ಕೊಡವಾಮೆ ಬಾಳೋ: ಕೊಡವರ ಬೃಹತ್ ಪಾದಯಾತ್ರೆಗೆ ಚಾಲನೆ*
ಕುಟ್ಟದಿಂದ ಕೊಡವಾಮೆ ಬಾಳೊ ಪಾದಯಾತ್ರೆಗೆ ಚಾಲನೆ ನೀಡಲಾಗಿದ್ದು ನಿರೀಕ್ಷೆಗೂ ಮೀರಿದ ಜನ ಸಾಗರ ಹರಿದು ಬಂದು ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕುಟ್ಟ ಬಸ್ ನಿಲ್ದಾಣದಲ್ಲಿ ಆರಂಭವಾದ ಪಾದಯಾತ್ರೆಯಲ್ಲಿ ಸುಮಾರು 2.5 ಕಿ ಮೀ ಉದ್ದದವರೆಗೆ ಕೊಡವ ಜನಾಂಗದವರು ನೆರೆದಿದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವರು ಹಾಗೂ ಕೊಡವ ಭಾಷಿಕರು.ಮಹಿಳೆ, ಮಕ್ಕಳು ಭಾಗಿಯಾಗಿದ್ದು, ಪಾದಯಾತ್ರೆಯು ಕುಟ್ಟದಿಂದ ಮಡಿಕೇರಿಯವರೆಗೆ 78 ಕಿಲೋಮೀಟರ್ ಕ್ರಮಿಸಲಿದೆ.
ಶುಕ್ರವಾರ ಮಡಿಕೇರಿಯಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ.
ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ
ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಗೆ ಚಾಲನೆ
ದಿನಾಂಕ 26.01.2025 ರಂದು ಸಂಜೆ ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದ ಭವ್ಯ ಹಾಗೂ ಅದ್ದೂರಿಯ ವರ್ಣರಂಜಿತ ಸಮಾರಂಭದಲ್ಲಿ “ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ “ ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವೇದಿಕೆಯ ಮಹಾ ಪೋಷಕರು ಆದ ಕೆ. ರಾಮರಾಜನ್ ಅವರು ಅಧೀಕೃತ ಚಾಲನೆ ನೀಡಿದರು.
ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾ ಕೆ.ಎಸ್ ಸುಂದರ್ ರಾಜ್, ಮುಖ್ಯ ಅಥಿತಿ ನಟಿ ಹರ್ಷಿಕಾ ಪೂಣಚ್ಚ, ಉದಯೋನ್ಮುಖ ನಟಿ ತೇಜಸ್ವಿನಿ, ಕಲಾ ಪೋಷಕರು ಹಾಗೂ ಶಕ್ತಿ ದಿನಪತ್ರಿಕೆಯ ಜಿ. ಚಿದ್ವಿಲಾಸ್,
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ
ಅಧ್ಯಕ್ಷಕರಾದ ಕೆ.ಕೆ. ನೌಶದ್, ಜೀ ಕನ್ನಡ ವಾಹಿನಿಯ ಕಂಟೆಸ್ಟೆಂಟ್ ಹೆಡ್ ಸಚಿನ್ ಪ್ರಕಾಶ್ ಕುಂದನಕೋಡಿ ಮುಂತಾದವರು ಭಾಗವಸಿದ್ದರು, ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪೊಲೀಸರಿಂದ ಸಮೂಹ ಗೀತೆ, ರಸ ಮಂಜರಿ ಕಾರ್ಯಕ್ರಮ ಸೊಗಸಾಗಿ ಮೂಡಿಬಂದು ಪ್ರೇಕ್ಷಕರನ್ನು ರಂಜಿಸಿತು.
ಕಟ್ಟೆಮಾಡು ದೇವಾಲಯ ಅಚ೯ಕರ ಮೇಲೆ ಹಲ್ಲೆ
ಮೂರ್ನಾಡುವಿನಲ್ಲಿರುವ ಅರ್ಚಕರ ಮನೆಗೆ ಬಂದು ಹಲ್ಲೆ
ವಿಘ್ನೇಶ್ ಭಟ್ ಹಲ್ಲೆಗೊಳಗಾದ ಅರ್ಚಕ
ಕಟ್ಟೆಮಾಡು ಶ್ರೀ ಮೖತ್ಯಂಜಯ ದೇವಾಲಯದ ಅಚ೯ಕರಾಗಿರುವ ವಿಘ್ನೇಷ್ ಭಟ್
ಮಡಿಕೇರಿ ಜಿಲ್ಲಾಸ್ಪತ್ರೆಗೆ ಗಾಯಾಳು ಅರ್ಚಕ ರವಾನೆ
ಇಂದು ಸಂಜೆ ನಡೆದ ಘಟನೆ
ತಿತಿಮತಿಯಲ್ಲಿ ಒಂಟಿ ಸಲಗವೊಂದರ ಪುಂಡಾಟಕ್ಕೆ ಭಯಭೀತರಾದ ಜನ
ಚೆಪ್ಪುಡೀರ ಅರುಣ್ ಮಾಚಯ್ಯ ಮನೆಯ ವಠಾರದಲ್ಲಿ ಒಂಟಿ ಸಲಗ ಒಡಾಡುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆ.
ಮಡಿಕೇರಿಯಲ್ಲಿ ಗೌಡ ಸಮುದಾಯದಿಂದ ಸ್ವಾಭಿಮಾನ ನಡೆ
ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿರುವ ಮಾರ್ಗ ಮಧ್ಯೆ ತಿತಿಮತಿಯಲ್ಲಿ ಕಾಡಾನೆ ದಾಳಿಗೆ ಕಾರು ಸಂಪೂರ್ಣ ಪುಡಿ
ಅದೃಷ್ಟವಶತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ
ಪ್ರಯಾಣಿಕರು ಅದಷ್ಟು ಜಾಗ್ರತೆ ವಹಿಸಬೇಕು ಎಂದು ಮನವಿ
ಅಮ್ಮ ರಜೆ ಹಾಕಿ ಬರ್ತಿನಿ ಅಂದ ಮಗ ಶವವಾಗಿ ಬಂದ ಅಂತ ತಾಯಿ ಕಣ್ಣೀರು
ಹುತಾತ್ಮ ಯೋಧ ದಿವಿನ್ ಅವರ ತಾಯಿ ಜಲಜಾಕ್ಷಿ ಅವರು ಅಂತಿಮ ನಮನ ಸಲ್ಲಿಸುವ ಸಂದರ್ಭ ಹಾಗೂ ಮೇಜರ್ ಯಿಂದ ರಾಷ್ಟ್ರಧ್ವಜ ಪಡೆಯುವ ಸಂದರ್ಭ ದಿವಿನ್ ತಾಯಿ ಹಾಗೂ ಬಂಧು- ಬಳಗದವರು ಜೋರಾಗಿ ಅಳುತ್ತಾ ಕಣ್ಣೀರಿಟ್ಟ ಹೃದಯ ವಿದ್ರಾವಕ ದೃಶ್ಯ ಮನಕಲಕುವಂತಿತ್ತು.
ವೀರ ಜವಾನ್ ಧಿವಿನ್ ಅಮರ್ ರಹೆ: ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದ ಗ್ರಾಮಸ್ಥರು, ವಿದ್ಯಾರ್ಥಿಗಳು
ಗ್ರಾಮಸ್ಥರು, ವಿದ್ಯಾರ್ಥಿಗಳು, ಆಲೂರು ಸಿದ್ದಾಪುರ ವ್ಯಾಪ್ತಿಯ ಹಲವಾರು ಗ್ರಾಮಗಳಿಂದ ಸಾಲುಗಟ್ಟಿ ಬರುತ್ತಿರುವ ಜನರು
ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮಪಂಚಾಯತ್ ವತಿಯಿಂದ ಸಕಲ ವ್ಯವಸ್ಥೆ
ಸ್ಥಳದಲ್ಲಿ ಹಾಜರಿರುವ ಪೊಲೀಸರಿಂದ ಜನಸಾಗರದ ನಿಯಂತ್ರಣ
ತಮ್ಮೂರ ವೀರಯೋಧನಿಗೆ ಕಂಬನಿಯ ವಿದಾಯ ಹೇಳುತ್ತಿರುವ ಗ್ರಾಮಸ್ಥರು,
ಧಿವಿನ್ ಅಮರ್ ರಹೇ ಎಂದು ಮೊಳಗುತ್ತಿರುವ ಘೋಷಣೆ
ಆಲೂರು ಸಿದ್ದಾಪುರ ಸಂಪೂಣ೯ ಬಂದ್
ಸುತ್ತಮುತ್ತಲಿನ ಶಾಲೆಗಳಿಂದ ನೂರಾರು ಸಂಖ್ಯೆಯಲ್ಲಿ ಬಂದು ನಮನ ಸಲ್ಲಿಸುತ್ತಿರುವ ವಿದ್ಯಾಥಿ೯ಗಳು
ವಿದ್ಯಾಥಿ೯ಗಳಿಗಾಗಿ ಪ್ರತ್ಯೇಕ ಸರದಿ ಸಾಲು
ಧಿವಿನ್ ತಾಯಿ ಜಯ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುತ್ತಿರುವ ಗ್ರಾಮಸ್ಥರು.
ಏಕೈಕ ಮಗನ ಪಾಥೀ೯ವ ಶರೀರದ ಬದಿಯಲ್ಲಿ ನಿಂತು ಕಣ್ಣೀರುಗರೆಯುತ್ತಿರುವ ತಾಯಿ ಜಯ
ಇನ್ನು ಕೆಲವೇ ಹೊತ್ತಿನಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಕೈಗೊಂಡಿರುವ ಕುಟುಂಬ ವ
ಹುಟ್ಟೂರಿಗೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ
ಕುಶಾಲನಗರದಲ್ಲಿ ಹುತಾತ್ಮ ಯೋಧ ದಿವಿನ್ ಪಳಂಗೋಟು ಅವರಿಗೆ ಸಾರ್ವಜನಿಕರಿಂದ ಅಂತಿಮ ನಮನ
ಗಂಟೆಗಟ್ಟಲೆ ಕಾದು ನಿಂತು ಕೊಡಗಿನ ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಮೈಸೂರಿಗರು
ಕೊಡಗಿನ ವೀರ ಯೋಧ ಧಿವಿನ್ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಲು ಮೈಸೂರು ರಿಂಗ್ ರೋಡ್ ಬಳಿ ರಾತ್ರಿ ಕಾದು ನಿಂತ ದೇಶ ಪ್ರೇಮಿಗಳು.
ಆಂಬುಲೆನ್ಸ್ ನಲ್ಲಿ ಬಂದ ಪಾರ್ಥಿವ ಶರೀರಕ್ಕೆ ಅಂತಿಮ ನಮನ.
ವೀರ ಯೋಧನಿಗೆ ಜೈ.
ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಮೊಳಗಿದ ಜೈಕಾರ.
ಕೊಡಗಿನ ಕಡೆ ಹೊರಟಿರುವ ವೀರ ಯೋಧನ ಪಾರ್ಥಿವ ಶರೀರಕ್ಕೆ ಮಾರ್ಗ ಮಧ್ಯೆಯೇ ಊರುಗಳಲ್ಲಿ ಅಂತಿಮ ಗೌರವ ನಮನ ಸಲ್ಲಿಸಲು ಕಾದು ನಿಂತಿರುವ ನೂರಾರು ಜನರು
ಕೊಡಗಿನ ಅನೇಕ ಊರುಗಳಲ್ಲಿ ಹೊಸ ವರ್ಷಾಚರಣೆ ರದ್ದು.