KODAGUVAARTHE "ಕೊಡಗು ವಾರ್ತೆ"

KODAGUVAARTHE "ಕೊಡಗು ವಾರ್ತೆ" KODAGU VAARTHE "ಕೊಡಗು ವಾರ್ತೆ"
Praveen uthappa "ಇದು ಸತ್ಯಕ್ಕೆ ಹಿಡಿದ ಕನ್ನಡಿ..."
●9880967573

Chammatira praveen uthappa
Editir: KODAGU VAARTHE Kannada Weekly
©9880967573

◆ ನನ್ನ ಬಗ್ಗೆ ಒಂದಿಷ್ಟು◆

●ವಿಜಯಕರ್ನಾಟಕ, ಮೈಸೂರು ಮಿತ್ರ ಹಾಗೂ ಹೊಸ ದಿಗಂತ ಪತ್ರಿಕೆಯ "ವರದಿಗಾರನಾಗಿ" ಕಾರ್ಯ ನಿರ್ವಹಿಸಿದ ಅನುಭವ.
◆ಗೋಣಿಕೊಪ್ಪಲು ಪ್ರೆಸ್ಸ್ ಕ್ಲಬ್ "ಅಧ್ಯಕ್ಷನಾಗಿ"
●ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ "ಪ್ರಧಾನ ಕಾರ್ಯದರ್ಶಿಯಾಗಿ"
◆ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ "ಅಧ್ಯಕ್ಷನಾಗಿ"
● "ಪೊಣ್ಣ್'ರ ಮನಸ್ಸ್" ಮತ್ತು ''ಜಡಿ ಮಳೆ'' ಕೊಡವ ಚಲನ ಚಿತ್ರದ ನಟ ಮತ್ತು

ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದು,
◆ ''ಪೊಣ್ಣ್'ರ ಮನಸ್ಸ್'' ಕೊಡವ ಚಲನ ಚಿತ್ರದಲ್ಲಿ ಎರಡು ಹಾಡುಗಳಿಗೆ "ಸಾಹಿತ್ಯ" ರಚಿಸಿ ಚಲನಚಿತ್ರಕ್ಕೆ ಸಹ ನಿರ್ದೇಶನ ಮಾಡಿರುತ್ತೇನೆ.
● "ಪೊಣ್ಣ್'ರ ಮನಸ್ಸ್'' ಚಲನಚಿತ್ರಕ್ಕೆ "ರಾಜ್ಯ ಪ್ರಶಸ್ತಿ" ಕೂಡ ಬಂದಿರುತ್ತದೆ.
◆ "ಜಡಿಮಳೆ" ಕೊಡವ ಚಲನಚಿತ್ರದಲ್ಲಿ "ಸಹ ನಿರ್ದೇಶಕ" ನಾಗಿ ಕಾರ್ಯ ನಿರ್ವಹಿಸಿದ್ದು, ನಟನೆಯನ್ನು ಮಾಡಿರುತ್ತೇನೆ.
●ಈ ಎರಡು ಚಲನ ಚಿತ್ರದಲ್ಲಿ ವಿವಿದ ಕಲಾವಿದರ ಪಾತ್ರಗಳಿಗೆ ಕಂಠದಾನ ಮಾಡುವ ಮೂಲಕ ಕಂಠದಾನ ಕಲಾವಿದನಾಗಿ ಕೂಡ ಕಾರ್ಯ ನಿರ್ವಹಿಸಿರುತ್ತೇನೆ.
◆ "ಉಸಾರ್" ಕೊಡವ ಸಿನಿಮಾದಲ್ಲಿ ಪೋಷಕ ನಟನ ಪಾತ್ರ.
●"ಭೀರ್ಯ" ಕೊಡವ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ನಟನೆ.
◆"ಭೀರ್ಯ" ಕೊಡವ ಸಿನೆಮಾದ ಪ್ರಮುಖ ಹಾಡಿಗೆ ಸಾಹಿತ್ಯ ರಚನೆ.
●ಡ್ರೀಮ್ 11 ಕೊಡವ ಸಿನೆಮಾದ ಒಂದು ಹಾಡಿಗೆ ಸಾಹಿತ್ಯ ರಚನೆ.
●ಹಲವಾರು "ಕೊಡವ ನಾಟಕ" ಗಳಲ್ಲಿ ಅಭಿನಯಿಸಿದ್ದು,
◆ಸ್ನೇಹಿತರ ಸಹಾಯದಿಂದ ಪೊನ್ನಂಪೇಟೆಯಲ್ಲಿ "ಯಂಗಾ ಕಲಾರಂಗ" ಎಂಬ ನಾಟಕ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಇದರ "ಸ್ಥಾಪಕ ಕಾರ್ಯದರ್ಶಿ" ಯಾಗಿರುತ್ತೇನೆ.
● ತೆರೆ ಮರೆಗೆ ಸರಿಯುತ್ತಿರುವ ರಂಗಭೂಮಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಟಕ ಶಿಭಿರಗಳನ್ನು ಕೂಡ ನಡೆಸಿ ಕಿರಿಯರಿಗೆ ತರಬೇತಿಯನ್ನು ನೀಡಲಾಗಿದೆ.
◆ಗೋಣಿಕೊಪ್ಪಲು ದಸರದಲ್ಲಿ ಮೊದಲ ಬಾರಿಗೆ "ಕವಿಗೋಷ್ಟಿ" ಯನ್ನು ಆಯೋಜನೆ ಮಾಡಲು ಶ್ರಮ ವಹಿಸಿದ್ದು.
●ಗೋಣಿಕೊಪ್ಪಲು ದಸರ ಕವಿಗೋಷ್ಟಿ "ಕಾರ್ಯದರ್ಶಿ" ಯಾಗಿ,
◆ಗೋಣಿಕೊಪ್ಪಲು ದಸರ ಕವಿಗೋಷ್ಟಿ "ಅಧ್ಯಕ್ಷನಾಗಿ"
●ಕೊಡಗು ಜಿಲ್ಲಾ ಚುಟುಕ ಸಾಹಿತ್ಯ ಪರಿಷತ್ "ಪ್ರಧಾನ ಕಾರ್ಯದರ್ಶಿಯಾಗಿ"
◆ವಿರಾಜಪೇಟೆಯ ಅರಮೇರಿಯಲ್ಲಿ ಸಾ.ಶಿ ಮರುಳಯ್ಯ ಅಧ್ಯಕ್ಷತೆಯಲ್ಲಿ "ರಾಜ್ಯ ಸಮ್ಮೇಳನ" ವನ್ನು ನಡೆಸಿದ ಅನುಭವ.
●ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತ್ "ಪ್ರಧಾನ ಕಾರ್ಯದರ್ಶಿ" ಯಾಗಿ ಎರಡು ಯಶಸ್ವಿ ಜಿಲ್ಲಾ ಸಮ್ಮೇಳನ ನಡೆಸಿದ ಅನುಭವ.
◆ಹಲವಾರು ಕಾರ್ಯ ಕ್ರಮಗಳಲ್ಲಿ ಪ್ರಬಂಧ ಮಂಡನೆ ಹಾಗೂ ವಿಷಯ ಮಂಡನೆಗಳನ್ನು ಮಾಡಿದ್ದು,
● "ಕರ್ನಾಟಕ ಕೊಡವ ಸಾಹಿತ್ಯ ಆಕಾಡೆಮಿ"ಯಿಂದ ಜಿಲ್ಲೆಯ ಹುದಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಮೇಳದಲ್ಲಿ "ಕೊಡವ ಭಾಷೆಯ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ"ಎಂಬ ವಿಷಯವಾಗಿ ಮಂಡಿಸಿದ "ವಿಚಾರ ಗೋಷ್ಟಿ" ಜನಮನ್ನಣೆ ಪಡೆಯಿತು.
◆ಮೂಲತಃ ಕವಿಯಾದ ನಾನು ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತೇನೆ.
●ಕೊಡವ ಪದ್ದತಿ, ಸಂಸ್ಕೃತಿ ವಿಷಯವಾಗಿ ಕೂಡ ಗಣನೀಯ ಸೇವೆ ಮಾಡಿದ್ದು, ಇತಿಹಾಸ ಪ್ರಸಿದ್ದದ ಕೋಲ್ ಮಂದ್'ಗಳಲ್ಲಿ ಭಾಗವಹಿಸಿದ್ದು ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್ ನಲ್ಲಿ ಊರು ತಕ್ಕನಾಗಿ ಸೇವೆ ಸಲ್ಲಿಸಿರುತ್ತೇನೆ ಮಾತ್ರವಲ್ಲ ವಿವಿದ ಸಾಂಪ್ರದಾಯಿಕ ಆಟ್-ಪಾಟ್ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತೇನೆ.
◆ ಅಖಿಲ ಕೊಡವ ಸಮಾಜದ "ಯೂತ್ ವಿಂಗ್"ಸ್ಥಾಪಕ ಅಧ್ಯಕ್ಷ.
●ಕೊಡಗು ಸಂರಕ್ಷಣಾ ಒಕ್ಕೂಟ ಸ್ಥಾಪಕ ಸಂಚಾಲಕ.
●●●●●●●●●●●●●●●●●●●●●●●●●●●●●●●●●●
●"ಪತ್ರಿಕೋದ್ಯಮದಲ್ಲಿ ಸೇವೆ ಹಾಗೂ ಪ್ರಶಸ್ತಿ"●

◆ಕಳೆದ 25 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ನನ್ನನ್ನು ಗುರುತ್ತಿಸಿಕೊಂಡಿದ್ದು,
●ನಾನೊಬ್ಬ ಕೊಡವನಾಗಿ ಕಳೆದ 11ವರ್ಷದಿಂದ ನನ್ನ ಮಾಲಿಕತ್ವದಲ್ಲಿ
"ಕೊಡಗು ವಾರ್ತೆ" ಎಂಬ ಕನ್ನಡ ವಾರಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ.
◆ಪ್ರಸ್ತುತ ''ಕೊಡಗು ವಾರ್ತೆ'' ಕನ್ನಡ ವಾರ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕನಾಗಿದ್ದೇನೆ.
●ಕೊಡಗಿನ ಕನ್ನಡ ವಾರ ಪತ್ರಿಕೆಗಳ ಸಾಲಿನಲ್ಲಿ ಮಾತ್ರವಲ್ಲ ಕರ್ನಾಟಕದ ವಾರ ಪತ್ರಿಕಾ ಕ್ಷೇತ್ರದಲ್ಲಿ ಏಕೈಕ ಕೊಡವ ಪತ್ರಿಕೊದ್ಯಮಿಯಾಗಿರುತ್ತೇನೆ.
◆ಕೊಡಗಿನ ಪತ್ರಿಕೋದ್ಯಮದಲ್ಲಿ ''ಕೊಡಗು ವಾರ್ತೆ'' ಹೊಸ ದಾಖಲೆಯನ್ನು ಬರೆದಿದ್ದು,
●ಜಿಲ್ಲಾ ಮಟ್ಟದಲ್ಲಿ ''ಕೊಡಗು ವಾರ್ತೆ'' ತನಿಖಾ ವರದಿಯಲ್ಲಿ ನಿರಂತ್ತರ
ಮೂರು ವರ್ಷ ಪ್ರಶಸ್ತಿ ಪಡೆಯುವ ಮೂಲಕ "ಹ್ಯಾಟ್ರಿಕ್" ಸಾಧನೆ ಮಾಡಿದ ಜಿಲ್ಲೆಯ ಮೊದಲ ಪತ್ರಕರ್ತ ಎಂಬ ಹೆಮ್ಮೆ.

◆ಜೊತೆಗೆ 2014-2015ನೇ ಸಾಲಿನಲ್ಲಿ ಹಾಸನದಲ್ಲಿ ◆ರಾಜ್ಯ ಪ್ರಶಸ್ತಿ◆ ಯನ್ನು ಕೂಡ ಪಡೆದುಕೊಂಡಿದ್ದೇನೆ.
●ರಾಜ್ಯ ಪ್ರಶಸ್ತಿಯನ್ನು ಪಡೆದು ಕೊಂಡ ಕೊಡಗಿನ ಏಕೈಕ ವಾರಪತ್ರಿಕೆ ಕೊಡಗು ವಾರ್ತೆ ಆಗಿದ್ದು, ಈ ಮೂಲಕ ರಾಜ್ಯ ಮಟ್ಟದಲ್ಲಿ ಕೊಡಗು ವಾರ್ತೆ ವಿಶೇಷ ಸಾಧನೆಯನ್ನು ಮಾಡಿದೆ.
◆ಪ್ರತಿವರ್ಷ "ಕೊಡಗು ವಾರ್ತೆ" ಯ ಹುಟ್ಟು ಹಬ್ಬದಂದು ಶಾಲಾ-ಕಾಲೇಜು ವಿಧ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
●"ಕೊಡಗು ವಾರ್ತೆ'' ತನಿಖಾ ವರದಿಯಲ್ಲಿ ನಿರಂತ್ತರ
ಮೂರು ವರ್ಷ ಪ್ರಶಸ್ತಿ ಪಡೆಯುವ ಮೂಲಕ "ಹ್ಯಾಟ್ರಿಕ್" ಸಾಧನೆ ಮಾಡಿದ ಜಿಲ್ಲೆಯ ಮೊದಲ ಪತ್ರಕರ್ತ ಎನಿಸಿಕೊಂಡಿದೆ.
◆ಜೊತೆಗೆ 2014-2015ನೇ ಸಾಲಿನಲ್ಲಿ ''ರಾಜ್ಯ ಪ್ರಶಸ್ತಿ'' ಯನ್ನು ಕೂಡ ಪಡೆದುಕೊಂಡಿದ್ದು,
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದಿಂದ ಅತ್ಯುತ್ತಮ ತನಿಖಾ ವರದಿಗೆ ನೀಡಲಾಗುವ
''ಗಿರಿಧರ್'' ಪ್ರಶಸ್ತಿಯನ್ನು 2015ರಲ್ಲಿ ಹಾಸನದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ
ಚಿಕ್ಕಮಂಗಳೂರು ಶಾಸಕ ಸಿ. ಟಿ ರವಿ ಅವರಿಂದ ಸ್ವಿಕರಿಸಿದ್ದೇನೆ.
● "ಕೊಡಗು ವಾರ್ತೆ" ಕೇವಲ ತನಿಖಾ ವರದಿಯಲ್ಲಿ ಮಾತ್ರ ಸಾಧನೆ ಎಂಬಂತ್ತಾಗದೆ 2012-13ನೇ ಸಾಲಿನಲ್ಲಿ ''ಭವಿಷ್ಯದ ಪ್ರಜೆಗಳ ಕೈಯಲ್ಲಿ ಭಿಕ್ಷಾ ಪಾತ್ರೆ'' ಎಂಬ ವರದಿಗೆ ಅತ್ಯುತ್ತಮ "ಮಾನವೀಯ ಪ್ರಶಸ್ತಿ'' ಕೂಡ ದೊರಕಿದೆ.
ಈ ವರದಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಅನೇಕ ಬಾಲ ಭೀಕ್ಷುಕರು ಶಾಲೆಗೆ ಮರಳುವಂತ್ತಾಯಿತು,
◆ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಉತ್ತಮ "ಮಾನವೀಯ ಪ್ರಶಸ್ತಿ" ದೊರೆಯಿತು.
◆ 2011-12ನೇ ಸಾಲಿನಲ್ಲಿ "ಪುಷ್ಪ ಕೊಲೆ ಪ್ರಕರಣ'' ವರದಿಗೆ ಜಿಲ್ಲಾ ಮಟ್ಟದಲ್ಲಿ "ಉತ್ತಮ ತನಿಖಾ ವರದಿ ಪ್ರಶಸ್ತಿ"
●2012-13ನೇ ಸಾಲಿನಲ್ಲಿ "ಅಮ್ಮತ್ತಿಯ ನಿಧಿ ಪ್ರಕರಣ" ವರದಿಗೆ ಜಿಲ್ಲಾ ಮಟ್ಟದಲ್ಲಿ "ಉತ್ತಮ ತನಿಖಾ ವರದಿ ಪ್ರಶಸ್ತಿ"
◆2013-14ನೇ ಸಾಲಿನಲ್ಲಿ ಅಡ್ಡಂಡ ಅನಿತಾ ಕಾರ್ಯಪ್ಪದಂಪತಿಗಳ
"ಪೊನ್ನಂಪೇಟೆ VSSN ನಲ್ಲಿ ದಂಪತಿಗಳ ಧರ್ಬಾರ್'' ಎಂಬ ವರದಿಗೆ ಜಿಲ್ಲಾ ಮಟ್ಟದಲ್ಲಿ "ಉತ್ತಮ ತನಿಖಾ ವರದಿ ಪ್ರಶಸ್ತಿ"
●ಹೀಗೆ ಜಿಲ್ಲೆಯಲ್ಲಿ ನಿರಂತ್ತರ 3 ವರ್ಷ ತನಿಖಾ ವರದಿ ಪ್ರಶಸ್ತಿ ಪಡೆಯುವ ಮೂಲಕ
"'ಕೊಡಗು ವಾರ್ತೆ'' ಹ್ಯಾಟ್ರಿಕ್ ಸಾದನೆ ಮಾಡಿದೆ.
◆ ''ಕೊಡಗು ವಾರ್ತೆ'' ಪ್ರಾರಂಭವಾಗಿ 11ವರ್ಷದಲ್ಲಿ 1
"ರಾಜ್ಯ ಪ್ರಶಸ್ತಿ" 4 "ಜಿಲ್ಲಾ ಪ್ರಶಸ್ತಿ" ಗಳು ಸೇರಿದಂತೆ
ಒಟ್ಟು 5 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
●ಕಿರಿಯ ಪತ್ರಕರ್ತರನ್ನು ಬೆಳೆಸುವ ನಿಟ್ಟಿನಲ್ಲಿ "ಹ್ಯಾಟ್ರೀಕ್ ಪ್ರಶಸ್ತಿ" ಬಂದಾಗ ಮುಂದಿನ ಮೂರು ವರ್ಷ ಯಾವುದೇ ಪ್ರಶಸ್ತಿಗಳು ಬೇಡ ಇತರರಿಗೆ ಅವಕಾಶ ಕೊಡಿ ಎಂಬ ಹೇಳಿಕೆಯನ್ನು ಸಮಾರಂಭದಲ್ಲಿ ನೀಡಲಾಯಿತು.
◆ ಐದು ವರ್ಷ ಯಾವುದೇ ಪ್ರಶಸ್ತಿಗೆ ವರದಿಯನ್ನು ಕಳುಹಿಸಲಾಗಿಲ್ಲ.
●ಜೊತೆಗೆ ಕರ್ನಾಟಕ ಸಾಂಸ್ಕೃತಿಕ ಆಕಾಡೆಮಿಯಿಂದ "ಕರ್ನಾಟಕ ಭೂಷಣ ಪ್ರಶಸ್ತಿ" ಲಭಿಸಿದೆ ಆದರೆ ಇದನ್ನು ಸ್ವೀಕರಿಸಿಲ್ಲ, ತಿರಸ್ಕರಿಸಿದ್ದೇನೆ.
◆ಇನ್ನು ಹಲವಾರು ಸಾಧನೆಗಳನ್ನು ಮಾಡಿದ್ದು ನನ್ನ ಗಮನಕ್ಕೆ ಬಂದಿರುವುದನ್ನು ಇಲ್ಲಿ ತಿಳಿಸಿರುತ್ತೇನೆ.
ಕನ್ನಡ ಪತ್ರಿಕಾರಂಗದಲ್ಲಿ ನಾನೊಬ್ಬ ಕೊಡವ ಪತ್ರಿಕೊದ್ಯಮಿಯಾಗಿ ಬೆಳೆಸಿದ
ನನ್ನ ಎಲ್ಲಾ ಅಭಿಮಾನಿಗಳಿಗೆ ಹೃದಯ ತುಂಬಿದ ವಂದನೆಗಳು

-◆ನಿಮ್ಮವ..
●ಚಮ್ಮಟೀರ ಪ್ರವೀಣ್ ಉತ್ತಪ್ಪ●
ಸಂಪಾದಕ-
◆ಕೊಡಗು ವಾರ್ತೆ◆
ವಿಶಿಷ್ಟ ಕೊಡಗಿನ ವಿಭಿನ್ನ ಕನ್ನಡ ವಾರ ಪತ್ರಿಕೆ.

Address

Ponnampet
571216

Alerts

Be the first to know and let us send you an email when KODAGUVAARTHE "ಕೊಡಗು ವಾರ್ತೆ" posts news and promotions. Your email address will not be used for any other purpose, and you can unsubscribe at any time.

Contact The Business

Send a message to KODAGUVAARTHE "ಕೊಡಗು ವಾರ್ತೆ":

Share

Our Story

KODAGU VAARTHE "ಕೊಡಗು ವಾರ್ತೆ" ವಾರ ಪತ್ರಿಕೆ ಮಡಿಕೇರಿಯ ಪತ್ರಿಕಾ ಭವನದಲ್ಲಿ 26 ಜುಲೈ 2010ರಂದು ಲೋಕಾರ್ಪಣೆ ಗೊಂಡಿತು. ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥ ನಾರಾಯಣ ಗೌಡ ಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಾ.ಸೋಮೇಶ್, ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ನಾರಾಯಣ ಸ್ವಾಮಿ ನಾಯ್ಡು, ಪತ್ರಿಕೆ ಪ್ರಧಾನ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಜರಿದ್ದರು....... about me...ಈ ಹಿಂದೆ ವಿಜಯಕರ್ನಾಟಕ ಪತ್ರಿಕೆಯ ವರದಿಗಾರನಾಗಿ, ಗೋಣಿಕೊಪ್ಪಲು ಪ್ರೆಸ್ಸ್ ಕ್ಲಬ್ ಅಧ್ಯಕ್ಷನಾಗಿ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದು, ''ಪೊಣ್ಹ್ ರ ಮನಸ್ಸ್ '' ಮತ್ತು ''ಜಡಿ ಮಳೆ'' ಕೊಡವ ಚಲನ ಚಿತ್ರದ ಸಹ ನಿರ್ದೇಶನ, '' ಪೊಣ್ಹ್ ರ ಮನಸ್ಸ್'' ಕೊಡವ ಚಲನ ಚಿತ್ರದಲ್ಲಿ ಸಾಹಿತ್ಯ ರಚಿಸಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದು, '' ಪೊಣ್ಹ್ ರ ಮನಸ್ಸ್'' ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರಕಿದೆ. ಪ್ರಸ್ತುತ...... ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ''ಕೊಡಗು ವಾರ್ತೆ'' ಕನ್ನಡ ವಾರ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ, ಕೊಡಗು ವಾರ್ತೆ ಪತ್ರಿಕೆಯ 2011 ರ ಕೆ.ವಿ.ಕೆ ಕೊಲೆ ಪ್ರಕರಣ ವರದಿಗಾಗಿ ಉತ್ತಮ ತನಿಖಾ ವರದಿ ಪ್ರಶಸ್ತಿ ಲಭಿಸಿದೆ. 2012ರಲ್ಲಿ ಬರೆದ ಅಮ್ಮತಿಯಲ್ಲಿ ಚಿನ್ನದ ನಾಣ್ಯ ಪತ್ತೆ... ಬೆಳ್ಳಿಯ ನಾಣ್ಯ ನಾಪತ್ತೆ ಎಂಬ ವರದಿಗೆ ಉತ್ತಮ ತನಿಖಾ ವರದಿ ಪ್ರಶಸ್ತಿ ಹಾಗು ಭವಿಷ್ಯದ ಪ್ರಜೆಗಳ ಕೈಯ್ಯಲ್ಲಿ ಭಿಕ್ಷಾಪಾತ್ರೆ ವರದಿಗೆ ಉತ್ತಮ ಮಾನವೀಯ ವರದಿ ಪ್ರಶಸ್ತಿ ಲಭಿಸಿದೆ.


Other Media/News Companies in Ponnampet

Show All