Yadgir News

Yadgir News follow Subscrube YouTube chanell. Yadgir News
https://youtube.com/channel/UCg86RPQd2ooG5sawX1mYLTw

ಜಯ ಕರ್ನಾಟಕ ಜನಪರ ವೇದಿಕೆ ಹುನಸಗಿ ತಾಲ್ಲೂಕಿಗೆ ಪ್ರಭುಗೌಡ ಪೋತರಡ್ಡಿ ಮುದ್ದೂರು ನೇಮಕ.ಹುಣಸಗಿ  : ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ವೆಂಕಟೇ...
30/01/2025

ಜಯ ಕರ್ನಾಟಕ ಜನಪರ ವೇದಿಕೆ ಹುನಸಗಿ ತಾಲ್ಲೂಕಿಗೆ ಪ್ರಭುಗೌಡ ಪೋತರಡ್ಡಿ ಮುದ್ದೂರು ನೇಮಕ.

ಹುಣಸಗಿ : ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ವೆಂಕಟೇಶ ರೆಡ್ಡಿ ತುಳೇರ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ. ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹುಣಸಗಿ ಹಾಗೂ ಶಹಾಪುರ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು. ಕಾರ್ಯಕ್ರಮವನ್ನು ತೇಜರಾಜ್ ರಾಠೋಡ ಜಿಲ್ಲಾಧ್ಯಕ್ಷರು ಯಾದಗಿರಿ ನೇತೃತ್ವದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀ ಮತಿ ರುದ್ರಾಂಬಿಕಾ ಆರ್ ಪಾಟೀಲ್ ಜಿಲ್ಲಾ ಕಾರ್ಯದರ್ಶಿಯಾಗಿ ಹುಲಗಪ್ಪ ಶಖಾಪುರರವರ ಉಪಸ್ಥಿತಿಯಲ್ಲಿ
ಹುಣಸಗಿ ತಾಲೂಕು ಅಧ್ಯಕ್ಷರಾಗಿ ಪ್ರಭುಗೌಡ ಪೋತರಡ್ಡಿ ಮುದ್ದೂರು ಅವರಿಗೆ ಆದೇಶ ಪತ್ರ ನೀಡಿ ಆಯ್ಕೆ ಮಾಡಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಬೈರಿಮರಡಿ.

ಸಾಹೇಬಣ್ಣ ಪುರ್ಲೇ ಅಧ್ಯಕ್ಷರು ಸುದೀಪ್ ಶಿಕ್ಷಣ ಸಂಸ್ಥೆ ರಂಗಂಪೇಟ್. ಜಿಲ್ಲಾ ಉಪಾಧ್ಯಕ್ಷ ಗಂಗು ಮಡಿವಾಳ. ಸುರಪುರ ತಾಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ, ಸವೀತಾ ಶಹಾಪುರ, ವೇದಿಕೆ ಮೇಲಿದ್ದರು.

ವರದಿ. ಕ್ಯಾಮರಾಮ್ಯಾನ್ ಲಾಲಸಿಂಗ್ ರಾಠೋಡ ಜೊತ್ತೆ ಶಿವು ರಾಠೋಡ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ, ಮುಖ್ಯವಾಹಿನಿಗೆ ತನ್ನಿಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶ್ರೀ ಶಶಿಧರ್ ಕೋಸಂಬೆಯಾದಗಿರಿ:...
30/01/2025

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ, ಮುಖ್ಯವಾಹಿನಿಗೆ ತನ್ನಿ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶ್ರೀ ಶಶಿಧರ್ ಕೋಸಂಬೆ

ಯಾದಗಿರಿ:ಜ:30 : ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸಂಬೆ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು "ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ "ಶೀರ್ಷಿಕೆಯಡಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ "ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ- 2009 ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲಿದೆ. ಜಿಲ್ಲೆಯ ಸುಮಾರು 54,481 ಮಕ್ಕಳ ಆಧಾರ್ ಮೌಲ್ಯೀಕರಣ ಆಗಬೇಕಾಗಿದ್ದು, ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದ ಮೇರೆಗೆ ಒಂದು ವಾರದಲ್ಲಿ ಇದನ್ನು ಪೂರ್ಣಗೊಳಿಸಲು ಸೂಚ್ಚಿಸಲಾಗಿದೆ. ಇನ್ನೂವರೆಗೆ ಈ ಕಾರ್ಯ ಆಗದೇ ಇರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.

ಬಡ ಮಕ್ಕಳು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಬಾರದು. ಶಿಶ್ಯವೇತನ, ಶೈಕ್ಷಣಿಕ ಸೌಲಭ್ಯಗಳು ಅವರಿಗೆ ಸಕಾಲಕ್ಕೆ ದೊರಕಿಸುವ ಸದುದ್ದೇಶವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಆಧಾರ ಪರಿಶೀಲಿಸಿ ಸರಿಪಡಿಸುವ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಸ್ಯಾಟ್ಸ(SATS) ಅಪಾರ(APAAR) ತಂತ್ರಾಂಶಗಳ ಬಗ್ಗೆ ಈಗಾಗಲೇ ಗೂಗಲ್ ಮತ್ತು ಭೌತಿಕ ತರಬೇತಿಗಳನ್ನು ಸಹ ನೀಡಲಾಗಿದೆ. ಕಾರಣ ಆಧಾರ್ ಸರಿಪಡಿಸುವ ಜೊತೆಗೆ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತರುವಂತೆ ಅವರು ಸೂಚಿಸಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ -2016ರ ಅನ್ವಯ ಸಕಲ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳ ಸುರಕ್ಷಾ ಸಮಿತಿಗಳನ್ನು ರಚಿಸಬೇಕು. ಕಡ್ಡಾಯವಾಗಿ ಸಲಹಾ ಪೆಟ್ಟಿಗೆ ಇಡಬೇಕು. ಕಾಲಕಾಲಕ್ಕೆ ಬಿಸಿಊಟ ಸಮಸ್ಯೆಗಳನ್ನು ಬಗೆಹರಿಸಬೇಕು. ಮಕ್ಕಳಿಗೆ ಸಮರ್ಪಕ ಆಹಾರ ಪೂರೈಕೆ ಆಗದಿದ್ದಲ್ಲಿ, ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು.ಪದೇ ಪದೇ ಲೋಪ ಸಂದರ್ಭದಲ್ಲಿ ಸೊ- ಮೋಟೊ ಪ್ರಕರಣ ದಾಖಲೆಗೂ ಕ್ರಮ ಕೈಗೊಳ್ಳಲಾಗುವುದು. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ- 2009 ರನ್ವಯ ಕ್ರಮ ಸಹ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಸಂಬಂಧ ಪಟ್ಟವರ ವಿರುದ್ಧ ಬೆಂಗಳೂರಿಗೆ ಕರೆದು ಆಯೋಗದ ಮುಂದೆ ವಿಚಾರಣೆಗೆ ಒಳಪಡಿಸಲಾಗುವುದು. ವಿಶೇಷ ಸಂದರ್ಭದಲ್ಲಿ ಅಮಾನತ್ತುನಂತಹ ಮತ್ತು ಇನ್ಕ್ರಿಮೆಂಟ್ ತಡೆ ಹಿಡಿಯುವಂತಹ ಕ್ರಮದ ಬಗ್ಗೆಯೂ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಕಡ್ಡಾಯವಾಗಿ ಅಭ್ಯರ್ಥಿಗಳ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಬದ್ಧತಾ ಪ್ರಮಾಣ ಪತ್ರವನ್ನು ಪಡೆಯಲು ಸೂಚಿಸಿದ ಅವರು, ಜಿಲ್ಲಾ ಮಟ್ಟದಿಂದ ತಾಲೂಕ ಹಾಗೂ ಗ್ರಾಮ ಮಟ್ಟದ ವರೆಗಿನ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಗುರುತರ ಜವಾಬ್ದಾರಿ ಹೊಂದಿದ ಇಲಾಖೆ ಇದಾಗಿರುವುದರಿಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ .ಆರ್. ಪಿ ,ಸಿ ಆರ್ ಪಿ , ಶಿಕ್ಷಣ ಸಮನ್ವಯಾಧಿಕಾರಿಗಳು ಹಾಗೂ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಸಮಸ್ಯೆಗಳನ್ನು
ಆದ್ಯತೆ ಮೇಲೆ ಪರಿಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಜಿಲ್ಲೆಯ ವಿವಿಧ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇನ್ನಿತರ ಕುಂದುಕೊರತೆಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಪಡೆದರು.

ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಚನ್ನಬಸಪ್ಪ ಮುಧೋಳ ಅವರು ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗಕ್ಕೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ವಸ್ತುನಿಷ್ಠ ವರದಿಗಳನ್ನು ಸಲ್ಲಿಸಬೇಕು. ಯಾವುದೇ ರೀತಿಯ ಸಬೂಬು ಹೇಳದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ಇಂದಿನ ದಿನ ಎರಡು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.

ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಸಿಪಿಐ ವಿಜಯಕುಮಾರ್ ಅವರು ಉಪಸ್ಥಿತರಿದ್ದರು.

ಯಾದಗಿರಿ ನಗರಸಭೆ ಕಛೇರಿ ನೂತನ ಕಟ್ಟಡಕ್ಕೆ ಸ್ಥಳಾಂತರಯಾದಗಿರಿ : ಜನವರಿ 30 : ಯಾದಗಿರಿ ನಗರಸಭೆ ಕಛೇರಿ ಕಟ್ಟಡವನ್ನು ಸ್ಥಳಾಂತರಿಸಲಾಗಿದೆ ಎಂದು ಯ...
30/01/2025

ಯಾದಗಿರಿ ನಗರಸಭೆ ಕಛೇರಿ ನೂತನ ಕಟ್ಟಡಕ್ಕೆ ಸ್ಥಳಾಂತರ

ಯಾದಗಿರಿ : ಜನವರಿ 30 : ಯಾದಗಿರಿ ನಗರಸಭೆ ಕಛೇರಿ ಕಟ್ಟಡವನ್ನು ಸ್ಥಳಾಂತರಿಸಲಾಗಿದೆ ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ಉಮೇಶಕುಮಾರ ಚವ್ಹಾಣ ಅವರು ತಿಳಿಸಿದ್ದಾರೆ.

ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಯಾದಗಿರಿ ನಗರಸಭೆಯ ಐ.ಡಿ.ಎಸ್.ಎಂ.ಟಿ ಕಾಂಪ್ಲೇಕ್ಸ್ನ ಯಾದಗಿರಿ ನಗರಸಭೆ ಕಛೇರಿಯನ್ನು ಈಗಾಗಲೇ ಪ್ರಸ್ತುತ ಯಾದಗಿರಿ ನಗರದ ಸಪ್ನಾ ಕ್ರೀಡಾಂಗಣದ ಹತ್ತಿರ ಇರುವ ಯಾದಗಿರಿ ನಗರಸಭೆ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಾರ್ವಜನಿಕರ ಗಮನಕ್ಕೆ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

30/01/2025

ನಗರದಲ್ಲಿರುವ ಸಪ್ನ ಗ್ರೌಂಡ್ ಹೆಸರನ್ನು ಬದಲಾವಣೆ ಮಾಡಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ...

ಕಲರ್ ಫುಲ್ ಸರಕಾರಿ ಪದವಿ ಪೂರ್ವ ಕಾಲೇಜು ಯಾದಗಿರಿ
30/01/2025

ಕಲರ್ ಫುಲ್ ಸರಕಾರಿ ಪದವಿ ಪೂರ್ವ ಕಾಲೇಜು ಯಾದಗಿರಿ

ಕೊರಟಗೆರೆ ಮತ್ತು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಗೆ ಸಂಬಂಧಿಸಿದಂತೆ ಕಿರುಕುಳದ ದೂರು ಬಂದಿದ್ದ ಹಿನ್ನೆಲೆಯಲ್ಲಿ  ಜಿಲ್...
30/01/2025

ಕೊರಟಗೆರೆ ಮತ್ತು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಗೆ ಸಂಬಂಧಿಸಿದಂತೆ ಕಿರುಕುಳದ ದೂರು ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು Tumakuru
ಮತ್ತು ಪೊಲೀಸ ವರಿಷ್ಠಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


Ashok Venkat
Karnataka State Police

30/01/2025

ಅಕ್ರಮ ಕಮಾನ್ ಕಟ್ಟಡ ತೆರವುಗೊಳಿಸುವವರೆಗೆ ನಾವು ಇಲ್ಲಿಂದ ಕದಲವುದಿಲ್ಲ

ಕಲಬುರ್ಗಿ ನಗರದ ಸಂತ್ರಸ್ವಡಿಯ ದರ್ಗಾದ ಕಮಾನ್

ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಜಾಗೃತ ಶಿಬಿರಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕುಯಾದಗಿರಿ : ಜನವರಿ 30 : ಮಾಜಿ ...
30/01/2025

ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಜಾಗೃತ ಶಿಬಿರ
ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು

ಯಾದಗಿರಿ : ಜನವರಿ 30 : ಮಾಜಿ ದೇವದಾಸಿ ಮಹಿಳೆಯರು, ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಿಕೊಂಡು ಮಾಹಿತಿಯ ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಬಿರದಾರ ಸಲಹೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಜ.30ರ ಗುರುವಾರ ರಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ದೇವದಾಸಿ ಪುನರ್ವಸತಿ ಯೋಜನೆ, ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮತ್ತು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಹಾಗೂ ಜಾಗೃತ ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾದಿಂದ ಸಿಗುವ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು. ರಕ್ತ ಹೀನತೆ ಆಗದಂತೆ ನೊಡಿಕೊಳ್ಳಬೇಕು, ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು, ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕ. ಇದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಹತ್ತು ಹಲವು ರೋಗಗಳು ತಗಲುವ ಸಾಧ್ಯತೆಗಳಿವೆ. ಆದ್ದರಿಂದ ದೇವದಾಸಿಯರು ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುವಂತೆ ತಿಳಿಸಿದರು.

ದೇವದಾಸಿ ಪುನರ್ವಸತಿ ಯೋಜನೆ (ಪ್ರ) ಯೋಜನಾ ಅಧಿಕಾರಿಗಳಾದ ಶ್ರೀಮತಿ ಶಿವಮಂಗಳ ಅವರು ಪ್ರಸ್ತಾವಿಕವಾಗಿ ಮಾತನಾಡಿ, ದೇವದಾಸಿ ಪದ್ಧತಿಯ ಅನಿಷ್ಟ ಪದ್ಧತಿಯಿಂದ ಹೊರಬರಲು ಮತ್ತು ಮಾಜಿ ದೇವದಾಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಆರೋಗ್ಯ ಶಿಬಿರಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ಈ ಪದ್ಧತಿಯನ್ನು ತೊಡೆದುಹಾಕಲು ಜಿಲ್ಲೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಈ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಡಿಟಿಓ ಸಂಜೀವ್ ಕುಮಾರ ರಾಯಚೂರಕರ್, ಡಿಎಮ್‌ಓ ಡಾ.ಸಾಜಿದ್, ಡಿಎಲ್‌ಓ ಡಾ.ಪದ್ಮಾನಂದ ಎ.ಗಾಯಕವಾಡ, ಎಫ್‌ಡಬ್ಲೂö್ಯಓ ಡಾ.ಜೋತಿ ಕಟ್ಟಿಮನಿ, ನಿವೃತ, ಡಿಟಿಓ ಡಾ.ಭಗವಂತ್ ಅನ್ವಾರ್, ಟಿಹೆಚ್‌ಓ ಡಾ.ಹಣಮಂತರೆಡ್ಡಿ, ಡಿಹೆಚ್‌ಇಓ ತುಳಸಿರಾಮ ಚವ್ಹಾಣ, ಡಿ.ಎನ್.ಓ ರತ್ನಮ್ಮ, ಶ್ರೀ ಮತಿ ಸಹನಾ, ಡಾ.ಸುನಿತಾ, ಡಾ.ವಿನುತಾ, ಶ್ರೀ ಶಾಂತಿಲಾಲ್, ಶ್ರೀ ಬಾಗಪ್ಪ, ಶ್ರೀ ಶರಣಯ್ಯ ಸ್ವಾಮಿ, ಶ್ರೀ ನಾಗರಾಜ, ಶ್ರೀ ಬಸ್ಸಯ್ಯ ಗುತ್ತೆದಾರ, ಶ್ರೀಮತಿ ಶೀಬಾರಾಣಿ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಭಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀ ಮಾಳಪ್ಪ ಯಾದವ ಸ್ವಾಗತ ಹಾಗೂ ವಂದನಾರ್ಪಣೆಯನ್ನು ನೇರವೆರಿಸದರು.

30/01/2025
“ ಜಿಲ್ಲಾ ಪೊಲೀಸ್ ರಿಂದ ಕರ್ಕಶವಾದ ಸೈಲೆನ್ಸಸರ್ ತೇರವು, ಕಡ್ಡಾಯ ಹೆಲ್ಮೆಟ್, ಸುಗಮ ಪಾರ್ಕಿಂಗ್ ವ್ಯವಸ್ಥೆ ಹಾಗು ಎ.ಐ ಕ್ಯಾಮರಾಗಳ ಅಳವಡಿಕೆ, ಸಮಯ...
30/01/2025

“ ಜಿಲ್ಲಾ ಪೊಲೀಸ್ ರಿಂದ ಕರ್ಕಶವಾದ ಸೈಲೆನ್ಸಸರ್ ತೇರವು, ಕಡ್ಡಾಯ ಹೆಲ್ಮೆಟ್, ಸುಗಮ ಪಾರ್ಕಿಂಗ್ ವ್ಯವಸ್ಥೆ ಹಾಗು ಎ.ಐ ಕ್ಯಾಮರಾಗಳ ಅಳವಡಿಕೆ, ಸಮಯ ಮಿರಿ ತೇರೆದ ಹೊಟೇಲ್ & ಅಂಗಡಿಗಳ ವಿರುದ್ದ ಕ್ರಮ.

ನಗರದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ವಾಹನ ಚಾಲಕರು ದಂಡ ಕಟ್ಟಿ ಅಥವಾ ಹೆಲ್ಮೆಟ್ ಧರಿಸಿ ಎಂಬ ವಾಕ್ಯದೊಂದಿಗೆ ನಗರದಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರನ್ನು ಗುರ್ತಿಸಿ ದಂಡದ ಬದಲಾಗಿ ಹೆಲ್ಮೆಟ್ ವಿತರಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ತಿಳಿಸಲಾಯಿತು. ಜಿಲ್ಲಾದಾದ್ಯಂತ ದ್ವೀಚಕ್ರ ವಾಹನಗಳಿಗೆ ಕರ್ಕಶವಾದ ಶಬ್ದ ಉಂಟು ಮಾಡುವ ಸೈಲೆನ್ಸರ್ ಗಳನ್ನು ಯುವಕರು ತಮ್ಮ ಮೊಟಾರ್ ಸೈಕಲ್ ಗಳಿಗೆ ಅಳವಡಿಸಿ ಸಹಿಸಲಾರದಂತಹ ಯಾತನೆ ಸಾರ್ವಜನಿಕರಿಗೆ ಕೊಡುವಂತಹ ಸೈಲೆನ್ಸರ್ (Silencer) ತೆರವು ಕಾರ್ಯಚರಣೆ ಮುಂದು ವರೆದಿದ್ದು 85 ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಗುರ್ತಿಸಿ, ಅಂತಹ ವಾಹನಗಳ ಸೈಲೆನ್ಸರ್ ತೆಗೆಯಿಸಿ ದಂಡ ವಿಧಿಸಿ, ಅಳವಡಿಸುವ ಗ್ಯಾರೆಜ ಮಾಲೀಕರಿಗೂ ಸಹ ಸೈಲೆನ್ಸರ್ ಅಳವಡಿಸದಂತೆ ಸೂಚಿಸಲಾಗಿದೆ. ಅದರಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಗುರುತಿಸಿದ ಗೆರೆಯ ಒಳಗೆ ವಾಹನಗಳನ್ನು ನಿಲ್ಲಿಸದೇ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು ಅಂತಹ ವಾಹನಗಳನ್ನು ಗುರ್ತಿಸಿ ದಂಡ ವಿಧಿಸಲಾಗುವುದು. ಅತಿಯಾಗಿ ಉಲ್ಲಂಘನೆ ಮಾಡಿದ್ದಲ್ಲಿ ಅವರ ವಾಹನ ಚಾಲನಾ ಪರವಾನಿಗೆ ರದ್ದತಿಗಾಗಿ ಶಿಫಾರಸ್ಸು ಮಾಡಲಾಗುವುದು. ಸಂಚಾರಿ ವ್ಯವಸ್ಥೆ ಇನ್ನೂ ಸುಗಮ ಗೊಳಿಸಲು ಮತ್ತು ಅಪರಾಧಗಳು ಸಂಭವಿಸದಂತೆ ತಡೆಯಲು, ನಿಗಾ ವಹಿಸಲು ಎ.ಐ ಕ್ಯಾಮರಾಗಳನ್ನು ಅಳುವಡಿಸಲು ಕ್ರಮ ಕೈಕೊಳ್ಳಲಾಗುವುದು.

ರಾತ್ರಿ ಸಮಯದಲ್ಲಿ ಸಮಯ ಮಿರಿ ತೇರೆದಿರುವ ಹೋಟೆಲ್ ಮತ್ತು ಅಂಗಡಿಗಳು ಇನ್ನು ಮುಂದೆ ಸಮಯದ ಒಳಗಾಗಿ ಮುಚ್ಚಲು ಕಠಿಣ ಕ್ರಮ ಕೈಕೊಳ್ಳಲಾಗುವುದು.
ಬೀದರ ಜಿಲ್ಲಾ ಪೊಲೀಸ್ ನಿರಂತರ ಸಾರ್ವಜನಿಕರ ಹಿತಕ್ಕಾಗಿ ಕ್ರಮ ಕೈಕೊಳ್ಳಲಾಗುತ್ತಿದ್ದು, ತಾವು ಸಹ ಸಹಕರಿಸುವಂತೆ ಕೊರಲಾಗಿದೆ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.

30/01/2025

ಕಲಬುರ್ಗಿ : ನಿಮ್ಮ ದೌರ್ಜನ್ಯ ದಬ್ಬಳಿಗೆ ಬಡವರ ಮೇಲೆ ತೋರಿಸ್ತೀರಾ ?

ಬಳ್ಳಾರಿ:ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ & ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ 2 ನಿಮಿಷಗ...
30/01/2025

ಬಳ್ಳಾರಿ:ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ & ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ 2 ನಿಮಿಷಗಳು ಮೌನ ಆಚರಣೆ ಮಾಡಲಾಯಿತು.
112ballari

30/01/2025

ಅಕ್ರಮ ಜಾಗ ತೆರವು, ಜೆಸಿಬಿ ಗಳ ಘರ್ಜನೆಗೆ ಜನರ ಆಕ್ರೋಶ

30/01/2025

ಕಾಮಗಾರಿ ಪ್ರಗತಿಯಲ್ಲಿದೆ ವಾಹನಸವಾರರು ಸಹಕರಿಸಿ

ರೈಚೂರು ಸೈದಪುರ್ ಕ್ರಾಸ್ ಯಾದಗಿರಿ ಕಲಬುರ್ಗಿರಾಯಚೂರು ಬಿಡುವ ಸಮಯ ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ ಕಲಬುರ್ಗಿ ತಮ್ಮ ತಲುಪು ಸಮಯ ಸಾಯಂಕಾಲ 6:4...
30/01/2025

ರೈಚೂರು ಸೈದಪುರ್ ಕ್ರಾಸ್ ಯಾದಗಿರಿ ಕಲಬುರ್ಗಿ

ರಾಯಚೂರು ಬಿಡುವ ಸಮಯ ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ

ಕಲಬುರ್ಗಿ ತಮ್ಮ ತಲುಪು ಸಮಯ ಸಾಯಂಕಾಲ 6:45 ನಿಮಿಷಕ್ಕೆ

ದರ 232

30/01/2025

ಕಲಬುರಗಿಯಲ್ಲಿ ಜೆಸಿಪಬಿ ಗರ್ಜನೆ ಅಕ್ರಮ ಬ್ಯಾನರ್ಗಳ ತೆರವು ಕಾರ್ಯಾಚರಣೆ

Address

Yadgir
585201

Telephone

+919449287890

Website

Alerts

Be the first to know and let us send you an email when Yadgir News posts news and promotions. Your email address will not be used for any other purpose, and you can unsubscribe at any time.

Contact The Business

Send a message to Yadgir News:

Videos

Share