Baraguru Tv

Baraguru Tv Contact information, map and directions, contact form, opening hours, services, ratings, photos, videos and announcements from Baraguru Tv, News & Media Website, Bangalore, Sira.
(1)

ಈ ನೆಲ ಜಲದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಿಮ್ಮ ಊರಿನ ಯಾವುದೇ ಸಮಸ್ಯೆ ಇದ್ದರು. ನಮ್ಮ ಮಾದ್ಯಮ ಮುಂದೆ ಇರುತ್ತೆ . ಯಾವುದೇ ಸುದ್ದಿಯಾದರೂ ಬಿತ್ತರಿಸಲು ನಾವ್ ರೆಡಿ. ಸದಾ ನಿಮ್ಮೊಂದಿಗೆ ಬರಗೂರು Tv DIGITAL MEDIA NEWS CHANNEL

15/12/2024

ಸಾರ್ವಜನಿಕರ ಅರ್ಜಿಗೆ ಬೆಲೆ ಇಲ್ವ...? ಸಿರಾ ನಗರಸಭೆ ಸದಸ್ಯ ಕೃಷ್ಣಪ್ಪ,

ಇಂದು ಶಿರಾ ನಗರಸಭೆಯ ವಾರ್ಡ್ ಸಂಖ್ಯೆ 9 ಸೊಪ್ಪನಹಟ್ಟಿ ಸದಸ್ಯರು ಕೃಷ್ಣಪ್ಪ ಮಾಧ್ಯಮಗೋಷ್ಟಿ ಕರೆದಿದ್ದು. ಪುರಸಭೆ ಹಾಗೂ ನಗರಸಭೆಯ 2012ರ ಸುತ್ತೋಲೆಗಳಲ್ಲಿ ಸಾರ್ವಜನಿಕರಿಗೆ ಸಮಯವನ್ನು 03ರಿಂದ05 ಗಂಟೆಯವರೆಗೆ ನಿಗದಿ ಮಾಡಿದ್ದು. ಈಗಾಗಲೇ 2012ರಲ್ಲಿ ಸುತ್ತೋಲೆ ಹೊರಡಿಸಿದ್ದು. ಆದರೆ ಶಿರಾ ನಗರಸಭೆಯ ಆಯುಕ್ತರು ಸಾರ್ವಜನಿಕರ ಅರ್ಜಿಗೆ ಯಾವುದೇ ರೀತಿಯಲ್ಲಿ ಬೆಲೆ ಇಲ್ಲದೆ ಹಾಗೂ ಕಾನೂನಿನ ಪ್ರಕಾರ ಅರ್ಜಿಗೆ ಸಂಬಂಧಪಟ್ಟ ಕಡತಗಳು ಇಲ್ಲವಾದಲ್ಲಿ ಸೂಕ್ತ ಸಮಯದಲ್ಲಿ ಹಿಂಬರಹ ನೀಡುತ್ತಿಲ್ಲ. ತ್ವರಿತ ಗತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಆಯುಕ್ತರು ಮೇಲೆ ಅಧಿಕಾರಿಗಳ ಆಜ್ಞೆಯನ್ನು ಪಾಲಿಸುವ ನಿಟ್ಟಿನಲ್ಲಿ ನಗರಸಭೆಯಿಂದ ಯಾವುದೇ ಕೆಲಸಗಳು ಸಹ ಆಗದೆ ವಿಳಂಬವಾಗುತ್ತಿವೆ. ಈಗಾಗಲೇ ಆಯುಕ್ತರಿಗೆ ನಾನು ಮನವಿ ಸಲ್ಲಿಸಿದ್ದು. ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದ್ದು. ನನ್ನ ಮನವಿಗೆ ಯಾವುದೇ ರೀತಿಯಲ್ಲಿ ಉತ್ತರ ನೀಡದಿರುವ ಕಾರಣ ನಾನು ಕಾನೂನಿನ ಮರೆಯ ಹೋಗಲು ಸಿದ್ದನಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,

#ಆಯುಕ್ತರು #ತುಮಕೂರು
Prabha news SIRA 24 News Public TV Seraphic TV Kaithal Public TV SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira Baraguru Tv DK Shivakumar Siddaramaiah Dinesh Gundu Rao Krishna Byre Gowda ಪಾವಗಡ Social Media

14/12/2024

ಪೊರಕೆ ಮಂಜಣ್ಣ ಸ್ವಚ್ಚತೆನೆ ನಮ್ಮ ಆಸ್ತಿ..?

ಇಂದು ಬಡಮಾರನಹಳ್ಳಿಗೆ ಬಂದಿದ್ದ ಪೊರಕೆ ಮಂಜಣ್ಣ ಅವರನ್ನು ಮಾತನಾಡಿಸಿ ಅವರ ಕಾರ್ಯವೈಕರಿಯ ಬಗ್ಗೆ ನಮ್ಮ ವೀಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಅವರ ಬಗ್ಗೆ ಒಂದಷ್ಟು ಮಾಹಿತಿಗಳನ್ನ ನಮ್ಮ ಚಾನೆಲ್ ನಲ್ಲಿ ಹಂಚಿಕೊಟ್ಟಿದ್ದೇನೆ. ಜೊತೆಗೆ ಅವರು ಮಾಡುತ್ತಿರುವ ಹಳ್ಳಿಗಳ ಸ್ವಚ್ಛತೆಗೆ ಯಾರಾದರೂ ಕೈಜೋಡಿಸಬೇಕೆಂದರೆ ಅವರ ದೂರವಾಣಿ ನಂಬರಿಗೆ ಕರೆ ಮಾಡಬಹುದು 8095623071
#ಆಯುಕ್ತರು #ತುಮಕೂರು

Prabha news SIRA 24 News Public TV Seraphic TV Kaithal Public TV Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira SIRA TIMES Baraguru Tv DK Shivakumar Siddaramaiah Krishna Byre Gowda Dinesh Gundu Rao ಪಾವಗಡ Social Media Grampanchyath Office RDPR Department Of Karnataka

14/12/2024

ಪರಿಹಾರಕ್ಕೆ ರೈತರ ಹೋರಾಟ..?

544E ನ್ಯಾಷನಲ್ ಹೆದ್ದಾರಿ ಹೈವೇಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ನೂರಾರು ರೈತರು. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಕಸಬಾ ಹೋಬಳಿಯ ಗಿಡಗನಹಳ್ಳಿ ಕ್ರಾಸ್ ಬಳಿ ರೈತರ ಜಮೀನಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.

ಸರ್ಕಾರದವರು ಇಲ್ಲಿನ ರೈತರಿಗೆ ಒಂದು 1 ಗುಂಟೆಗೆ 9761/- ರೂ ಪರಿಹಾರದ ಹಣ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ, ಇದೇ ಭಾಗದ ಮದಲೂರು ಸರ್ವೇ ನಂಬಗೆ ಈಗಿರುವ ಸಬ್ ರಿಜಿಸ್ಟರ್ ಬೆಲೆ 98,700 /- ಇದ್ದು, 544E ನ್ಯಾಷನಲ್ ಹೆದ್ದಾರಿ ಹೈವೇಗೆ, ಸರ್ಕಾರದವರು ಒಂದು ಕುಂಟೆಗೆ ಪರಿಹಾರ ನೀಡುತ್ತಿರುವುದು 33,000/- .

ಸದರಿ ಕೊಟ್ಟ ಗ್ರಾಮಪಂಚಾಯ್ತಿ ಸರ್ವೇ ನಂ. ಗಳಿಗೆ ಈಗಿರುವ ಸಬ್ ರಿಜಿಸ್ಟರ್ ಬೆಲೆ 1,07,000/-, ಆದ್ದರಿಂದ ಸರ್ಕಾರ ಮರು ಪರಿಶೀಲಿಸಿ ಈಗಿರುವ ಸಬ್ರಿಜಿಸ್ಟರ್ ಬೆಲೆಗೆ ಅನುಗುಣವಾಗಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದರು.

ಈಗ ಸರ್ಕಾರ ನಿಗದಿಪಡಿಸಿರುವ ಬೆಲೆ, ರೈತರಿಗೆ ತುಂಬಲಾರದ ನಷ್ಟವಾಗಿದ್ದು ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಮನವಿಯನ್ನು ಸ್ವೀಕರಿಸಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ರೈತರೆಲ್ಲ ಒಟ್ಟುಗೂಡಿ ರಸ್ತೆ ತಡೆದು ಉಗ್ರವಾದ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ
ಸಾಮಾಜಿಕ ಹೋರಾಟಗಾರರೂ ರೈತ ಮುಖಂಡ ರವಿಕುಮಾರ್, ನವೀನ್ ಕುಮಾರ್ ಜಿಕೆ ಗಿಡಗನಹಳ್ಳಿ ಜೈ ಕರುನಾಡ ರಕ್ಷಣಾ ವೇದಿಕೆ ಶಿರಾ ತಾಲೂಕು ಅಧ್ಯಕ್ಷರು., ನಂದ ಕುಮಾರ್, ರಾಜಣ್ಣ, ನಾಗೇಂದ್ರ, ಶಿವಣ್ಣ ಗೌಡ, ಪ್ರಕಾಶ್, ಮುದ್ದಣ್ಣ, ಶಿವರಾಜಪ್ಪ, ಚಂದ್ರಪ್ಪ, ಮಾದವೇಂದ್ರ ಹಾಗೂ ಅನೇಕ ರೈತರು, ಮುಖಂಡರು ಉಪಸ್ಥಿತರಿದ್ದರು.

#ಆಯುಕ್ತರು #ತುಮಕೂರು

Prabha news SIRA 24 News Public TV Seraphic TV Kaithal Public TV SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira Baraguru Tv Siddaramaiah DK Shivakumar Krishna Byre Gowda

ನಟ ಅಲ್ಲು ಅರ್ಜುನ್ ಅರೆಸ್ಟ್,
13/12/2024

ನಟ ಅಲ್ಲು ಅರ್ಜುನ್ ಅರೆಸ್ಟ್,

13/12/2024

ಪೊರಕೆ ಮಂಜಣ್ಣ ಸ್ವಚ್ಚತೆನೆ ನಮ್ಮ ಆಸ್ತಿ..!

ಬಡಮಾರನಹಳ್ಳಿ ಪೊರಕೆ ಮಂಜಣ್ಣ ಮಾರ್ಗದರ್ಶನದಲ್ಲಿ ಗೋಪಿ ಕುಂಟೆ ಗ್ರಾಮದ ಸ್ವಚ್ಛತೆಯ ಶ್ರೇಯೋಭಿವೃದ್ಧಿಗೆ ಗ್ರಾಮಸ್ಥರ ಸಹಕಾರದೊಂದಿಗೆ ಕಂಕಣಬದ್ಧರಾಗಿ ನಿಂತು ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ದೈಹಿಕ ಶಿಕ್ಷಣ ಪರೀವೀಕ್ಷಕ ಗೋಪಿ ಕುಂಟೆ ಕುಮಾರ್ ಹೆಚ್. ಹೇಳಿದರು.

ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಪಿ ಕುಂಟೆ ಗ್ರಾಮದಲ್ಲಿ ಗುರುವಾರ ನಡೆಯುತ್ತಿರುವ ಗ್ರಾಮ ಸ್ವಚ್ಛತೆ ಅಭಿಯಾನ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದರು.

ಗೋಪಿ ಕುಂಟೆ ಗ್ರಾಮದ ಹೊಸ ಬಡಾವಣೆ ಎಲ್ಲಿ ಸುಮಾರು 25 ಮನೆಗಳು ವಾಸ ಇರುವ ಜನರ ನಡುವೆ ಮನೆಗಳ ಆಜುಬಾಜುನಲ್ಲಿ ಗಿಡಗಂಟೆಗಳು ಬೆಳೆದು ವಿಷ ಜಂತಗಳು ಕಾಟವಾಗಿದ್ದು ಗ್ರಾಮ ಸ್ವಚ್ಛವಾಗಿಡುವ ಉದ್ದೇಶದಿಂದ ಗಿಡ ಗಂಟೆಗಳನ್ನು ತೆರವಿಗೆ
ಆದ್ಯತೆ ನೀಡಿದ್ದು ಕೆಲವೇ ದಿನಗಳಲ್ಲಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ, ಸುಮಾರು 35 ಸಾವಿರಕ್ಕೂ ಹೆಚ್ಚು ಸ್ವಂತ ಹಣದಲ್ಲಿ ಗ್ರಾಮ ಸ್ವಚ್ಛತೆಯನ್ನು ನಿರ್ವಹಣೆ ಮಾಡಲಾಗುತ್ತಿದ್ದು
ಪೊರಕೆ ಮಂಜಣ್ಣ ಇವರ ಪ್ರೇರಣೆಯಿಂದ
ಸ್ವಗ್ರಾಮದಲ್ಲಿ ಚರಂಡಿ, ರಸ್ತೆ ಜೊತೆಗೆ ಬಿದ್ದಿರುವ ಹಳೆ ಮನೆಗಳನ್ನು
ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಹರ್ಷ ತಂದಿದೆ, ಗ್ರಾಮದ ಸ್ವಚ್ಛತೆಯ ಆದ್ಯತೆಗೆ ಸಾರ್ವಜನಿಕರು ಕೈಜೋಡಿಸುವುದು ಇನ್ನೂ ಅಗತ್ಯವಾಗಿದೆ ಎಂದರು.

11/12/2024

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ.,

ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಸಾಧನೆ ಮಾಡುವ ಛಲ ಹೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು
ಪ್ರಾಂಶುಪಾಲ ಡಿಎನ್ ಪರಮೇಶ್ ಗೌಡ ಹೇಳಿದರು.
ಮಧುಗಿರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿ ಮಂಜುನಾಥ್ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಸನ್ಮಾನಿಸಿ ಮಾತನಾಡಿ ಫಲಿತಾಂಶ ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಭಿರುಚಿ ಹೊಂದುತ್ತಾ ಸಾಧನೆ ಗೈದ ವಿದ್ಯಾರ್ಥಿಗೆ ಅಭಿನಂದನೆ ಎಂದರು

ಮುಖ್ಯ ಶಿಕ್ಷಕಿ ಪುಷ್ಪಾವತಿ ಮಾತನಾಡಿ ವಿದ್ಯಾರ್ಥಿಯ ಪ್ರತಿಭೆ ಹೀಗೆ ಮುಂದುವರೆದು ರಾಜ್ಯಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೂ ಬೆಳಗಲಿ 10ನೇ ತರಗತಿಯ ಫಲಿತಾಂಶದಲ್ಲೂ ಸಹ ಉತ್ತಮ ಫಲಿತಾಂಶ ತಂದು ಕೊಡುವಂತಾಗಲಿ ಶಾಲೆಗೆ ಕೀರ್ತಿ ತರುವಂತಹ ಕೆಲಸ ಮಾಡಲಿ ಎಂದರು.

ಶಿಕ್ಷಕರಾದ ಮುಬಾರಕ್, ಶಾಂತಕುಮಾರ್, ಹನುಮಂತೇಗೌಡ, ಸರ್ವಮಂಗಳ, ಸೌಮ್ಯ, ವಿಜಿಯಮ್ಮ, ಜ್ಯೋತಿ, ಶಾಜಿಯ ಬಾನು, ಅಂಬುಜ, ಆಯಿಷಾ, ಉಷಾ, ಕಾವ್ಯ ಇದ್ದರು

ಸಂಜಯ್ ಮಲ್ಲೋತ್ರಾ ಅವರನ್ನು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವ ರ್ನರ್ ಆಗಿ ನೇಮಕ ಮಾಡಲಾಗಿದೆ. ಹಾಲಿ ಗವರ್ನರ್ ಅವರ ಅವಧಿ ಡಿಸೆಂಬರ್ 10...
10/12/2024

ಸಂಜಯ್ ಮಲ್ಲೋತ್ರಾ ಅವರನ್ನು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವ ರ್ನರ್ ಆಗಿ ನೇಮಕ ಮಾಡಲಾಗಿದೆ. ಹಾಲಿ ಗವರ್ನರ್ ಅವರ ಅವಧಿ ಡಿಸೆಂಬರ್ 10ರಂದು ಕೊನೆಗೊಳ್ಳಲಿದ್ದು, ಮರುದಿನ ಮಲ್ಲೋತ್ರಾ ಕೇಂದ್ರ ಬ್ಯಾಂಕ್‌ನ 26ನೇ ಗವರ್ನರ್ ಆಗಿ ಸಂಜಯ್ ಅವರು ಸ್ವೀಕರಿಸಲಿದ್ದಾರೆ. ಅವರು 1990ನೇ ಬ್ಯಾಚ್‌ನ ರಾಜಸ್ಥಾನ ಕೇಡ‌ರ್ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಬಸವಣ್ಣನವರ ಅನುಭವ ಮಂಟಪದ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣಗೊಳಿಸಿದ್ದಾರೆ.
10/12/2024

ಬೆಳಗಾವಿ ಸುವರ್ಣಸೌಧದಲ್ಲಿ ಬಸವಣ್ಣನವರ ಅನುಭವ ಮಂಟಪದ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾವರಣಗೊಳಿಸಿದ್ದಾರೆ.

10/12/2024

ಹಸಿದವರಿಗೆ ಅನ್ನ ನೀಡಿ, ಅನ್ನಂ ಪರ ಬ್ರಹ್ಮಂ..!

ಇಂದು ಸಂಜೆ ಸಿರಾ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜೈ ಕರುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಭ ಕಾರ್ಯಕ್ರಮದಲ್ಲಿ ಮಿಕ್ಕಿದ್ದ ಅನ್ನವನ್ನು ಹಾಳು ಮಾಡದೆ ಹಳ್ಳಿಗಳಿಂದ ಆಸ್ಪತ್ರೆಗೆ ಬಂದ ಜನರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

#ಆಯುಕ್ತರು #ತುಮಕೂರು Prabha news SIRA 24 News Public TV Seraphic TV Sira Hallikatte-ಶಿರಾ ಹಳ್ಳಿಕಟ್ಟೆ Kaithal Public TV Sri-Tv Sira SIRA TIMES Baraguru Tv DK Shivakumar Siddaramaiah Dinesh Gundu Rao Krishna Byre Gowda ಪಾವಗಡ Social Media

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ಪಡಿತರ ಕಾರ್ಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅನರ...
09/12/2024

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ಪಡಿತರ ಕಾರ್ಡ್‌ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.

ರಾಜ್ಯದಲ್ಲಿ ಸುಮಾರು ಶೇಕಡ 65 ರಿಂದ 75ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವ ಮಾಹಿತಿ ಇದೆ. ಬಡತನದಲ್ಲಿ ಇರುವ ಜನತೆಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಇನ್ನಷ್ಟು ಸಮಯ ಪಡೆದುಕೊಂಡು ಬಿಪಿಎಲ್ ಪಡಿತರದಾರರಿಗೆ ತೊಂದರೆಯಾಗದ ಹಾಗೆ ಎಪಿಎಲ್ ಕಾರ್ಡ್‌ಗೆ ಅರ್ಹ ಇರುವವರನ್ನು ಬಿಪಿಎಲ್‌ನಿಂದ ಬೇರ್ಪಡಿಸಲಾಗುವುದು.

ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್‌ಗಳಲ್ಲಿ ಶೇಕಡ 20 ರಷ್ಟು ಎಪಿಎಲ್ ಕಾರ್ಡ್‌ದಾರರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದನ್ನು ಅತೀ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ. ಅರ್ಹ ಬಿಪಿಎಲ್ ಕಾರ್ಡ್‌ಗಳು ಯಾವುದೇ ರೀತಿಯಲ್ಲಿ ರದ್ದಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದ್ದರೆ ಅಂಥವರಿಗೆ ಪುನಃ ಕಾರ್ಡ್‌ ದೊರಕಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

09/12/2024

ಸಿರಾ ನಿವೇಶನ ಹಂಚಿಕೆಗೆ ಸ್ಥಳ ಪರಿಶೀಲನೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್.,

ದಿನಾಂಕ 8.12.2024ರಂದು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಿವೇಶನ ಹಂಚಿಕೆ ಮಾಡುವ ವಿಚಾರ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಶೀಘ್ರದಲ್ಲೇ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದರು.

Prabha news SIRA 24 News Public TV Seraphic TV Kaithal Public TV SIRA TIMES Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira Baraguru Tv Siddaramaiah DK Shivakumar

09/12/2024

ಶಿರಾ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಅಧಿಕಾರಿಗಳು
ಶುಭ ಕಲ್ಯಾಣ್ ಭೇಟಿ..

ದಿನಾಂಕ 7.12.2024ರಂದು ಸಿರಾ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಶುಭ ಕಲ್ಯಾಣ್ ಭೇಟಿ ನೀಡಿದ್ದಾರೆ.

08/12/2024

ಜಾನಪದ ಸೋಬಾನೆ ಪದ ಉಳಿಸುವ ಪ್ರಯತ್ನ. ನಿಂಗಮ್ಮ ಮತ್ತು ತಂಡ ಬರಗೂರು,

ನವೆಂಬರ್ 29 ರಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೋಬಾನೆ ಪದ ಹಾಡಿನ ಮೂಲಕ ಜಾಗೃತಿ ಮೂಡಿಸಿದರು,

#ಆಯುಕ್ತರು #ತುಮಕೂರು
Prabha news SIRA 24 News Public TV Seraphic TV Kaithal Public TV Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira SIRA TIMES Baraguru Tv

08/12/2024

ಶ್ರೀ ವೀರವನಿತೆ ಓಬವ್ವ ಜಯಂತ್ಯೋತ್ಸವ.,

ಇಂದು ಬರಗೂರಿನಲ್ಲಿ ಶ್ರೀ ವೀರ ವನಿತೆ ಓಬವ್ವ ಜಯಂತೋತ್ಸವ ಕಾರ್ಯಕ್ರಮವನ್ನು ಛಲವಾದಿ ಅರೆ ವಾದ್ಯ ಕಲಾ ಸಂಘದ ಅಧ್ಯಕ್ಷರು ಚಂಗವಾರ ಕರಿಯಣ್ಣ ಉಪಾಧ್ಯಕ್ಷರು ನಟರಾಜು ಬಡಮಾರನಹಳ್ಳಿ ಕಾರ್ಯದರ್ಶಿಗಳು ಹಾಗೂ ತಿಮ್ಮರಾಜು ಕೃಷ್ಣಪ್ಪ ಪೂಜಾರು ತಿಲಕ ಹನುಮಂತಪ್ಪ ದೊಡ್ಡಬಾಣಗೆರೆ ಈಶ್ವರಪ್ಪ ಕೀರ್ತಿ ಎಂಜಲಗೆರೆ ರಾಜಪ್ಪ ತಿಪ್ಪೇಸ್ವಾಮಿ ಹನುಮೇಗೌಡನಪಾಳ್ಯ ಹಾಗೂ ಸಮುದಾಯದ ಮುಖಂಡರುಗಳು ಬರಗೂರಿನ ಗ್ರಾಮಸ್ಥರು ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

#ಆಯುಕ್ತರು #ತುಮಕೂರು
Prabha news SIRA 24 News Public TV Seraphic TV Kaithal Public TV Sira Hallikatte-ಶಿರಾ ಹಳ್ಳಿಕಟ್ಟೆ Sri-Tv Sira SIRA TIMES Baraguru Tv DK Shivakumar Siddaramaiah

05/12/2024

PTCL ACT. ಬಂದ ಮೇಲೆ ಸೆಕ್ಷನ್ 5, SC ST ಜಮೀನು ಸೈಟ್ ಕೊಳ್ಳಬೇಡಿ..!

Prabha news SIRA 24 News Public TV Seraphic TV Kaithal Public TV Sira Hallikatte-ಶಿರಾ ಹಳ್ಳಿಕಟ್ಟೆ SIRA TIMES Sri-Tv Sira Siddaramaiah DK Shivakumar Baraguru Tv

PTCL ACT. ಬಂದ ಮೇಲೆ ಸೆಕ್ಷನ್ 5, SC ST ಜಮೀನು ಸೈಟ್ ಕೊಳ್ಳಬೇಡಿ..! Prabha news SIRA 24 News Public TV Seraphic TV  Kaithal Publ...
05/12/2024

PTCL ACT. ಬಂದ ಮೇಲೆ ಸೆಕ್ಷನ್ 5, SC ST ಜಮೀನು ಸೈಟ್ ಕೊಳ್ಳಬೇಡಿ..!

Prabha news SIRA 24 News Public TV Seraphic TV Kaithal Public TV Sira Hallikatte-ಶಿರಾ ಹಳ್ಳಿಕಟ್ಟೆ SIRA TIMES Sri-Tv Sira Siddaramaiah DK Shivakumar Baraguru Tv

05/12/2024

ವೈಟ್ ಟ್ಯಾಪಿಂಗ್ ನೆಪದಲ್ಲಿ ರಸ್ತೆ ಕಿತ್ತು ಸಾರ್ವಜನಿಕರ ಹಣ ಜೇಬಿಗೆ ಇಳಿಸುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿರೊ ಲಾಯರ್ ...

Address

Bangalore
Sira
572137

Telephone

+919844525820

Website

Alerts

Be the first to know and let us send you an email when Baraguru Tv posts news and promotions. Your email address will not be used for any other purpose, and you can unsubscribe at any time.

Videos

Share

Nearby media companies


Other News & Media Websites in Sira

Show All