17/12/2024
*ಅರಮನೆ ಫಲಪುಷ್ಪ ಪ್ರದರ್ಶನ*
ಮೈಸೂರು,ಡಿ.17(ಕರ್ನಾಟಕ ವಾರ್ತೆ):- ಮೈಸೂರು ಅರಮನೆ ಮಂಡಳಿ ವತಿಯಿಂದ ಡಿಸೆಂಬರ್ 21 ರಂದು ಸಂಜೆ 5 ಗಂಟೆಗೆ ಅರಮನೆ ಆವರಣದಲ್ಲಿ “ಅರಮನೆ ಫಲಪುಷ್ಪ ಪ್ರದರ್ಶನ-2024” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಘನ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪನವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ.ವೆಂಕಟೇಶ್ ಅವರು ಗೌರವ ಉಪಸ್ಥಿತಿ ಇರಲಿದ್ದು, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್.ಸಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರಾದ ಎ.ಬಿ ರಮೇಶ್ ಬಂಡಿ ಸಿದ್ದೇಗೌಡ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಶಾಸಕರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಬೋಸ್ ಅವರು ಆಗಮಿಸಲಿದ್ದಾರೆ.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವಿರ್ ಸೇಠ್, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ, ಕೃಷ್ಣರಾಜನಗರ ವಿಧಾನಸಭಾ ಶಾಸಕರಾದ ರವಿಶಂಕರ್ ಡಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ದೃವನಾರಾಯಣ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಡಿ ಹರೀಶ್ ಗೌಡ ಹಾಗೂ ವಿಧಾನ ಪರಿಷತ್ನ ಸದಸ್ಯರುಗಳಾದ ಹೆಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಯತಿಂದ್ರ.ಎಸ್ ಮತ್ತು ವಿವೇಕಾನಂದ.ಎಸ್ ಅವರು ಸಮಾರಂಭದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಹಾಗೂ ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಮರಿಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 21 ರಂದು ಸಂಜೆ 5 ಗಂಟೆಗೆ ಅರಮನೆಯ ಫಲಪುಷ್ಪ ಪ್ರದರ್ಶನ, ವರಾಹ ಉದ್ಯೋನವನದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಬೊಂಬೆ ಮನೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲ್ಲಿದ್ದು, ಸಂಜೆ 5:30 ರಿಂದ 6:30 ರವರೆಗೆ ಶ್ರೀ.ಸಿ.ಆರ್. ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿoದ ವಾದ್ಯಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಗೆ ಎ.ಆರ್. ಕಲಾ ತಂಡದವರಿoದ ನಾಡಗೀತೆ ಮತ್ತು ಮೈಸೂರು ಸಂಸ್ಥಾನದ ನಾಡಗೀತೆಯಾದ ಕಾಯೌಶ್ರೀಗೌರಿ ಕರುಣಾಲಹರಿ ಗೀತೆ, ಸಂಜೆ 7:15 ರಿಂದ 7:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಸಂಜೆ 7:30 ರಿಂದ 9:30 ರವರೆಗೆ ಖ್ಯಾತ ಹಿನ್ನಲೆಗಾಯಕರಾದ ಶ್ರೀ ಮಧುಬಾಲಕೃಷ್ಣನ್ ಮತ್ತು ತಂಡದವರಿoದ "ಸಂಗೀತ ರಸಸಂಜೆ" ಕಾರ್ಯಕ್ರಮ ಮತ್ತು ಬೊಂಬೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಗಳು ನಡೆಯಲಿದೆ.
ಪ್ರವೇಶ ದರ ನಿಗಧಿ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರಿಗೆ ಪ್ರವೇಶ ದರವನ್ನು ನಿಗಧಿ ಪಡಿಸಿದ್ದು, ವಯಸ್ಕರಿಗೆ ಮತ್ತು ವಿದೇಶಿ ಪ್ರವಾಸಿಗರಿಗೆ ರೂ.30, 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರೂ.20 ಗಳು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
ಡಿಸೆಂಬರ್ 21 ರಿಂದ 31 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಫಲಪುಷ್ಪ ಪ್ರದರ್ಶನ ಹಾಗೂ ಸಂಜೆ 7 ರಿಂದ 9 ರ ವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರುತ್ತದೆ.
ಡಿಸೆಂಬರ್ 22 ರಂದು ಸಂಜೆ 6 ರಿಂದ 6.45 ರವರೆಗೆ ರಘು. ಆರ್ ಮತ್ತು ತಂಡದವರಿoದ ಗೀತಗಾಯನ, ಸಂಜೆ 6.45 ರಿಂದ 7.15 ರವರೆಗೆ ಭಾರತೀಯ ವಿದ್ಯಾಭವನರವರಿಂದ "ನೃತ್ಯರೂಪಕ" ಹಾಗೂ ಸಂಜೆ 7.30 ರಿಂದ 9.30 ರವರೆಗೆ ಖ್ಯಾತ ಹಿನ್ನಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ತಂಡದವರಿoದ "ಸಂಗೀತ ಸಂಜೆ" ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 23 ರಂದು ಸಂಜೆ 6 ರಿಂದ 6.45 ರವರೆಗೆ ಆಯುಷ್ ಎಂ. ಡಿ ಮತ್ತು ತಂಡದವರಿoದ ಕರ್ನಾಟಕ "ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ, ಸಂಜೆ 7 ರಿಂದ 8.30 ರವರೆಗೆ ಖ್ಯಾತ ಮೃದಂಗ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿoದ “ಲಯ- ಲಾವಣ್ಯ” ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 24 ರಂದು ಸಂಜೆ 6 ರಿಂದ 6.45 ರವರೆಗೆ ಶಡಜ್ ಗೊಡ್ಖಂಡಿ( ಕೊಳಲು) ಮತ್ತು ಅಪೂರ್ವ ಕೃಷ್ಣ ( ಪಿಟೀಲು ವಾದನ) ಹಾಗೂ ತಂಡದವರಿoದ ‘ಫೂಶನ್ ಸಂಗೀತ’ ಕಾರ್ಯಕ್ರಮ, ಸಂಜೆ 7 ಗಂಟೆಯಿoದ 8 ಗಂಟೆಯವರೆಗೆ ಶ್ರೀ ಸಿದ್ದಾರ್ಥ ಬೆಲ್ಮಣ್ಣ ಅವರಿಂದ ‘ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ’ ಹಾಗೂ ಗಂಜಿoಫ ರಘುಪತಿ ಭಟ್ ವರ್ಣಚಿತ್ರ ಕಲಾವಿದರಿಂದ "ದಾಸವಾಣಿ ಚಿತ್ರಣ" ಕಾರ್ಯಕ್ರಮ ಹಾಗೂ ಸಂಜೆ 8 ರಿಂದ 9.30 ರವರೆಗೆ ಚಂಪಕ ಅಕಾಡೆಮಿ ವೃಂದ ಡಾ. ನಾಗಲಕ್ಷ್ಮಿನಾಗರಾಜನ್ ಹಾಗೂ 40 ಜನ ತಂಡದವರಿoದ ಶ್ರೀ ಕೃಷ್ಣ ಲೀಲಾ ವಿಭೂತಿ ಪದ್ಮಭೂಷಣ ಶ್ರೀ ಡಿ. ವಿ. ಜಿ. ವಿರಜಿತ ಗೇಯ "ನೃತ್ಯ ನಾಟಕ" ಕಾರ್ಯಕ್ರಮ ನಡೆಯಲಿವೆ.
ಡಿಸೆಂಬರ್ 25 ಸಂಜೆ 5.45 ರಿಂದ 6.30 ರವರೆಗೆ ಶ್ರೀ ನಾಹರ್ ಗುರುದತ್ತ ಮತ್ತು ತಂಡದವರಿoದ "ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ, ಸಂಜೆ 6.30 ರಿಂದ 7.30 ರವರೆಗೆ ಸಂಗೀತ ವಿದ್ವಾನ್ ಪ್ರೊ. ಡಾ.ಸಿ.ಎ ಶ್ರೀಧರ, ವಿದ್ವಾನ್ ಸಿ.ಎಸ್ ಕೇಶವಚಂದ್ರ ಮತ್ತು ವೃಂದದವರಿAದ "ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ" ಕಾರ್ಯಕ್ರಮ ಹಾಗೂ ಸಂಜೆ 7.30 ರಿಂದ 9 ಗಂಟೆಯವರೆಗೆ ಜೀ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಗಾಯಕರುಗಳಾದ ದರ್ಶನ್ ನಾರಾಯಣ್, ಐಶ್ವರ್ಯರಂಗರಾಜನ್, ಸುನಿಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನಗುರುರಾಜ್ ಮತ್ತು ತಂಡದವರಿoದ " ಸಂಗೀತಯಾನ" ಕಾರ್ಯಕ್ರಮಗಳು ನಡೆಯಲಿದೆ.
ಪೊಲೀಸ್ ಇಲಾಖೆಯ ವತಿಯಿಂದ ಡಿಸೆಂಬರ್ 31 ರಂದು ರಾತ್ರಿ 11 ರಿಂದ 12 ಗಂಟೆಯವರೆಗೆ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಮಧ್ಯರಾತ್ರಿ 12 ರಿಂದ 12:15 ರವರೆಗೆ ಮೈಸೂರು ಅರಮನೆ ಮಂಡಳಿಯ ವತಿಯಿಂದ "ಹೊಸ ವರ್ಷಾಚರಣೆ" ಯ ಪ್ರಯುಕ್ತ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ.