A1 media bidar

  • Home
  • A1 media bidar

A1 media bidar Akshaa welfare society (r) bidar

28/04/2023

*ಬೀದರ ಉತ್ತರ: ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಬೆಂಬಲಿಸಿ ಸುದ್ದಿಗೋಷ್ಠಿ,*

ಮಾಚ್೯. 1೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷವಾದ ಬಿ.ಜೆ.ಪಿ. ಯನ್ನು ಅಧಿಕಾರಿದಿಂದ ದೂರ ಇಡಲು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸಿ ಬೀದರ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಸುದ್ದಿಗೋಷ್ಠಿ ಮೂಲಕ ಮಾಧ್ಯಮ ಮಿತ್ರರಿಗೆ ತಿಳಿಸುತ್ತಿದ್ದೇವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿಯ ಡಬಲ್ ಇಂಜನ್ ಸರ್ಕಾರ ಇದೆ ರಾಜ್ಯದಲ್ಲಿ ಯಾವುದೇ ಹೇಳಿಕೊಳ್ಳದ ಪ್ರಗತಿಯಾಗಿರುವುದಿಲ್ಲ. ಪ್ರತಿದಿನ ಬೆಲೆ ಏರಿಕೆ, ಒಂದು ಧರ್ಮ ಒ೦ದು ಜಾತಿಯ ನಡುವೆ ವಿಷಬೀಜ ಬಿತ್ತುವುದೇ ಆಗಿತ್ತು. ಮೀಸಲಾತಿ ಹೆಚ್ಚಳ ಚುನಾವಣೆ ನೆಪಕ್ಕೆ ಮಾತ್ರ ಗೆದ್ದ ನಂತರ ಜಾರಿಯಾಗುವುದಿಲ್ಲ, ಈ ನಿಟ್ಟಿನಲ್ಲಿ ಬಿ.ಜೆ.ಪಿ. ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಮ್ಮೆ ಬರಬಾರದು, ಬೀದರ ಉತ್ತರ ಕ್ಷೇತ್ರದ 3 ಅವದಿಗೆ ಶಾಸಕರಾಗಿ ಶ್ರೀ ರಹೀಮ್ ಖಾನ್ ರವರು ದಲಿತರನ್ನು ಓಟ ಬ್ಯಾಂಕ ಆಗಿ ಮಾಡಿಕೊಂಡಿದ್ದಾರೆ. ದಲಿತ ಗ್ರಾಮಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲದೇ ಬೀದರ ನಗರದಲ್ಲಿ ದಲಿತರು ವಾಸವಾಗಿರುವ ಕಾಲೋನಿಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ. ಸೌಕರ್ಯಗಳು ಇರುವುದಿಲ್ಲ ಅಲ್ಲದೆ ಡಾ ಬಿ.ಆರ್, ಅಂಬೇಡ್ಕರ ಭವನಗಳು ಮಂಜೂರು ಮಾಡಿಸಲು ಶಾಸಕರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಸಿಗಬೇಕಾಗಿರುವ ಪ್ರತಿ ಕುಟುಂಬಕ್ಕೆ 02 ಎಕರೆ ಜಮೀನು ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. 2400 ಮನೆಗಳು ಮಂಜೂರಾಗಿದ್ದರೂ, ಫಲಾನುಭವಿಗಳಿಗೆ ಕೊಡದ ಅದರಲ್ಲಿ 1200 ಮನೆಗಳು ವಾಪಸ್ಸು ಸರ್ಕಾರಕ್ಕೆ ಕಳಿಸಿರುತ್ತಾರೆ. ಅಲ್ಲದೇ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಶಾಸಕರು ಯಾವುದೇ ಯೋಜನೆಗಳನ್ನು ತಂದಿರುವುದಿಲ್ಲ. ಅಲ್ಲದೆ, ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೀದರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ಹಿಂದೆಟು ಹಾಕಿದ್ದಾರೆ.
ಯಾವುದೇ ಅಧಿಕಾರವಿಲ್ಲದೇ ಬೀದರ ಜಿಲ್ಲೆಯಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಸಹಕಾರ ಕ್ಷೇತ್ರದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕಾಗಿ ಮತ್ತು ಜಿಲ್ಲೆಯ ನಗರದ ಎಲ್ಲಾ ಧಾರ್ಮಿಕ ದೇವಾಲಯಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಬೀದರ ನಗರದಲ್ಲಿ 02 ಎಕರೆ ಜಾಗದಲ್ಲಿ ಭವ್ಯವಾದ ಅಂಬೇಡ್ಕರ ಭವನ ನಿರ್ಮಾಣ ಮಾಡುವುದು, ಬೀದರ ಉತ್ತರ ಕ್ಷೇತ್ರ ಗುಡಿಸಲು ಮುಕ್ತವಾಗಿ, ಎಲ್ಲರಿಗೆ ವಸತಿ ಒದಗಿಸಿಕೊಡುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳ ಮೂಲಕ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಅನುಕೂಲ ಮಾಡಿಕೊಡುವುದು, ದಲಿತ ಓಣಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುರತಾದ ಬೇಡಿಕೆಗಳನ್ನು ಇಟ್ಟು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್‌, ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸುತ್ತಿದ್ದೇವೆ

ಕಲ್ಯಾಣರಾವ ಭೊಸ್ಲೆ ( ಜಿಲ್ಲಾ ಸಂಚಾಲಕರು ಕ.ದ.ಸಂ.ಸ.( ಭಿಮವಾದ)

ಚಂದ್ರಕಾಂತ ನಿರಾಟೆ
ರಾಜ್ಯ ಉಪಾಧ್ಯಕ್ಷರು
ದಲಿತ ಸೇನೆ ಬೀದರ
ಮಾರುತಿ ಭೌದ್ದೆ ರಾಜ್ಯ ಸಂಘಟನಾ ಸಂಚಾಲಕರು ಕ.ರಾ.ದ.ಸಂ. ಸ.ಬೀದರ.
ಉಮೆಶ ಸ್ವಾರಳಿಕರ ಜಿಲ್ಲಾ ಸಂಚಾಲಕರು ಬೀದರ.
ಶಾಲಿವಾನ್ ಬಡಿಗೆರ್.ಬಾಬುರಾವ ಮಿಠಾರೆ.ಅಂಬರಿಷ್ ಕುದರೆ ಸೆರಿದ್ದರು.

27/04/2023

ಬೀದರ ದಕ್ಷಿಣ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಸನ್ಮಾನ್ಯ ಅಶೋಕ ಖೇಣಿ ರವರು ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿದರು.

ಈ ಸಂಧರ್ಬದಲ್ಲಿ ಮಾತನಾಡಿದ ಅವರು ನನಗೆ ನನ್ನ ಕ್ಷೇತ್ರದ ಜನರು ಬಹಳ ವಿಶ್ವಾಸ ನಂಬಿಕೆ ನೀಡುತ್ತಾ ಇದ್ದಾರೆ ಸೋಲಿಗೆ ಚಾನ್ಸ್ ಇಲ್ಲಾ ಎಂದು ಮುಗ್ಲನಗೆಯಿಂದ ಮಾತನಾಡಿ ನಮ್ಮ ಸರಕಾರ ಬಂದಮೇಲೆ ವಿವಿಧ ಸವಲತ್ತುಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ ನಮ್ಮ ಕ್ಷೇತ್ರದ ಜನರಿಗೆ ಎಲ್ಲಾ ತರಹದ ಸವಲತುಗಳು ನಾನು ಮುಂದಿನ ದಿನದಲ್ಲಿ ಮಾಡಿ ಕುಡುತ್ತೇನೆ ಎಂದು ತಿಳಿಸಿದರು ಬಸ್ವರಾಜ್ ಬುಳ್ಳ ಅವರು ಮಾತನಾಡಿ ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಶೋಖೇಣಿಯವರಿಗೆ ಬಹುಮತದಿಂದ ಗೆಲುವು ಖಚಿತ ಇದೆ ಎಂದು ನುಡಿದರು ಇದೆ ಸಂಧರ್ಬದಲ್ಲಿ ಮೀನಾಕ್ಷಿ ಸಂಗ್ರಾಮ್ ಕೆಪಿಸಿಸಿ ಪ್ರಧಾನ್ ಕಾರ್ಯದರ್ಶಿ ಹಾಗೂ ದಕ್ಷಿಣ ಕ್ಷೇತ್ರದ ಉಸ್ತುವಾರಿ ಮಾತನಾಡಿ ನಾವು ಹೋಗಿದ ಕಡೆ ಜನರು ನಮ್ಮನ್ನು ಬಹಳ ಸ್ಪಂದಸುತ್ತ ಮುಂಬರುವಂತಹ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿ ಕೆಲಸ ಮಾಡುತ್ತಾ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತರುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು, ಎಂ ಡಿ ತನ್ವೀರ್ ಖಾನ್, ಶಾಮ್ ಬೋoಬುಳಗಿ, ಬಸ್ವರಾಜ ಭತರ್ಮಾಗೆ, ಪ್ರಭು ಸವಲ್ಗಿ, ಶಿವುಕುಮಾರ ಜುನ್ನು, ರಾಜು ಸ್ವಾಮಿ, ಉಪಸ್ಥಿತರಿದ್ದರು.

23/04/2023

ಎಂ ಡಿ ತನ್ವೀರ್ ಖಾನ್ ಅವರು ಸಮಾಜ ಸೇವಕರು ತಮ್ಮ ಸ್ವಗ್ರಹದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ ಔತಣ ಕೂಟವನ್ನು ಏರ್ಪಡಿಸಿದರು, ಇದರಲ್ಲಿ ಹಿಂದೂ ಮತ್ತು ಮುಸ್ಲಿಂ ಜನರು ಸೇರಿದರು, ಬೀದರ್ ಯಾವತ್ತು ಹಿಂದೂ ಮುಸ್ಲಿಂ ಅಣ್ಣತಮ್ಮರ ಬಾಂಧವ್ಯವನ್ನು ಬೆಳೆಸುತ್ತಾ ಬಂದಿದೆ ಅದಕ್ಕಾಗಿ ಬೀದರ್ ಜಿಲ್ಲೆಯು ಯಾವತ್ತು ಜಾತಿ ಧರ್ಮ ಮಾಡಲ್ಲ ಎಂದು ಸಮಾಜ ಸೇವಕರಾದ ಎಂ ಡಿ ತನ್ವೀರ್ ಖಾನ್ ಅವರು ಎತ್ತಿ ತೋರಿಸಿದರು ಹಾಗೂ ನಮ್ಮ ಮಾಧ್ಯಮದೊಂದಿಗೆ ಬಂದಂತಹ ಅತಿಥಿಗಳ ಜೊತೆ ಹಂಚಿಕೊಂಡರು.

21/04/2023

ಎಮ್.ಡಿ.ತನವಿರ ಖಾನ್ ಸಮಾಜ ಸೆವಕರು ಬೀದರ ಜನತೆಗೆ ರಂಜಾನ್ ಹಾಗೂ ಬಸವ ಜಯಂತ್ತ್ಸೊವ ಶುಭಾಶಯ ಕೊರಿದ್ದರು.

17/04/2023

ಔರಾದ(ಬಾ) ಮೀಸಲು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪ್ರಭು ಚವ್ಹಾಣ ಅವರು ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ ಕಛೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ನಾಂದೇಡ್ ಜಿಲ್ಲೆಯ ಸಂಸದರಾದ ಪ್ರತಾಪ ಪಾಟೀಲ ಚಿಕ್ಲೆಕರ್, ಉದಗೀರ ಮಾಜಿ ಶಾಸಕರಾದ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರೌಫುದ್ದೀನ್ ಕಛೇರಿವಾಲೆ, ಅಮರನಾಥ ಪಾಟೀಲ, ಶಿವರಾಜ ಗಂದಗೆ, ವೀರಣ್ಣಾ ಕಾರಬಾರಿ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ, ಕೀರಣ ಪಾಟೀಲ, ಸುರೇಶ ಭೋಸ್ಲೆ, ಶರಣಪ್ಪಾ ಪಂಚಾಕ್ಷರಿ, ರಂಗರಾವ ಜಾಧವ, ಸಂತೋಷ ಪೋಕಲವಾರ, ಶಿವರಾಜ ಅಲ್ಮಾಜೆ, ಸಚಿನ್ ರಾಠೋಡ್, ದೊಂಡಿಬಾ ನರೋಟೆ, ಕೇರಬಾ ಪವಾರ, ಡಾ.ಕಲ್ಲಪ್ಪಾ ಉಪ್ಪೆ, ಡಾ.ವೈಜಿನಾಥ ಬುಟ್ಟೆ, ಪ್ರತೀಕ್ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ,‌ ಶೇಷರಾವ ಕೋಳಿ, ರಮೇಶ ಉಪಾಸೆ, ರಾಹುಲ ಕೇಂದ್ರೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

16/04/2023

ಬೀದರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಹೆಚ್ಚಿನ ಕಾರ್ಯಕ್ರಮ ಆಯೋಜನೆ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ:ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಇದರ ಫಲವಾಗಿ 18 ವರ್ಷ ತುಂಬಿದ ಸಾಕಷ್ಟು ಜನ ಮತದಾರರ ಪಟ್ಟಿಯಲ್ಲಿ ತಮ್ಮ ಹೇಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶನಿವಾರ ನಗರದ ಬಿಗ್ ಬಜಾರ ಹತ್ತಿರ ಮಕ್ಕಳ ಮೇಳದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ ಮಾಹಿತಿ ಶಿಕ್ಷಣ ಮತ್ತು ಸಂವಹ ಇಲಾಖೆ ವತಿಯಿಂದ ಆಯೋಜಿಸಿ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಜಾಗೃತಿಯ ಉದ್ದೇಶ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 72 ಪ್ರತಿಶತ ಮತದಾನವಾದರೆ ಜಿಲ್ಲೆಯಲ್ಲಿ ಶೇ 69 ರಷ್ಟು ಮತದಾನವಾಗಿದೆ. ಆದರಿಂದ ಈ ಬಾರಿ ಮತದಾನ ಪ್ರಕ್ರೀಯೆಯಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಹಾಗೂ ಎಲ್ಲರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಆಕರ್ಷಸಬೇಕು ಎಂಬ ಉದ್ದೇಶದಿಂದ ಸ್ವೀಪ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸ್ವೀಪ್ ಸಮಿತಿಯು ಈಗಾಗಲೇ ಕಡಿಮೆ ಮತದಾನ ಆಗಿರುವ ಮತಗಟ್ಟೆಗೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಅಭಿಯಾನ, ಭೂತ್ ಅವೇರೆನ್ಸ್ ಕ್ಯಾಂಪ್, ಕಾಲೇಜು ಮಟ್ಟದಲ್ಲಿ ಲಿಟೇರೆಸ್ಸಿ ಕ್ಲಬ್, ತರಗತಿಗೆ ಒಬ್ಬರಂತೆ ಅಂಬಾಸೇಟರ್‌ಗಳ ನೇಮಕ ಸೇರಿದಂತ ನಾನಾ ರೀತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದವರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಮತದಾನ ದಿನದಂದು ಅಂಗವಿಕಲರಿಗೆ ಹಾಗೂ 80 ವರ್ಷ ದಾಟಿದವರಿಗೆ ಆಟೋ ವ್ಯವಸ್ಥೆ ಮಾಡಲಾಗಿದೆ.ಮತಗಟ್ಟೆ ಕೇಂದ್ರದಲ್ಲ ಮ್ಯಾಗ್ನಿಫಾಯಿಂಗ್ ಗ್ಲಾಸ್ ಅಳವಡಿಸಲಾಗಿದೆ. ಬಿಸಿಲು ಇರುವದರಿಂದ ಶಾಮಿಯಾನ ಹಾಕಲಾಗುವುದು ಎಂದರು.

ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ .ಎಂ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಿಕೊಳ್ಳಲು ಸಂವಿಧಾನ ನಮ್ಮೇಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದೆ ಇದರ ಸದುಪಯೋಗ ನಮ್ಮಿದಾಗಬೇಕು ಅಂದಾಗ ಮಾತ್ರ ನಮಗೆ ಈ ಅಧಿಕಾರ ದೊರಕಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.

ನಾವು ಜಿಲ್ಲೆಯಲ್ಲಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆವೆ ಆದರು ಎಲ್ಲಕಿಂತ ಮುಖ್ಯವಾಗಿ ಸಾರ್ವಜನಿಕರು ತಾವಾಗಿಯೇ ಜಾಗೃತರಾಗಬೇಕು ಅಂದಾಗ ಮಾತ್ರ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದ ಅವರು ಯಾರಿಗೆ ಮತಗಟ್ಟೆಗೆ ಬರಲು ಆಗುವದಿಲ್ಲವೋ ಅವರಿಗಾಗಿ ಪೊಸ್ಟಲ್ ಬ್ಯಾಲೆಟ್ ಅವಕಾಶ ಸಹ ಚುನಾವಣಾ ಆಯೋಗ ಕಲ್ಪಿಸಿದೆ ಇದರ ಸದುಪಯೋಗ ಪಡೆಯಬೇಕು ಮತ್ತು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ. ಎಲ್ಲರೂ ಮೇ 10 ರಂದು ಕಡ್ಡಾಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಪಾಲ್ಗೊಳ್ಳೊಣ ಹಾಗೂ ಇತರರನ್ನು ಪಾಲ್ಗೊಳ್ಳುವಂತೆ ಪ್ರೇರೆಪಿಸೊಣ್ಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಕೆಲವು ಮತಗಟ್ಟೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ ಈ ಬಾರಿ ಸ್ವೀಪ್ ಸಮಿತಿ ವತಿಯಿಂದ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಇದರ ಫಲ ನಮಗೆ ದೊರೆಯಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಮತದಾರರ ಪ್ರಮಾಣ ಹೆಚ್ಚುತ್ತಿದೆ ಹಾಗೂ ಸಾಕಷ್ಟು ಜನ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ ಇದೆ ಉಮ್ಮಸಿನಿಂದ ಮೇ 10 ಮತದಾನ ದಿನದಂದು ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಈ ಬಾರಿ ನೀವು ಮತದಾನ ಮಾಡಲು ಹಿಂಜರಿದರೆ ಮುಂದೆ ಐದು ವರ್ಷದ ವರೆಗೆ ನಿಮ್ಮನ್ನು ಆಳುವವರಿಗೆ ನೀವು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಿರಿ ಆದರಿಂದ ಇಂತಹ ಸುವರ್ಣ ಅವಕಾಶವನ್ನು ಬಳಸಿಕೊಂಡು ಉತ್ತಮ ವ್ಯಕ್ತಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಬೇಕು ಎಂದರು.
ರಾಜ್ಯ ಮಟ್ಟದ ಚುನಾವಣಾ ಮಾಸ್ಟರ ಟ್ರೇನರ್ ಡಾ. ಗೌತಮ ಅರಳಿ ಮಾತನಾಡಿ. ಕೆಲಸದ ನಿಮಿತ್ಯ ಇತರೆ ರಾಜ್ಯಗಳಿಗೆ ತೆರಳಿದವರಿಗೆ ಸಂಬAದಿಕರು ಸ್ನೇಹಿತರು ಮಾಹಿತಿ ನೀಡಬೇಕು. ಹಾಗೂ ತಮ್ಮ ಮನೆಯಲ್ಲಿರುವ ಕುಟುಂಬ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಲ್ಲದಕಿಂತ ಹೆಚ್ಚಾಗಿ ಹಣ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ನಾನು ಮತದಾನ ಮಾಡುವೆ ಎಂದು ಸಹಿ ಮಾಡುವ ಮೂಲಕ ಎಲ್ಲರೂ ಶಪಥ ಮಾಡಿದ್ದರು. ಮೇಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ನೇರೆಗಾ ತಾಲೂಕು ಪಂಚಾಯತ ಸಿಬ್ಬಂದಿಗಳಾದ ಸುನಿತಾ ರೆಡ್ಡಿ, ರಮೇಶ ಚಟ್ನಳ್ಳಿ, ಸಂಜೀವ, ಸತ್ಯಜೀತ, ಎನ್.ಸಿ.ಸಿ ಕೆಡೇಟ್‌ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

13/04/2023

ಇಂದು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ನಾಮ ಪತ್ರ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ಯಾದ ಶೆಶಿಕಾಂತ ಪೊಲೀಸ್ ಪಾಟೀಲ್
ಬೀದರ ನಗರದ ಭವಾನಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂಬೇಡ್ಕರ್ ಮೂರ್ತಿಗೆ ಮಾಲಾ ಅರ್ಪಣೆ ಮಾಡಿದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ಯಾದ ಶೆಶಿಕಾಂತ ಪಾಟೀಲ್ ಅವರು ಎತ್ತಿನ ಭಂಡಿ ಭವ್ಯವಾದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು

12/04/2023

ಬೇಸಿಗೆಯ ಸಂಗೀತ ಶಿಬಿರ ಇದೇ ತಿಂಗಳು 15ನೇ ತಾರೀಖಿನಿಂದ ಶುರುವಾಗಲಿರುವ ಬೇಸಿಗೆಯ ಸಂಗೀತ ಶಿಬಿರವನ್ನು ಎಲ್ಲರೂ ಪಾಲ್ಗೊಳ್ಳುವಂತೆ ಸೇಂಟ್ ಪೌಲ್ ಚರ್ಚ್ ಶಹಗಂಜ್ ಬೀದರ್ ಅವರಣದಲ್ಲಿ ಈ ಒಂದು ಸಂಗೀತ ಶಿಬಿರವನ್ನು ಏರ್ಪಡಿಸಲಾಗುತ್ತಿದೆ ಆಸಕ್ತಿಯೋಳ್ಳವರು ಬಂದು ಕೋರ್ಸ್ ಕಲಿಯಬಹುದು, ಅವರವರ ಇನ್ಸ್ಟ್ರುಮೆಂಟ್ ಒಂದಿಗೆ ಕಲಿಯಬಹುದು ಒಂದು ತಿಂಗಳಾದ ನಂತರ ಮೇ 15ತಾರೀಖು ಅವರಿಗೆ ಮತ್ತೆ ಸರ್ಟಿಫಿಕೇಟ್ ಕೊಟ್ಟು ಸನ್ಮಾನ ಮಾಡಿ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಾನ್ ವೆಸ್ಲಿ ಕ್ರೈಸ್ತ ಸಮಾಜದ ನಾಯಕರು
ಆಯೋಜಕರು ಹಾಗೂ ನಿರ್ದೇಶಕರು ಇಮಾನುವೇಲ್ ಲೇವಿ
ಸಂಗೀತ ಗುರುಗಳು ಜೋಶವ ಕಿಂಗ್ ಮತ್ತು
ಮೇಲ್ವಿನ್ ಜಾಬ್ಸ್
ಮ್ಯಾನೇಜ್ಮೆಂಟ್ ಭಾರತ್ ಮತ್ತು ಅವೆಂಜಲಿನ್
ಜೊತೆಗಾರರಾಗಿ ಇರುವವರು ರಂಜಿತ ದಾದಾನೂರ್ ಮತ್ತು ಹನ್ನಾಳು ಉಪಸ್ಥಿತರಿದ್ದರು.

07/04/2023

ಇಂದು ಪವಿತ್ರ ಶುಕ್ರವಾರವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಮೂರು ದೇವಾಲಯಗಳು ಸ್ವಂತ ಜೋಸೆಫರ ದೇವಾಲಯ ಶೇಕ್ರೆಡ್ ಹಾಟ್ ಚರ್ಚ್ ಹಾಗೂ ಡಾನ್ ಬೋಸ್ಕೋ ದೇವಾಲಯದ ಗುರುಗಳು ಕನ್ಯಾ ಸ್ತ್ರೀಯರು ಹಾಗೂ ಭಕ್ತಾದಿಗಳು ಸೇರಿ ಶಿಲುಬೆ ಹಾದಿ ಆಚರಣೆಯನ್ನು ಭಕ್ತಿ ಪೂರ್ವಕವಾಗಿ ಸಾಯಿ ಗ್ರೌಂಡ್ ನಿಂದ ಹಿಡಿದು ಅಂಬೇಡ್ಕರ್ ಸರ್ಕಲ್ ,ತಹಸಿಲ್ದಾರ್ ಆಫೀಸ್, ಹಾಗೂ ಡಿಸಿ ಆಫೀಸ್ , ರೋಟರಿ ಕ್ಲಬ್ ವೃತ್ತದ ಮೂಲಕ ಹಾದು ಬಂದು ಏಸುಕ್ರಿಸ್ತರು ಅನುಭವಿಸಿದ ಯಾತನೆಯನ್ನು ನೋವು ನಿಂದನೆಯನ್ನು ಹಾಗೂ ಯೇಸುಕ್ರಿಸ್ತರು ನಮ್ಮನ್ನು ಎಷ್ಟಾಗಿ ಪ್ರೀತಿಸಿದರು ಎಂಬುದನ್ನು ಇಡೀ ಮನುಕುಲಕ್ಕೆ ಸಾರುವ ಒಂದು ದಿನವನ್ನಾಗಿ ಎಲ್ಲಾ ಕ್ರೈಸ್ತ ಭಕ್ತಾದಿಗಳು ನೆರವೇರಿಸಿ ಕೊಟ್ಟರು.
ನಮ್ಮ ಧರ್ಮ ಕೇಂದ್ರದ ಗುರುಗಳಾದ ವಿಲ್ಸನ್, ರಾಬಿನ್, ಜಾನ್ ಪೌಲ್, ಕ್ರಿಸ್ತುರಾಜ್, ಜೇಮ್ಸ್ ಪೌಲ್, ಹಾಗೂ ಕನ್ಯಾ ಭಗೀನ್ಯರಾದ ಕ್ರಿಸ್ಟಿನ್. , ರೀತಿಕ, ಲಿನೆಟ್. ಹಾಗೂ
ಸಂಜಯ ಜಾಗೀರದಾರ, ಶಾಂತ ಕುಮಾರ್, ಸುರೇಶ್, ದೊಡ್ಡಿ ಬಿನ್ನಿ ಶಾ ಇವರ ನೇತೃತ್ವದಲ್ಲಿ ನಡೆಯಿತು.

06/04/2023

ಪರಿಷ್ಠ ಜಾತಿ/ಪಂಗಡಗಳ ಹೊರಾಟ ಸಮಿತಿ ಬೀದರ ಸುಮಾರು 4 ವರ್ಷಗಳಿಂದ ನಿರಂತರವಾಗಿ ಸುಳ್ಳು ಬೇಡ ಜಂಗಮರ ವಿರುದ್ಧ ಹೋರಾಟ ನಡೆಸಿದರ ಫಲವಾಗಿ ನಿಪ್ನ್ನೆ ಬೀದರ ಜಿಲ್ಲಾಡಳಿತವು ರವೀಂದ್ರ ಸ್ವಾಮಿ ತಂದೆ ಕಲ್ಲಯ್ಯ ಸ್ವಾಮಿ ಅವರ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದು ಪಡೆಸಿ ಆದೇಶ ಹೊರಡಿಸಿದ್ದಾರೆ, ರಾಜಕುಮಾರ ಮೂಲಭಾರತಿ ಮತ್ತು ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸೆರಿ ಪತ್ರಿಕಾಗೋಷ್ಠಿ ಹೊಟಲ ಮಯೂರಾ ಬರಿದಶಾಹಿ ಬೀದರ ನಡೆಸಲಾಯಿತು.
ರಾಜಕುಮಾರ ಮೂಲಭಾರತಿ.ಅನಿಲ ಬೆಲ್ದಾರ್.ಸಂದಿಪ ಕಾಂಟೆ.ಸಂತೊಷ ಎಣಕುರೆ. ಹಾಜರಿದ್ದರು.

04/04/2023

ಬುದ್ದ ಬಸವ ಅಂಬೆಡ್ಕರ ಅವರ ಆಶಿವಾ೯ದದೊಂದಿಗೆ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಮುಖಂಡರು ಸನ್ಮಾನ ಶ್ರೀ ಶೆಶಿಕುಮಾರ ಎಸ್ ಪೊಲೀಸ್ ಪಾಟಿಲ ಚೌಳಿ ಅವರು ಬೀದರ ಉತ್ತರ ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯಥಿ೯ಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕುರಿತು ಜನ ಬೆಂಬಲಿಗರ ಸಭೆ ಎಸ್.ಆರ್.ಎಸ್ ಫಂಕ್ಷನ್ ಹಾಲ್ ಬೀದರನಲ್ಲಿ ಹಮ್ಮಿಕೊಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿದ ಕೆಂಪನೂರು ಶಶಿಕುಮಾರ್ ಪೊಲೀಸ್ ಪಾಟೀಲ್ ಅಣ್ಣನವರು ನನ್ನ ಕುಟುಂಬದ ಸದಸ್ಯರಿದ್ದ ಹಾಗೆ ಎಲ್ಲ ಸಮಯದಲ್ಲೂ ನನಗೆ ಬೆಂಬಲಿಸುತ್ತಾರೆ ಹoತದಿದ್ದಾಗ ನಾನು ಮತ್ತೆ ನೀವು ಇವರಿಗೆ ಜೊತೆ ಯಾಕೆ ಕೈಜೋಡಿಸಬಾರದು ಏನೇ ಆಗಲಿ ಇವರಿಗೆ 2023 ನೇ ಚುನಾವಣೆಯಲ್ಲಿ ಪೂರ್ವ ಬಲದಿಂದ ನಾನು ಇವರಿಗೆ ಬೆಂಬಲಿಸುತ್ತೇನೆ ಯಾವುದೇ ಪದವಿ ಪೋಸ್ಟ್ ಇಲ್ಲದೆ ಜನರಿಗೆ ಸ್ವಂತ ಕೈಯಿಂದ ಮನೆಯ ಹಾಗೆ ಸ್ವಂತ ಕೈಯಿಂದ ಮನೆಯ ಮಗ ಹಾಗೆ ದಿನನಿತ್ಯ ಜನರಿಗೋಸ್ಕರ ಹಗಲಿರಳು ದುಡಿತ್ತಿರುತ್ತಾರೆ, ಮತ ಹಾಕಿ ಗೆಲ್ಲಿಸಿದ್ದವರು ಯಾವ ಮೂಲೆಯಲ್ಲಿ ಇರ್ತಾರೆ ಸಾಮಾನ್ಯ ಜನರನ್ನು ಕೈ ಗೊಂಬೆಯಾಗಿ ಆಟ ಆಡಿಸುತ್ತಾ ಮನ ಬಂದಂತೆ ತಮ್ಮ ರಾಜಕೀಯ ಆಟಗಳು ಆಡ್ತಾರೆ, ಈ ಒಂದು ಸಾರಿ ಶಶಿಕುಮಾರ್ ಪಾಟೀಲ್ ಅವರಿಗೆ ನಮ್ಮ ಮನೆಯ ಮಗನಾಗಿ ಗೆದ್ದಿಸಿ ತರೋಣ ಎಂದು ಭಾಷಣದಲ್ಲಿ ತಿಳಿಸಿದರು, ಈ ಸಂದರ್ಭದಲ್ಲಿ ಶಶಿಕುಮಾರ್ ಪೊಲೀಸ್ ಪಾಟೀಲ್ ಅವರು ಮಾತನಾಡಿ ತೊಡಗಿದ್ದಾಗ ಸುಮಾರು ಸಾವಿರ ಜನಸಂಖ್ಯೆಯಲ್ಲಿ ಅವರ ಕೂಗು ವಿಜಯಾಕಡೆ ಕಾಣಿಸಲಾಗಿತ್ತು, ಈ ಸಭೆಯಲ್ಲಿ ಬಂದಂತ ಎಲ್ಲರ ಆಶೀರ್ವಾದ ಮೇರೆಗೆ ಎಲ್ಲರ ನಿರ್ಧಾರದ ಮೇರೆಗೆ ನಾನು ಬಂಡಾಯ ಚುನಾವಣೆ ಅಭ್ಯರ್ಥಿಯಾಗಲು ನಿರ್ಧರಿಸಿದ್ದೇನೆ ತಮ್ಮ ಅನುಮತಿ ತಮ್ಮ ನಿರ್ಧಾರ ತಮ್ಮ ಅನಿಸಿಕೆಯ ವಿಚಾರ ಸಲುವಾಗಿ ಈ ಒಂದು ಸಭೆಯನ್ನು ಏರ್ಪಡಿಸಲಾಗಿದೆ ಆದಕಾರಣ ತಾವೆಲ್ಲ ನನಗೆ ಆಶೀರ್ವಾದ ಮಾಡಿದ್ದೀರಿ ಯಾವುದೇ ಕಾರಣಕ್ಕೂ ನಾನು ಹಿಂಜರಿಗುವುದಿಲ್ಲ ನಿಮ್ಮ ಈ ಆಶೀರ್ವಾದ ನಿಮ್ಮ ಈ ನಿರ್ಧಾರ ನನಗೆ ಇನ್ನಷ್ಟು ಬಲ ತುಂಬಿದೆ ನಾನು ಬಂಡಾಯ ಚುನಾವಣೆ ಮುಖಾಂತರ ಗೆದ್ದೇ ಗೆಲ್ಲುತ್ತೇನೆ ಅಂತ ನಿಮಗೆ ಭರವಸೆ ಕೊಡ್ತೀನಿ ನೀವು ನನ್ನ ಜೊತೆ ಇದ್ದು ಹೀಗೆ ನನಗೆ ಸಹಕರಿಸಿ ಮತ್ತೆ ನನಗೆ ಆಶೀರ್ವಾದ ಮಾಡಿ ನಿಮ್ಮ ಮನೆ ಮಗನಾಗಿ ಸ್ಥಾನ ಕೋಡಿ ಎಂದು ಹೇಳುವ ಮುಖಾಂತರ ಶಶಿಕುಮಾರ್ ಪೊಲೀಸ್ ಪಾಟೀಲ್ ಚವಳಿ ಅವರು ಮಾತನಾಡಿ ಜನರ ನಿರ್ಧಾರವೇ ನನ್ನ ನಿರ್ಧಾರ ಎಂದು ಭರವಸೆ ನೀಡಿದರು.

04/04/2023

03/04/2023

ಈ ಮೂಲಕ ತಮಗೆ ತಿಳಿಸುವುದೆನೆಂದರೆ, ಕರ್ನಾಟಕ ಪ್ರಜಾಶಕ್ತಿ ಸಂಘಟನೆ ತಮ್ಮ ನಿಷ್ಕಲ್ಮಷ ನಾಡ ಪ್ರೇಮ ತಮ್ಮ ನಡೆ ನುಡಿ ಉತ್ತಮ ಚರಿತ್ಯಾದ ಗುಣಗಳನ್ನು ಗುರುತಿಸಿ ಒಪ್ಪಿಗೆ ಮೇರಿಗೆ ತಮ್ಮ ಪ್ರಮಾಣಿಕತೆ ಮತ್ತು ಕನ್ನಡ ನಾಡಿನ ಪರ ಕಾಳಜಿಯನ್ನು ಗೌರವಿಸಿ ತಮ್ಮನ್ನು ಬೀದರ ದಕ್ಷಿಣ ಕ್ಷೇತ್ರದ ತಾಲೂಕ ಗೌರವಾಧ್ಯಕ್ಷರನ್ನಾಗಿ ಶ್ರೀ ರಮೇಶ ಜಿ.ಕೆ. ರವರನ್ನು ನೇಮಕ ಮಾಡಲಾಗಿದೆ. ಇನ್ನು ಮುಂದೆಯು ತಮ್ಮ ಪ್ರಮಾಣಿಕ ನಾಡ ಅಭಿಮಾನವನ್ನು ಎತ್ತಿ ಹಿಡಿಯುದರೊಂದಿಗೆ ಕನ್ನಡ ಪರ, ರೈತರ ಪರ, ಕಾರ್ಮಿಕರ ಪರ, ಮಹಿಳೆಯರ ಪರ, ವಿದ್ಯಾರ್ಥಿಗಳ ಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಾಡಿನ ಸರ್ವೋತೋಮುಖ ಅಭಿವೃದ್ಧಿಗೆ ಕರ್ನಾಟಕ ಪ್ರಜಾಶಕ್ತಿ ಸಬುಲ ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತ ತಮ್ಮ ನಾಯಕತ್ವದ ಸೇವೆಯನ್ನು ವಹಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಪಡಿಸುತ್ತೇವೆ. ನಾಡು, ನುಡಿ, ಜಲ, ಭಾಷೆ, ಸಮಗ್ರ ಅಭಿವೃದ್ಧಿಯ ತತ್ವ ಸಿದ್ಧಾಂತದ ಮಾರ್ಗದಲ್ಲಿ ನಡೆಯುತ್ತಾ ಕರ್ನಾಟಕ ಪ್ರಜಾಶಕ್ತಿ ಸಬುತಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಸಾಯಿ ಶಿಂಧೇ ನೇತೃತ್ವದಲ್ಲಿ ಸಂಘಟನೆಯ ತತ್ವ ಸಿದ್ದಾಂತವನ್ನು ನೀವು ಪಾಲಿಸಬೇಕೆಂದು ಆದೇಶಿಸಲಾಗಿದೆ.
ಧನ್ಯವಾದಗಳೊಂದಿಗೆ,
ಸಾಯಿ ಶಿಂಧೆ ಶ್ರೀಮತಿ ಜ್ಯೋತಿ ಮಹಿಳಾ ಘಟಕದ
ಜಿಲ್ಲಾಧ್ಯಕ್ಷರು

ವಿನೋದ ಶಿಂಧೆ ನಗರ ಘಟಕ ಅಧ್ಯಕ್ಷರು
ಮಹೇಂದ್ರಕುಮಾರ ಹೊಸಮನಿ
ಜಿಲ್ಲಾ ಉಪಾಧ್ಯಕ್ಷರು

03/04/2023

ಬೀದರನ ಜಾದೂಗಾರರಾದ ತುಕಾರಾಂ ಸರ ಅವರು ನನ್ನ ದೊಡ್ಡ ಮಗಳು ಮತ್ತು ಚಿಕ್ಕ ಮಗನಿಗೆ ಬೀದರ್ ಅಂಬೆಡ್ಕರ ವ್ರತ್ರದ ಹತ್ತಿರ ಅಚಾನಕ ಭೆಟ್ಟಿಯಾದರು ಮಕ್ಕಳಿಗೆ ಇವರು ಜಾದು ಮಾಡುವ ಸರರು ಇದ್ದಾರೆ ಅಂದಾಗ ಅವರು ಕೆಲವು ಜಾದು ಮಾಡಿತೊರಿಸಿದ ನೆನಪಿನ ವಿಡಿಯೋ ದ್ರಶ.

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ  ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.
29/03/2023

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.

29/03/2023

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.

28/03/2023

ಕಾಂಗ್ರೆಸ್ ಪಕ್ಷದ(Karnataka congress) ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆ ಬಂಡಾಯದ ಬಿಸಿ(Congress rebel) ಜೋರಾಗಿದೆ. ಬೀದರ್ ಜಿಲ್ಲೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಚಂದ್ರ ಸಿಂಗ್, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಹಿಂದಿನ ಹನ್ನೆರಡು ವರ್ಷಗಳಿಂದ ಬೆಳೆಸಿ ಉಳಿಸಿ ಎಷ್ಟು ಜನಗಳಿಗೆ ಗ್ರಾಮ ಪಂಚಾಯತ್ ಸದ್ಯಸರು ಅಧ್ಯಕ್ಷರು ಮತ್ತು ತಾಲ್ಲೂಕಾ ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಬೆಳೆಸಿದ್ದಾರೆ. ಇಂದು ಅಂಥವರು ಸದ್ಯ ಪಕ್ಷ ತೊರೆದು ಬಂಡಾಯ ಅಭ್ಯಥಿ೯ಯನ್ನು ಗೆಲ್ಲಿಸಿ ಮತ್ತೆ ಕಾಂಗ್ರೆಸ್ ಸೆರುತ್ತೆವೆ ಎಂದು ಕಾಯ೯ತರು ಸಭೆಯಲ್ಲಿ ಪಣತೊಟ್ಟರು.
ಕಾಯ೯ಕ್ರಮ ಸ್ಥಳ ಕಾಂಗ್ರೆಸ್ ಪಕ್ಷದ(Karnataka congress) ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆ ಬಂಡಾಯದ ಬಿಸಿ(Congress rebel) ಜೋರಾಗಿದೆ. ಬೀದರ್ ಜಿಲ್ಲೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಚಂದ್ರ ಸಿಂಗ್, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಹಿಂದಿನ ಹನ್ನೆರಡು ವರ್ಷಗಳಿಂದ ಬೆಳೆಸಿ ಉಳಿಸಿ ಎಷ್ಟು ಜನಗಳಿಗೆ ಗ್ರಾಮ ಪಂಚಾಯತ್ ಸದ್ಯಸರು ಅಧ್ಯಕ್ಷರು ಮತ್ತು ತಾಲ್ಲೂಕಾ ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಬೆಳೆಸಿದ್ದಾರೆ. ಇಂದು ಅಂಥವರು ಸದ್ಯ ಪಕ್ಷ ತೊರೆದು ಬಂಡಾಯ ಅಭ್ಯಥಿ೯ಯನ್ನು ಗೆಲ್ಲಿಸಿ ಮತ್ತೆ ಕಾಂಗ್ರೆಸ್ ಸೆರುತ್ತೆವೆ ಎಂದು ಕಾಯ೯ತರು ಸಭೆಯಲ್ಲಿ ಕಾಯ೯ತರು ಪಣತೊಟ್ಟರು.
ಈ ಸಭೆ ಅಸ್ಲಂ ಫಂಕ್ಷನ್ ಹಾಲ್ ಕಮಠಾಣ. ತಾ. ಜಿ. ಬೀದರನಲ್ಲಿ ಹಮ್ಮಿಕೊಳಲಾಗಿತ್ತು.

25/03/2023

ಬೀದರ್ ನಗರದ ಟಿ.ಡಿ.ಬಿ ಕಾಲೋನಿಯಲ್ಲಿ ನಿನ್ನೆ ಅಲೆಮಾರಿ ಕುಟುಂಬವಾದ ಶ್ರೀ ಧರಂ ಅವರ ಮನೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸಂಪೂರ್ಣವಾಗಿ ಅಗ್ನಿದುರಂತಕ್ಕೆ ಸಿಲುಕಿ ಸುಟ್ಟು ಹೋಗಿದೆ.

ಇಂದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ , ಅವರ ಜೀವನೋಪಾಯಕ್ಕೆ 2 ತಿಂಗಳ ದಿನಸಿ ಮತ್ತು ಆರ್ಥಿಕ ಸಹಾಯ ನೀಡಲಾಯಿತು.

ಈ ಅಗ್ನಿ ಅವಘಡದಲ್ಲಿ ಮನೆಯ ಉಡುಗೆ-ತೊಡುಗೆ, ಟಿವಿ, ಮೊಬೈಲ್, ಅವರ ವ್ಯಾಪಾರದ ಸಾಮಗ್ರಿ ಹಾಗೂ ದುಡ್ಡು ಸಹ ಸುಟ್ಟು ಹೋಗಿದೆ.

ಕುಟುಂಬಕ್ಕೆ ಇಲಾಖೆಯಿಂದ ಸಾಧ್ಯವಾದ ಸಹಾಯ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿಶಾಲ್ ಜೀ, ಶ್ರೀ ವಿಕಾಸ್, ಶ್ರೀ ಶಾಂತಕುಮಾರ್ ಹಳ್ಳದಕೇರಿ ಹಾಗೂ ಇತರರು ಉಪಸ್ಥಿತರಿದ್ದರು.

25/03/2023

ನ್ಯಾಯಮೂರ್ತಿ ಎ. ಜೆ ಸದಾಶಿವ ಆಯೋಗ ವರದಿ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆ ಇಂದು ಕರ್ನಾಟಕ ಮಾದಿಗ ವೇಲ್ಫರ್ ಅಸೋಸಿಯೇಷನ್ ಬೀದರ್ ಜಿಲ್ಲಾ ಘಟಕದ ವತಿಯಿಂದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿ ಸಿಹಿ ಹಂಚಿಕೊಳ್ಳಲಾಯ್ತು.

24/03/2023

*ಬೀದರ ಜಿಲ್ಲೆಯ ವಿವಿಧ ಪೋಲಿಸ ಠಾಣೆಗಳ 13 ಪ್ರಕರಣಗಳಲ್ಲಿ ಜಪ್ತಿ ಮಾಡಿದ ಒಟ್ಟು 999:998ಕೆಜಿ ಗಾಂಜಾ ನಾಶ ಪಡಿಸಿದ ಬಗ್ಗೆ ...*
ಬೀದರ ಜಿಲ್ಲೆಯ ವಿವಿಧ 7 ಪೋಲಿಸ ಠಾಣೆಗಳ 13 ಪ್ರಕರಣಗಳಲ್ಲಿ ಜಪ್ತಿ ಮಾಡಿದ ಓಟ್ಟು ಗಾಂಜಾ 999 kg:998gm ಗಾಂಜವನ್ನು ಭಾಲ್ಕಿ ತಾಲೂಕಿನ ರುದನೂರ ಗ್ರಾಮದ ಹತ್ತಿರ ಇರುವ ಇನವೇರೋ ಬಯೋಟೇಕ ತ್ಯಾಜ್ಯ ವಿಲೇವಾರಿ ಘಟಕದ ಚಿಲೂಮೆಯಲ್ಲಿ ಹಾಕಿ ಸುಡಲಾಯಿತು...

ಬೀದರ ಜಿಲ್ಲೆಯ ವರಿಷ್ಠಾಧಿಕಾರಿಗಳಾದ ಚೆನ್ನಬಸವಣ್ಣ. ಎಸ್.ಎಲ್ IPS, ರವರ ಸಮ್ಮೂಖದಲ್ಲಿ ಪ್ರತಿ ಠಾಣೆಯ ಜಪ್ತಿಪಡಿಸಿದ ಗಾಂಜ ಬ್ಯಾಗಗಳನ್ನು ಪ್ರತಿಯೋಂದರಂತೆ ಖುದ್ದಾಗಿ ಪರಿಶಿಲಿಸಿ,ತುಕ ಮಾಡಿಸಿ ನಾಶಪಡಿಸಲು ಸೂಚಿಸಿದರು ಅವರು ಸಹ ಸ್ಥಳದಲ್ಲಿ ಮುಖ್ಖಾಮ ಹುಡಿದರು,

ಶ್ರೀ ಮಹೇಶ ಮೇಘಣ್ಣನವರ ADDL SP
ಶ್ರೀ ಪ್ರಥ್ವಿಕ ಶಂಕರ ASP ಭಾಲ್ಕಿ
ಉಪಸ್ಥಿತರಿದ್ದರು
ಶ್ರೀ ಕೆ.ಎಮ್ .ಸತೀಷ್.DSP BIDAR,
ಶ್ರೀ ಪರುಶರಾಮ ವಾಂಜೆರಕರ PI,
ಶ್ರೀ ನಾಗನಾಥ HC DCRB,
ಶ್ರೀ ಬಸವರಾಜ ವ್ಯವಸ್ಥಾಪಕರು ENVIRO BIOTECH ತ್ಯಾಜ್ಯ ವಿಲೇವಾರಿ ಘಟಕ ರವರು ಸೇರಿದಂತೆ...
ಜಿಲ್ಲೆಯ 7 ಠಾಣೆಯ PSI ಹಾಗು ಬರಹಗಾರ ಸಿಬ್ಬಂದಿಯವರು ನಾಶ ಪಡಿಸುವ ಸಂಧರ್ಭದಲ್ಲಿ ಉಪಸ್ಥಿತರಿದ್ದರು..

23/03/2023

ಸುದ್ದಿ -- ಬೀದರ
ದಿ.-23/03/2023
ಡಾ!! ಶೈಲೆಂದ್ರ ಬೆಲ್ದಾಳೆ ಅಭಿಮಾನಿ ಬಳಗ ಬೀದರ ದಕ್ಷಿಣ ಹಾಗೂ ಎನ್.ಜಿ.ಎನ್.ಫೌಂಡೇಶನ್ ಕಲಬುರಗಿ. ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಬ್ರಹತ್ ಆರೊಗ್ಯ ತಪಾಸಣೆ ಸ್ಥಳ ಗುರುಭದ್ರೆಶ್ವರ ಪ್ರಾಥಮಿಕ ಶಾಲೆ ಹಾಗೂ ಎಸ್.ಬಿ.ಶೆರಿಕಾರ ಪ್ರೌಢ ಶಾಲೆ ನಿಡವಂಚಾ ರಸ್ತೆ ಮನ್ನಾಖೆಳಿ. ತಾ. ಚಿಟಗುಪ್ಪಾ. ಜಿ.ಬೀದರ ನಡೆಯಿತು.
ಉದ್ಘಾಟನೆ ಶ್ರೀ ಬಸವಲಿಂಗ ಪಟ್ಟದ್ದೆವರು ಹಿರೆಮಠ ಸಂಸ್ಥಾನ ಭಾಲ್ಕಿ. ಶ್ರೀಮತಿ ಮಾತೆ ಮೈತ್ರಿದೆವಿ. ಡಾ!! ಶೈಲೆಂದ್ರ ಬೆಲ್ದಾಳೆ. ಡಾ. ಸಂತೊಷ ಕುಮಾರ್ ನಾಗಲಾಪುರ್.
ಶ್ರೀ ಬಸವಲಿಂಗ ಪಟ್ಟದ್ದೆವರು ದೇವರಿಗೆ ಹೂವು ಕಾಯಿ ಎರಿಸುವದಕ್ಜಿಂತ ಉಚಿತ ಆರೊಗ್ಯ ತಪಾಸಣೆ ಶೈಲೆಂದ್ರ ಬೆಲ್ದಾಳೆ ಇವತ್ತ ಮಾಡುವ ಈ ಕಾಯ೯ಕ್ಕೆ ವಿಶ್ವ ಗುರು ಬಸವಣ್ಣನವರು ಮೆಚ್ಚುತ್ತಾರೆ.ಎಂದರು.
ಶೈಲೆಂದ್ರ ಬೆಲ್ದಾಳೆ ಉಚಿತ ಆರೊಗ್ಯ ತಪಾಸಣೆ ಬಹುದಿನಗಳ ನನ್ನ ಕನಸಾಗಿತ್ತು ಇದೆ ಸದಾ ಆರು ತಿಂಗಳಿಗೊಮ್ಮೆ ಮಾಡುತ್ತೆನೆ ಎಂದು ತಿಳಿಸಿದರು.
ಮನ್ನಾಖೆಳಿ ಸುತ್ತಮುತ್ತಲಿನ ಹಳ್ಳಿಯ ಜನರು ಹೆಣ್ಣುಮಕ್ಕಳು. ಗಂಡುಮಕ್ಕಳು. ಜನರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ ಆನಂದ ಬೀದರ

21/03/2023

*ನಾಲ್ಕೈದು ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಿ: ಶಾಸಕ ಬಂಡೆಪ್ಪ ಖಾಶೆಂಪುರ್*

*ಬೀದರ್ (ಮಾ.21):* ಮುಖ್ಯಮಂತ್ರಿಗಳು ಬೆಳೆ ಹಾನಿ ಪರಿಹಾರಕ್ಕಾಗಿ ಮಂತ್ರಿಗಳ ಹೆಸರು ಹೇಳಬಾರದು. ಕೂಡಲೇ ನಾಲ್ಕೈದು ದಿನಗಳಲ್ಲಿ ರೈತರ ಖಾತೆಗಳಿಗೆ ಪರಿಹಾರದ ಹಣವನ್ನು ಜಮಾ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಬಾಳ, ನಾಗನಕೇರಾ, ನಿರ್ಣಾ, ಮನ್ನಾಎಖೇಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಆಣೆಕಲ್ಲುಗಳಿಂದ ಹಾನಿಗೊಳಗಾದ ಉಳ್ಳಾಗಡ್ಡಿ, ಮಾವು, ಟೊಮ್ಯಾಟೊ, ಜೋಳ, ಹೀರೇಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಅವರು ಮಾತನಾಡಿದರು.
ನಾನು ಎರಡು ದಿನಗಳಿಂದ ಸುಮಾರು ಹಳ್ಳಿಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ಗಮನಿಸಿದ್ದೇನೆ. ಹೀರೇಕಾಯಿ ಬೆಳೆದ ರೈತನ ತೋಟಕ್ಕೆ ಬಂದು ನೋಡಿದ್ದಿನಿ. ಎರಡೇ ಎರಡು ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಇದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಹೀರೇಕಾಯಿ, ಇರುಳಿ, ಟೊಮ್ಯಾಟೊ, ಜವೆ ಗೋದಿ, ಜೋಳ, ಮಾವು ಸೇರಿದಂತೆ ಅನೇಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ.
ಸರ್ಕಾರ ಎನ್.ಡಿ.ಆರ್.ಎಫ್ ನಾರ್ಮ್ ಮೇಲೆ ಹೋಗಬಾರದು. ಅದು ಬಹಳಷ್ಟು ಕಡಿಮೆ ಇದೆ. ಕೃಷಿ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ. ತೋಟಗಾರಿಕೆ ಬೆಳೆಗಳಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ಧನವನ್ನು ನೀಡಬೇಕು. ಆಗಾದರೆ ಮಾತ್ರ ರೈತರು ಉಸಿರಾಡಲು ಸಾಧ್ಯವಾಗುತ್ತದೆ. ಸದ್ಯ ರೈತರು ಬಹಳಷ್ಟು ಆತಂಕದಲ್ಲಿದ್ದಾರೆ. ನಮ್ಮ ಭಾಗದಲ್ಲಿ ಆಣೆಕಲ್ಲಿನಿಂದ ಅನೇಕ ಬೆಳೆಗಳು ಹಾನಿಯಾಗಿವೆ. ಮುಖ್ಯಮಂತ್ರಿಗಳು ರೈತರ ಪರವಾಗಿ ಧಾವಿಸಿ ಬರಬೇಕು. ರೈತರಿಗೆ ಕೂಡಲೇ ನಾಲ್ಕೈದು ದಿನಗಳಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರಕ್ಕೆ ಮನವಿ ಮಾಡಿದರು.

21/03/2023

ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಜಾಬಶೆಟ್ಟಿ. ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ಅಮ್ರತರಾವ ಚಿಮಕೊಡೆ.ಇವರ ನೇತ್ರತ್ವದಲ್ಲಿ ಶ್ರೀ ನರಸಪ್ಪಾ ಜಾನಕನೊರ್ ಅವರಿಗೆ ಆಯ್ಕೆ ಮಾಡಲಾಯಿತು .ಇದೆ ಸಂತೊಷ ಗಳಿಗೆಯಲ್ಲಿ ಅವರ ಸ್ನೆಹಿತರಾದ್. ಧನರಾಜ ಮೆತ್ರೆ.ತುಕಾರಾಮ ಕರಾಟೆ.ಸಂದಿಪ ಕಾಂಟೆ. ಸಾಯಿ ಸಿಂಧೆ. ದಶರಥ. ವಿನೊದ ಸಿಂಧೆ. ಬಸವರಾಜ. ಇವರೆಲ್ಲರೂ ಸೆರಿ ಶಾಲು ಹೊದಿಸಿ ಸಿಹಿ ತಿನಿಸಿ ಹಷ೯ವ್ಯಕ್ತಪಡಿಸಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿ ಮುಂದಿನ ದಿನಗಳಲ್ಲಿ ಜಯಗಳಿಸಿ ಎಂದು ಹಾರೈಸಿದ್ದರು.

20/03/2023

*ಎಕರೆಗೆ ಕನಿಷ್ಠ 25 ಸಾ. ರೂ. 50 ಸಾ. ರೂ. ಪರಿಹಾರ ನೀಡಿ: ಶಾಸಕ ಬಂಡೆಪ್ಪ ಖಾಶೆಂಪುರ್*

*ಬೀದರ್ (ಮಾ.20):* ಅಕಾಲಿಕ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳನ್ನು ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳು ಕೂಡಲೇ ಕೃಷಿ ಬೆಳೆಗಳಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ. ತಾತ್ಕಾಲಿಕ ಪರಿಹಾರ ಒದಗಿಸಬೇಕೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಯಾದ ಉಳ್ಳಾಗಡ್ಡಿ, ಮಾವು, ಟೊಮ್ಯಾಟೊ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎನ್.ಡಿ.ಆರ್.ಎಫ್ ಅದು ಇದು ಅಂತ ಕಾಯದೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ಸಮೀಕ್ಷೆಯ ವರದಿಯ ನಂತರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದರು.
ಅಕಾಲಿಕ ಮಳೆ ಮತ್ತು ಆಣೆಕಲ್ಲುಗಳಿಂದ ಬೀದರ್ ಜಿಲ್ಲೆ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಬೆಳೆಗಳು ಹಾಳಾಗಿವೆ. ಹೊನ್ನಡ್ಡಿ ಗ್ರಾಮದಲ್ಲಿ ಜೋಳ ಚಾಪೆ ರೀತಿ ಮಲ್ಕೊಂಡಿದೆ. ಬೀಜದ ಈರುಳ್ಳಿ ಕೂಡ ನೆಲಕ್ಕೆ ಬಿದ್ದಿದೆ. ಕಲ್ಲಂಗಡಿ ಬೆಳೆ ಕೂಡ ಹಾಳಾಗಿದೆ. ಮಾವು, ನೆಲಗಡಲೆ (ಶೇಂಗಾ), ಟೊಮ್ಯಾಟೊ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ.
ನನ್ನ ಅಂದಾಜಿನ ಪ್ರಕಾರ ಎರಡು ಸಾವಿರ ಎಕರೆ ಕೃಷಿ ಬೆಳೆ, ಒಂದರಿಂದ ಎರಡು ಸಾವಿರ ಎಕರೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ರೈತರು ಬಹಳಷ್ಟು ಆತಂಕದಲ್ಲಿದ್ದಾರೆ. ಈರುಳ್ಳಿ ಬೆಳೆಯಲು ರೈತರು ಎಕರೆಗೆ 70 ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಮುಖ್ಯಮಂತ್ರಿ ಕೂಡಲೇ ತಾವೇ ನೇರವಾಗಿ ರೈತರಿಗೆ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು. ಯಾವ ಮಂತ್ರಿಗಳು ಕೂಡ ಪರಿಹಾರ ಒದಗಿಸಲಾರರು. ಬೆಳೆ ಹಾನಿಗೆ ಸಂಬಂಧಿಸಿದ ಸಹಾಯವಾಣಿಯನ್ನು ಕೂಡಲೇ ಆರಂಭಿಸಬೇಕು. ರೈತರು ಅಲೆದಾಡುವ ಪರಿಸ್ಥಿತಿ ತರಬಾರದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಒತ್ತಾಯಿಸಿದರು. ಇದೇ ವೇಳೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರೈತರು, ಗ್ರಾಮಸ್ಥರು ಇದ್ದರು.

20/03/2023

ಬೀದರ ಜಿಲ್ಲಾ ಸಕಲ ಮರಾಠಾ ಸಮಾಜದ ಮತ್ತು ಎಕ್ ಮರಾಠಾ ಲಾಖ್ ಮರಾಠಾ ಹೋರಾಟ ಮುಖಂಡರಾದ ನಾರಾಯಣ ಗಣೇಶ ವಕೀಲರು.
ಪತ್ರಿಕಾಗೋಷ್ಠಿಯಲ್ಲಿ ಮರಾಠಾ ಸಮಾಜದವರು ಬೀದರ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಜನರಿದ್ದೆವೆ.ಇಲ್ಲಿನ ತನಕ ಗೆದ್ದ ಶಾಸಕರು ನಮ್ಮ ಸಮಾಜಕ್ಕೆ ಕಲ್ಯಾಣ ಕೆಲಸ ಮಾಡಿಲ್ಲ ಅದಕ್ಕಾಗಿ ಕಾಂಗ್ರೆಸ್ ಪಕ್ಷ ಆಗಲಿ ಬಿಜೆಪಿ ಪಕ್ಷ ಆಗಲಿ ನಮ್ಮ ಸಮಾಜದಿಂದ ಕೆಳಿರುವರನ್ನು ಟಿಕೆಟ್ ನಿಡಬೆಕು ಇಲ್ಲವಾದಲ್ಲಿ ಸ್ವತಂತ್ರ ಅಭ್ಯಥಿ೯ಯಾಗಿ ಚುನಾವಣೆ ಎದುರಿಸಲು ಸಿದ್ದರು ಎಂದು ತಿಳಿಸಿದರು.
ಈ ಸಮಯದಲ್ಲಿ ನಾರಾಯಣ ಗಣೆಶ ವಕಿಲರು
ವೈಜಿನಾಥ ತಗಾರೆ. ಸತಿಷ ಸೂಯ೯ವಂಶಿ.ಜಗತಪ್ಪಾ. ಹರಿಶ್.ಮನೊಜ. ಭಾಗಿಯಾಗಿದ್ದರು.

19/03/2023

ಕನಾ೯ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತು ವಿಚಾರ ಸಂಕಿರಣ ಶ್ರೀ ಚನ್ನಬಸವ ಪಟ್ಟದ್ದೆವರು ರಂಗ ಮಂದಿರ ಬೀದರ ನಡೆದಿತ್ತು.
ಮಾರುತಿ ಭೌದ್ದೆ. ಫನಾ೯ಂಡಿಸ್ ಹಿಪ್ಪಳಗಾಂವ. ಸುಮಂತ್ ಕಟ್ಟಿಮನಿ.ವಿಜಯಕುಮಾರ್ ಸೊನಾರೆ. ಅಭಿಕಾಳೆ. ಮುಂತಾದ ದಲಿತ ಮುಖಂಡರು. ಹೆಣ್ಣುಮಕ್ಕಳು. ಯುವಕರು. ಸೆರಿದ್ದರು.

18/03/2023

ಕನಾ೯ಟಕ ಪ್ರದೆಶ ಜನತಾದಳ ಪಕ್ಷದ ರಾಜ್ಯ ಪ್ರಧಾನ ಕಾಯ೯ದಶಿ೯ಯನ್ನಾಗಿ ಆಯ್ಕೆ ಮಾಡಿದ ಸಲುವಾಗಿ
ಸನ್ಮಾನ ಶ್ರೀ ಡಾ!! ರಾಜು ಕಡ್ಯಾಳ ಅವರಿಗೆ ಸಮಾಜ ಭಾಂಧವರಿಂದ ಸನ್ಮಾನ ಕಾಯ೯ಕ್ರಮ ಇಂದು ಬೀದರ ಎಸ್.ಆರ್.ಎಸ್. ಫಂಕ್ಷನ್ ಹಾಲನಲ್ಲಿ ಜರುಗಿತು.
ಈ ಸಂಧ೯ಭದಲ್ಲಿ ದಕ್ಷಿಣ ಶಾಸಕರು ಶ್ರೀ ಬಂಡೆಪ್ಪಾ ಖಾಶೆಂಪೂರ್ ಮತ್ತು ಜೆಡಿ ಎಸ್. ಪಕ್ಷದ ಮುಖಂಡರು. ಪದಾಧಿಕಾರಿಗಳು. ಸಮಾಜದ ಹೆಣ್ಣುಮಕ್ಕಳು. ಗಂಡುಮಕ್ಕಳು ಯುವಕರು ಸೆರಿದ್ದರು.

14/03/2023

ಬೀದರ ಪೊಲೀಸರಿಂದ ೭೦.೧೧ ಕೆಜಿ ಗಾಂಜಾ ಜಪ್ತಿ.

ದಿನಾಂಕ : 14-03-2023 ರಂದು ವಡಗಾಂವ ಅಮಗಿ ರಸ್ತೆಯಲ್ಲಿ ಕೆಲವು ವ್ಯಕ್ತಿಗಳು ಕಾನೂನು ಬಾಹಿರವಾಗಿ ಗಾಂಜಾ ಸಾಗಾಣಿಕೆ ಮಾಡುವವರಿದ್ದಾರೆ ಎಂಬ ಖಚಿತ ಬಾಲ್ಯ ಮೇರೆಗೆ, ಶ್ರೀ ಚನ್ನಬಸವಣ್ಣ ಎಸ್.ಎಲ್., ಐ.ಪಿ.ಎಸ್., ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೀದರ್, ಶ್ರೀ ಮಹೇಶ ಮೇಘಣ್ಣವರ, ಮಾನ್ಯ: ಹೆಚ್ಚುವರಿ ಮೊಅಸ್ ಅಧೀಕ್ಷಕರು, ಬೀದರ್, ಶ್ರೀ ಪವೀಕ ಶಂಕರ, ಐಪಿಎಸ್, ಎ.ಎಸ್.ವಿ. ಭಾಲ್ಕ ರವರ ಮಾರ್ಗದರ್ಶನದಲ್ಲ, ಶ್ರೀ ಮಲ್ಲಕಾರ್ಜುನ ಇಕ್ಕಳಕಿ ಸಿ.ಪಿ.ಐ., ಔರಾದ್ (ಅ) ವೃತ್ತರವರ ನೇತೃತ್ವದಲ್ಲ ಶ್ರೀ ಸುರೇಶ ಭಾವಿಮನಿ, ಪಿಎಸ್ ಐ (ತನಿಖೆ), ಸಂತಮರ್‌ ಮೊಲೀಸ್ ಠಾಣಿ, ಶ್ರೀ ಉಪೇಂದ್ರಕುಮಾರ್, ಪಿ.ಎಸ್.ಐ. ಔರಾದ್ (೨) ಪೊಲೀಸ್‌ ಠಾಣೆ, ಶ್ರೀ ಸಿದ್ಧಲಿಂಗ: ಪಿ.ಎಸ್.ಐ. ಚಿಂತಾಕಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಶ್ರೀ ಶಿವಕುಮಾರ್, ಎ.ಹೆಚ್.ಸಿ -34, ಅರುಣಸಿಂಗ್, ಸಿಪಿಸಿ-123 ಶ್ರೀ ವೆಂಕಟ ಸಿಪಿಸಿ-1573, ಶ್ರೀ ಜ್ಞಾನೇಶ್ವರ, ಸಿಪಿಸಿ-1910. ಶ್ರೀ ನರಪಾರೆಡ್ಡಿ, ಸಿಬಿಸಿ-1634 ಶ್ರೀ ಆರು, ಸಿಪಿಸಿ-1319 .ರವರ ತಂಡವು ದಿನಾಂಕ : 14-03-2023 ರಂದು 11:00 ಗಂಟೆಗೆ ವಡಗಾಂವ ಅಮಗಿ ರಸ್ತೆಯ ಚಿಕಿ (8) ಕ್ಲಾಸ್ ಹತ್ತಿರ ಎರಡು ದ್ವಿಚಕ್ರ ವಾಹನಗಳ ಮೇಲೆ ಗಾಂಜಾ ಸಾಗಿಸುತ್ತಿದ್ದ ಆಸಾಮಿಗಳ ಮೇಲೆ ದಾಳ ಮಾಡಿ ಸದರಿಯವರಿಂದ 70.11 ಕೆ.ಜಿ ಗಾಂಜಾ ಅಂದಾಜು ಕಿಮ್ಮತ್ತು ರೂ.960 ಲಕ್ಷ ಮತ್ತು ಎರಡು ದ್ವೀಚಕ್ರ ವಾಹನಗಳು ಅಂದಾಜು ಕಿಮ್ಮತ್ತು ರೂ. 73,000/- ಮೆದ್ದವುಗಳನ್ನು ವಶಪಡಿಸಿಕೊಂಡಿದ್ದು, ಸದರಿ ಪ್ರಕರಣದಲ್ಲ...ಇನ್ನೂ ಮೂವರು ಆರೋಪಿತರು. ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ

ಈ ಕುರಿತು ಸಂಚರೂ‌ ಶೂಲೀಸ್ ರಾಣಿಯಲ್ಲಿ ಅಪರಾಧ ಸಂಖ್ಯೆ:21/2023 ಕಲಂ 20(ಬಿ) (ಪಿ) ಎಸ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಸದರಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳವರ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು, ಬೀದರ್ ರವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಮತ್ತು ಪ್ರಶಂಸನೀಯ ಪತ್ರ ನೀಡಿರುತ್ತಾರೆ.
ವರದಿಗಾರರು ಆನಂದ ಬೀದರ

07/03/2023

*ಕರ್ನಾಟಕ ಪ್ರಜಾ ಶಕ್ತಿ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಸರ್ವಧರ್ಮ ಸಮ್ಮೇಳನ*

ಬೀದರ ನಗರದ ಶ್ರೀ ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ 74ನೆ ಗಣರಾಜ್ಯೋತ್ಸವದ ನಿಮಿತ್ಯ 2023ನೆ ಸಾಲಿನ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ರಾಜ್ಯಾಧ್ಯಕ್ಷರಾದ ವಿಶ್ವನಾಥ ಜಿ ಪಿ ಅವರು ಆಗಮಿಸಿ ವಿಶೇಷ ಭಾಷಣ ಮಾಡಿದರು, ಕಾರ್ಯಕಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಸಾಯಿ ಸಿಂಧೆ ಅವರು ವಹಿಸಿದರು, ಇದರ ಜೊತೆಗೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಎಲ್ಲ ಧರ್ಮ ಗುರುಗಳು ವಹಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಸೇರಿದಂತೆ ಹಲವಾರು ಹಾಜರಿದ್ದರು.

ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು.

05/03/2023

ಕಪಪಮೀವಿ ವಿಶ್ವವಿದ್ಯಾಲಯ ಬೀದರನ ವಿದ್ಯಾಥಿಗಳಾದ ನಾವು BVSc & AH ಪದವಿಯ ಅಂತಿಮ ಶೈಕ್ಷಣಿಕ ಭಾಗವಾದ ಒಂದು ವರ್ಷದ ಇಂಟರ್ನ್‌ಪ್ ಕಾರ್ಯಕ್ರಮವನ್ನು ರಾಜ್ಯದ ಹಾಗೂ ಹೊರರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಫಾರ್ಮ್ಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷದವರೆಗೆ ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ, ಇದರ ಸಲುವಾಗಿ ಸರ್ಕಾರ ಇಂಟರ್ನ್ ಶಿಪ್ ವಿದ್ಯಾರ್ಥಿಗಳಿಗೆ 14,000/- ರೂಪಾಯಿಗಳ ಮಾಸಿಕ ವೇತನವನ್ನು ಸುಮಾರು ಎಂಟು ವರ್ಷಗಳಿಂದ ನೀಡುತ್ತಾ ಬಂದಿದೆ. ಈ ವೇತನದಲ್ಲೇ ಆಯಾ ತಿಂಗಳುಗಳ ಖರ್ಚುಗಳಾದ ಊಟ, ವಸತಿ, ಸಾರಿಗೆ ಓಡಾಟದ ವೆಚ್ಚ ಹಾಗೂ ವ್ಯಾಸಂಗಕ್ಕೆ ಸಂಬಂಧಿಸಿದೆ. ಖರ್ಚುಗಳನ್ನು ಭರಿಸಬೇಕಾಗುತ್ತದೆ. ತಮಗೇ ತಿಳಿದಿರುವಂತೆ, ಇತ್ತೀಚಿನ ದಿನಗಳಲ್ಲಿ, ನಿತ್ಯ ಬಳಕೆಯ ವಸ್ತುಗಳ ಹಾಗೂ ಸೌಲಭ್ಯಗಳ ದರವು ಗಗನಕ್ಕೇರಿದ್ದು, ಇಂತಹ ಕಾಲಘಟ್ಟದಲ್ಲಿ ಇದಕ್ಕಾಗಿ ಮಾಸಿಕ ಸುಮಾರು 30,000/- ರೂ. ಗಳಿಗಿಂತ ಅಧಿಕ ವೆಚ್ಚ ತಗುಲುತ್ತದೆ. ಇದಲ್ಲದೇ ವಿಶ್ವವಿದ್ಯಾಲಯಕ್ಕೂ ಕೂಡ ವಾರ್ಷಿಕ ಸುಮಾರು 45,000/- ರೂ. ಗಳ ಶುಲ್ಕವನ್ನು ಪಾವತಿಸಬೇಕಾಗಿದೆ. ಇಂಟರ್ನ್‌ಶಿಪ್‌ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ನಮಗೆ ಯಾವುದೇ ವಿದ್ಯಾರ್ಥಿವೇತನವು ಸಿಗುವುದಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಶೇಕಡ 406 ಅವಕಾಶವನ್ನು ಬಡ ಹಾಗೂ ರೈತಾಪಿ ಕುಟುಂಬಗಳಿಗೆ ನೀಡಬೇಕಾದ ನಿಯಮವಿರುವುದರಿಂದ, ಪ್ರಸ್ತುತ ತಗುಲುತ್ತಿರುವ ಅಧಿಕ ವೆಚ್ಚವನ್ನು ಭರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ. ಈ ಕಾರಣಕ್ಕೆ ಇಂಟರ್ನ್‌ಶಿಪ್ ಭತ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಸತತವಾಗಿ ಮನವಿ ಸಲ್ಲಿಸುತ್ತಿದ್ದು, ಇತ್ತೀಚೆಗಷ್ಟೇ ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳ: ಇಂಟರ್ನ್‌ಶಿಪ್: ಭತ್ಯೆಯನ್ನು 30,000/- ರೂ.ಗಳಿಗೆ ಏರಿಸಿರುವ ಹಿನ್ನೆಲೆಯಲ್ಲಿ, ಮೂಕಪಾಣಿಗಳ ಸೇವೆಯಲ್ಲಿ ನಿರತರಾದ ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮಾಸಿಕ ಭತ್ಯೆಯನ್ನು ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಾನವಾಗಿ ನೀಡುವಂತೆ ಈ ಮೂಲಕ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

03/03/2023

ಬೀದರ ಉತ್ತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸುವರಲ್ಲಿ ಒಬರಾದ ಅಬ್ದುಲ್ ಮನ್ನಾನ್ ಸೆಠ್ ಅವರು ಕೊವಿಡ್ ಸಮಯದಲ್ಲಿ ಸಫಾಯಿ ಕಮ೯ಚಾರಿಯಾಗಿ ಕೆಲಸ ನಿವ೯ಹಿಸಿದ್ದ ಹೆಣ್ಣುಮಕ್ಕಳಿಗೆ ಕೊವಿಡ್ ಮುಗಿದ ನಂತರ ಕೆಲಸದಿಂದ ತೆಗೆದು ಹಾಕಿದ್ದರು ಅವರು ಸುಮಾರು ಹತ್ತು ತಿಂಗಳಿನಿಂದ ಅಹೊರಾತ್ರಿ ಸತ್ಯಾಗ್ರಹ ಕುತ್ತಿದವರಿಗೆ ದಿನಾಲು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಹಾಗೂ ಇಂದು ಅವರಿಗೆ ಸಿರೆ ಹಂಚಿದರು.
ಇಂದು ಬೀದರ ಜನತೆ ಶಾಸಕರ ಸ್ಥಾನದಲ್ಲಿ ಹೊಸ ಮುಖ ಕಾಣ ಬಯಸುತ್ತಿದ್ದಾರೆ ಜನರು ಕಾರಣ ಜನತೆ ಕಟ್ಟುವ ಟೆಕ್ಸ್ ಮೂಲಕ ಬೀದರಿನ ಶಾಸಕರಿಗೆ ಸಂಬಳ ಹಾಗೂ ಇನ್ನಿತರ ಸೌಕಯ೯ ಸೌಲಭ್ಯ .ಸಿಗುತ್ತದೆ
ಅವರು ಜನಸೆವಕರು ನಾ ಮಾಡಿದೆ ನಾ ಮಾಡಿದೆ ಎನ್ನುವ ಮಾತು ಆಡವುದು ತಪ್ಪು ಜನ ನನ್ನು ಮೂರು ಬಾರಿ ಶಾಸಕರಾಗಿ ಮಾಡಿದಕ್ಕೆ. ನಾನು ಅಭಿವೃದ್ಧಿ ಮಾಡಿದೆ ಎಂದು ಹೆಳಬೆಕು ಎಂದು ಅಬ್ದುಲ್ ಮನ್ನಾನ್ ಸೆಠ್ ಕಿಡಿಕಾರಿದರು.

Address


Telephone

+919902395324

Website

Alerts

Be the first to know and let us send you an email when A1 media bidar posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Telephone
  • Alerts
  • Videos
  • Claim ownership or report listing
  • Want your business to be the top-listed Media Company?

Share