09/09/2023
ಏಷ್ಯಾಕಪ್-2023 ಟೂರ್ನಿಯ ಸೂಪರ್-4 ಹಂತದ ಪಂದ್ಯದಲ್ಲಿಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ಅತಿಥೇಯ ಶ್.....
ಇದು ಹವ್ಯಾಸ ಅಷ್ಟೇ. ಹಾಗಂತ ವೃತ್ತಿಪರತೆಯಂ?
Banglore
Be the first to know and let us send you an email when Sports Karnataka posts news and promotions. Your email address will not be used for any other purpose, and you can unsubscribe at any time.
Send a message to Sports Karnataka:
ರೈ ನ್ಯೂಝ್.ಕಾಮ್. ಇದು ನನ್ನ ಬಹುದಿನಗಳ ಕನಸು. ಈ ಕನಸು ಈಗ ಸಾಕಾರಗೊಂಡಿದೆ. ಕಳೆದ 17 ವರ್ಷಗಳಿಂದ ಮಾಧ್ಯಮ ರಂಗದಲ್ಲಿದ್ದೇನೆ. ಈ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಆದ್ರೂ ನನ್ನತನವನ್ನು ಉಳಿಸಿಕೊಂಡಿದ್ದೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಉದಯವಾಣಿ, ಸೂರ್ಯೋದಯ ದಿನ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರನಾಗಿ ಕಾರ್ಯನಿರ್ವಹಿಸಿದ ನಂತರ 2007ರಿಂದ ಟಿವಿ 9 ಸಂಸ್ಥೆಯ ಮೂಲಕ ದೃಶ್ಯ ಮಾಧ್ಯಮದತ್ತ ಹೆಜ್ಜೆ ಇಟ್ಟೆ. ಟಿವಿ9 ಬೌಂಡರಿ ಲೈನ್ ಕ್ರೀಡಾ ಕಾರ್ಯಕ್ರಮದ ಹಿರಿಯ ವರದಿಗಾರನಾಗಿ, ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ನಾನು ಬಳಿಕ ಸಮಯ ಟಿವಿಯ ಗೇಮ್ ಪ್ಲಾನ್ ಕ್ರೀಡಾ ಕಾರ್ಯಕ್ರಮದ ಮುಖ್ಯಸ್ಥನಾಗಿಯೂ ಕೆಲಸ ಮಾಡಿದ್ದೇನೆ. 6 ವರ್ಷ ದಿನ ಪತ್ರಿಕೆ ಹಾಗೂ ಆರು ವರ್ಷ ದೃಶ್ಯ ಮಾಧ್ಯಮದಲ್ಲಿ ಕ್ರೀಡಾ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಕಳೆದ ಐದು ವರ್ಷಗಳಿಂದ ಇನ್‍ಪುಟ್, ಔಟ್‍ಪುಟ್, ನ್ಯೂಸ್ ಎಡಿಟರ್ ಆಗಿ ಬೇರೆ ಬೇರೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದ್ರೂ ನನಗೆ ಬದುಕು ಕಟ್ಟಿಸಿಕೊಟ್ಟ, ನನ್ನತನವನ್ನು ಉಳಿಸಿಕೊಟ್ಟ ಕ್ರೀಡಾ ವರದಿ, ಕ್ರೀಡಾ ಲೇಖನಗಳನ್ನು ಬರೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ಫೇಸ್‍ಬುಕ್ ಹಾಗೂ ವಾರಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ ನನಗೆ ಗೆಳೆಯರು ವೆಬ್‍ಸೈಟ್ ಮಾಡುವಂತೆ ಸಲಹೆ ನೀಡಿದ್ದರು. ಮೊದಲೇ ವೆಬ್‍ಸೈಟ್ ಮಾಡುವ ಯೋಚನೆಯಲ್ಲಿದ್ದ ನನಗೆ ನನ್ನ ಗೆಳೆಯರ ಸಲಹೆಯಂತೆ ರೈ ನ್ಯೂಝ್.ಕಾಮ್ ರೂಪುಗೊಂಡಿದೆ. ಇಲ್ಲಿ ನ್ಯೂಸ್ ಜೊತೆ ಕ್ರೀಡಾವರದಿಗಳು, ಲೇಖನಗಳನ್ನು ಪ್ರಕಟವಾಗಲಿದೆ. ಆಸಕ್ತರು ಕೂಡ ತಮ್ಮ ಲೇಖನಗಳನ್ನು ಈ ವೆಬೈಸೈಟ್‍ಗೆ ಕಳುಹಿಸಬಹುದು. ಇದು ಹವ್ಯಾಸ ಅಷ್ಟೇ. ಹಾಗಂತ ವೃತ್ತಿಪರತೆಯಂತೂ ಇದ್ದೇ ಇದೆ. ಎಲ್ಲರು ಸಹಕರಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.