Eedina News Kannada

  • Home
  • Eedina News Kannada

Eedina News Kannada ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.

18/06/2024

ನೀರು ಕುಡಿದು ಸಾವಿನ ಮನೆ ಕದ ತಟ್ಟಿಬಂದ ಚಿನ್ನೇನಹಳ್ಳಿ ಗ್ರಾಮಸ್ಥರು I Ground Report I Drinking Water

ಹಬ್ಬದ ದಿನದಂದು ಕಲುಷಿತ ನೀರು ಸೇವಿಸಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬದುಕಲು ಗಾಳಿ ನೀರು ಬೇಕೆ ಬೇಕು. ಅವುಗಳೇ ವಿಷವಾದರೆ ಬದುಕುವುದಾದರೂ ಹೇಗೆ?

18/06/2024

ಬಡವರ ಪಾಲಿಗೆ ಜೀವ ಕಂಟಕ ಆಗುತ್ತಿವೆಯೇ ಭಾರತೀಯ ರೈಲುಗಳು? Indian Railways

ಉಸಿರುಗಟ್ಟಿಸುವ ಜನದಟ್ಟಣೆ, ಶೌಚಾಲಯಗಳ ಗಬ್ಬುನಾತ, ಕಾಲು ಇಡೋಕು ಜಾಗ ಇಲ್ಲ ಎನ್ನುವಂತೆ ತುಂಬಿರುವ ಬೋಗಿಗಳು.. ರೈಲು ಪ್ರಯಾಣ ಮಾಡಿದರೆ ನರಕ ದರ್ಶನ ಗ್ಯಾರಂಟಿ ಅನ್ನುವ ಮಟ್ಟಿಗೆ ರೈಲುಗಳ ಪರಿಸ್ಥಿತಿ ಹದಗೆಟ್ಟಿದೆ.

18/06/2024

ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.

ದೋಷಪೂರಿತ ಇವಿಎಂಗಳ ಡೇಟಾ ಬಿಡುಗಡೆ ಮಾಡಿ: ಇಸಿಗೆ ಕಾಂಗ್ರೆಸ್ ಸಂಸದ ಆಗ್ರಹ !
ಮುಂಗಾರು ಅಧಿವೇಶನ ಬಳಿಕ 19 ಮಂದಿ NCP ಶಾಸಕರು ನಿಲುವು ಬದಲಿಸಲಿದ್ದಾರೆ: ರೋಹಿತ್ ಪವಾರ್
ಹಲವು ದೇಶಗಳಲ್ಲಿ ಪೇಪರ್ ಬ್ಯಾಲೆಟ್ ಬಳಕೆ, ನಾವೂ ಅದೇ ಹಾದಿಯಲ್ಲಿ ಸಾಗಬೇಕು: ಆಂಧ್ರ ಮಾಜಿ ಸಿಎಂ !
ಅಪಹರಣ ಪ್ರಕರಣ | ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು; ಹಾಸನಕ್ಕೆ ತೆರಳದಂತೆ ಸೂಚನೆ
ಯಾದವರು, ಮುಸ್ಲಿಮರು ನನ್ನಿಂದ ಯಾವುದೆ ಸಹಾಯ ನಿರೀಕ್ಷಿಸಬೇಡಿ: ಜೆಡಿಯು ಸಂಸದ !

18/06/2024

ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ | ಈದಿನ ಸಂಪಾದಕೀಯ

ಪ್ರಧಾನಿ ಮೋದಿಯವರ ಸರ್ಕಾರ ಉಳ್ಳವರ, ಬಲಿಷ್ಠರ, ಮೇಲ್ಜಾತಿಗಳ ಪರವಿರುವ ಸರ್ಕಾರ ಎನ್ನುವುದು ನೀಟ್ ಅಕ್ರಮದಿಂದ ಸಾಬೀತಾಗಿದೆ. ಬಡ, ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಬದುಕಬೇಕೆಂದರೆ, ನೀಟ್ ರದ್ದುಗೊಳಿಸುವುದೊಂದೇ ದಾರಿ. ಆ ಮೂಲಕವಷ್ಟೇ ಶಿಕ್ಷಣ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ.

#

18/06/2024

'ಸಿಎಂ ಸ್ಥಾನದಲ್ಲಿದ್ದೋರು, ಇಂತಹ ಮಾತಾಡಬಾರದು' | HD Kumarswamy | Prajwal Revanna

ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರು ಪ್ರಜ್ವಲ್ ಪೆನ್‍ಡ್ರೈವ್ ಕೇಸಿನ ತನಿಖೆಯ ಹಲವು ಆಯಾಮಗಳ ಬಗ್ಗೆ ಈದಿನ.ಕಾಂ ಸಂದರ್ಶನದಲ್ಲಿ ಮಾತಾಡಿದ್ದಾರೆ. ಫೊರೆನ್ಸಿಕ್ ತನಿಖಾ ತಂತ್ರಜ್ಞಾನದ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ವಿವರಗಳಿಗೆ ಪೂರ್ತಿ ವಿಡಿಯೋ ನೋಡಿ.

ಮಂಡ್ಯ | ಮೈಶುಗರ್‌ ಕಾರ್ಖಾನೆ ಪುನರಾರಂಭ; ಜೂನ್ 23ರಿಂದ ಕಬ್ಬು ಅರೆಯುವಿಕೆಗೆ ಚಾಲನೆಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್*ಮುಂ...
18/06/2024

ಮಂಡ್ಯ | ಮೈಶುಗರ್‌ ಕಾರ್ಖಾನೆ ಪುನರಾರಂಭ; ಜೂನ್ 23ರಿಂದ ಕಬ್ಬು ಅರೆಯುವಿಕೆಗೆ ಚಾಲನೆ

ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್

*ಮುಂದೆ ಓದಿ>>>*
https://eedina.com/karnataka/mysugar-factory-reopen-from-june-23-1004/2024-06-18/

karanata #

18/06/2024

ಈ ದಿನದ ರಾಜ್ಯದ, ರಾಷ್ಟ್ರದ, ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ಧಿಗಳು.

ರಾಜ್ಯದ ಪಾಲಿನ ಹಣವನ್ನ ಕೇಂದ್ರ ಕೊಟ್ಟಿದ್ದರೆ ಇಂಧನ ದರ ಹೆಚ್ಚಿಸುತ್ತಿರಲಿಲ್ಲ ; ಸಿಎಂ
ರಾಹುಲ್‌ ವಿರುದ್ಧ ಅಪಪ್ರಚಾರ ; ಬಲಪಂಥೀಯ ಯೂಟ್ಯೂಬರ್ ವಿರುದ್ಧ FIR
ಎಲಾನ್ ಮಸ್ಕ್ಗೆ ಚುನಾವಣಾ ಆಯೋಗ ಸವಾಲು
ಬಂಗಾಳದಲ್ಲಿ ರೈಲು ದುರಂತ

18/06/2024

ಬಾಲಸೋರ್‌ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ | Railway accident | West Bengal

ಒಡಿಶಾದ ಬಾಲಸೋರ್‌ ನಲ್ಲಿ ನಡೆದ ಭೀಕರ ದುರಂತ ಮಾಸುವ ಮುನ್ನವೇ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಜೂನ್ 17ರಂದು ಬೆಳಗ್ಗೆ 9.30ಕ್ಕೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 15 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

ನಮ್ಮೂರ್‌ ಸುದ್ದಿ I ಶಾಲೆಯಲ್ಲಿ LKG UKG: ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ!ಸುದ್ದಿ 1: ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಎ...
17/06/2024

ನಮ್ಮೂರ್‌ ಸುದ್ದಿ I ಶಾಲೆಯಲ್ಲಿ LKG UKG: ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ!

ಸುದ್ದಿ 1: ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಎಲ್​ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಮುಂದಾಗಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಇತ್ತೀಚೆಗೆ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸುದ್ದಿ 2: ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸವಣೂರು ಮುಖ್ಯ ರಸ್ತೆಯಲ್ಲಿರುವ ಚಂದ್ರು ಇಳಗೇರ ಮತ್ತು ಪಾಲುದಾರರಾಗಿರುವ ಶ್ರಾವಣಿ ರೆಸ್ಟೋರೆಂಟ್, ಬಾರ್ ಮತ್ತು ಲಾಡ್ಜ್ ಸ್ಥಗಿತ(ಬಂದ್) ಮಾಡುವಂತೆ ಕಳೆದ ಮೂರು ದಿನಗಳಿಂದ ಮಹಿಳೆಯರು ರಾತ್ರೋರಾತ್ರಿ ಪ್ರತಿಭನೆ ನಡೆಸಿದರು.

ಸುದ್ದಿ 3: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಉಗ್ರ ಶಿಕ್ಷೆ ವಿಧಿಸಬೇಕು ಮತ್ತು ಚಿತ್ರರಂಗದಿಂದ ಅಮಾನತು ಮಾಡಬೇಕು ಎಂದು ವೀರಶೈವ ಸಮಾಜವು ದಾವಣಗೆರೆಯಲ್ಲಿ ಜೂನ್‌ 13ರಂದು ಪ್ರತಿಭಟನೆ ನಡೆಸಿದರು.

ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
17/06/2024

ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ

17/06/2024

ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಸಿಎಂ I Eid al-Adha I Siddaramaiah

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಸಚಿವ ಮುಸ್ಲಿಂ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.

17/06/2024

ಪ್ರಾಣಿಗಳಲ್ಲಿರುವ ಕಾಮದ ಕಾಳಗ ನಟ ದರ್ಶನ್‌ನಲ್ಲೂ ಇದೆ!

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ನಟಿ ಪವಿತ್ರಾಗೌಡ ಸೇರಿದಂತೆ 18 ಜನ ಸಹಚರರು ಈಗ ಪೊಲೀಸ್‌ ಬಂಧನದಲ್ಲಿದ್ದಾರೆ. ಕೊಲೆ ಸುತ್ತ ಅಡಗಿರುವ ಮನೋಧರ್ಮ, ತನಿಖೆಯ ನಡೆ ಬಗ್ಗೆ, ಮಾಧ್ಯಮಗಳ ವರ್ತನೆ ಹಾಗೂ ಅಭಿಮಾನಿಗಳು ನಡೆದುಕೊಳ್ಳುವ ಬಗೆ ಕುರಿತು ನಿವೃತ್ತ ಪೊಲೀಸ್‌ ಅಧಿಕಾರಿ ಬಿ ಕೆ ಶಿವರಾಮ್‌ ಅವರು ಈ ದಿನ.ಕಾಮ್‌ ಸಂದರ್ಶನದಲ್ಲಿ ವಿಶ್ಲೇಷಿಸಿದ್ದಾರೆ.

#ದರ್ಶನ್ #ರೇಣುಕಾಚಾರ್ಯ #ಅಭಿಮಾನಿಗಳು #ಅಂಧಾಭಿಮಾನ

ಮೋದಿ ಜಾಗಕ್ಕೆ ಗಡ್ಕರಿಯಂತಹ ನಾಯಕರನ್ನು ತರುವುದೇ ಆರೆಸ್ಸೆಸ್? -ಕರಣ್  ಥಾಪರ್ ಸಂದರ್ಶನದಲ್ಲಿ ಕ್ರಿಸ್ಟೋಫೆ ಜಫರ್ಲೋ ತೆರೆದಿಟ್ಟ ಒಳನೋಟಗಳು     ...
17/06/2024

ಮೋದಿ ಜಾಗಕ್ಕೆ ಗಡ್ಕರಿಯಂತಹ ನಾಯಕರನ್ನು ತರುವುದೇ ಆರೆಸ್ಸೆಸ್? -ಕರಣ್ ಥಾಪರ್ ಸಂದರ್ಶನದಲ್ಲಿ ಕ್ರಿಸ್ಟೋಫೆ ಜಫರ್ಲೋ ತೆರೆದಿಟ್ಟ ಒಳನೋಟಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ರಾಜ್ಯದ ಜನತೆಗೆ ಮಾಡುವ ದ್ರೋಹ: ಬೊಮ್ಮಾಯಿ ಕಿಡಿ
17/06/2024

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ರಾಜ್ಯದ ಜನತೆಗೆ ಮಾಡುವ ದ್ರೋಹ: ಬೊಮ್ಮಾಯಿ ಕಿಡಿ

ಕಾವೇರಿ ಒಪ್ಪಂದದಲ್ಲಿ ಅನ್ಯಾಯವಾಗಿದೆ, ಕೇಂದ್ರ ಸರ್ಕಾರವೂ ನ್ಯಾಯ ನೀಡುತ್ತಿಲ್ಲ: ನ್ಯಾ. ಗೋಪಾಲಗೌಡ
17/06/2024

ಕಾವೇರಿ ಒಪ್ಪಂದದಲ್ಲಿ ಅನ್ಯಾಯವಾಗಿದೆ, ಕೇಂದ್ರ ಸರ್ಕಾರವೂ ನ್ಯಾಯ ನೀಡುತ್ತಿಲ್ಲ: ನ್ಯಾ. ಗೋಪಾಲಗೌಡ

17/06/2024

T.M. Krishna on 2024 election outcome

TM Krishna is a renowned Carnatic vocalist, author, and public intellectual known for his innovative approach to music and outspoken views on social and political issues. He has expanded the boundaries of Carnatic music through experimental concert formats and collaborations, and he actively works to democratize the art form. A strong advocate for social justice, secularism, and inclusivity, Krishna uses his platform to address caste-based discrimination and other social issues.
In this video discussion with Venkat, T.M. Krishna spoke on 2024 elections outcome, politics and activism.

ಕಾನೂನು ಎಲ್ಲರಿಗೂ ಒಂದೇ ಎಂದ ಮೇಲೆ ಪ್ರಭಾವಿಗಳಿಗೆ ವಿನಾಯಿತಿ ಏಕೆ? ಬಿ.ಕೆ ಶಿವರಾಂಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ 'ಮಕ್ಕಳ ಮ...
17/06/2024

ಕಾನೂನು ಎಲ್ಲರಿಗೂ ಒಂದೇ ಎಂದ ಮೇಲೆ ಪ್ರಭಾವಿಗಳಿಗೆ ವಿನಾಯಿತಿ ಏಕೆ? ಬಿ.ಕೆ ಶಿವರಾಂ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ 'ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಪ್ರಕರಣ ದಾಖಲಾಗಿ ಹಲವು ತಿಂಗಳುಗಳೇ ಕಳೆದರೂ ಅವರ ಬಂಧನ ಆಗಿಲ್ಲ. ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿವೆ. ಇದರಿಂದಾಗಿ ಜನರು ವ್ಯವಸ್ಥೆ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ವಿದ್ಯಮಾನದ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಮಾತನಾಡಿದ್ದಾರೆ.

-bailable #ಯಡಿಯೂರಪ್ಪ

17/06/2024

50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ, ಬಾಲಕರಿಗೆ ಬಯಲು ಶೌಚವೇ ಗತಿ! RTE

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಮತ್ತು ಸಿಇಆರ್‌ಟಿ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ‘ಆರ್‌ಟಿಇ-2009; ವಸ್ತುಸ್ಥಿತಿ, ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ನಡೆಸಿದ್ದ ಶಾಲಾ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮ ಕುರಿತ ವೀಡಿಯೊ ವರದಿ ಇಲ್ಲಿದೆ.

16/06/2024

ದೇವದಾರಿ ಉಕ್ಕು ಗಣಿಗಾರಿಕೆ I ಆರು ವರ್ಷಗಳಲ್ಲೇ ವರಸೆ ಬದಲಿಸಿದ ಎಚ್‌ಡಿಕೆ; ಹಿಂದೆ ವಿರೋಧ – ಇಂದು ಒಪ್ಪಿಗೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಉಕ್ಕು ಗಣಿಗಾರಿಕೆ ನಡೆಸುವ ಕಡತಕ್ಕೆ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಸಹಿ ಹಾಕಿದ್ದಾರೆ. ಆ ಮೂಲಕ, ಆರು ವರ್ಷಗಳ ಹಿಂದೆ ತಾವೇ ಆಡಿದ್ದ ಮಾತನ್ನು ಮುರಿದು, ತಮ್ಮ ಎರಡು ನಾಲಿಗೆಯ ವರಸೆಯನ್ನು ತೋರಿಸಿದ್ದಾರೆ.

(S)

16/06/2024

ಮಹಿಳೆಯ 53 ಕೇಸ್‌ಗಳು ಯಾವುದಕ್ಕೆ ಸಂಬಂಧ ಪಟ್ಟಿದ್ದು, ಅದರ ಸತ್ಯಾಸತ್ಯತೆ

ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್‌ ದಾಖಲಾಗಿ ತಿಂಗಳುಗಳೇ ಉರುಳಿ ಹೋಯ್ತು.ಇದರ ಮಧ್ಯೆ ಕಂಪ್ಲೇಂಟ್‌ ಕೊಟ್ಟ ಮಹಿಳೆಗೆ ಮಾನಸಿಕ ಅವಸ್ಥೆ ಅನ್ನೋ ಪಟ್ಟವನ್ನ ಕಟ್ಟಿದ್ದೂ ಆಯ್ತು.ದೂರು ಕೊಟ್ಟ ಮಹಿಳೆಗೆ ಈ ರೀತಿ ಕೇಸ್‌ ದಾಖಲಿಸುವುದೇ ಒಂದು ಕೆಲಸ ಅನ್ನೋ ಮಾತುಗಳು ಮೊದಲಿನಿಂದಾನೂ ಸುದ್ದಿ ಮಾಧ್ಯಮಗಳಲ್ಲಿ ಒಡಾಡ್ತಾ ಇದೆ. ಆದ್ರೆ ನಿಜಾವಾಗಿಯೂ ಆ 53 ಕೇಸ್‌ಗಳು ಯಾವುದಕ್ಕೆ ಸಂಬಂಧ ಪಟ್ಟಿದ್ದು, ಅದರ ಸತ್ಯಾಸತ್ಯತೆ ಏನೂ ಅನ್ನೋದನ್ನ ಹುಡುಕೋ ಗೋಜಿಗೆ ಯಾವ ಮಾಧ್ಯಮವೂ ಕೂಡ ಕೈ ಹಾಕಿಲ್ಲ.. ಆದ್ರೆ ಈ 53 ದೂರುಗಳ ಹಿಂದಿನ ಸತ್ಯಾಸತ್ಯತೆ ಏನು ? ಆ ದಾಖಲಾದ ಕಂಪ್ಲೇಂಟ್‌ಗಳಲ್ಲಿ ಏನಿದೆ ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.

16/06/2024

ಷೇರು ಮಾರುಕಟ್ಟೆಯ ಏಳು-ಬೀಳು & ಮೋದಿ ಸರ್ಕಾರದ ಸೋಲು ಗೆಲುವು

ಚುನಾವಣೆಯ ಎಕ್ಸಿಟ್ ಪೋಲ್ ಬಂದಾಗ ಷೇರು ಮಾರುಕಟ್ಟೆ ಭಾರೀ ಲಾಭ ಮಾಡಿತು. ಆದರೆ ಫಲಿತಾಂಶ ಬಂದಾಗ ಭಾರೀ ಕುಸಿತ ಕಂಡಿತು. 31 ಲಕ್ಷ ಕೋಟಿಗಳಷ್ಟು ನಷ್ಟ! ಈದಿನ.ಕಾಂ ಸಂದರ್ಶನದಲ್ಲಿ ಡಾ.ಹಿಮಾಂಶು ಅವರು ಈ ವಿಚಿತ್ರ ವಿದ್ಯಮಾನದ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಿದ್ದಾರೆ. ಇದರ ಒಳಹೊರಗು ಅರಿಯಲು ಪೂರ್ತಿ ವಿಡಿಯೋ ನೋಡಿ.

16/06/2024

371 (ಜೆ) ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸರ್ಕಾರಿ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆಯೇ ?

ಸಾಂವಿಧಾನಿಕ 371 (ಜೆ) ಕಲಂ ಜಾರಿಯಾಗಿರುವುದರಿಂದ ಕಲ್ಯಾಣ ಕರ್ನಾಟಕದವರಿಗೆ ಮಾತ್ರ ಸರ್ಕಾರಿ ಹುದ್ದೆ, ಶೈಕ್ಷಣಿಕ ಸೌಲಭ್ಯಗಳು ಹೆಚ್ಚಾಗಿ ಸಿಗುತ್ತಿವೆ. ಇದರಿಂದ ರಾಜ್ಯದ ಉಳಿದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಧಾರ ರಹಿತ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮುಖಾಂತರ 371(ಜೆ) ವಿರುದ್ಧ ಹೋರಾಟ ನಡೆಸುವವರಿಗೆ ತಕ್ಕ ಉತ್ತರ ನೀಡಲು ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಹೇಳಿದೆ.

#ಕಲ್ಯಾಣಕರ್ನಾಟಕ #ಹೈದರಾಬಾದ್ #ಕರ್ನಾಟಕ371(J)

Address


Alerts

Be the first to know and let us send you an email when Eedina News Kannada posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share