Praja pragathi

Praja pragathi Praja Pragathi is one of the best Kannada state daily news paper in karnataka covering national,intern

ಮಕ್ಕಳನ್ನು ಅಂಕ ತೆಗೆಯುವ ಯಂತ್ರಗಳನ್ನಾಗಿ ಮಾಡಬೇಡಿ: ಎಸ್ ನಾಗಣ್ಣ
17/01/2025

ಮಕ್ಕಳನ್ನು ಅಂಕ ತೆಗೆಯುವ ಯಂತ್ರಗಳನ್ನಾಗಿ ಮಾಡಬೇಡಿ: ಎಸ್ ನಾಗಣ್ಣ

ಗುಬ್ಬಿ: ಮಕ್ಕಳನ್ನು ಅಂಕ ತೆಗೆಯುವ ಯಂತ್ರಗಳನ್ನಾಗಿ ಮಾಡಬೇಡಿ ಜ್ಞಾನೋತ್ಪಾದನೆಯ ಯಂತ್ರ ಗಳನ್ನಾಗಿ ಮಾಡಿ ಎಂದ ಪ್ರಜಾಪ್ರಗತಿ ಸಂಪಾದ.....

ಗುಬ್ಬಿ ಚನ್ನಬಸವೇಶ್ವಸ್ವಾಮಿಗೆ ನಿರ್ಮಾಣವಾಗುತ್ತಿರುವ ಬೆಳ್ಳಿ ಪ್ರಕಾರೊತ್ಸ್ವಕ್ಕೆ ಇಂದು ನೆಲಗಮಂಗಲದ ಉಧ್ಯಮಿಗಳಾದ ಎನ್ ಬಿ ದಯಾಶಂಕರ್, ಹಾಗೂ ಎನ...
16/01/2025

ಗುಬ್ಬಿ ಚನ್ನಬಸವೇಶ್ವಸ್ವಾಮಿಗೆ ನಿರ್ಮಾಣವಾಗುತ್ತಿರುವ ಬೆಳ್ಳಿ ಪ್ರಕಾರೊತ್ಸ್ವಕ್ಕೆ ಇಂದು ನೆಲಗಮಂಗಲದ ಉಧ್ಯಮಿಗಳಾದ ಎನ್ ಬಿ ದಯಾಶಂಕರ್, ಹಾಗೂ ಎನ್ ಆರ್ ಜಗದೀಶ್ ತಲಾ 5 ಕೆ ಜಿ ಬೆಳ್ಳಿಯನ್ನು ನೀಡಿದರು ಸುಮಾರು 75 ರಿಂದ 80 ಕೆಜಿ ಬೆಳ್ಳಿಯ ಈ ಪ್ರಾಕಾರೋತ್ಸವ ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

15/01/2025

ಖಮ್ಮಂ: ಹತ್ತಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ.
ಅಪಘಾತದಲ್ಲಿ ಹತ್ತಿಯ ಚೀಲಗಳು ಸುಟ್ಟು ಭಸ್ಮ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುತ್ತಿದ್ದಾರೆ

ಕಳೆದ ಕಲವು ದಿನಗಳಿಂದ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ...
15/01/2025

ಕಳೆದ ಕಲವು ದಿನಗಳಿಂದ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಂದು ಕೊನೆಯುಸಿರೆಳೆದಿದ್ದಾರೆ. ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 1 ಗಂಟಗೆ ಅಸ್ಪತ್ರೆಯಿಂದ ಮಹಾಲಕ್ಷ್ಮಿಪುರಂನಲ್ಲಿರುವ ವಿಜಯ್ ನಿವಾಸಕ್ಕೆ ಮೃತದೇಹ ರವಾನೆಯಾಗಲಿದೆ. ಮಧ್ಯಾಹ್ನ ಒಂದು ಗಂಟೆಯಿಂದ ನಾಳೆ 10 ಗಂಟೆವರೆಗೂ ಅಂತಿಮ ದರ್ಶನ‌ ನಡೆಯಲಿದ್ದು. ನಾಳೆ ಬೆಳಗ್ಗೆ 10 ಗಂಟೆ ನಂತರ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ನಡೆಯಲಿದೆ.

15/01/2025

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮನೆಗೆ ಮುತ್ತಿಗೆಗೆ ಬಿಜೆಪಿ ಕರೆ ಹಿನ್ನಲೆ. ಪರಮೇಶ್ವರ ಮನೆ ಎದುರು ಬ್ಯಾರಿಕೇಡ್ ಹಾಕಿ ಭದ್ರತೆ.ಬ್ಯಾರಿಕೇಡ್ ಹತ್ತಲು ಸಾಧ್ಯವಾಗದಂತೆ ವೇಸ್ಟ್ ಆಯಿಲ್ ಹಚ್ಚಿರುವ ಪೊಲೀಸರು. ಬಿಜೆಪಿ ಕಾರ್ಯಕರ್ತರ ಮುತ್ತಿಗೆ ತಡೆಯಲು ಪೊಲೀಸರು ಭರ್ಜರಿ ಪ್ಲಾನ್ ಮಾಡಿದ್ದಾರೆ.

15/01/2025
ಗುಬ್ಬಿಯ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯ ದಲ್ಲಿ ಇಂದು ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷವಾಗಿ ಗೆಣಸು,  ಕಡಲೆಕಾಯಿ,ಅವರ...
14/01/2025

ಗುಬ್ಬಿಯ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯ ದಲ್ಲಿ ಇಂದು ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷವಾಗಿ ಗೆಣಸು, ಕಡಲೆಕಾಯಿ,ಅವರೆಕಾಯಿಗಳಿಂದ ಗದ್ದುಗೆಗೆ ಅಲಂಕಾರ ಮಾಡಲಾಗಿತ್ತು ಬೆಳಿಗ್ಗೆ 5 ಗಂಟೆಯಿಂದಲೇ ಸಾವಿರಾರು ಭಕ್ತರು ಕ್ಯೂ ನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು

13/01/2025

ಮಕ್ಕಳನ್ನ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿದರೆ ಅವರಿಗೆ ಬೇರೆ ಬೇರೆ ಹವ್ಯಾಸಗಳು ಬರುವುದಿಲ್ಲ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಬೆಳೆಯಲು ಅನೂ ಕುಲವಾಗುತ್ತದೆ ಎಂದು ಗೃಹಸಚಿವಹಾಗೂ ತುಮಕುರುಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.

13/01/2025

"ಸಂಕ್ರಾಂತಿ ಸುಗ್ಗಿ -2", 5 ದಿನ ಬಾಕಿ .....!

ಗುಬ್ಬಿ: ಗುಬ್ಬಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಚುನಾವಣೆ ಇದೆ ತಿಂಗಳ 18ಕ್ಕೆ ನಿಗದಿಯಾಗಿತ್ತು. ಚುನಾವಣೆಗೆ ಸ್ಪ...
12/01/2025

ಗುಬ್ಬಿ: ಗುಬ್ಬಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಚುನಾವಣೆ ಇದೆ ತಿಂಗಳ 18ಕ್ಕೆ ನಿಗದಿಯಾಗಿತ್ತು. ಚುನಾವಣೆಗೆ ಸ್ಪರ್ದಿಸಿದ್ದ ಸಿ ಯು ರಾಜಣ್ಣ, ಉಮೇಶ್, ನಾಮಪತ್ರ ಹಿಂಪಡೆದ ಸಲುವಾಗಿ
ಸಂಘದ ಹಿರಿಯ ಸದಸ್ಯ ಜಿ ಡಿ ಸುರೇಶ್ ಗೌಡರ ನೇತೃತ್ವದಲ್ಲಿ 12 ಜನ ಅವಿರೋಧವಾಗಿ ಆಯ್ಕೆಯಾದರು ಇದರಲ್ಲಿ ಇಬ್ಬರು ಮಹಿಳೆಯರು ಒಂದು ಪರಿಶಿಷ್ಟ ಜಾತಿ ಒಂದು ಪರಿಶಿಷ್ಟ ವರ್ಗದ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರೆ ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಆಯ್ಕೆ ಯಾಗಿದ್ದಾರೆ. ಆಯ್ಕೆಯಾದ ಸದಸ್ಯರನ್ನು ಟಿ ಎ ಪಿ ಸಿ ಎಂ ಎಸ್ ನ ಅಧ್ಯಕ್ಷ ರಾಮಚಂದ್ರ ಅಭಿನಂದಿಸಿದ್ದಾರೆ.

ಸಂಕ್ರಾಂತಿಯ ಹಬ್ಬಕ್ಕೆ ನಿಮ್ಮ ಕಲೆಯ ಹೊಳಪುಪ್ರಗತಿ ಸಂಕ್ರಾಂತಿ ಸುಗ್ಗಿ ನಿಮಗಾಗಿ ಆಯೋಜಿಸಿದೆ ವಿಶೇಷ ಚಿತ್ರಕಲಾ ಸ್ಪರ್ಧೆನಿಮ್ಮ ಕಲೆಯ ಮೂಲಕ ಸಂಕ್...
10/01/2025

ಸಂಕ್ರಾಂತಿಯ ಹಬ್ಬಕ್ಕೆ ನಿಮ್ಮ ಕಲೆಯ ಹೊಳಪು
ಪ್ರಗತಿ ಸಂಕ್ರಾಂತಿ ಸುಗ್ಗಿ ನಿಮಗಾಗಿ ಆಯೋಜಿಸಿದೆ ವಿಶೇಷ ಚಿತ್ರಕಲಾ ಸ್ಪರ್ಧೆ
ನಿಮ್ಮ ಕಲೆಯ ಮೂಲಕ ಸಂಕ್ರಾಂತಿಯ ಸಂಭ್ರಮ, ಸಂಪ್ರದಾಯ ಮತ್ತು ಆನಂದವನ್ನು ಮೆರೆಯಲು ಅವಕಾಶ.
ನೋಂದಾಯಿಸಲು: ನಿಮ್ಮ ಹೆಸರು, ವಯಸ್ಸು, ಸ್ಥಳದ ವಿವರಗಳನ್ನು ವಾಟ್ಸಪ್ ಮಾಡಿ.
ವಾಟ್ಸಪ್ ಸಂಖ್ಯೆ: 9880841575

ಗುಬ್ಬಿ: ಗುಬ್ಬಿಯ ಇತಿಹಾಸ ಪ್ರಸಿದ್ದ ಬೆಟರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಿಗ್ಗೆ 5 ಗಂಟೆಯಿಂದಲೇ ಅಭಿಷೇಕ ಪೂಜೆ ಹಾಗೂ ...
10/01/2025

ಗುಬ್ಬಿ: ಗುಬ್ಬಿಯ ಇತಿಹಾಸ ಪ್ರಸಿದ್ದ ಬೆಟರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಿಗ್ಗೆ 5 ಗಂಟೆಯಿಂದಲೇ ಅಭಿಷೇಕ ಪೂಜೆ ಹಾಗೂ ಉತ್ಸವ ಮೂರ್ತಿಯ ವಿಶೇಷ ವೈಕುಂಠ ದರ್ಶನವನ್ನು ದೇವಾಲಯದ ಆಡಳಿತ ಮಂಡಳಿ ವ್ಯವಸ್ಥೆ ಮಾಡಿತ್ತು , ಬರುವ ಭಕ್ತರೆಲ್ಲರಿಗೂ ಲಾಡು ಪ್ರಸಾದ ವಿತರಿಸಲಾಯಿತು ಈ ಕಾರ್ಯವನ್ನು ನೆರವೇರಿಸಿದ ಆಡಳಿತ ಮಂಡಳಿಯ ಸಿ ಎಸ್ ಅರುಣ್ ಜಿ ಆರ್ ಶ್ರೀನಿವಾಸ್, ಜಿ.ಸತೀಶ್, ರವಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.

ಗುಬ್ಬಿ : ಗುಬ್ಬಿಯ ವಾಸವಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಪದ್ಮಾವತಿ ಅಮ್ಮನವರಿಗೆ  ವಿಶೇಷ ಅಲಂಕಾರ ಮಾಡಲಾಗಿ...
10/01/2025

ಗುಬ್ಬಿ : ಗುಬ್ಬಿಯ ವಾಸವಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಪ್ರಾತಃ ಕಾಲ 5 ಗಂಟೆಯಿಂದಲೇ ನೂರಾರು ಭಕ್ತರು ದರ್ಶನ ಪಡೆದರು

Address

Bengaluru/Honnavar Road
Tumkur
572102

Alerts

Be the first to know and let us send you an email when Praja pragathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Praja pragathi:

Videos

Share

praja pragathi

prajapragathi is one of the best local news paper covering the districts tumkur,chitradurga,ballari,davangere,haveri,bangalore local newses and also state,national,international,sports news