Bheema Vijaya News ಭೀಮ ವಿಜಯ ನ್ಯೂಸ್

  • Home
  • India
  • Hassan
  • Bheema Vijaya News ಭೀಮ ವಿಜಯ ನ್ಯೂಸ್

Bheema Vijaya News ಭೀಮ ವಿಜಯ ನ್ಯೂಸ್ editor at bheema vijaya kannada daily

13/10/2023
19/06/2023
16/11/2021

೫೦ ಸಾವಿರ ಲಂಚವನ್ನು ಸ್ವೀಕರಿಸುವಾಗ ಗ್ರಾಮಲೆಕ್ಕಿಗ ಸಂಜೀವ್ ಅವರು ಎಸಿಬಿ ಬಲೆಗೆ...

ಹಾಸನ: ಹೊಸದಾಗಿ ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ ಎನ್.ಒ.ಸಿ. ನೀಡಲು ಬೇಡಿಕೆ ಇಡಲಾಗಿದ್ದ ೫೦ ಸಾವಿರ ಲಂಚವನ್ನು ಸ್ವೀಕರಿಸುವಾಗ ಗ್ರಾಮಲೆಕ್ಕಿಗ ಸಂಜೀವ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದಿದೆ.

​ ​ ​ ​ ಮಹಿಳೆ ನವ್ಯ ಎಂಬುವರು ಅರಕಲಗೂಡು ತಾಲೂಕಿನಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ನಿರ್ಮಿಸುವ ನಿಟ್ಟಿನಲ್ಲಿ ಎನ್.ಒ.ಸಿ. ಪಡೆಯಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿದಾಗ ಗ್ರಾಮಲೆಕ್ಕಿಗ ಸಂಜೀವ್ ಎಂಬುವರಿಂದ ಒಟ್ಟು ಒಂದುವರೆ ಲಕ್ಷದ ಬೇಡಿಕೆ ಇಡಲಾಗಿತ್ತು. ಸಂಜೀವ್ ನಡುವೇ ಹಲವು ಸುತ್ತಿನ ಮಾತುಕಡೆ ಕೂಡ ಈಕೆಯ ಜೊತೆ ನಡೆಸಲಾಗಿತ್ತು. ಆದರೇ ಲಂಚ ಕೊಡಲು ಇಷ್ಟವಿಲ್ಲದ ನವ್ಯ ಅವರು ಎಸಿಬಿ ಇಲಾಖೆಗೆ ಈ ಸಂಬಂಧ ದೂರು ನೀಡಲಾಗಿತ್ತು. ಎಲ್ಲಾ ತಯಾರಿನೊಂದಿಗೆ ಎಸಿಬಿಯ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ವೀಣಾ, ಶಿಲ್ಪಾ ಸಿಬ್ಬಂದಿಗಳಾದ ವೇಣುಗೋಪಾಲ್, ರೂಪೇಶ್, ಆದಿತ್ಯ, ರೇಖಾ ಮೊದಲೆ ಕಾದಿದ್ದ ಅವರು, ಮೊದಲ ಕಂತಿನ ಹಣವಾಗಿ ೫೦ ಸಾವಿರ ರೂಗಳನ್ನು ಖಾಸಗಿ ಹೋಟೆಲೊಂದರಲ್ಲಿ ಕೊಡುವ ವೇಳೆ ಸಾಕ್ಷಿ ಸಮೇತವಾಗಿ ಗ್ರಾಮ ಲೆಕ್ಕಿಗ ಸಂಜೀವ್ ನನ್ನು ಮತ್ತು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

16/11/2021

೫೦ ಸಾವಿರ ಲಂಚವನ್ನು ಸ್ವೀಕರಿಸುವಾಗ ಗ್ರಾಮಲೆಕ್ಕಿಗ ಸಂಜೀವ್ ಅವರು ಎಸಿಬಿ ಬಲೆಗೆ...
ಹಾಸನ: ಹೊಸದಾಗಿ ಪೆಟ್ರೋಲ್ ಬಂಕ್ ತೆಗೆಯುವುದಕ್ಕೆ ಎನ್.ಒ.ಸಿ. ನೀಡಲು ಬೇಡಿಕೆ ಇಡಲಾಗಿದ್ದ ೫೦ ಸಾವಿರ ಲಂಚವನ್ನು ಸ್ವೀಕರಿಸುವಾಗ ಗ್ರಾಮಲೆಕ್ಕಿಗ ಸಂಜೀವ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದಿದೆ.

​ ​ ​ ​ ಮಹಿಳೆ ನವ್ಯ ಎಂಬುವರು ಅರಕಲಗೂಡು ತಾಲೂಕಿನಲ್ಲಿ ಹೊಸದಾಗಿ ಪೆಟ್ರೋಲ್ ಬಂಕ್ ನಿರ್ಮಿಸುವ ನಿಟ್ಟಿನಲ್ಲಿ ಎನ್.ಒ.ಸಿ. ಪಡೆಯಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿದಾಗ ಗ್ರಾಮಲೆಕ್ಕಿಗ ಸಂಜೀವ್ ಎಂಬುವರಿಂದ ಒಟ್ಟು ಒಂದುವರೆ ಲಕ್ಷದ ಬೇಡಿಕೆ ಇಡಲಾಗಿತ್ತು. ಸಂಜೀವ್ ನಡುವೇ ಹಲವು ಸುತ್ತಿನ ಮಾತುಕಡೆ ಕೂಡ ಈಕೆಯ ಜೊತೆ ನಡೆಸಲಾಗಿತ್ತು. ಆದರೇ ಲಂಚ ಕೊಡಲು ಇಷ್ಟವಿಲ್ಲದ ನವ್ಯ ಅವರು ಎಸಿಬಿ ಇಲಾಖೆಗೆ ಈ ಸಂಬಂಧ ದೂರು ನೀಡಲಾಗಿತ್ತು. ಎಲ್ಲಾ ತಯಾರಿನೊಂದಿಗೆ ಎಸಿಬಿಯ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ವೀಣಾ, ಶಿಲ್ಪಾ ಸಿಬ್ಬಂದಿಗಳಾದ ವೇಣುಗೋಪಾಲ್, ರೂಪೇಶ್, ಆದಿತ್ಯ, ರೇಖಾ ಮೊದಲೆ ಕಾದಿದ್ದ ಅವರು, ಮೊದಲ ಕಂತಿನ ಹಣವಾಗಿ ೫೦ ಸಾವಿರ ರೂಗಳನ್ನು ಖಾಸಗಿ ಹೋಟೆಲೊಂದರಲ್ಲಿ ಕೊಡುವ ವೇಳೆ ಸಾಕ್ಷಿ ಸಮೇತವಾಗಿ ಗ್ರಾಮ ಲೆಕ್ಕಿಗ ಸಂಜೀವ್ ನನ್ನು ಮತ್ತು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

16/11/2021

ಹಾಸನ : ಬಿಟ್ ಕಾಯಿನ್ ಎಂಬುದು ಕಾಂಗ್ರೆಸ್ ಸರ್ಕಾರದ ಕೂಸು ಆಗಿದ್ದು, ಹಗರಣದಲ್ಲಿ ಇರುವವರ ಹೆಸರು ಬಿಡುಗಡೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಆಗ್ರಹಿಸಿದರು...

29/10/2021

ಕನ್ನಡಿಗರ ಪ್ರೀತಿಯ ಜನಪ್ರಿಯ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಇನ್ನಿಲ್ಲ...😭 ನಮ್ಮೆಲ್ಲರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ

27/10/2021

ವಿದ್ಯಾರ್ಥಿಗಳನ್ನು ನಿಂದಿಸಿದ ಮೈಸೂರು ವಿ.ವಿ. ಡೀನ್...

ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಲ್ಲಿನ ವಿದ್ಯಾರ್ಥಿ ಕ್ಷೇಮಪಾಲಕ(ಡೀನ್ ) ಅವರು ಊಟ ನಿಲ್ಲಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ವಿರುದ್ಧವೆ ಹರಿಹಾಯ್ದು ಹಲ್ಲೆ ಮಾಡಲು ಮುಂದಾದ ಡೀನ್ ವಿರುದ್ಧ ವಿವಿ ಕ್ರಮ ಕೈಗೊಳ್ಳಬೇಕು

26/10/2021

ಮೃತ ವಿದ್ಯಾರ್ಥಿ ಮನವಿ,ನನ್ನ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ-ಶಿಕ್ಷಣ ಸಚಿವ ಹಾಗೂ ಚುಂಚನಗಿರಿ ಮಠದ ಸ್ವಾಮೀಜಿ ಬರಬೇಕು...

ಹಾಸನ: ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡದಿದ್ದರೇ ಸಾಧನೆ ಸಾಧ್ಯವಿಲ್ಲ ಎಂದು ಸಾಯುವ ಮೊದಲು ವಿಡಿಯೋ ಮಾಡಿದಲ್ಲದೇ ನಾ ಸತ್ತ ಮೇಲೆ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಪಾಲ್ಗೊಳ್ಳಬೇಕು ಎಂದು ಕೋರಲಾಗಿದೆ.

​ ​ ​ ​ ಕಳೆದ ಒಂದು ದಿವಸವಷ್ಟೆ ನಗರದ ಹೊರ ವಲಯದಲ್ಲಿರುವ ರಾಜೀವ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ಹೇಮಂತ್ ೨೦ ವರ್ಷ ಎಂಬುವನು ನೇಣಿಗೆ ಶರಣಾಗಿದ್ದನು. ಇದಕ್ಕೆ ಮೊದಲು ತಾನೆ ವಿಡಿಯೋ ಮಾಡಿರುವ ಸಂದೇಶವು ಈಗ ಎಲ್ಲೆಡೆ ವೈರಲ್ ಆಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು. ಇಲ್ಲವಾದರೇ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಮೊದಲು ಎಜುಕೇಶನ್ ಸಿಸ್ಟಮ್ ಸುಧಾರಣೆ ಆಗಬೇಕಿದೆ ಎನ್ನಲಾಗಿದೆ. ನನ್ನ ಸುಟ್ಟರೇ ಬೂದಿಯಾಗುತ್ತೇನೆ. ಮಣ್ಣು ಮಾಡಿದರೇ ಕೊಳೆಯುತ್ತದೆ. ನನ್ನ ಅಂಗಾಗಳನ್ನು ದಾನ ಮಾಡಬೇಕು. ಇನ್ನು ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಹೇಳಲಾಗಿದೆ.

ಹಾಸನಾಂಬೆ ದರ್ಶನಕ್ಕೆ ಸಾರ್ವನಿಕರಿಗೆ ಅವಕಾಶ...ಮೊದಲ ದಿನ ಹಾಗೂ ಕೊನೆಯ ದಿನ ಅವಕಾಶ ಇರುವುದಿಲ್ಲ...ಕೋವಿಡ್ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ....
26/10/2021

ಹಾಸನಾಂಬೆ ದರ್ಶನಕ್ಕೆ ಸಾರ್ವನಿಕರಿಗೆ ಅವಕಾಶ...
ಮೊದಲ ದಿನ ಹಾಗೂ ಕೊನೆಯ ದಿನ ಅವಕಾಶ ಇರುವುದಿಲ್ಲ...
ಕೋವಿಡ್ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ...

ಹಾಸನದ ಯುವ ನಟ, ಪ್ರೇಮ್ ಡೆಂಗ್ಯೂಗೆ ಬಲಿ https://youtu.be/2wSXJLckXGE
06/10/2021

ಹಾಸನದ ಯುವ ನಟ, ಪ್ರೇಮ್ ಡೆಂಗ್ಯೂಗೆ ಬಲಿ
https://youtu.be/2wSXJLckXGE

video link ...https://youtu.be/2wSXJLckXGEಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದ ಆ ಯುವಕ ಭರವಸೆಯ ಯುವ ನಟ ಹಾಸನ ಜಿಲ್ಲೆಯ ಅರಕಲಗೂಡಿನ ದಡದಳ್ಳ.....

06/09/2021

Coming soon.....ಬಹುಜನರ ಧ್ವನಿ ಭೀಮ ವಿಜಯ ವೆಬ್ ನಲ್ಲಿ.....

20/08/2021

ಇಂದಿನ ಪತ್ರಿಕೋದ್ಯಮದ ಬಗ್ಗೆ ನಿ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಮಾತುಗಳು..
(ಹಾಸನದಲ್ಲಿ ಇಂದು ನಡೆದ ಉದಯ ವರದಿ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ )

ಬಾರ್ ಬೇಕು ಬಾರ್... ಪ ಪಂ ಗದ್ದಲ, ಕೋಗಾಟ:ಬಾರ್ ಗಾಗಿ ಜನಪ್ರತಿನಿಧಿಗಳ  ಪ್ರತಿಭಟನೆಆಲೂರು: ದೇಶಾದ್ಯಂತ ಮದ್ಯಪಾನ ನಿಷೇಧಮಾಡಿ ಎಂದು ಅದೋಲನವಾಗುತ...
20/08/2021

ಬಾರ್ ಬೇಕು ಬಾರ್... ಪ ಪಂ ಗದ್ದಲ, ಕೋಗಾಟ:
ಬಾರ್ ಗಾಗಿ ಜನಪ್ರತಿನಿಧಿಗಳ ಪ್ರತಿಭಟನೆ

ಆಲೂರು:
ದೇಶಾದ್ಯಂತ ಮದ್ಯಪಾನ ನಿಷೇಧಮಾಡಿ ಎಂದು ಅದೋಲನವಾಗುತ್ತಿದೆ. ಆದರೆ ಹಾಸನ ಜಿಲ್ಲೆಯ ಆಲೂರು ಪಟ್ಟಣ ಪಂಚಾಯತಿಯ 7 ಸದಸ್ಯರು ಬಾರ್ ಬೇಕು ಬಾರ್ ಎಂದು ಕೋಗಾಡಿ ಹೋರಾಟ ನಡೆಸಿದ್ದಾರೆ.

ಸಮುದಾಯ ಭವನದ ಪಕ್ಕದಲ್ಲಿ ಈ ಹಿಂದೆ ಬಾರ್ ತೆರೆಯಲು ಅನುಮತಿ ನೀಡಬಾರದೆಂದು ವಿರೋಧ ವ್ಯಕ್ತಿಪಡಿಸಿದ ಸದಸ್ಯರೇ ಬುಧವಾರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಾರ್ ತೆರೆಯಲು ಅನುಮತಿ ನೀಡಬೇಕೆಂದು ಪಟ್ಟು ಹಿಡಿದಿದ್ದನ್ನು ವಿರೋಧಿಸಿ. ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಮುಸ್ಲಿಂ ಸಮುದಾಯದ ಮಹಿಳೆಯರು ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಮತ್ತು ವಕ್ಫ್ ಸಮುದಾಯ ಭವನಕ್ಕೆ ಹೊಂದಿಕೊಂಡಂತೆ ( ಸಿ.ಎಲ್ -7 ) ಬಾರ್ ಅಂಡ್ ರೆಸ್ಟೋರೆಂಟ್ ಉದ್ದಿಮೆಯನ್ನು ಪ್ರಾರಂಭಿಸಲು ನಿರಾಪೇಕ್ಷಣಾ ಪತ್ರ ನೀಡದಂತೆ ಪ.ಪಂ ಸದಸ್ಯರಾದ ಅಬ್ದುಲ್ ಖುದ್ದೂಸ್, ತಾಹಿರ ಬೇಗಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಧ್ಯಕ್ಷೆ ಎಚ್.ಸಿ.ವೇದ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ನಾಜಿರಾ ರಹಿಂ ಮಾತನಾಡಿ ಪಟ್ಟಣದ ಮುಖ್ಯರಸ್ತೆಯ 4 ನೇ ವಾರ್ಡಿನಲ್ಲಿರುವ, ಸಮುದಾಯ ಭವನದ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಪಟ್ಟಣ ಪಂಚಾಯಿತಿಗೆ ನಿರಾಪೇಕ್ಷಣಾ ಪತ್ರ ಪಡೆಯಲು ಅರ್ಜಿ ನೀಡಿದ್ದು,ಈ ಹಿಂದೆಯೂ ಸಹ ಸುಣ್ಣದ ಬೀದಿಯ ನಿವಾಸಿ ಹಾಗೂ ಮಹಿಳಾ ಸಂಘ ಮತ್ತು ಜಾಮಿಯಾ ಮಸೀದಿ ವತಿಯಿಂದ ಪ.ಪಂ ನಿಂದ ನಿರಾಪೇಕ್ಷಣಾ ಪತ್ರ ನೀಡದಂತೆ ಮನವಿ ಪತ್ರ ನೀಡಲಾಗಿತ್ತು, ಈ ಪತ್ರಕ್ಕೆ ಪ.ಪಂ. ಸದಸ್ಯರಾದ ಹರೀಶ್ ಮತ್ತು ರಾಣಿ ಎಂಬುವವರೂ ಸಹ ಸಹಿ ಮಾಡಿದ್ದು ನಿನ್ನೆ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಾರ್ ನಡೆಸಲು ನಿರಾಪೇಕ್ಷಣಾ ಪತ್ರ ನೀಡಲು ಪ್ರಕ್ರಿಯೆ ನಡೆದಿದೆ, ಬಾರ್ ನಡೆಸಲು ಅನುಮತಿ ನೀಡಿದರೆ ಸಮುದಾಯ ಭವನದಲ್ಲಿ ನಡೆಯುವ ಧಾರ್ಮಿಕ ಪ್ರವಚನ, ಅರೇಬಿಕ್ ವಿದ್ಯಾಭ್ಯಾಸ, ಮಹಿಳೆಯರಿಗೆ ನೀಡುವಂತ ಧಾರ್ಮಿಕ ಪ್ರವಚನ, ನಮಾಜ್ ಇವುಗಳಿಗೆ ತೊಂದರೆ ಆಗುವ ಸಂಭವವಿದೆ, ಜಾಮಿಯಾ ಸಮುದಾಯ ಭವನ ಕಡುಬಡವರಿಗೆ ಉಚಿತವಾಗಿ ನೀಡುವ ಸಮುದಾಯ ಆಗಿರುತ್ತದೆ,ಆದ ಕಾರಣ ಈ ಸ್ಥಳದಲ್ಲಿ ಬಾರ್ ನಡೆಸಲು ಅನುಮತಿ ನೀಡಬಾರದು ಎಂದರು.

ಪ್ರತಿಭಟನೆಯಲ್ಲಿ ಪ.ಪಂ ಉಪಾಧ್ಯಕ್ಷ ತೋಫಿಕ್, ಸದಸ್ಯರಾದ ಅಬ್ದುಲ್ ಖುದ್ದೂಸ್, ತಾಹಿರಾ ಬೇಗಂ, ಸುಣ್ಣದ ಬೀದಿ ಮಹಿಳಾ ಸಂಘದ ಅಧ್ಯಕ್ಷೆ ನಾಜೀರಾ ರಹೀಂ,ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಸ್ಯ ಕಬೀರ್ ಅಹಮದ್, ಮುಸ್ಲಿಂ ಮುಖಂಡರಾದ ಸರ್ವರ್ ಪಾಷಾ, ಅಬ್ದುಲ್ ಹನೀಫ್, ಇಬ್ರಾಹಿಂ, ಅಜ್ಗರ್ ಪಾಷಾ, ಜಮೀಲಾ, ಹಾಜಿರಾ ಬಿ, ಜಬೀನ್ ತಾಜ್, ನಾಜಿಯಾಬಾನು, ರುಕ್ಸಾನಾಬಾನು, ಜಹೇದಾ ಬಾನು,ನುಸ್ರತ್ ಸೇರಿದಂತೆ ಇತರರು ಇದ್ದರು.

ಬಾರ್ ಗಾಗಿ ಕೋಗಾಡಿದ ಸದಸ್ಯರು:
: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಹೆಚ್. ಸಿ ವೇದಾ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಾರ್ ಬೇಡವೆಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಬಾರ್ ಗಳನ್ನು ಎತ್ತಂಗಡಿ ಮಾಡಿಸುತ್ತಿದ್ದರೆ ಪ.ಪಂ. ಸಾಮಾನ್ಯ ಸಭೆಯಲ್ಲಿ
ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬಾರ್ ಒಂದಕ್ಕೆ ಲೈಸೆನ್ಸ್ ನೀಡಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯರು ಪಟ್ಟು ಹಿಡಿದು ಕುಳಿತರು.
ಈ ಬೆಳವಣಿಗೆ ಯಾವ ಮಟ್ಟಕ್ಕೆ ನಡೆಯಿತೆಂದರೆ ಸದಸ್ಯರು ಎದ್ದು ನಿಂತು ಬಾರ್ ಬೇಕೇಬೇಕು ಬಾರಿಗೆ ಲೈಸೆನ್ಸ್ ನೀಡಲೇಬೇಕೆಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಈ ವಿಚಾರವನ್ನು ಚರ್ಚೆ ಮಾಡಿ ಮುಂದಿನ ಸಭೆಯಲ್ಲಿ ತಿಳಿಸುವುದಾಗಿ ಅಧ್ಯಕ್ಷೆ ವೇದ ಮನವಿ ಮಾಡಿದರೂ ಸಹ ಈ ಕ್ಷಣದಲ್ಲಿ ಈ ವಿಚಾರ ತೀರ್ಮಾನವಾದ ಬೇಕೆಂದು ಪಟ್ಟು ಹಿಡಿದರು.

ಪಟ್ಟಣದಲ್ಲಿ ಅಭಿವೃದ್ಧಿಯಾಗದ ಬಹಳಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ಎಂದೂ ಗಂಭೀರ ಚರ್ಚೆ ನಡೆಸದ ಸದಸ್ಯರು. ಬಾರ್ ಲೈಸೆನ್ಸ್ ಬೇಕೆಂದು ಹಠ ಹಿಡಿದು ಕುಳಿತಿದ್ದ ಸದಸ್ಯರ ನಿಲುವು ಹಲವಾರು ಅನುಮಾನ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಬಾರ್ ಗಾಗಿ ಕೋಗಾಡಿದ ಸದಸ್ಯರು
ಜಯಮ್ಮ, ಲಿಂಗರಾಜು, , ಹರೀಶ್, ಧರ್ಮ, ಸಂತೋಷ್, ಅರುಣ್ ನಾಯಕ, ಬಿ ಪಿ ರಾಣಿ.

ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಾರ್ ನಡೆಸಲು ಅನುಮತಿ ನೀಡಬಾರದೆಂದು ಸದಸ್ಯರಾದ ಸಾರ್ವಜನಿಕರ ಪರವಾಗಿ ದೂರು ನೀಡಿದ್ದರು ಆದರೆ ಪಟ್ಟಣ ಪಂಚಾಯತಿಯ ಸಾಮಾನ್ಯಸಭೆಯಲ್ಲಿ ಉಲ್ಟಾ ಹೊಡೆದಿರುವುದು ಇವರುಗಳು ಮಾಲೀಕರಿಂದ ಹಣ ಪಡೆದಿದ್ದಾರೆ ಹಾಗಾಗಿ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂಬುದು ಜನರಲ್ಲಿ ಚರ್ಚೆಯಾಗುತ್ತಿದೆ ನೀರಿಗಾಗಿ ಜನರಿಗಾಗಿ ಚರ್ಚೆಯಲ್ಲಿದೆ

.

Address

Mahavir Circle, Near Old Bustand
Hassan
573201

Alerts

Be the first to know and let us send you an email when Bheema Vijaya News ಭೀಮ ವಿಜಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Bheema Vijaya News ಭೀಮ ವಿಜಯ ನ್ಯೂಸ್:

Videos

Share


Other Media/News Companies in Hassan

Show All

You may also like