Mumbai News Kannada

Mumbai News Kannada Watch 'Mumbai News Kannada' in coastal Karnataka
on
" V4 News 24x7" channel
on
Saturday 7.30 p.m

ಭಾರತ್ ಬ್ಯಾಂಕ್ ಭಾಯಂದರ್ ಶಾಖೆಯಲ್ಲಿ  45ನೇ ಸಂಸ್ಥಾಪನಾ ದಿನಾಚರಣೆ. ಗ್ರಾಹಕರ ಪ್ರೀತಿ -ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಬ್ಯ...
22/08/2023

ಭಾರತ್ ಬ್ಯಾಂಕ್ ಭಾಯಂದರ್ ಶಾಖೆಯಲ್ಲಿ 45ನೇ ಸಂಸ್ಥಾಪನಾ ದಿನಾಚರಣೆ. ಗ್ರಾಹಕರ ಪ್ರೀತಿ -ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಬ್ಯಾಂಕಿನ ಉತ್ತರೋತ್ತರ ಅಭಿವೃದ್ಧಿ- ಚಿತ್ರಾಪು ಕೆ.ಎಮ್.ಕೋಟ್ಯಾನ್ಚಿ ತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ, ಅ.22.ನಲ್ವತೈದು ವರ್ಷಗಳ ಹಿಂದೆ ಭಾರತ್ ಬ್ಯಾಂಕ್ ಸ್ಥಾಪನೆಯಾದಂದಿನಿಂದ ಬ್ಯಾಂಕಿನೊಂದಿಗೆ ಸಂಬಂಧವನ್ನಿಟ್ಟು ಕೊಂಡಿದ್ದೇನೆ.ನೂರು ದಾಟಿದ ಶಾಖೆಗಳೊಂದಿಗೆ ಹಲವಾರು ಉತ್ತಮ ಪ್ರಶಸ್ತಿಗಳನ್ನು ಪಡಕೊಂಡು ಬ್ಯಾಂಕುಗಳ ಕ್ಷೇತ್ರದಲ್ಲಿ ತನ್ನ ಹೆಸರನ್ನು ಉಳಿಸಿಕೊಂಡಿದೆ. ದಕ್ಷ ಆಡಳಿತದೊಂದಿಗೆ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯು ಗ್ರಾಹಕರಿಗೆ ಸಂತೋಷ ನೀಡಿದೆ. ನಾರಾಯಣ ಗುರುಗಳ ತತ್ವ, ಸಂದೇಶದಂತೆ ಬಿಲ್ಲವರ ಎಸೋಸಿಯೇಶನಿನ ಮೂಲಕ ಸ್ಥಾಪಿತವಾದ ಬ್ಯಾಂಕು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಬ್ಯಾಂಕಿನ ಹಿರಿಯ ಗ್ರಾಹಕ ಚಿತ್ರಾಪು ಕೆ.ಎಮ್. ಕೋಟ್ಯಾನ್ ಹೇಳಿದರು. ಅವರು ಅ.21ರಂದು ಭಾರತ್ ಬ್ಯಾಂಕಿನ ಭಾಯಂದರ್ ಶಾಖೆಯಲ್ಲಿ ಬ್ಯಾಂಕಿನ 45ನೇ ಸಂಸ್ಥಾಪನಾ ದಿನಾಚರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
ಶಾಖಾ ಪ್ರಭಂದಕ ಪ್ರವೀಣ್ ಬಂಗೇರ ಮಾತನಾಡಿ ಗ್ರಾಹಕರ ಉತ್ತಮ ಪ್ರೋತ್ಸಾಹ ಹಾಗೂ ಬ್ಯಾಂಕಿನ ಸಿಬ್ಬಂದಿಗಳ ಸಹಕಾರದಿಂದ ಭಾರತ್ ಬ್ಯಾಂಕ್ ಇದೀಗ 45 ವರ್ಷಗಳನ್ನು ಪೂರೈಸಿದೆ.ಮುಂದಿಗೂ ಗ್ರಾಹಕರ ಸೇವೆಗೆ ಯಾವುದೇ ಅಡ್ಡಿ ಬಾರದೆ ಹೊಸ ಹೊಸ ಯೋಜನೆಗಳು ಜಾರಿಗೆ ಬರಲಿವೆ ಎಂದು ಹೇಳುತ್ತಾ ಎಲ್ಲರಿಗೂ ಅಭಾರ ಮನ್ನಿಸಿದರು. ಬ್ಯಾಂಕಿನ ಹಿರಿಯ ಗ್ರಾಹಕರಾದ ಸ್ವತಂತ್ರ ಕುಮಾರ್, ರಮೇಶ್ ಪಾರೆಕ್, ಗನಶ್ಯಾಮ್ ಶರ್ಮಾ, ಅಂಜಲೀನ್ ಡಿಮೆಲ್ಲೋ, ದಿನೇಶ್ ಹಲ್ವಾಯಿ, ಬಿಲ್ಲವರ ಎಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಛೇರಿಯ ಕಾರ್ಯಾದ್ಯಕ್ಷ ನರೇಶ್. ಕೆ.ಪೂಜಾರಿ, ಉಪಾಧ್ಯಕ್ಷ ರಘುನಾಥ್ ಜಿ.ಹಳೆಂಗಡಿ ಸಂದರ್ಭೋಚಿತವಾಗಿ ಮಾತನಾಡಿ ಬ್ಯಾಂಕಿನ ಕಾರ್ಯತತ್ಪರತೆಗೆ ಸಂತೋಷ ವ್ಯಕ್ತ ಪಡಿಸಿದರು. ಉದಯ ಡಿ.ಸುವರ್ಣ, ಸತೀಶ್ ಪೂಜಾರಿ, ಮಾಧವ ಸುವರ್ಣ,ಉಮೇಶ್ ಅಮೀನ್, ವಿಜಯ ಅಂಚನ್ಮೊ ದಲಾದವರು ಉಪಸ್ಥಿತರಿದ್ದರು. ಶಾಖಾ ಉಪ ಪ್ರಭಂದಕ ರಾಹುಲ್ ಸಾಲ್ಯಾನ್ ಸ್ವಾಗತಿಸಿದರು.ಅಧಿಕಾರಿ ವೀಣಾ ಪೂಜಾರಿ ವಂದಿಸಿದರು. ಲೀಲಾಧರ್, ನಿಶಾ, ಪ್ರಿಯಾ, ಯುಕ್ತಾ ಹಾಗೂ ಶ್ರಧ್ಧಾ ಸಹಕರಿಸಿದ್ದರು.

ಬಂಟ್ಸ್ ಫೋರಮ್ ಮೀರಾಭಾಯಂದರಿನ ಸದಸ್ಯರ ಸ್ನೇಹಕೂಟ.ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ...ಬೆಳ್ಳಿಪಾಡಿ ಸಂತೋಷ್ ರೈ. ಚಿತ್ರ,ವರದಿ:...
05/07/2023

ಬಂಟ್ಸ್ ಫೋರಮ್ ಮೀರಾಭಾಯಂದರಿನ ಸದಸ್ಯರ ಸ್ನೇಹಕೂಟ.
ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ...ಬೆಳ್ಳಿಪಾಡಿ ಸಂತೋಷ್ ರೈ. ಚಿತ್ರ,ವರದಿ: ಉಮೇಶ್ ಕೆ.ಅಂಚನ್.
ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಸ್ನೇಹಸಮ್ಮಿಲನ ಕಾರ್ಯಕ್ರಮವು ಇತ್ತೀಚೆಗೆ ಬಹು ವಿಜ್ರಂಭಣೆಯಿಂದ ನಡೆದಿದೆ. ಇದರ ಯಶಸ್ಸಿಗೆ ಶ್ರಮಿಸಿದ ಸರ್ವ ಸದಸ್ಯರು ಹಾಗೂ ಮುಂದಾಳತ್ವ ವಹಿಸಿದ್ದ ಅದ್ಯಕ್ಷರಾದ ಇನ್ನ ಚಂದ್ರಹಾಸ ಕೆ.ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ. ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಿದ ಅಧ್ಯಕ್ಷರನ್ನು ಇಂದು ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ಸ್ ಫೋರಮಿನ ಗೌರವಾದ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಹೇಳಿದರು. ಅವರು ಜು.1 ರಂದು ಸಂಸ್ಥೆಯು ಮೀರಾರೋಡ್ ರೈಲ್ವೇ ಸ್ಟೇಶನ್ ಬದಿಯಲ್ಲಿರುವ ಸುರಭಿ ಹೋಟೇಲಿನ ಸಭಾಗ್ರಹದಲ್ಲಿ ಆಯೋಜಿಸಿದ್ದ ಕೌಟಂಬಿಕ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದ್ಯಕ್ಷರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸನ್ಮಾನ ಸ್ವೀಕರಿಸಿದ ಅದ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡುತ್ತಾ ಅದ್ಯಕ್ಷನಾಗಿ ನನ್ನ ಕರ್ತವ್ಯವನ್ನು ಸರ್ವರ ಸಹಕಾರದಿಂದ ನಿಭಾಯಿಸಿದ್ದೇನೆಂಬ ಸಂತೃಪ್ತಿ ಇದೆ. ಎಲ್ಲಾದರೂ ಅಪ್ಪಿತಪ್ಪಿ ತಿಳಿಯದೆ ತಪ್ಪಾಗಿದ್ದರೆ ಕ್ಷಮಿಸಿ ಮುಂದಿಗೂ ತಮ್ಮ ಸಹಕಾರವಿರಲಿ ಎಂದು ಹೇಳಿದರು. ಆರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರಾರ್ಥನೆ, ಹರೀಶ್ ಶೆಟ್ಟಿ ಕಾಪುರವರ ಮುಂದಾಳತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಇನ್ನ ಚಂದ್ರಹಾಸ್ ಕೆ. ಶೆಟ್ಟಿ, ಗೀತಾ ಚಂದ್ರಹಾಸ ಶೆಟ್ಟಿ ಹಾಗೂ ಮಕ್ಕಳಾದ ನಿಧಿ, ಯಶ್ ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಮತಿ ಎಜುಕೇಷನ್ ಟ್ರಸ್ಟಿನ ಕಾರ್ಯಾದ್ಯಕ್ಷ ಅರುಣೋದಯ ರೈ ಬೆಳಿಯೂರುಗುತ್ತು, ಸಂಸ್ಥೆಯ ಮಾಜಿ ಅದ್ಯಕ್ಷ ಡೆಲ್ಟಾ ಶಿವರಾಮ್ ಶೆಟ್ಟಿ, ಮಾಜಿ ಸಲಹೆಗಾರ ಕಿಶೋರ್ ಶೆಟ್ಟಿ ಕುತ್ಯಾರು,ಸಂಚಾಲಕ ದಿವಾಕರ ಎಮ್. ಶೆಟ್ಟಿ ಶಿರ್ಲಾಲ್, ಉಪಾಧ್ಯಕ್ಷ ಮನ್ಮಥ ಕಡಂಬ, ಗೌರವ ಕಾರ್ಯದರ್ಶಿ ಹರ್ಷಕುಮಾರ್ ಡಿ.ಶೆಟ್ಟಿ, ಕೋಶಾಧಿಕಾರಿ ರಮೇಶ್ ಎ.ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಸುಮತಿ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾದ್ಯಕ್ಷ ಉದಯ ಶೆಟ್ಟಿ ಮಲಾರ್ ಬೀಡು, ಹರೀಶ್ ಶೆಟ್ಟಿ ಕಾಪು, ದಾಮೋದರ್ ಶೆಟ್ಟಿ ಉಪಸ್ಥಿತರಿದ್ದರು. ಸ್ನೇಹ ಕೂಟದಲ್ಲಿ ಉಪಸ್ಥಿತರಿದ್ದ ಸದಸ್ಯರಲ್ಲಿ ಅದೃಷ್ಟ ಚೀಟಿ ತೆಗೆದು ಇಬ್ಬರಿಗೆ ವಸಾಯಿ ಕೌಶಿಕಿ ಸಿಲ್ಕ್ ಎನ್. ಎಕ್ಸ್ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಕಾಂಜೀವರಂ ಸೀರೆಯ ಬಹುಮಾನಗಳನ್ನು ನೀಡಲಾಯಿತು ಹಾಗೂ ಎಲ್ಲಾ ಸದಸ್ಯರಿಗೆ ರಿಯಾಯಿತಿ ದರದ ಸೀರೆ ಖರೀದಿಯ ಕೂಪನನ್ನು ಹಂಚಲಾಯಿತು. ಗೌರವ ಕಾರ್ಯದರ್ಶಿ ಹರ್ಷ ಕುಮಾರ್ ಡಿ. ಶೆಟ್ಟಿ ಸ್ವಾಗತಿಸಿ ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ ವಂದಿಸಿದರು. ಪ್ರೀತಿಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನಿನ ವಿಶೇಷ ಮಹಾ ಸಭೆ.ಉದ್ಯಮದ ಪ್ರಗತಿಗೆ ಬಲಯುತ ಸಂಘಟನೆ ಅಗತ್ಯ....ರಂಜನ್ ಎಲ್.ಶೆಟ್ಟಿ ಇನ್ನ.ಚಿತ್ರ, ವರದಿ. ...
17/06/2023

ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನಿನ ವಿಶೇಷ ಮಹಾ ಸಭೆ.
ಉದ್ಯಮದ ಪ್ರಗತಿಗೆ ಬಲಯುತ ಸಂಘಟನೆ ಅಗತ್ಯ....ರಂಜನ್ ಎಲ್.ಶೆಟ್ಟಿ ಇನ್ನ.
ಚಿತ್ರ, ವರದಿ. ಉಮೇಶ್ ಕೆ.ಅಂಚನ್. ಭಾಯಂದರ್, ಜೂ.14. ಸಂಘಟನೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಇತರ ಸದಸ್ಯರ ಬೆಂಬಲ ಸಹಕಾರ ಇದ್ದರೆ ಮಾತ್ರ ಯಾವುದೇ ಕೈಗೊಂಡ ಕಾರ್ಯದಲ್ಲಿ ಸಫಲತೆ ಪಡೆಯಲು ಸಾಧ್ಯ. ಸಂಘಟನೆಯ ಪದಾಧಿಕಾರಿಗಳಲ್ಲಿ ಭರವಸೆ ಇಟ್ಟು ಪ್ರೋತ್ಸಾಹಿಸಬೇಕು. ಉದ್ಯಮಿಗಳು ತಮಗಾದ ತೊಂದರೆಗಳನ್ನು ತಾವೇ ಎದುರಿಸದೆ ಸಂಘಟನೆಯ ಮುಖಾಂತರ ಎದುರಿಸಿದರೆ ಆ ತೊಂದರೆ ಬೇರೆಯವರಿಗೆ ಬರದ ಹಾಗೆ ಬಗೆಹರಿಸಬಹುದು. ಯಾವುದೇ ವಿಭಾಗದ ಅಧಿಕಾರಿಗಳನ್ನು ಜನಬಲದೊಂದಿಗೆ ಬೇಟಿಯಾಗಬೇಕು ಎಂದು ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಷನಿನ ನೂತನ ಅದ್ಯಕ್ಷ ರಂಜನ್ ಎಲ್.ಶೆಟ್ಟಿ ಅಭಿಪ್ರಾಯಿಸಿದರು. ಅವರು ಜೂ.13ರಂದು ಮೀರಾರೋಡ್ ಪೂರ್ವದ ಸಿನೆಮ್ಯಾಕ್ಸ್ ಎದುರಿನ ಕೃಷ್ಣ ಪ್ಯಾಲೇಸ್ ಹೋಟೇಲಿನ ಸಭಾಗ್ರಹದಲ್ಲಿ ಅಸೋಸಿಯೇಷನಿನ ವಿಶೇಷ ಮಹಾ ಸಭೆಯಲ್ಲಿ ಮಾತನಾಡುತ್ತಿದ್ದರು. ಹೋಟೇಲು ವ್ಯವಸಾಯವು ಸರಕಾರದ ಆಹಾರ ವಿಭಾಗ, ವಿವಿಧ ಕರ ವಿಭಾಗ, ವಿದ್ಯುತ್, ನೀರು,ಪೋಲಿಸ್, ಮದ್ಯ ಹಾಗೂ ತಂಪು ಪಾನೀಯ ಸರಬರಾಜು ಮಾಡುವ ಕಂಪನಿಗಳು ಅಲ್ಲದೆ ನಗರಪಾಲಿಕೆಯ ವಿಭಾಗಗಳಿಂದ ತೊಂದರೆಗಳನ್ನು ಅನುಭವಿಸುತ್ತಲೇ ಇದೆ. ಇದಕ್ಕೆಲ್ಲಾ ಸದಸ್ಯರ ಒಮ್ಮತದ ಹೋರಾಟ ಅಗತ್ಯ ಎಂದ ರಂಜನ್ ಶೆಟ್ಟಿಯವರು ವಲಯಕ್ಕೆ ಅನುಗುಣವಾಗಿ ರಚಿಸಿದ ನೂತನ ಸಮಿತಿಯ ಪದಾಧಿಕಾರಿಗಳನ್ನು ಪರಿಚಯಿಸಿದರು. ಹಿರಿಯ ಹೋಟೇಲು ಉದ್ಯಮಿ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ, ಜ್ಯೂಲಿಯೆಟ್ ಸ್ಟೆಫನ್ ಡಿಸೋಜ, ಫುಲ್ಜಾಯಿಫಾ ಮುಖ್ಖಿ, ಉದಯ ಶೆಟ್ಟಿ ಮೊದಲಾದವರು ಸಲಹೆ ಸೂಚನೆ ನೀಡಿದರು. ಗೌ.ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಅನಿಲ್ ಶೆಟ್ಟಿ ವಂದಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾಯಂದರ್ ಪೂರ್ವ ವಲಯದ ಉಪಾಧ್ಯಕ್ಷರುಗಳಾದ ಜೀವನ್ ಶೆಟ್ಟಿ ಮತ್ತು ಪ್ರಶಾಂತ್ ಸಮಾನಿ, ಜತೆ ಕಾರ್ಯದರ್ಶಿ ಮೋಹನ್ ಶೆಟ್ಟಿ, ಭಾಯಂದರ್ ಪಶ್ಚಿಮ ವಲಯದ ಉಪಾಧ್ಯಕ್ಷರುಗಳಾದ ಧೀರಜ್ ಶೆಟ್ಟಿ ಮತ್ತು ಪ್ರಕಾಶ್ ಶೆಟ್ಟಿ, ಜತೆ ಕಾರ್ಯದರ್ಶಿ ಚಂದ್ರಕಾಂತ ಶೆಟ್ಟಿ, ಮೀರಾರೋಡ್ ವಲಯದ ಉಪಾಧ್ಯಕ್ಷರುಗಳಾದ ವಿನೀತ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ, ಜತೆ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕಾಶಿಮೀರಾ ವಲಯದ ಉಪಾಧ್ಯಕ್ಷರುಗಳಾದ ಹಸನ್ ನೆದಾರಿಯಾ ಮತ್ತು ನವೀನ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ,ಮುಖ್ಯ ಸಲಹೆಗಾರರಾದ ಇನ್ನ ಚಂದ್ರಹಾಸ್ ಕೆ.ಶೆಟ್ಟಿ ಮೊದಲಾದವರನ್ನು ಸತ್ಕರಿಸಲಾಯಿತು. ಸಭೆಯಲ್ಲಿ ಹೋಟೇಲು ಮಾಲಕರು ಹಾಗೂ ಸಂಚಾಲಕರು ಉಪಸ್ಥಿತರಿದ್ದರು.ಚಿತ್ರ, ವರದಿ... ಉಮೇಶ್ ಕೆ.ಅಂಚನ್.

ಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ' ಭಕ್ತಿಗೀತೆ ಲೋಕಾರ್ಪಣೆಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದ್ದೆ ದಿವ್ಯಶಕ್ತಿ: ರಮೇಶ್ ಗು...
24/02/2023

ಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ' ಭಕ್ತಿಗೀತೆ ಲೋಕಾರ್ಪಣೆ

ಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದ್ದೆ ದಿವ್ಯಶಕ್ತಿ: ರಮೇಶ್ ಗುರುಸ್ವಾಮಿ ಚಿತ್ರ ವರದಿ ದಿನೇಶ್ ಕುಲಾಲ್ ಮುಂಬೈ ಫೆ 24. ನಗರದ ಹೃದಯ ಭಾಗವಾಗಿರುವ ವರ್ಲಿಯಲ್ಲಿ ಮಧುಸೂದನ್ ಮಿಲ್ ಕಂಪೌಂಡಿನಲ್ಲಿ ಇರುವ ಅಪ್ಪಾಜಿ ಬೀಡು ಫೌಂಡೇಶನ್‌[ರಿ] ಮತ್ತು ಐ ಲೇಸಾ ದಿ ವಾಯ್ಸ್‌ ಆಫ್‌ ಓಷನ್‌ [ರಿ] ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್‌ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಾಯ್ತು,
ಮುಖ್ಯ ಅತಿಥಿಯಾಗಿ ಟೀಂ ಐಲೇಸಾದ ಕವಿ ಸಾಹಿತಿ ಶಾಂತರಾಮ ಶೆಟ್ಟಿಯವರು ಮಾತನಾಡುತ್ತಾ ಕರೋನ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದೆ ಅದನ್ನು ಕಂಡು ನನ್ನ ಆತ್ಮೀಯರಾಗಿದ್ದ ಕೆಲವರು ಅದಕ್ಕೊಂದು ಗಟ್ಟಿತನದ ಶಕ್ತಿ ನೀಡಿದರು, ವಿದೇಶದ ಗೆಳೆಯರು ಕೂಡ ಅದಕ್ಕೆ ಸಹಕಾರ ಆ ಶಕ್ತಿಯೇ ಐ ಲೇಸಾ ತಂಡ ವಾಗಿ ಬೆಳೆದು ಬಂತು , ಸೂರಿ ಮಾರ್ನಾಡ್ ಓರ್ವ ಅದ್ಭುತ ಕಲಾವಿದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ಅವರು ಭಕ್ತಿಯ ಅನುಭವಗಳನ್ನು ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಭಕ್ತಿಗೀತೆ ಜನಸಾಮಾನ್ಯರಿಗೆ ತಲುಪುವ ಕೆಲಸ ನಮ್ಮೆಲ್ಲರಿಗೂ ಆಗಿದೆ ಅದು ಅವರಿಗೆ ನೀಡುವ ಕೊಡುಗೆಯಾಗಿದೆ, ಎಂದು ನುಡಿದರು ಅಂದೇರಿ ಅಯ್ಯಪ್ಪ ಭಕ್ತಬಂಧದ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಆಶೀರ್ವಚನ ಮಾತುಗಳನ್ನು ನೀಡಿ ಕಲಿಯುಗದಲ್ಲಿ ಸಾಕ್ಷಾತ್ಕರಿಸುವ ದೇವರೆಂದರೆ ಅದು ಅಯ್ಯಪ್ಪ ಸ್ವಾಮಿ ಮಾತ್ರ ,ಆತನನ್ನು ಶ್ರದ್ದೆಯಿಂದ ಸ್ಮರಿಸಿದರೆ ಮಾತ್ರ ನಮ್ಮನ್ನು ಹಾರೈಸುತ್ತಾರೆ ಇಂದು ಲೋಕಾರ್ಪಣೆಗೊಂಡ ಈ ಭಕ್ತಿ ಗೀತೆಯನ್ನು ಕೇಳುವ ಮೂಲಕ ಇನ್ನಷ್ಟು ಜನ ಆಧ್ಯಾತ್ಮಿಕದ ಹಾದಿಯಲ್ಲಿ ನಡೆಯಲಿ ಎಂದು ನುಡಿದರು ಭಕ್ತಿ ಗೀತೆಯನ್ನು ಬಿಡುಗಡೆಗೊಳಿಸಿದ ಅಪ್ಪಾಜಿ ಬೇಡಿನ ಸಂಸ್ಥಾಪಕ ರಮೇಶ್ ಗುರುಸ್ವಾಮಿ ಆಶೀರ್ವಚನ ನೀಡುತ್ತಾಟೀಂ ಐಲೇಸಾದ ತಂಡದವರು ಈ ಭಕ್ತಿ ಗೀತೆಯನ್ನು ವಿದೇಶದಲ್ಲೂ ಕೂಡ ಲೋಕರ್ಪಣೆಗಳಿಸುವಷ್ಟು ಸಾಮರ್ಥ್ಯ ಇತ್ತು ಆದರೆ ಅಪ್ಪಾಜಿ ಬೀಡಿನ ಪುಣ್ಯ ಭೂಮಿಯಲ್ಲಿ ಲೋಕರ್ಪಣೆ ಯಾಗಬೇಕು ಎನ್ನುವ ಅವರೆಲ್ಲರ ಭಕ್ತಿಗೆ ಕಲಿಯುಗ ವರದ ಸದಾ ಎಲ್ಲರನ್ನು ಅನುಗ್ರಹಿಸುತ್ತಾನೆ, ಈ ಭಕ್ತಿಗೀತೆ ಯಲ್ಲಿದೆ ಅಯ್ಯಪ್ಪ ಚಿಂತನೆ,ಸೂರಿ ಮಾರ್ನಾಡ್‌ ಸಹೋದರರು ಎಲ್ಲಾ ಕ್ಷೇತ್ರದಲ್ಲೂ ಪರಿನತರು. ನಮ್ಮೀ ಕ್ಷೇತ್ರದ ಮೇಲೆ ಇಟ್ಟಿರುವ ಭಕ್ತಿಗೆ ಈ ಕಾರ್ಯಕ್ರಮ ಕೊಡುಗೆಯಾಗಿದೆ. ಭಕ್ತಿ ಗೀತೆ ಲೋಕ ಪ್ರಸಿದ್ಧಿಯಾಗಲಿ ಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದೆ ದಿವ್ಯ ಶಕ್ತಿ ಎಂದು ನುಡಿದರು, ಗೌರವ ಅತಿಥಿಗಳಾಗಿ ಗೋಪಾಲ್‌ ಪಟ್ಟೆ ಮತ್ತು ಯು ಕೆಯ ವಿವೇಕಾನಂದ ಮಂಡೆಕರ ಅವರ ಉಪಸ್ಥಿತಿಯ ಜೊತೆ ಮುಂಬೈಯ ಶ್ರೇಷ್ಠ ಗುರುಸ್ವಾಮಿಗಳಾದ ರಮೇಶ್‌ ಗುರುಸ್ವಾಮಿ, ಶಾಂಭವಿ ಗುರುಸ್ವಾಮಿ ,ರಾಜಮಣಿ ಸ್ವಾಮಿ, ಚಂದ್ರಹಾಸ ಸ್ವಾಮಿ ಮತ್ತು ರೇರೋಡಿನ ಶ್ರೀ ಅಯ್ಯಪ್ಪ ಭಕ್ತ ವೃಂದದ ಸಂಸ್ಥಾಪಕ ಸತೀಶ್‌ ಗುರು ಸ್ವಾಮಿಯವರು ಮತ್ತು ಅಪ್ಪಾಜೀ ಬೀಡಿನ ಟ್ರಸ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಇವರೆಲ್ಲರು ಸೇರಿ ದೀಪ ಬೆಳಗಿಸಿ . ಭಕ್ತಿ ಗೀತೆ ಲೋಕಾರ್ಪಣೆ ಮಾಡಿ, ಆಶಿರ್ವಾದ ಮಾಡಿದರು, ಪಾಲ್ಗೊಂಡಿದ್ದ ಸ್ವಾಮೀಜಿವರ್ಯರಿಗೆ ಗುರುಕಾಣಿಕೆ ನೀಡಿ ಸೂರಿ ಮರ್ನಾಡು ದಂಪತಿ ಗೌರವಿಸಿದರು ಹಾಗೂ ಭಕ್ತಿಗೀತೆ ಹಾಡಿದವರಿಗೆ ಮತ್ತು ತಾಂತ್ರಿಕ ವರ್ಗದವರಿಗೆ ಪಲಕ ನೀಡಿ ಗೌರವಿಸಲಾಯ್ತು,. ಶಕುಂತಲಾ ಶೆಟ್ಟಿಯವರು ಹಸಿರುಬೆಟ್ಟದ ಸಾಹಿತ್ಯ , ಸಂಗೀತ , ಹಾಡುಗಾರರ ಬಗ್ಗೆ ಸುವಿಸ್ತಾರವಾಗಿ ತಮ್ಮ ಮಾತುಗಳನ್ನು ಪ್ರಸ್ತುತಪಡಿಸಿದರು, ಭಕ್ತಿ ಗೀತೆಯ ಸಾಹಿತ್ಯ ಬರೆದ ಸೂರಿ ಮತ್ತು ಅವರ ಪರಿವಾರವನ್ನು ಸನ್ಮಾನಿಸಲಾಯ್ತು ಈ ಕಾರ್ಯಕ್ರಮಕ್ಕೆ ಕಾರಣಿಭೂತರಾದ ಅಪ್ಪಾಜಿ ಬಿಡು ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಸುರೇಶ್‌ ಶೆಟ್ಟಿ ಕೇದಗೆ ಅವರನ್ನು ಗೌರವಿಸಲಾಯ್ತು, ,
ಭಕ್ತಿ ಗೀತೆ ಲೋಕಾರ್ಪನ್ಯ ಆದ ಬಳಿಕ ರಮೇಶ್‌ ಗುರುಸ್ವಾಮಿಯ ಅವಳಿ ಮಕ್ಕಳ ರಾಣಿ ಮತ್ತು ರಾಗಿಣಿ ಹಾಡಿದ ಅಪ್ಪಾಜಿ ಬೀಡಿನ ಹಾಡನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು ಅಪ್ಪಾಜಿ ಬೀಡಿನ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಕಾರ್ಯಕ್ರಮದ ಯಶಸ್ಸಗೆ ಸಹಕರಿಸಿದ ಭಕ್ತಾರೆಲ್ಲರೂ ಮುಂದಿನ ದಿನಗಳಲ್ಲೂ ಕೂಡ ಕ್ಷೇತ್ರದಲ್ಲಿ ನಡೆಯುವ ಸೇವಾಕಾರಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿ ಧನ್ಯವಾದ ನೀಡಿದರು, ರಘುನಾಥ್‌ ಶೆಟ್ಟಿ ಕಾಂದಿವಲಿ ಇವರು ಪೂರ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಅಪ್ಪಾಜೀ ಬೀಡುವಿನ ಮಹಿಳಾ ವಿಭಾಗದವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು ಅಪ್ಪಾಜಿ ಬೀಡಿನ ಎಲ್ಲಾ ಕಾರ್ಯಕರ್ತರು ಕಾರ್ಯಕಾರಿ ಸಮಿತಿಯ ಸದಸ್ಯರು ,ಕರ್ನಾಟಕ ಸಂಘದ ಭರತ್‌ಕುಮಾರ್‌ ಪೊಲಿಪು , ಓಂದಾಸ್‌ ಕಣ್ಣಂಗಾರ್‌, ಕವಿ ವಿಶ್ವನಾಥ್‌ ಪೇತ್ರಿ , ರಂಗನಟರಾದ ಮೋಹನ್‌ ಮಾರ್ನಾಡ್‌, ಅಹಲ್ಯ ಬಲ್ಲಾಳ್‌, ಮನೋಹರ ನಂದಳಿಕೆ, ಅವಿನಾಶ್‌ ಕಾಮತ್‌ ಮತ್ತು ರಮೇಶ್‌ ಶಿವಪುರ್‌ ,ನಮನ ಫ್ರೆಂಡ್ಸ್‌ನ ಪ್ರಭಾಕರ್‌ ದಿವಾಕರ್‌, ಬಂಟರಸಂಘ ಸಿಟಿ ರೀಜನ್‌ನ ಅಧ್ಯಕ್ಷರಾದ ಶಿವರಾಮ್‌ ಶೆಟ್ಟಿ, ಆಶೋಕ್‌ ಪಕ್ಕಳ ವಿಶ್ವನಾಥ್‌ ಶೆಟ್ಟಿ , ಸುಚಿತ್ರಾ ಶೆಟ್ಟಿ ಐಲೇಸಾದ ಹಾಡುಗಾರರಾದ ಡಾ ಪಲ್ಲವಿ , ರಾಶಿ, ರಮೇಶ್‌ ನಾರಯಣ, ವಿಜಯರಾಘವನ್‌ ,ಸುವಿದ್‌ ಸೂರಿ ಮಾರ್ನಾಡ್‌ ಇನ್ನಿತರರು ಭಾಗಿಯಾಗಿದ್ದರು, ಅಪ್ಪಾಜೀ ಬೀಡಿನ ಸದಸ್ಯರು ಸಹಕಾರ ನೀಡಿದರು, ಅಪ್ಪಾಜೀ ಬೀಡಿನ ಅಧ್ಯಕ್ಷರನ್ನು ಸದಸ್ಯರನ್ನು ಐಲೇಸಾದ ಪರವಾಗಿ ಗೌರವಿಸಲಾಯ್ತು. ಬಳಿಕ ಶಿವರಾತ್ರಿಯ ಅಂದವಾಗಿ ಭಜನೆ ಮುಂಜಾನೆಯವರೆಗೆ ನಡೆಯಿತು

ನಿತ್ಯಾನಂದ ಸೇವಾಸಂಸ್ಥೆ ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.ನಿತ್ಯಾನಂದ ನಾಮಸ್ಮರಣೆಯಿಂದ ಶಾಶ್ವತ ಆನಂದ ...ವಿಜಯಾನಂದ ಸ್ವಾಮೀಜಿ.ಚ...
07/02/2023

ನಿತ್ಯಾನಂದ ಸೇವಾಸಂಸ್ಥೆ ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.
ನಿತ್ಯಾನಂದ ನಾಮಸ್ಮರಣೆಯಿಂದ ಶಾಶ್ವತ ಆನಂದ ...ವಿಜಯಾನಂದ ಸ್ವಾಮೀಜಿ.
ಚಿತ್ರ, ವರದಿ: ಉಮೇಶ್ ಕೆ.ಅಂಚನ್
ಮೀರಾರೋಡ್ , ಫೆ.7: ಎಲ್ಲಿ ಭಜನೆಯಿದೆಯೋ ಅಲ್ಲಿ ವಿಭಜನೆ ಇಲ್ಲ ಎಂಬಂತೆ ದೇವರ ನಾಮ ಸ್ಮರಣೆ ದೇವರನ್ನು ಒಲಿಸುವ ಅತ್ಯಂತ ಸರಳವಾದ ಅದ್ಯಾತ್ಮಿಕ ಮಾರ್ಗ. ರಾಮ ಎಂಬ ಶಬ್ದದಲ್ಲಿ ರಾಮಾಯಣ ತಿಳಿಯುತ್ತದೆ. ಯಾರು ಭಕ್ತರನ್ನು ಆಕರ್ಷಣೆ ಮಾಡುತ್ತಾನೋ ,ಅವನೇ ಕೃಷ್ಣ ಅಂದರೆ ದೊಡ್ಡ ತತ್ವ. ಅವಧೂತ ಎಂದರೆ ಹೊರಗಿನ ಪ್ರಪಂಚದಲ್ಲಿ ಯಾವುದೇ ಆಸೆ ಇಲ್ಲದವ. ಕಾಶಿ, ಕೈಲಾಸದಂತಹ ಪುರಾಣ ಸ್ಥಳಕ್ಕೆ ಹೋದರೆ ನಮಗೆ ಪುಣ್ಯ ಸಿಗುತ್ತದೆ ಎಂಬ.ಭಾವನೆ ಇದೆ. ಆದರೆ ಎಲ್ಲರಿಗೂ ಅಲ್ಲಿ ಹೋಗಲು ಸಾಧ್ಯವಿಲ್ಲ. ಅದಕ್ಕೆ ನಿತ್ಯಾನಂದ ಭಗವಾನರು ಬ್ರಹ್ಮಪುರಿ, ಕೈಲಾಸ , ವೈಕುಂಠ ಇಲ್ಲೇ ತೋರಿಸಿದ್ದಾರೆ. ರಾಮ, ಕೃಷ್ಣ ಇವರೆಲ್ಲರ ಅವತಾರವನ್ನೂ ನಿತ್ಯಾನಂದ ಸ್ವಾಮಿಗಳು ನಮಗೆ ತೋರಿಸಿದ್ದಾರೆ. ಆವರ ನಾಮ ಸ್ಮರಣೆಯಿಂದ ಶಾಶ್ವತ ಅನಂದ ಲಬಿಸುತ್ತದೆ ಎಂದು ಬೇವಿನಕೊಪ್ಪ ಆನಂದ ಆಶ್ರಮದ ವಿಜಯಾನಂದ ಸ್ವಾಮೀಜಿ ಹೇಳಿದರು. ಅವರು ಫೆ.4ರಂದು ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ಆಯೋಜಿಸಿದ್ದ ಗಣೇಶ್ ಪುರಿ ನಿತ್ಯಾನಂದ ಸನ್ನಿದಿಯಡೆಯ ಪಾದಯಾತ್ರೆಗೆ ಚಾಲನೆ ನೀಡಿ ಭಕ್ತರನ್ನು ಆಶೀರ್ವಾದಿಸಿ ನುಡಿದರು. ಈ ಸಂದರ್ಭದಲ್ಲಿ ವಿಜಯಾನಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು ಹಾಗೂ ಪಾದಯಾತ್ರೆಯಲ್ಲಿ ಸಹಕರಿಸಿದ ಮಹಾರಾಷ್ಟ್ರ ಮಾನವ ಸೇವಾಸಂಘದ ಅದ್ಯಕ್ಷ ಡಾ.ಹರೀಶ್ ಶೆಟ್ಟಿ, ನಗರಸೇವಕ ಅರವಿಂದ ಎ. ಶೆಟ್ಟಿ ಹಾಗೂ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ರವರನ್ನು ಸನ್ಮಾನಿಸಲಾಯಿತು. ನಾರಾಯಣ ಶೆಟ್ಟಿ ಮತ್ತು ಲಕ್ಷ್ಮಣ್ ಶೆಟ್ಟಿಯವರು ನಿತ್ಯಾನಂದ ಸ್ವಾಮಿಯ ಭಾವಚಿತ್ರವನ್ನು ಸಿಂಗರಿಸಿ ಗುರು ಪೂಜೆ ಹಾಗೂ ಮಹಾಆರತಿ ಗೈದರು. ಸದಸ್ಯರಿಂದ ಭಜನೆ ,ಪ್ರಸಾದ ವಿತರಣೆ ನಡೆದು ಪಾದಯಾತ್ರೆಯು ಮೀರಾಭಾಯಂದರ್ ಬ್ರಹ್ಮ ಮಂದಿರದಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ನಿತ್ಯಾನಂದ ಸನ್ನಿಧಾನದಲ್ಲಿ ಭಕ್ತರು ದರ್ಶನ ಭಾಗ್ಯ ಪಡೆದರು.ಸಂಸ್ಥೆಯ ಅದ್ಯಕ್ಷ ಗೋಪಾಲ ಕೃಷ್ಣ ಗಾಣಿಗರು ಮಾತನಾಡಿ ಕಳೆದ ಹದಿಮೂರು ವರ್ಷಗಳಿಂದ ಪಾದಯಾತ್ರೆ ಮಾಡುವ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ವಿರಾರ್ ಗಣೇಶ್ ಪುರಿ ಕ್ರಾಸ್ ರಸ್ತೆಯಲ್ಲಿರುವ ಶಿವಾನಿ ಹೋಟೇಲಿನ ಮಾಲಕ ಹರೀಶ್ ಭಂಡಾರಿಯವರು ಸಹಕರಿಸುತ್ತಿದ್ದು ಪ್ರಸ್ತುತ ವರ್ಷದ ಬೆಳಗ್ಗಿನ ಉಪ಼ಹಾರವನ್ನು ನಗರಸೇವಕ ಅರವಿಂದ್ ಶೆಟ್ಟಿಯವರು ನೀಡಿದ್ದಾರೆ ಹಾಗೂ ದಾನಿಗಳ ನೆರವಿನಿಂದ ಬಸ್ಸಿನ ವ್ಯವಸ್ಥೆ ಆಗಿದೆ ಎಂದರು. ಗೌರವ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಅಮವಾಸ್ಯೆಬೈಲು ಪಾದಯಾತ್ರೆಯ ರೂಪುರೇಕೆಗಳ ಬಗ್ಗೆ ವಿವರಿಸಿ ಸಹಕರಿಸಿದ್ದ ಎಲ್ಲರಿಗೂ ಅಭಾರಮನ್ನಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಮಹಾಬಲ ಸಮಾನಿ, ಸಂಚಾಲಕ ಆನಂದ ಶೆಟ್ಟಿ ಕುಕ್ಕುಂದೂರು,ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ, ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ದೇರಳಕಟ್ಟೆ ,ವಸಂತಿ ಶೆಟ್ಟಿ, ಜತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬೆಳ್ಳಂಪಳ್ಳಿ , ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ,ಜತೆ ಕೋಶಾಧಿಕಾರಿ ಮಲ್ಲಿಕಾ ಕೆ.ಶೆಟ್ಟಿ, ಯುವ ವಿಭಾಗದ ಕಾರ್ಯಾದ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಜಯಶ್ರೀ ಶೆಟ್ಟಿ ಅಲ್ಲದೆ ಮಾಜಿ ಶಾಸಕ ನರೇಂದ್ರ ಎಲ್.ಮೆಹತಾ,ಸೈಂಟ್ ಅಗ್ನಿಸ್ ಇಂಗ್ಲೀಷ್ ಹೈಸ್ಕೂಲಿನ ಕಾರ್ಯಾದ್ಯಕ್ಷ ಡಾ.ಅರುಣೋದಯ ರೈ,ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಡೆಲ್ಟಾ ಶಿವರಾಮ ಶೆಟ್ಟಿ, ಚಿರಂಜೀವಿ ಸುರೇಶ್ ಶೆಟ್ಟಿ, ಜಯಪ್ರಕಾಶ್ ಆರ್.ಭಂಡಾರಿ ಶ್ರೀನಿಧಿ,ಪೊಸ್ರಲ್ ದಿವಾಕರ್ ಶೆಟ್ಟಿ, ಜಿ.ಕೆ. ಕೆಂಚನಕೆರೆ,ಗೀತಾ ಸಿ.ಶೆಟ್ಟಿ, ಲತಾ ಪುತ್ರನ್, ವಿಜಯಲಕ್ಷ್ಮೀ ಡಿ.ಶೆಟ್ಟಿ ಹಾಗೂ ಮೀರಾಭಾಯಂದರ್ ಪ್ರದೇಶದ ಹೋಟೇಲ್ ಮಾಲಕರು, ಚಾಲಕರು, ಸಂಸ್ಥೆಯ ಸದಸ್ಯರು ಹಾಗೂ ಭಕ್ತರು ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು.

SC Agrees to Hear Plea Challenging Madras HC Woman Judge's Appointment, But Why Did Lawyers Approach Top Court? DetailsA...
06/02/2023

SC Agrees to Hear Plea Challenging Madras HC Woman Judge's Appointment, But Why Did Lawyers Approach Top Court? Details
After several lawyers in Chennai approached the Supreme Court challenging lawyer L Victoria Gowri’s appointment as the judge of Madras High Court, the top court on Monday agreed to hear their plea on February 7. According to a PTI report, a bench comprising Chief Justice DY Chandrachud, and Justices PS Narasimha and JB Pardiwala took note of the submissions made that claimed the plea needed an urgent hearing. But why did the Chennai lawyers challenge Gowri’s appointment? The plea challenging L Victoria Gowri’s appointment as Madras HC judge was submitted by senior advocate Raju Ramachandran. Her appointment first took a controversial turn after reports emerged about her alleged affiliation to the Bhartiya Janata Party (BJP). Besides, the lawyers cited Gowri’s alleged statements against minorities in the past and claimed that her elevation will dent the independence of the judiciary, a Hindustan Times report stated.
Some statements of the lawyer, who was proposed for the judgeship, about Muslims and Christians have purportedly surfaced in the public domain.In the petition, advocate Ramachandran pleaded it was an urgent. “They (several lawyers) are praying for interim relief. I would request you to take it at the earliest," the senior lawyer said.
The bench, which initially agreed to list the plea for hearing on February 13, later said it will hear it on February 10.
Gowri’s name along with four other lawyers for elevation to high court was recommended by a collegium, comprising Chandrachud, Justices Sanjay Kishan Kaul, and KM Joseph. The recommendations were made on January 17. Later, the members of the Madras High Court (HC) Bar Council objected to the collegium’s recommendation in separate letters addressed to President Droupadi Murmu and the SC collegium.
In order to substantial their claims, the advocates cited youtube links of her two interviews captioned “The more threat to national security and Peace? Jihad or Christian Missionary? and Cultural genocide by Christian Missionaries in Bharat - Victoria Gowri.” They also cited an article titled “Aggressive baptising destroying social harmony” published on October 1, 2012 in a RSS publication.

ರಂಗ ನಟ,ಚಿತ್ರ ನಟ ಜಿ.ಕೆ.ಕೆಂಚನಕೆರೆ ಅವರ ಸಾರಥ್ಯದ ನೂತನ ಕಲಾ ಸಂಸ್ಥೆ "ಕಲಾ ಭೂಮಿಕ" ದ ಉದ್ಘಾಟನಾ ಸಮಾರಂಭ
27/01/2023

ರಂಗ ನಟ,ಚಿತ್ರ ನಟ ಜಿ.ಕೆ.ಕೆಂಚನಕೆರೆ ಅವರ ಸಾರಥ್ಯದ ನೂತನ ಕಲಾ ಸಂಸ್ಥೆ "ಕಲಾ ಭೂಮಿಕ" ದ ಉದ್ಘಾಟನಾ ಸಮಾರಂಭ

Address

Mumbai
400051

Alerts

Be the first to know and let us send you an email when Mumbai News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Mumbai News Kannada:

Share

Category

Nearby media companies


Other TV Channels in Mumbai

Show All