಸಂಗ ಜರುಗಿದ್ದು ತಾಲೂಕಿನ ರಾ.....

18/09/2021

ಅರಕಲಗೂಡು: ತಾಲೂಕಿನ ರಾಮನಾಥಪುರದ ಕಾವೇರಿ ನದಿಯ ನಡುಗಡ್ಡೆಯಲ್ಲಿ ಕುಳಿತು ದಂಡೆಗೆ ಬರಲಾಗದೆ ನಿತ್ರಾಣಗೊಂಡಿದ್ದ ಮಹಿಳೆಯನ್ನು ಅಗ್ನ...

18/09/2021

ಅರಕಲಗೂಡು: ಪಟ್ಟಣದಲ್ಲಿ ಮೂಲ ಸೌರ್ಯಗಳಿಗೆ ಜನ ಹಪಹಪಿಸುವಂತಾಗಿದೆ. ಹೌದು, ಹಲವಾರು ಬಡಾವಣೆಗಳಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಇದ್ದು ....

18/09/2021

ಅರಕಲಗೂಡು: ಈ ಕ್ಷೇತ್ರದ ಪ್ರಥಮ ಪ್ರಜೆಯೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರೇರ್ಥ? ತಾವು ಹೇಳಿದಂತೆ ನಡೆಯದ ಸರ್ಕಾರಿ ಅಧಿಕಾರಿ....

18/09/2021

ಅರಕಲಗೂಡು: ಆಸೆಯ ಬೆಳೆ ಶುಂಠಿ ರೈತರವಜೇಜು ತುಂಬಿಸುತ್ತಿಲ್ಲ, ಬೆಲೆ ಇಲ್ಲದೆ ಶುಂಠಿಗೆ ಕೊಳೆರೋಗ ಕಾಣಿಸಿಕೊಂಡು ತೀವ್ರ ಆರ್ಥಿಕ ಸಂಕಷ್...

18/09/2021

ಅರಕಲಗೂಡು: ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದ್ದು ತಾವು ಅಧ್ಯಕ್ಷರಾಗಿ ಆಯ್ಕೆಗೊಂಡರೆ ಪರ....

18/09/2021

ಅರಕಲಗೂಡು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಯುವಕರು ಉನ್ನತ ಹುದ್ದೆಗಳನ್ನು ಗಳಿಸಲು ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಗಿದೆ ....

*ಹಾಸನದಲ್ಲಿ ಲಘು ಭೂಕಂಪನ- ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲು*ಹಾಸನ: ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಭಯಭೀತರ...
17/09/2021

*ಹಾಸನದಲ್ಲಿ ಲಘು ಭೂಕಂಪನ- ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲು*

ಹಾಸನ: ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಭಯಭೀತರಾಗಿದ್ದಾರೆ. ಹಾಸನ ನಗರದ ಉದಯಗಿರಿ, ಕುವೆಂಪುನಗರ, ಮಾವಿನಹಳ್ಳಿ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ.

ಐದು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಹಾಸನ ನಗರವಷ್ಟೇ ಅಲ್ಲದೆ ಇತಿಹಾಸ ಪ್ರಸಿದ್ಧ ವಿಶ್ವವಿಖ್ಯಾತ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ದ್ಯಾವಪ್ಪನಹಳ್ಳಿ, ನಿಂಗಪ್ಪನಕೊಪ್ಪಲು ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ. ಇದರಿಂದ ಆತಂಕಗೊಂಡ ನಿವಾಸಿಗಳು ಮನೆಯ ಹೊರಗಡೆ ಓಡಿ ಬಂದಿದ್ದಾರೆ. ಜನರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ಹಳೆಬೀಡು ಪೊಲೀಸರು ಭೇಟಿ ನೀಡಿದ್ದಾರೆ.

ಹಾಸನ ಸುತ್ತಮುತ್ತ 5 ಗಂಟೆ 10 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೇಲೂರು ಸುತ್ತಮುತ್ತ ಸಂಜೆ 6 ಗಂಟೆ 10 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಹಾಸನದಲ್ಲಿ ಭೂಕಂಪನದ ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲಾಗಿದೆ. ಸಾಲಗಾಮೆ ಹೋಬಳಿಯ, ರಾಯಪುರದ ಬಳಿ 2.3 ರಷ್ಟು ಕಂಪನ ದಾಖಲಾಗಿದ್ದು, ಈ ಕಂಪನಕ್ಕೆ ಜನರು ಹೆದರುವ ಅವಶ್ಯಕತೆಯಿಲ್ಲ. ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ: ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಪ್ರಕರಣಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರುಆಸ್ತಿಗಾಗಿ ಸ್ವಂತ ತಮ್ಮನನ್ನೇ ಕೊಲೆಗ...
17/09/2021

ಹಾಸನ: ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಪ್ರಕರಣ

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

ಆಸ್ತಿಗಾಗಿ ಸ್ವಂತ ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

ಜೊತೆಗೆ ಮದುವೆ ಮಾಡುವಂತೆ‌ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ಸ ಜಲೇಂದ್ರ

ಮಹೇಶ್ (34) ಬಂಧಿತ ಆರೋಪಿ

ಬೆಲೆ ಬಾಳುವ ಜಮೀನನ ಆಸೆಗೆ ಸಹೋದರನ ಕೊಲೆ ಮಾಡಿದ್ದ ಮಹೇಶ್

ತಮ್ಮನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ತಲೆಗೆ ಹೊಡೆದು, ನಂತರ ಕತ್ತು ಸೀಳಿ ಕೊಲೆ

ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಘಟನೆ

ಜಲೇಂದ್ರ (ಪಾಪ) (31) ಕೊಲೆಯಾಗಿದ್ದ ಯುವಕ

ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಜಲೇಂದ್ರ

ನಿನ್ನೆ ಬೆಳಿಗ್ಗೆ ಹೊಲದ ಬಳಿಯ ಗಾಡಿ ದಾರಿಯಲ್ಲಿ ಪತ್ತೆಯಾಗಿದ್ದ ಶವ

ಪತ್ನಿಯನ್ನು ಕೊಲೆ‌ ಮಾಡಿ ಅಪಘಾತ ಎಂದು ಬಿಂಬಿಸಿ ನಾಟಕವಾಡಿದ್ದ ಪತಿಯ ಬಂಧನ ಅರಕಲಗೂಡು : ತನ್ನ ಪತ್ನಿಯನ್ನು ಕೊಲೆ‌ ಮಾಡಿ ಅಪಘಾತ ಎಂದು ಬಿಂಬಿಸಿ ...
02/09/2021

ಪತ್ನಿಯನ್ನು ಕೊಲೆ‌ ಮಾಡಿ ಅಪಘಾತ ಎಂದು ಬಿಂಬಿಸಿ ನಾಟಕವಾಡಿದ್ದ ಪತಿಯ ಬಂಧನ

ಅರಕಲಗೂಡು : ತನ್ನ ಪತ್ನಿಯನ್ನು ಕೊಲೆ‌ ಮಾಡಿ ಅಪಘಾತ ಎಂದು ಬಿಂಬಿಸಿ ನಾಟಕವಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಅತ್ನಿ ಗ್ರಾಮದ ಪ್ರೀತಿ (23) ಕೊಲೆಯಾದ ದುರ್ದೈವಿಯಾಗಿದ್ದು, ಆಕೆಯ ಪತಿ ತಾಲೂಕಿನ ಅಕ್ಕಲವಾಡಿ ಗ್ರಾಮದ ಮಹೇಶ್ (32) ಬಂಧಿತ ಆರೋಪಿ. ಇಬ್ಬರು ಕಳೆದ ಮೂರು ವರ್ಷಗಳ ಹಿಂದೆ ಸ್ಥಳೀಯ ದೇವಾಲಯದಲ್ಲಿ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಕೊರೊನಾ ಹಿನ್ನಲೆಯಲ್ಲಿ ಅಕ್ಕಲವಾಡಿಗೆ ಬಂದಿದ್ದ ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳ‌ ನಡೆದು ಮನಸ್ಥಾಪ ಮೂಡಿತ್ತು. ಹಿರಿಯರೆಲ್ಲಾ ಸೇರಿ ರಾಜಿ ಪಂಚಾಯ್ತಿ ಮಾಡಿ ಹೊಂದಿಕೊಂಡು ಹೋಗುವಂತೆ ಹೇಳಿದ್ದರು,

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯನ್ನು ಕೊಂದು, ಅಪಘಾತವಾಗಿದೆ ಎಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದನು. ಅಪಘಾತದ ಸ್ಥಳ ನೋಡಿ ಅನುಮಾನಗೊಂಡ ಪೊಲೀಸರು ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಮಂಗಳವಾರ ರಾತ್ರಿ 8.30 ರ ಸುಮಾರಿನಲ್ಲಿ ತಾಲ್ಲೂಕಿನ ಕಣಿವೆ ಬಸಪ್ಪ-ಹುಲಿಕಲ್ ರಸ್ತೆಯಲ್ಲಿ
ಮಹೇಶ್ ತನ್ನ ಪತ್ನಿ ಪ್ರೀತಿ ತಲೆಗೆ ಚಾಕುವಿನಿಂದ ಇರಿದಿದ್ದಾನೆ. ಆಕೆ ಮೃತಪಟ್ಟ ನಂತರ ಬೈಕ್ ನಲ್ಲಿ ಶವ ತಂದು ಅಪಘಾತ ಎಂದು ಬಿಂಬಿಸಲು ಸಂಬಂಧಿಕರಿಗೆ ಫೋನ್ ಕರೆಮಾಡಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಅಪಘಾತವಾಗಿ ಪ್ರೀತಿ ಸಾವನ್ನಪ್ಪಿದ್ದಾಳೆ. ನನಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾನೆ. ನಂತರ ಅಪಘಾತವಾಗಿದೆ ಎಂದು ಆ‌್ಯಂಬುಲೆನ್ಸ್ ಕರೆಸಿ ಪ್ರೀತಿ ಮೃತದೇಹ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದನು.
ವಿಷಯ ತಿಳಿದು ಅಪಘಾತದ ಸ್ಥಳಕ್ಕೆ ಬಂದ ಅರಕಲಗೂಡು ಪೊಲೀಸರು ಅನುಮಾನಗೊಂಡು ಅಪಘಾತಕ್ಕೀಡಾದ ಮಹೇಶ್ ಬೈಕ್ ಯಾವುದೇ ಡ್ಯಾಮೇಜ್ ಆಗಿರಲಿಲ್ಲ, ಅಲ್ಲದೇ ಆತನಿಗೂ ಯಾವುದೇ ರೀತಿಯ ಗಾಯಗಳಾಗಿರಲಿಲ್ಲ.ಆದ್ದರಿಂದ ಮಹೇಶ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಂಶ ಬಯಲಾಗಿದ್ದು ಘಟನೆ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮ್ಮ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಮದುವೆಯಾದ ದಿನದಿಂದಲೂ ವರದಕ್ಷಿಣೆ ತರುವಂತೆ ಮಹೇಶ್ ಹಾಗೂ ಅವರ ಪೋಷಕರು ಕಿರುಕುಳ ನೀಡುತ್ತಿದ್ದರು. ಅನೇಕ ಬಾರಿ ಆಕೆಯ ಮೇಲೆ ಹಲ್ಲೆ ಕೂಡ ಮಾಡಿದ್ದರು. ಎಷ್ಟೇ ಬುದ್ದಿವಾದ ಹೇಳಿದರು ಬದಲಾಗದ ದುರಳ ಮಹೇಶ್ ಪ್ರೀತಿಯನ್ನು ಕೊಲೆ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

01/09/2021

HASSAN-BREAKING

ಹಾಸನ : *ಹಾಸನದಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಿ ಡಿಸಿ ಅದೇಶ*

13-9-2021 ರವರೆಗೆ ಹಾಸನದಲ್ಲಿ ವೀಕೆಂಡ್ ಕರ್ಫ್ಯೂ

ಕೋವಿಡ್ ಹರಡುವಿಕೆ ತಡೆಗಟ್ಟಲು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರಿಂದ ಆದೇಶ

ತುರ್ತು ಸೇವೆಗಳಿಗೆ ಮಾತ್ರ ಅನುಮತಿ

ವಾರಾಂತ್ಯದಲ್ಲಿ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

ಮದ್ಯದಂಗಡಿಗಳಲ್ಲಿ 2 ಗಂಟೆಯವರೆಗೆ ಪಾರ್ಸೆಲ್‌ಗೆ ಅವಕಾಶ

ಹಾಲಿನ ಬೂತ್‌ಗಳು ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆವರೆಗೆ ತೆರೆಯಲು ಅವಕಾಶ

ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ

ಕೊರೊನಾ ನಿಯಂತ್ರಣಕ್ಕಾಗಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರಿಂದ ಆದೇಶ

ಹಾಸನ: ಹಾಸನ ಜಿಲ್ಲೆಯಲ್ಲಿ ಬಿತ್ತು ಮತ್ತೊಂದು ಹೆಣತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಬರ್ಬರ ಹತ್ಯೆಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ಗ...
30/08/2021

ಹಾಸನ: ಹಾಸನ ಜಿಲ್ಲೆಯಲ್ಲಿ ಬಿತ್ತು ಮತ್ತೊಂದು ಹೆಣ

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಬರ್ಬರ ಹತ್ಯೆ

ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದ ಗಾಂಧಿವೃತ್ತದಲ್ಲಿ ಘಟನೆ

ಮೀನಾಕ್ಷಿ (55) ಕೊಲೆಯಾದ ನಿರ್ಗತಿಕ ಮಹಿಳೆ

ಅರೆಹುಚ್ಚಿಯಾಗಿದ್ದ ಮೀನಾಕ್ಷಿ

ಕೆಲ‌ ದಿನಗಳಿಂದ ಪಟ್ಟಣದಲ್ಲಿ ಅಲೆಯುತ್ತಿದ್ದ ಮಹಿಳೆ

ಸ್ಥಳಕ್ಕೆ ‌ಪೊಲೀಸರು ಭೇಟಿ, ಪರಿಶೀಲನೆ

ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು
30/08/2021

ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಸೋಮವಾರದಿಂದ 9 ಮತ್ತು 10ನೇ ತರಗತಿಗಳಿಗೆ ಭೌತಿಕ ಬೋಧನೆ ಆರಂಭ....ಹಾಸನ: ಕೊರೊನಾ ಸೋಂಕು ತಗ್ಗಿದ ಪರಿಣಾಮ ಜಿಲ್ಲೆಯಲ್ಲಿ ಆ.30ರಿಂದ 9 ಮತ್ತು 10ನ...
27/08/2021

ಸೋಮವಾರದಿಂದ 9 ಮತ್ತು 10ನೇ ತರಗತಿಗಳಿಗೆ ಭೌತಿಕ ಬೋಧನೆ ಆರಂಭ....

ಹಾಸನ: ಕೊರೊನಾ ಸೋಂಕು ತಗ್ಗಿದ ಪರಿಣಾಮ ಜಿಲ್ಲೆಯಲ್ಲಿ ಆ.30ರಿಂದ 9 ಮತ್ತು 10ನೇ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಕಳುಹಿಸಬೇಕು.
ಏಳು ದಿನಗಳ ಅಂಕಿ ಅಂಶ ಪ್ರಕಾರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 1.5 ರಷ್ಟಿದ್ದು, ರಾಜ್ಯದಲ್ಲಿ ಹಾಸನ ನಾಲ್ಕನೇ ಸ್ಥಾನದಲ್ಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50 ರ ವರೆಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭೌತಿಕ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೂ 2450 ಸರ್ಕಾರಿ, 616 ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿವೆ. ಸುಮಾರು 12 ಸಾವಿರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಶಿಕ್ಷಕರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಕೋವಿಡ್ ಲಾಕ್ಡೌನ್ ಪರಿಣಾಮ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾದವರ ಸಂಖ್ಯೆಯೇ ಶೇಕಡಾ 8ರಷ್ಟಿದೆ. ಸರ್ಕಾರಿ ಶಾಲೆ ಒಂದನೇ ತರಗತಿ ಒಂದರಲ್ಲೇ 12,044 ಮಕ್ಕಳು ದಾಖಲಾಗಿದ್ದಾರೆ.
2020–21ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಹಾಗೂ ಅನುದಾನ ರಹಿತ ಶಾಲೆ ಸೇರಿದಂತೆ ಎಲ್ಕೆಜಿಯಿಂದ 10ನೇ ತರಗತಿ ವರೆಗೆ ಒಟ್ಟು 2,13,938 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ 8ನೇ ತರಗತಿ 21,586, 9ನೇ ತರಗತಿಗೆ 22,243 ಹಾಗೂ 10ನೇ ತರಗತಿಯಲ್ಲಿ 22,594 ವಿದ್ಯಾರ್ಥಿಗಳು ಇದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಒಂದರಿಂದ ಹತ್ತನೇ ತರಗತಿವರೆಗೆ ಶೇಕಡಾ 30ರಷ್ಟು ಪುಸ್ತಕ ಪೂರೈಸಲಾಗಿದೆ. ಖಾಸಗಿ ಶಾಲೆಗೆ ಮಾರಾಟ ಮಾಡಲು 3.88 ಲಕ್ಷ ಪುಸ್ತಕದ ಅಗತ್ಯವಿದ್ದು, 64,220 ಪುಸ್ತಕವಷ್ಟೇ ಬಂದಿದೆ. ಎರಡು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಪುಸ್ತಕ ಪೂರೈಕೆ ಆಗಲಿದೆ ಎಂಬ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲೆಯಲ್ಲಿ ಆ. 23ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ.

25/08/2021

ಅರಕಲಗೂಡು ಪಟ್ಟಣ ದೊಡ್ಡಮ್ಮ ದೇವಾಲಯ ವೃತ್ತದಲ್ಲಿ ವೃದ್ಧನ ಮೇಲೆ ಲಾರಿ ಹರಿದ ಸಿಸಿಟಿವಿ ದೃಶ್ಯ

ಅಕ್ರಮ ಸಾಗಾಟ ವೇಳೆ  ವಾಹನ ಅಪಘಾತ :18 ಕರುಗಳ ಬಲಿಹಾಸನ: ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ  ವಾಹನ ಅಪಘಾತ ಸಂಭವಿಸಿ   18 ಕ್ಕೂ...
20/08/2021

ಅಕ್ರಮ ಸಾಗಾಟ ವೇಳೆ ವಾಹನ ಅಪಘಾತ :18 ಕರುಗಳ ಬಲಿ

ಹಾಸನ: ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ವಾಹನ ಅಪಘಾತ ಸಂಭವಿಸಿ 18 ಕ್ಕೂ ಹೆಚ್ಚು ಕರುಗಳು ಮೃತಟ್ಟಿದ್ದು, ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಸೂಚಿಸಿದ್ದಾರೆ.

ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್ ವಾಹನದಲ್ಲಿ 41 ಕ್ಕೂ ಹೆಚ್ಚು ಕರುಗಳನ್ನ ಸಾಗಿಸಲಾಗುತ್ತಿತ್ತು. ಗೋಹತ್ಯೆ ನಿಷೇಧ ಕಾಯಿದೆ ಇರುವ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದ, ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ . 23 ಕರುಗಳು ಬದುಕುಳಿದಿದ್ದು ಅವುಗಳನ್ನು ರಕ್ಷಣೆ ಮಾಡಲಾಗಿದೆ.

ಶಾಸಕರಾದ ಕೆ.ಎಸ್ ಲಿಂಗೇಶ್ ,ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್ .ಶ್ರೀನಿವಾಸ್ ಗೌಡ, ಪಶುಪಾಲನೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕರುಗಳನ್ನು ಅಮಾನವೀಯವಾಗಿ ಕಸದ ರೀತಿಯಲ್ಲಿ ಸಾಗಾಟ ಮಾಡುತಿದ್ದ ಬಗ್ಗೆ ಆತಂಕ , ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ತಪ್ಪಿತಸ್ಥರ ವಿರುದ್ದ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರು ಮಾತನಾಡಿ ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು , ತನಿಖೆ ಕೈಗೊಳ್ಳಲಾಗುತ್ತಿದೆ ,ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು

ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಡಾ|| ರಮೇಶ್, ಬೇಲೂರು ತಾಲ್ಲೂಕು ತಹಸೀಲ್ದಾರ್ ಹಾಗೂ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
20/08/2021

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

ನಾಡಿನ ಸಮಸ್ತ ಛಾಯಾಬಂಧುಗಳಿಗೆ 182ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಶುಭಾಶಯಗಳು
19/08/2021

ನಾಡಿನ ಸಮಸ್ತ ಛಾಯಾಬಂಧುಗಳಿಗೆ 182ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಶುಭಾಶಯಗಳು

ಅರಕಲಗೂಡು: ಸರ್ಕಾರಿ ಶಾಲೆ  ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ  ಹಂತಕ್ಕೆ ಬಂದು ತಲುಪಿದೆ.ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ  ಇಬ್ಬಡಿ ಗ್ರಾಮದಲ್ಲಿ...
17/08/2021

ಅರಕಲಗೂಡು: ಸರ್ಕಾರಿ ಶಾಲೆ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ ಹಂತಕ್ಕೆ ಬಂದು ತಲುಪಿದೆ.

ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಇಬ್ಬಡಿ ಗ್ರಾಮದಲ್ಲಿ ರುವ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 1ರಿಂದ 7 ನೇ ತರಗತಿಯವರೆಗೆ ಪ್ರಸ್ತುತ 61ಕ್ಕೂ ಹೆಚ್ಚು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಮುಖ್ಯಶಿಕ್ಷಕರು ಸೇರಿ 4 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ಇಲ್ಲಿ ಒಟ್ಟು 5 ಕೊಠಡಿಗಳು ಇದ್ದು, ಅದರಲ್ಲಿ ಒಂದು ಕೊಠಡಿ ಪೂರ್ಣ ಹದಗೆಟ್ಟಿದ್ದು, ಪಿಡಬ್ಲ್ಯೂಡಿಯವರಿಗೆ ತೆರವು ಗೊಳಿಸಲು ಮನವಿ ನೀಡಿರುವುದಾಗಿ ಶಿಕ್ಷಣ ಸಂಯೋಜಕ ಶ್ರಿನಿವಾಸ್ .ಸಿ.ಡಿ.ಅವರು ತಿಳಿಸಿರುತ್ತಾರೆ .

ಉಳಿದ ನಾಲ್ಕೂ ಕೊಠಡಿಗಳು ಯೋಗ್ಯವಾದವು ಎಂದು ತಿಳಿಸಿರುತ್ತಾರೆ. ಕೊಠಡಿಯಲ್ಲಿ ಒಂದನ್ನು ಮುಖ್ಯಶಿಕ್ಷಕರು ಬಳಸಿಕೊಂಡರೆ ಉಳಿದ ಕೊಠಡಿಯಲ್ಲಿ ಒಂದರಲ್ಲಿ ನಲಿ-ಕಲಿ ಮಕ್ಕಳು 1ರಿಂದ 5ನೇ ತರಗತಿಯಲ್ಲಿ 39 ಮಕ್ಕಳು ಒಂದೇ
ಕೊಠಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಆದರೆ ಉಳಿದ ಎರಡು ಕೊಠಡಿಗಳು ಬಿರುಕು ಬಂದು ಮುಂದಿನ ದಿನಗಳಲ್ಲಿ ಕುಸಿಯುವ ಹಂತ ತಲುಪಬಹುದು.
ಶಿಥಲಗೊಂಡಿದ್ದು, ಯಾವ ಸಮಯದಲ್ಲಿ ಮೇಲ್ಛಾವಣಿಯು
ಕುಸಿದು ಬೀಳಲಿದೆಯೋ ಎಂಬ ಪರಿಸ್ಥಿತಿಯಲ್ಲಿ ಶಾಲೆ ಶಿಕ್ಷಕರು
ಮತ್ತು ಮಕ್ಕಳು ಭಯದಿಂದ ಜೀವ ಬಿಗಿ ಹಿಡಿದುಕೊಂಡು ಶಾಲೆ
ಪ್ರಾರಂಭಿಸಬೇಕಿದೆ. ಇದರಿಂದ ನೂತನ ಮಕ್ಕಳನ್ನು ದಾಖಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಒಂದೇಡೆ
ಕೊರೊನಾ ಬೀತಿ ಇನ್ನೊಂದು ಕಡೆ ಕೊಠಡಿ ಭೀತಿ ಇದರಿಂದ ಈ ಗ್ರಾಮದ ಬಡವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಸರ್ಕಾರಗಳು ಶಿಕ್ಷಣ ಇಲಾಖೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ,ಹಲವು ಸೌಲಭ್ಯ ಕಲ್ಪಿಸಿದರೂ ಸಹ ಕೆಲ ಕೆಲ ಸರ್ಕಾರಿ ಶಾಲೆಗಳು ಮೂಲಸೌಲಭ್ಯದಿಂದ ವಂಚಿತವಾಗಿ
ಗುಣಮಟ್ಟ ಶಿಕ್ಷಣಕ್ಕೆ ಅಡ್ಡಿಯಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಹಿಂದುಳಿದ ಎಸ್ಸಿ-ಎಸ್ಟಿ ಮಕ್ಕಳೇ ಹೆಚ್ಚುಬದಾಖಲಾತಿ ಮುಂದಿದ್ದು
, ಸರ್ಕಾರ ಎಲ್ಲಾ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು
ಒದಗಿಸಿ ಅವರ ಕೈಹಿಡಿದು ಎತ್ತಬೇಕು ಎಂದು ಪೊಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದರು.

Address

Hassan
573201

Alerts

Be the first to know and let us send you an email when Imp News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Imp News Kannada:

Videos

Share