ಹಾಲುಮತ ಮಹಾಸಭಾ ಪತ್ರಿಕೆ

  • Home
  • India
  • Belgaum
  • ಹಾಲುಮತ ಮಹಾಸಭಾ ಪತ್ರಿಕೆ

ಹಾಲುಮತ ಮಹಾಸಭಾ  ಪತ್ರಿಕೆ ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅದುವೆ ಹಾಲುಮತ ಮಹಾಸಭಾದ ಪತ್ರಿಕೆ.

ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅವನೇ ಹಾಲುಮತ ಮಹಾಸಭಾದ ಪತ್ರಿಕೆ.
ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮನೆಯಲ್ಲಿ ಕುರುಬರ ಸಂಸ್ಕೃತಿ, ಆಚಾರ-ವಿಚಾರ, ಇತ್ತೀಚಿನ ವಿದ್ಯಮಾನಗಳು, ಕಾನೂನು ಸಲಹೆ, ಕಂಕಣ ಭಾಗ್ಯ, ಹೆಚ್ಚಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಬಂಧುಗಳ ಕೊಂಡಿಯಾಗಿ ಮಾರ್ಪಟ್ಟಿದ್ದು ತನ್ನದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಲು ಯಶಸ್ವಿಯಾಗಿದೆ ಇದಕ್ಕೆ ಕಾರಣರಾದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳು.
ನಿಮ್ಮ ಬರಹ/ಅನಿಸಿಕೆ/ಸೂಚನೆ/ಸಲಹೆಗಳಿಗೆ ಸ್ವಾಗತ.

21/08/2023

"ಬಡವರಿಗಾಗಿ ನಾವು ಏನೂ ಮಾಡದೆ ಹೋದರೆ ಅವರ ಬಿಸಿಯುಸಿರಿನಲ್ಲಿ ಸುಟ್ಟು ಹೋಗುತ್ತೇವೆ."

"ಶೇ‌ 10 ರಷ್ಟು ಇರುವ ಮೇಲ್ವರ್ಗದ ಜನ ಕೈ ಕಟ್ಟಿ ಕುಳಿತರೆ ಯಾವ ಅನಾಹುತವೂ ಆಗುವುದಿಲ್ಲ. ಆದರೆ ಈ ದುಡಿಮೆಗಾರರೆಲ್ಲ ಒಂದು ವರ್ಷ ಕೈ ಕಟ್ಟಿ ಕುಳಿತರೆ ಇಡೀ ಸಮಾಜ ಸತ್ತು ಹೋಗುತ್ತದೆ. ಆದುದ್ದರಿಂದ ದುಡಿಯುವ ವರ್ಗಕ್ಕೆ ಸಲ್ಲಬೇಕಾದ ಗೌರವ,ಪ್ರತಿಫಲ ನೆಮ್ಮದಿಯನ್ನು ಒದಗಿಸಿಕೊಡದಿದ್ದರೆ ಸರಕಾರಗಳು ಯಾತಕ್ಕಾದರೂ ಇರಬೇಕು"

- ದೇವರಾಜ ಅರಸು

20/08/2023
16/08/2023

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಅವರ ಹೆಸರು ಸ್ವಾತಂತ್ರ್ಯದ ಕಿಚ್ಚನ್ನು ದೇದೀಪ್ಯಮಾನವಾಗಿಸುವಂತದ್ದು. ಅವರು ಬ್ರಿಟಿಷರ ವಿರುದ್ಧ ಕಿತ್ತೂರಿನಲ್ಲಿ ನಡೆದ ದಂಗೆಯ ನೇತಾರರು.

ಸಂಗೊಳ್ಳಿ ರಾಯಣ್ಣ ಜನಿಸಿದ್ದು 1798 ವರ್ಷದ ಆಗಸ್ಟ್ 15ರಂದು ಎಂದು ಉಲ್ಲೇಖಗಳಿವೆ.

ಕಿತ್ತೂರು ಸಂಸ್ಥಾನಕ್ಕೆ ಸೇರಿದ್ದ ಸಂಗೊಳ್ಳಿ ಗ್ರಾಮದವರಾಗಿದ್ದ ರಾಯಣ್ಣ ಕಿತ್ತೂರು ದೇಸಾಯಿಗಳ ಸಶಸ್ತ್ರ ಅನುಚರರಾಗಿದ್ದರು ಹಾಗೂ ಸೈನ್ಯದಿಂದ ಹಲವು ಎಕರೆ ಜಮೀನನ್ನು ಗುತ್ತಿಗೆ ಮೇಲೆ ಪಡೆದಿದ್ದ ರೈತರಾಗಿದ್ದರು. ರಾಯಣ್ಣ ಕಿತ್ತೂರು ಸಂಸ್ಥಾನದ ಸಾಮಾನ್ಯ ಪ್ರಜೆ. ಸಂಗೊಳ್ಳಿ ಗ್ರಾಮದ ತಳವಾರಿ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಚೆನ್ನಮ್ಮ ದಂಗೆ ಎದ್ದಾಗ ಅದರಲ್ಲಿ ಭಾಗವಹಿಸಿದ್ದ ಐದು ಸಾವಿರ ಸಶಸ್ತ್ರ ಹೋರಾಟಗಾರರಲ್ಲಿ ಆಗಿನ್ನೂ 29 ವರ್ಷದವನಾಗಿದ್ದ ಸಂಗೊಳ್ಳಿ ರಾಯಣ್ಣ ಕೂಡ ಒಬ್ಬರಾಗಿದ್ದರು.

ಕಿತ್ತೂರು ಬಂಡಾಯ ಹತ್ತಿಕ್ಕಲ್ಪಟ್ಟಾಗ ರಾಯಣ್ಣ ಬಂಧಿತರಾಗಿದ್ದರು. 1826ರಲ್ಲಿ ಎಲ್ಲ ಬಂಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದಾಗ ರಾಯಣ್ಣ ಕೂಡ ಹೊರಬಂದಿದ್ದರು. ಬೈಲಹೊಂಗಲದಲ್ಲಿ ಚೆನ್ನಮ್ಮರನ್ನು ಸೆರೆಯಲ್ಲಿಟ್ಟಿದ್ದಾಗ ತಾನು ಆಕೆಯ ದೂರದ ಸಂಬಂಧಿ ಎಂಬ ನೆಪದಲ್ಲಿ ಸಂಗೊಳ್ಳಿ ರಾಯಣ್ಣ ಆಕೆಯನ್ನು ಜೈಲಿನಲ್ಲಿ ಭೇಟಿ ಕೂಡ ಆಗಿದ್ದರು. ಕಿತ್ತೂರನ್ನು ಮತ್ತೆ ತಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂಬ ಕಿಚ್ಚು ಅವರಲ್ಲಿ ಹುಟ್ಟಿದ್ದೇ ಚೆನ್ನಮ್ಮರನ್ನು ಜೈಲಿನಲ್ಲಿ ಕಂಡಿದ್ದರಿಂದ.

ಸಂಗೊಳ್ಳಿ ರಾಯಣ್ಣ ಹಲವಾರು ದೇಶಬಾಂಧವರೊಡನೆ ಅಹೋರಾತ್ರಿ ಹೋರಾಡಿ ಇತರರಂತೆ ಕಾರಾಗೃಹವಾಸ ಅನುಭವಿಸಿ ಬಿಡುಗಡೆಯಾಗಿದ್ದರು. ಸ್ಥಳೀಯ ಕುಲಕರ್ಣಿಯ ಕುತಂತ್ರದಿಂದಾಗಿ ರಾಯಣ್ಣನ ಅರ್ಧ ಜಮೀನು ಖಬ್ಜವಾದರೆ ಇನ್ನುಳಿದ ಅರ್ಧ ಜಮೀನಿನ ಮೇಲೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಕಂದಾಯವನ್ನು ವಿಧಿಸಿತು.

ಹೀಗೆ ಶ್ರೀಮಂತರ ಪಾಳೇಗಾರಿಕೆ ಮತ್ತು ಅದರ ಜೊತೆಗೆ ಕೈಜೋಡಿಸಿ ಬಡಜನರರಿಗೆ ಬದುಕು ಅಸಾಧ್ಯ ಮಾಡಿ ತಮ್ಮ ದರ್ಪದ ಅಧಿಕಾರ ನಡೆಸುತ್ತಿದ್ದ ಬ್ರಿಟಿಷರ ಕೃತ್ಯದಿಂದ ರಾಯಣ್ಣ ಕ್ರೋಧಗೊಂಡರು. ಜೊತೆಗೆ ಚೆನ್ನಮ್ಮರ ದರ್ಶನದಿಂದ ಕಿತ್ತೂರಿನ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸುವ ಉದಾತ್ತ ಧ್ಯೇಯ ಇವರ ದೇಶಾಭಿಮಾನವನ್ನು ಮತ್ತೊಮ್ಮೆ ಬಡಿದೆಬ್ಬಿಸಿತು.

ಬ್ರಿಟಿಷರ ವಿರುದ್ಧ ಹೋರಾಡಲು ಶೂರಸಾಹಸಿಗಳ ಗುಂಪು ಕಟ್ಟಿಕೊಂಡು ಬಂಡಾಯವೆಬ್ಬಿಸಿ, ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಗದ್ದುಗೆಗೆ ಏರಿಸುವ ಸಾಹಸಕೃತ್ಯಕ್ಕೆ ರಾಯಣ್ಣ ಕೈಹಾಕಿದರು. ಹೀಗೆ ಕಿತ್ತೂರಿನಲ್ಲಿ ಬ್ರಿಟಿಷ್ ಸರ್ಕಾರದ ಇರವನ್ನು ಧಿಕ್ಕರಿಸುವ ಪ್ರಯತ್ನಮಾಡಿದರು. ಸೈನ್ಯಸಹಾಯವಿಲ್ಲದ ಕಾರಣ ಇವರು ಕೂಟಯುದ್ಧಕ್ಕಿಳಿದರು. ಮೊದಲು ಖಾನಾಪುರದಲ್ಲಿ ನೆಲೆಸಿದ್ದ ಮೇಜರ್ ಪಿಕ್ಕರಿಂಗ್‍ನ ಸೈನ್ಯದ ಮೇಲೆ ದಾಳಿಮಾಡಿದರು; ಅಲ್ಲಿಯ ಸರ್ಕಾರಿ ಕಚೇರಿಯನ್ನು ಸುಟ್ಟರು. ಹಗಲು ಹೊತ್ತನ್ನು ಕಾಡಿನಲ್ಲಿ ಕಳೆದು, ರಾತ್ರಿ ವೇಳೆ ತಮ್ಮ ಅನೇಕ ಯೋಧರೊಡನೆ ಬ್ರಿಟಿಷರ ಠಾಣೆಗಳ ಮೇಲೆ ಎರಗುತ್ತಿದ್ದರು. ದಿನೇ ದಿನೇ ಇವರ ಸಹಚರರು ವರ್ಧಿಸುತ್ತಿದ್ದರು. ಸುಮಾರು ಇಡೀ ಕಿತ್ತೂರು ಸಂಸ್ಥಾನದ ಪ್ರಜೆಗಳೆಲ್ಲ ಇವರ ಬೆಂಬಲಿಗರಾಗಿದ್ದರು. ಮೋಸದಿಂದ ಬ್ರಿಟಿಷರ ಪಕ್ಷ ವಹಿಸುವವರನ್ನು ನಿರ್ದಾಕ್ಷಿಣ್ಯವಾಗಿ ಕೊನೆಗಾಣಿಸುತ್ತಿದ್ದರು.

ಸಂಗೊಳ್ಳಿ ರಾಯಣ್ಣ ಅವರ ಕಾರ್ಯದಿಂದ ಬೆಚ್ಚಿದ ಬ್ರಿಟಿಷ್ ಅಧಿಕಾರಿಗಳು ರಕ್ಷಣೆಗಾಗಿ ಸೈನ್ಯಸಹಾಯ ಪಡೆಯಬೇಕಾಯಿತು. ಸರ್ಕಾರಿ ಅಧಿಕಾರಿಗಳು ಇವರನ್ನು ಹಿಡಿಯಲು ಬೆನ್ನುಹತ್ತಿದರೂ ಇವರು ನುಣುಚಿಕೊಳ್ಳುತ್ತಿದ್ದರು. ಇವರು ಖಾನಾಪುರದಿಂದ ನಡೆದು ಅನಂತರ ಸಂಪಗಾಂವದ ಮೇಲೆ ದಾಳಿ ಮಾಡಿದರು. ಅಲ್ಲಿನ ಖಜಾನೆಯನ್ನು ಸೂರೆಮಾಡಿ ಹಲವು ಹಳ್ಳಿಗಳ ಮೇಲೂ ಎರಗಿ ಧನಸಂಗ್ರಹಮಾಡಿ, ಬ್ರಿಟಿಷರ ನಿಗ್ರಹಕ್ಕೆ ಹಗಲಿರುಳೂ ಪ್ರಯತ್ನಿಸಿದರು.

1830ರ ಜನವರಿ 5ರಂದು ಬಿಡಿ ಗ್ರಾಮದಲ್ಲಿದ್ದ ಸರ್ಕಾರಿ ಕಛೇರಿಗೆ ಬೆಂಕಿ ಹಚ್ಚುವ ಮೂಲಕ ತನ್ನ ಹೋರಾಟವನ್ನು ರಾಯಣ್ಣ ಪ್ರಾರಂಭಿಸಿದಾಗ ಅಂದು ಅವರೊಂದಿಗೆ ಇದ್ದವರ ಸಂಖ್ಯೆ ಕೇವಲ ನೂರು. ಆದರೆ ನಾಲ್ಕು ತಿಂಗಳ ನಂತರ ಏಪ್ರಿಲ್ 8ರಂದು ರಾಯಣ್ಣನವರ ಬಂಧನವಾದಾಗ ಆತನೊಂದಿಗೆ ಒಂದು ಸಾವಿರ ಬಂಡಾಯಗಾರರಿದ್ದರು. ಈ ಅಂಶವನ್ನು ಧಾರವಾಡದ ಕಲೆಕ್ಟರ್ ಆಗಿದ್ದ ನಿಸ್ಬೆಟ್‌ರವರು ತಮ್ಮ ಪತ್ರದಲ್ಲಿ ದಾಖಲಿಸಿದ್ದಾರೆ. ಮುಂದೆ ಈ ಒಂದು ಸಾವಿರ ಜನರೊಂದಿಗೆ ಸಂಗೊಳ್ಳಿ ರಾಯಣ್ಣ ಖಾನಪುರಕ್ಕೆ ಬೆಂಕಿ ಹಚ್ಚಿ ಅಲ್ಲಿ ಕೊಳ್ಳೆ ಹೊಡೆದು ಶಮ್‌ಶೇರ್‌ಗಡ್‌ಗೆ ಹಿಂದಿರುಗಿದರು. ಅಂದು ಮೂರು ಸಾವಿರ ಜನ ಸೇರಿಕೊಂಡರು. ಹೀಗೆ ರಾಯಣ್ಣನವರ ನಾಯಕತ್ವದ ಸಶಸ್ತ್ರ ಹೋರಾಟದಲ್ಲಿ ಜನರನ್ನು ಸಜ್ಜುಗೊಳಿಸಲಾಯಿತು. ಈ ಸೈನ್ಯ ನಡೆಸಿದ ಹಲವಾರು ದಾಳಿಗಳಿಗೆ ಸರ್ಕಾರಿ ಆಸ್ತಿಗಳು, ಭೂಕಂದಾಯ ದಾಖಲೆಗಳು ಗುರಿಯಾದವಲ್ಲದೇ, ಬ್ರಿಟಿಷ್ ಆಡಳಿತದಡಿ ಕುಪ್ರಸಿದ್ಧ ಭೂಮಾಲೀಕರು ಮತ್ತು ಅಧಿಕಾರಿಗಳು ಜನರಿಂದ ವಸೂಲಿ ಮಾಡಿದ್ದ ಹಣವನ್ನೂ ಹಿಂದೆ ಪಡೆಯಲಾಗಿತ್ತು. ಇಂತಹ ಪ್ರಕ್ರಿಯೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುತ್ತಿದ್ದರಲ್ಲದೇ, ಪ್ರತಿ ದಾಳಿಯ ನಂತರ ಅಲ್ಲಿನ ಜನ ರಾಯಣ್ಣನವರ ಸೈನ್ಯವನ್ನು ಸೇರುತ್ತಿದ್ದರು.

ರಾಯಣ್ಣನವರ ಸಶಸ್ತ್ರ ಸಂಗ್ರಾಮಕ್ಕೆ ಜನ ಸಮುದಾಯದ ಅಪಾರ ಬೆಂಬಲವಿತ್ತಲ್ಲದೆ, ಆತನ ಚಲನವಲನದ ಬಗ್ಗೆ ಯಾವ ಮಾಹಿತಿಯನ್ನೂ ಸರ್ಕಾರದ ದೂತರಿಗೆ ನೀಡದಂತೆ ಇತರ ಅನುಚರರೂ ಸಹಕರಿಸಿದ್ದರು.

ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ವ್ಯಾಪಿಸಿದ ಕಿತ್ತೂರು ಭೂಪ್ರದೇಶವನ್ನು ರಾಯಣ್ಣ ತಮ್ಮ ಗೆರಿಲ್ಲಾ ಯುದ್ಧಕ್ಕೆ ಸೂಕ್ತವಾಗಿ ಬಳಸಿಕೊಂಡರು. ಮಲೆನಾಡಿನ ಕಾಡುಗಳಂತೂ ರಾಯಣ್ಣನವರ ಸೈನ್ಯಕ್ಕೆ ಭದ್ರಕೋಟೆಯಂತಾಯಿತು. ಜನ ವಿರೋಧಿಗಳಾಗಿದ್ದ ಭೂಮಾಲಿಕರು, ಅಧಿಕಾರಿಗಳು ಮತ್ತು ವಸಾಹತುಶಾಹಿ ಸೈನ್ಯವನ್ನು ಮಾತ್ರ ರಾಯಣ್ಣ ಗುರಿಯಾಗಿಟ್ಟಿದ್ದರಿಂದ ಅವರಿಗೆ ಅಪಾರ ಬೆಂಬಲ ಸಿಕ್ಕಿತ್ತು. ಈ ಕಾರಣದಿಂದಾಗಿಯೇ ರಾಯಣ್ಣನವರನ್ನು ಯುದ್ಧದ ಮೂಲಕ ಮುಗಿಸಲಾಗುವುದಿಲ್ಲವೆಂದು ಅರಿತ ಸರ್ಕಾರ, ಅವರನ್ನು ಮೋಸದಿಂದಲೇ ಸೆರೆ ಹಿಡಿಯುವ ಸಂಚು ರೂಪಿಸಿತು. ಇದಕ್ಕೆ ಭೂಮಾಲೀಕರ ಮತ್ತು ದುಷ್ಟ ಅಧಿಕಾರಿಗಳ ಬೆಂಬಲ ಸಿಕ್ಕಿತು.

ರಾಯಣ್ಣನವರ ಸೈನ್ಯ ಸೇರಿ ಒಳಗಿಂದಲೇ ಈ ರೈತ ಸಂಗ್ರಾಮವನ್ನು ನಾಶ ಮಾಡುವ ಜವಾಬ್ದಾರಿಯನ್ನು ಅಮಲ್ದಾರ ಕೃಷ್ಣರಾವ್‌ ಎಂಬಾತನಿಗೆ ಬ್ರಿಟಿಷ್ ಆಡಳಿತ ವಹಿಸಿತು. ಖುದ್ನಾಪುರದ ಪಟೇಲ ಲಿಂಗಣ್ಣ ಗೌಡ ತಾನೂ 300ಜನರೊಂದಿಗೆ ರಾಯಣ್ಣನ ಸೈನ್ಯ ಸೇರುವುದಾಗಿ ಸೂಚಿಸಿದ. ಇದಕ್ಕೆ ರಾಯಣ್ಣ ಒಪ್ಪಿ ಮಾರ್ಚ್ ತಿಂಗಳ ಹದಿನೈದು ದಿನಗಳ ಕಾಲ ಲಿಂಗಣ್ಣ ಗೌಡ ಎಲ್ಲ ಗೆರಿಲ್ಲಾ ಕಾರ್ಯಾಚರಣೆಗಳಲ್ಲಿ ತಾನೂ ಭಾಗವಹಿಸಿದ. ಸ್ಟೋಕ್ಸ್ ದಾಖಲಿಸಿರುವಂತೆ, "ಒಂದು ದಿನ, ರಾಯಣ್ಣ ತನ್ನ ಶಶ್ತ್ರಾಸ್ತ್ರಗಳನ್ನು ಬದಿಗಿಟ್ಟು ಸ್ನಾನ ಮಾಡುತ್ತಿದ್ದ. ಆಗ ನೇಗಿನಹಾಳದ ಸನಾದಿ ಲಕ್ಕಪ್ಪ ಎಂಬಾತ ಇದ್ದಕ್ಕಿದ್ದಂತೆ ರಾಯಣ್ಣನ ಮೇಲೆರಗಿ ಅವನನ್ನು ಬಂಧಿಸಿದ. ಅದೇ ವೇಳೆಗೆ ಇತರರು ಅವನ ಶಸ್ತ್ರಾಸ್ತ್ರಗಳನ್ನು ಕಟ್ಟಿ ಹಾಕಿ ಆತನನ್ನು ಧಾರವಾಡಕ್ಕೆ ಕರೆತಂದರು."

ರಾಯಣ್ಣನನ್ನು ಬಂಧಿಸಲು ಸಹಾಯ ಮಾಡಿದ್ದಕ್ಕೆ ಕೃಷ್ಣ ರಾವ್‌ಗೆ ನಗದು ಬಹುಮಾನ ನೀಡಲಾಯಿತು. ರೈತರ ಸಂಗ್ರಾಮಕ್ಕೆ ದ್ರೋಹ ಬಗೆದ ಭೂಮಾಲಿಕರಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಅವರೆಲ್ಲರಿಗೆ ಮುನ್ನೂರು ರೂಪಾಯಿಗಳ ನಗದು ಸೇರಿದಂತೆ ಇಡೀ ಹಳ್ಳಿಗಳನ್ನೇ ಇನಾಮಾಗಿ ನೀಡಿತು ಬ್ರಿಟಿಷ್ ಸರ್ಕಾರ. ಲಿಂಗಣ್ಣ ಗೌಡನಿಗೆ ಕಿತ್ತೂರು ಸಮೀಪದ ಕಲೊಲಿ ಗ್ರಾಮ ದಕ್ಕಿದರೆ, ಯೆಂಕನ ಗೌಡನಿಗೆ ಧಾರವಾಡದ ಹತ್ತಿರದ ಧೋಂ ಗ್ರಾಮ ದಕ್ಕಿತು. ಆದರೆ ರಾಯಣ್ಣ ಮತ್ತು ಸಂಗಡಿಗರಿಗೆ ಸಿಕ್ಕಿದ್ದು ಮರಣದಂಡನೆ!

ಈ ರೀತಿ ಬ್ರಿಟಿಷ್ ಸರ್ಕಾರ, ಕಪಟ ಜಾಲವೊಡ್ಡಿ, ದೇಶದ್ರೋಹಿಗಳ ಸಹಾಯದಿಂದ ರಾಯಣ್ಣನನ್ನು ಸೆರೆಹಿಡಿದು, ವಿಚಾರಣೆಗೊಳಪಡಿಸಿತು. ವಿಶೇಷ ನ್ಯಾಯಾಲಯ ಇವರನ್ನು ತಪ್ಪಿತಸ್ಥನೆಂದು ಘೋಷಿಸಿತು. ಇವರ ಕಾರ್ಯಕ್ಷೇತ್ರಗಳಲ್ಲಿ ಮುಖ್ಯವಾಗಿದ್ದ ನಂದಗಡದಲ್ಲಿ ಇವರನ್ನು 1831ರ ಜನವರಿ 26ರಂದು ಗಲ್ಲಿಗೇರಿಸಲಾಯಿತು.

ಸಂಗೊಳ್ಳಿ ರಾಯಣ್ಣ ತಮ್ಮ ಕಾರ್ಯದಲ್ಲಿ ಹೆಚ್ಚು ಕಾಲ ಸಫಲರಾಗದಿದ್ದರೂ ಬ್ರಿಟಿಷರ ಗುಲಾಮನಾಗಿ ಬಾಳುವುದಕ್ಕಿಂತ ಅವರೊಡನೆ ಹೋರಾಡಿ ವೀರಸ್ವರ್ಗವನ್ನು ಹೊಂದುವುದೇ ಮೇಲೆಂದು ಭಾವಿಸಿದ್ದವರು. ಕಿತ್ತೂರಿನ ರಾಣಿ ಚೆನ್ನಮ್ಮರ ವೀರಕಥೆಯಂತೆ ಸಂಗೊಳ್ಳಿ ರಾಯಣ್ಣನವರ ದೇಶಾಭಿಮಾನವೂ ಹಲವು ಜನಪದ ಗೀತೆಗಳಿಗೆ ವಸ್ತುವಾಗಿದೆ.

(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.)

ಸಹಬಾಳ್ವೆ, ಸಹಜೀವನ
16/08/2023

ಸಹಬಾಳ್ವೆ, ಸಹಜೀವನ

15/08/2023
Jai rayanna
15/08/2023

Jai rayanna

ಹೌದಲ್ಲವೇ? ಅರ್ಥವಾಡಿಕೊಳ್ಳಿರಿ...
05/11/2021

ಹೌದಲ್ಲವೇ? ಅರ್ಥವಾಡಿಕೊಳ್ಳಿರಿ...

ಕುರಿಗಾರರ ಪರವಾಗಿ ಧನ್ಯವಾದಗಳು..ಸೋಮಣ್ಣ ಮಲ್ಲೂರ ಮೌರ್ಯಸಂಪಾದಕರು, ಹಾಲುಮತ ಮಹಾಸಭಾ ಪತ್ರಿಕೆ
26/10/2021

ಕುರಿಗಾರರ ಪರವಾಗಿ ಧನ್ಯವಾದಗಳು..
ಸೋಮಣ್ಣ ಮಲ್ಲೂರ ಮೌರ್ಯ
ಸಂಪಾದಕರು, ಹಾಲುಮತ ಮಹಾಸಭಾ ಪತ್ರಿಕೆ

ಕನಕಗುರುಪೀಠ ಪೂಜ್ಯರಿಗೆ ಪಿತೃ ವಿಯೋಗ. #ಹಾಲುಮತ_ಮಹಾಸಭಾ_ಪತ್ರಿಕೆಚಿತ್ರದುರ್ಗ: ಆ.15 ಕಾಗಿನೆಲೆ ಕನಕ ಗುರುಪೀಠದ ಶ್ರೀ  #ಸಿದ್ದರಾಮಾನಂದಪುರಿ ಮಹ...
15/08/2021

ಕನಕಗುರುಪೀಠ ಪೂಜ್ಯರಿಗೆ ಪಿತೃ ವಿಯೋಗ.
#ಹಾಲುಮತ_ಮಹಾಸಭಾ_ಪತ್ರಿಕೆ
ಚಿತ್ರದುರ್ಗ: ಆ.15 ಕಾಗಿನೆಲೆ ಕನಕ ಗುರುಪೀಠದ ಶ್ರೀ #ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ ಅವರ ಪೂರ್ವಾಶ್ರಮದ ಪಿತೃಗಳಾದ ಪೂಜ್ಯ ಕಲಮರಹಳ್ಳಿ ಮಹಾದೇವಪ್ಪ (72) ನವರು ಆಗಸ್ಟ್.15_ರ ಸ್ವಾತಂತ್ರ್ಯ ದಿನೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಿಸಿದ ದಿನದಂದು ಶಿವೈಕ್ಯರಾದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಮಹಾದೇವಪ್ಪ ಅವರು ಹೃದಯಾಘಾತದಿಂದ ಭಾನುವಾರ ಶಿವೈಕ್ಯರಾಗಿದ್ದು ಪತ್ನಿ ಜಯಮ್ಮ, ಮಕ್ಕಳಾದ ಶ್ರೀಧರ್, ಪ್ರದೀಪಕುಮಾರ್, ರೂಪ ಅವರನ್ನು ಹಾಗೂ ತಂಗಿ, ತಮ್ಮ, ಅಣ್ಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಕಲಮರಹಳ್ಳಿಯಲ್ಲಿ ಸೋಮವಾರ (ಆಗಷ್ಟ ೧೬) ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು ಆಗಮಿಸಿವ ದುಃಖ ತಪ್ತರು ಕೋವಿಡ್ ನಿಯಮಗಳನ್ನು ಪಾಸಿಲಿ ಮಾಸ್ಕ್ ಧರಿಸಿ ಬರಬೇಕು ಎಂದು ವಕೀಲರಾದ ಪುತ್ರ ಪ್ರದೀಪ್ ಮನವಿ ಮಾಡಿದ್ದಾರೆ.
ಶ್ರೀ #ಸಿದ್ದರಾಮಾನಂದ ಮಹಾಸ್ವಾಮೀಜಿ ಅವರು ಪ್ರಸ್ತುತ ತಿಂಥಿಣಿ ಹಾಗೂ ಬೆಂಗಳೂರು ಹೊಸಕೋಟೆ ಶಾಖಾಮಠದ ಪೀಠಾಧಿಪತಿಗಳಾಗಿದ್ದಾರೆ. ಮಹಾದೇವಪ್ಪ ಅವರ ನಿಧನಕ್ಕೆ #ಹಾಲುಮತ_ಮಹಾಸಭಾದ ರಾಜ್ಯಾಧ್ಯಕ್ಷರಾದ #ರುದ್ರಣ್ಣ ಗುಳಗುಳಿ, ಮಾಧ್ಯಮ ಕಾರ್ಯದರ್ಶಿ #ಸೋಮಣ್ಣ ಮಲ್ಲೂರ ಮೌರ್ಯ ಸೇರಿದಂತೆ ರಾಜ್ಯದ ನಾನಾ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಸಂತಾಪ: ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಅವರು ಮಹಾದೇವಪ್ಪ ಅವರ ದರ್ಶನ ಪಡೆದು ಗೌರವ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ, ಬಂಧುಗಳು, ಇತರರು ಹಾಜರಿದ್ದರು.
ಕೃಪೆ ಸುದ್ದಿವಾಣಿ.ಕಾಂ.

ನಮ್ಮ ಶಕ್ತಿ ಸಾಮರ್ಥ್ಯ ನಾವೇ ಮರೆತರೆ ಹೇಗೆ?ಸೋಮಣ್ಣ ಮಲ್ಲೂರ ಸಂಪಾದಕರು, ಹಾಲುಮತ ಮಹಾಸಭಾ ಪತ್ರಿಕೆ
07/08/2021

ನಮ್ಮ ಶಕ್ತಿ ಸಾಮರ್ಥ್ಯ ನಾವೇ ಮರೆತರೆ ಹೇಗೆ?
ಸೋಮಣ್ಣ ಮಲ್ಲೂರ ಸಂಪಾದಕರು, ಹಾಲುಮತ ಮಹಾಸಭಾ ಪತ್ರಿಕೆ

07/08/2021

ಕುರುಬ ಕುಲಭಾಂದವರೇ ಇನ್ನಾದರೂ ಬದಲಾಗೋಣ ಇಲ್ಲದಿದ್ದರೆ......
#ಹಾಲುಮತ_ಮಹಾಸಭಾ_ಪತ್ರಿಕೆ
#ಸೋಮಣ್ಣ ಮಲ್ಲೂರ ಮೌರ್ಯ

ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಇಗಾಗಲೇ ಎಲ್ಲರೂ ತಿಳಿದುಕೊಂಡಿದ್ದೆವೆ.... ದಯವಿಟ್ಟು ರಾಜ್ಯ ಹಾಗೂ ಕೇಂದ್ರ ಮಟ್ಟದ ಎಲ್ಲಾ ಕುರುಬ ಸಂಘಗಳು, ಕುರುಬ ರಾಜಕೀಯ ನಾಯಕರುಗಳು ಎಲ್ಲರೂ ಪಕ್ಷಭೇದ ಮರೆತು ಸಂಘಟನೆಯಾಗಬೆಕಾಗಿದೆ. ಇಲ್ಲದಿದ್ದರೆ.. ಅನ್ಯರು ನಮ್ಮನ್ನು ನಮ್ಮ ಭವಿಷ್ಯದ ಪೀಳಿಗೆಗಳನ್ನು ಶೋಷಣೆ ಮತ್ತು ಮೂಲೆ ಗುಂಪು ಮಾಡುವುದರಲ್ಲಿ ಎರಡು ಮಾತಿಲ್ಲ... ಈಗಾಗಲೇ ಎಲ್ಲಾ ಪಕ್ಷಗಳಲ್ಲಿಯೂ ನಮ್ಮವರು ವಯೊವೃದ್ದರಾಗುತ್ತಿದ್ದಾರೆ..‌ ಆದ್ದರಿಂದ ನಮ್ಮ ಕುಲದಿಂದ ನಮ್ಮ ಕುರುಬ ಸಮಾಜಮುಖಿ ಕಾರ್ಯಗಳನ್ನು ಮಾಡುವ ಯುವಪಿಳಿಗೆಯು ರಾಜಕೀಯ ಅಖಾಡಕ್ಕೆ ಇಳಿಯಬೇಕು... ಹಾಗೆಯೇ ನಮ್ಮ ಸಮಾಜದ ವ್ಯಕ್ತಿಗಳು ಯಾವುದೇ ಪಕ್ಷದಲ್ಲಿ ನಿಂತರೂ ನಮ್ಮವರ ಮತ ನಮ್ಮವರಿಗೇ ಮೀಸಲಾದಾಗ ಮಾತ್ರ ನಾವು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಬಲ ಹೊಂದಲು ಸಾಧ್ಯ..... ಕುರುಬ ಜನ ಸಂಖ್ಯೆ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬೇರೆ ಸಮುದಾಯದವರಿಗೆ ಬಿಟ್ಟು ಕೊಡಬಾರದು. ಆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷವು ಕುರುಬರಿಗೆ ಟಿಕೆಟ್ ಕೊಡಲಿಲ್ಲವಾದರೆ ನಮ್ಮ ಕುರುಬರು ಪಕ್ಷೇತರರಾಗಿ ಸ್ಪರ್ಧಿಸಿ ಅವರನ್ನು ನಾವು ಒಗ್ಗಟ್ಟಿನಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಗೆಲ್ಲಿಸಬೇಕು. ಇಲ್ಲಿ ಯಾವುದೇ ವ್ಯಕ್ತಿಯ ಭವಿಷ್ಯ ಅಥವಾ ಅವರ ರಾಜಕೀಯ ಪಕ್ಷ ಮುಖ್ಯವಲ್ಲ. ಇಲ್ಲಿ ನಮಗೆ ನಮ್ಮ ಕುರುಬರನ್ನು ಒಗ್ಗಟ್ಟಿನಿಂದ ಗೆಲ್ಲಿಸುವುದೇ ಮುಖ್ಯ ಮತ್ತು ಮಾನದಂಡವಾಗಬೇಕು. ಯೋಚಿಸಿ ಮುಂಬರಲಿರುವ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮುನ್ನುಗ್ಗೊಣ... ನಮ್ಮವರು ನಮಗಾಗಿ‌... ಇನ್ನಾದರೂ ಅನ್ಯರನ್ನು ಅಜ್ಞಾನಿಗಳಾಗಿ ಕುರುಡರಂತೆ ಹಿಂಬಾಲಿಸುವದನ್ನು ಬಿಟ್ಟು ನಡೆಯಬೇಕು.....🙏🏻🙏🏻🙏🏻🙏🏻

ಕುರುಬ ಸಮಾಜವು ಪ್ರತಿ ವಿಷಯಕ್ಕೂ ಹೋರಾಟ, ಪಾದಯಾತ್ರೆ ಮಾಡಿ ಪಡೆಯುವ ಸ್ಥಿತಿ ಬಂದಿದೆ.
ಕಾರಣ ಜಾತಿ ಅಭಿಮಾನವಿಲ್ಲದ ಸ್ವಾರ್ಥ ಕುರುಬ ರಾಜಕಾರಣಿಗಳು, ಅಂಧಾಭಿಮಾನದ ಹಿಂಬಾಲಕರು, ಮತದಾನದ ಮೌಲ್ಯ ಗೊತ್ತಿರದ ಕುರುಬ ಸಮಾಜದ ಅಜ್ಞಾನಿಗಳು.

15/06/2021

ಜೈ ರಾಯಣ್ಣ
#ಹಾಲುಮತ_ಮಹಾಸಭಾ
ಪ್ರಕಟನೆಗೆ ಸೋಮಣ್ಣ ಮಲ್ಲೂರ ಮೌರ್ಯ King Maker
ರಾಜ್ಯ ಮಾಧ್ಯಮ ಕಾರ್ಯದರ್ಶಿ ಹಾಲುಮತ ಮಹಾಸಭಾ(ರಿ)

ಕೊರೊನಾ ವೈರಸ್ ಸ್ವಾಭಿಮಾನಿ: ಕಾಗಿನೆಲೆ ಶ್ರೀ@ಹಾಲುಮತ_ಮಹಾಸಭಾ_ಪತ್ರಿಕೆಸಂಪಾದಕರು, ಸೋಮಣ್ಣ ಮಲ್ಲೂರ  ಮೌರ್ಯ King Maker ಮೊ-8123460108ಶಿವಮೊ...
10/06/2021

ಕೊರೊನಾ ವೈರಸ್ ಸ್ವಾಭಿಮಾನಿ: ಕಾಗಿನೆಲೆ ಶ್ರೀ
@ಹಾಲುಮತ_ಮಹಾಸಭಾ_ಪತ್ರಿಕೆ
ಸಂಪಾದಕರು, ಸೋಮಣ್ಣ ಮಲ್ಲೂರ ಮೌರ್ಯ King Maker
ಮೊ-8123460108

ಶಿವಮೊಗ್ಗ: ಕೊರೊನಾ ಸ್ವಾಭಿಮಾನಿ ಕಾಯಿಲೆ ಎಂದು ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ. ಇದೇ ವೇಳೆ ಕೊರೊನಾದ ಬಗ್ಗೆ ಅವರು ಜಾಗೃತಿ ಮೂಡಿಸಿದ್ದಾರೆ.
ಇಂದು ಸಚಿವ ಈಶ್ವರಪ್ಪನವರ 73 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೊರೊನಾ ಇತರ ಕಾಯಿಲೆ ಅಂತ ಅಲ್ಲ. ಇದು ಅತ್ಯಂತ ಸ್ವಾಭಿಮಾನಿ ಕಾಯಿಲೆಯಾಗಿದ್ದು, ನೀವು ಕೊರೊನಾದ ಬಳಿ ಹೋಗುವ ತನಕ ಅದು ನಿಮ್ಮ ಬಳಿ ಬರೋದಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್ ಸ್ವಾಭಿಮಾನಿ: ಕಾಗಿನೆಲೆ ಶ್ರೀನೀವು ಹೋಗಿ ಬೇರೆಯವರ ಹತ್ತಿರ ಅಂಟಿಸಿಕೊಂಡು ಬರುವ ತನಕ ಅದು ನಿಮ್ಮ ಬಳಿ ಬರುವುದಿಲ್ಲ. ಇದರಿಂದ ಕೊರೊನಾದಿಂದ ದೂರವಿರಬೇಕು ಎಂದರೆ, ಸಾಮಾಜಿಕ‌ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು ಎಂದರು.ಕೆಲ ಕಾಯಿಲೆಗಳು ವಾತಾವರಣ ಬದಲಾವಣೆ ಆಗುತ್ತಿದ್ದಂತೆಯೆ ನೆಗಡಿ, ಶೀತ ಬರುತ್ತದೆ. ಇದರಿಂದ ಕೊರೊನಾದಿಂದ ದೂರವಿದ್ದು , ಜಾಗೃತಿಯಿಂದ ಇರಿ ಎಂದು ಸಲಹೆ ನೀಡಿದರು.

ಕೃಪೆ

2021 ರ ಮಿಸೆಸ್ ಸೌತ್ ಇಂಡಿಯಾ I Am powerfull ಸ್ಪರ್ಧೆಗೆ ಫೆಬ್ರವರಿ 21ರಂದು ವಸಂತ ನಗರ ಶಾಂಘಿರಿಲ್ ಹೋಟೆಲ್ ನಲ್ಲಿ ನಡೆದ ಆಡಿಷನ್ ನಲ್ಲಿ 18 ...
10/06/2021

2021 ರ ಮಿಸೆಸ್ ಸೌತ್ ಇಂಡಿಯಾ I Am powerfull ಸ್ಪರ್ಧೆಗೆ ಫೆಬ್ರವರಿ 21ರಂದು ವಸಂತ ನಗರ ಶಾಂಘಿರಿಲ್ ಹೋಟೆಲ್ ನಲ್ಲಿ ನಡೆದ ಆಡಿಷನ್ ನಲ್ಲಿ 18 ರಿಂದ 55 ವಯಸ್ಸಿನ ಮಹಿಳೆಯರಿಗೆ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು, ಈ ಆಡಿಷನ್ ನಲ್ಲಿ ಆಯ್ಕೆಯಾದ ಸ್ಪರ್ದಿಗಳು ಮಿಸೆಸ್ ಸೌತ್ ಇಂಡಿಯಾ I Am powerfull ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಇಲ್ಲಿ ಗೆದ್ದವರು ಸಿಂಗಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಮುಖ್ಯವಾಗಿ ಗಮನಿಸಬೇಕಾದ ಅಂಶ ವೆಂದರೆ ಮೊಟ್ಟ ಮೊದಲ ಬಾರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕುರುಬ ಸಮಾಜದ ಮೊದಲ ಮಹಿಳೆ ಎಂಬ ಹೆಸರಿಗೆ ಪಾತ್ರವಾಗಿರುವುದು ಬೆಂಗಳೂರಿನ ಶ್ರೀಮತಿ ಶಿಲ್ಪಾ ಶಂಕರ್ ಗೌಡ / ಶಿಲ್ಪಾ ಸುಧಾಕರ್ ರವರು.
"ಸಹನೆಗೆ ಮತ್ತೊಂದು ಹೆಸರೇ ಹೆಣ್ಣು, ಪ್ರೀತಿ, ಕರುಣೆ, ಗೌರವವನ್ನು ಮುಕ್ತ ಮನಸ್ಸಿನಿಂದ ನೀಡುವಂತವಳು"
ಜೀವನದ ಎಲ್ಲಾ ರಂಗಗಳಲ್ಲಿಯೂ ತನ್ನ ಪಾತ್ರವನ್ನು ಕರ್ತವ್ಯ ಬದ್ದವಾಗಿ ನಿರ್ವಹಿಸುವಳು, ಪ್ರತಿ ರಂಗದಲ್ಲಿಯೂ ಸಮಾಜದ ಹೆಣ್ಣು ಮಕ್ಕಳು ಸಾಧನೆಯ ಸೆಲೆಯಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ.
ಆದರೆ ಇಲ್ಲಿಯವರೆಗೂ ಸೌಂದರ್ಯ ಸ್ಪರ್ಧೆಯಲ್ಲಿ ಕುರುಬ ಸಮಾಜದ ಆಸ್ತಿತ್ವವನ್ನು ಯಾರು ಸಹ ಪಡೆದಿರಲಿಲ್ಲ ಆದರೆ ಈ ಸುಸಂದರ್ಭ ವಿಜಯನಗರ ಅಂದಿನ ಬಳ್ಳಾರಿಯ ಹೊಸಪೇಟೆಯಲ್ಲಿ 18 ಸೆಪ್ಟೆಂಬರ್ 1979 ರಂದು ಶಂಕರ್ ಗೌಡ ಹಾಗೂ ಸರೋಜ ಅವರ 6 ಮಕ್ಕಳಲ್ಲಿ ಕೊನೆಯ ಮಗಳಾಗಿ ಜನಿಸಿದ ಶಿಲ್ಪಾ ರವರು ಪ್ರಾಥಮಿಕ ಹಾಗೂ ಪದವಿ ಶಿಕ್ಷಣವನ್ನು ಹೊಸಪೇಟೆಯಲ್ಲಿ ಮುಗಿಸಿ ನಂತರ ಸುಸಂಸ್ಕೃತ ಮನೆತನದ ಎ. ಬಿ ಸುಧಾಕರ್ ಅವರನ್ನು ವರಿಸಿ 2002 ರಲ್ಲಿ ಸಾಂಸಾರಿಕ ಜೀವನಕ್ಕೆ ಪ್ರವೇಶಿಸುತ್ತಾರೆ, ಇಂದು ಸುಹಾನಿ, ಪ್ರಥಮ ವರ್ಷ ಪದವಿ ಹಾಗೂ ಸಾನ್ವಿ 7ನೇ ತರಗತಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಇವರು ಮನೆಯ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಹವ್ಯಾಸಗಳ ಜಗತ್ತಿನಲ್ಲಿ ಪ್ರತಿ ನಿತ್ಯವೂ ಹೊಸ ಕಲಿಕೆಯಲ್ಲಿ ತೊಡಗುವ ಇವರು ಇಂದು ಮಿಸೆಸ್ ಸೌತ್ ಇಂಡಿಯಾ 2021 ರ ಆಡಿಷನ್ ನಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಸದ್ದಿಲ್ಲದೇ ಸಹಾಯ ಮಾಡುವ ಇವರು
ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಗುರುತಿಸಿ ಕೊಂಡಿದ್ದಾರೆ ಇವರು 2021ರ ಮಿಸೆಸ್ ಸೌತ್ ಇಂಡಿಯಾ ಹಾಗೂ 2021 ರ ಮಿಸೆಸ್ ಇಂಡಿಯಾ I Am powerfull international ನಲ್ಲಿ ಭಾರತದಿಂದ ಭಾಗವಹಿಸಿ ಜಯಗಳಿಸಿ ಸಮಾಜಕ್ಕೆ ಒಂದು ಸ್ಫೂರ್ತಿಯಾಗ ಬೇಕೆಂಬುದೇ ಸಮಸ್ತ ಕುಲ ಭಾಂದವರ ಶುಭ ಹಾರೈಕೆ
ಎಲ್ಲರೂ ಹಾರೈಸುವ ಮೂಲಕ ಪ್ರೋತ್ಸಾಹ ನೀಡೋಣ
Like, share, and comment to support us.

.gouda

TN ಶೇಷನ್ ಅವರಿಗೆ ಬುದ್ದಿ ಹೇಳಿದ ಕುರಿ ಕಾಯುವ ಹುಡುಗhttps://www.facebook.com/196031554213726/posts/1140979753052230/ನಮ್ಮನ್ನು ಬೆ...
08/06/2021

TN ಶೇಷನ್ ಅವರಿಗೆ ಬುದ್ದಿ ಹೇಳಿದ ಕುರಿ ಕಾಯುವ ಹುಡುಗ

https://www.facebook.com/196031554213726/posts/1140979753052230/

ನಮ್ಮನ್ನು ಬೆಂಬಲಿಸಲು ನಮ್ಮ ಪೇಜ್ Like ಮಾಡಲು ವಿನಂತಿಸುತ್ತೇನೆ

https://www.facebook.com/pg/somanna4u

ನಿಮ್ಮವನು
#ಸೋಮಣ್ಣ ಮಲ್ಲೂರ ಮೌರ್ಯ
ಮೊ-8123460108
*ಇಷ್ಟವಾದರೆ ಎಲ್ಲರಿಗೂ ಶೇರ್ ಮಾಡಿರಿ*

TN ಶೇಷನ್‌ ಅವರಿಗೆ ಬುದ್ದಿ ಹೇಳಿದ ಕುರಿ ಕಾಯುವ ಹುಡುಗ...
ನಿಮ್ಮವನು #ಸೋಮಣ್ಣ_ಮಲ್ಲೂರ_ಮೌರ್ಯ ಮೊ-8123460108

ಇದು ಶ್ರೀ ಟಿ.ಎನ್. ಶೇಷನ್ ಅವರು ಒಂದು ಸೆಮಿನಾರಿನಲ್ಲಿ ಹಂಚಿಕೊಂಡ ಒಂದು‌ ಅನುಭವ. ನಿಜಕ್ಕೂ ಒಂದು ಅದ್ಭುತ ಪಾಠವೂ ಹೌದು!

ಶೇಷನ್ ಅವರು ಭಾರತದ ಮುಖ್ಯ ಚುನಾವಣಾ ಅಧಿಕಾರಿಗಳಾಗಿದ್ದಾಗ, ಒಮ್ಮೆ ತಮ್ಮ‌ ಪತ್ನಿಯೊಂದಿಗೆ ಉತ್ತರ ಪ್ರದೇಶದಲ್ಲಿ ವಿಹಾರಕ್ಕೆ ಹೋಗಿದ್ದರಂತೆ. ಪ್ರಯಾಣ‌ ಮಾಡ್ತಿರೋವಾಗ, ದಾರಿಯಲ್ಲಿ ಒಂದು ದೊಡ್ಡ ಮಾವಿನ‌ ತೋಪು ಅವರ ಕಣ್ಣಿಗೆ ಬಿತ್ತು. ಆ ತೋಪಿನ‌ ತುಂಬಾ ಗುಬ್ಬಚ್ಚಿ ಗೂಡುಗಳಿದ್ದವು.

ಶೇಷನ್ ಅವರ ಪತ್ನಿ, ತಮಗೆ ಎರಡು ಗುಬ್ಬಚ್ಚಿ ಗೂಡುಗಳು ಬೇಕು ಎಂದು ಅಪೇಕ್ಷೆ ಪಟ್ಟರಂತೆ. ತಕ್ಷಣ ಅವರ ಜೊತೆ
ಬಂದಿದ್ದ ಪೋಲೀಸ್ ಪೇದೆ ಅಲ್ಲೇ ಹತ್ತಿರದಲ್ಲಿ ಕುರಿ ಕಾಯುತ್ತಿದ್ದ ಹುಡುಗನನ್ನು ಕರೆದು ಎರಡು ಗುಬ್ಬಚ್ಚಿ ಗೂಡು ತಂದುಕೊಡು, ನಿನಗೆ ೧೦ ರೂ.ಕೊಡ್ತೀನಿ‌ ಅಂದರಂತೆ. ಆದರೆ, ಆ ಹುಡುಗ ಒಪ್ಪಲಿಲ್ಲ. ಆಗ ಶೇಷನ್ ರೂ.೫೦/- ಕೊಡುವುದಾಗಿ ಹೇಳಿದರು, ಹುಡುಗ ಅದಕ್ಕೂ ಒಪ್ಪಲಿಲ್ಲ.

ಆಗ ಪೊಲೀಸ್ ಪೇದೆ, ಶೇಷನ್ ಅವರನ್ನು ತೋರಿಸಿ, ಇವರು ದೊಡ್ಡ ಅಧಿಕಾರಿ‌, ಹಾಗೆಲ್ಲ ಆಗಲ್ಲ ಎಂದು ಹೇಳಬಾರದು, ತಂದುಕೊಡು ಅಂತ ಹೇಳಿದರು. ಆ ಹುಡುಗ ಶೇಷನ್ ಅವರನ್ನು ನೋಡಿ, ಸ್ವಾಮಿ, ನೀವು ಏನೇ ಕೊಟ್ರೂ ನಾನು ಗೂಡು ತಂದುಕೊಡಲ್ಲ, ಯಾಕೆಂದ್ರೆ ಅದರಲ್ಲಿ ಮರಿ ಗುಬ್ಬಿಗಳಿವೆ. ಸಂಜೆ ಅವುಗಳ ಅಮ್ಮ ಗುಬ್ಬಿ ತನ್ನ‌ ಮರಿಗಳಿಗೆ ಆಹಾರ ತೆಗೆದುಕೊಂಡು ಬಂದಾಗ ತನ್ನ ಮರಿಗಳು ಕಾಣದೆ ಅಳುತ್ತದೆ. ಅದನ್ನು ನೋಡುವ ಚೈತನ್ಯ ನನಗಿಲ್ಲ ಅಂದನಂತೆ! ಇದನ್ನು‌ ಕೇಳಿ ಶೇಷನ್ ಮತ್ತು ಅವರ ಪತ್ನಿಗೆ ದಿಗ್ಬ್ರಮೆ ಆಯಿತಂತೆ.

ಶೇಷನ್ ಹೇಳ್ತಾರೆ, ನನ್ನ ಹುದ್ದೆ, ಐಎಎಸ್ ಎಲ್ಲ ಆ ಪುಟ್ಟ ಹುಡುಗನ‌ ಮುಂದೆ ಅವಿಯಾಗಿಬಿಡ್ತು. ಅವನೆದುರು ನಾನು ತೀರಾ ಕುಬ್ಜನಾಗ್ಬಿಟ್ಟೆ. ನಂತರ, ಆ ವಿಷಯವನ್ನು ಅಲ್ಲೇ ಕೈಬಿಟ್ಟು ಅವರು ಹಿಂದಿರುಗಿದರು.

ಶೇಷನ್ ಹೇಳ್ತಾರೆ, ಆ ಘಟನೆ ನಡೆದು ಎಷ್ಟೋ ದಿನಗಳ ನಂತರವೂ ನನ್ನನ್ನು ಅಪರಾಧಿ ಮನೋಭಾವ ಚುಚ್ಚಿ‌ಚುಚ್ಚಿ ಕಾಡ್ತಾ ಇತ್ತು. ನಮ್ಮ ಶಿಕ್ಷಣ, ಹುದ್ದೆ, ಸಾಮಾಜಿಕ ಸ್ಥಾನಮಾನ, ಇವು ಯಾವುವೂ ಮಾನವೀಯತೆಯನ್ನು ಅಳೆಯಲು ಅಳತೆಗೋಲಾಗಲ್ಲ.

ನಮಗೆ ಜ್ಞಾನ ಇರೋದು ಪ್ರಕೃತಿಯನ್ನು ಅರ್ಥ ಮಾಡ್ಕೊಳಕ್ಕೆ. ಯಾವುದಕ್ಕೂ ಸ್ಪಂದಿಸದೇ ಬರಿದೇ ಮಾಹಿತಿಗಳನ್ನು ಕಲೆ ಹಾಕುವುದರಿಂದ ಏನೂ ಪ್ರಯೋಜನವಿಲ್ಲ. ನಮ್ಮಲ್ಲಿ ಜ್ಞಾನ, ಸ್ಪಂದನೆ, ಬುದ್ಧಿವಂತಿಕೆ ಇವೆಲ್ಲವೂ ಇದ್ದರೆ ಆಗ ನಮ್ಮ‌ ಜೀವನ ನಿಜಕ್ಕೂ ಆನಂದಮಯ..
ಕೃಪೆ WhatsApp.

Address

ASUNDI SAVADATTI
Belgaum
591126

Telephone

+918123460108

Website

Alerts

Be the first to know and let us send you an email when ಹಾಲುಮತ ಮಹಾಸಭಾ ಪತ್ರಿಕೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಲುಮತ ಮಹಾಸಭಾ ಪತ್ರಿಕೆ:

Videos

Share

Category

Nearby media companies


Other Media Agencies in Belgaum

Show All

You may also like