E-News

E-News Contact information, map and directions, contact form, opening hours, services, ratings, photos, videos and announcements from E-News, News & Media Website, .

Easy News is a Pioneering 24x7 News and Entertainment Channel
Delivering high-quality news content not seen before in the web world
This daring, dependable and determined team brings credible news to you ‘at any cost’

05/07/2023

ನಿಮಗೆ ಗೊತ್ತಿರೋತ್ತರ ಇತರ ಮಷಿನ್ ಇದ್ರೆ ಕೇವಲ 25 ರೂಪಾಯಲ್ಲೆ ನಿಮ್ಮೆಲ್ಲ ಆಯುಧಗಳನ್ನ ನುಣುಪಾಗಿಸಬಹುದು ನಿಮಗೆ ಕೆಲಸ ಮಾಡಲು ಇನ್ನೂ ಸುಲಭವಾಗಿರುತ್ತೆ 💁‍♂️

02/06/2023

ತಾಯಿಯ ಪ್ರೀತಿಗೆ ಕಲ್ಲು ಕೂಡ ಕರುಗುತ್ತೆ ಇನ್ನ ಜೀವ ಇರೊ ಈ ಪ್ರಾಣಿಗಳು ಸುಮನೆ ಇರುತ್ತಾವೆಯ ?? Great motherhood by #ಸಾವಿತ್ರಮ್ಮ

01/11/2022

We're Hiring Now!. RO and Water Softener Teechnician - Domestic, Commercial, Appliance Technician Candidate below 35 yrs old and having minimum 2 yrs of experiance.

A company providing multi-brand water Sofetner and water purifier services requires an experienced water purifier technician.

Salary : 15000 to 20000 + TA

Location: Bangalore

Qualification – ITI or Diploma or any Degree

Only Experienced candidates are required to apply

Two-wheelers and smartphones are a must.

Send your updated resume to
[email protected]

06/01/2022
24/12/2021
26/11/2021
26/11/2021
26/11/2021
ದಿನ ಭವಿಷ್ಯಮೇಷ: ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ...
17/09/2021

ದಿನ ಭವಿಷ್ಯ

ಮೇಷ: ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು. ಶುಭ ಸಂಖ್ಯೆ: 7

ವೃಷಭ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 3

ಮಿಥುನ: ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಗೆ ಅಲೆದಾಟ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 9

ಕಟಕ: ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 4

ಸಿಂಹ: ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು. ಶುಭ ಸಂಖ್ಯೆ: 1

ಕನ್ಯಾ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ: 6

ತುಲಾ: ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 7

ವೃಶ್ಚಿಕ: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 3

ಧನು: ಹಿರಿಯರ ಮಾರ್ಗದರ್ಶನ ದೊರೆಲಿದೆ. ಆತ್ಮೀಯರೊಂದಿಗೆ ವಾದವಿವಾದ ಮಾಡಬೇಡಿ. ಮದುವೆಯ ಮಾತುಕತೆ ಕೈಗೂಡುವ ಸಾಧ್ಯತೆ ಇದೆ. ವ್ಯವಹಾರಿಕ ಜಾಣತನದಿಂದ ಲಾಭವಾಗಲಿದೆ. ಮನೆಯಲ್ಲಿ ಸಂತಸ ಕಂಡುಬರುವುದು. ಶುಭ ಸಂಖ್ಯೆ: 2

ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವದು. ಸಹನೆಯಿಂದ ವ್ಯವಹರಿಸಿರಿ.ಗುರುಬಲ ವೃದ್ಧಿಸುವದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವದು. ಹಿರಿಯರ ಮಾತಿನಂತೆ ನಡಯುವದು ಉತ್ತಮ. ಶುಭ ಸಂಖ್ಯೆ: 8

ಕುಂಭ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 4

ಮೀನ: ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವದು ಗುರುಸ್ತೋತ್ರ ಪಾರಾಯಣ ಮಾಡಿರಿ. ಶುಭ ಸಂಖ್ಯೆ: 7

16/09/2021

ಮಾತು ಕೊಟ್ಟ ಆರ್ಯ ಅನು ನಂಬಿಕೆ ಉಳಿಸ್ತಾನಾ?
ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ‌‌ Zee5:
https://zee5.onelink.me/RlQq/fbJotheJotheyaliZEE5

16/09/2021
16/09/2021
ದಿನ ಭವಿಷ್ಯಮೇಷ: ಕಾರ್ಯಸಿದ್ದಿ, ಮನಃಶಾಂತಿ ಇದೆ. ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವುದರಿಂದ ಇನ್ನೂ ಹೆಚ್ಚಿನ ವ್ಯವಹಾ...
16/09/2021

ದಿನ ಭವಿಷ್ಯ

ಮೇಷ: ಕಾರ್ಯಸಿದ್ದಿ, ಮನಃಶಾಂತಿ ಇದೆ. ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವುದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ. ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ: 9

ವೃಷಭ: ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಸಹೋದರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಪರಸ್ಪರ ದೋಷಾರೋಪ ಬೇಡ. ಮಿತ್ರರ ಸಹಾಯ ದೊರೆಯುವುದು. ಶುಭ ಸಂಖ್ಯೆ: 1

ಮಿಥುನ: ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ: 8

ಕಟಕ: ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂದಿತ ಕ್ರಯವಿಕ್ರಯ ವ್ಯವಹಾರಗಳು ಕುದುರುವವು. ಅನವಶ್ಯಕ ಮಾತಿನಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ತಜ್ಞರ ಸಹಾಯ ಪಡೆಯಿರಿ. ಶುಭ ಸಂಖ್ಯೆ: 2

ಸಿಂಹ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವುದು. ಶುಭ ಸಂಖ್ಯೆ: 7

ಕನ್ಯಾ: ಹೊಸ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಕಠಿಣ ಪರಿಸ್ಥಿತಿಯಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ಪರಿವಾರದಲ್ಲಿ ಸಂತಸವಿರುವದು. ಕೇಡುಬಯಸುವ ಜನರಿಗೆ ಅಂಜದೇ ಮುಂದುವರಿಯಿರಿ. ಶುಭ ಸಂಖ್ಯೆ: 3

ತುಲಾ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ: 5

ವೃಶ್ಚಿಕ: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು. ಶುಭ ಸಂಖ್ಯೆ: 4

ಧನು: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 9

ಮಕರ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 2

ಕುಂಭ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 1

ಮೀನ: ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ಮೊದಲು ಕಷ್ಟ ನಂತರದಲ್ಲಿ ಉತ್ತಮವಾದ ಫಲ ದೊರೆಯುವದು. ಗುರುಬಲ ವೃದ್ಧಿಸುವುದು. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ಶುಭ ಸಂಖ್ಯೆ: 3

15/09/2021
11/09/2021
*ಸ್ವರ್ಣಗೌರಿ ವ್ರತದ ಮಹತ್ವವೇನು? ಇದನ್ನು ಆಚರಿಸುವ ಬಗೆ ಹೇಗೆ? ಇದರ ಬಗ್ಗೆ ಪೂರ್ಣ ವಿವರ ಇಲ್ಲಿದೆ*ಗೌರಿ ಹಬ್ಬವನ್ನು ಸಾಮಾನ್ಯವಾಗಿ ಹೆಣ್ಣುಮಕ್ಕ...
11/09/2021

*ಸ್ವರ್ಣಗೌರಿ ವ್ರತದ ಮಹತ್ವವೇನು? ಇದನ್ನು ಆಚರಿಸುವ ಬಗೆ ಹೇಗೆ? ಇದರ ಬಗ್ಗೆ ಪೂರ್ಣ ವಿವರ ಇಲ್ಲಿದೆ*

ಗೌರಿ ಹಬ್ಬವನ್ನು ಸಾಮಾನ್ಯವಾಗಿ ಹೆಣ್ಣುಮಕ್ಕಳೇ ಆಚರಿಸುವುದು ಹೌದಾದರೂ ಹಿಂದೆ ಪುರುಷರೂ ಆಚರಿಸುತ್ತಿದ್ರಂತೆ. ಗಣಪತಿಯ ತಾಯಿ ಗೌರಿಯನ್ನು ನಾಳೆ ಪೂಜಿಸಿ ಭೂಮಿಯ ಮೇಲೆ ಕರೆದು ಸಂಭ್ರಮಪಟ್ಟರೆ, ತಾಯಿಯನ್ನು ಹುಡುಕುತ್ತಾ ಮಗ ಗಣಪ ಕೂಡಾ ಮಾರನೆಯ ದಿನ ತಪ್ಪದೇ ಬರುತ್ತಾನೆ ಎನ್ನುವ ನಂಬಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವರ್ಣಗೌರಿ ವ್ರತದ ಆಚರಣೆ ಹೇಗೆ, ಯಾಕೆ ಮಾಡಬೇಕು ಎನ್ನುವುದರ ಪೂರ್ಣ ವಿವರ ಇಲ್ಲಿದೆ.
Samudrika Shastra : ಇನ್ಮೇಲೆ ಜನರ ಉಗುರು ಗಮನಿಸಿ, ಉಗುರು ಹೀಗಿದ್ರೆ ಅವ್ರ ವ್ಯಕ್ತಿತ್ವ ಹೀಗೇ ಇರುತ್ತೆ!
ಗೌರಿ ಹಬ್ಬ, ಸ್ವರ್ಣಗೌರಿ ವ್ರತದ ಮಹತ್ವವೇನು? ಇದನ್ನು ಆಚರಿಸುವ ಬಗೆ ಹೇಗೆ? ಇದರ ಬಗ್ಗೆ ಪೂರ್ಣ ವಿವರ ಇಲ್ಲಿದೆ
Significance of Gowri Festival: ಗೌರಿ ಹಬ್ಬವನ್ನು ಸಾಮಾನ್ಯವಾಗಿ ಹೆಣ್ಣುಮಕ್ಕಳೇ ಆಚರಿಸುವುದು ಹೌದಾದರೂ ಹಿಂದೆ ಪುರುಷರೂ ಆಚರಿಸುತ್ತಿದ್ರಂತೆ. ಗಣಪತಿಯ ತಾಯಿ ಗೌರಿಯನ್ನು ನಾಳೆ ಪೂಜಿಸಿ ಭೂಮಿಯ ಮೇಲೆ ಕರೆದು ಸಂಭ್ರಮಪಟ್ಟರೆ, ತಾಯಿಯನ್ನು ಹುಡುಕುತ್ತಾ ಮಗ ಗಣಪ ಕೂಡಾ ಮಾರನೆಯ ದಿನ ತಪ್ಪದೇ ಬರುತ್ತಾನೆ ಎನ್ನುವ ನಂಬಿಕೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವರ್ಣಗೌರಿ ವ್ರತದ ಆಚರಣೆ ಹೇಗೆ, ಯಾಕೆ ಮಾಡಬೇಕು ಎನ್ನುವುದರ ಪೂರ್ಣ ವಿವರ ಇಲ್ಲಿದೆ.
ಗೌರಿ ಹಬ್ಬ, ಸ್ವರ್ಣಗೌರಿ ವ್ರತದ ಮಹತ್ವವೇನು? ಇದನ್ನು ಆಚರಿಸುವ ಬಗೆ ಹೇಗೆ? ಇದರ ಬಗ್ಗೆ ಪೂರ್ಣ ವಿವರ ಇಲ್ಲಿದೆ
ಸ್ವರ್ಣಗೌರಿ-ಗಣೇಶ ಮೂರ್ತಿಗಳು.

ಶ್ರುಣು ರಾಜನ್ ಪ್ರವಕ್ಷಾಮೋ ನಭಃ ಶುಕ್ಲೇ ತೃತೀಯಕೇ|
ಆರಬ್ಧವ್ಯಂ ವ್ರತಮಿದಂ ಗೌರ್ಯಾಃ ಷೋಡಶ ವತ್ಸರಾನ್||

ಪ್ರಾಚೀನ ಕಾಲದಲ್ಲಿ "ವಿಮಲಾ" ಎಂಬ ನಗರವನ್ನು ಆಳುತ್ತಿದ್ದ ಚಂದ್ರಪ್ರಭನೆಂಬ ರಾಜನು ಬೇಟೆಗಾಗಿ ಅರಣ್ಯಕ್ಕೆ ಹೋದಾಗ ಅಲ್ಲಿ ಸುಂದರ ಸರೋವರದ ತೀರದಲ್ಲಿ ಸ್ವರ್ಣಗೌರೀ ವ್ರತವನ್ನು ಆಚರಿಸುತ್ತಿದ್ದ ಅಪ್ಸರಸ್ತ್ರೀಯರನ್ನು (Women performing Puja) ಇದಾವ ವ್ರತವೆಂದು ಕೇಳಿದಾಗ ಆ ಸ್ತ್ರೀಯರಿತ್ತ ಉತ್ತರ ಈ ಶ್ಲೋಕ. "ಭಾದ್ರಪದ ಶುಕ್ಲದ ತದಿಗೆಯಂದು ಆರಂಭಿಸಿ ಹದಿನಾರು ಗ್ರಂಥಿಯುಳ್ಳ ದಾರದ ಜೊತೆಗೆ ಕಲಶವನ್ನು ವಿಧಿವತ್ತಾಗಿ ಸ್ಥಾಪಿಸಿ ಗೌರಿಯನ್ನು ಹದಿನಾರು ಉಪಚಾರಗಳಿಂದ ಪೂಜಿಸಿ ಹದಿನಾರು ಬಾಗಿನಗಳನ್ನು ಸುವಾಸಿನಿಯರಿಗೆ ನೀಡಿ ಹದಿನಾರು ವರ್ಷಕಾಲ ಈ ವ್ರತವನ್ನು ಆಚರಿಸಿ (Pray God) ಉದ್ಯಾಪನೆ ಮಾಡಿದರೆ ಸಕಲ ಸಂಪತ್ತುಗಳೂ ಉಂಟಾಗುತ್ತವೆ" ಎಂದು ಸಂಕ್ಷೇಪವಾಗಿ ವ್ರತದ ಮಹಿಮೆಯನ್ನು ರಾಜನಿಗೆ ಅಪ್ಸರೆಯರು ತಿಳಿಸುತ್ತಾರೆ. ರಾಜನು ಅವರ ಮಾತನ್ನು ಕೇಳಿ ವ್ರತವನ್ನು ಮಾಡಿ ಪವಿತ್ರ ದಾರವನ್ನು ಧರಿಸಿ ತನ್ನ ಪಟ್ಟಣಕ್ಕೆ ಹೋದನು.
ದೊರೆಯ ಮೊದಲ ಪತ್ನಿ 'ಮಹಾದೇವಿ'ಯು ದುರಹಂಕಾರದಿಂದ ರಾಜನ ತೋಳಿನ ದಾರವನ್ನು ಕಿತ್ತು ಬಿಸುಟಳು. ಅದು ಒಣಗಿದ ಮರದ ಮೇಲೆ ಬಿದ್ದಾಗ ಅದರ ಮಹಿಮೆಯಿಂದ ಮರ ಚಿಗುರಿದ್ದನ್ನು ಕಂಡು ಕಿರಿಯ ಪತ್ನಿ 'ಬಲಾ' ಎನ್ನುವವಳು ಆ ದಾರವನ್ನು ತಾನು ಧರಿಸಿದಳು. ಆ ಪವಿತ್ರ ದಾರದ ಬಲದಿಂದ ಅವಳು ರಾಜನಿಗೆ ಪ್ರೀತಿಪಾತ್ರಳಾದಳು. ಮೊದಲ ಪತ್ನಿಯು ಮಾನಸಿಕ ಕ್ಲೇಶಕ್ಕೆ ಒಳಗಾಗಿ ಕಾಡಿನಲ್ಲಿ ಅಲೆಯುತ್ತಾ ಅಲ್ಲಿ ಋಷಿಗಳನ್ನು ಕಂಡು ಅವರ ಸಹಾಯದಿಂದ ಗೌರಿಯನ್ನು ಆರಾಧಿಸಿ ಕ್ಲೇಶದೋಷಗಳನ್ನು ಕಳೆದುಕೊಂಡು ಪುನಃ ಅರಮನೆಗೆ ಬಂದು ರಾಜನೊಂದಿಗೆ ವ್ರತವನ್ನು ಆಚರಿಸಿದಳು. ಅನೇಕ ವರ್ಷ ಸುಖ ಸಮೃದ್ಧಿಯಿಂದ ಪ್ರಜೆಗಳನ್ನು ಪಾಲಿಸಿ ರಾಜನು ಇಬ್ಬರೂ ಪತ್ನಿಯರೊಡನೆ ಸ್ವರ್ಗವನ್ನು ಸೇರಿದನು.
ಈ ಕಥೆಯು ಶ್ರೀಸ್ಕಾಂದಪುರಾಣದಲ್ಲಿ ಭಗವಾನ್ ಶಿವನು ಪುತ್ರನಾದ ಸ್ಕಂದನಿಗೆ ಹೇಳಿದನೆಂದೂ ಈ ವ್ರತದ ಉದ್ಯಾಪನೆಯ ವಿಧಾನವನ್ನು ಶ್ರೀಕೃಷ್ಣಪರಮಾತ್ಮನು ಯುಧಿಷ್ಠಿರನಿಗೆ ಉಪದೇಶಿಸಿದನೆಂದೂ ಉಲ್ಲೇಖವಿದೆ. ವಿಶೇಷವಾಗಿ ಸೌಮಂಗಲ್ಯವನ್ನು ಅಪೇಕ್ಷಿಸುವ ಈ ವ್ರತವನ್ನು ಗಂಡಸರು ಮಾಡಬಹುದಾದರೂ ಹೆಚ್ಚಾಗಿ ಸ್ತ್ರೀಯರೇ ಆಚರಿಸುವ ಪದ್ಧತಿ ಬೆಳೆದುಬಂದಿದೆ.
ಹಬ್ಬದ ಜೊತೆ ತವರಿನ ಸಡಗರ
ಶ್ರಾವಣ ಮಾಸದಲ್ಲಿ ತವರಿನಿಂದ ಅರಶಿನ-ಕುಂಕುಮ ಹೊತ್ತ ಸಂಬಂಧಿಗಳು ಬರುವುದೂ ಪುನಃ ವ್ರತವನ್ನು ಆಚರಿಸಿದ ನಂತರ ತವರಿಗೆ ತಾಯಿಬಾಗಿನವನ್ನು ಕೊಡಲು ಹೆಣ್ಣುಮಕ್ಕಳು ಹೋಗುವುದೂ ಆ ಮೂಲಕ ಸಂಬಂಧವನ್ನು ಹಾರ್ದಿಕವಾಗಿ ಇಡುವುದೂ ಸಂಪ್ರದಾಯವಾಗಿದೆ.
ಮಳೆಗಾಲದ ಅಬ್ಬರ ಸ್ವಲ್ಪ ಕಡಿಮೆಯಾಗಿ ಹೂವು ಅರಳುವ ಸಂಭ್ರಮದ ಕಾಲದಲ್ಲಿ ಹದಿನಾರು ತರದ ಪತ್ರೆಗಳನ್ನೂ , ಹದಿನಾರು ತರದ ಹೂಗಳನ್ನೂ , ಪೂಜಾಸಾಮಗ್ರಿಗಳನ್ನು ಹೊಂದಿಸುವುದೇ ಸಂಭ್ರಮ. ಈ ಗೌರಿ ಹಬ್ಬಕ್ಕೆಂದೇ ವಿಶೇಷವಾಗಿ ಹದಿನಾರು ಎಳೆಯ ಹತ್ತಿಯ ಗೆಜ್ಜೆವಸ್ತ್ರಗಳನ್ನು ರಚಿಸುವ ಕ್ರಮವಿದ್ದು ಅದರಲ್ಲಿ ನಾನಾ ವಿನ್ಯಾಸಗಳನ್ನು ಮಾಡುವ ಕೌಶಲವೂ ಸೇರಿ ಅದೊಂದು ಕಲಾಪ್ರಕಾರವಾಗಿಯೇ ಬೆಳೆದಿದೆ.
ಮಾರನೇ ದಿನವೇ ನೈವೇದ್ಯಪ್ರಿಯನಾದ ಗೌರಿಯ ಮಗ ಗಣಪತಿಯ ವ್ರತವೂ ಆಚರಿಸುವುದರಿಂದ ಚಕ್ಕುಲಿ, ಕರಿಗಡುಬು, ಮೋದಕ, ಕೊಟ್ಟೆಕಡುಬು ಇತ್ಯಾದಿ ನಾನಾವಿಧ ಭಕ್ಷ್ಯಗಳ ತಯಾರಿ ಮತ್ತು ಪ್ರಸಾದವನ್ನು ಸವಿಯುವ ಸಂಭ್ರಮಕ್ಕೆ ಎಲ್ಲರೂ ಸೇರುತ್ತಾರೆ. ಗಣಪತಿಗೆ ಗರಿಕೆಯನ್ನು ಅರ್ಪಿಸಲಂತೂ ಮಕ್ಕಳಲ್ಲಿ ಸ್ಪರ್ಧೆಯೇ ಏರ್ಪಡುವ ಕಾಲವಿತ್ತು!
ಬಾಗಿನದ ಮಹತ್ವ ವ್ರತದ ಮಹತ್ವದ ಅಂಶಗಳಲ್ಲಿ "ಉಪಾಯನದಾನ"ವೂ ಒಂದು. ಅಕ್ಕಿ,ತೆಂಗಿನಕಾಯಿ, ಕಡಲೆ, ಹಣ್ಣು,ತಾಂಬೂಲ, ಬಳೆ, ಬಾಚಣಿಗೆ, ವಸ್ತ್ರ, ಅರಶಿನ ಕುಂಕುಮ, ಕಾಡಿಗೆ ಇತ್ಯಾದಿ ಮಂಗಲದ್ರವ್ಯಗಳನ್ನು ಅರ್ಹರಿಗೆ ಕೊಡುವುದರಿಂದ ಕಷ್ಟದಲ್ಲಿರುವವರ ಬದುಕಿನ ನಿರ್ವಹಣೆಗೂ ಸಹಾಯವಾಗುವುದಲ್ಲದೆ ಪೂಜಿಸಿಯೇ ಕೊಡಬೇಕಾದ್ದರಿಂದ ಅಹಂಕಾರ ನಿರ್ಮೂಲನೆಯೂ ಆಗುತ್ತದೆ.
ಹಬ್ಬಗಳ ಮೂಲ ಉದ್ದೇಶವೇ ಸಮಾಜದ ಸ್ವಾಸ್ಥ್ಯ ಶ್ರದ್ಧಾ ಭಕ್ತಿಯಿಂದ ಹಬ್ಬಗಳನ್ನು ಆಚರಿಸಿ ದೇಶವು ಸುಭಿಕ್ಷವಾಗಲೆಂದು, ಸೌಮನಸ್ಯ ಸಿದ್ಧಿಸಲೆಂದು ,ಈತಿಬಾಧೆಗಳು ನಿವಾರಣೆಯಾಗಲೆಂದು ಆ ದೇವಿಯನ್ನು ಪ್ರಾರ್ಥಿಸೋಣ.

ಜಯದೇವಿ ನಮಸ್ತುಭ್ಯಂ ಜಯಭಕ್ತ ವರಪ್ರದೇ|
ಜಯ ಶಂಕರವಾಮಾಂಗೇ ಮಂಗಲೇ ಸರ್ವಮಂಗಲೇ||

*ಎಲ್ಲರಿಗೂ ಗೌರಿ ಗಣೇಶ ಹಬ್ಬದ ಸಂತೋಷದ ಸಂಭ್ರಮದ ಶುಭಾಶಯಗಳು*

Shikhar Dhawan gets divorced, part ways with Ayesha Mukherjee after eight years of marriage
07/09/2021

Shikhar Dhawan gets divorced, part ways with Ayesha Mukherjee after eight years of marriage

ಗಣೇಶ ಚತುರ್ಥಿ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮ...
07/09/2021

ಗಣೇಶ ಚತುರ್ಥಿ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ.

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಎಷ್ಟು ಆಪ್ತವಾಗಿದ್ದರು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ.

ಪಕ್ಕಾ ಟ್ರೆಡಿಷನಲ್​ ಉಡುಗೆಯಲ್ಲಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಕಾಣಿಸಿಕೊಂಡಿದ್ದಾರೆ. ಮಂಜು ಭುಜದ ಮೇಲೆ ಕೈಯಿಟ್ಟು ಪೋಸ್​ ನೀಡಿರುವ ದಿವ್ಯಾ ನಗು ಬೀರಿದ್ದಾರೆ. ಈ ಫೋಟೋವನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹಬ್ಬ ಮಾಡುತ್ತಿದ್ದಾರೆ. ಅಂದಹಾಗೆ, ಇದು ಕಲರ್ಸ್​ ಕನ್ನಡ ವಾಹಿನಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕ್ಲಿಕ್ಕಿಸಿದ ಫೋಟೋ.

ಬಿಗ್​ ಬಾಸ್​ ಸ್ಪರ್ಧಿಗಳನ್ನೆಲ್ಲ ಜೊತೆ ಸೇರಿಸಿ, ಕಲರ್ಸ್​ ಕನ್ನಡ ವಾಹಿನಿಯು ಗಣೇಶೋತ್ಸವ ಆಚರಿಸಿದೆ. ಅದಕ್ಕೆ 'ಬಿಗ್​ ಗಣೇಶೋತ್ಸವ' ಎಂದು ಹೆಸರಿಡಲಾಗಿದೆ. ಹಬ್ಬದ ಆಚರಣೆಗಾಗಿ ಎಲ್ಲರೂ ಟ್ರೆಡಿಷನಲ್​ ಉಡುಗೆ ಧರಿಸಿ ಮಿಂಚಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ ಹೆಚ್ಚು ಗಮನ ಸೆಳೆದಿದೆ. ವೇದಿಕೆ ಮೇಲೆ ಭರಪೂರ ಮನರಂಜನೆ ಕೂಡ ನೀಡಲಾಗಿದೆ. ಮಂಜು ಪಾವಗಡ ಎಂದಿನಂತೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ಈ ಕಾರ್ಯಕ್ರಮ ಶುಕ್ರವಾರ (ಸೆ.10) ಮಧ್ಯಾಹ್ನ 1 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಈ ಸಂದರ್ಭದಲ್ಲಿ ದಿವ್ಯಾ ಸುರೇಶ್​ ಅವರು ತಾಯಿ ಮತ್ತು ಸಹೋದರನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಕೂಡ ವೈರಲ್​ ಆಗುತ್ತಿದೆ. ಅದೇ ಫ್ರೇಮ್​ನಲ್ಲಿ ಮಂಜು ಪಾವಗಡ ಸಹ ಇದ್ದಾರೆ ಎಂಬುದು ವಿಶೇಷ. 'ಈ ಮೂವರು ನನ್ನ ಬದುಕಿನ ನಿಜವಾದ ಶಿಕ್ಷಕರು. ಹಲವು ರೀತಿಯಲ್ಲಿ ನೀವು ನನಗೆ ಸ್ಫೂರ್ತಿಯಾಗಿದ್ದೀರಿ. ನೀವು ನನ್ನ ಹೃದಯಕ್ಕೆ ತುಂಬ ಹತ್ತಿರವಾದವರು' ಎಂದು ದಿವ್ಯಾ ಸುರೇಶ್​ ಕ್ಯಾಪ್ಷನ್​ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು ಈ ಫೋಟೋ ಕಂಡು ಮೆಚ್ಚುಗೆ ಸೂಚಿಸಿದ್ದಾರೆ.

ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ..?ಹಾಸನ: ನನಗೆ ಆದ ಮೋಸಕ್ಕೆ ಅವನನ್...
06/09/2021

ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ..?

ಹಾಸನ: ನನಗೆ ಆದ ಮೋಸಕ್ಕೆ ಅವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ತನ್ನ ಪ್ರಿಯಕರನನ್ನು ಮದುವೆಯಾದ ಹುಡುಗಿಗೆ ಭಗ್ನ ಪ್ರೇಮಿಯೊಬ್ಬಳು ಎಚ್ಚರಿಕೆ ನೀಡಿ ಹೋದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರಲ್ಲಿ ನಡೆದಿದೆ.

ಸಕಲೇಶಪುರ ಮೂಲದ ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿದ್ದನಂತೆ. ಆದರೆ ಯುವಕ ಇಬ್ಬರನ್ನು ಪ್ರೀತಿಸುತ್ತಿರುವ ವಿಷಯ ಯುವತಿಯರಿಗೆ ತಿಳಿದಿರಲಿಲ್ಲ. ಆದರೆ ಇಬ್ಬರು ಯುವತಿಯರು ಏಕಕಾಲದಲ್ಲಿ ತಮ್ಮನ್ನು ಮದುವೆಯಾಗುವಂತೆ ಯುವಕನ ಬಳಿ ಜಗಳ ಮಾಡಿದ್ದಾರೆ. ಈ ವೇಳೆ ತ್ರಿಕೋನ ಪ್ರೇಮ ಕಥೆ ಬಯಲಾಗಿದೆ.

ಇಬ್ಬರೂ ಯುವತಿಯರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರಿಂದ ಪರಿಚಯಸ್ಥರು ರಾಜಿ, ಪಂಚಾಯತಿ ಮಾಡಲು ಮುಂದಾದರೂ ಫಲಕಾರಿಯಾಗಿಲ್ಲ. ಇಬ್ಬರಲ್ಲಿ ಒಬ್ಬಳು ಯುವತಿ ವಿಷ ಸೇವಿಸಿ ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ. ಇಷ್ಟೆಲ್ಲಾ ಅವಾಂತರದ ನಂತರ ಇಬ್ಬರ ಹೆಸರನ್ನು ಚೀಟಿಯಲ್ಲಿ ಬರೆದು ಹಾಕುತ್ತೇವೆ. ಯಾರ ಹೆಸರು ಬರುತ್ತದೆಯೋ ಆ ಹುಡುಗಿಯನ್ನು ಯುವಕ ವರಿಸುತ್ತಾನೆ ಎಂದು ಪರಿಚಯಸ್ಥರು, ಸಂಬಂಧಿಕರು ತೀರ್ಮಾನ ಮಾಡಿದ್ದಾರೆ.

ಈ ವೇಳೆ ಒಂದು ನಿರ್ಧಾರಕ್ಕೆ ಬಂದ ಯುವಕ ತನಗಾಗಿ ವಿಷ ಸೇವಿಸಿ ಬದುಕಿ ಬಂದ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಮತ್ತೊಬ್ಬ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಯುವಕ ಮದುವೆಯಾಗಲು ನಿರ್ಧರಿಸಿದ ಯುವತಿ ಬಳಿ ಬಂದು, ನನಗೆ ನಿನ್ನ ಮೇಲೆ ಕೋಪವಿಲ್ಲ. ಮನಸ್ಸಲ್ಲಿ ಏನೂ ಇಟ್ಟುಕೊಳ್ಳಬೇಡ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಬದುಕು ಚೆನ್ನಾಗಿರಲಿ ಎಂದಿದ್ದಾಳೆ. ಆದರೆ ನನಗೆ ಮೋಸ ಮಾಡಿದವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಯುವತಿ ಹೊರಟು ಹೋಗಿದ್ದಾಳೆ. ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪ್ರಕರಣದ ವಿಡಿಯೋ ಮಾತ್ರ ವೈರಲ್ ಆಗಿದೆ.

ದಿನ ಭವಿಷ್ಯಮೇಷ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪ ಧನಸಹಾಯ ಲಾಭವಾದರೂ ಹಳೆಯ ಸಾಲ ತೀರುವುದು. ಹಿರಿಯರ ಆ...
06/09/2021

ದಿನ ಭವಿಷ್ಯ

ಮೇಷ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪ ಧನಸಹಾಯ ಲಾಭವಾದರೂ ಹಳೆಯ ಸಾಲ ತೀರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 9

ವೃಷಭ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 1

ಮಿಥುನ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 8

ಕಟಕ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ. ಶುಭ ಸಂಖ್ಯೆ: 3

ಸಿಂಹ: ಸರಳತೆ ದುರುಪಯೋಗವಾಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿಯ ಕುಂದು ಕೊರತೆಗಳನ್ನು ನಿಭಾಯಿಸುವಿರಿ. ಮಹತ್ವದ ಅಧಿಕಾರ ದೊರೆಯುವ ಯೋಗವಿದೆ. ವ್ಯಾಪಾರದಲ್ಲಿ ಹೆಚ್ಚಿನ ಹಣ ಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 7

ಕನ್ಯಾ: ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಆಸೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಉನ್ನತ ಶಿಕ್ಷಣದ ಕನಸು ಈಡೇರುವುದು. ಶುಭ ಸಂಖ್ಯೆ: 4

ತುಲಾ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 5

ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 9

ಧನು: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 2

ಮಕರ: ವ್ಯವಹಾರಿಕ ಏಳ್ಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯ ಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ. ಶುಭ ಸಂಖ್ಯೆ: 7

ಕುಂಭ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 3

ಮೀನ: ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 1

05/09/2021
04/09/2021

ಅಯ್ಯೋ ಭಗವಂತ... ಇದೇನಿದು ಭಗವಂತ ಖುಬಾ..
Radha Hiregoudar
#ಕನ್ನಡಸುದ್ದಿಗಳು #ಕನ್ನಡವಾರ್ತೆ

ದಿನ ಭವಿಷ್ಯಮೇಷ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ...
04/09/2021

ದಿನ ಭವಿಷ್ಯ

ಮೇಷ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಯೋಗವಿದೆ. ಶುಭ ಸಂಖ್ಯೆ: 1

ವೃಷಭ: ವ್ಯಕ್ತಿತ್ವಕ್ಕೆ ತಕ್ಕ ಗೌರವಗಳು ದೊರೆಯುವವು. ಚಾಣಾಕ್ಷತನದಿಂದ ಕಷ್ಟ ಪರಿಹರಿಸಿಕೊಳ್ಳುವಿರಿ. ಅಪೇಕ್ಷಿತ ಕಾರ್ಯಗಳು ಕೈಗೂಡುವವು. ಸಂಬಂಧಿಗಳಿಂದ ಸಹಕಾರ ದೊರೆಯುವುದು. ದೂರ ಪ್ರಯಾಣ, ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 9

ಮಿಥುನ: ವಿವಿಧ ಮೂಲಗಳಿಂದ ಸಹಾಯ ದೊರೆಯುವುದು. ಉದ್ಯೋಗದಲ್ಲಿ ಅಭಿವೃದ್ಧಿ ಇರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಲೆಕ್ಕಾಚಾರ ತಪ್ಪದಂತೆ ಎಚ್ಚರವಹಿಸಿರಿ. ಮನೆಯಲ್ಲಿ ಮಂಗಲಕಾರ್ಯ ಜರುಗುವುದು. ಶುಭ ಸಂಖ್ಯೆ: 2

ಕಟಕ: ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 8

ಸಿಂಹ: ವಿನಯಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗವಿರುವುದು. ಶುಭ ಸಂಖ್ಯೆ: 3

ಕನ್ಯಾ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 7

ತುಲಾ: ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಅಪೇಕ್ಷಿತ ಧನಸಹಾಯ ದೊರೆಯುವುದು. ಶುಭ ಸಂಖ್ಯೆ: 4

ವೃಶ್ಚಿಕ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 7

ಧನು: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 5

ಮಕರ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 6

ಕುಂಭ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 9

ಮೀನ: ಹೊಸ ಯೋಜನೆಗಳು ಬೇಡ.ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವದು. ಕೊಟ್ಟ ಸಾಲ ಮರುಪಾವತಿ ಆಗಲಾರದು,ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ. ಶುಭ ಸಂಖ್ಯೆ: 1

03/09/2021

ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಹಿಡಿದ ಅಮದ್ ನಗರ ಪೊಲೀಸರ ವಿಡಿಯೋ .👇
ಪೊಲೀಸರ ಕಾರ್ಯಕ್ಕೆ ಶ್ಲಾಘನೆ...
🙏🏼💐

ದಿನ ಭವಿಷ್ಯಮೇಷ: ಒಳ್ಳೆಯ ಮಾತುಗಳಿಂದ ಸಂಬಂಧ ಸುಧಾರಿಸುವುದು. ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವುದು. ಶಕ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವು...
03/09/2021

ದಿನ ಭವಿಷ್ಯ

ಮೇಷ: ಒಳ್ಳೆಯ ಮಾತುಗಳಿಂದ ಸಂಬಂಧ ಸುಧಾರಿಸುವುದು. ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವುದು. ಶಕ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೂ ಗಮನಹರಿಸಿ. ಶುಭ ಸಂಖ್ಯೆ: 8

ವೃಷಭ: ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 2

ಮಿಥುನ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ. ಶುಭ ಸಂಖ್ಯೆ: 7

ಕಟಕ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 3

ಸಿಂಹ: ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ. ಶುಭ ಸಂಖ್ಯೆ: 6

ಕನ್ಯಾ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 4

ತುಲಾ: ಹಳೆಯ ಸಾಲ ಮರುಪಾವತಿಯಾಗುವುದು. ಬೇಡವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಭವವಿದೆ. ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಎದುರಾಡುವ ಸಂಭವವಿದೆ. ಶುಭ ಸಂಖ್ಯೆ: 9

ವೃಶ್ಚಿಕ: ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು. ಶುಭ ಸಂಖ್ಯೆ: 1

ಧನು ವಿಶೇಷ ರೀತಿಯ ಕಾರ್ಯ ಒದಗಿ ಬಂದು ಸಂತಸ ಉಂಟಾಗುತ್ತದೆ. ಸ್ಥಾನಮಾನಗಳಿಗೂ ಕೊರತೆ ಇಲ್ಲ. ವಿಶೇಷ ವಸ್ತು ಸಂಗ್ರಹ. ಅನಾರೋಗ್ಯ್ಗ ತೋರಿಬಂದು ಕಿರಿಕಿರಿ ಎನಿಸಬಹುದು. ಶುಭ ಸಂಖ್ಯೆ: 8

ಮಕರ: ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವುದು. ಮನೆಯಲ್ಲಿ ನೆಮ್ಮದಿ ಇರುವುದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 3

ಕುಂಭ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 5

ಮೀನ: ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ. ಒಳ್ಳೆಯ ಸ್ವಭಾವ ಇರುವದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ. ಆಸಕ್ತಿಗೆ ತಕ್ಕಂತೆ ಅವಕಾಶಗಳು ದೊರಕುವವು. ಶುಭ ಸಂಖ್ಯೆ: 2

ಅಭಿನಯ ಚಕ್ರವರ್ತಿಗೆ 50ನೇ ಹುಟ್ಟುಹಬ್ಬದ ಸಂಭ್ರಮ!!ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ...
02/09/2021

ಅಭಿನಯ ಚಕ್ರವರ್ತಿಗೆ 50ನೇ ಹುಟ್ಟುಹಬ್ಬದ ಸಂಭ್ರಮ!!
ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ. ಸ್ಪರ್ಶ ಸಿನಿಮಾದಲ್ಲಿ ನಾಯಕ ನಟನಾಗಿ ಚಂದನವನಕ್ಕೆ ಪಾದರ್ಪಣೆ ಮಾಡಿದ ಕಿಚ್ಚ ಸುದೀಪ್ ಸದ್ಯ ಬಹುಭಾಷಾ ನಟರಾಗಿ ಮಿಂಚುತ್ತಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುದೀಪ್‍ರವರು ಮಂಜಪ್ಪ ಮತ್ತು ಸರೋಜ ದಂಪತಿಯ ಪುತ್ರ. ಸುದೀಪ್‍ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2003ರಲ್ಲಿ ಸುದೀಪ್‍ರವರು ತಮ್ಮ ಗೆಳತಿ ಪ್ರಿಯಾ ಜೊತೆ ಸಪ್ತಪದಿ ತುಳಿದರು. ಸದ್ಯ ಈ ಮುದ್ದಾದ ಜೋಡಿಗೆ ಇದೀಗ ಸಾನ್ವಿ ಎಂಬ ಪುತ್ರಿ ಇದ್ದಾರೆ.

ಸುದೀಪ್‍ರವರಿಗೆ ಮೊದಲಿನಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಆದರೆ ಸುದೀಪ್ ಮುಖಮಾಡಿದ್ದು, ಮಾತ್ರ ಚಿತ್ರರಂಗದ ಕಡೆ. ಕನ್ನಡ ಚಿತ್ರರಂಗವು ಇಷ್ಟು ಎತ್ತರಕ್ಕೆ ಬೆಳಸಲು ಶ್ರಮಿಸಿದ ಹಲವಾರು ನಟರ ಮಧ್ಯೆ ಸುದೀಪ್ ಕೂಡ ಒಬ್ಬರು. ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಹಾಗೂ ಬೀಳುಗಳನ್ನು ಕಂಡರೂ ಸುದೀಪ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ, ಎಲ್ಲೆಡೆ ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ.

ನಾಯಕ ನಟರಾಗಿ ಮಾತ್ರವಲ್ಲದೇ ಖಳ ನಾಯಕನ ಪಾತ್ರದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡ ಸುದೀಪ್‍ಗೆ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವು ಚಿತ್ರರಂಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವಿದೆ. ಸದ್ಯ ಸುದೀಪ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ 25 ವರ್ಷ ಪೂರೈಸಿದ್ದು, ಈ ಸಂಭ್ರಮವನ್ನು ದುಬೈನಲ್ಲಿ ಆಚರಿಸಿದ್ದರು.
Kichcha Sudeep Samarajya Kichcha Sudeep

Address


Website

Alerts

Be the first to know and let us send you an email when E-News posts news and promotions. Your email address will not be used for any other purpose, and you can unsubscribe at any time.

Contact The Business

Send a message to E-News:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share