Kahale - ಕಹಳೆ

Kahale - ಕಹಳೆ ರಾಷ್ಟ್ರಧರ್ಮದ ಕಹಳೆ - ಸಮಾಜದ ಏಳ್ಗೆಗಾಗಿ, ಒಳಿತಿಗಾಗಿ, ಅಭ್ಯುದಯಕ್ಕಾಗಿ...
(52)

20/06/2024

ಮೋದಿ G7 ಗೆ ಹೋಗಿದ್ಯಾಕೆ ಎಂದು ವಿರೋಧಿ ಪಟಾಲಂ ಟ್ರೋಲ್ ಮಾಡಿತ್ತು.

ಆದ್ರೂ ಮೋದಿ ಕಾಕಾ ನಗ್ತಿದ್ರು, ಮೇಲೊನಿ ಮೇಡಂ ಒಂದು ಪಾರ್ಸಲ್ ಕೊಟ್ಟಿದ್ದಾರೆ ಮೋದಿ ಕೈಗೆ ಅದ್ರಲ್ಲಿ ಇಷ್ಟು ದಿನ ಗೌಪ್ಯವಾಗಿಟ್ಟಿದ್ದ ಇಟಲಿ ನ್ಯಾಯಾಲಯದ 225 ಪುಟಗಳ ದೀರ್ಘವಾದ ಜಡ್ಜ್ಮೆಂಟ್ ಇದೆಯಂತೆ.

ರಾಜಮಾತೆ ಹೆಲಿಕ್ಯಾಪ್ಟರ್ ನಲ್ಲಿ ಹಾರೋಡೋಳಿದ್ಳು ಆದ್ರೆ ಇನ್ಮುಂದೆ ತಿಹಾರ್ ನಲ್ಲಿ ಸೀಟ್ ಪಕ್ಕಾ.

ಮೋದಿ ಹೈ, ಮಜಾವಾದೀ ನಹೀ, ವಿಮಾನದ ಎಣ್ಣೆ ಸುಟ್ಟು ಖಾಲಿ ಕೈಲಿ ಬರೋ ಆಸಾಮಿ ಅಲ್ಲ ಅವ್ರು, ಪಕ್ಕಾ ಗುಜರಾತಿ !

ಹೇಗೆ ಅನಿಸ್ತಿದೆ ವಿರೋಧಿಗಳೇ...?

ಟ್ರೋಲ್ ಮಾಡ್ದ್ವರೆ ಟ್ರೋಲ್ ಆದ್ರಲ್ಲ 😁

17/06/2024

ಭಾರತೀಯ ಜೀವ ವಿಮಾ ನಿಗಮ (LIC) ಒಟ್ಟು ಬಂಡವಾಳ ($616 ಬಿಲಿಯನ್ ಡಾಲರ್),

* ಪಾಕಿಸ್ತಾನದ GDPಯ ದುಪ್ಪಟ್ಟು ($338.24 ಬಿಲಿಯನ್)
* ಸಿಂಗಾಪೂರ ಮತ್ತು ಡೆನ್ಮಾರ್ಕ್ GDP ಗಿಂತ ಜಾಸ್ತಿ
* ನೆರೆಯ ಮೂರು ದೇಶಗಳಾದ ಪಾಕಿಸ್ತಾನ್ ($338.24 ಬಿಲಿಯನ್), ನೇಪಾಳ($44 ಬಿಲಿಯನ್) ಮತ್ತು ಶ್ರೀಲಂಕಾ ($75 ಬಿಲಿಯನ್) ಒಟ್ಟು GDP ಗಿಂತ ಜಾಸ್ತಿಯಾಗಿದೆ.

01/06/2024

ಭಾರತೀಯ ಸೇನೆ ಹಗ್ಗಜಗ್ಗಾಟದಲ್ಲಿ ಚೀನಿ ಸೈನ್ಯವನ್ನು ಮಣಿಸಿದ್ದಾರೆ.
ಪ್ರತಿ ಚೀನಿ ಸೈನಿಕನಿಗಿಂತ ಒಂದಡಿ ಎತ್ತರವಿರೋ ಭಾರತೀಯ ಯೋಧರ ಕಸುವಿನ ಎಳೆತಕ್ಕೆ ಚೀನಿಯರು ಮಣ್ಣು ಮುಕ್ಕಿದ್ದಾರೆ.

ಗಾಲ್ವಾನ್ ಇರಲಿ, ಗೇಮ್ ಇರಲಿ ನಮ್ಮದೇ ಮೇಲುಗೈ 🇮🇳

#ಸುಡಾನ್_UN_ಮಿಷನ್

ಜಗತ್ತಿನಲ್ಲಿ ಅತ್ಯಂತ ಹೆಚ್ಚು ರೈಲ್ವೇ ವಿದ್ಯುದೀಕರಣ ಹೊಂದಿದ ದೇಶ ನಮ್ಮ ಭಾರತ. 90% ಕ್ಕಿಂತ ಹೆಚ್ಚು ಎಲೆಕ್ಟ್ರಿಫಿಕೇಶನ್ ಈಗಾಗಲೇಆಗಿದೆ.ತನ್ನಿಂ...
07/04/2024

ಜಗತ್ತಿನಲ್ಲಿ ಅತ್ಯಂತ ಹೆಚ್ಚು ರೈಲ್ವೇ ವಿದ್ಯುದೀಕರಣ ಹೊಂದಿದ ದೇಶ ನಮ್ಮ ಭಾರತ. 90% ಕ್ಕಿಂತ ಹೆಚ್ಚು ಎಲೆಕ್ಟ್ರಿಫಿಕೇಶನ್ ಈಗಾಗಲೇಆಗಿದೆ.

ತನ್ನಿಂದ ತಾನೇ ಆಗಿದ್ದು, ಮೋದಿಗೆ ಕ್ರೆಡಿಟ್ ಕೊಡ್ಬೇಕಿಲ್ಲ !

🇮🇳Railway Electrification (% of total route)

1947-2014 33%
2014-2023 92%

This is the Difference….

06/04/2024

ಭಾರತ ಮುಂದಿನ ಸೂಪರ್ ಪವರ್ ಆಗುವತ್ತ ದಾಪುಗಾಲು ಹಾಕುತ್ತಿದೆ. ತುಂಬಾ ಸರಳವಾಗಿ ವೃದ್ಧಿಸುತ್ತಿರುವ ಭಾರತದ ಶಕ್ತಿ ಕುರಿತು ವಿವರಿಸಿದ್ದಾರೆ.
ಎಲ್ಲೂ ಮೋದಿ ಹೆಸ್ರು ಉಲ್ಲೇಖಿಸಿಲ್ಲ, ಸೋ ಪಕ್ಷಭೇಧ ಮರೆತು ಭಾರತವನ್ನು ಪ್ರೀತಿಸುವ ಎಲ್ರೂ ನೋಡಬಹುದು.

ಕಲೋನಿಯಲ್ ಮೈಂಡ್ ಸೆಟ್ ಹೊಂದಿದವರೂ ನೋಡಬಹುದು, ವಿವರಣೆ ನೀಡಿದ್ದು ಕಲೋನಿಯಲ್ ವಾಯ್ಸ್ ನಲ್ಲಿ, ಅವ್ರು ಹೇಳಿದ್ದೆಲ್ಲ ವೇದವಾಕ್ಯ ತಾನೇ?

ಸೋ, ವಿಡಿಯೋ ಇಷ್ಟವಾದ್ರೆ "ಭಾರತ್ ಮಾತಾ ಕೀ ಜೈ " ಹೇಳಬಹುದು 🇮🇳🚩.

05/04/2024

ಅರವತ್ತು ವರ್ಷ ಅನ್ಯಾಯದ ಆಳ್ವಿಕೆ
ಈಗ ತಂದಿದೆ ನ್ಯಾಯದ ಪ್ರಣಾಳಿಕೆ

#ಕಾಂಗ್ರೇಸ್ಸ್

01/04/2024
ಭಾರತೀಯ ನೌಕಾಪಡೆ ನಿನ್ನೆ ಮತ್ತೊಂದು ಯಶಸ್ವಿ ಕಾರ್ಯಾಚರಣೆ ಮಾಡಿ ಯೆಮೆನ್ ದೇಶದ ಸಮುದ್ರ ತಟದ ಹತ್ತಿರ ಭಾರತದ ಸಮುದ್ರ ಗಡಿಯಿಂದ ಸುಮಾರು 2 ಸಾವಿರ ...
30/03/2024

ಭಾರತೀಯ ನೌಕಾಪಡೆ ನಿನ್ನೆ ಮತ್ತೊಂದು ಯಶಸ್ವಿ ಕಾರ್ಯಾಚರಣೆ ಮಾಡಿ ಯೆಮೆನ್ ದೇಶದ ಸಮುದ್ರ ತಟದ ಹತ್ತಿರ ಭಾರತದ ಸಮುದ್ರ ಗಡಿಯಿಂದ ಸುಮಾರು 2 ಸಾವಿರ ಕಿಮೀ ದೂರದಲ್ಲಿ ನೇವಿ MARCOS ಕಮಾಂಡೋ ಆಪರೇಷನ್ ಮಾಡಿ ಇರಾನಿನ ಹಡಗಿನ ಜೊತೆ 23 ಪಾಕಿಸ್ತಾನಿ ನಾವಿಕರನ್ನು ರಕ್ಷಿಸಿದೆ.

ಆಪರೇಶನ್ ನಡೆದ ಸ್ಥಳ ಪಾಕ್ ನಿಂದ ಹತ್ತಿರ ಆದ್ರೆ ಅಂಜುಬುರುಕ ಪಾಕಿಸ್ತಾನಿ ನೇವಿ ಸಮುದ್ರಕ್ಕಿಳಿಯುವ ಸಾಹಸ ಮಾಡ್ಲಿಲ್ಲ, ಬಳೆ ತೊಟ್ಕೊಂಡು ಭಾರತದ ನೌಕಾಪಡೆಯ ಸಾಹಸ ದೂರದಿಂದ ಮರೆಯಲ್ಲಿ ನಿಂತು ಕದ್ದು ಮುಚ್ಚಿ ನೋಡುತ್ತಿತ್ತು.

ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳೇ ನೋಡಿ ನಿಮ್ಮ ಅಬ್ಬುಜಾನ್ ಡರ್ ಫೋಕ್ ಹೈ...😁😀

ಭಾರತೀಯ ನೌಕಾಪಡೆಯ ಸಾಹಸಗಾಥೆ.1972ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತೀಯ ನೌಕಾಪಡೆ ಪಾಕ್ ಗೆ ಮರ್ಮಾಘಾತ ನೀಡಿತ್ತು, ಸಮುದ್ರದ ಸರದಾರ ತಾನೆ...
24/03/2024

ಭಾರತೀಯ ನೌಕಾಪಡೆಯ ಸಾಹಸಗಾಥೆ.

1972ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತೀಯ ನೌಕಾಪಡೆ ಪಾಕ್ ಗೆ ಮರ್ಮಾಘಾತ ನೀಡಿತ್ತು, ಸಮುದ್ರದ ಸರದಾರ ತಾನೆಂದು ಪ್ರಪಂಚಕ್ಕೆ ಸಾರಿತ್ತು.
ಮೋದಿ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ, ರಾಜಕೀಯವಾಗಿ ವಿಶ್ವದ ಆಗುಹೋಗುಗಳ ಮೇಲೆ ತನ್ನ ಪ್ರಭಾವ ಬೀರುವಷ್ಟು ಬೆಳೆದಂತೆಲ್ಲ ಬಲಿಷ್ಠ ಭಾರತದ ಮೇಲಿನ ನಿರೀಕ್ಷೆಗಳು ಸಹಜವಾಗಿಯೇ ಜಾಸ್ತಿಯಾಗುತ್ತ ಹೋದ್ವು. ಅದರಲ್ಲಿ ಭಾರತದ ಸಮುದ್ರಗಡಿಗುಂಟ ನಮ್ಮ ಕಾವಲಿನ ಸರಹದ್ದಿಗೆ ಬರುವ ವ್ಯಾಪಾರ, ತೈಲ ಮಾರ್ಗಗಳ ಸಂರಕ್ಷಣೆಯ ಹೊಣೆ ಭಾರತೀಯ ನೌಕಾ ಪಡೆಗೊಂದು ಸವಾಲಾಗಿ ಕಾಡತೊಡಗಿತ್ತು.

ತನಗೆ ಎದುರಾದ ಎಲ್ಲ ವಿಷಮ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ನಮ್ಮ ನೇವಿ ಭಾರತದ ಮಿಲಿಟರಿ ಶಕ್ತಿಯ, ನೈಪುಣ್ಯತೆಯ ಉದಾಹರಣೆ ಪ್ರಪಂಚಕ್ಕೆ ನೀಡಿದೆ.

ಇತ್ತೀಚಿಗೆ ನಮ್ಮ ನೇವಿ ಬಲ್ಗೇರಿಯಾದ ಒಂದು ವ್ಯಾಪಾರಿ ಹಡಗನ್ನು ಕುಖ್ಯಾತ ಸೋಮಾಲಿಯಾದ ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ರಕ್ಷಿಸಿದೆ. MV Ruen ಎಂಬ ಈ ಹಡಗನ್ನು ಡಿಸೆಂಬರ್ 14ರಂದು ಸೋಮಾಲಿಯಾದ 35 ಪೈರೇಟ್ಗಳು ಹಡಗಿನಲ್ಲಿರುವ 17 ಸಿಬ್ಬಂದಿ ಜೊತೆಗೆ ಅಪಹರಿಸಿ ಆ ಹಡಗಿನ ಮೂಲಕ ಇತರೆ ವ್ಯಾಪಾರಿ ಹಡಗುಗಳ ಲೂಟಿಗೆ ಬಳಸಿಕೊಳ್ಳುತ್ತಿದ್ದರು.
ಆದರೆ, ಭಾರತದ INS ಕೊಲ್ಕತ್ತಾ ಆ ಹಡಗನ್ನು ಭಾರತದ ಸಮುದ್ರ ತಟದಿಂದ ಸುಮಾರು 2600 ಕಿಮೀ ದೂರ ಸುತ್ತುವರಿದು INS ಸುಭದ್ರ ಸಹಾಯದಿಂದ, ಮೊಟ್ಟಮೊದಲ ಬಾರಿಗೆ ಭಾರತೀಯ ನೇವಿ C17 ವಿಮಾನದ ಮೂಲಕ ವಿಶ್ವದಲ್ಲೇ ಅತ್ಯಂತ ಸಮರ್ಥ ಕಮಾಂಡೋ ಪಡೆ MARCOS (Marine Commandos) ಏರ್ ಡ್ರಾಪ್ ಮಾಡಿ ಜೊತೆಗೆ
Airborne Drop of two Combat Rubberised Raiding Craft (CRRC) boats ಕೂಡ ಡ್ರಾಪ್ ಮಾಡಿ ವಿಶಿಷ್ಟ ಹಾಗೂ ವಿಶೇಷ ಕಾರ್ಯಾಚರಣೆ ಮಾಡಿದೆ. ಒಂದೆಡೆ ರುದ್ರ ಭಯಾನಕ ನೌಕಾ ಪಡೆಯ ಯುದ್ಧ ನೌಕೆಗಳು ಮತ್ತೊಂದೆಡೆ ಸಾಕ್ಷಾತ್ ಕಾಲನಂತೆ ಆಕಾಶದಿಂದ ಪ್ಯಾರಾ ಗ್ಲೈಡಿಂಗ್ ಮೂಲಕ ತಮ್ಮೆಡೆ ಬರುತ್ತಿರುವ MARCOS ಕಮಾಂಡೋ ನೋಡಿ ಸೋಮಾಲಿಯಾದ ಪೈರಟ್ಗಳ ಪ್ಯಾಂಟ್ ಒದ್ದೆಯಾಗಿ ಕೂಡಲೇ ನಮ್ಮ ಕಮಾಂಡೋಗಳಿಗೆ ಶರಣಾಗತರಾಗಿದ್ದಾರೆ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡಿಸಿ ಅಪಹರಿತ ಹಡಗನ್ನು ತಮ್ಮ ವಶಕ್ಕೆ ಪಡೆದು ನಮ್ಮ ನೇವಿ ಕಡಲ್ಗಳ್ಳರನ್ನು ಬಂಧಿಸಿ ಭಾರತಕ್ಕೆ ಕರೆತಂದಿದೆ.
ಬಲ್ಗೇರಿಯಾದ ಅಧ್ಯಕ್ಷರು ಭಾರತದ ಪ್ರಧಾನ ಮಂತ್ರಿಗಳಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಭಾರತದ ನೌಕಾ ಪಡೆ ಸಮುದ್ರದಲ್ಲಿ ಸಾಹಸದ ಹೊಸ ಅಧ್ಯಾಯ ಬರೆಯುತ್ತಿದೆ. ಬಲಿಷ್ಠ ಭಾರತ ರಕ್ಷಕನಾಗಿ ಅಶಕ್ತರ ಹಿತಾಸಕ್ತಿ ಕಾಪಾಡುತ್ತಿದೆ.

ಇದು ಹೊಸ ಭಾರತ !

ಶಿವನೇ ಲಯ ಶಿವನೇ ಪ್ರಳಯ, ಶಿವನೇ ಕಾಲ ಶಿವನೇ ಕುಂಡಲಿನಿ, ಶಿವನೇ ಢಮರುಗ ಶಿವನೇ ತ್ರಿಶೂಲ, ಶಿವನೇ ಗಂಗಾಜಲ ಶಿವನೇ ಗಾಳಿ, ಶಿವನೇ ಶಶಿ ಶಿವನೇ ವೃಷಭ...
08/03/2024

ಶಿವನೇ ಲಯ ಶಿವನೇ ಪ್ರಳಯ,
ಶಿವನೇ ಕಾಲ ಶಿವನೇ ಕುಂಡಲಿನಿ,
ಶಿವನೇ ಢಮರುಗ ಶಿವನೇ ತ್ರಿಶೂಲ,
ಶಿವನೇ ಗಂಗಾಜಲ ಶಿವನೇ ಗಾಳಿ,
ಶಿವನೇ ಶಶಿ ಶಿವನೇ ವೃಷಭ,
ಶಿವನೇ ರುದ್ರ ಶಿವನೇ ರುದ್ರಾಕ್ಷಿ,
ಶಿವನೇ ಹಾವು ಶಿವನೇ ಹಾಲಾಹಲ,
ಶಿವನೇ ಭಕ್ತಿ ಶಿವನೇ ಶಕ್ತಿ.

ದೇವಾಧೀದೇವ ಮಹಾದೇವನ ಆರಾಧನೆಯ ಮಹಾದಿನ ತಮ್ಮೆಲ್ಲರಿಗೂ ಮಹಾಶಿವರಾತ್ರಿಯ ಹಾರ್ಧಿಕ ಶುಭಾಶಯಗಳು.

#ಓಂ_ನಮಃ_ಶಿವಾಯ

Decolonization ಅಂದ್ರೆ ಇದು !ಇವ್ರು Zoho ಕಂಪನಿ ಸಂಸ್ಥಾಪಕ ಬಿಲಿಯನರ್ ಶ್ರೀ ಶ್ರೀಧರ್ ವೆಂಬು. ತಮ್ಮ ಕಂಪನಿಯ ಗ್ಲೋಬಲ್ ಹೆಡ್ಕ್ವಾರ್ಟರ್ ಕೂಡ ...
06/03/2024

Decolonization ಅಂದ್ರೆ ಇದು !

ಇವ್ರು Zoho ಕಂಪನಿ ಸಂಸ್ಥಾಪಕ ಬಿಲಿಯನರ್ ಶ್ರೀ ಶ್ರೀಧರ್ ವೆಂಬು. ತಮ್ಮ ಕಂಪನಿಯ ಗ್ಲೋಬಲ್ ಹೆಡ್ಕ್ವಾರ್ಟರ್ ಕೂಡ ತಮಿಳುನಾಡಿನಲ್ಲಿರುವ ತಮ್ಮ ಹಳ್ಳಿ ತೆಂಕಸಿಯಲ್ಲಿ ತೆರೆದು ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಪುಟ್ಟ ಹಳ್ಳಿಯೊಂದು ದೊಡ್ಡ ಸಾಫ್ಟ್ವೇರ್ ಹಾಗೂ ಕಾಮರ್ಸ್ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಅವರು ಮೆಕ್ಸಿಕೋ ದೇಶದಲ್ಲಿ ತಮ್ಮ ಕಂಪನಿಯ ಹೊಸ ಶಾಖೆ ಉದ್ಘಾಟಿಸಲು ಹೋದಾಗ ತಮ್ಮ ಸಾಂಪ್ರದಾಯಿಕ ವೆಸ್ಟಿ ಧರಿಸಿ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು ಆ ಸಂಪ್ರದಾಯ ಮುಂದುವರೆಸುತ್ತ ವೆಂಬು ಸೌದಿ ಅರೇಬಿಯಾಕ್ಕೆ ಬ್ಯುಸಿನೆಸ್ ಮೀಟಿಂಗ್ ವೆಸ್ಟಿ ಧರಿಸಿಯೇ ಹೋದ್ರು.
ಬ್ಯುಸಿನೆಸ್ ಮೀಟಿಂಗಗೆ ಪಾಶ್ಚಿಮಾತ್ಯ ಉಡುಗೆಗಳನ್ನೇ ತೊಡಬೇಕೆಂಬ ಅಲಿಖಿತ ನಿಯಮ ಹಾಗೂ ವಸಾಹತುಶಾಹಿ ಮಾನಸಿಕತೆಗೆ, ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡಲಿ ಪೆಟ್ಟು ಕೊಟ್ಟಿದ್ದಾರೆ ನಮ್ಮ ಶ್ರೀಧರ್ ವೆಂಬು.

ಜ್ಞಾನದಿಂದ ಶ್ರೇಷ್ಠತೆ ಸಾಧಿಸಿದ ದೇಶ ನಮ್ದು, ತೊಡುವ ಬಟ್ಟೆಯಿಂದಲ್ಲ. ಈ ನಿಟ್ಟಿನಲ್ಲಿ ಶ್ರೀಧರ್ ವೆಂಬು ಇತರರಿಗೆ ಮಾದರಿಯಾಗಿದ್ದಾರೆ.

03/03/2024

ಸಿಕ್ತು ಸಿಕ್ತು ಮೋದಿ EVM ಹೇಗೆ ಹ್ಯಾಕ್ ಮಾಡ್ತಾರೆ ಎಂಬುದು ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ತು.

ಬೇಕಿದ್ರೆ ನೀವೇ ನೋಡಿ.

17/02/2024

ಕೇವಲ ಶಿರಬಾಗಿದರೆ ಸಾಲದು ದೇವರ ಕಾಣಲು.
ಮನಸ್ಸೂ ಕೂಡ ಬಾಗಲೇಬೇಕು ದೇವರು ಸಿಗಲು.

ರಥಸಪ್ತಮಿಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥ...
16/02/2024

ರಥಸಪ್ತಮಿ

ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಛಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.

ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು – ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.

ಸೂರ್ಯೋಪಾಸನೆಯ ಮಹತ್ವ

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.

೧. ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ.

೨. ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ. ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ.

೩. ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ ‘ತ್ರಾಟಕ’ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.

೪. ಸೂರ್ಯನಮಸ್ಕಾರ ಮಾಡುವುದು: ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಹತ್ವದ ವ್ಯಾಯಾಮವಾಗಿದೆ. ಇದರಲ್ಲಿ ಸ್ಥೂಲ ಶರೀರದ ಉಪಯೋಗ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಹೀಗೆ ೨೦ ವರ್ಷ ನಿತ್ಯವೂ ಸೂರ್ಯನಮಸ್ಕಾರ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುತ್ತಾನೆ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ//

ಇದು ರಥಸಪ್ತಮಿ ಮಾತ್ರವಲ್ಲ: ಆರೋಗ್ಯಸಪ್ತಮಿ

ಸೂರ್ಯ ನಮಸ್ಕಾರ
ಸರ್ವಪಾಪ ನಿವಾರಕ ಮತ್ತು
ಸರ್ವವ್ಯಾಧಿ ನಿವಾರಕ.

ಸಂಗ್ರಹ: ಸಮರ್ಥ ಎಂ ಕಾಂತಾವರ

ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ದಿನ ಪ್ರತಿವರ್ಷ ಫೆಬ್ರುವರಿ 14ರಂದು ನಮಗೆಲ್ಲ ಗೊತ್ತು, ಪಾಶ್ಚಾತ್ಯರು ಮಾಡುವ ಆಚರಣೆ ಅಂದ್ರೆ ಕಮ್ಮೀ ನಾ?ಈ ವರ್ಷ...
14/02/2024

ವ್ಯಾಲೆಂಟೈನ್ಸ್ ಡೇ, ಪ್ರೇಮಿಗಳ ದಿನ ಪ್ರತಿವರ್ಷ ಫೆಬ್ರುವರಿ 14ರಂದು ನಮಗೆಲ್ಲ ಗೊತ್ತು, ಪಾಶ್ಚಾತ್ಯರು ಮಾಡುವ ಆಚರಣೆ ಅಂದ್ರೆ ಕಮ್ಮೀ ನಾ?

ಈ ವರ್ಷ ವಸಂತ ಪಂಚಮಿ ಯಾವಾಗ ಗೊತ್ತಾ?
ವಸಂತ ಋತುವಿನಲ್ಲಿ ಮಾಘ ಮಾಸದ ಪಂಚಮಿ ಪ್ರತಿವರ್ಷ ಫೆಬ್ರವರಿಯಲ್ಲಿ ಹೆಚ್ಚು ಕಮ್ಮಿ 2ನೆ ಅಥವಾ 3ನೆ ವಾರದಲ್ಲಿ ಬರುತ್ತದೆ, ಅದೇ ವಸಂತ ಪಂಚಮಿ ಅದಕ್ಕೂ ವಾಲೆಂಟೈನ್ ಡೇ ಗೂ ಏನು ಸಂಬಂಧ ಅಂತೀರಾ? ನಾವು ಯಾರ್ಗೂ ಕಮ್ಮೀ ಇಲ್ಲಾರೀ, ನಮ್ಮ ಹಿರಿಯರು ಶೃಂಗಾರ ರಸವನ್ನು ಪಾಶ್ಚಾತ್ಯರಿಗಿಂತ ಭಿನ್ನವಾಗಿ ಸಂಭ್ರಮಿಸುತ್ತಿದ್ದರು.

ಋಗ್ವೇದದಲ್ಲಿ ಪ್ರೇಮ ಮತ್ತು ಕಾಮನೆಗಳ ಪ್ರತೀಕವಾದ ಕಾಮದೇವನ ವರ್ಣನೆ ತುಂಬಾ ಮನೋಹರವಾಗಿದೆ.
ಕಾಮದೇವ ಬಣ್ಣ ಬಣ್ಣದ ರೆಕ್ಕೆಯಿರುವ ಪಕ್ಷಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ, ಆತನ ಧನುಷ್ಯ ಕಬ್ಬಿನಿಂದ ಮಾಡಲ್ಪಟ್ಟಿದೆ, ಬಿಲ್ಲಿನ ದಾರ ಜೇನುತುಪ್ಪದಲ್ಲಿ ಅದ್ದಿದ್ದು ಬತ್ತಳಿಕೆಯಲ್ಲಿ ಹೂಬಾಣ ಹೊಂದಿರುತ್ತಾನೆ. ಕಾಮದೇವ ಮನುಷ್ಯರ ಹೃದಯಗಳ ಮೇಲೆ ಹೂಬಾಣ ಹೂಡುತ್ತಾನೆ ಅದು ಅವರಲ್ಲಿ ಅನುರಕ್ತಿ, ಅನುರಾಗ ಭಾವೋದ್ವೇಗಗಳ ಕಿಡಿ ಹೊತ್ತಿಸುತ್ತದೆ. ಕಾಮದೇವ ಯಾವಾಗಲೂ ತನ್ನ ಹೆಂಡತಿ ರತಿಯೊಂದಿಗೆ ಪ್ರಕಟಗೊಳ್ಳುತ್ತಾನೆ ಜೊತೆಗೆ ಸಂಗಡತಿ ವಸಂತ ಕೂಡ ಇರುತ್ತಾಳೆ ಅವಳೇ ಋತುಗಳ ರಾಣಿ. ಹೀಗಾಗಿ ಅವರು ಹೋದಲ್ಲೆಲ್ಲ ಆಯಾ ಋತುಗಳ ಚೈತನ್ಯ, ಜೀವಸತ್ವ , ಹುರುಪು ಕೊಂಡೊಯ್ಯುತ್ತಾರೆ. ಹೀಗಾಗಿಯೇ ಹಿಂದುಗಳ ಪ್ರೇಮದ ಹಬ್ಬ ಪ್ರತಿವರ್ಷ ಫೆಬ್ರವರಿಯಲ್ಲಿ ವಸಂತ ಪಂಚಮಿಯಾಗಿ ಬರುತ್ತದೆ.
ಈ ವಸಂತ ಪಂಚಮಿಯಂದೇ ಮದನ ಕಾಮದೇವ ಶಿವನ ಮೇಲೆ ಕಾಮಬಾಣ ಬಿಡುತ್ತಾನೆ.
ತನ್ನ ಮೊದಲ ಪತ್ನಿ ಸತಿಯ ಸಾವಿನಿಂದ ನೊಂದ ಶಿವ ದುಃಖತಪ್ತನಾಗಿ ಏಕಾಂತಕ್ಕೆ ಶರಣಾಗಿ ಧ್ಯಾನದಲ್ಲಿ ಮುಳುಗಿದ್ದಾಗ,ದೇವಗಣ ಮಹಾದೇವನನ್ನು ಇನ್ನೊಂದು ಹೆಣ್ಣಿನ ಮೋಹಕ್ಕೊಳಗಾಗುವಂತೆ(ಸೃಷ್ಟಿಕಾರ್ಯ ಮುಂದುವರೆಯಲು) ಪ್ರಲೋಭಣ ಮಾಡಲು ಕಾಮದೇವನನ್ನು ಕಳುಹಿಸುತ್ತಾರೆ. ಕಾಮದೇವ ಶಿವನತ್ತ 5 ಬಾಣ ಹೂಡುತ್ತಾನೆ ಅದರಲ್ಲೊಂದು ಶಿವನ ಚಿತ್ತಭಂಗ ಮಾಡಿ ಪಾರ್ವತಿಯ ಸ್ನಿಗ್ಧ ಸೌಂದರ್ಯದತ್ತ ಸೆಳೆಯುತ್ತದೆ, ಶಿವ ಕೋಪದಿಂದ ಮೂರನೇ ಕಣ್ಣು ತೆರೆದು ಕಾಮದೇವನನ್ನು ಭಸ್ಮ ಮಾಡುತ್ತಾನೆ, ಮುಂದೆ ಶಿವ ಪಾರ್ವತಿಯರು ಮದುವೆಯಾಗಿ ರತಿಯ ಕಠೋರ ತಪಸ್ಸಿನ ಪರಿಣಾಮವಾಗಿ ಶಿವ ಕಾಮದೇವನಿಗೆ ವಸಂತ ಪಂಚಮಿಯಂದೇ ಪುನರ್ಜನ್ಮ ನೀಡುತ್ತಾನೆ. ಹೀಗಾಗಿಯೇ ವಸಂತ ಪಂಚಮಿಯಂದು ಪ್ರೇಮ ಕಾಮನೆಗಳ ಅಧಿದೇವತೆಗಳಾದ ರತಿ ಮನ್ಮಥರನ್ನು ಪೂಜಿಸುತ್ತಾರೆ.

ಪಾರ್ವತಿ ಶಿವನನ್ನು ಕೇಳುತ್ತಾಳೆ - ಮಹಾದೇವಾ ಹೇಳು ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ?ಮಹಾದೇವ -- ನನಗೆ ಗೊತ್ತಿಲ್ಲಪಾರ್ವತಿ -- ನಾನು ಬೆಳಕುಮಹಾದ...
14/02/2024

ಪಾರ್ವತಿ ಶಿವನನ್ನು ಕೇಳುತ್ತಾಳೆ - ಮಹಾದೇವಾ ಹೇಳು ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ?
ಮಹಾದೇವ -- ನನಗೆ ಗೊತ್ತಿಲ್ಲ
ಪಾರ್ವತಿ -- ನಾನು ಬೆಳಕು
ಮಹಾದೇವ -- ನಾನು ಕತ್ತಲೆ
ಪಾರ್ವತಿ -- ನಾನು ಬೆಳಕು, ನಾನು ಎಲ್ಲಿ ಬೇಕಾದರೂ ಹೋಗಬಹುದು, ಅತ್ಯಂತ ವೇಗವಾಗಿ.
ಮಹಾದೇವ -- ಹೇ ಪಾರ್ವತಿ, ನೀನು ಬೆಳಕಾಗಿ ಎಲ್ಲೇ, ಎಷ್ಟೇ ವೇಗವಾಗಿ ಹೋಗು... ನೀನು ನನ್ನನ್ನು(ಕತ್ತಲೆ) ಹುಡುಕಲೇ ಬೇಕು, ಯಾಕೆಂದರೆ ನಿನಗಿಂತ ಮುಂಚೆ ಅಲ್ಲಿ ನನ್ನ ಆಗಮನ ವಾಗಿರುತ್ತದೆ, ಅಲ್ಲಿ ನಿನಗಾಗಿ ನಾನು ಕಾಯುತ್ತಿರುತ್ತೇನೆ, ನೀನು ನನ್ನೊಳಗೆ ಸಮ್ಮಿಳಿತವಾಗಲು !

#ವ್ಯಾಲೆಂಟೈನ್ಸ್_ಡೇ

ನೋಡ್ರೋ, ನಿಮ್ಮ ಅಪ್ಪಂದಿರನ್ನೇ ಮಣಿಸ್ತಿದ್ದಾರೆ ಮೋದಿ ಇನ್ನೂ ನಿಮ್ಮನ್ನ ಸುಮ್ನೆ ಬಿಡ್ತಾರಾ?ಇದು ಹೊಸ ಭಾರತದ ವರ್ಚಸ್ಸು, ಬೆಳೆಯುತ್ತಿರುವ ಆರ್ಥಿ...
13/02/2024

ನೋಡ್ರೋ, ನಿಮ್ಮ ಅಪ್ಪಂದಿರನ್ನೇ ಮಣಿಸ್ತಿದ್ದಾರೆ ಮೋದಿ ಇನ್ನೂ ನಿಮ್ಮನ್ನ ಸುಮ್ನೆ ಬಿಡ್ತಾರಾ?

ಇದು ಹೊಸ ಭಾರತದ ವರ್ಚಸ್ಸು, ಬೆಳೆಯುತ್ತಿರುವ ಆರ್ಥಿಕ ಹಾಗೂ ಮಿಲಿಟರಿ ಸಾಮರ್ಥ್ಯದ ಪ್ರಭಾವ.

ಹಾ, ಮೋದಿ ಹೈ ತೋ ಮುಮ್ಕಿನ್ ಹೈ !

ಕಾಂಗ್ರೇಸ್ಸಿಗರೇ ಎತ್ತಿ ಆಡಿಸಿದ ಕೂಸು ಈಗ ಅವರ ಮೇಲೆಯೇ ಉಚ್ಚೆ ಒಯ್ಯುತ್ತಿದೆ...!
08/02/2024

ಕಾಂಗ್ರೇಸ್ಸಿಗರೇ ಎತ್ತಿ ಆಡಿಸಿದ ಕೂಸು ಈಗ ಅವರ ಮೇಲೆಯೇ ಉಚ್ಚೆ ಒಯ್ಯುತ್ತಿದೆ...!

ಕಲಿಯುಗದಲ್ಲಿ ಪ್ರಭು ಶ್ರೀರಾಮನ ಸಾರಥಿ, ಮಂದಿರವಲ್ಲೇ ಕಟ್ಟಲು ಜೀವ ತೇಯ್ದ ಲಾಲಕೃಷ್ಣ ಅಡ್ವಾಣಿ ಈಗ ಭಾರತ ರತ್ನ! #ಜೈ_ಶ್ರೀರಾಮ್ 🚩
03/02/2024

ಕಲಿಯುಗದಲ್ಲಿ ಪ್ರಭು ಶ್ರೀರಾಮನ ಸಾರಥಿ, ಮಂದಿರವಲ್ಲೇ ಕಟ್ಟಲು ಜೀವ ತೇಯ್ದ ಲಾಲಕೃಷ್ಣ ಅಡ್ವಾಣಿ ಈಗ ಭಾರತ ರತ್ನ!

#ಜೈ_ಶ್ರೀರಾಮ್ 🚩

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹನುಮ ಧ್ವಜ ಕೆಳಗಿಳಿಸಿದ್ದಾರೆ.ಇದು ಸರ್ಕಾರದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರ ದರಿದ್ರ ಮಾನಸಿಕತ...
28/01/2024

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹನುಮ ಧ್ವಜ ಕೆಳಗಿಳಿಸಿದ್ದಾರೆ.
ಇದು ಸರ್ಕಾರದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದವರ ದರಿದ್ರ ಮಾನಸಿಕತೆ ಎತ್ತಿ ತೋರಿಸುತ್ತದೆ.
ಗ್ರಾಮದ ಮಕ್ಕಳು, ಮಹಿಳೆಯರು, ಹಾಗೂ ಯುವಕರ ಆಕ್ರೋಶ, ಹತಾಶೆ ಎದ್ದು ಕಾಣುತ್ತಿತ್ತು.

ನೀವು ಹನುಮ ಧ್ವಜ ಇಳಿಸಿದ್ದೀರಿ, ಹನುಮ ನಿಮ್ಮ ಸರ್ಕಾರ ಇಳಿಸ್ತಾನೆ, ನೋಡ್ತೀರಿ !!

27/01/2024

ನಂಬಿಕೆ ಯುಗಾಂತರಗದಿಂದ
ಪರಂಪರೆ ತಲೆತಲಾಂತರದಿಂದ
ಅಭಿವೃದ್ಧಿ ಮೋದಿಪರ್ವದಿಂದ

"ಕರ್ತವ್ಯ ಪಥದ ಮೇಲೆ ಹೊಸ "ಅಯೋಧ್ಯೆ".

ಜಯ ಶ್ರೀ ರಾಮ 🚩🙏

22/01/2024

ರಾಮ ಮಂದಿರ ಪ್ರಾಣಪ್ರತಿಷ್ಠಾಪನದ ಸಮಯದಲ್ಲೇ ಗರುಡ ಮಂದಿರದ ಪರಿಕ್ರಮಣ ಮಾಡಿದೆ.
ಇದು ಗರುಡರಾಜ ಜಟಾಯುವಿನ ಆಶೀರ್ವಾದವಲ್ಲದೇ ಮತ್ತಿನ್ನೇನು.

ಜೈ ಶ್ರೀರಾಮ್ 🚩🙏

ಕಳೆದ ಒಂಭತ್ತು ವರ್ಷಗಳಲ್ಲಿ ಹಿಂದೆಂದೂ ಕಂಡುಕೇಳರಿಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿ ಮಾಡಿಯೇ ರಾಮ ಮಂದಿರ ಕಟ್ಟುತ್ತಿದ್ದಾರೆ !!ಅಭಿವೃದ್ಧಿ...
13/01/2024

ಕಳೆದ ಒಂಭತ್ತು ವರ್ಷಗಳಲ್ಲಿ ಹಿಂದೆಂದೂ ಕಂಡುಕೇಳರಿಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿ ಮಾಡಿಯೇ ರಾಮ ಮಂದಿರ ಕಟ್ಟುತ್ತಿದ್ದಾರೆ !!
ಅಭಿವೃದ್ಧಿಗೂ ಸೈ
ಸಂಸ್ಕೃತಿಗೂ ಸೈ
ಸುರಕ್ಷೆಗೂ ಸೈ
ದುಷ್ಟಸಂಹಾರಕ್ಕೂ ಸೈ
ಪುನರುತ್ಥಾನಕ್ಕೂ ಸೈ

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿಹಾಕಿಕೊಂಡ ಕಾರ್ಮಿಕರನ್ನ ಸುರಕ್ಷಿತವಾಗಿ ರಕ್ಷಿಸಲು ಭೂಮಿ ಆಕಾಶ ಒಂದು ಮಾಡಿದ ಮೋದಿ ಸರ್ಕಾರ. ಕೊನೆಗೂ ಯಾವ ವಿದೇ...
28/11/2023

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿಹಾಕಿಕೊಂಡ ಕಾರ್ಮಿಕರನ್ನ ಸುರಕ್ಷಿತವಾಗಿ ರಕ್ಷಿಸಲು ಭೂಮಿ ಆಕಾಶ ಒಂದು ಮಾಡಿದ ಮೋದಿ ಸರ್ಕಾರ.

ಕೊನೆಗೂ ಯಾವ ವಿದೇಶಿ ಯಂತ್ರ, ವಿದೇಶಿ ವಿಶೇತಜ್ಞ ಮಾಡಲಾಗದ್ದನ್ನು ನಮ್ಮ ದೇಶೀಯ ರಾ಼ಟ್ ಮೈನರ್ಸ್ ಮಾಡಿದ "ಜುಗಾಡ್" ದಿಂದ ಯಶಸ್ವಿಯಾಗಿ ಸುರಂಗ ಕೊರೆದು ರಕ್ಷಿಸಿದ್ದಾರೆ.

ಮೋದಿ ಹೈ ತೋ ಮುಮ್ಕಿನ್ ಹೈ !!

20/11/2023

ಕ್ರಿಕೆಟ್ ಕುರಿತ ಕಾಳಜಿ ದೇಶದ ಬಗ್ಗೆ ಇದ್ರೆ, ಕ್ರಿಕೆಟರ್ ಗಳು ಫೇಲಾದಾಗ ತೋರೋ ಕೋಪ ಭ್ರಷ್ಟಾಚಾರಿಗಳ ಮೇಲೆ ತೋರಿದ್ರೆ, ಕ್ರಿಕೆಟ್ ಗೆ ತೋರೋ ಒಗ್ಗಟ್ಟು ಮತ ಹಾಕುವಾಗ/ಮತಾಂಧರ ವಿರುದ್ಧ ತೋರಿದ್ರೆ ದೇಶದ ಕಥೆನೇ ಬೇರೆ ಇರ್ತಿತ್ತು !!

 #ದೀಪಾವಳಿಯಹಾರ್ಧಿಕಶುಭಾಶಯಗಳು ಮಹಾ ವಿಷ್ಣುವಿನ ಅವತಾರವಾದ ಪ್ರಭು ಶ್ರೀರಾಮನಿಗೆ ಗೆಲುವು ಮಕ್ಕಳಾಟದಂತೆ ಸುಲಭವಾಗಿತ್ತು, "ವಾನರ ಸೇನೆ" ಯ ಅವಶ್ಯ...
12/11/2023

#ದೀಪಾವಳಿಯಹಾರ್ಧಿಕಶುಭಾಶಯಗಳು
ಮಹಾ ವಿಷ್ಣುವಿನ ಅವತಾರವಾದ ಪ್ರಭು ಶ್ರೀರಾಮನಿಗೆ ಗೆಲುವು ಮಕ್ಕಳಾಟದಂತೆ ಸುಲಭವಾಗಿತ್ತು, "ವಾನರ ಸೇನೆ" ಯ ಅವಶ್ಯಕತೆಯೂ ಇರಲಿಲ್ಲ.
ದಶಗ್ರೀವ ಶಿರೋಹರ ಅಯೋಧ್ಯಾಪತಿ ರಾಮನಿಗೆ ಅತ್ಯಂತ ಮಹತ್ವದ ಸಂಗತಿಗಳೆಂದರೆ ತನ್ನ ಪ್ರಜೆಗಳ ಸರ್ವಸಮ್ಮತಿ ಪಡೆಯುವುದು, ಚಿಂತನೆಗಳಲ್ಲಿ ಏಕ ರೂಪತೆ ಸಾಧಿಸುವುದು ಹಾಗೂ ಎಲ್ಲರ ಸಹಭಾಗಿತ್ವ(Action from All).

ಜಾನಕಿವಲ್ಲಭನ 14 ವರ್ಷ ವನವಾಸವನ್ನು ಇದೆ ಹಿನ್ನೆಲೆಯಲ್ಲಿ ನೋಡಬಹುದು. ಆ ಸಮಯದಲ್ಲಿ ರಘುಪುಂಗವ ಪ್ರಜೆಗಳ ಮಧ್ಯೆ ಧರ್ಮ ಆಧಾರಿತ ಜೀವನ ಪದ್ಧತಿಯ ಮೌಲ್ಯಗಳ ಮಹತ್ವಗಳ ಅರಿವು ಮೂಡಿಸುತ್ತ ತಮ್ಮ ಬಹು ಸಮಯ ಕಳೆದರು.
ಸೇತುಕೃತ ಕೌಸಲ್ಯಾ ನಂದನನ ಅಯೋಧ್ಯಾ ಪುನರ್ ಪ್ರವೇಶ ರಾವಣ ಸಂಹಾರದ ವಿಜಯೋತ್ಸವದ ದೀಪಾವಳಿ ಆಚರಣೆ ಜೊತೆಗೆ ಶ್ರೀರಾಮಚಂದ್ರ ರಾಷ್ಟ್ರ ಚೈತನ್ಯ ಮೂಡಿಸಲು ಮಾಡಿದ ಪ್ರಯತ್ನದ ಸಂಭ್ರಮಾಚಾರಣೆಯೂ ಆಗಿದೆ.

Deepavali is designed to celebrate community victories, Possible when we as an Individual Contribute.

And lesson for all of us : संघ शक्ति कलियुगे

ಇವ್ರು ಕ್ಯಾಪ್ಟನ್ ಯವಾಲ್. IDF ನಹಾಲ್ ಬ್ರಿಗೇಡ್ ನಲ್ಲಿ ಪದಾತಿದಳದ ಕಮಾಂಡರ್.ಝಾನ್ಸಿ ರಾಣಿ ಹಾಗೂ ನಮ್ಮ ವೀರರಾಣಿ ಕಿತ್ತೂರು ಚೆನ್ನಮ್ಮನಂತೆ ರಣರ...
28/10/2023

ಇವ್ರು ಕ್ಯಾಪ್ಟನ್ ಯವಾಲ್. IDF ನಹಾಲ್ ಬ್ರಿಗೇಡ್ ನಲ್ಲಿ ಪದಾತಿದಳದ ಕಮಾಂಡರ್.
ಝಾನ್ಸಿ ರಾಣಿ ಹಾಗೂ ನಮ್ಮ ವೀರರಾಣಿ ಕಿತ್ತೂರು ಚೆನ್ನಮ್ಮನಂತೆ ರಣರಂಗದಲ್ಲಿ ಸೆಣಸಿದ ಸಿಂಹಿಣಿ.

ಆ ಶಬ್ಬತ್ ಶನಿವಾರ ನಸುಕಿನಲ್ಲಿ ಹಮಾಸ್ ಜಿಹಾದಿ ಉಗ್ರರು ಇಸ್ರೇಲ್ ನಗರಗಳ ಮೇಲೆ ದಾಳಿಯಿಟ್ಟಿದ್ರು, ಕಿಟಲಿಯಲ್ಲಿ ಕಾದ ಕಾಫಿ ಇನ್ನೂ ಆರಿರಲಿಲ್ಲ , ಹಮಾಸ್ ಗುಂಡಿನ ಶಬ್ದ ಕಿಟಕಿಯಿಂದ ತೂರಿ ಇಸ್ರೇಲಿಗರ ಉಸಿರು ನಿಲ್ಲಿಸುತ್ತಿತ್ತು.
ಆ ಶಬ್ದದ ಜಾಡು ಹಿಡಿದು ಕ್ಯಾಪ್ಟನ್ ಯವಾಲ್ ಮರುಕ್ಷಣ ಯೋಚಿಸದೇ ಗನ್ ಹೆಗಲೇರಿಸಿಕೊಂಡು ತಾನುಟ್ಟಿದ್ದ ಪೈಜಾಮಾ ಮೇಲೆಯೇ ರಣಾಂಗಣವಾಗಿದ್ದ ರಸ್ತೆಗೆ ಇಳಿದ್ರು, ತರೆಗೆಲೆಯಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹೆಣಗಳು, ರಸ್ತೆಮೇಲೆಲ್ಲ ರಕ್ತದೋಕುಳಿ, ಎರಡು ಹನಿ ಕಣ್ಣೀರಿಡಲು ಸಮಯ ಇರ್ಲಿಲ್ಲ, ಅಷ್ಟರಲ್ಲೇ ಬೈಕ್ ಮೇಲೆ ವೇಗವಾಗಿ ಅವಳತ್ತ ಬರುತ್ತಿದ್ದ ಹಮಾಸ್ ಉಗ್ರರನ್ನು ಗಮನಿಸಿದ ಕ್ಯಾಪ್ಟನ್ ಯವಾಲ್ ತನ್ನ ಆಟೊಮ್ಯಾಟಿಕ್ ಗನ್ ಪೂರ್ತಿ ಮ್ಯಾಗಜಿನ್ ಖಾಲಿ ಮಾಡಿ ಆ ಇಬ್ರು ಉಗ್ರರನ್ನ 72 ಕನ್ಯೆಯರ ಹತ್ರ ಕಳಿಸಿದ್ರು.

ಅಷ್ಟರಲ್ಲೇ ಇನ್ನೊಬ್ಬ ಸೇನಾ ಕ್ಯಾಪ್ಟನ್ ರಾನ್ ಅವರ ಜೊತೆಗೂಡಿದ ಆತ ಕೂಡ ಪೈಜಾಮದಲ್ಲೇ ಇದ್ದ. ಕಣ್ ಸನ್ನೆಯಲ್ಲಿ ಇಬ್ರು ಮಾತಾಡುತ್ತ ತಮ್ಮೆಡೆ ಬರುತ್ತಿದ್ದ ಉಗ್ರರನ್ನು ಎದುರಿಸುತ್ತಿದ್ರು, ಅಲ್ಲೇ ಹತ್ತಿರದಲ್ಲಿದ್ದ ಗೆಳೆಯನ ಮನೆಯನ್ನೇ ವಾರ್ ರೂಮ್ ಕಮಾಂಡ್ ಸೆಂಟರ್ ಆಗಿ ಮಾಡ್ಕೊಂಡ ಇಬ್ರು ಇಸ್ರೇಲಿ ಸ್ಪೆಷಲ್ ಫೋರ್ಸಸ್ ಗೆ ಹಮಾಸ್ ಉಗ್ರರ ಕುರಿತು ಮಾಹಿತಿ ರವಾನಿಸ ತೊಡಗಿದ್ರು.
ಎಲೀಟ್ ಇಸ್ರೇಲಿ ಕಾಮಾಂಡೋಗಳು, ಫೈಟರ್ ಪೈಲಟ್ ಗಳೊಂದಿಗೆ ನಿಖರವಾಗಿ ಉಗ್ರರ ಚಲನವಲನ ಕುರಿತು ಮಾಹಿತಿ ನೀಡುತ್ತ ರಕ್ಷಣಾ ಪಡೆಗಳು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳ ತಲುಪಿ ನಿಖರವಾದ ದಾಳಿ ನಡೆಸಲು ಕಮಾಂಡ್ ಮಾಡ್ತಿದ್ರು, ಅವರ ಈ ಸಾಹಸ ಕಾರ್ಯ 22ಕ್ಕಿಂತ ಹೆಚ್ಚು ಉಗ್ರರನ್ನು 72 ಕನ್ಯೆಯರ ಬಳಿ ಕಳಿಸಲು ನೆರವಾಯಿತು. ಅದೆಷ್ಟೋ ಅಮಾಯಕ ಇಸ್ರೇಲಿಗರ್ ಪ್ರಾಣ ಉಳಿಸಿತು ಕ್ಯಾಪ್ಟನ್ ಯವಾಲ್ ಹಾಗೂ ಕ್ಯಾಪ್ಟನ್ ರಾನ್ ಅಪ್ರತಿಮ ಸಾಹಸ, ಕರ್ತವ್ಯನಿಷ್ಠೆ ಮತ್ತು ಸಮಯಪ್ರಜ್ಞೆ.

ಈಗಲೂ ಕೂಡ ಇಬ್ಬರೂ ರಣರಂಗದಲ್ಲಿ ಹಮಾಸ್ ನೊಂದಿಗೆ ಹೋರಾಟದಲ್ಲಿ ಮಂಚೂಣಿಯಲ್ಲಿದ್ದಾರೆ.

ಇಂತಹ ಅಪ್ರತಿಮ ಯೋಧರ ರಕ್ಷಣೆಯಲ್ಲಿರುವ ಇಸ್ರೇಲನ್ನು ಜಗತ್ತಿನ ಯಾವ ಅಸೂರಿ ಶಕ್ತಿಯೂ ಸೋಲಿಸಲಾಗದು.

ಕ್ಯಾಪ್ಟನ್ ಯವಾಲ್ ಹಾಗೂ ಕ್ಯಾಪ್ಟನ್ ರಾನ್, ನೀವು ನಮಗೆಲ್ಲ ಸ್ಫೂರ್ತಿ 🙏🇮🇱

Am Yisrael Chai

ಇವರ ಹೆಸರು ಶ್ಲೋಮ್ ರಾನ್. ವಯಸ್ಸು 85.ಸಾವನ್ನೇ ಒಂಚೂರೂ ಅಂಜಿಕೆ ಅಳುಕಿಲ್ಲದೇ ಎದುರಿಸು ತನ್ನವರಿಗಾಗಿ ತನ್ನನ್ನೇ ಬಲಿಕೊಟ್ಟು ತ್ಯಾಗಮಯಿ.ದಕ್ಷಿಣ...
27/10/2023

ಇವರ ಹೆಸರು ಶ್ಲೋಮ್ ರಾನ್. ವಯಸ್ಸು 85.
ಸಾವನ್ನೇ ಒಂಚೂರೂ ಅಂಜಿಕೆ ಅಳುಕಿಲ್ಲದೇ ಎದುರಿಸು ತನ್ನವರಿಗಾಗಿ ತನ್ನನ್ನೇ ಬಲಿಕೊಟ್ಟು ತ್ಯಾಗಮಯಿ.

ದಕ್ಷಿಣ ಇಸ್ರೇಲ್ ಕಿಬುಜ್ ನ್ ಇವರ ಮನೆ ಏರಿಯಾದಲ್ಲಿ ಹಮಾಸ್ ದಾಳಿ ನಡೆದಿತ್ತು, ಹತ್ತಿರ ಸುಳಿಯುತ್ತಿರುವ ಅಪಾಯದ ಸುಳಿವರಿತ ರಾನ್ ತಲೆಯಲ್ಲಿ ಹಮಾಸ್ ಉಗ್ರರಿಗೆ ಚಕ್ಮಾ ಕೊಡುವ ಪ್ಲ್ಯಾನ್ ಹೊಳೆಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ರಾನ್ ಹೆಂಡತಿ, ಮಗಳು ಮತ್ತು ಮೊಮ್ಮಗನನ್ನು ಬಾಂಬ್ ಶೆಲ್ಟರ್ ಗೆ ಕಳಿಸಿ ಲಾಕ್ ಮಾಡಿ ತಾವು ಮಾತ್ರ ಮನೆಯ ಲಿವಿಂಗ್ ರೂಮ್ನಲ್ಲಿ ಕುಳಿತುಕೊಂಡ್ರು. ಉಗ್ರರು ಬಂದ್ರು ರಾನ್ ಮೇಲೆ ದಾಳಿ ಮಾಡಿ ಅವರನ್ನು ಹತ್ಯೆಗೈದು ಮುಂದೆ ಸಾಗಿದ್ರು.

ರಾನ್ ಪ್ಲ್ಯಾನ್ ಯಶಸ್ವಿಯಾಗಿತ್ತು, ಉಗ್ರರು ತಮ್ಮನೆ ಮೇಲೆ ಅಟ್ಯಾಕ್ ಮಾಡಿದಾಗ ತಾವೊಬ್ರೇ ಇರೋದನ್ನು ನೋಡಿ ತಮ್ಮನ್ನ ಹತ್ಯೆ ಮಾಡಿ ಮುಂದೆ ಹೋಗಬಹುದು ಎಂದು ಅಂದಾಜಿಸಿದ್ದರು, ಹೀಗೆ ತಮ್ಮ ಇಡೀ ಕುಟುಂಬವನ್ನು ರಕ್ಷಿಸಿ ಇಹಲೋಕ ತ್ಯಜಿಸಿದ್ರು ರಾನ್.

ರಾನ್, ನೀವು ನಮಗೆಲ್ಲ ಸ್ಫೂರ್ತಿ !

ರಾನ್ ಆತ್ಮಕ್ಕೆ ಸದ್ಘತಿ ದೊರೆಯಲಿ 🙏🇮🇱

ಓಂ ಶಾಂತಿ !

Am Yisrael Chai

ಏಳು ವರ್ಷ IDF ನ ಸ್ಪೆಷಲ್ ಫೋರ್ಸಸ್ ಯುನಿಟ್ನಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ H(ಹೆಸರು ಮತ್ತು ಗುರುತು ಬಹಿರಂಗ ಪಡಿಸಿಲ್ಲ) ಸೇನೆಯಿಂದ ರಿಲೀವ್ ...
26/10/2023

ಏಳು ವರ್ಷ IDF ನ ಸ್ಪೆಷಲ್ ಫೋರ್ಸಸ್ ಯುನಿಟ್ನಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ H(ಹೆಸರು ಮತ್ತು ಗುರುತು ಬಹಿರಂಗ ಪಡಿಸಿಲ್ಲ) ಸೇನೆಯಿಂದ ರಿಲೀವ್ ಆಗಿದ್ರು.
ಅವರ ಯೂನಿಟ್ ಸೈನಿಕರು ಕ್ಯಾಪ್ಟನ್ಗೆ ನೇಪಾಳ ವಿಮಾನ ಟಿಕೆಟ್ ಗಿಫ್ಟ್ ಆಗಿ ನೀಡಿದ್ರು, ಹಿಮಾಲಯದ ಶಿಖರ ಮೌಂಟ್ ಎವರೆಸ್ಟ್ ಹತ್ತುವ ಅವರ ಹೆಬ್ಬಯಕೆಯನ್ನು ತೀರಿಸಿಕೊಳ್ಳಲಿ ಅಂತ.

ಕ್ಯಾಪ್ಟನ್ ಹಿಮಾಲಯ ಹತ್ತಲು ಶುರು ಮಾಡಿ ಮೂರು ದಿನವಾಗಿತ್ತು, ಹಮಾಸ್ ದಾಳಿಯ ಸುದ್ದಿ ಬಂತು. ತಕ್ಷಣವೇ ಕ್ಯಾಪ್ಟನ್ ಕಠ್ಮಂಡು ವರೆಗೆ ಒಂದು ಪ್ರೈವೇಟ್ ಹೆಲಿಕಾಪ್ಟರ್ ಬಾಡಿಗೆ ಪಡೆದು ಅಲ್ಲಿಂದ ಇಸ್ರೇಲ್ ವಿಮಾನ ಹತ್ತೇ ಬಿಟ್ರು.

ಸೋಮವಾರ ಅವ್ರು ಸೇನಾ ಸಮವಸ್ತ್ರ ಧರಿಸಿ ಹಮಾಸ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ರು, ಈಗ ಯುದ್ಧಭೂಮಿಯಲ್ಲಿದ್ದಾರೆ.

ಹಮಾಸ್ ಯಾವ ಧೀ ಶಕ್ತಿ ವಿರುದ್ಧ ಹೋರಾಟ ಮಾಡ್ತಿದ್ದೀವಿ ಅನ್ನೋ ಕಲ್ಪನೆ ಕೂಡ ಇಲ್ಲದ... ಮತಾಂಧರು !

Am Yisrael Chai
----

Address

Bangalore

Alerts

Be the first to know and let us send you an email when Kahale - ಕಹಳೆ posts news and promotions. Your email address will not be used for any other purpose, and you can unsubscribe at any time.

Videos

Share


Other Media/News Companies in Bangalore

Show All