14/12/2022
ಚಂದಾವರದ ಸಂಕ್ಷಿಪ್ತ ಇತಿಹಾಸ
ಚಂದಾವರವು ಉ.ಕ ಜಿಲ್ಲೆಯ ಹೊನ್ನಾವರ ತಾಲೂಕಾ ಕೇಂದ್ರದಿAದ ಉತ್ತರಕ್ಕೆ ೧೮ ಕಿ.ಮೀ. ಮತ್ತು ಕುಮಟಾದಿಂದ ೮ ಕಿ.ಮೀ. ಪೂರ್ವಕ್ಕೆ ಇರುವ ಒಂದು ಪ್ರಾಚೀನ ಐತಿಹಾಸಿಕ ಅವಶೇಷಗಳಿಂದ ಕೂಡಿದ ಗ್ರಾಮವಾಗಿದೆ. ಮೊದಲು ಬನವಾಸಿ ಕದಂಬರು ಹಾಗೂ ನಂತರ ಗೋವಾ ಕದಂಬರ ಸಾಮಂತರು ಇಲ್ಲಿ ಅನೇಕ ಶತಮಾನಗಳವರೆಗೆ ಆಳ್ವಿಕೆ ನಡೆಸಿದರು. ಕ್ರಿ.ಶ ೧೦೬೪ ರಲ್ಲಿ ಕಾಮದೇವನು ಚಂದಾವರವನ್ನು ಚಂದ್ರಿಕಾಪುರ ಎಂಬ ಹೆಸರಿನಲ್ಲಿ ಕೋಟೆಯನ್ನು ನಿರ್ಮಿಸಿಕೊಂಡು ರಾಜ್ಯದ ಆಳ್ವಿಕೆ ನಡೆಸಿದ್ದನು. ಈಗಲೂ ಚಂದಾವರದ ಕೇಂದ್ರ ಭಾಗದಲ್ಲಿ ಒಂದು ಕೋಟೆ ಇದೆ. ಇದು ೯ ಎಕರೆ ವಿಸ್ತೀರ್ಣ ಹೊಂದಿದ್ದು ಸುತ್ತಲೂ ಆಳವಾದ ಕಂದಕಗಳನ್ನು ಹೊಂದಿದೆ. ಕೋಟೆೆಯ ಗೋಡೆಯನ್ನು ಕೆಂಪು ಹಾಗೂ ಶಿಲೆಕಲ್ಲಿನಿಂದ ನಿರ್ಮಿಸಲಾಗಿದೆ. ಕೋಟೆಯ ಒಳಗಡೆ ಎರಡು ಬಾವಿಗಳು, ಒಂದು ಕೆರೆ ಹಾಗೂ ಅರಮನೆಯ ಅವಶೇಷಗಳಿವೆ. ರಾಜನ ಅಂಗರಕ್ಷಕ ಪಡೆಯು ಕುದುರೆ ಲಾಯ ಹಾಗೂ ನೀರುಣಿಸಲು ಕೆರೆ ಹೊಂದಿತ್ತು. ಕೋಟೆಯ ಪೂರ್ವಕ್ಕೆ ದೊಡ್ಡ ಹೆಬ್ಬಾಗಿಲು ಇದೆ. ಕೋಟೆಯ ದಕ್ಷಿಣಕ್ಕ್ಕೆ ಸುಮಾರು ೨೫ ಎಕರೆ ಸಮತಟ್ಟಾದ ರಣಬೈಲು(ರಣರಂಗ) ಇತ್ತು. ಕೋಟೆಯ ಆಸು ಪಾಸು ೧ ಕಿ.ಮೀ. ವ್ಯಾಪ್ತಿಯಲ್ಲಿ ಸೈನಿಕರಿಗೆ ವಸತಿ ಹಾಗೂ ಕುದುರೆಗಳಿಗೆ ನೀರಿನ ವ್ಯವಸ್ಥೆಯ ದೊಡ್ಡ ದೊಡ್ಡ ಕೆರೆಗಳು ಇದ್ದವು. ಅಂಗಡಿಹೊಳೆಯ ಪೂರ್ವಕ್ಕೆ ಆರೆಂಟು ಕಿಮೀ ವಿಸ್ತೀರ್ಣದಲ್ಲಿ ಆಂಗಡಿಗಳ ಸಾಲು ಮತ್ತು ಜನವಸತಿ ಇದ್ದ ಅನೇಕ ಅವಶೇಷಗಳಿವೆ.
ಇಲ್ಲಿ ದೊರೆತಿರುವ ಶಿಲಾಶಾಸಗಳು ಇಲ್ಲಿಯ ಪ್ರಸಿದ್ಧ ಅರಸುಗಳ ಬಗ್ಗೆ ತಿಳಿಸುವುದು. ಗಣಪತಿ ದೇವಸ್ಥಾನದ ಹತ್ತಿರ ದೊರಕಿರುವ ಶಿಲಾಶಾಸನÀವು ಕ್ರಿ.ಶ. ೧೨೨೨ ರಲ್ಲಿ ಮಹಾಮಂಡಲೇಶ್ವರ ತ್ರಿಭುವನ ಮಲ್ಲ ಕದಂಬನು ಚಂದ್ರಿಕಾಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದನು ಎಂಬುದನ್ನು ತಿಳಿಸುತ್ತದೆ. ಇದು ಕಾವದೇವರಸನ ಬಿರುದಾಗಿತ್ತು. ಕ್ರಿ.ಶ. ೧೨೫೫ ರಲ್ಲಿ ಗೋಕರ್ಣದಲ್ಲಿ ದೊರೆತ ತಾಮ್ರ ಶಾಸನವು ಕಾವದೇವರಸ ಎಂಬ ರಾಜನು ಚಂದಾವರವನ್ನು ಆಳುತ್ತಿದ್ದನು ಎಂದು ತಿಳಿಸುತ್ತದೆ. ಇವನ ರಾಜ್ಯವು ಶರಾವತಿಯಿಂದ ಗಂಗಾವಳಿ ನದಿಯ ದಕ್ಷಿಣದ ಪ್ರದೇಶವನ್ನು ಒಳಗೊಂಡಿತ್ತು. ಇವನ ಉತ್ತರಾಧಿಕಾರಿ ಬೀರದೇವನ ಕಾಲದಲ್ಲಿ ನಾರಾಯಣ ಚಂದಾವರ ಇವನ ಪ್ರಧಾನ ಮಂತ್ರಿಯಾಗಿದ್ದನು. ಅವನು ಯೋಗ ನರಸಿಂಹ ಎಂಬ ತನ್ನ ಮನೆ ದೇವರಿಗೆ ಧೇವಸ್ಥಾನ ಕಟ್ಟಸಿ ಸಾಕಸ್ಟು ಭೂಮಿಯನ್ನು ದತ್ತಿ ನೀಡಿದನು. ಅದು ಈಗಿನ ಈಶ್ವರ ದೇವಾಲಯವಾಗಿದೆ. ರಣಮಾಸ್ತಿ ದೇವಸ್ಥಾನದ ಹತ್ತಿರ ಇರುವ ಶಿಲಾಶಾಸನವು ಕಾವದೇವರಸನ ಆಳ್ವಿಕೆಯ ೨ನೇ ವರ್ಷದಲ್ಲಿ ನಡೆದ ಯುದ್ಧದಲ್ಲಿ ಕಾವದೇವರಸನ ಸೇನಾಧಿಪತಿ ಕಪಾಲಿವೀರನು ಯುದ್ಧದಲ್ಲಿ ಮರಣ ಹೊಂದಿದನು, ಮತ್ತು ಅವನ ಪ್ರೇಯಸಿ ಬೆಂಕಿ ಕುಂಡದಲ್ಲಿ ಹಾರಿ ಸ್ವರ್ಗಸ್ಥಳಾದಳು. ಮುಂದೆ ಅವಳೇ ಕೆಂಡದ ಮಾಸ್ತಿ ದೇವಿಯಾಗಿ ಪೂಜಿಸಲ್ಪಟ್ಟಿದೆ. ಕೋಟೆಯ ಹತ್ತಿರ ಇರುವ ಕೋಟೆಮಕ್ಕಿಯಲ್ಲಿ ಲಕ್ಷೇಶ್ವರ ದೇವಾಲಯ ಹಾಗೂ ಚಾಲುಕ್ಯರ ಕಾಲದ ಪಾರ್ಶ್ವನಾಥ ಮೂರ್ತಿ ಇದೆ. ಮುಂದೆ ಗೇರುಸೊಪ್ಪೆ ಸೈನ್ಯದೊಂದಿಗೆ ದಂಡನಾಯಕನಾದ ಕೋಮಾರÀರಾಮ (ರಾಮನಾಥÀ) ಮಡಿದನು ಈ ಯುದ್ಧದಲ್ಲಿ ಅವನ ಪ್ರೇಯಸಿಯೂ ರಣರಂಗದಲ್ಲಿ ವೀರಾವೇಶದಿಂದ ಕಾದಾಡಿ ಮಡಿದಳು. ಅವಳೆÉÃ ಮುಂದೆ ರಣಮಾಸ್ತಿ ದೇವಿಯಾದಳು.ಈಗ ಅವಳು ಮಡಿದ ಸ್ಥಳದಲ್ಲಿ ರಣಮಾಸ್ತಿ ಗುಡಿ ಇದೆ. ಕೋಟೆಯ ಹೊರಗಡೆ ದೊರಕಿರುವ ಒಂದು ವೀರ ಗಲ್ಲು ಶಾಸನವು (ಶೂಲದಬೀರ) ಬೀರ ದೇವನ ದಂಡಯಾತ್ರೆಯ ಕುರಿತು ವಿವರಿಸುತ್ತದೆ. ಬೀರ ದೇವನು ಚಂದ್ರಗುತ್ತಿ ದೊರೆ ಮಲ್ಲದೇವನ ಜೊತೆಗೆ ನಡೆದ ಕಾಳಗದಲ್ಲಿ ದಂಡನಾಯಕ ಸಾಮೆನಾಯಕ (ಕರ ವಸೂಲಿ ಮಾಡುವ ಅಧಿಕಾರಿ) ಮತ್ತು ನಾರಾಣ ಸಂಧಿವಿಗ್ರಹಿ ಇವರು ವೀರ ಮರಣ ಹೊಂದಿದರು ಎಂದು ವಿವರಿಸುತ್ತದೆ. ದೇವರಸ ನಾಯಕ ಇಲ್ಲಿ ಆಳಿದ ಕೊನೆಯ ದೊರೆ ಆಗಿದ್ದನು.
ಚಂದ್ರಿಕಾಪರವು ಮುಂದೆ ಕ್ರಿ.ಶ ೧೬೦೬ ರವರೆಗೆ ಗೇರುಸೊಪ್ಪ ದೊರೆಗಳ ವಶದಲ್ಲಿತ್ತು. ಈ ಅವಧಿಯಲ್ಲಿ ಇಲ್ಲಿ ಚಂದ್ರಸೇನ ಎಂಬ ಅರಸÀ ಆಳಿದ್ದರಿಂದ ಇದು ಚಂದಾವರ ಎಂದು ಕರೆಯಲ್ಪಟ್ಟಿತು. ಕ್ರಿ.ಶ ೧೬೦೬ ರಲ್ಲಿ ಕೆಳದಿ ಅರಸನು ಇದನ್ನು ವಶಪಡಿಸಿಕೊಂಡನು, ಇವನು ಭಕ್ತಿಪಂಥದÀ ನಾಮಧಾರಿಗಳನ್ನು ಮೇಲು ಕೋಟೆಯಿಂದ ಕರೆಸಿಕೊಂಡು ಸೈನ್ಯಕ್ಕೆ ಸೇರಿಸಿಕೊಂಡನು. ಕೆಳದಿ ಅರಸರು ೧೬೭೦ರ ದಶಕದಲ್ಲಿ ಇಲ್ಲಿಯ ಹನುಮಂತ ದೇವಾಲಯವನ್ನು ಹೊಸದಾಗಿ ನಿರ್ಮಿಸಿ ಈಗಿನ ಸವಾರಿ ಮೂರ್ತಿಯನ್ನು ಶ್ರೀ ಸಮರ್ಥ ರಾಮದಾಸರಿಂದ ಪ್ರತಿಷ್ಠಾಪಿಸಿಸಲಾಯಿತು. ಆ ವೇಳೆ ಛತ್ರಪತಿ ಶಿವಾಜಿ ಮಹಾರಾಜರು ಈ ದೇವಾಲಯಕ್ಕೆ ಬೇಟಿಕೊಟ್ಟಿದುದು ಒಂದು ಮಹತ್ವದ ಘಟನೆ. ಮುಂದೆ ಕೆಲವು ಕಾಲ ಚಂದಾವರವು ಸೋದೆ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬಿಜಾಪುರ ಸುಲ್ತಾನರ ದಾಳಿಯಾಗಿ ಅವರ ವಶಕ್ಕೆ ಹೋಯಿತು. ಕೊನೆಗೆ ಮಿರ್ಜಾನ ಕೋಟೆಯ ಅರಸನಾದ ಸರ್ಪಮಲ್ಲಿಕನ ವಶಕ್ಕೆ ಈ ಪ್ರದೇಶ ಹೋಯಿತು. ಇವನು ಹಿಂದುಗಳ ಧಾರ್ಮಿಕ ಆಚರಣೆಗೆ ಅಡ್ಡಿಯಾಗುವಂತೆ ಮಾಡಿದನು. ಚಂದಾವರದ ಮಾರುಗೇರಿಯಲ್ಲಿ ನಡೆಯುವ ಮಾರಿ ಜಾತ್ರೆಯನ್ನು ಬೇರೆಡೆಗೆ ವರ್ಗಾಯಿಸಲಾಯಿತು. ಇಲ್ಲಿಯ ರಾಮನಾಥನ ಮೂರ್ತಿಯನ್ನು ಮಾಡಗೇರಿಗೆ ಒಯ್ದು ಪತ್ರಿಷ್ಠಾಪಿಸಲಾಯಿತು. ದೇವರಸÀನಾಯ್ಕನ ವಿಗ್ರಹವನ್ನು ಅಳ್ವೆಕೋಡಿಗೆ ವರ್ಗಾಯಿಸಲಾಯಿತು. ಅಂಸಳ್ಳಿಯಲ್ಲಿರುವ ಗುರುಮಠವನ್ನು ಸಿರ್ಸಿ ಹತ್ತಿರದ ಸೋಂದಾಕ್ಕೆ ವರ್ಗಾಯಿಸಲಾಯಿತು.
ಮುಂದೆ ಇದು ಟಿಪ್ಪು ಸುಲ್ತಾನ ದಾಳಿಗೆ ತುತ್ತಾಗಿ ಅವನ ಅಲ್ಪ ಕಾಲದ ಆಡಳಿತ ಹೊಂದಿತ್ತು.(೧೭೮೪-೯೯) ಈ ಅವಧಿಯಲ್ಲಿ ಮದನಷಾಹ ಎಂಬ ದರ್ಗಾ ನಿರ್ಮಾಣವಾಯಿತು. ಸೇಂಟ್ ಫ್ರಾನ್ಸಿಸ್ ಜೇವಿಯರ್ ಎಂಬ ಮತ ಪ್ರಚಾರಕ ಗೋವಾದಿಂದ ಲಕ್ಷ ದ್ವೀಪಕ್ಕೆ ಹೋಗುವಾಗ ಇಲ್ಲಿ ಸುಮಾರು ೧೦ ದಿವಸ ವಾಸವಾಗಿದ್ದನು. ಕ್ರಿ.ಶ ೧೭೪೦ ರ ಆಸು-ಪಾಸು ಅವನು ಇಲ್ಲಿಯ ನಾಮಧಾರಿಗಳನ್ನು ಮತ್ತು ಪರಿಶಿಷ್ಠ ವರ್ಗದವರನ್ನು ಕ್ರೆöÊಸ್ತರನ್ನಾಗಿ ಮತಾಂತರ ಮಾಡಿದನು. ಅವನÀ ಗೌರವಾರ್ತ ಕ್ರಿ.ಶ ೧೮೭೪ ರಲ್ಲಿ ಸೆಂಟ್ ಪ್ರಾನ್ಸಿಸ್ ಜೇವಿಯರ್ ಚರ್ಚ ನಿರ್ಮಾಣವಾಯಿತು ಮತ್ತು ಈ ಚರ್ಚನಲ್ಲಿ ಸಂತ್ ಪ್ರಾನ್ಸಿಸ್ ಜೇವಿಯರನ ಉಗುರನ್ನು ರಕ್ಷಿಸಿ ಇಡಲಾಗಿದೆ.ಪ್ರತಿ ವರ್ಷ ಡಿಸೆಂಬರ್ ೩ ಮತ್ತು ೪ ರಂದು ಇಲ್ಲಿ ದೊಡ್ಡ ಪ್ರಮಾಣದ ಫೆಸ್ತ ಆಚರಣೆ ಆಗುತ್ತದೆ. ಸುಮಾರು ೫೦,೦೦೦ ದಿಂದ ಒಂದು ಲಕ್ಷ ಜನ ಸೇರುತ್ತಾರೆ. ಎಲ್ಲಾ ಧರ್ಮೀಯರು ಇದರಲ್ಲಿ ಪಾಲ್ಗೊಳ್ಳುವುದು ಒಂದು ವಿಶೇಷ.
ಹಿಂದುಗಳು ಪ್ರತಿವರ್ಷ ಅಕ್ಷಯ ತದಿಗೆಯಂದು ಬಂಡಿ ಹಬ್ಬ ಆಚರಿಸುವರು. ಮಾಸ್ತಿವೇಷ ಈ ಹಬ್ಬದ ಒಂದು ವಿಶೇಷ, ಚಂದಾವರ ಹಳ್ಳ (ಚಂದ್ರಪ್ರಭಾ)ದ ಉತ್ತರ ಭಾಗದಲ್ಲಿ ಮಲ್ಲಾಪುರ ಎಂಬ ಮಜಿರೆ ಇದೆ. ಕ್ರಿ.ಶ ೧೩೮೨ರ ಮಲ್ಲಾಪುರ ಗಣಪತಿ ದೇವಸ್ಥಾನದ ಹತ್ತಿರದ ಶಾಸನದ ಪ್ರಕಾರ ಇದನ್ನು ಮಲ್ಲಿನಾಥಪುರವೆಂದು ಕರೆಯುತ್ತಿದ್ದರು. ಇದು ರಾಜರ ಆಡಳಿತ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು ಇಲ್ಲಿ ಸಾರಸ್ವತ ಬ್ರಾಹ್ಮಣರು ವಾಸವಾಗಿದ್ದು ಆಡಳಿತದಲ್ಲಿ ದೊಡ್ಡ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಹಾಗೂ ಯಜ್ಞಯಾಗಾದಿ ಗಳನ್ನು ನಡೆಸುತ್ತಿದ್ದರು. ಇಲ್ಲಿ ಚಿತ್ರಾಪುರ ಗುರುಮಠದ ಶಾಖೆ ಇದ್ದು ಇಲ್ಲಿ ನಾಲ್ಕನೆಯ ಗುರುಗಳ ಸಮಾಧಿ ಇದೆ. ಇದಲ್ಲದೆ ಗೋಪಾಲಕೃಷ್ಣ ದತ್ತಾತ್ರಯ ಮತ್ತು ಗಣಪತಿ ದೇವಾಲಯಗಳಿವೆ.
ಈಗ ಚಂದಾವರದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರೆöÊಸ್ತರು ಕೂಡಿ ಸಹಬಾಳ್ವೆ ನಡೆಸುತ್ತಿದ್ದಾರೆ. ಒಮ್ಮೆ ನೋಡಿ ಬನ್ನಿ ನಮ್ಮ ಚೆಂದದ ಚಂದಾವರವನ್ನು.
ಶ್ರೀ ಎನ್.ಎಸ್.ನಾಯ್ಕ (ಚಂದಾವ ನಿವೃತ್ತ ಮುಖ್ಯಾದ್ಯಾಪಕರು ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ