12/11/2022
*ಮಕ್ಕಳ ಹಕ್ಕುಗಳ ರಕ್ಷಣೆಗೆ ಹೋರಾಟಕ್ಕಿಳಿದ ಮಾಜಿ ಶಾಸಕ ರಾಜಣ್ಣ*
ಅಡ್ಡಿಗಳನ್ನು ಮೀರಿ ಮಕ್ಕಳಿಗೆ ಆಟದ ಮೈದಾನ ಉಳಿಸಿದ ಹೋರಾಟಗಾರ*
ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಇಂಡಿಯನ್ ಜಿಮ್‌ಖಾನಾ ಕ್ಲಬ್‌ಗೆ (ಐಸಿಜಿ) ಗುತ್ತಿಗೆ ಆಧಾರದಲ್ಲಿ ಬೆಂಗಳೂರಿನ ಕೋಕ್ಸ್ ಟೌನ್‌ನಲ್ಲಿ ನೀಡಿದ್ದ 3 ಎಕರೆ ಭೂಮಿಯನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಿದೆ. ಇದು ಭಾರತಿನಗರ ಕ್ಷೇತ್ರದ ಮಾಜಿ ಶಾಸಕರಾದ ಎನ್ ರಾಜಣ್ಣನವರ ದಶಕಗಳ ಹೋರಾಟಕ್ಕೆ ಸಂದ ಫಲವಾಗಿದೆ. ರಾಜಣ್ಣ ಅವರು ಏಕಾಂಗಿಯಾಗಿ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ಮುಂದಿನ ತಲೆಮಾರುಗಳಿಗೆ ಆಟದ ಮೈದಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
2010ರಲ್ಲಿ ಆಗಿನ ರಾಜ್ಯ ಸರ್ಕಾರ ಒಟ್ಟಾರೆ 4 ಎಕರೆ 21 ಗುಂಟೆ ಭೂಮಿಯನ್ನು ಐಜಿಸಿಗೆ ವಾರ್ಷಿಕ 60,000 ರೂಪಾಯಿಗಳ ಮೊತ್ತಕ್ಕೆ ಗುತ್ತಿಗೆ ನೀಡುವ ನಿರ್ಧಾರ ಕೈಗೊಂಡಿತು. ಆ ಸಂದರ್ಭದಲ್ಲಿ ಈ ನಿರ್ಧಾರವನ್ನು ಮಾಜಿ ಶಾಸಕ ರಾಜಣ್ಣನವರು ಸೂಕ್ತ ಹಾದಿಯಾದ ಕಾನೂನು ಸಮರವನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಬಿಬಿಎಂಪಿ ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿರುತ್ತಿತ್ತು. ಅವರು ಕೈಗೊಂಡ ಕಾನೂನು ಹೋರಾಟದ ಪರಿಣಾಮವಾಗಿ ಹೈಕೋರ್ಟ್ 2018ರಲ್ಲಿ ಆ ಭೂಮಿಯನ್ನು ಮರಳಿ ಪಡೆಯಲು ಆದೇಶಿಸಿತು.
ಈ ಕತೆ 1932ರಲ್ಲಿ ಐಜಿಸಿಗೆ 4 ಎಕರೆ 21 ಗುಂಟೆ ಭೂಮಿಯನ್ನು ಅದರ ಪ್ರತಿಷ್ಠಿತ ಕ್ಲಬ್ ನಿರ್ಮಾಣಕ್ಕೆ ಒದಗಿಸಿದಾಗ ಆರಂಭವಾಯಿತು. ಕ್ಲಬ್ ಅನ್ನು 1 ಎಕರೆ 8 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿ, 3 ಎಕರೆ 13 ಗುಂಟೆ ಭೂಮಿಯನ್ನು ಖಾಲಿ ಬಿಡಲಾಗಿತ್ತು.
1932ರಿಂದ 2008ರ ಅವಧಿಯಲ್ಲಿ ಕ್ಲಬ್ಬಿನ ಗುತ್ತಿಗೆಯನ್ನು 5 ಬಾರಿ ನವೀಕರಿಸಲಾಯಿತು. ಆದರೆ 2010ರಲ್ಲಿ ಬಿಬಿಎಂಪಿ ಕೇವಲ 1 ಎಕರೆ 8 ಗುಂಟೆ ಜಾಗವನ್ನು ಗುತ್ತಿಗೆಗೆ ನೀಡಿ, ಇನ್ನುಳಿದ ಭೂಮಿಯನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಾಗ ಸಮಸ್ಯೆಗಳು ಆರಂಭವಾದವು. ಆಗಿನ ರಾಜ್ಯ ಸರ್ಕಾರ ಆ ಸಂಪೂರ್ಣ ಭೂಮಿಯನ್ನು ಮುಂದಿನ 35 ವರ್ಷಗಳ ಅವಧಿಗೆ ವಾರ್ಷಿಕ 60,000 ರೂಗಳ ಮೊತ್ತಕ್ಕೆ ಗುತ್ತಿಗೆ ನೀಡುವಂತೆ ಸೂಚಿಸಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣನವರು ಈ ವಿಚಾರದಲ್ಲಿ ಪ್ರವೇಶಿಸಿದರು. ಅವರು ತಕ್ಷಣವೇ ವಿಚಾರವನ್ನು ಉಪ ಲೋಕಾಯುಕ್ತರ ಗಮನಕ್ಕೆ ತಂದು, ಈ ಗುತ್ತಿಗೆಯ ವಿರುದ್ಧ ದೂರು ದಾಖಲಿಸಿದರು.
"ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ತೆರೆದ ಖಾಲಿ ಜಾಗವನ್ನು ಕ್ರೀಡಾಂಗಣವನ್ನಾಗಿ ಉಳಿಸಬೇಕು ಎಂದು ಭಾವಿಸಿದ್ದೆ. ಈ ವಿಚಾರದಲ್ಲಿ ಸಾಕಷ್ಟು ತಪ್ಪುಗಳು ನಡೆದಿದ್ದವು. ಇದರ ಕುರಿತಾದ ಕೂಲಂಕಷ ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು 1 ಎಕರೆ 8 ಗುಂಟೆ ಭೂಮಿಯನ್ನು ವಾರ್ಷಿಕ 1,46,36,60 ರೂಗಳಿಗೆ ಗುತ್ತಿಗೆ ನೀಡಬೇಕು ಎಂದು ವರದಿ ಸಲ್ಲಿಸಿದರು. ರಾಜ್ಯ ಸರ್ಕಾರ ಈ ವರದಿಯನ್ನು ಜಾರಿಗೆ ತರಲು ನಿರ್ಧರಿಸಿ, ಅದರ 2010ರ ಆದೇಶವನ್ನು ಮಾರ್ಪಡಿಸಿ, ಬಿಬಿಎಂಪಿ ಬಯಸಿದಂತೆ ಕೇವಲ 1 ಎಕರೆ 8 ಗುಂಟೆ ಭೂಮಿಯನ್ನು ಗುತ್ತಿಗೆಗೆ ನೀಡಲು ನಿರ್ಧರಿಸಿತು. ಆದರೆ ಕ್ಲಬ್ ಈ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈ ಕೋರ್ಟ್‌ಗೆ ತೆರಳಿತು. ಹೈ ಕೋರ್ಟ್ ಕ್ಲಬ್‌ಗೆ ಉತ್ತರಿಸಲು ಅವಕಾಶ ನೀಡಿ, ಬಳಿಕ ನಿರ್ಧಾತ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಕ್ಲಬ್ 2017ರಲ್ಲಿ ಮತ್ತೆ ಹೈ ಕೋರ್ಟ್‌ಗೆ ತೆರಳಿ ವಸತಿ ಇಲಾಖೆ, ಯುಡಿಡಿ ಮತ್ತು ಬಿಬಿಎಂಪಿಗಳ ಹಸ್ತಕ್ಷೇಪವನ್ನು ಪ್ರಶ್ನಿಸಿತು. 2018ರಲ್ಲಿ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಅವರು ಈ ವಿಚಾರವನ್ನು ಕೊನೆಗೊಳಿಸಿ, ರಾಜ್ಯ ಸಚಿವ ಸಂಪುಟಕ್ಕೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಅದಾದ ಬಳಿಕವೂ ಯಥಾಸ್ಥಿತಿ ಮುಂದುವರಿಯಿತು. ಅದಾದ ನಾಲ್ಕು ವರ್ಷಗಳ ಬಳಿಕ ಸರ್ಕಾರ ಆ ಭೂಮಿಯನ್ನು ಮರಳಿ ಪಡೆದು, ಅದನ್ನು ಆಟದ ಮೈದಾನ ಎಂದು ಘೋಷಿಸಲು ನಿರ್ಧರಿಸಿತು" ಎನ್ನುತ್ತಾರೆ ರಾಜಣ್ಣ.
ಆಟದ ಮೈದಾನದ ರಕ್ಷಣೆಗೆ ಕ್ರಮ ಕೈಗೊಂಡ ನ್ಯಾಯಾಂಗವನ್ನು ಶ್ಲಾಘಿಸುತ್ತಾ, ರಾಜಣ್ಣನವರು ಹೈ ಕೋರ್ಟ್ ತನ್ನ ಆದೇಶದ ಪಾಲನೆಯ ಕುರಿತಾಗಿ ಗಂಭೀರವಾಗಿರುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತಾಯಿತು ಎಂದರು.
"ನವೆಂಬರ್ 2021ರಲ್ಲಿ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಯಾವೆಲ್ಲ ಸಾರ್ವಜನಿಕ ಭೂಮಿಯಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ ಎಂಬ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಕರ್ನಾಟಕ ಪಾರ್ಕ್, ಆಟದ ಮೈದಾನ, ಹಾಗೂ ತೆರೆದ ಜಾಗಗಳ ಸಂರಕ್ಷಣಾ ಕಾನೂನಿನ ಅನ್ವಯ ಅಲ್ಲಿ ಯಾವುದೇ ಕಟ್ಟಡಗಳ ನಿರ್ಮಾಣ ಕೈಗೊಳ್ಳುವಂತಿಲ್ಲ. ಬಿಬಿಎಂಪಿ ನೀಡಿದ ವರದಿಯೇ ಮುಖ್ಯ ನ್ಯಾಯಮೂರ್ತಿಗಳಿಗೆ ಸರ್ಕಾರಕ್ಕೆ ಆದೇಶ ನೀಡಲು ಸಾಕಾಯಿತು. ಅವರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರು. ಆದ್ದರಿಂದ ಸರ್ಕಾರದ ಬಳಿ ಆದೇಶವನ್ನು ಪಾಲಿಸುವುದನ್ನು ಹೊರತುಪಡಿಸಿ ಬೇರೆ ಯಾವ ಮಾರ್ಗವೂ ಇರಲಿಲ್ಲ. ನಾನು 1993ರಿಂದಲೂ ಈ ಭೂಮಿಯನ್ನು ಉಳಿಸುವ, ಅದನ್ನು ಆಟದ ಮೈದಾನವನ್ನಾಗಿಸುವ ಪ್ರಯತ್ನ ಫಲ ನೀಡಿತು" ಎನ್ನುತ್ತಾರೆ ರಾಜಣ್ಣ.
ಅವರು ಈ ವಿಚಾರಕ್ಕಾಗಿ ಇಷ್ಟೊಂದು ಕೆಲಸ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದಾಗ, ರಾಜಣ್ಣ ವ್ಯಕ್ತಿತ್ವದ ಸಂಪೂರ್ಣ ಅಭಿವೃದ್ಧಿಗೆ ಶಕ್ತ ದೇಹ ಮತ್ತು ಶಕ್ತ ಮನಸ್ಸು ಬೇಕು. ಅದಕ್ಕಾಗಿ ಮಕ್ಕಳು ಪ್ರತಿದಿನವೂ ಕನಿಷ್ಠ ಎರಡು ಗಂಟೆಗಳ ಕಾಲ ಆಟೋಟ ನಡೆಸಬೇಕು. ಅದಕ್ಕಾಗಿ ಅವರಿಗೆ ಆಟದ ಮೈದಾನಗಳ ಅಗತ್ಯವಿದೆ. ಎಲ್ಲ ಖಾಲಿ ಜಾಗಗಳಲ್ಲೂ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಇದರ ಹಿಂದೆ ನನಗೆ ಬೇರೆ ಯಾವ ಉದ್ದೇಶವೂ ಇಲ್ಲ ಎನ್ನುತ್ತಾರೆ ರಾಜಣ್ಣ.
ಓರ್ವ ಶಾಸಕನಾಗಿ ರಾಜಣ್ಣ ಉದ್ಯಾನವನ, ಆಟದ ಮೈದಾನಗಳ ನಿರ್ಮಾಣದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿದ್ದರು. ಮಿಲ್ಟನ್ ರಸ್ತೆಯ ಉದ್ಯಾನ, ಮಾರುತಿ ಸೇವಾ ನಗರ ವಾರ್ಡ್ ಆಟದ ಮೈದಾನ, ಜೀವನಹಳ್ಳಿ, ಐಟಿಸಿ ಕಾಲನಿ ಆಟದ ಮೈದಾನ, ಮರ್ಫಿ ಟೌನ್ ಆಟದ ಮೈದಾನ, ಹಂಟಿಂಗ್ ಕಾಲನಿ ಪಾರ್ಕ್ ಅವರ ಕೊಡುಗೆಗಳಾಗಿವೆ.