NAIK

NAIK Contact information, map and directions, contact form, opening hours, services, ratings, photos, videos and announcements from NAIK, Media/News Company, Shimoga.

ಹೃದಯಪೂರ್ವಕ  ಧನ್ಯವಾದಗಳು ಮಾಧ್ಯಮ ಮಿತ್ರರಿಗೆ , ಸ್ನೇಹಿತರಿಗೆ ಹಾಗೂ ನನ್ನ ಮಾರ್ಗದರ್ಶಕರಿಗೆhttps://www.facebook.com/100008391189262/p...
16/09/2023

ಹೃದಯಪೂರ್ವಕ ಧನ್ಯವಾದಗಳು ಮಾಧ್ಯಮ ಮಿತ್ರರಿಗೆ , ಸ್ನೇಹಿತರಿಗೆ ಹಾಗೂ ನನ್ನ ಮಾರ್ಗದರ್ಶಕರಿಗೆ

https://www.facebook.com/100008391189262/posts/3645090272447310/?mibextid=Nif5oz

ಜಗದೀಶ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ - https://sanewslive.comwebsite/ಜಗದೀಶ್-ಗೆ-ಏಕತಾ-ಸಮಾಜ-ಸೇವಾಶ್ರೀ-ಪ್ರಶಸ್ತಿ

https://www.upayuktha.com/2023/09/Shivamogga-Ekatha-Samaja-Seva-award-conferred-to-Jagadish-Sheth.html *ಉಪಯುಕ್ತ ನ್ಯೂಸ್*
ಜಗದೀಶ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ

https://www.shivamoggavoice.com/?p=6835

https://shasakakarnataka.com/jagadish-g-shet/
💥 *ಸಾಮಾಜಿಕ ಸೇವಾ ಸಾಧನೆಗಾಗಿ, ಜಗದೀಶ್ ಜಿ ಶೇಠ್ ರವರಿಗೆ 2023 ನೇ ಸಾಲಿನ ರಾಜ್ಯಮಟ್ಟದ “ಏಕತಾ ಸಮಾಜ ಸೇವಾಶ್ರೀ” ಪ್ರಶಸ್ತಿ* 💥
ಹೊಸವಿಚಾರ ದಿನಪತ್ರಿಕೆ
ಹೆಲೋ ಶಿವಮೊಗ್ಗ ದಿನಪತ್ರಿಕೆ

17/03/2023

ಕರ್ನಾಟಕದ 16ನೆಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರ ಪ್ರಭುವಿನ ಚಿತ್ತ ಯಾವ ಪಕ್ಷದ ಕಡೆಗಿದೆಯೋ ನೋಡಬೇಕು. 140ಕೋಟಿ ಜನಸಂಖ್ಯೆಯ ಭಾರತದಲ್ಲಿ ಶೇ.99ರಷ್ಟು ಗ್ರಾಹಕರೇ ಇದ್ದಾರೆ. ಅವರ ಹಕ್ಕುಗಳು ಏನೆಂದು ಕೇವಲ 2% ಜನರಿಗೆ ಮಾತ್ರ ಗೊತ್ತು. ಜಾಗೃತಿ ಮೂಡಿಸಬೇಕಾದ ಸರ್ಕಾರ ಉದ್ದಿಮೆದಾರರನ್ನು ಕಾಪಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಗ್ರಾಹಕರು ನಮ್ಮ ಹಕ್ಕುಗಳನ್ನು ರಕ್ಷಿಸಿ ಪ್ಲೀಸ್... ಕೇಳಿಕೊಳ್ಳುವ ಮಹತ್ವದ ಆಕಾಂಕ್ಷೆ ಇರಬೇಕಾಗಿದೆ. ಸಾಲುಮರದ ತಿಮ್ಮಕ್ಕರವರ ರೀತಿಯಲ್ಲಿ ಅನಾಥ ಮರಗಳಿಗೆ ನೀರನ್ನು ಉಣಿಸಿ, ಜಲಯೋಧೆಯಾಗಿ ರೈತರ ಬಾಳನ್ನು ಬೆಳಗುತ್ತಿರುವ ವೀರಮ್ಮನನ್ನು ದಾವಣಗೆರೆ ಯಲ್ಲಿ ಕಾಣಬಹುದು. ಡಿಕೆಶಿ ಅಂದರೆ ಅಮಿತ್ ಷಾ ಗೆ ಏಕೆ ಖುಷಿ?
ಶಾರದಮ್ಮರವರ ಸೋಲಿಗೆ ಪಕ್ಷೇತರರು ಕಾರಣರು ಹೇಗೆ? ಎಂಬುದನ್ನು ತಿಳಿದು ಕೊಳ್ಳಲು ಸತ್ಯಅನ್ವೇಷಣೆ ಪಾಕ್ಷಿಕ ಪತ್ರಿಕೆಯನ್ನು ಓದಿ. ಗೆಳೆಯ-ಗೆಳತಿಯರಿಗೆ ಶೇರ್ ಮಾಡಿ.

18/02/2023
03/01/2023

ಭಾರತ ವಿಶ್ವಗುರುವಾಗಬೇಕಾದರೆ ವಿಶ್ವಮಾನವತಾ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು. ಕುವೆಂಪುರವರ ಜನ್ಮದಿನವನ್ನು ವಿಶ್ವಮಾನವತಾ ದಿನಾಚರಣೆ ಎಂದು ಆಚರಿಸುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ. ಕುವೆಂಪುರವರ ತತ್ತ್ವ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಎರಡು ವರ್ಷಗಳು ನಮಗೆಲ್ಲ ನೋವುಗಳನ್ನೇ ಕೊಟ್ಟಿವೆ. ಬರುವ ವರ್ಷಗಳು ನಮಗೆ ಸುಖ ನೆಮ್ಮದಿಯನ್ನು ನೀಡಲಿ ಎಂಬ ಆಶಯದೊಂದಿಗೆ 2023ರ ವರ್ಷವನ್ನು ಆಮಂತ್ರಿಸೋಣ. ಭೀಮಾ ಕೊರೆಗಾಂವ್‌ ಯುದ್ಧವು ದೇಶದಲ್ಲಿ ಶೋಷಣೆಗೆ ಒಳಗಾದವರು ರೊಚ್ಚಿಗೆದ್ದರೆ ಸುಖವಾಗಿ ಸಂಪತ್ತನ್ನು ಉಣ್ಣುವವರು ಪಲಾಯನ ಮಾಡಬೇಕಾಗುತ್ತದೆ ಎಂಬ ನಿದರ್ಶನವನ್ನು ನಮ್ಮ ಮುಂದೆ ಇಟ್ಟಿದೆ. ಇಂತಹ ಮುಂತಾದ ವಿಭಿನ್ನ, ವಿಶಿಷ್ಟ ಲೇಖನಗಳಿಗಾಗಿ ಜನವರಿ 1, 2023ರ ಸತ್ಯ ಅನ್ವೇಷಣೆ ಪಾಕ್ಷಿಕ ಪತ್ರಿಕೆಯನ್ನು ಓದಿರಿ. ಜೊತೆಗೆ ಜ್ಞಾನವನ್ನು ಹಂಚಿಕೊಳ್ಳಿ ಎಂದು ಹೇಳುತ್ತಾ ಪತ್ರಿಕಾ ಬಳಗವು ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಬಯಸುತ್ತದೆ.

https://m.facebook.com/story.php?story_fbid=122879880669109&id=100088412934485&sfnsn=wiwspmo&mibextid=RUbZ1f

01/11/2022

ಕನ್ನಡ ನನ್ನ ಕನಸು,
ಕನ್ನಡ ನನ್ನ ಮನಸ್ಸು,
ಕನ್ನಡಿಗನೆಂಬ ಹೆಮ್ಮೆ ಸೊಗಸು, ನಮ್ಮಲ್ಲಿ ಕನ್ನಡವನ್ನು ಉಳಿಸು, ಎಲ್ಲೆಲ್ಲೂ ಕನ್ನಡವನ್ನು ಬೆಳೆಸು,

ಆತ್ಮೀಯರೇ ನಮಸ್ಕಾರ...
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸತ್ಯ ಅನ್ವೇಷಣೆ ಪತ್ರಿಕೆಯು ವಿಶೇಷ ಸಂಚಿಕೆ ಒಂದನ್ನು ಹೊತ್ತು ಕನ್ನಡದ ಸ್ವಾದವನ್ನು ಉಣಬಡಿಸಲು ವಿಶೇಷ ಲೇಖನಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಮ್ಮ ಈ ಪತ್ರಿಕೆಯು ಓದುಗರಿಗೆ ನಿಮ್ಮ ಸ್ಥಳೀಯ ಪತ್ರಿಕಾ ವಿತರಕರಲ್ಲಿ ದೂರೆಯಲಿದೆ ಹಾಗೂ ಬಸ್ ಸ್ಟ್ಯಾಂಡ್ ಅಂಗಡಿಗಳಲ್ಲಿ ಲಭ್ಯವಿರಲಿದೆ. ಪತ್ರಿಕೆಯನ್ನು ಕೊಂಡು ಓದುವುದರ ಮೂಲಕ ಪತ್ರಿಕೆಯನ್ನು ಪ್ರೊತ್ಸಾಹಿಸಿ.

ಧನ್ಯವಾದಗಳೂಂದಿಗೆ...

ವೆಂಕಟೇಶ್ ನಾಯ್ಕ ಡಿ
ಪ್ರಧಾನ ಸಂಪಾದಕರು
ಸತ್ಯ ಅನ್ವೇಷಣೆ ಕನ್ನಡ ಪಾಕ್ಷಿಕ ಪತ್ರಿಕೆ
ಜಿಲ್ಲಾಧ್ಯಕ್ಷರು
ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

"ದೀಪಾವಳಿಯ ಮುಂಗಡ ಶುಭಕಾಮನೆಗಳೊಂದಿಗೆ ನನ್ನ ಅತ್ಯಂತ ಇಷ್ಟದ ಕವಿತೆ ಒಪ್ಪಿಸಿಕೊಳ್ಳಿ. ಓದಿದಷ್ಟು ಸಲವೂ ಈ ಕವಿತೆ ದೀಪ್ತಿಯಾಗುತ್ತದೆ, ಮನಕೆ ಮತ್ತ...
24/10/2022

"ದೀಪಾವಳಿಯ ಮುಂಗಡ ಶುಭಕಾಮನೆಗಳೊಂದಿಗೆ ನನ್ನ ಅತ್ಯಂತ ಇಷ್ಟದ ಕವಿತೆ ಒಪ್ಪಿಸಿಕೊಳ್ಳಿ. ಓದಿದಷ್ಟು ಸಲವೂ ಈ ಕವಿತೆ ದೀಪ್ತಿಯಾಗುತ್ತದೆ, ಮನಕೆ ಮತ್ತಷ್ಟು ಬರೆಯಲು ಸ್ಫೂರ್ತಿಯಾಗುತ್ತದೆ. ಇದು ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ನಿಮ್ಮಂತಹ ಸಹೃದಯರ ಅಂತಃಕರಣ, ಅನುಭಾವಗಳ ಭಾಷ್ಯವೇ ಈ ಕವಿತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ದೀಪ ಮತ್ತು ನಾನು..!

ದೀಪ ಹಚ್ಚುತ್ತೇನೆ ನಾನು..
ನನಗೆ ಲೋಕ ಕಾಣಬೇಕೆಂದಲ್ಲ
ಲೋಕಕ್ಕೆ ನಾನು ಕಾಣಬೇಕೆಂದು.!

ಕತ್ತಲೆಯಲಿ ಮುಖ ಮುಚ್ಚಿ
ಬಚ್ಚಿಟ್ಟುಕೊಳ್ಳುವವರೇ ಹೆಚ್ಚು
ನನಗೋ ದೀಪಹಚ್ಚಿ ನಗೆಬಿಚ್ಚಿ
ನಿಂತುಕೊಳ್ಳಬೇಕೆನ್ನುವ ಕಿಚ್ಚು.!

ದೀಪಹಚ್ಚಿ ಜಗ ಬೆಳಗಬೇಕೆನ್ನುವ
ಹುಚ್ಚು ಭ್ರಾಂತಿಗಳಿಲ್ಲ ನನ್ನಲ್ಲಿ.!
ಯುಗಯುಗದಿಂದಲೂ ಯಾರದೇ
ಹಂಗು ಹಕೀಕತ್ತು ನೆರವುಗಳಿಲ್ಲದೆ
ಬೆಳಕಾಗಬಲ್ಲ ಛಾತಿಯಿದೆ ಜಗಕಿಲ್ಲಿ.!

ಆದರೂ ದೀಪ ಹಚ್ಚುತ್ತೇನೆ ನಾನು..
ದೀಪ ಹಿಡಿದು ಬೀಗುತ್ತಾ ನಿಂತು
ಜಗವನ್ನು ನೋಡಲೇಬೇಕೆಂದಲ್ಲ
ದೀಪ ಹಿಡಿದು ಕನ್ನಡಿಯೆದುರು ಬಾಗಿ
ನಿಂತು ನನ್ನ ನಾನೆ ನೋಡಿಕೊಳ್ಳಲಿಕ್ಕೆ.!

ಕಾರಿರುರಳಲ್ಲೂ ದೀಪ ಹಚ್ಚುತ್ತೇನೆ
ಸೂರ್ಯನನ್ನೇ ಮರೆಸಬೇಕೆಂದಲ್ಲ.!
ನಾಳಿನ ಸೂರ್ಯನ ಕಾಣುವ ಆಸೆ
ಭರವಸೆಗಳ ಜೀವಂತ ಇರಿಸಲಿಕ್ಕೆ
ಕತ್ತಲಿನಲ್ಲೂ ಬೆಳಕನ್ನು ಸ್ಮರಿಸಲಿಕ್ಕೆ.!

ದೀಪ ಹಚ್ಚುತ್ತಲೇ ಇರುತ್ತೇನೆ
ಕತ್ತಲ ಗೆಲ್ಲಬೇಕೆಂಬ ಭ್ರಮೆಯಿಂದಲ್ಲ
ಬದುಕಿನ ಮೇಲಿನ ಒಲವಿನಿಂದ
ಬೆಳಕಿನ ಮೇಲಿನ ಸೆಳವಿನಿಂದ
ಬೆಳಕೇ ದೈವವೆಂಬ ನಿಲುವಿನಿಂದ.!

ದೀಪ ಹಚ್ಚುತ್ತಲೇ ಇರುತ್ತೇನೆ ನಾನು
ಸುತ್ತಲಿನ ಕತ್ತಲೆಯನ್ನು ಓಡಿಸಲಿಕ್ಕೆ
ಮನಸ್ಸಿನ ಅಂಧಕಾರ ತೊಳೆಯಲಿಕ್ಕೆ
ತಮಸ್ಸಿನ ವಿಕಾರಗಳ ಕಳೆಯಲಿಕ್ಕೆ.!
ಚಿತ್ತ ಚೇತನಗಳ ಚೈತನ್ಯಗೊಳಿಸಲಿಕ್ಕೆ.!

ಎ.ಎನ್.ರಮೇಶ್.ಗುಬ್ಬಿ.

24/10/2022

ಮೂಡಲಿ ಖುಷಿಯ ಚಿತ್ತಾರ...
ದೂರವಾಗಲಿ ಬದುಕಿನ ಅಂದಕಾರ....
ತುಂಬಲಿ ಮನೆಮನೆಗಳಲ್ಲಿ ಸಡಗರ...

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು....
ಸತ್ಯ ಅನ್ವೇಷಣೆ ಬಳಗ
ವೆಂಕಟೇಶ್ ನಾಯ್ಕ.ಡಿ
ಪ್ರಧಾನ ಸಂಪಾದಕರು
ನ್ಯೂಸ್ ಪೇಪರ್
ಅಸೋಸಿಯೇಷನ್ ಆಫ್ ಇಂಡಿಯಾ
ಶಿವಮೊಗ್ಗ ಜಿಲ್ಲಾಧ್ಯಕ್ಷರು

ಸತ್ಯ ಅನ್ವೇಷಣೆ ಪತ್ರಿಕೆಯ ಈ ಸಂಚಿಕೆಯಲ್ಲಿ ಕೆಲವೊಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳೊಂದಿಗೆ. ಸಂಪಾದಕೀಯ....✍️✍️✍️✍️ವಾಸ್ತವತೆಗೆ ಕನ್ನಡಿ ಹಿಡಿ...
21/10/2022

ಸತ್ಯ ಅನ್ವೇಷಣೆ ಪತ್ರಿಕೆಯ ಈ ಸಂಚಿಕೆಯಲ್ಲಿ ಕೆಲವೊಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳೊಂದಿಗೆ. ಸಂಪಾದಕೀಯ....✍️✍️✍️✍️
ವಾಸ್ತವತೆಗೆ ಕನ್ನಡಿ ಹಿಡಿಯಬೇಕಾದ ಅನಿವಾರ್ಯತೆಯಲ್ಲಿ..... ತೀರ್ಥಳ್ಳಿಯ ಅಕ್ರಮ ತೀರ್ಥದ ಕಥೆಯು ಮತ್ತು ಗೃಹ ಸಚಿವರು..? ಐವತ್ತುರ ಹರೆಯದಲಿ....! ದಣಿವರಿಯದೇ ಅಧಿಕಾರಿಯಾದ ಛಲವಿಕ್ರಮ.....,
ಗೋವುಗಳ ದತ್ತು ಪುರಾಣವೋ ಗೋ ಹತ್ಯೆ ನಿಷೇಧ ಕಾಯ್ದೆಯ ವೈಫಲ್ಯವೂ......
ಪ್ಲಾಟ್ ಫಾರಂ ಕಥೆಗಳು 13....... ಜಾತಿ ವ್ಯವಸ್ಥೆಯ ಕಬಂಧ ಬಾಹುಗಳು ಮತ್ತು ದಲಿತ ಮಹಿಳೆಯ ಸಾಧನೆ.......

ಮೂಡಲಿ ಖುಷಿಯ ಚಿತ್ತಾರ...
ದೂರವಾಗಲಿ ಬದುಕಿನ ಅಂದಕಾರ....
ತುಂಬಲಿ ಮನೆಮನೆಗಳಲ್ಲಿ ಸಡಗರ...

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ ಕೋರುವವರು....
ಸತ್ಯ ಅನ್ವೇಷಣೆ ಬಳಗ
ವೆಂಕಟೇಶ್ ನಾಯ್ಕ.ಡಿ
ಪ್ರಧಾನ ಸಂಪಾದಕರು
ನ್ಯೂಸ್ ಪೇಪರ್
ಅಸೋಸಿಯೇಷನ್ ಆಫ್ ಇಂಡಿಯಾ
ಶಿವಮೊಗ್ಗ ಜಿಲ್ಲಾಧ್ಯಕ್ಷರು

ಲಕ್ಷಾಂತರ ರೂಪಾಯಿಗಳ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ,ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ರೂಪಾಯಿಗಳು ಬಾಡಿಗೆ ಬಾಕಿ ಉಳಿಸಿಕೊಂಡಿರುವ ಪತ್ರಕರ್...
20/10/2022

ಲಕ್ಷಾಂತರ ರೂಪಾಯಿಗಳ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ,ಪಟ್ಟಣ ಪಂಚಾಯಿತಿಗೆ ಲಕ್ಷಾಂತರ ರೂಪಾಯಿಗಳು ಬಾಡಿಗೆ ಬಾಕಿ ಉಳಿಸಿಕೊಂಡಿರುವ ಪತ್ರಕರ್ತರ ಸಂಘಕ್ಕೆ ಮತ್ತೊಂದು ಕಟ್ಟಡ ..ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಂದಾಗಿರುವ ಸಾರ್ವಜನಿಕರು ಮತ್ತು ತೆರಿಗೆದಾರರು ..

ತೀರ್ಥಹಳ್ಳಿ :--ಪಟ್ಟಣ ಪಂಚಾಯಿತಿಯು ಕೇಂದ್ರ ಸರ್ಕಾರ ,ರಾಜ್ಯ ಸರ್ಕಾರದ ಅನೇಕ ಅನುದಾನಗಳು ಮತ್ತು ಸಾರ್ವಜನಿಕ ತೆರಿಗೆ ಹಣದಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿಕೊಂಡಿರುವ ಉದಾಹರಣೆಗಳು ಅನೇಕ ಇವೆ .ಅದರಲ್ಲಿ ಮತ್ತೊಂದು ವಿಷಯದಲ್ಲಿ ಪಟ್ಟಣ ಪಂಚಾಯಿತಿಯು ಕಾನೂನು ಉಲ್ಲಂಘನೆ ಮಾಡಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡಿ ಕಾರ್ಪೋರೇಶನ್ ಬ್ಯಾಂಕ್ (ಈಗಿನ ಯೂನಿಯನ್ ಬ್ಯಾಂಕ್ )ಪಕ್ಕದ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಮೇಲ್ಭಾಗದಲ್ಲಿ ವಿಶಾಲವಾದ ಮೊದಲನೇ ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ .ಈ ಹಿಂದೆ ಇದನ್ನು ಅಭಿವೃದ್ಧಿಪಡಿಸಿ ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಬೀದಿ ಬದಿ ಸಣ್ಣಪುಟ್ಟ ಮಾರಾಟಗಾರರಿಗೆ .ಅಥವಾ ವ್ಯಾಯಾಮ ಶಾಲೆಗೆ ನೀಡಲು ಪಟ್ಟಣ ಪಂಚಾಯಿತಿ ಆಡಳಿತ ಯೋಚನೆಯನ್ನೂ ಮಾಡಿತ್ತು .ಆದರೆ ಈಗ ಪತ್ರಕರ್ತರ ಸಂಘಕ್ಕೆ ಇದನ್ನು ನೀಡಲು ಮುಂದಾಗಿದೆ.ತೀರ್ಥಹಳ್ಳಿ ಪತ್ರಕರ್ತರ ಸಂಘವು ಸೊಪ್ಪುಗುಡ್ಡೆ ಎಲ್ಲೈಸಿ ಕಚೇರಿ ಎದುರಿರುವ ಪಟ್ಟಣ ಪಂಚಾಯ್ತಿಯ ಎಂಟನೇ ಮಳಿಗೆಯಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ .ಪಟ್ಟಣ ಪಂಚಾಯಿತಿಗೆ ಈಗಾಗಲೇ ಸುಮಾರು 3ವರ್ಷಗಳ ಹಿಂದೆ 2. 48ಲಕ್ಷ ರೂ ರೂಪಾಯಿಗಳ ಬಾಡಿಗೆ ಬಾಕಿ ಉಳಿಸಿಕೊಂಡಿದೆ ಎಂದು ನೋಟಿಸ್ ಜಾರಿ ಮಾಡಿದೆ .ಇದನ್ನು ವಸೂಲಿ ಮಾಡದೆ ಇರುವ ಕಾರಣ ಹಾಗೂ ಈ ದಿನದವರೆಗೂ ಸದರಿ ಮಳಿಗೆಯಲ್ಲಿ ಪತ್ರಕರ್ತರ ಸಂಘವು ಸಭೆ ಸಮಾರಂಭಗಳನ್ನು ಮಾಡುತ್ತಿದ್ದು ಖಾಸಗಿ ವ್ಯಕ್ತಿಗಳಿಂದ ಸಭೆ ಮಾಡಲು 500ರೂಪಾಯಿಗಳ ಬಾಡಿಗೆ ವಸೂಲಿ ಮಾಡುತ್ತಿದ್ದಾರಂತೆ .ಆದರೆ ಪಟ್ಟಣ ಪಂಚಾಯಿತಿಗೆ ಯಾವುದೇ ಬಾಡಿಗೆ ಬಾಕಿ ಕಟ್ಟುತ್ತಿಲ್ಲ ಎಂದು ಮುಖ್ಯಾಧಿಕಾರಿಗಳೇ ತಿಳಿಸಿದ್ದಾರೆ .ಈಗ ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಪುರಸಭೆ ನಿರ್ದೇಶಕರಿಗೆ ದೂರನ್ನು ದಾಖಲು ಮಾಡಿದ್ದು ,ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸದರಿ ಪತ್ರಕರ್ತರ ಸಂಘದಿಂದ ಹಿಂದಿನ ಲಕ್ಷಾಂತರ ರೂಪಾಯಿಗಳನ್ನು ವಸೂಲಿಯನ್ನು ಮಾಡುವ ಬದಲು ಅಜಾದ್ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವ ಜನಿಕರ ತೆರಿಗೆ ಹಣವನ್ನು ವೆಚ್ಚಮಾಡಿ ಪುನಃ ಅವರಿಗೆ ಮತ್ತೊಂದು ಕಟ್ಟಡವನ್ನು ಕೊಡಲು ಮುಂದಾಗಿರುತ್ತಾರೆ .ತೀರ್ಥಹಳ್ಳಿ ಬೀದಿಬದಿ ವ್ಯಾಪಾರಿಗಳಿಗೆ, ನೆಲಬಾಡಿಗೆ ವ್ಯಾಪಾರಿಗಳಿಗೆ ಅಧಿಕ ಬಾಡಿಗೆಯನ್ನು ವಿದಿಸಿ ಹಾಗೂ ಕಾಂಪ್ಲೆಕ್ಸಿನಲ್ಲಿ ಇರುವ ಹತ್ತಾರು ಮಳಿಗೆ ಬಾಡಿಗೆದಾರರಿಗೆ ತಿಂಗಳಿಗೆ ಸಾವಿರಾರು ಬಾಡಿಗೆಯನ್ನು ವಿಧಿಸಿವಸೂಲಿ ಮಾಡುವ ಅಧಿಕಾರಿ ವರ್ಗ, ಚಿಕ್ಕಪುಟ್ಟ ಬಾಡಿಗೆದಾರರು ಒಂದೆರಡು ತಿಂಗಳು ಬಾಡಿಗೆ ಹಣ ಕಟ್ಟುವುದು ತಡವಾದರೆ ವಸೂಲಿಗೆ ಇನ್ನಿಲ್ಲದ ಕಿರಿಕಿರಿ ಮಾಡುವ ಈ ಅಧಿಕಾರಿಗಳು ಲಕ್ಷಾಂತರರುಪಾಯಿಗಳು ಬಾಡಿಗೆ ಬಾಕಿ ಇರುವ ಪತ್ರಕರ್ತರ ಸಂಘ ಬಾಕಿಯನ್ನು ವಸೂಲಿ ಮಾಡದೆ ಮತ್ತೊಂದು ಮಳಿಗೆಯನ್ನು ನೀಡಿರುವುದು ಪಟ್ಟಣ ಪಂಚಾಯಿತಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ .ಹಳೆ ಬಾಕಿ ವಿಚಾರ ಮತ್ತು ಕಾನೂನು ಉಲ್ಲಂಘಿಸಿ ಹೊಸದಾಗಿ ನೀಡಿರುವ ಕಟ್ಟಡದ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲು ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದು ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯರಾದ ಸಂದೇಶ್ ಜವಳಿ ಸೊಪ್ಪುಗುಡ್ಡೆ ,ರಾಘವೇಂದ್ರ ,ರಹಮತ್ ಉಲ್ಲಾ ಅಸಾದಿ ಮುಂತಾದವರು ಸಣ್ಣಪುಟ್ಟ ಗೂಡಂಗಡಿಗಳೂ ವ್ಯಾಪಾರಿಗಳ ಅಧಿಕ ಬಾಡಿಗೆ ಕಟ್ಟುವ ಬಾಡಿಗೆದಾರರ .ಬಸ್ಟಾಂಡ್ ಹೊಟೇಲ್ ಮೀನು ಮಾರ್ಕೆಟ್ ಮಾಂಸದ ಅಂಗಡಿ ಮುಂತಾದವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರುಗಳ ಬಾಕಿ ಬಾಡಿಗೆಯನ್ನು ಮನ್ನಾ ಮಾಡಿಸಲಿ ಎಂದರು ಒತ್ತಾಯವಾಗಿದೆ .ಕಾನೂನಿನ ತೊಡಕಿನ ವಿಚಾರವಾಗಿರುವ ಈ ವಿಚಾರವು ಜಿಲ್ಲಾಧಿಕಾರಿಗಳು ಮತ್ತು ನ್ಯಾಯಾಲಯ ಮುಂದೆ ಯಾವ ತೀರ್ಪು ನೀಡಲಿದೆ ಎಂದು ಕಾದು ನೋಡುವ .

ಲೇಖನ. ಲಿಯೋ ಅರೋಜ.

ಆತ್ಮೀಯರೇ.....ಸತ್ಯ ಅನ್ವೇಷಣೆ ಒಂದಷ್ಟು ವಿಭಿನ್ನ ಸುದ್ದಿಗಳನ್ನು ಹೊತ್ತು ಓದುಗರ ಮನಸ್ಸನ್ನು ಸೆಳೆಯುವಲ್ಲಿ ವಿಶೇಷ ಬರಹಗಾರರ ಸಂಶೋಧಕರ ಸುದ್ದಿಗ...
14/10/2022

ಆತ್ಮೀಯರೇ.....

ಸತ್ಯ ಅನ್ವೇಷಣೆ ಒಂದಷ್ಟು ವಿಭಿನ್ನ ಸುದ್ದಿಗಳನ್ನು ಹೊತ್ತು ಓದುಗರ ಮನಸ್ಸನ್ನು ಸೆಳೆಯುವಲ್ಲಿ ವಿಶೇಷ ಬರಹಗಾರರ ಸಂಶೋಧಕರ ಸುದ್ದಿಗಳನ್ನು ಹೊತ್ತು ಇದೀಗ ನಿಮ್ಮ ಮುಂದೆ .....
ತೀರ್ಥಹಳ್ಳಿಯ ಅಕ್ರಮ ತೀರ್ಥದ ಕಥೆಯೂ ಮತ್ತು ಗೃಹ ಸಚಿವರು......
ಉಳ್ಳವರ ಚಾಳಿಗೆ ಊರೇ ಒಂದುಗೂಡಿತು.... ಸಿದ್ದು ಸಿದ್ದಾರ್ಥ
ನೋವಂಜಿಕೆ.....- ಯೋ ಮಾ
ಭಾರತವನ್ನು ಜೋಡಿಸಬಲ್ಲದೆ ಭಾರತ್ ಜೋಡ ಯಾತ್ರೆ..... ಸಂಪಾದಕೀಯ
ಕವನ ಏನ್ ರಮೇಶ್ ಗುಬ್ಬಿ ಕೈಗಾ... ಪರಿವರ್ತನಾತೀತರು..!
ಸಿನಿಮಾ ವಿಮರ್ಶೆ ಗರುಡ ಪುರಾಣ.....

08/10/2022

05/10/2022
05/10/2022
05/10/2022
05/10/2022

Address

Shimoga
577201

Alerts

Be the first to know and let us send you an email when NAIK posts news and promotions. Your email address will not be used for any other purpose, and you can unsubscribe at any time.

Contact The Business

Send a message to NAIK:

Videos

Share

Nearby media companies


Other Media/News Companies in Shimoga

Show All