Ankur Media Publications

Ankur Media Publications Publisher of books on media, mass communication, literature and culture, both in Kannada & English.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸುಬ್ರಹ್ಮಣ್ಯ ಶರ್ಮ ವಿ. ಅವರ ಚೊಚ್ಚಲ ಕೃತಿಯಿದು....
20/05/2024

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸುಬ್ರಹ್ಮಣ್ಯ ಶರ್ಮ ವಿ. ಅವರ ಚೊಚ್ಚಲ ಕೃತಿಯಿದು.

#ಸಾಗುವುದಿದೆ_ಬಲುದೂರ

ಇಂಗ್ಲಿಷಿನ ಸುಪ್ರಸಿದ್ಧ ಕವಿಗಳ 35 ಕವಿತೆಗಳನ್ನು ಅವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.

ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಎಲ್ಲ ಸಾಹಿತ್ಯಾಸಕ್ತರಿಗೆ ಆಪ್ತವೆನಿಸಬಲ್ಲ ಕೃತಿಯಿದು. ಅಂಕುರ್‌ ಮೀಡಿಯಾ ಪಬ್ಲಿಕೇಶನ್ಸ್‌ ನ 9ನೆಯ ಪ್ರಕಟಣೆ.

ಬೆಲೆ ರೂ. 150-00

ಪ್ರತಿಗಳಿಗಾಗಿ ಸಂಪರ್ಕಿಸಿ: 094495 25854

ಯುಗಾದಿಯ ಶುಭಾಶಯಗಳು!ನಮ್ಮ ಪ್ರಕಟಣೆಯ ಪುಸ್ತಕಗಳನ್ನೀಗ ಅಮೆಜ಼ಾನಿನಲ್ಲಿ ಕೊಳ್ಳಿರಿ!www.amazon.in
09/04/2024

ಯುಗಾದಿಯ ಶುಭಾಶಯಗಳು!
ನಮ್ಮ ಪ್ರಕಟಣೆಯ ಪುಸ್ತಕಗಳನ್ನೀಗ ಅಮೆಜ಼ಾನಿನಲ್ಲಿ ಕೊಳ್ಳಿರಿ!
www.amazon.in

05/11/2023
 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ ಪುಸ್ತಕಕ್ಕೆ ಮೇಷ್ಟ್ರು ಪಾಠ ಮಾಡಿದ್ದ ಶಾಲೆಯಲ್ಲೇ ಮತ್ತೊಮ್ಮೆ ಲೋಕಾರ್ಪಣೆಗೊಳ್ಳುವ ಸುವರ್ಣಾವಕಾಶ.ಒಂದೆರಡಲ್...
28/10/2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ ಪುಸ್ತಕಕ್ಕೆ ಮೇಷ್ಟ್ರು ಪಾಠ ಮಾಡಿದ್ದ ಶಾಲೆಯಲ್ಲೇ ಮತ್ತೊಮ್ಮೆ ಲೋಕಾರ್ಪಣೆಗೊಳ್ಳುವ ಸುವರ್ಣಾವಕಾಶ.

ಒಂದೆರಡಲ್ಲ, ಬರೋಬ್ಬರಿ ಹದಿನಾಲ್ಕು ವರ್ಷ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಬರೆಂಗಾಯ ಶಾಲೆಯಲ್ಲಿ ಶ್ರೀ ಭೀಮ ಭಟ್ಟರು ಸೇವೆ ಸಲ್ಲಿಸಿದ್ದರು.

ಪುಸ್ತಕ ಲೋಕಾರ್ಪಣೆ ಮಾಡಿ ಅದರ ಬಗ್ಗೆ ಮಾತಾಡಿದ್ದು ಬಹುಶ್ರುತ ವಿದ್ವಾಂಸರೂ ಹಿರಿಯ ಯಕ್ಷಗಾನ ಕಲಾವಿದರೂ ಆದ ಡಾ. ಎಂ. ಪ್ರಭಾಕರ ಜೋಶಿಯವರು ಎಂಬುದು ಇನ್ನೊಂದು ವಿಶೇಷ.

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರೂ, ಹಿರಿಯ ಯಕ್ಷಗಾನ ಕಲಾವಿದರೂ, ಸಂಘಟಕರೂ ಆದ ಶ್ರೀ ಉಜಿರೆ ಅಶೋಕ ಭಟ್ಟರ ಮುತುವರ್ಜಿಯೇ ಈ ಕಾರ್ಯಕ್ರಮಕ್ಕೆ ಪ್ರೇರಣೆ. ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅವರಿಗೆ ಹೆಗಲಾಗಿ ಕಾರ್ಯಕ್ರಮದ ಸ್ಥಳೀಯ ಸಂಘಟನೆಗೆ ಅಪಾರ ಶ್ರಮವಹಿಸಿದ ಶ್ರೀ ವಿಷ್ಣು ಮರಾಠೆಯವರಿಗೂ ನಮ್ಮ ಧನ್ಯವಾದಗಳು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ ʼಸ್ಯಮಂತಕಮಣಿʼ ಯಕ್ಷಗಾನ ತಾಳಮದ್ದಳೆಯೂ ಯಶಸ್ವಿಯಾಗಿ ನಡೆಯಿತು.

ಉದಯವಾಣಿ, 24 ಸೆಪ್ಟೆಂಬರ್‌ 2023 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಸಂಪರ್ಕಿಸಿ: 094495 258...
26/09/2023

ಉದಯವಾಣಿ, 24 ಸೆಪ್ಟೆಂಬರ್‌ 2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಸಂಪರ್ಕಿಸಿ: 094495 25854 ಅಥವಾ 9449974840

ವಿಜಯ ಕರ್ನಾಟಕ, 24 ಸೆಪ್ಟೆಂಬರ್ 2023. #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಪ್ರತಿಗಳಿಗೆ ಸಂಪರ್...
25/09/2023

ವಿಜಯ ಕರ್ನಾಟಕ, 24 ಸೆಪ್ಟೆಂಬರ್ 2023.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಪ್ರತಿಗಳಿಗೆ ಸಂಪರ್ಕಿಸಿ: 094495 25854 ಅಥವಾ 9449974840

ಪ್ರಜಾವಾಣಿ, 24 ಸೆಪ್ಟೆಂಬರ್ 2023. #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಪ್ರತಿಗಳಿಗೆ ಸಂಪರ್ಕಿಸ...
24/09/2023

ಪ್ರಜಾವಾಣಿ, 24 ಸೆಪ್ಟೆಂಬರ್ 2023.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಪ್ರತಿಗಳಿಗೆ ಸಂಪರ್ಕಿಸಿ: 094495 25854 ಅಥವಾ 9449974840

19/09/2023

Thank you Sahana for this great video.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ

 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಕೃತಿ ಲೋಕಾರ್ಪಣೆ ಕಾರ್ಯಕ್ರಮದ ಕೆಲವು ಸುಂದರ ನೆನಪುಗಳು!ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಮಗಳು ಹೇಳಿದ ಅಪ್...
12/09/2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಕೆಲವು ಸುಂದರ ನೆನಪುಗಳು!

ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಮಗಳು ಹೇಳಿದ ಅಪ್ಪನ ಕಥೆಯಿದು.

ಚಿತ್ರಕೃಪೆ: ಅಭಿಷೇಕ್ ಎಂ ವಿ

ಪುಸ್ತಕಕ್ಕಾಗಿ ಸಂಪರ್ಕಿಸಿ: 094495 25854 ಅಥವಾ 9449974840

02/09/2023
 ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಪುಸ್ತಕ! #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಕಡಂಬಿಲ ಭೀಮಭಟ್ಟರ ಜೀವನ ಕಥನನಿರೂಪಣೆ: ಆರತಿ ಪಟ್ರಮೆಇವರಲ್ಲಿ ಕ...
28/08/2023



ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಪುಸ್ತಕ!

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಕಡಂಬಿಲ ಭೀಮಭಟ್ಟರ ಜೀವನ ಕಥನ
ನಿರೂಪಣೆ: ಆರತಿ ಪಟ್ರಮೆ

ಇವರಲ್ಲಿ ಕೇಳಿ: 094495 25854

 #ಶಾಲೆಗೆ_ಹೋದವರೆಲ್ಲರೂ_ಓದಲೇಬೇಕಾದ_ಪುಸ್ತಕ!ಖ್ಯಾತನಾಮರು ಆತ್ಮಕಥೆಗಳನ್ನು ಬರೆಯುವುದು, ಅವುಗಳನ್ನು ಜನಸಾಮಾನ್ಯರು ಕುತೂಹಲದಿಂದ ಗಮನಿಸುವುದು ಲೋ...
25/08/2023

#ಶಾಲೆಗೆ_ಹೋದವರೆಲ್ಲರೂ_ಓದಲೇಬೇಕಾದ_ಪುಸ್ತಕ!

ಖ್ಯಾತನಾಮರು ಆತ್ಮಕಥೆಗಳನ್ನು ಬರೆಯುವುದು, ಅವುಗಳನ್ನು ಜನಸಾಮಾನ್ಯರು ಕುತೂಹಲದಿಂದ ಗಮನಿಸುವುದು ಲೋಕರೂಢಿ. ಸಾಮಾನ್ಯರ ನಡುವೆ ಸಾಮಾನ್ಯರಾಗಿಯೇ ಇದ್ದವರ ಒಳಗೆ ಲೋಕಕ್ಕೆ ಪಾಠವಾಗಬಲ್ಲ ಕಥೆಗಳಿರಲಾರವೇ? ಅಂತಹದೊಂದು ಪ್ರಶ್ನೆಗೆ ಈ ಪುಸ್ತಕ ಉತ್ತರ ನೀಡುತ್ತದೆ.

ಬಡತನದಲ್ಲೇ ಹುಟ್ಟಿ ಬೆಳೆದು, ಸಣ್ಣ ವಯಸ್ಸಿನಲ್ಲೇ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು, ಪ್ರತಿದಿನ ಸರಾಸರಿ ಹತ್ತು ಮೈಲಿ ಕಾಲ್ನಡಿಗೆ ಪ್ರಯಾಣ ಮಾಡುತ್ತಾ ನಲ್ವತ್ತು ವರ್ಷ ಅಧ್ಯಾಪನ ಮಾಡಿದ ಕಡಂಬಿಲ ಭೀಮ ಭಟ್ಟರ ಆತ್ಮಕಥೆಯ ಪುಟಗಳಿವು. ಇವು ಅಂತಿಮವಾಗಿ ಒಬ್ಬ ಶಿಕ್ಷಕನ ಬದುಕಿನ ಪುಟಗಳಾಗಿ ಉಳಿಯುವುದಿಲ್ಲ, ಒಂದು ತಲೆಮಾರಿನ ಸಾಮಾಜಿಕ ಇತಿಹಾಸ, ಶೈಕ್ಷಣಿಕ ವ್ಯವಸ್ಥೆಯ ಚಿತ್ರಣಗಳಾಗಿ ನಮ್ಮೆದುರು ತೆರೆದುಕೊಳ್ಳುತ್ತವೆ.

ಇಲ್ಲಿ ಪ್ರಸಿದ್ಧಿಯ ಕಥನವಿಲ್ಲ, ಆತ್ಮಪ್ರಶಂಸೆಯ ಲವಲೇಶವೂ ಇಲ್ಲ. ‘ಬದುಕು ಇರುವುದೇ ಸಂಪಾದನೆಗೆ, ಇಲ್ಲಿ ಪ್ರಾಮಾಣಿಕತೆ, ಆತ್ಮಗೌರವ, ವೃತ್ತಿನಿಷ್ಠೆ ಎಂದೆಲ್ಲ ಮಾತನಾಡುವುದೇ ಒಂದು ದೊಡ್ಡ ತಮಾಷೆ’ ಎಂಬ ಆಧುನಿಕ ಕಾಲದ ಚಿಂತನೆಯ ನಡುವೆ ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ ಒಂದು ಹೊಸ ಸಾಧ್ಯತೆಯನ್ನು ತೆರೆದಿಡಬಲ್ಲುದು.
ಅಪ್ಪನ ಕಥೆಯನ್ನು ಮಗಳೇ ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ. ಅಪ್ಪನನ್ನು ಮಗಳು ತಿಳಿದುಕೊಂಡದ್ದಕ್ಕಿಂತ ಹೆಚ್ಚು ಇನ್ನೊಬ್ಬರು ಅರ್ಥೈಸಿಕೊಳ್ಳಲಾರರು. ಅಪ್ಪನ ಬದುಕಿನ ಸಂಧ್ಯಾಕಾಲದಲ್ಲಿ ಅವರ ಒತ್ತಿನಲ್ಲಿ ಕುಳಿತು ಅವರೊಳಗಿನ ನೆನಪುಗಳಿಗೆ ಕನ್ನಡಿಯಾಗಿದ್ದಾರೆ ಆರತಿ ಪಟ್ರಮೆ.....

(ಬೆನ್ನುಡಿಯಿಂದ)
#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ

ಉದಯವಾಣಿ, 23 ಏಪ್ರಿಲ್ 2023
23/04/2023

ಉದಯವಾಣಿ, 23 ಏಪ್ರಿಲ್ 2023

ಡಾ. ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಪುಸ್ತಕದ ಕುರಿತು ಪ್ರಜಾವಾಣಿ (09 ಏಪ್ರಿಲ್ 2023).ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕ...
18/04/2023

ಡಾ. ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಪುಸ್ತಕದ ಕುರಿತು ಪ್ರಜಾವಾಣಿ (09 ಏಪ್ರಿಲ್ 2023).

ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: 094495 25854

ಡಾ. ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಪುಸ್ತಕಕ್ಕೆ ಪ್ರಸಿದ್ಧ ಅಂಕಣಕಾರ ಶ್ರೀ ಎ.ಆರ್. ಮಣಿಕಾಂತ್ ಅವರು ಬರೆದಿರುವ ಮುನ್ನುಡ...
18/04/2023

ಡಾ. ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಪುಸ್ತಕಕ್ಕೆ ಪ್ರಸಿದ್ಧ ಅಂಕಣಕಾರ ಶ್ರೀ ಎ.ಆರ್. ಮಣಿಕಾಂತ್ ಅವರು ಬರೆದಿರುವ ಮುನ್ನುಡಿ ನಿಮ್ಮ ಓದಿಗೆ, 'ಬುಕ್ ಬ್ರಹ್ಮ'ದ ಮೂಲಕ.

ಪ್ರತಿಗಳಿಗಾಗಿ ಸಂಪರ್ಕಿಸಿ: 094495 25854

ಮುನ್ನುಡಿ ಓದಲು ಮುಂದಿನ ಲಿಂಕ್ ಕ್ಲಿಕ್ ಮಾಡಿ:

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

ಅಂಕುರ-6ಪುಸ್ತಕದ ಶೀರ್ಷಿಕೆ: ನಮ್ಮೊಳಗಿದೆ ಗೆಲುವಿನ ಬೆಳಕು (ಬದುಕು ಬೆಳಗುವ ಭಾವಚಿತ್ರಗಳು)ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ.ಪ್ರಕಟಣೆಯ ವ...
18/04/2023

ಅಂಕುರ-6

ಪುಸ್ತಕದ ಶೀರ್ಷಿಕೆ: ನಮ್ಮೊಳಗಿದೆ ಗೆಲುವಿನ ಬೆಳಕು (ಬದುಕು ಬೆಳಗುವ ಭಾವಚಿತ್ರಗಳು)
ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ.
ಪ್ರಕಟಣೆಯ ವರ್ಷ: 2022
ಪುಟಗಳು: 176
ದರ: ರೂ. 190-00
ಪ್ರಕಾಶಕರು: Ankur Media Publications
ಸಂಪರ್ಕಿಸಿ: 094495 25854

ಪುಸ್ತಕದ ಕುರಿತು:
ಏಕಕಾಲಕ್ಕೆ ಕನ್ನಡಿಯೂ, ಕೈ ದೀವಿಗೆಯೂ, ತೋರುಗಂಬವೂ, ಬಾವುಟವೂ ಆಗಬಲ್ಲಂಥ ಪುಸ್ತಕದೊಂದಿಗೆ ಸಿಬಂತಿ ಪದ್ಮನಾಭ ನಿಮ್ಮೆದುರು ನಿಂತಿದ್ದಾರೆ. ಐವತ್ತು ಪುಟ್ಟಪುಟ್ಟ ಅಧ್ಯಾಯಗಳನ್ನು ಹೊಂದಿರುವ ಈ ಪುಸ್ತಕದಲ್ಲಿ ನಾವು ನೀವೆಲ್ಲಾ ದಿನವೂ ತೀರಾ ಸಾಮಾನ್ಯವಾಗಿ ಮಾಡುವ ತಪ್ಪುಗಳ ವಿವರವಿದೆ! ಗೆಲ್ಲಲು ಹೊರಟವರು ಪಾಲಿಸಬೇಕಾದ ನಿಯಮಗಳ ಪಟ್ಟಿಯಿದೆ. ಅತಿಯಾದ ಅಹಮಿಕೆಯಿಂದ ಜಾರಿಬಿದ್ದವರ ಮಾಹಿತಿಯಿದೆ. ಡಿಪ್ರೆಶನ್‌ಗೆ ತುತ್ತಾಗದೇ ಬದುಕಲು ಟಿಪ್ಸ್ ಇದೆ. ಗೆಲುವಿನ ಸವಾರಿ ಮಾಡಲು ಸಾಗಬೇಕಾದ ರೂಟ್ ಮ್ಯಾಪ್ ಇದೆ! ಕಥೆಯ ಚೆಂದ, ಲಲಿತ ಪ್ರಬಂಧದ ನವಿರು ಭಾವ, ಕಾವ್ಯದ ಲಯ ಎಲ್ಲವೂ ಈ ಬರೆಹಗಳಲ್ಲಿ ಒಟ್ಟೊಟ್ಟಿಗೆ ಮೇಳೈಸಿವೆ. ಉಲ್ಲಾಸದ, ಎಚ್ಚರದ, ಹಿತನುಡಿಯ ಮಾತುಗಳು ಪ್ರತಿ ಅಧ್ಯಾಯದಲ್ಲೂ ಇವೆ:
• ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ, ಮಾಡದೆಯೇ ಪಶ್ಚಾತ್ತಾಪ ಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.
• ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ.
• ಶತ್ರುವನ್ನು ತನ್ನೊಳಗೇ ಇಟ್ಟುಕೊಂಡ ಮನುಷ್ಯ, ಜೀವನಪೂರ್ತಿ ಅದೇ ಶತ್ರುವನ್ನು ಹುಡುಕಿಕೊಂಡು ಜಗತ್ತನ್ನೇ ಜಾಲಾಡುತ್ತಾನೆ!
• ಸೋತಾಗ ಸೋತು ಗೆದ್ದವರ, ನಮಗಿಂತಲೂ ಹೆಚ್ಚು ಪೆಟ್ಟು ತಿಂದವರ ಕಥೆಗಳು ನೆನಪಾಗಬೇಕು. ಸೋಲಿಸಿದವರ ಎದುರೇ ಪುಟಿದು ನಿಲ್ಲಬೇಕು.
• ಸುತ್ತಲೂ ಕತ್ತಲೆ ಹೊದ್ದು ಕುಳಿತವನ ಬಳಿ ಬರುವ ಸಣ್ಣದೊಂದು ಮಿಂಚುಹುಳವೂ ಲಕ್ಷದೀಪಗಳಿಗೆ ಸಮ.
ಒಂದು ಯಶಸ್ಸಿಗೆ, ಹೊಸದೊಂದು ಪುಳಕಕ್ಕೆ, ಗೆಲುವಿನ ಉನ್ಮಾದಕ್ಕೆ ಈಡಾಗಲು ಬಯಸುವವರಿಗೆ ಸಾಲುದೀಪದಂತೆ ಹೊಳೆವ ಇಂಥ ಮಾತುಗಳು ದಾರಿತೋರಿಸಬಲ್ಲವು ಎಂದು ಧಾರಾಳವಾಗಿ ಹೇಳಬಹುದು.
- ಎ. ಆರ್. ಮಣಿಕಾಂತ್, ಹಿರಿಯ ಪತ್ರಕರ್ತರು ಹಾಗೂ ಪ್ರಸಿದ್ಧ ಅಂಕಣಕಾರರು

Address

Tumkur

Telephone

+919449525854

Website

Alerts

Be the first to know and let us send you an email when Ankur Media Publications posts news and promotions. Your email address will not be used for any other purpose, and you can unsubscribe at any time.

Contact The Business

Send a message to Ankur Media Publications:

Videos

Share